ವಿಶ್ವ ಮಣ್ಣು ದಿನ : ಡಿಸೆಂಬರ್- 5- 2024
ಲೇಖಕರು -ಬಿ.ಎನ್. ರೂಪ ಸಹ ಶಿಕ್ಷಕರು, ಕೆಪಿಎಸ್ ,
ಜೀವನ್ ಬಿಮಾ ನಗರ ಬೆಂಗಳೂರು ದಕ್ಷಿಣ ವಲಯ -4
ಮಣ್ಣು ಒಂದು ಅತ್ಯದ್ಭುತವಾದ ನೈಸರ್ಗಿಕ ಸಂಪನ್ಮೂಲ .ಭೂಮಿಯ ಹೊರಕವಚವಾದ ಮಣ್ಣು ಸಸ್ಯಗಳಿಗೆ ಆಧಾರಸ್ತಂಭ ಹಾಗೂ ಬೆಂಬಲವನ್ನು ಒದಗಿಸುತ್ತದೆ. ಸಸ್ಯಗಳಿಗೆ ಅಗತ್ಯವಾದ ಪೋಷಕಾಂಶಗಳ ಸಂಗ್ರಹದೊಂದಿಗೆ, ಇದು ನೀರನ್ನು ಹಿಡಿದಿಟ್ಟು ಕೊಳ್ಳುತ್ತದೆ, ಪ್ರವಾಹವನ್ನು ತಗ್ಗಿಸುತ್ತದೆ, ಕೃಷಿ ಚಟುವಟಿಕೆಗಳಿಗೆ ಪ್ರಮುಖ ಆಧಾರವಾಗಿದೆ. ಅಸಂಖ್ಯಾತ ಸೂಕ್ಷ್ಮ ಜೀವಿಗಳಿಗೆ, ಎರೆಹುಳು ,ಗೆದ್ದಲು ಹಾಗೂ ಇತರ ಜೀವಿಗಳ ವಾಸನೆಲೆಯಾಗಿದೆ.
ಮಣ್ಣು, ಕಟ್ಟಡ ನಿರ್ಮಾಣ ,ಪರಿಸರ ವ್ಯವಸ್ಥೆಯ ಸಮತೋಲನ, ಮಳೆ ನೀರಿನ ನಿಯಂತ್ರಣ, ಅಂತರ್ಜಲ ಗುಣಮಟ್ಟವನ್ನು ಹತೋಟಿಯಲ್ಲಿಡುವಲ್ಲಿಯೂ ಪ್ರಮುಖ ಪಾತ್ರವನ್ನು ವಹಿಸುತ್ತದೆ .ಹವಾಮಾನದ ಬದಲಾವಣೆಗಳನ್ನು ತಗ್ಗಿಸಲು ಇದು ಸಹಕಾರಿ. ಜೀವ ವೈವಿಧ್ಯತೆಯ ಆಕರ, ಖನಿಜ ಲವಣಗಳ ತವರೂರಾಗಿದೆ.
ಮಣ್ಣು ಮಣ್ಣು ಎಂದು,
ಏಕೆ ಅಸಡ್ಡೆ?
ಈ ಮಣ್ಣು ಹೊನ್ನು ಎಲ್ಲಾ ಒಂದೇ..
ಕೃಷಿ ಚಟುವಟಿಕೆಯ
ವಾರಸುದಾರ,
ಈ ಮಣ್ಣು ಹೊನ್ನು ಎಲ್ಲಾ ಒಂದೇ .
ಜೀವ ವೈವಿಧ್ಯಯ ಅಗರ
ಈ ಸಂಪನ್ಮೂಲ
ಈ ಮಣ್ಣು ಹೊನ್ನು ಎಲ್ಲಾ ಒಂದೇ .
ಸಕಲ ಜೀವಿಗಳಿಗೆ ಆಧಾರ ,
ಸರ್ವಜೀವಿಗಳ ರಕ್ಷಕ,
ಈ ಮಣ್ಣು ಹೊನ್ನು ಎಲ್ಲಾ ಒಂದೇ.
ಪ್ರತಿ ವರ್ಷ ಡಿಸೆಂಬರ್ 5 ಅನ್ನು ವಿಶ್ವ ಮಣ್ಣಿನ ದಿನವೆಂದು ಆಚರಿಸಲಾಗುತ್ತದೆ.
20 ಡಿಸೆಂಬರ್ 2013ರಂದು ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯ 68ನೆಯ ಅಧಿವೇಶನದಂದು 2015 ಅನ್ನು ʼಅಂತರಾಷ್ಟ್ರೀಯ ಮಣ್ಣುಗಳ ವರ್ಷʼ ಎಂದು ಘೋಷಿಸಲಾಯಿತು ಇದರ ಉದ್ದೇಶ, ಆಹಾರದ ಭದ್ರತೆ, ಹವಾಮಾನದ ಬದಲಾವಣೆ ತಗ್ಗಿಸುವಿಕೆ, ಬಡತನ ನಿವಾರಣೆ ಸುಸ್ಥಿರ ಅಭಿವೃದ್ಧಿಯೊಂದಿಗೆ ಮಣ್ಣಿನ ಪ್ರಾಮುಖ್ಯತೆ ಬಗ್ಗೆ ವಿಶ್ವಾದ್ಯಂತ ಜನರಲ್ಲಿ ಜನಜಾಗೃತಿಯನ್ನು ಮೂಡಿಸುವುದು.
ಈ ರೀತಿ ಮಣ್ಣಿನ ಸಂರಕ್ಷಣೆ ಮಾಡುವುದರಿಂದ ಮಣ್ಣಿನ ಸವೆತವನ್ನು ತಡೆಗಟ್ಟುವುದು ಮಣ್ಣಿನ ಗುಣಮಟ್ಟವನ್ನು ಸುಧಾರಿಸುವುದು ಹಾಗೂ ಮಣ್ಣಿನ ಆರೋಗ್ಯವನ್ನು ಕಾಪಾಡುವುದು ಪ್ರಮುಖ ಉದ್ದೇಶವಾಗಿದೆ. ಈ ಉದ್ದೇಶವನ್ನು ಕಾಪಾಡಲು ಈ ಕೆಳಕಂಡ ಮಾರ್ಗ ಸೂಚಿಗಳನ್ನು ಅನುಸರಿಸಲಾಗುತ್ತದೆ .
Ø ನೈಸರ್ಗಿಕ ರಸಗೊಬ್ಬರಗಳ ಬಳಕೆ
Ø ಪರಿಸರಸ್ನೇಹಿ ಕೃಷಿ ಪದ್ಧತಿಗಳ ಅಳವಡಿಕೆ.
Ø ಸರದಿಯಲ್ಲಿ ಬೆಳೆಯನ್ನು ಬೆಳೆಯುವುದು.
Ø ಮಣ್ಣಿನ ಮಾಲಿನ್ಯವನ್ನು ತಡೆಗಟ್ಟುವುದು.
Ø ಲವಣ ಹಾಗೂ ಆಮ್ಲಗಳ ನಿರ್ವಹಣೆ.
Ø ಮರಗಳನ್ನು ಕಡಿಯುವುದಕ್ಕೆ ನಿರ್ಬಂಧ ಹೇರುವುದು.
Ø ಬಾಹ್ಯ ರೇಖೆ ಉಳಿಮೆ.
Ø ಪ್ರವಾಹ ನಿಯಂತ್ರಣ .
Ø ಮಣ್ಣಿನ ಸವೆತವನ್ನು ತಡೆಗಟ್ಟುವುದು.
Ø ಮಣ್ಣಿನ ಫಲವತ್ತತೆಯನ್ನು ಕಾಪಾಡುವುದು .
Ø ಮಣ್ಣಿನ ರಚನೆಯನ್ನು ಸುಧಾರಿಸುವುದು.
Ø ಮಣ್ಣಿನಲ್ಲಿರುವ ತೇವಾಂಶವನ್ನು ನಿರ್ವಹಿಸುವುದು.
Ø ಮಾಲಿನ್ಯವನ್ನು ತಡೆಗಟ್ಟುವುದು.
ಮಣ್ಣಿನ ಸವೆತಕ್ಕೆ ಪ್ರಮುಖ ಕಾರಣಗಳು:-
Ø ಕೈಗಾರಿಕೆ
Ø ಗಣಿಗಾರಿಕೆ
Ø ಸಂಸ್ಕರಣೆ
Ø ಕೃಷಿ ಚಟುವಟಿಕೆ
Ø ಕೈಗಾರಿಕೆ ಹಾಗೂ ಸಾರಿಗೆ ಹೊರಸೂಸುವಿಕೆ.
Ø ರಸಗೊಬ್ಬರಗಳ ಬಳಕೆ
Ø ಕೀಟನಾಶಗಳ ಅತಿಯಾದ ಬಳಕೆ
Ø ಪಳೆಯುಳಿಕೆ ಇಂಧನದ ಹೊರ ತೆಗೆಯುವಿಕೆ
Ø ಕಲುಷಿತ ವಸ್ತುವಿನ ಜೊತೆ ತ್ಯಾಜ್ಯ ನೀರಿನ ಬಳಕೆ
Ø ಜಾನುವಾರುಗಳ ಅತಿಯಾದ ಮೇಯುವಿಕೆ.
Ø ನೀರಾವರಿ ಇತ್ಯಾದಿ.
ಸಂರಕ್ಷಣಾ ಪ್ರಯತ್ನಗಳಿಂದಾಗಿ ಮಣ್ಣಿನ ಪ್ರಮುಖ ಸಂಪನ್ಮೂಲಗಳನ್ನು ರಕ್ಷಿಸುವುದು. ಮಣ್ಣನ್ನು ಅವನತಿಯಿಂದ ರಕ್ಷಿಸುವುದು. ಆರೋಗ್ಯಕರ ಮಣ್ಣು ನಮ್ಮೆಲ್ಲರ ಉಳಿವಿಕೆ ಹಾಗೂ ನಮ್ಮ ಮುಂದಿನ ಪೀಳಿಗೆಯ ಉಳಿವಿಗೆ ಉಳಿವಿಗೆ ಕಾರಣವಾಗಿದೆ.
ಉತ್ತಮ ಗುಣಮಟ್ಟದ ಮಣ್ಣು ಸಕಲ ಕೃಷಿ ಚಟುವಟಿಕೆಗಳಿಗೆ ಆಧಾರ. ಇದರಿಂದಾಗಿ ಸಕಲ ಜೀವರಾಶಿಯ ಉಳಿವಿಗೆ ಕಾರಣ. ಭದ್ರ ಸುಸ್ಥಿರ ಪರಿಸರ ಸಂರಕ್ಷಣೆಗೂ ಕಾರಣವಾಗಿದೆ.
ಈ ಆಂದೋಲನವು ವಿಶ್ವದ ಹಲವಾರು ಸಂಸ್ಥೆಗಳಿಂದ ಜಾಗತಿಕ ಬೆಂಬಲವನ್ನು ಗಳಿಸಿದೆ. WHO. IUCN. UN SDG ಲ್ಯಾಬ್,The common wealth of Nations ಗಳಿಂದ ಬೆಂಬಲವನ್ನು ಗಳಿಸಿದೆ.
ಈ ಪ್ರಮುಖ ಸಂಪನ್ಮೂಲವನ್ನು ಸಂರಕ್ಷಣೆ ಮಾಡಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ .ಹೀಗಾಗಿ ಈ ಮಣ್ಣನ್ನು ರಕ್ಷಿಸಿ ಹಾಗೂ ಉಳಿಸಿ ಎನ್ನುವ ಆಂದೋಲನೊಂದಿಗೆ ನಾವೆಲ್ಲರೂ ಕೈಜೋಡಿಸಿ ಎಲ್ಲಾ ಉಪಕ್ರಮಗಳನ್ನು ಪಾಲಿಸಿದಲ್ಲಿ ಮುಂದಿನ ಪೀಳಿಗೆಗಾಗಿ ಉತ್ತಮ ಫಲವತ್ತತೆ ವನ್ನು ಹೊಂದಿರುವ ಮಣ್ಣನ್ನು ಉಳಿಸಿಕೊಡಬೇಕಾಗಿದೆ.
Nice madam
ReplyDeleteThank you sir
Delete