ಆಗಸದಲ್ಲಿ ಚಿತ್ತಾರ ಬಿಡಿಸಿದ
ಅರೋರಾ
ಲೇಖಕರು :
ಬಾಲ್ಯದಲ್ಲಿ ಆಗಸದಲ್ಲಿ ಮಿಂಚು ವಿವಿಧ ಆಕಾರಗಳಲ್ಲಿ ಕಂಡ ಮರುಕ್ಷಣವೇ ಬರುತ್ತಿದ್ದ ಸಿಡಿಲಾಘಾತ ಮೊದ ಮೊದಲು ಗಾಬರಿ ಭಯಗಳನ್ನು ಹುಟ್ಟಿಸುತ್ತಿತ್ತು. ಕಾಲ ಕ್ರಮೇಣ ಬುದ್ಧಿ ಬೆಳೆಯುತ್ತಿದ್ದಂತೆ ಆಗಸದಲ್ಲಿ ನಡೆಯುವ ಪ್ರಕೃತಿ ಚೋದ್ಯಗಳು ಅದ್ಭುತ ಎನಿಸತೊಡಗಿದವು. ಕ್ಷಣಮಾತ್ರದಲ್ಲಿ ಮಿಂಚಿ ಮರೆಯಾಗುತ್ತಿದ್ದ ಕೋಲ್ಮಿಂಚು, ಬೈಗು-ಬೆಳಗಿನ ಸುಂದರ ಆಗಸ, ರವಿಕಾಂತಿ ಮೂಡಿಸುತ್ತಿದ್ದ ದೃಶ್ಯ ಕಾವ್ಯ, ದಿಗುವಿನಂಚಿನ ವರ್ಣ ವೈಭವ, ತಾರೆಗಳ ಲೋಕದ ಅನೂಹ್ಯತೆ ಎಲ್ಲವೂ ಒಂದಕ್ಕಿಂತ ಮತ್ತೊಂದು ಮಿಗಿಲು. ಮುಗಿಲಿನ ಈ ಆಟಕ್ಕೆ ಮನ ಸೋಲದವರಾರು? ಅಂತಹದರಲ್ಲಿ ಅರೋರಾ ಬೋರಿಯಾಲಿಸ್ ಎಂಬ ಧ್ರುವಪ್ರಭೆಯ ಸೌಂದರ್ಯ ವರ್ಣನಾತೀತ.
ಚಿತ್ರಗಳು : ರವೀಂದ್ರನ್ ಚಿಪ್ಳೂಣ್ಕರ್
ಅರೋರಾ ಬೋರಿಯಾಲಿಸ್, ಅಥವಾ ಉತ್ತರ ಧ್ರುವಪ್ರಭೆ
ಎನ್ನುವುದು ಭೂರಮೆಯ ಸಿರಿಮುಡಿಯಲ್ಲಿ ಮಲರಿದ ಒಂದು ಸುಂದರ ದೃಶ್ಯಕಾವ್ಯ. ಮಾನವ ಇತಿಹಾಸದಲ್ಲಿ ಆಧುನಿಕ
ತಂತ್ರಜ್ಞಾನ ಉದಯಿಸುವ ಮೊದಲು ಕೂಡ ಜನರ ಕಲ್ಪನೆಗೆ ಆಹಾರವಾಗಿದ್ದ ಪ್ರಕೃತಿ ಚಿತ್ತಾರ. ಇಂದು ವಿಜ್ಞಾನ
ಇದರ ಹಿಂದಿನ ರೋಚಕ ರಹಸ್ಯವನ್ನು ಹೊರಗೆಡಹಿದೆ. ಆದರೆ ಕಣ್ಣಿಗೆ ಕಾಣುವ ಈ ವರ್ಣವೈಭವದ ರಮಣೀಯತೆಯು ವೈಜ್ಞಾನಿಕ ವಿವರಣೆಯನ್ನೂ
ಮೀರಿ, ಒಂದು ಆಧ್ಯಾತ್ಮಿಕ ಅನುಭವವನ್ನೇ ನೀಡುತ್ತದೆ.
ವಿಜ್ಞಾನದ ಬೆಳಕಿನಲ್ಲಿ ಅಂತಃಚಕ್ಷು ತೆರೆಸುವ
ಪ್ರಕೃತಿಯ ಆಟ:
ಸೂರ್ಯನ ಕೊರೋನದ ರಂಧ್ರಗಳು ಮತ್ತು ಕೊರೋನದಲ್ಲಿನ ದ್ರವ್ಯದ ಹೊರಸಿಡಿತಗಳಿಂದ ಉಂಟಾದ ಸೌರ ಮಾರುತಗಳು ಭೂಮಿಯ ಕಾಂತಗೋಳದಲ್ಲಿ (ಮ್ಯಾಗ್ನೆಟೋಸ್ಫಿಯರ್) ಉಂಟು ಮಾಡುವ ಅಸ್ತವ್ಯಸ್ಥತೆಗಳ ಪರಿಣಾಮವಾಗಿ ಅರೋರಾಗಳು ಉಂಟಾಗುತ್ತವೆ. ಈ ಅಸ್ತವ್ಯಸ್ಥತೆಗಳು ಕಾಂತಗೋಳದ ಪ್ಲಾಸ್ಮಾದಲ್ಲಿನ ವಿದ್ಯುದಾವೇಶಯುಕ್ತ ಕಣಗಳ ಮಾರ್ಗಗಳನ್ನು
ಬದಲಾಯಿಸುತ್ತವೆ. ಈ ಕಣಗಳು,
ಪ್ರಧಾನವಾಗಿ
ಎಲೆಕ್ಟ್ರಾನ್‌ಗಳು ಮತ್ತು ಪ್ರೋಟಾನ್ಗಳನ್ನು ಹೊಂದಿದ್ದು ಮೇಲ್ಭಾಗದ ವಾತಾವರಣ(ಉಷ್ಣಗೋಳ/ಬಹಿರ್‌ಗೋಳ)ದಲ್ಲಿ
ಪ್ರಕ್ಷೇಪನಕ್ಕೊಳಪಡುತ್ತವೆ.ಇದರ ಪರಿಣಾಮವಾಗಿ ವಾಯುಮಂಡಲದ ಘಟಕಗಳಲ್ಲಿ ನಡೆಯುವ
ರಾಸಾಯನಿಕ ಕ್ರಿಯೆಗಳು-ಅಯಾನೀಕರಣ ಮತ್ತು ಉತ್ತೇಜಿತ ಸ್ಥಿತಿಯಿಂದಾಗಿವಿವಿಧ ಬಣ್ಣಗಳು ಮತ್ತುಸಂಕೀರ್ಣತೆಯ ಧ್ರುವಪ್ರಭೆಯ ಚಿತ್ತಾರ ಮೂಡುತ್ತದೆ. ಉಭಯ ಧ್ರುವಪ್ರದೇಶಗಳ ಸುತ್ತಲೂ ಗೋಚರಿಸುವ ಅರೋರಾದ ಆಕಾರವು, ಪ್ರಕ್ಷೇಪನಗೊಳ್ಳುವ
ಕಣಗಳಿಗೆ ಒದಗುವ ವೇಗೋತ್ಕರ್ಷದ ಪ್ರಮಾಣವನ್ನು
ಅವಲಂಬಿಸಿದೆ.
ಚಿತ್ರ : ರವೀಂದ್ರನ್ ಚಿಪ್ಳೂಣ್ಕರ್

Source : https://www.pexels.com/photo/aurora-borealis-3081835/
ಉಪಗ್ರಹ ವಿಜ್ಞಾನದಲ್ಲಿ ಅರೋರಾದ ಪ್ರಾಮುಖ್ಯತೆ : Solar flares ಅಥವಾ coronal mass ejections (CME) ಎಂಬ ಸ್ಫೋಟಗಳಿಂದ ಹೆಚ್ಚಿನ ಪ್ರಮಾಣದ ಸೌರ ಕಣಗಳು ಭೂಮಿಗೆ ಬಂದು, ಈ ಬೆಳಕಿನ ಪ್ರಭೆಯನ್ನು ತೀವ್ರಗೊಳಿಸುತ್ತವೆ. ಇದರಿಂದ ಉಪಗ್ರಹ ಸಂಪರ್ಕಗಳು, GPS ವ್ಯವಸ್ಥೆ, ಹಾಗೂ ವಿಮಾನ ಸಂವಹನಗಳು ತೊಂದರೆಗೆ ಒಳಗಾಗಬಹುದು. ಅರೋರಾದ ಅಧ್ಯಯನದಿಂದ ಈ ಸೌರ ಚಟುವಟಿಕೆಗಳನ್ನು ಮಿತಿಮೀರುವ ಮುನ್ನ ಗುರುತಿಸಲು ಸಾಧ್ಯವಾಗುತ್ತದೆ. ನಾಸಾದ THEMIS mission, ESA's Swarm satellites, NOAA's space weather prediction center ಮುಂತಾದ ಸಂಸ್ಥೆಗಳು ಈ ಧ್ರುವಪ್ರಭೆಯನ್ನು ಅಧ್ಯಯನ ಮಾಡುತ್ತಿವೆ.
ಚಿತ್ರಗಳು : ರವೀಂದ್ರನ್ ಚಿಪ್ಳೂಣ್ಕರ್
ಮಳೆಗಾಲದ ನಂತರಸೆಪ್ಟಂಬರ್ ತಿಂಗಳಿನಿಂದ
ಮಾರ್ಚ್ ತಿಂಗಳವರೆಗೆ ಅರೋರಾವನ್ನು ನೋಡಲು
ಉತ್ತಮ ಕಾಲಮಾನವೆನ್ನಬಹುದು.ಉತ್ತಮ ಸ್ಥಳಗಳು: ಟ್ರೋಮ್ಸೋ (ನಾರ್ವೆ), ಲಾಪ್ಲ್ಯಾಂಡ್ (ಫಿನ್‌ಲ್ಯಾಂಡ್),
ಫೈರ್ಬ್ಯಾಂಕ್ಸ್ (ಅಲಾಸ್ಕಾ), ಐಸ್‌ಲ್ಯಾಂಡ್, ಯೆಲ್ಲೋನೈಫ್ (ಕೆನಡಾ)ಸಾಂಸ್ಕೃತಿಕ ಮತ್ತು ಪೌರಾಣಿಕ
ದೃಷ್ಟಿಕೋನ:ನಾರ್ವೆ ಪುರಾಣಗಳು ಇದನ್ನು ದೇವತೆಗಳ ಯುದ್ಧದ ಪ್ರತಿಫಲನವೆಂದು ಹೇಳಲಾಗಿದೆ. ಹಿಮನರಿಯೊಂದು
ತನ್ನ ಬಾಲ ಬೀಸಿ ಹಿಮಾಚ್ಛಾದಿತ ಪ್ರದೇಶದಲ್ಲಿ ಉಂಟು ಮಾಡುವ ಬೆಳಕೇ ಧ್ರುವಪ್ರಭೆ ಎಂದುಫಿನ್‌ಲ್ಯಾಂಡ್‌ನ
ಜನರು ನಂಬುತ್ತಾರೆ. ಸ್ಥಳೀಯ ಬುಡಕಟ್ಟು ಸಮುದಾಯದ ಜನರು ಇದು ತಮ್ಮ ಪೂರ್ವಜರ ಆತ್ಮಗಳು ಆಕಾಶದಲ್ಲಿ
ಆಟವಾಡುತ್ತಿರುವ ದೃಶ್ಯವೆಂದು ಕಲ್ಪಿಸಿಕೊಳ್ಳುತ್ತಾರೆ.
ಚಿತ್ರಗಳು : ರವೀಂದ್ರನ್ ಚಿಪ್ಳೂಣ್ಕರ್
ಅರೋರಾ ಬೋರಿಯಾಲಿಸ್ ಕಲ್ಪನಾ ವಿಲಾಸದ ಹೊರತಾಗಿ
ವೈಜ್ಞಾನಿಕ ಜಗತ್ತಿನಲ್ಲಿ ತನ್ನದೇ ಮಹತ್ವವನ್ನು ಹೊಂದಿದೆ. ರಸಿಕರು ತಮ್ಮ ಹೃನ್ಮನಗಳನ್ನು ತಣಿಸಿ
ಹೊಸ ಪ್ರಭೆಯನ್ನು ತಮ್ಮಲ್ಲಿ ಕಂಡುಕೊಂಡರೆ, ಅಂತರಿಕ್ಷದ ಚಟುವಟಿಕೆಗಳು ತಿರೆಯ ಮೇಲೆ ಉಂಟು ಮಾಡುವ
ಪರಿಣಾಮವನ್ನು ವಿಜ್ಞಾನವು ನಮಗೆ ತಿಳಿಸುತ್ತದೆ. ಪ್ರಕೃತಿಯ ಈ ರಮಣೀಯ ಐಂದ್ರಜಾಲವು ರಸಾಯನ, ಭೌತಶಾಸ್ತ್ರ
ಮತ್ತು ಖಗೋಲಶಾಸ್ತ್ರದ ಅದ್ಭುತ ಸಂಗಮವಾಗಿದೆ.
ಅರೂರ ಬೋರಿಯಾಲಿಸ್ ಕುರಿತಂತಹ ಹಾಗೂ ಒಟ್ಟಾರೆ ಧ್ರುವ ಪ್ರಭೆ ಗಳ ಕುರಿತಂತಹ ಈ ಸಂಚಿಕೆ ಹಾಗು ವಿಚಾರಧಾರೆ ಮಕ್ಕಳಲ್ಲಿ ಹೊಸ ಜ್ಞಾನ ಹಾಗೂ ಪರಂಪರೆಗಳಲ್ಲಿ ಜನರು ಭಾವಿಸುವಂತಹ ವಿಚಾರಧಾರೆಗಳನ್ನು ಉತ್ತಮವಾಗಿ ಪ್ರಸ್ತುತಪಡಿಸಿದ್ದೀರಿ ಭಟ್ ಸರ್ ವಂದನೆಗಳು 🙏🙏🙏
ReplyDeleteThank you sir .
Delete