ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Friday, April 4, 2025

ಕೋಡು: ಸೋಜಿಗವಿದೆ! ನೋಡು !

 

                                             ಕೋಡುಸೋಜಿಗವಿದೆನೋಡು !

                              ಲೇಖಕರು ಶ್ರೀ ಕೃಷ್ಣ ಚೈತನ್ಯ

          ವಿಜ್ಞಾನ ಶಿಕ್ಷಕರು ಹಾಗೂ ವನ್ಯ ಜೀವಿ ತಜ್ಞರು

 


ಕೋಡುಅದೇನು ರಚನೆಅದೇನು ಪರಿಇದರಲ್ಲಿ ಇಷ್ಟೊಂದು ಆಸಕ್ತಿಕರ ವಿಷಯವಿದೆಯಾ ಎಂದು ಅನ್ನಿಸದೇ ಇರದುಕೋಡುಗಳನ್ನು ಸಾಮಾನ್ಯವಾಗಿ ಜಂಕೆಗಳಲ್ಲಿ ಮಾತ್ರ ನೋಡುತ್ತೇವೆಯಾಬೇರೆ ಪ್ರಾಣಿಗಳಲ್ಲಿಯೂ ಇವೆಯಾಅವು ಯಾವುದರಿಂದ ಮಾಡಿಲಾಗಿವೆಎಷ್ಡು ವರ್ಷವಿರುತ್ತವೆಕೋಡುಗಳ ರಚನೆ ಬೇರೆ ಬೇರೆ ಪ್ರಾಣಿಗಳಲ್ಲಿ ಏಕೆ ವಿಭಿನ್ನಕೋಡುಗಳಿಂದ ಪ್ರಾಣಿಗಳಿಗೆ ಏನು ಪ್ರಯೋಜನಇವುಗಳ ಬಗೆಗೆ ಇಣುಕಿ ನೋಡುವ ಬನ್ನಿ.

 ಮನೆಗಳಲ್ಲಿ ಸಾಕುವ ಹಸುಎಮ್ಮೆಓತ ಮತ್ತು ಟಗರುಗಳಲ್ಲಿ ಸಾಮಾನ್ಯವಾಗಿ ಕೋಡುಗಳನ್ನು ನೋಡಿದ್ದೇವೆಬೇರೆ ಬೇರೆ ರೀತಿಯ ಹಸುಗಳಲ್ಲಿ ಬೇರೆ ಬೇರೆ ರೀತಿಯ ಕೋಡು(ಕೊಂಬು)ಗಳು ಬೆಳೆಯುವುದನ್ನು ನೋಡಿದ್ದೇವೆಕೆಲವಲ್ಲಿ ಗಿಡ್ಡವಾಗಿಯೂಕೆಲವು ತಳಿಯ ದನಗಳಲ್ಲಿ ಉದ್ದವಾಗಿಯೂಕೆಲವಲ್ಲಿ ಸುರುಳಿಯಂತಯೂ ಇರುವುದನ್ನು ನೋಡಿದ್ದೇವೆಎಮ್ಮೆಗಳಲ್ಲಿ ಮಾತ್ರ ಕತ್ತಿಯಂತೆ ಬಾಗಿರುವ ಕೋಡುಗಳನ್ನು ಕಾಣುವುದು ಸಾಮಾನ್ಯಮೇಕೆಗಳಲ್ಲಿ ಚಿಕ್ಕದಾದಕಟುಕನ ಕೈಗೆ ಹೋಗದಿದ್ದರೆ ಐದಾರು ಇಂಚಿನ ಕೋಡುಗಳನ್ನು ನೋಡಬಹುದುಟಗರಿನಲ್ಲಿ ಕೋಡು ಇದ್ದರೆ ಕುರಿಯಲ್ಲಿ ಇರುವುದಿಲ್ಲಕತ್ತೆ ಮತ್ತು ಕುದುರೆಯಲ್ಲಿಉಹೂ..ಇಲ್ಲಈ ಎಲ್ಲಾ ಪ್ರಾಣಿಗಳಲ್ಲಿ ಕೋಡುಗಳು ಬೆಳೆದರೆ ಶಾಶ್ವತವಾಗಿ ಇರುತ್ತವೆಹಂದಿ ಮತ್ತು ಆನೆಗಳಲ್ಲಿ ಕೋಡುಗಳು ಬೆಳೆಯದೇಕೋರೆಹಲ್ಲಿನ (ದಂತದಾಡೆ ಬೆಳೆಯುತ್ತವೆಆನೆಗಳಲ್ಲಂತೂ ಕೆಲವೊಮ್ಮೆ ನೆಲ ಮುಟ್ಟುವವರೆಗೆ ಬೆಳೆದುಬಿಡುತ್ತವೆ.

 ಇವುಗಳಿಗಿಂತ ಭಿನ್ನವಾದ ಕೋಡುಗಳನ್ನು ಹೊಂದಿರುವ ಪ್ರಾಣಿಗಳಿವೆಅವೆ ಜಿಂಕೆಗಳುಇವುಗಳ ಕೋಡುಗಳು ಏಕೆ ವಿಭಿನ್ನ ಅಂತೀರಾಏಕೆಂದರೆ ಇವುಗಳ ಕೋಡುಗಳು ಹುಟ್ಟುವಾಗ ದಪ್ಪನಾಗಿಯೂಮೃದುವಾದ ಚರ್ಮವನ್ನು ಹೊಂದಿರುವುದೂ ಆಗಿವೆಅಷ್ಟೆ ಅಲ್ಲಪ್ರತೀ ವರ್ಷವೂ ಉದುರಿಹೋಗುತ್ತವೆದನಗಳಲ್ಲಿರುವ ಕೊಂಬು ಕೆರಟಿನ್‌ ಹೊದಿಕೆಯಿಂದ ಆವರಿಸಿರುವ ಮೃದುವಾದ ಮೂಳೆಯ ತಿರುಳನ್ನು ಹೊಂದಿದೆಇದು ಮಾನವನ ಉಗುರು ಮತ್ತು ಕೂದಲಿನಲ್ಲಿಯೂ ಕಾಣಬಹುದುಜಿಂಕೆಗಳಲ್ಲಿ ಗಂಡು ಪ್ರಾಣಿಗಳಲ್ಲಿ ಮಾತ್ರ ಕೋಡು ಬೆಳೆಯುತ್ತದೆಯೆ ವಿನಃ ಹೆಣ್ನು ಜಿಂಕೆಗಳಲ್ಲಿ ಇಲ್ಲಹಾಗಾಗಿ ಗಂಡು ಜಿಂಕೆಗಳಿಗೆ ʼಸ್ಟ್ಯಾಗ್ʼ ಎಂಬ ಉಪನಾಮವೂ ಇದೆಕೋಡುಗಳನ್ನು ಉದುರಿಸಿದಾಗ ಗಂಡು ಜಿಂಕೆಯೂ ಸಹ ಹೆಣ್ಣು ಜಿಂಕೆಯಂತೆ ಕಾಣಿಸಿಬಿಡುತ್ತವೆ.ಕಾಡುಕುರಿಗಳಲ್ಲಿ (ಬಾರ್ಕಿಂಗ್‌ ಡೀರ್‌ ಅಥವಾ ಬೊಗಳುವ ಜಿಂಕೆಗಂಡುಗಳಲ್ಲಿ ಚಿಕ್ಕದಾದ ಮತ್ತು ಬಾಗಿರುವ ಸಣ್ಣ ಕೋಡು ಬೆಳೆದರೆ ಮೌಸ್‌ ಡೀರ್‌ (ಇಲಿ ಮೂತಿಯಂತೆ ಮುಖವನ್ನು ಹೊಂದಿರುವಜಿಂಕೆಗಳಲ್ಲಿ ಕೋಡುಗಳು ಇಲ್ಲಕೃಷ್ಣಮೃಗಗಳಲ್ಲಿ ಗಂಡುಗಳಲ್ಲಿ ಮಾತ್ರವಿರುವ ಕೊಂಬು ನೇರವಾಗಿಯೂಸ್ವಲ್ಪ ತಿರುಗಿಸಿದಂತೆಯೂ ಇದೆ.


  ಜಿಂಕೆಗಳ ಕೋಡು ಬೆಳೆಯುವಾಗ ಮೃದುವಾದ ತುಪ್ಪಳದಂತಿರುವ ವೆಲ್ವೆಟ್‌ ಫರ್‌ ನಿಂದ ಆವರಿಸಲ್ಪಟ್ಟಿರುತ್ತದೆಇದರಲ್ಲಿ ರಕ್ತನಾಳಗಳು ಸಮೃದ್ದವಾಗಿದ್ದು ಬೆಳೆಯುವ ಕೋಡಿಗೆ ಪೋಷಕಾಂಶಗಳನ್ನು ಒದಗಿಸುತ್ತವೆಕೋಡುಗಳು ಒಂದೆರಡು ತಿಂಗಳಿನಲ್ಲಿ ಸಂಪೂರ್ಣವಾಗಿ ಬೆಳೆದ ನಂತರ ಕಲ್ಲು ಅಥವಾ ಮರದ ಕೊರಡಿಗೆ ಉಜ್ಜಿ ಉದುರಿಸಿಬಿಡುತ್ತವೆವಯಸ್ಸಿಗೆ ಅನುಸಾರವಾಗಿ ಗಾತ್ರ ಮತ್ತು ಉದ್ದಗಳಲ್ಲಿ ವ್ಯತ್ಯಾಸವನ್ನು ಪ್ರದರ್ಶಿಸುವ ಈ ಪ್ರಾಣಿಗಳು ವರ್ಷಕ್ಕೊಮ್ಮೆ ಕೋಡುಗಳನ್ನೂ ಸಹ ಉದುರಿಸಿಬಿಡುತ್ತವೆಇದು ಆಶ್ಚರ್ಯವಾದರೂ ಸತ್ಯಮಗು ಜನಿಸಿದಾಗ ಇರುವ ಒಕ್ಕುಳ ಬಳ್ಳಿ ಐದಾರು ದಿನಗಳಲ್ಲಿ ಉದುರುವಂತೆಯೇ ಇರುವುದು ವಿಶೇಷಮತ್ತೆ ಆ ಜಾಗದಲ್ಲಿ ಹೊಸ ಕೋಡು ಬೆಳವಣಿಗೆಯಾಗುತ್ತದೆಹಾಗಾಗಿ ಇವುಗಳನ್ನು ಆಂಟ್ಲರ್ಸ್‌ (antlers)ಎಂದು ಕರೆಯುತ್ತಾರೆಕೊಂಬು ಉದುರಿಸದ ಪ್ರಾಣಿಗಳು ಆಂಟಿಲೋಪ್ಸ್ !‌ ಏಕೆಂದರೆಇವುಗಳ ಕೊಂಬುಗಳು ಕೊಳವೆಯಂತೆ ಟೊಳ್ಳಾಗಿದ್ದರೆ ಜಿಂಕೆಗಳದ್ದು ಟೊಳ್ಳಾಗಿರದ ಗಟ್ಟಿ ಕೊಂಬುಗಳಾಗಿರುವುದು.


ಕೋಡುಗಳನ್ನು ತಮ್ಮ ರಕ್ಷಣಾ ಸಾಧನವಾಗಿಯೂ ಜಿಂಕೆಗಳು ಬಳಸಿಕೊಳ್ಳುತ್ತವೆಸಂಗಾತಿಗಾಗಿ ಜಗಳವಾಡುವಾಗಲೂ ಸಹ ತಮ್ಮ ಒಂದು ಅಥವಾ ಎರಡೂ ಕೊಂಬುಗಳನ್ನು ಕಳೆದುಕೊಳ್ಳಬಹುದಾಗಿರುತ್ತದೆಕಾಡಿನಲ್ಲಿ ಉದುರಿದಾಗ ಇವುಗಳನ್ನು ಮುಳ್ಳುಹಂದಿಗಳು ಕ್ಯಾಲ್ಸಿಯಂ ಮೂಲವಾಗಿ ಸ್ವಲ್ಪ ಸ್ವಲ್ಪ ಕಡಿದು ತಿನ್ನುತ್ತವೆಈ ಕೊಂಬುಗಳಿಂದ ಕುಡುಗೋಲಿನಂತಹ ಆಯುಧಗಳಿಗೆ ಹಿಡಿಕೆ ಮಾಡಿಕೊಳ್ಳಬಹುದುಆದರೆವನ್ಯಜೀವಿಗಳ ಸಂರಕ್ಷಣಾ ಕಾಯ್ದೆಗಳಿಂದ ಸಾದ್ಯವಿಲ್ಲಇದು ಸ್ವಾಗತವೂ ಹೌದು.


No comments:

Post a Comment