ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Thursday, March 4, 2021

ಸವಿಜ್ಞಾನ ಇ-ಪತ್ರಿಕೆಯ ಮಾರ್ಚ್ - 2021ರ ಲೇಖನಗಳು

ಸವಿಜ್ಞಾನ ಇ-ಪತ್ರಿಕೆಯ ಮಾರ್ಚ್ - 2021ರ ಲೇಖನಗಳು

ಸಂಪಾದಕರ ಡೈರಿಯಿಂದ - ಡಾ. ಟಿ.ಎ. ಬಾಲಕೃಷ್ಣ ಅಡಿಗ

ವನ್ಯ ಜೀವಿಗಳು: ನಮ್ಮ ಹಿತೈಷಿಗಳು - ಡಿ.ಕೃಷ್ಣ ಚೈತನ್ಯ.

ತಮಸೋಮ ಜ್ಯೋತಿರ್ಗಮಯ . . . ಓ ಬೆಳಕೇ ನೀನೆಷ್ಟು ವಿಸ್ಮಯ...! - ರೋಹಿತ್ ವಿ ಸಾಗರ್

ವಿಜ್ಞಾನ ಪಾಠಗಳ ಮೂಲಕ ಮೌಲ್ಯ ಶಿಕ್ಷಣ - ಡಾ.ಟಿ.ಎ.ಬಾಲಕೃಷ್ಣ ಅಡಿಗ

ವಿಶ್ವ ಜಲ ದಿನ ಮತ್ತು ನಮ್ಮ ಸಂಕಲ್ಪ - ಗುರುದತ್ತ.A

Current Trends in Teaching Science - B.N.Roopa

ಚಿನ್ನದ ನಾಡಿನ ಜ್ಞಾನದ ಗಣಿ - ಲೇಖನ: ಎ. ಶ್ರೀನಿವಾಸ್

ವಿಜ್ಞಾನದ ಒಗಟುಗಳು - ವಿಜಯ್ ಕುಮಾರ್ ಹುತ್ತನಹಳ್ಳಿ  ಮತ್ತು ಶ್ರೀನಿವಾಸ ವಿ, ತುಮಕೂರು.

ವ್ಯಂಗ್ಯಚಿತ್ರಗಳು - ವಿಜಯಕುಮಾರ್ ಮತ್ತು ಶ್ರೀಮತಿ ಬಿ. ಜಯಶ್ರೀ ಶರ್ಮ


ಸಂಪಾದಕರ ಡೈರಿಯಿಂದ

ಸಂಪಾದಕರ ಡೈರಿಯಿಂದ

ಇದು ‘ಸವಿಜ್ಞಾನ‘ದ ಮೂರನೆಯ ಸಂಚಿಕೆ. ಈ ಹಿಂದಿನ ಎರಡು ಸಂಚಿಕೆಗಳಿಗೆ ನೀವು ಸ್ಪಂದಿಸಿರುವ ರೀತಿ ನಿಜಕ್ಕೂ ಅನನ್ಯ. ವಿಜ್ಞಾನ ಶಿಕ್ಷಕರೇ ಅಲ್ಲದೆ ವಿಜ್ಞಾನಾಸಕ್ತರ ಗಮನವನ್ನೂ ಸೆಳೆಯುವುದರಲ್ಲಿ ‘ಸವಿಜ್ಞಾನ’ ಯಶಸ್ವಿಯಾಗಿರುವುದು ಹೆಮ್ಮೆಯ ವಿಷಯ. ನಿಮ್ಮೆಲ್ಲರ ಮೂಲಕ ‘ಸವಿಜ್ಞಾನ’ ಮುಂದಿನ ದಿನಗಳಲ್ಲಿ ಇನ್ನಷ್ಟು ವಿಜ್ಞಾನಾಸಕ್ತರನ್ನು ತಲುಪಲಿ ಎಂಬುದು ನಮ್ಮ ಆಶಯ. ನಿಮ್ಮಿಂದ ಬಂದಿರುವ ಉತ್ತಮ ಸಲಹೆಗಳನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವ ಜವಾಬ್ದಾರಿ ನಮ್ಮದು. ಅದರಂತೆ, ಪ್ರಕಟವಾಗುತ್ತಿರುವ ಲೇಖನಗಳು ಮತ್ತು ಮಾಹಿತಿ ನಿಮಗೆ ಉಪಯುಕ್ತ ಎನಿಸಿದರೆ ನಮ್ಮ ಶ್ರಮ ಸಾರ್ಥಕ. ನಮ್ಮ ಈ ಪ್ರಯತ್ನವನ್ನು ನೋಡಿ ರಾಜ್ಯದ ಜನಪ್ರಿಯ ಪ್ರೌಢ ಶಿಕ್ಷಣ ಸಚಿವರಾದ ಸನ್ಮಾನ್ಯ ಎಸ್. ಸುರೇಶ್ ಕುಮಾರ್ ಅವರು ಮೆಚ್ಚುಗೆ ಸೂಚಿಸಿರುವುದು ನಮ್ಮ ಉತ್ಸಾಹವನ್ನು ಇಮ್ಮಡಿಸಿದೆ.

ಮಾರ್ಚ್ ತಿಂಗಳಲ್ಲಿ ಪರಿಸರಕ್ಕೆ ಸಂಬಂಧಿಸಿದ ಎರಡು ಪ್ರಮುಖ ದಿನಾಚರಣೆಗಳಿವೆ. ಮಾರ್ಚ್ 3 ರೆಂದು’ವಿಶ್ವ ವನ್ಯಜಿವಿ ದಿನ” ಹಾಗೂ 22ರಂದು ‘ವಿಶ್ವ ಜಲದಿನ’. ಈ ಸಂಚಿಕೆಯಲ್ಲಿ ಈ ಎರಡು ಪ್ರಮುಖ ಸಂದರ್ಭಗಳಿಗೆ ಸಂಬಂಧಿಸಿದಂತೆ ಲೇಖನಗಳಿವೆ. ಜೊತೆಗೆ, ಬೆಳಕಿನ ಬಗ್ಗೆ ಒಂದು ವಿಶೇಷ ಲೇಖನವೂ ಇದೆ. ವಿಜ್ಞಾನ ಪಾಠಗಳ ಮೂಲಕ ವಿದ್ಯಾರ್ಥಿಗಳಲ್ಲಿ ಜೀವನ ಮೌಲ್ಯಗಳನ್ನು ಉದ್ದೀಪನಗೊಳಿಸುವ ಬಗ್ಗೆಯೂ ಒಂದು ಲೇಖನ ಇದೆ. ವಿಜ್ಞಾನ ಬೋಧನೆಯಲ್ಲಿ ತಂತ್ರಜ್ಞಾನದ ಬಳಕೆ ಬಗ್ಗೆ ಬೆಳಕು ಚೆಲ್ಲುವ ಲೇಖನವಿದೆ. ಈ ತಿಂಗಳ ವಿಶೇಷವೆಂದರೆ, ಬ್ಯಾಂಕ್ ಉದ್ಯೋಗಿಯಾಗಿದ್ದುಕೊಂಡು ವಿಜ್ಞಾನ ಮತ್ತು ಗಣಿತ ವಿಷಯಗಳ ಸಂಪನ್ಮೂಲ ವ್ಯಕ್ತಿಯಾಗಿ  ಅದ್ಭುತ ಸಾಧನೆ ಮಾಡಿರುವವರ ಪರಿಚಯವೂ ಇದೆ. ಇವೆಲ್ಲದರ ಜೊತೆಗೆ ನಿಮ್ಮ ಮನಸ್ಸನ್ನು ಹಗುರಾಗಿಸಲು ವ್ಯಂಗ್ಯ ಚಿತ್ರಗಳು ಹಾಗೂ ಮಿದುಳನ್ನು ಚುರುಕಾಗಿಸಲು ಒಗಟುಗಳೂ ಇವೆ.

ವನ್ಯ ಜೀವಿಗಳು: ನಮ್ಮ ಹಿತೈಷಿಗಳು

ವನ್ಯ ಜೀವಿಗಳು: ನಮ್ಮ ಹಿತೈಷಿಗಳು

ಲೇಖಕರು: ಡಿ.ಕೃಷ್ಣ ಚೈತನ್ಯ.

ವಿಜ್ಞಾನ ಮಾರ್ಗದರ್ಶಕರು ಹಾಗು ವನ್ಯಜೀವಿ ತಜ್ಞರು.

ಗೋಣಿಕೊಪ್ಪಲು ಪ್ರೌಢಶಾಲೆ. ಗೋಣಿಕೊಪ್ಪಲು.

ಕೊಡಗು ಜಿಲ್ಲೆ.

ಹಾಯ್ ಗೆಳೆಯರೆ, ನಾವೆಲ್ಲರೂ ಸಮೀಪದ ಅರಣ್ಯಕ್ಕೋ, ಪ್ರಾಣಿ ಸಂಗ್ರಹಾಲಯಕ್ಕೊ ಅಥವಾ ಉದ್ಯಾನವನಕ್ಕೊ ಭೇಟಿಕೊಟ್ಟಾಗ ಬಹಳ ಕುತೂಹಲದಿಂದ ನೋಡುವುದು ಪ್ರಾಣಿಗಳನ್ನು ಮಾತ್ರ. ಏಕೆಂದರೆ, ನಮಗೆ ವನ್ಯಜೀವಿಗಳೆಂದರೆ ಇರುವ ಕನಿಷ್ಟ ಜ್ಞಾನ ಅಷ್ಟೆ ಅಲ್ಲವೇ? ಹಾಗಾದರೆ, ವನ್ಯಜೀವಿಗಳೆಂದರೇನು? ಅವು ಎಷ್ಟು ಬಗೆಯವು? ನಾವು ಸಾಕುತ್ತಿರುವ ಪ್ರಾಣಿಗಳು ಹಿಂದೊಮ್ಮೆ ಕಾಡು ಪ್ರಾಣಿಗಳಾಗಿದ್ದವೆಯೇ? ಅಷ್ಟೆ ಏಕೆ? ಸ್ವತಃ ನಾವು ವನ್ಯಪ್ರಾಣಿಯಾಗಿದ್ದೆವಾ? ಕಾಡುಪ್ರಾಣಿಗಳನ್ನು ಕ್ರೂರ ಅಥವಾ ದುಷ್ಟ ಮೃಗಗಳು ಎನ್ನಬಹುದೇ? ಅವುಗಳಿಗಿಂತ ದುಷ್ಟ ಮೃಗ ಈ ಭೂಮಿಯ ಮೇಲೆ ಇರುವುದೇ? ಎನ್ನುವುದರ ಬಗ್ಗೆ ಒಂದಿಷ್ಟು ತಿಳಿಯೋಣ ಅಲ್ಲವೇ?

ತಮಸೋಮ ಜ್ಯೋತಿರ್ಗಮಯ . . . ಓ ಬೆಳಕೇ ನೀನೆಷ್ಟು ವಿಸ್ಮಯ...!

ತಮಸೋಮ ಜ್ಯೋತಿರ್ಗಮಯ . . . ಓ ಬೆಳಕೇ ನೀನೆಷ್ಟು ವಿಸ್ಮಯ...! 

ಲೇಖನ: ರೋಹಿತ್ ವಿ ಸಾಗರ್

ಪ್ರಾಂಶುಪಾಲರು,

ಹೊಂಗಿರಣ ಸ್ವತಂತ್ರ ಪದವಿಪೂರ್ವ ಕಾಲೇಜು

ಸಾಗರ 


ನಾವು ಏನನ್ನಾದರೂ ಓದುತ್ತಿದ್ದೇವೆ ಅಥವಾ ಯಾರನ್ನಾದರೂ ನೋಡುತ್ತಿದ್ದೇವೆ ಎಂದರೆ ಅದು ಬೆಳಕಿನ ಸಹಾಯವಿಲ್ಲದೆ ಸಾಧ್ಯವಾಗಲಾರದು. ಇನ್ನೂ ಹೇಳಬೇಕೆಂದರೆ, ನಮ್ಮ ಕವಿಗಳು ನಿಸರ್ಗದ ಕುರಿತು ಪೇಜುಗಟ್ಟಲೆ ಕವನಗಳನ್ನು ಗೀಚುತ್ತಾರಲ್ಲಾ ಅದಕ್ಕೂ ಈ ಬೆಳಕೇ ಕಾರಣ. ಬೆಳಕಿಲ್ಲದಿದ್ದರೆ ಗುಲಾಬಿಯ ಕೆಂಪು ನಿತ್ಯ ಹರಿದ್ವರ್ಣದ ಕಂಪು, ಭತ್ತದೆಲೆಯ ಹಸಿರು, ಅದರ ಬುಡದ ಕೆಸರು ಇದೆಲ್ಲವನ್ನೂ ಕತ್ತಲೆಯ ಕರಿಛಾಯೆಯೇ ನುಂಗಿಬಿಡುತ್ತಿತ್ತು, ಬಣ್ಣ ಬಣ್ಣದ ಲೋಕವೆಂಬುದು ಒಂದು ಅರ್ಥವಿಲ್ಲದ ಪದವಾಗಿ ಬಿಡುತಿತ್ತು. ಆದ್ದರಿಂದಲೇ ಬೆಳಕಿಗೆ ಪುರಾತನ ಕಾಲದಿಂದಲೂ ಅಪಾರ ಮನ್ನಣೆ ದೊರಕುತ್ತಿರುವುದು. ಜಗತ್ತಿನ ಅಪೂರ್ವ ಸೌಂದರ್ಯವನ್ನು ಬಿಚ್ಚಿಡುವ ಮಾಧ್ಯಮವಾದ್ದರಿಂದಲೋ ಏನೋ, ಈ ಬೆಳಕಿನ ಬಗ್ಗೆ ಹಲವು ಚಿಂತನೆಗಳು ಬಹಳ ಹಿಂದಿನ ಕಾಲದಿಂದಲೇ ನಡೆಯ ತೊಡಗಿದ್ದವು. ಗ್ರೀಕ್ ಮುಂತಾದ ದೇಶಗಳಲ್ಲಿ ಕ್ರಿಸ್ತಪೂರ್ವದಲ್ಲಿಯೇ ಪ್ಲೇಟೋ ಮತ್ತು ಅರಿಸ್ಟಾಟಲ್ ತಮ್ಮ ಹಲವು ಸಿದ್ಧಾಂತಗಳಲ್ಲಿ ಬೆಳಕಿನ ಸ್ವರೂಪವನ್ನು ವಿವರಿಸಲು ಪ್ರಯತ್ನಿಸಿದ್ದರು. ಹೆಚ್ಚು ಕಡಿಮೆ ಅದೇ ಕಾಲದಲ್ಲಿ ಭಾರತದ ಆರ್‍ಯಭಟ, ವರಾಹಿಮಿಹಿರಾ ಮುಂತಾದ ಜ್ಯೋತಿರ್ವಿಜ್ಞಾನಿಗಳು ಸಹ ಈ ಬೆಳಕಿನ ಹಿಂದೆ ಬಿದ್ದಿದ್ದರು ಎನ್ನುತ್ತವೆ ಐತಿಹ್ಯಗಳು. ನಂತರದ ದಿನಗಳಲ್ಲಿ ಡಿಕಾರ್ಟೆ ಎಂಬ ಭೌತಶಾಸ್ತ್ರಜ್ಞ ಬೆಳಕಿನ ರಚನೆಯ ಬಗ್ಗೆ ಮೊದಲ ಬಾರಿ ಸಿದ್ಧಾಂತವೊಂದರಲ್ಲಿ ಬೆಳಕು ಎಂಬುದು ಸಣ್ಣ ಸಣ್ಣ ಕಣಗಳಿಂದ ಮಾಡಲ್ಪಟ್ಟ ಒಂದು ಪ್ರವಾಹ ಎಂದು ಪ್ರತಿಪಾದಿಸುತ್ತಾನೆ. ಅದೇ ಸಿದ್ಧಾಂತವನ್ನು ಇಂಗ್ಲೆಂಡಿನ ಸರ್ ಐಸಾಕ್ ನ್ಯೂಟನ್ ಸ್ವಲ್ಪ ಮಾರ್ಪಡಿಸಿ ನ್ಯೂಟನ್ನನ ಕಣ ಸಿದ್ಧಾಂತ (ಕಾರ್ಪಸ್ಕುಲರ್ ಥಿಯರಿ)ದ ಮೂಲಕ ಬೆಳಕು ’ಕಾರ್ಪುಸ್ಕಲ್’ಗಳೆಂಬ ಕಣಗಳಿಂದ ಮಾಡಲ್ಪಟ್ಟಿದೆ ಎಂದೂ, ಅವುಗಳು ಮತ್ತು ಗಾಜಿನಂತ ವಸ್ತುಗಳ ಮಧ್ಯೆ ಇರುವ ಆಕರ್ಷಣೆ ಶಕ್ತಿಯಿಂದ ಬೆಳಕು ಅಂತಹ ವಸ್ತುಗಳ ಮೂಲಕ ಹಾದು ಹೋಗುತ್ತದೆಂದೂ, ಕನ್ನಡಿಯಂತಹ ವಸ್ತುವಿನ  ಜೊತೆ ಇರುವ ವಿಕರ್ಷಣೆಯಿಂದ ಅದು ಪ್ರತಿಫಲನ ಹೊಂದುತ್ತದೆ ಎಂದೂ ಪ್ರತಿಪಾದಿಸುತ್ತಾನೆ. ಆದರೆ ಮುಂದೆ ಅವನೇ ಮಾಡಿದ ’ನ್ಯೂಟನ್‌ನ ಉಂಗುರ’ಗಳಂತಹ ಕೆಲ ಬೆಳಕಿನ ಪ್ರಯೋಗಗಳಿಂದ ಈ ಸಿದ್ಧಾಂತದಲ್ಲಿ ದೋಷಗಳಿರುವುದು ಗೊತ್ತಾಗುತ್ತದೆ. ನಂತರ ಬಂದ ಹೈಗೆನ್ಸ್ ಎಂಬಾತ ಬೆಳಕು ತರಂಗಗಳ ರೂಪದಲ್ಲಿರುತ್ತದೆ ಮತ್ತು ತನ್ನ ಚಲನೆಗೆ ವಿಶ್ವದೆಲ್ಲೆಡೆ ಪಸರಿಸಿರುವ ಅಗೋಚರ  ’ಈಥರ್’ ಎಂಬ ಮಾಧ್ಯಮವನ್ನು ಬಳಸಿಕೊಳ್ಳುತ್ತದೆ ಎಂದು ಪ್ರತಿಪಾದಿಸುತ್ತಾನೆ. ಆದರೆ ಈ ಸಿದ್ಧಾಂತವೂ ಪ್ರಾಯೋಗಿಕವಾಗಿ ಈಥರ್ ಮಾಧ್ಯಮದ ಇರುವಿಕೆಯನ್ನು ತೋರಿಸಿಕೊಡುವಲ್ಲಿ ಸೋಲೊಪ್ಪಿಕೊಳ್ಳುತ್ತದೆ. ಜೊತೆಗ ಬೆಳಕು ನಿರ್ವಾತದಲ್ಲಿ ಅಂದರೆ ಯಾವುದೇ ಮಾಧ್ಯಮವಿಲ್ಲದಿದ್ದಲ್ಲಿಯೂ ಹೇಗೆ ಚಲಿಸುತ್ತದೆ ಎಂಬುದಕ್ಕೆ ಆ ಸಿದ್ಧಾಂತ ವಿವರಣೆ ನೀಡುವುದಿಲ್ಲ.  ಕಡೆಗೆ ಮ್ಯಾಕ್ಸವೆಲ್ ಎಂಬಾತ ಬೆಳಕು ಒಂದು ವಿದ್ಯುದ್ಕಾಂತೀಯ ತರಂಗವೆಂದೂ ಅದರಲ್ಲಿ ವಿದ್ಯುತ್ ಮತ್ತು ಕಾಂತಕ್ಷೇತ್ರಗಳ ಪ್ರಭಾವ ಇರತ್ತವೆಂದೂ ಅವು ಯಾವುದೇ ಮಾಧ್ಯಮದ ಅವಶ್ಯಕತೆ ಇಲ್ಲದೆ ಚಲಿಸಬಲ್ಲವೆಂದೂ ಪ್ರತಿಪಾದಿಸುತ್ತಾನೆ. ಅಲ್ಲದೆ ಹೆನ್ರಿ ಹರ್ಡ್ಸ್ ಎಂಬಾತ ಈ ಸಿದ್ಧಾಂತಕ್ಕೆ ಪ್ರಾಯೋಗಿಕ ನಿದರ್ಶನವನ್ನು ಮಾಡಿ ತೋರಿಸುವುದರ ಜೊತೆಗೇ ವಿದ್ಯುತ್ ಮತ್ತು ಕಾಂತಕ್ಷೇತ್ರಗಳನ್ನು ಬಳಸಿ ವಿದ್ಯುದ್ಕಾಂತೀಯ ತರಂಗಗಳನ್ನು ಉತ್ಪಾದಿಸಬಹುದು ಎಂದೂ ತೋರಿಸಿಕೊಟ್ಟನು. ಹಾಗಾಗಿ ಬೆಳಕನ್ನು ಒಂದು ವಿದ್ಯುದ್ಕಾಂತೀಯ ತರಂಗವಾಗಿ ಸಾರ್ವತ್ರಿಕವಾಗಿ ಒಪ್ಪಿಕೊಳ್ಳಲಾಯಿತು. ಆದರೆ ಕೆಲವೊಂದಿಷ್ಟು ಪ್ರಯೋಗಗಳಲ್ಲಿ ಬೆಳಕು ಕಣಗಳ ಪ್ರವಾಹದಂತೆ, ಇನ್ನೂ ಕೆಲವಷ್ಟರಲ್ಲಿ ವಿದ್ಯುದ್ಕಾಂತೀಯ ತರಂಗಗಳಂತೆ ವರ್ತಿಸುತ್ತಿರುವುದನ್ನು ಮ್ಯಾಕ್ಸ್ ಪ್ಲಾಂಕ್ ಎಂಬಾತ ಗಮನಿಸಿ, ಬೆಳಕಿಗೆ ಕೆಲವೊಮ್ಮೆ ತರಂಗಗಳಂತೆಯೂ ಮತ್ತೆ ಕೆಲವೊಮ್ಮೆ ಕಣಗಳಂತೆಯೂ ವರ್ತಿಸುವ ಇಬ್ಬಗೆಯ ಸ್ವಭಾವ ಅಥವಾ ದ್ವಂದ್ವ ಸ್ವಭಾವ ಇದೆಯೆಂದು ತೋರಿಸಿಕೊಟ್ಟನು. ಅಲ್ಲದೆ ಆ ಬೆಳಕಿನ ಕಣಗಳು ನಿರ್ದಿಷ್ಟ ಶಕ್ತಿಯ ಪ್ಯಾಕೆಟ್ಟುಗಳಾಗಿವೆ ಎಂದು ಪ್ರತಿಪಾದಿಸಿದನು. ಅವಕ್ಕೆ  ಶಕ್ತಿಯ ಪ್ಯಾಕೆಟ್ಟುಗಳೆಂಬ ಅರ್ಥ ಬರುವ ’ಫೋಟಾನ್ ಅಥವಾ ಕ್ವಾಂಟಮ್’ಗಳೆಂಬ ಹೆಸರನ್ನು ನೀಡಿದನು. ಈ ಫೋಟಾನ್ ಸಿದ್ಧಾಂತದಿಂದಲೇ ದ್ಯುತಿ ವಿದ್ಯುತ್ ಪರಿಣಾಮವನ್ನು ಐನ್‌ಸ್ಟೈನ್ ಯಶಸ್ವಿಯಾಗಿ ವಿವರಿಸಿ ನೋಬೆಲ್ ಪಡೆದದ್ದು. ಒಟ್ಟಾರೆಯಾಗಿ ಬೆಳಕಿನ ಈ ದ್ವಂದ್ವ ಸ್ವಭಾವದಿಂದ ಅದರ ನಡತೆಯನ್ನು ನಾವು ಕೆಲವೊಮ್ಮೆ ಸಂಧರ್ಭಕ್ಕನುಗುಣವಾಗಿ ಮ್ಯಾಕ್ಸ್‌ವೆಲ್ಲನ ವಿದ್ಯುದ್ಕಾಂತೀಯ ಸಿದ್ಧಾಂತದಿಂದಲೂ, ಇನ್ನೂ ಕೆಲವೊಮ್ಮೆ ಪ್ಲಾಂಕನ ಕ್ವಾಂಟಮ್ ಸಿದ್ಧಾಂತದಿಂದಲೂ ಅರ್ಥಮಾಡಿ ಕೊಳ್ಳಬೇಕಾಗುತ್ತದೆ.

ವಿಜ್ಞಾನ ಪಾಠಗಳ ಮೂಲಕ ಮೌಲ್ಯ ಶಿಕ್ಷಣ

ವಿಜ್ಞಾನ ಪಾಠಗಳ ಮೂಲಕ ಮೌಲ್ಯ ಶಿಕ್ಷಣ 


ಲೇಖನ: ಡಾ.ಟಿ.ಎ.ಬಾಲಕೃಷ್ಣ ಅಡಿಗ
       ನಿವೃತ್ತ ಪ್ರಾಂಶುಪಾಲರು ಮತ್ತು ಜೀವಶಾಸ್ತ್ರ ಉಪನ್ಯಾಸಕರು


ವಿದ್ಯಾರ್ಥಿಗಳು ದೇಶದ ಅತ್ಯಮೂಲ್ಯ ಆಸ್ತಿ. ಪ್ರತಿಯೊಬ್ಬ ವಿದ್ಯಾಥಿಯನ್ನು ಈ ದೇಶದ ಪ್ರಜ್ಞಾವಂತ ನಾಗರೀಕನನ್ನಾಗಿ ರೂಪಿಸುವಲ್ಲಿ ಪೋಷಕರ ಮತ್ತು ಶಿಕ್ಷಕರ ಪಾತ್ರ ಮಹತ್ತರವಾದುದು. ಅದರಲ್ಲಿಯೂ ಈ ನಿಟ್ಟಿನಲ್ಲಿ ಶಿಕ್ಷಕರ ಜವಾಬ್ದಾರಿ ಎಲ್ಲ ಹಂತಗಳಲ್ಲಿ ಅತ್ಯಂತ ಪ್ರಮುಖವಾದುದು. ಸರ್ವಜ್ಞ ತನ್ನ ತ್ರಿಪದಿಯೊಂದರಲ್ಲಿ ಹೇಳಿರುವಂತೆ

ತಂದೆಗೂ ಗುರುವಿಗೂ ಒಂದು ಅಂತರವುಂಟು.

ತಂದೆ ತೋರುವನು ಸದ್ಗುರುವ | ಗುರುರಾಯ

ಬಂಧನವ ಕಳೆವ ಸರ್ವಜ್ಞ. “

ವಿಶ್ವ ಜಲ ದಿನ ಮತ್ತು ನಮ್ಮ ಸಂಕಲ್ಪ

ವಿಶ್ವ ಜಲ ದಿನ ಮತ್ತು ನಮ್ಮ ಸಂಕಲ್ಪ


ಲೇಖಕರು: ಗುರುದತ್ತ.A

ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ 

ದೊಡ್ಡಕಲ್ಲಸಂದ್ರ

ಬೆಂಗಳೂರು ದಕ್ಷಿಣ ವಲಯ-1


ನೀರಿನ ಅಗತ್ಯತೆ ಮತ್ತು ಅದರ ಸಂರಕ್ಷಣೆ ಕುರಿತು ಜನತೆಯಲ್ಲಿ ಜಾಗೃತಿ ಮತ್ತು ಅರಿವು ಮೂಡಿಸಲು ಮಾರ್ಚ್ 22 ರಂದು ಪ್ರತಿವರ್ಷ ವಿಶ್ವ ಜಲ ದಿನವನ್ನು ಆಚರಿಸಲಾಗುತ್ತಿದೆ.

 ದಿನಾಚರಣೆಯ ಈ ವರ್ಷದ ಘೋಷವಾಕ್ಯ: Valuing Water-21 ನೇ ಶತಮಾನದಲ್ಲಿ ನಾವು ಎದುರಿಸುವ ನೀರಿನ ಸವಾಲುಗಳಿಗೆ ಪ್ರಕೃತಿ ಆಧಾರಿತ ಪರಿಹಾರಗಳ ಅನ್ವೇಷಣೆ ಮತ್ತು ಮೌಲ್ಯೀಕರಣ ಎಂಬುದಾಗಿದೆ.

Current Trends in Teaching Science

Current Trends in Teaching Science


Author: 

B.N. Roopa

Assistant Mistress

GUEHS, Goripalya, Bangalore South - 2.




Nature is the master.  It is the hidden treasure of many teaching or learning strategies. If you nurture your curiosity you will find ample examples for this.  Modern man, well equipped with various tools of science and technology, has been evolving many innovative strategies to nurture young minds. In the current scenario, I am trying to throw some light on the current trends in teaching science.

ಚಿನ್ನದ ನಾಡಿನ ಜ್ಞಾನದ ಗಣಿ

ಚಿನ್ನದ ನಾಡಿನ ಜ್ಞಾನದ ಗಣಿ

ಲೇಖನ: ಎ. ಶ್ರೀನಿವಾಸ್ ಸರ್ಕಾರಿ ಪ್ರೌಢಶಾಲೆ, ಮುತ್ತೂರು, ಶಿಡ್ಲಘಟ್ಟ (ತಾ),ಚಿಕ್ಕಬಳ್ಳಾಪುರ (ಜಿ).

            & ರಾಮಚಂದ್ರ ಭಟ್‌ ಬಿ.ಜಿ. 


ಯಾರು ಸರ್ ಶಾಸ್ತ್ರಿಗಳಾ?”

ಹೌದು. ಕೋಲಾರದ ವಿ.ಎಸ್. ಎಸ್,ಶಾಸ್ತ್ರಿಗಳು !!!”

ಓಹೋ ಅವರಾ? ಅವರಿಗೆ ಗೊತ್ತಿಲ್ಲದ ವಿಷಯವೇ ಇಲ್ಲ ಬಿಡಿ.”

ಓಹ್ ಹೌದಾ ?”

ಹೌದು ಅವರ ಕೈಗೊಂದು ಬಿಸಾಕಿರುವ ಕಾಗದ, ಕತ್ತರಿ ಕೊಟ್ಟು ನೋಡಿ. ಕಣ್ಣೆವೆಯಿಕ್ಕುವಷ್ಟರಲ್ಲೇ ಅವರ ಹಸ್ತದಿಂದ ಕಾಗದದ ಚೂರು ಚಕಚಕನೆ ಕತ್ತರಿಸಲ್ಪಟ್ಟು  ಇರುವೆ, ಜೇಡ, ಮೊದಲಾದ ಆಕೃತಿಗಳು ಕಸವೇ  ರಸವಾದಂತೆ ಮೇಲೆದ್ದು ಜೀವತಳೆಯುತ್ತವೆ. ಮಕ್ಕಳಂತೂ ಬೆರಗುಗಣ್ಣಿಂದ ಅವರ ಮೈದಾಸ್ ಟಚ್ ನೋಡಲು ಬೆಲ್ಲವನ್ನು ಮುತ್ತುವ ಇರುವೆಗಳಂತೆ ಮುತ್ತುತ್ತವೆ. ಮಕ್ಕಳ ಪಾಲಿಗೆ ಕಿಂದರಿಜೋಗಿಯೇ ಈ ಶಾಸ್ತ್ರಿ ತಾತ !!!  ಇನ್ನು ನಿಮ್ಮ ಪಾಲಿಗೆ ?????