ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Wednesday, September 4, 2024

ಮೆರಿಯಾನ ಟ್ರಂಚ್‌ ಎಂಬ ಪಾತಾಳ ಲೋಕ

   ಮೆರಿಯಾನ  ಟ್ರಂಚ್‌ ಎಂಬ ಪಾತಾಳ ಲೋಕ

 

                    ಲೇಖಕರು: ಸುರೇಶ ಸಂಕೃತಿ

                     ನಿವೃತ್ತ ಮುಖ್ಯ ಶಿಕ್ಷಕರು 

     ಹಾಲಿವುಡ್‌ನ ಬ್ಲಾಕ್‌ ಬಸ್ಟರ್‌ ವೈಜ್ಞಾನಿಕ ಚಲನ ಚಿತ್ರ ಸರಣೆಯಾದ  ಅವತಾರ್‌ ನಿರ್ದೇಶಕ ಜೇಮ್ಸ್‌ ಕ್ಯಾಮರೂನ್‌ಅತ್ಯಾಧುನಿಕ ತಂತ್ರಗಾರಿಕೆ ಮತ್ತು    ಆಬಿಜಾತ ಕಥನ ನಿರೂಪಣಾ ಶೈಲಿಯನ್ನು ಇರಿಸಿಕೊಂಡು    ಚಲನಚಿತ್ರ  ನಿರ್ಮಾಣದಲ್ಲಿ ಹೊಸ ಪರಂಪರೆಯನ್ನು ಹುಟ್ಟಿಹಾಕಿದವನುದಿ ಟರ್ಮಿನೇಟರ್‌(1,2), ಏಲಿಯನ್ಸ್‌, ದಿ ಅಬೆಸ್ಸಿ, ಜಡ್ಜಮೆಂಟ್‌ ಡೇ, ಟ್ರೂ ಲೈಸ್‌, ಅವತಾರ್(1,2,3,4,5) ಹೀಗೆ ಕ್ಯಾಮರೂನನ ಸಾಹಸಗಾಥೆ ಮುಂದುವರೆಯುತ್ತಲೇ ಇದೆ. ಇದರ ಜೊತೆ ಜೊತೆಗೆ  ಭೂಮಿಯ ಮೇಲಿನ ಅತ್ಯಂತ ಆಳದ  ಸಮುದ್ರದ ತಳಕ್ಕೆ ಕ್ಯಾಮರೂನನು ಏಕಾಂಗಿಯಾಗಿ ಹೋಗಿ ಬಂದ ಸಾಹಸ ವಿಶ್ವ ದಾಖಲೆ ಸೇರಿದೆ


ನ್ಯಾಷನಲ್‌ ಜಿಯೋಗ್ರಾಪಿಕ್‌ ಸೊಸೈಟಿಯ ಸಹಯೋಗದ ಯಾನದಲ್ಲಿ  ವಿಶೇಷವಾಗಿ ನಿರ್ಮಿಸಲಾದ  ಡೀಪ್‌ ಸೀ ಚಾಲೆಂಜರ್‌ ಎಂಬ  ಜಲಾಂತರಗಾಮಿಯನ್ನು ಕ್ಯಾಮರೂನ್‌ ಏರಿಕುಳಿತು ಏಕಾಂಗಿಯಾಗಿ ವಿಶ್ವದ ಅತಿ ಆಳದ ಸಮುದ್ರ ತಳವಾದ ಮೆರಿಯಾನಾ ಟ್ರಂಚಿನ ತಳಕ್ಕೆ12 ಮಾರ್ಚ್‌2012ರಂದು ಇಳಿದು ಆಳ ಸಮುದ್ರದ ಅನುಭವವನ್ನು ಪಡೆದದ್ದರ ಜೊತೆಗೆ ಜಲಾಂತರಗಾಮಿಗೆ ಅಳವಡಿಸಿದ್ದ ವಿವಿಧ ವೈಜ್ಞಾನಿಕ ಸಂಶೋಧನಾ ಸಾಧನಗಳ ಸಹಾಯದಿಂದ ಅತಿ ಆಳ ಸಮುದ್ರದ ಜೀವಿಗಳ, ಅಲ್ಲಿನ ಪರಿಸರದ ವಿವಿಧ ಸ್ಯಾಂಪಲ್ಲುಗಳನ್ನು ಸಂಗ್ರಹಿಸಿದ್ದು, ವಿವಿಧ ಬಗೆಯ ಕ್ಯಾಮರಾಗಳಿಂದ ನೂರಾರು ಗಂಟೆಗಳ ಅವಧಿಯ ವೀಡಿಯೋ ದೃಶ್ಯಗಳನ್ನು ಹಿಡಿದು ತಂದದ್ದು ಕೂಡ ಒಂದು ಸಾಧನೆ ಎನ್ನಬಹುದುಕ್ಯಾಮರೂನ್‌ ಇಳಿದ ಸಾಗರದ ಜಾಗ ವಿಶ್ವದಲ್ಲಿಯೇ ಅತಿ ಆಳದ ಅಂದರೆ  ಸಮದ್ರ ಮಟ್ಟದಿಂದ ಸುಮಾರು ಹನ್ನೊಂದು ಕಿಲೋಮೀಟರ್‌ ಕೆಳಗಿನ ಮೆರಿಯಾನ ಟ್ರೆಂಚಿನ ಎಂಬ ಕಂದಕದ ಚಾಲೆಂಜರ್‌ ಡೀಪ್‌ ಎಂದು ಕರೆಲಾಗುವ ಭಾಗವಾಗಿದೆ. ಮೊಟ್ಟ ಮೊದಲಿಗೆ ಇದರ ಆಳವನ್ನು ಅಂದಾಜು ಮಾಡಿದ್ದು  ಬ್ರಿಟಿನ್ನಿನ ಸಾಗರ ಸಂಶೋಧನಾ ತಂಡ. ತಂಡ  ಯಾನ ಮಾಡಿದ ಹಡಗಿನ ಹೆಸರಾದ ಚಾಲೆಂಜರ್‌ ಹೆಸರನ್ನೇ ಇದಕ್ಕೆ ಇರಿಸಲಾಗಿದೆ.

ಜೇಮ್ಸ್‌ ಕ್ಯಾಮರೂನ್

ಡೀಪ್‌  ಸೀ ಚಾಲೆಂಜರ್

      1872 ರಿಂದ 1876 ವರೆಗೆ ಬ್ರಿಟಿಷ್‌ ವಿಜ್ಞಾನಿಗಳು ಕೈಗೊಂಡ ಸಾಗರ  ಸಂಶೋಧನಾ  ಯಾತ್ರೆಯನ್ನು ಚಾಲೆಂಜರ್‌ ಎಕ್ಸಿಪಿಡಿಷನ್‌ ಎಂದು ಕರೆಯುತ್ತಾರೆ. ಎಚ್‌ ಎಮ್‌ ಎಸ್‌ ಚಾಲೆಂಜರ್‌ ಎಂಬ ಬ್ರಿಟಿಷ್‌ ಸೇನಾ ನೌಕೆಯನ್ನು ಸಂಶೋಧನಾ ಪ್ರಯೋಗಾಲಯವಾಗಿ ಪರಿವರ್ತಿಸಿ ಸಾಗರ ಸಂಶೋಧನೆಗೆಂದೇ ನಿಯೋಜಿಸಲಾಗಿತ್ತುಸಾಗರದಾಳದ ವಿವಿಧ ಸ್ತರಗಳಲ್ಲಿನ ನೀರಿನ   ತಾಪ, ಚಲನ ವಲನ, ಸಾಂದ್ರತೆ, ರಾಸಾನಿಕ ಸಂಯೋಜನೆ, ಪ್ರವೇಶಿಸುವ ಬೆಳಕಿನ ಪ್ರಮಾಣ, ಸಾವಯವ ಸಂಯೋಜನೆನಿಲಂಬಿತ ಕಣಗಳ ಪರಿ ಪ್ರಮಾಣ ಮುಂತಾದವುಗಳನ್ನು ಅಳೆಯುವುದು. ಸಾಗರದಾಳದ ನಿಕ್ಷೇಪಗಳ ವಿಶ್ಲೇ಼ಷಣೆ ಮತ್ತು ಸಾಗರದ ವಿವಿಧ ಸ್ತರಗಳಲ್ಲಿ ಮತ್ತು ತಳಭಾಗದಲ್ಲಿರುವ ಜೀವಿಗಳ ಅಧ್ಯಯನಗಳೂ ಸಹ ಇದರಲ್ಲಿ ಸೇರಿದ್ದವು. ಸಾಗರದಾಳದಲ್ಲಿ ಟೆಲಿಗ್ರಾಫ್‌ ತಂತಿಯನ್ನು ಎಳೆಯಲು ಸಾಗರದ ತಳದ ಮೇಲ್ಮೈ ಸಂರಚನೆಯನ್ನೂ ಸಹ ತಿಳಿಯುವುದು ಕೂಡ ಇದರಲ್ಲಿ ಸೇರಿದ್ದಿತು, ಮುಂಚೆ ಕೈಗೊಂಡಿದ್ದ ಎರಡು ಇಂತಹುದೇ ಆಧ್ಯಯನಗಳ ಮುಂದುವರೆದ ಭಾಗವಾಗಿ ಇದನ್ನು ಕೈಗೊಳ್ಳಲಾಗಿದ್ದಿತು.    ಬೆಂಜಮಿನ್‌ ಕಾರ್ಪೆಂಟರನಿಂದ ಆರಂಭಿಸಲಾದ ಯಾತ್ರೆಯ ಯೋಜನೆಗೆ ಚಾರ್ಸ್‌ ಥಾಂಸನ್ ನನ್ನು ಮೇಲ್ವಿಚಾರಕನನ್ನಾಗಿ ನಿಯೋಜಿಸಿದ್ದರುವಿಜ್ಞಾನಿಗಳು ಸಂಶೋಧಕರು, ತಂತ್ರಜ್ಞರು, ಚಿತ್ರ ಕಲಾವಿದರು, ಛಾಯಗ್ರಾಹಕರು, ನಾವಿಕರು ಹೀಗೆ ವಿವಿಧ ಪರಿಣಿತಿ ಹೊಂದಿದ್ದ ಒಟ್ಟು 237 ಜನರ ತಂಡವು ಸಿದ್ಧಗೊಂಡು ದಿನಾಂಕ: 21 ಡಿಸೆಂಬರ್‌ 1872 ತನ್ನ ಯೋಜಿತ ಸಾಗರಯಾತ್ರೆಯನ್ನು ಆರಂಭಿಸಿತು 


ಅಟ್ಲಾಂಟಿಕ್‌ ಸಾಗರದ ಮತ್ತು ಅದರ ಕೆಲವು ದ್ವೀಪ ಕಲ್ಪಗಳನ್ನು  ಸಂಶೋಧಿಸಿ ನಂತರ ಲ್ಯಾಟಿನ್‌ ಅಮೇರಿಕಾ, ದಕ್ಷಿಣ ಅಮೇರಿಕಾದ ಪೂರ್ವ ತೀರಗಳನ್ನು ಸಂದರ್ಶಿಸಿ, ಪೂರ್ವಕ್ಕೆ ತಿರುಗಿ ಆಫ್ರಿಕಾದ ದಕ್ಷಿಣ ದೃವವನ್ನು ಬಳಸಿಕೊಂಡು, ಆಸ್ಟ್ರೇಲಿಯ, ನ್ಯೂಜಿಲ್ಯಾಂಡ್ ಸಂಶೋಧಿಸಿ ಫೆಸಿಫಿಕ್‌ ಸಾಗರದ ಪಶ್ಷಿಮ ತೀರದ ದೇಶಗಳನ್ನು ಸಂದರ್ಶಿಸಿ ಹಲವಾರು ಸಂಶೋಧನೆಗಳನ್ನು ಕೈಗೊಂಡು ಅಂತಿಮವಾಗಿ   24/5/1876 ರಂದು ಇಂಗ್ಲೆಂಡಿಗೆ ಇಂತಿರುಗಿತು.   ಹೀಗೆ ಯಾತ್ರೆಯಲ್ಲಿ ಸಂಗ್ರಹಿಸಿದ ಸಂಶೋಧನಾ ಮಾಹಿತಿ, ಚಿತ್ರಗಳು, ಜೀವಿಗಳ ನಮೂನೆಗಳು ಇವುಗಳನ್ನು ಒಳಗೊಂಡ ಸಂಶೋಧನಾ ವರದಿಯನ್ನು ಸಿದ್ಧಪಡಿಸಿ ಸಂಪಾದಿಸಿದ ವರದಿಯನ್ನು ಒಟ್ಟು 1,278 ಪುಟಗಳ ವೈಜ್ಞಾನಿಕ ವರದಿಯನ್ನು ಒಟ್ಟು  50  ಸಂಪುಟಗಳಲ್ಲಿ ಪ್ರಕಟಿಸಲಾಯಿತುಹೀಗೆ ಅತ್ಯಂತ ಯಶಸ್ವಿಯಾದ ಯಾತ್ರೆಯು ಸಾಗರ ವಿಜ್ಞಾನವೆಂಬ  ಹೊಸ ವಿಜ್ಞಾನ ವಿಭಾಗವನ್ನು ಪ್ರಪಂಚಕ್ಕೆ ಪರಿಚಯಿಸಿತುಒಂದು ನಿರ್ದಿಷ್ಟ ಸ್ಥಳದಲ್ಲಿನ ಸಾಗರದ ಆಳವನ್ನು ಅಳೆಯಲು ಚಾಲೆಂಜರಿನ ವಿಜ್ಞಾನಿಗಳು ಬಳಸಿದ್ದು ಬಹಳ ಸರಳ ವಿಧಾನ. ಉದ್ದನೆಯ ಹಗ್ಗಕ್ಕೆ ಭಾರವನ್ನು ಕಟ್ಟಿ ಹಡಗಿನಿಂದ ಭಾರವನ್ನು  ನಿಧಾನವಾಗಿ ನೀರಿಗಿಳಿಸುವುದು, ಭಾರ ಸಾಗರದ ತಳವನ್ನು ಸೇರಲು ಎಷ್ಟು ಹಗ್ಗ ಬಳಕೆಯಾಗುತ್ತದೆಯೋ ಅದರ ಉದ್ದವನ್ನು ಅಳೆದು ಸಾಗರದ ಆಳವನ್ನು ನಿರ್ಧರಿಸುವುದು ಆಗಿದ್ದಿತು.   ವಿಧಾನದಿಂದ 23 ಮಾರ್ಚಿ 1875 ರಂದು ಅವರು ಗವಾಮ್‌ ಮತ್ತು ಪಲಾವು ದ್ವೀಪಗಳ ನಡುವಿನ ಸಾಗರದಲ್ಲಿ  ಮಾಡಿದ ಅಳತೆಯು 8,184  ಮೀಟರುಗಳಾಗಿದ್ದು ಆಗ್ಗೆ ಅದು ಅತಿ ಹಚ್ಚಿನ ಆಳದ ಅಳತೆಯಾಗಿದ್ದಿತುಮೆರಿಯಾನ ದ್ವೀಪ ಕಲ್ಪಗಳ ನೈರುತ್ಯಕ್ಕೆ ಕಂದಕ ಇದ್ದದ್ದರಿಂದ ಇದನ್ನು ಮೆರಿಯಾನ ಟ್ರೆಂಚ್‌ ಎಂದು ಹೆಸರಿಸಿದರು.   ಅಂದಿನಿಂದ ಆರಂಭಿಸಿ ಮೆರಿಯಾನ ಟ್ರಂಚಿಗೆ ವಿಜ್ಞಾನಿಗಳ ಸಂಶೋಧನಾ ಯಾತ್ರೆ ನಿರಂತರವಾಗಿ ನಡೆಯುತ್ತಲೆ ಬಂದಿದೆ. 1957ರಲ್ಲಿ ಚಾಲೆಂಜರ್‌ 2 ನೌಕೆಯಲ್ಲಿ ತೆರೆಳಿದ ವಿಜ್ಞಾನಿಗಳ ತಂಡ ಮೆರಿಯಾನ ಟ್ರಂಚನ್ನು ವಿವರವಾಗಿ ಸರ್ವೇ ಮಾಡಿತು.

      23, ಜನವರಿ  1960 ರಂದು, ಜಾಕ್ವೆಸ್ ಪಿಕಾರ್ಡ್ ಮತ್ತು ಡಾನ್ ವಾಲ್ಷ್  ಎಂಬ ಸಾಹಸಿಗರು ಟ್ರೈಸ್ಟೆ ಎಂಬ ಹೆಸರಿನ ಜಲಾಂತರಗಾಮಿ ಏರಿ  ಮೆರಿಯಾನ ಕಂದಕದ ಆಳಕ್ಕೆ ಇಳಿಯಲು ಪ್ರಾರಂಭಿಸಿದರುಅವರು ಪ್ರಪಾತಕ್ಕೆ ಆಳವಾಗಿ ಮತ್ತು ಆಳವಾಗಿ ಇಳಿಯುತ್ತಿದ್ದಂತೆ, ಜಲಾಂತರಗಾಮಿಯ ಮೇಲೆ ನೀರಿನ ಒತ್ತಡವು  ಹೆಚ್ಚಾಗುತ್ತಾ ಹೋಯಿತು, ಅದು ಸಮುದ್ರ ಮಟ್ಟದ  ಒತ್ತಡದ 1,000 ಪಟ್ಟು ಹೆಚ್ಚು ತಲುಪಿತು. ಪೋರ್ಟ್‌ಹೋಲ್‌ಗಳ  ಹೊರಗೆ ತೀವ್ರವಾದ ಒತ್ತಡ ಮತ್ತು ಸಂಪೂರ್ಣ ಕತ್ತಲೆಯ ಹೊರತಾಗಿಯೂಅವರುಈ  ಅಜ್ಞಾತ ಜಾಗಕ್ಕೆ ಹೋದಾಗ ಶಾಂತ ಚಿತ್ತದಿಂದ ತಮ್ಮ ವೀಕ್ಷಣೆಯ ಕಡೆಗೆ ಗಮನಹರಿಸಿದರು.

 

 

ಜಾಕ್ವೆಸ್ ಪಿಕಾರ್ಡ್ ಮತ್ತು ಡಾನ್ ವಾಲ್ಷ್

     ಮರಿಯಾನಾ ಕಂದಕಕ್ಕೆ ಸುಮಾರು ಐದು ಗಂಟೆಗಳ ಕಾಲ ಇಳಿದ ನಂತರ, ಜಾಕ್ವೆಸ್ ಪಿಕಾರ್ಡ್ ಮತ್ತು ಡಾನ್ ವಾಲ್ಶ್ ಚಾಲೆಂಜರ್ ಡೀಪ್‌ನಲ್ಲಿ 10,916 ಮೀಟರ್ (35,814 ಅಡಿ) ಆಳದಲ್ಲಿ ಸಾಗರ ತಳವನ್ನು ತಲುಪಿದರು. ಮೆರಿಯಾನಾ ಕಂದಕದ ಕೆಳಭಾಗಕ್ಕೆ ಅವರು ತಲುಪಿದ್ದು ಐತಿಹಾಸಿಕ ಡೈವ್ ದಾಖಲೆಗಳನ್ನು ಛಿದ್ರಗೊಳಿಸಿತು ಮಾತ್ರವಲ್ಲದೆ ಆಳ ಸಮುದ್ರದ ಭೂವಿಜ್ಞಾನ, ಜೀವಶಾಸ್ತ್ರ ಮತ್ತು ಸಮುದ್ರಶಾಸ್ತ್ರದ ಬಗ್ಗೆ ಅಮೂಲ್ಯವಾದ ಒಳನೋಟಗಳನ್ನು ಒದಗಿಸಿತು. ಜಾಕ್ವೆಸ್ ಪಿಕಾರ್ಡ್ ಮತ್ತು ಡಾನ್ ವಾಲ್ಷ್ ಅವರ ಸಾಧನೆಯು ಪ್ರಪಂಚದ ಸಾಗರಗಳ ಭವಿಷ್ಯದ ಅನ್ವೇಷಣೆಗೆ ದಾರಿ ಮಾಡಿಕೊಟ್ಟಿತು ಮತ್ತು ಮಾನವ ಜ್ಞಾನ ಮತ್ತು ಆವಿಷ್ಕಾರದ ಗಡಿಗಳನ್ನು ತಳ್ಳಲು ವಿಜ್ಞಾನಿಗಳು, ಪರಿಶೋಧಕರು ಮತ್ತು ಸಾಹಸಿಗಳ ಪೀಳಿಗೆಗೆ ಪ್ರೇರೇಪಿಸಿತುಪ್ರತಿ ಯಾತ್ರೆಯಲ್ಲಿಯೂ ಸಂಶೋಧಕರಿಗೆ ತನ್ನ ಹೊಸ ಹೊಸ ವಿಚಾರಗಳನ್ನು ಬಹಿರಂಗ ಪಡಿಸುತ್ತಾ ಮೆರಿಯಾನ ಟ್ರಂಚ್‌ ಇಂದಿಗೂ ಒಂದು ವಿಸ್ಮಯ ಸಂಗತಿಯಾಗಿ ಜನರನ್ನು ತನ್ನೆಡೆಗೆ ಸೆಳೆಯುತ್ತಲೇ ಇದೆ. 

  ಆಧುನಿಕ ತಂತ್ರಜ್ಞಾನ ಬಳಸಿ ಮಾಡಿದ ಚಾಲೆಂಜರ್‌ ಡೀಪಿನ ಆಳವು 10,935   ಮೀಟರುಗಳೆಂದು  ತಿಳಿದು ಬಂದಿದೆಅಂದರೆ ಪ್ರಪಂಚದ ಅತಿ ಎತ್ತರದ ಪರ್ವತ ಶಿಖರ ಸಾಗರಮಾತ( ಮೌಂಟ್‌ ಎವೆರೆಸ್ಟ್)ನ್ನು ಇದರಲ್ಲಿ ಇರಿಸುವುದಾದರೆ  ಅದು ಪೂರ್ತಿಯಾಗಿ ಮುಳುಗಿ ಅದರ ಮೇಲೆ ಸುಮಾರು ಎರಡೂವರೆ ಕಿಲೋಮೀಟರ್‌ಗಳವರೆಗೆ  ಸಮುದ್ರ ನೀರು ನಿಂತಿರುತ್ತದೆಇಷ್ಟು ಆಳ ಇಲ್ಲಿ ಸಾಗರ ತಳದಲ್ಲಿ ಉಂಟಾದ್ದದ್ದಾದರೂ ಹೇಗೆಸಾಗರ ತಳವನ್ನು ಒಳಗೊಂಡು ಭೂಮಿಯ ಮೇಲ್ಮೈ ಒಂದೇ ಒಂದು ಸಿಪ್ಪೆಯಂತಿರದೆ ಆಸುಪಾಸಿನಲ್ಲಿ ಜೋಡಿಸಿರುವ ಹೆಂಚುಗಳಂತೆ ಇರುತ್ತವೆ. ಇವುಗಳನ್ನು ಫಲಕಗಳು ಅಥವಾ ಪ್ಲೇಟ್ ಟೆಕ್ಟಾನಿಕ್ಸ್‌ ಎಂದು ಕರೆಯುತ್ತಾರೆಭೂಮಿಯ ಮ್ಯಾಂಟಲ್‌ ಎಂದು ಕರೆಯುವ ಪದರದಲ್ಲಿ ನಡೆಯುವ ಚಟುವಟಿಕಗೆಳು ಫಲಕಗಳ ಮೇಲೆ ಅಪಾರ ಒತ್ತಡವನ್ನು ಏರುತ್ತವೆ. ಒತ್ತಡವು ಆಸುಪಾಸಿನ ಫಲಕಗಳು ಒಂದು ಮತ್ತೊಂದರ ಮೇಲೆ ಏರಿ ಹೋಗುವಂತೆ ಮಾಡುತ್ತದೆ. ಸಾಮಾನ್ಯವಾಗಿ ಹೆಚ್ಚು ಸಾಂಧ್ರತೆಯ ಬಲಿಷ್ಟ ಹಳೆಯ ಫಲಕವು ತನ್ನ ಬದಿಯ ವಿರಳವಾದ ಮತ್ತು ಹೊಸ ಫಲಕವನ್ನು ಸುಲಭವಾಗಿ ಭೂಮಿಯ ಒಳಕ್ಕೆ ಅದುಮಿ ಹೂತುಹಾಕುತ್ತದೆ. ಹೀಗಾದಾಗ  ಪರಿಸ್ಥಿತಿಯನ್ನು ಅವಲಂಬಿಸಿ ಭೂಮಿಯ ಹೊರ ಚಿಪ್ಪಿನಲ್ಲಿ ಆಳದ ಕಂದಕವನ್ನು ಏರ್ಪಡಿಸಲೂಬಹುದುಮೆರಿನಾ ಟ್ರಂಚ್‌ ಮಿಲಿಯಾಂತರ ವರ್ಷಗಳ ಹಿಂದೆ ನಿರ್ಮಾಣವಾಗಲು ಕಾರಣವನ್ನು ಭೂವಿಜ್ಞಾನಿಗಳು ಮುಂದಿಡುತ್ತಾರೆ.

2500 ಕಿಲೋ ಮೀಟರಿಗೂ ಮೀರಿದ ಉದ್ದದ ಮೆರಿಯಾನ ಟ್ರಂಚಿನ ಉದ್ದಕ್ಕೂ  ಆಳದಲ್ಲಿ ಗಂಧಕ, ಕಾರ್ಬನ್‌ ಡೈಆಕ್ಸೈಡ್‌, ಮುಂತಾದವನ್ನು ನಿರಂತರವಾಗಿ ಉಗುಳುತ್ತಿರುವ  ಜ್ವಾಲಾಮುಖಿಗಳು  ಸಕ್ರಿಯವಾಗಿವೆ.   ಇಲ್ಲಿ ತಳದಲ್ಲಿ ಒತ್ತಡ ಸಮುದ್ರ ಮಟ್ಟದಲ್ಲಿರುವುದಕ್ಕಿಂತ ಒಂದು ಸಾವಿರ ಪಟ್ಟು ಅಧಿಕ. ಪ್ರಾಣಿಗಳ ಮೂಳೆಗಳು ಕರಗಿಹೋಗುವಷ್ಟಕ್ಕಿಂತ ಅಧಿಕ! ಹೀಗಿದ್ದರೂ ಇಷ್ಟು ಒತ್ತಡ ಮತ್ತು ಕತ್ತಲೆಯಲ್ಲಿ  ಜೀವಿಗಳ ಅಸ್ತಿತ್ವವಿರುವುದೇ ಒಂದು ಸೋಜಿಗ. ಮೆರಿಯಾನಾ ಕಂದಕದ ಆಳವಾದ ಪ್ರದೇಶಗಳಲ್ಲಿ ಸೂರ್ಯನ ಬೆಳಕು ಇಲ್ಲದಿರುವುದರಿಂದ ಆಹಾರ ಸರಪಳಿಯನ್ನು ಬೆಂಬಲಿಸಲು ಯಾವುದೇ ಸಸ್ಯಗಳು ಅಥವಾ ಪಾಚಿಗಳಿಲ್ಲ.  ಸಮುದ್ರದ ಮೇಲಿನ ಪ್ರದೇಶಗಳಲ್ಲಿ  ಸತ್ತ ಜೀವಿಗಳು ತಳ ಸೇರಿ ಕೊಳೆಯುವ ವಸ್ತುವನ್ನು ಆಳವಾದ ಸಮುದ್ರದ ಜೀವಿಗಳು ತಮ್ಮ ಆಹಾರಕ್ಕಾಗಿ ಅವಲಂಬಿಸಬೇಕಾಗುತ್ತದೆಜೆನೋಫೈಯೋಫೋರ್ಸ್‌ ಎಂದು ಕರೆಯುವ ಬೃಹತ್ ಅಮೀಬಾದಂತಹ  ಏಕಾಣು ಜೀವಿಗಳು ಇಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ. ಆಂಫಿಪೋಡ್ಸ್‌ ಎಂದು ಕರೆಯುವ ಸೀಗಡಿಯಂತಹ ಜೀವಿಗಳು ಇಲ್ಲಿ ವಾಸ ಮಾಡುತ್ತಿರುವುದು ಮತ್ತೊಂದು ಸೋಜಿಗ. ಹಲವಾರು ಬಗೆಯ ಸೂಕ್ಷಾಣು ಜೀವಿಗಳು, ಸಮುದ್ರ ಸೌತೆಯನ್ನು

ಹೋಲುವ ಜೀವಿ ಇಲ್ಲಿ ಕಂಡು ಬರುತ್ತದೆಮಾನವ ಸಹಿತ ಜಲಾಂತರಗಾಮಿಗಳು ಮರಿಯಾನ ಟ್ರೆಂಚಿನ ಆಳದಲ್ಲಿ ಹೆಚ್ಚು ಹೊತ್ತು ಇರಲಾಗದು. ಅಲ್ಲಿರುವ ಜೀವಿಗಳನ್ನು ಮೇಲಕ್ಕೆ  ಹಿಡಿದು ತಂದು ಅಭ್ಯಾಸ ಮಾಡೋಣವೆಂದರೆ ಅತಿ ಒತ್ತಡದಲ್ಲಿ ಜೀವಿಸುವ ಅವುಗಳನ್ನು ಮೇಲಿನ ಕಡಿಮೆ ಒತ್ತಡಕ್ಕೆ ತಂದ ಪರಿಣಾಮವಾಗಿ ಅವುಗಳ ದೇಹ  ಸಿಡಿದು ಸತ್ತು ಹೋಗುತ್ತವೆ. ಆದರೆ ಸಮಸ್ಯೆಗೆ ಪರಿಹಾರ ರಾಬೋಟಿಕ್‌ ಜಲಾಂತರಗಾಮಿಗಳ ಪ್ರಯೋಗ ಸೂಕ್ತ ಪರಿಹಾರವಾಗಿದೆ. ಸಾಗರದಾಳದ ಒತ್ತಡವನ್ನು ಸಹಿಸಬಲ್ಲ ಇಂತಹ ಜಲಾಂತರಗಾಮಿಗಳು ಮೆರಿಯಾನ ಟ್ರೆಂಚಿನ ಒಳಗೆ ಇಳಿದು ಅಲ್ಲಿನ ಜೀವಿಗಳ ವೀಡಿಯೋಗಳನ್ನು ಸೆರೆ ಹಿಡಿದು ತರುತ್ತಲಿರುವುದು ಅಲ್ಲಿನ ಜೀವ ಜಗತ್ತನ್ನು ತಿಳಿಯಲು ತುಂಬಾ ಸಹಾಯಕವಾಗಿದೆವಿಕಾರ ರೂಪ ಹೊಂದಿ ಭಯ ಹುಟ್ಟಿಸುವ ಅನೇಕ ಬಗೆಯ ಮೀನುಗಳು, ಶಾರ್ಕುಗಳು, ಜೆಲ್ಲಿ ಫಿಶಗಳು, ಆಕ್ಟೋಪಸ್ಸುಗಳು ಮುಂತಾದವು ಇಲ್ಲಿ ವಾಸ ಮಾಡುತ್ತಿವೆ ಎಂದರೆ ಆಶ್ಚರ್ಯವಲ್ಲವೇಬಹಳ ಆತಂಕ ಮೂಡಿಸುವ ವಿಚಾರವೆಂದರೆ ಇವುಗಳ ಆಹಾರ ಸರಪಣೆಯ ಶಿಖರದಲ್ಲಿರುವ ಅನೇಕ  ಜೀವಿಗಳ ದೇಹದಲ್ಲಿ ನಾವು ಕೃತಕವಾಗಿ ಸಂಶ್ಲೇಷಿದ ಅಪಾಯಕಾರಿ ವಿಷಗಳು ಸೇರಿ ಹೋಗಿರುವುದು. ನಾವು ಬಳಸುತ್ತಿರುವ ಅನೇಕ ರಾಸಾಯನಿಕಗಳು ಭೂಭಾಗವನ್ನಷ್ಟೇ ಅಲ್ಲ ಸಾಗರದ ಅತಿ ಆಳದ ತಳವನ್ನೂ ಸಹ ಮಲಿನಮಾಡಿವೆ! ಮರಿಯಾನ ಟ್ರೆಂಚಿನ ಆಳದಲ್ಲಿ ಪ್ಲಾಸ್ಟಿಕ್ಕಿನ ಸೂಕ್ಷ್ಮಾತಿ ಸೂಕ್ಷ ಕಣಗಳಿಂದ ಹಿಡಿದು ಬೃಹತ್‌ ತ್ಯಾಜ್ಯ ಯತೇಚ್ಚವಾಗಿ ಪತ್ತೆಯಾಗಿದೆ ಎಂದರೆ ನಮ್ಮ ದೇಹದ ಕಣ ಕಣವೂ ಪ್ಲಾಸ್ಟಿಕ್ ಮುಂತಾದ ಸಂಶ್ಲೇಷಿತ ವಸ್ತವಿನಿಂದ ಮುಕ್ತವಾಗಿದೆಯೆ ಎಂಬ ಪ್ರಶ್ನೆ ಉದ್ಭವಿಸುತ್ತದೆಹೀಗಿರುವಾಗ ಪರಿಸರ ಸಂರಕ್ಷಣೆ ಎಲ್ಲಿಂದ ಆರಂಭಿಸಬೇಕೆಂಬ ಗೊಂದಲ ಉಂಟಾಗದೆ ಇರದು.

 ಮರಿಯಾನ ಟ್ರಂಚಿನ ಜೀವಿಗಳ ವೀಡಿಯೋ ಮಾಹಿತಿಗೆ ಕೆಳಗಿನ ಲಿಂಕನ್ನು ಒತ್ತಿ.

 https://youtu.be/X5xbDG3ORvA?si=TjnWYrku-QXzI5Yj

  ಮೆರಿಯಾನ ಟ್ರಂಚನ್ನು ಕುರಿತು ಹಲವಾರು ಊಹಾ ಪೋಹಗಳು ಅದನ್ನು ಪತ್ತೆ ಮಾಡಿದಂದಿನಿಂದ ಜನರ ಮಧ್ಯೆ ಹರಿದಾಡುತ್ತಿದೆ. ಅದೊಂದು ನಿಗೂಡ ಪ್ರದೇಶವಾದ್ದರಿಂದ ಅಲ್ಲಿ ಅನ್ಯಗ್ರಹವಾಸಿಗಳು ತಮ್ಮ ನೆಲೆ ಮಾಡಿಕೊಂಡಿವೆ ಎಂದೂ, ಸಾಗರದಾಳದ ಅಲ್ಲಿಯೂ ನಾಗರೀಕ ಸಮಾಜದ ನಗರಗಳಿವೆ ಎಂದೂ ನಂಬುವವರಿದ್ದಾರೆಆದರೆ ವಾಸ್ತವದಲ್ಲಿ ಡೀಪ್‌ ಚಾಲೆಂಜರನ್ನು ಒಳಗೊಂಡು ಮೆರಿಯಾನ ಟ್ರಂಚಿನ ಬಹುತೇಕ ಪ್ರದೇಶವನ್ನು ತನ್ನ ಭೂಪ್ರದೇಶವೆಂದು ದೂರದ ಅಮೇರಿಕಾ ಸಂಯುಕ್ತ ಸಂಸ್ಥಾನ ತನ್ನ ಸ್ವಾಮಿತ್ವವನ್ನು ಸ್ಥಾಪಿಸಿ ಕೂತಿದೆನ್ಯೂಕ್ಲಿಯರ್‌ ತ್ಯಾಜ್ಯವನ್ನು  ಹುದುಗಿಡುವ ಯೋಜನೆಯನ್ನು ಸಮೀಪದ ದೇಶ ಜಪಾನ್‌ ಒಂದು ಸಲ ಯೋಚಿಸಿತ್ತು. ಆದರೆ ಅಂತರಾಷ್ಟ್ರೀಯ ಪ್ರತಿಭಟನೆ ಮತ್ತು ಒತ್ತಡದ ಕಾರಣ ಯೋಜನೆಯನ್ನು ಜಪಾನ್‌ ಕೈಬಿಡಬೇಕಾಯಿತುಮುಂದೊಂದು ದಿನ ಮೆರಿಯಾನ ಟ್ರೆಂಚ್‌ ಜಗತ್ತಿನ ಜೀವಿಗಳಿಗೆ, ಪರಿಸರಕ್ಕೆ ಉಪಯುಕ್ತವಾದ ಸಂಶೋಧನೆಗೆ ನೆರವಾಗುವ ಪ್ರಯೋಗಶಾಲೆಗೆ  ನೆಲೆಯಾಗುವ ದಿನ ಬರಬಹುದೇ? ಅಥವಾ ವಿಶ್ವದ ಡಸ್ಟ್‌ ಬಿನ್‌ ಆಗುವ ಕಾಲ ಬಂದೀತೆ? ಕಾದು ನೋಡಬೇಕು!

 ಚಿತ್ರ ಕೃಪೆ : ಷಟರ್‌ ಸ್ಟಾಕ್‌

 

        


No comments:

Post a Comment