ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Friday, June 4, 2021

ಪರಿವರ್ತನೆಯ ಹರಿಕಾರ ಪರಮೇಶ್ವರಯ್ಯ

ಪರಿವರ್ತನೆಯ ಹರಿಕಾರ ಪರಮೇಶ್ವರಯ್ಯ

ಲೇಖಕರು: ಗುರುದತ್ತ ಎ


ರಾಜ್ಯದ ರಾಜಧಾನಿ ಬೆಂಗಳೂರಿನ ಪ್ರತಿಷ್ಠಿತ ಶಾಲೆಗಳ ನಡುವೆ ಸರ್ಕಾರಿ ಶಾಲೆಗಳು ಅಳಿವಿನಂಚಿಗೆ ಸೇರುವ ಅಪಾಯದಲ್ಲಿವೆ. ಶಿಕ್ಷಕರು ಶಿಕ್ಷಣ ಇಲಾಖೆಯೊಂದಿಗೆ ಕೈ ಜೋಡಿಸಿದರೆ ಅಸಾಧ್ಯವಾದುದೇನು? ಸಾಧಿಸಿದರೆ ಸಬಳವನ್ನೂ ನುಂಗಬಹುದು ಎನ್ನುವುದು ಸುಳ್ಳೇ? ತಮ್ಮ ಸಾಧನೆಯಿಂದ ಪ್ರಪಂಚದ ಶಿಕ್ಷಣತಜ್ಞರನ್ನೇ ತಮ್ಮತ್ತ ಸೆಳೆಯಬಲ್ಲರು. ಇತರ ಶಿಕ್ಷಕರಿಗೆ ಮಾದರಿಯಾಗಿ ಸ್ಫೂರ್ತಿ ತುಂಬಬಲ್ಲರು. ಶಿಕ್ಷಣ ಕ್ಷೇತ್ರದಲ್ಲಿ ಸಂಚಲನವನ್ನು ಹುಟ್ಟುಹಾಕಿ ಹೊಸ ಮನ್ವಂತರಕ್ಕೆ ಮಹಾಭಾಷ್ಯ ಬರೆಯಬಲ್ಲರು.

ಆತ್ಮೀಯರೇ, ಈ ಬಾರಿ ಇಂತಹ ಒಬ್ಬ ಸಾಧಕ ಶಿಕ್ಷಕರನ್ನು ನಿಮಗೆ ಪರಿಚಯಿಸಲು ಹೆಮ್ಮೆ ಎನಿಸುತ್ತದೆ. ದೂರದಿಂದಲೇ ಈ ಕಟ್ಟಡ ನಮ್ಮನ್ನು ಕೈ ಬೀಸಿ ಕರೆಯುತ್ತದೆ. ಶಾಲೆಯೊಳಗೆ ಕಾಲಿಟ್ಟಿರೋ ಇದೇನು ಖಾಸಗಿ ಶಾಲೆಯೋ? ಸರ್ಕಾರಿ ಶಾಲೆಯೋ? ಎಂಬ ಅನುಮಾನ ನಿಮ್ಮನ್ನು ಕಾಡದಿರದು. ಆದರೆ ನಾಮಫಲಕ ಸರ್ಕಾರಿ ಶಾಲೆ ಎನ್ನುವುದನ್ನು ಖಾತ್ರಿಪಡಿಸುತ್ತದೆ.

ನಾವು ಪರಿಚಯಿಸಲಿರುವ ಶ್ರೀಯುತ ಹೆಚ್.ಎಸ್.ಪರಮೇಶಯ್ಯರವರು ಇದೇ ಶಾಲೆಯ ಶಿಕ್ಷಕರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಂಜಾರಪಾಳ್ಯ, ಬೆಂಗಳೂರು ದಕ್ಷಿಣ ವಲಯ 01, ಬೆಂಗಳೂರು 560082.  ಇಲ್ಲಿ ಮುಖ್ಯಶಿಕ್ಷಕರಾಗಿ  ಕರ್ತವ್ಯ ನಿರ್ವಹಿತ್ತಿರುವ ಹೆಚ್.ಎಸ್.ಪರಮೇಶಯ್ಯರವರು ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ಹೊನ್ನೇನಹಳ್ಳಿ ಗ್ರಾಮದವರು. ದಿವಂಗತ ಶಿವರುದ್ರಯ್ಯ ಮತ್ತು ಹೊನ್ನಗಂಗಮ್ಮನವರ ಹಿರಿಯ ಮಗನಾದ ಇವರ ಕರ್ಮಭೂಮಿಯೇ ಈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಂಜಾರಪಾಳ್ಯ. ಕಳೆದ 30 ವರ್ಷಗಳಿಂದಲೂ ಇದೇ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಪ್ರಸ್ತುತ  ಈ ಶಾಲೆಯಲ್ಲಿ 125 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಶಾಲೆಗೆ ನಿವೇಶನವನ್ನು ದಾನಿಗಳ ನೆರವಿನಿಂದ ಕೊಂಡು ಶಾಲೆಯನ್ನು ಅಭಿವೃದ್ಧಿಪಡಿಸಲಾಗಿದೆ. ಈ ಶಾಲೆಯು 1990ರಲ್ಲಿ ಕಿರಿಯ ಪ್ರಾಥಮಿಕ ಶಾಲೆಯಾಗಿ ಪ್ರಾರಂಭವಾಯಿತು. 1997ರಲ್ಲಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಪರಿವರ್ತನೆಯಾಗಿದೆ. ಶಾಲೆಯು ವಿಶಿಷ್ಟ ವಿನ್ಯಾಸದ ಶಾಲಾ ಕಟ್ಟಡವನ್ನು ಹೊಂದಿದೆ.

ಈ ಶಾಲೆಯ ಕಟ್ಟಡವು ವಿಶಿಷ್ಠವಾಗಿದೆ. ಶಾಲೆಯಲ್ಲಿ ಸುರುಳಿಯಾಕಾರದ ಕಂಬಗಳು. ಶಾಲೆಯಲ್ಲಿರುವ ಕಪ್ಪು ಹಲಗೆಗಳು ಆಯಾಕಾರವಾಗಿರದೆ ಡೈನೊಸರ್, ಆನೆ, ಬಾತುಕೋಳಿ, ಎಲೆ, ಮಾವಿನ ಹಣ್ಣು, ಹಲಸಿನ ಹಣ್ಣು ಮತ್ತು ಗೋಳಾಕಾರವಾಗಿವೆ. ಇದು ಶಾಲಾ ಮಕ್ಕಳನ್ನು ಆಕರ್ಷಿಸುತ್ತದೆ.

ಶಾಲೆಯು ಕಟ್ಟಡವು ಕಮಾನಿನಾಕಾರದ ವಿನ್ಯಾಸವನ್ನು ಹೊಂದಿದೆ. ಶಾಲೆಯ ಮಕ್ಕಳಿಗೆ ಜಾರುವ ಬಂಡೆ ವ್ಯವಸ್ಥೆ, ರಂಗ ಮಂದಿರ ವ್ಯವಸ್ಥೆಯಿದೆ.

2004ರಲ್ಲಿ ಈ ಶಾಲೆಯು ಜಿಲ್ಲೆಯ ಅತ್ಯುತ್ತಮ ಶಾಲೆ ಪ್ರಶಸ್ತಿಯನ್ನು ಪಡೆದಿದೆ. 2004ರಲ್ಲಿ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಕರ್ನಾಟಕ ಸರ್ಕಾರ ಹಾಗೂ 2009ರಲ್ಲಿ ರಾಷ್ಟ್ರದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಭಾರತ ಸರ್ಕಾರ ನೀಡಿ ಗೌರವಿಸಿವೆ.

 


ಇದಲ್ಲದೆ 2002 ಕರ್ನಾಟಕ ಸರ್ಕಾರದ ಅತ್ಯುತ್ತಮ ಪಾಠೋಪಕರಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. 2007ರಲ್ಲಿ ಸಿದ್ಧಗಂಗಾ ಮಠಾದ್ಯಕ್ಷರಾದ ಶ್ರೀ ಶಿವಕುಮಾರ ಸ್ವಾಮಿಗಳು ‘ಶಿಕ್ಷಕ ರತ್ನ’ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಇದಲ್ಲದೆ ಹಲವಾರು ಸಂಘ ಸಂಸ್ಥೆಗಳು ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಶಿಕ್ಷಕರಾದ ಹೆಚ್.ಎಸ್.ಪರಮೇಶ್ ರವರು ಡಿ.ಎಸ್.ಇ.ಆರ್.ಟಿಯಿಂದ ಕೈಗೊಳ್ಳುವ ಸಂಪನ್ಮೂಲ ಸಾಹಿತ್ಯ ರಚನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇವರು ಶಿಕ್ಷಕರ ತರಬೇತಿಯಲ್ಲಿ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದು ಈ ಶಾಲೆಯು ಶೈಕ್ಷಣಿಕವಾಗಿ ಮುಂದುವರೆಯಲು ಸಹಕಾರಿಯಾಗಿದೆ. ಕೋವಿಡ್ 19ರ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ಮತ್ತು ಡಿ.ಎಸ್..ಆರ್.ಟಿ ಸಿದ್ಧಪಡಿಸಿ ಚಂದನವಾಹಿನಿಯಲ್ಲಿ ಪ್ರಸಾರವಾದ 1 ರಿಂದ 7 ತರಗತಿಯ ಸಂವೇದ ಕಾರ್ಯಕ್ರಮದ ವಿಡಿಯೋ ಪಾಠಗಳ ಗಣಿತ ವಿಷಯದ ಸಂಪನ್ಮೂಲ ವ್ಯಕ್ತಿಯಾಗಿ ಕರ್ತವ್ಯ ನಿರ್ವಹಿಸಿರುತ್ತಾರೆ.

ಹೆಚ್.ಎಸ್.ಪರಮೇಶ್ ರವರು ಖಾಲಿ ಬೆಂಕಿಪೊಟ್ಟಣ ಬಳಸಿ ವೆಚ್ಚರಹಿತವಾಗಿ ತಯಾರಿಸಿರುವ ಕಲಿಕೋಪಕರಣಗಳು ಮಕ್ಕಳ ಅದರಲ್ಲೂ ಗಣಿತ ಕಲಿಕೆಗೆ ತುಂಬಾ ಉಪಯುಕ್ತವಾಗಿವೆ. ಹೆಚ್.ಎಸ್.ಪರಮೇಶ್ ರವರು ನಲಿಕಲಿ ಕಲಿಕೋಪಕರಣಗಳ ಕಿಟ್ ತಯಾರಿಕೆ ಹಾಗೂ ಚೈತನ್ಯ ತರಣಿಯ ತರಬೇತಿಯಲ್ಲಿ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. 


ಇವರು ತಯಾರಿಸಿರುವ ಗಣಿತದ ಜಿಯೋಬೋರ್ಡ್ ಕಲಿಕೋಪಕರಣ ಹಾಗೂ ಖಾಲಿ ಬೆಂಕಿಪೊಟ್ಟಣ ಬಳಸಿ ವೆಚ್ಚರಹಿತವಾಗಿ ತಯಾರಿಸಿರುವ ಕಲಿಕೋಪಕರಣಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದು, ಈ ಶಾಲೆಗೆ ಇಂಗ್ಲೆಂಡ್, ಅಮೆರಿಕ, ಜಪಾನ್, ಚೀನಾ, ಇಟಲಿ, ಜರ್ಮನಿ, ಆಸ್ಟ್ರಿಯ, ಹಾಲೆಂಡ್ ಮುಂತಾದ ದೇಶಗಳ ಶಿಕ್ಷಣ ತಜ್ಞರು ಶಾಲೆಗೆ ಅಧ್ಯಯನಕ್ಕಾಗಿ ಭೇಟಿ ನೀಡುವಂತೆ ಮಾಡಿದೆ. 


ದಿವಂಗತ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಯು. ಆರ್. ಅನಂತಮೂರ್ತಿಯವರು, 2005ರಲ್ಲಿ ಕೇರಳದ ಶಿಕ್ಷಣ ಸಚಿವರಾದ ರಾಜನ್ ಜೊತೆ ಶಾಲೆಗೆ ಭೇಟಿ ನೀಡಿ ಶಾಲೆಯ ಸರ್ವತೋಮುಖ ಅಬಿವೃದ್ಧಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶಿಕ್ಷಣ ಇಲಾಖೆಯಲ್ಲಿ ಆಯುಕ್ತರಾಗಿದ್ದ ವಿ.ಪಿ.ಬಳಿಗಾರ್ ರವರು ಅನಿರೀಕ್ಷಿತ ಬೇಟಿಯನ್ನು ಶಾಲೆಗೆ ನೀಡಿ 2005 ಜನವರಿಯ ಶಿಕ್ಷಣ ವಾರ್ತೆಯಲ್ಲಿ ಶಾಲೆಯ ಬಗ್ಗೆ ಅತೀವ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

2019-20ರಲ್ಲಿ ರಾಜ್ಯಸಭಾ ಸದಸ್ಯರಾದ ಶ್ರೀಯುತ ಪ್ರಭಾಕರ ಕೋರೆಯವರ 15 ಲಕ್ಷ ರೂ.ಅನುದಾನ ಜಿಲ್ಲಾ ಪಂಚಾಯಿತಿಯ 5 ಲಕ್ಷ ರೂ.ಅನುದಾನ ಹಾಗೂ ದಾನಿಗಳು, ಎಸ್.ಡಿ.ಎಂ.ಸಿ ಸದಸ್ಯರು, ಚುನಾಯಿತ ಪ್ರತಿನಿಧಿಗಳ ನೆರವಿನಿಂದ 30 ಲಕ್ಷ ರೂ ವೆಚ್ಚದಲ್ಲಿ ಗಣಿತ ಲ್ಯಾಬ್, ಮುಖ್ಯ ಶಿಕ್ಷಕರ ಕೊಠಡಿ ಮತ್ತು ರಂಗಮಂದಿರವನ್ನು ನಿರ್ಮಾಣ ಮಾಡಲಾಗಿದೆ.

ಮೊದಲು ನನ್ನನ್ನು ಗುರುತಿಸಿ ಪ್ರೋತ್ಸಾಹ ನೀಡಿದವರು ಬಿ.ಇ.ಓ. ಆದ ಗಂಗಾಧರೇಗೌಡರು. ನಾನು ಬಾಲ್ಯದಲ್ಲಿ ಗಣಿತದ ಪರಿಕಲ್ಪನೆಗಳನ್ನು ಅರ್ಥ ಮಾಡಿಕೊಳ್ಳಲು ಕಷ್ಟಪಡುತ್ತಿದ್ದೆ. ನಾನು ಆರ್ಟ್ಸ್ ಹಿನ್ನಲೆಯಿಂದ ಬಂದವನು. ಮಕ್ಕಳು ಗಣಿತ ಕಲಿಯಲು ಕಷ್ಟಪಡುತ್ತಿದ್ದುದನ್ನು ಗುರುತಿಸಿದೆ. ಹೀಗಾಗಿ ನಾನು ಇದನ್ನೇ ಸವಾಲಾಗಿಸಿಕೊಂಡೆ. ಹೀಗೆ ಅನುಭವದೊಂದಿಗೆ ಹೊಸ ಬಗೆಯ ಕಲಿಕಾ ಸಲಕರಣೆಗಳನ್ನು ಮಾಡುತ್ತಾ ಹೋದೆ. ಬಿ.ಇ.ಓ. ಗಂಗಾಧರೇಗೌಡರು ನನ್ನನ್ನು ಪ್ರೋತ್ಸಾಹಿಸಿ ನೀನು ಹೀಗೆ ಕೆಲಸ ಮಾಡು ಎಂದು ಬೆನ್ನು ತಟ್ಟಿದರು. ಆಕಸ್ಮಿಕವಾಗಿ ಶಾಲೆಗೆ ಭೇಟಿ ನೀಡಿದ ಆಯುಕ್ತ ವಿ.ಪಿ.ಬಳಿಗಾರ್ ರವರು ನನ್ನ ಕೆಲಸವನ್ನು ಮೆಚ್ಚಿಕೊಂಡು ಶಿಕ್ಷಣವಾರ್ತೆಯಲ್ಲಿ ನನ್ನ ಕುರಿತು ಬರೆದರು. ಜೊತೆಗೆ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳ ಮಾರ್ಗದರ್ಶನ, ಗುರುಕಾರುಣ್ಯ ನನಗೆ ಪ್ರೇರಣೆ ನೀಡಿತು. ಹೀಗೆ ಇಲಾಖೆಯ  ಪ್ರೋತ್ಸಾಹ ನನ್ನನ್ನು ಪಠ್ಯಪುಸ್ತಕ ರಚನೆ, ಶಿಕ್ಷಕ ತರಬೇತಿಗಳು ಹೀಗೆ ಹಲವಾರು ಇಲಾಖಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿತು”. ಹೀಗೆ ತಾವು ನಡೆದು ಬಂದ ದಾರಿಯನ್ನು ಪರಿವರ್ತನೆಯ ಹರಿಕಾರರಾದ ಪರಮೇಶ್ವರಯ್ಯನವರು ಸ್ಮರಿಸಿಕೊಳ್ಳುತ್ತಾರೆ.

ಪ್ರಾಜ್ಞರಾದ ಇಲಾಖೆಯ ಅಧಿಕಾರಿಗಳು ಶಿಕ್ಷಕರ ಸಾಮರ್ಥ್ಯವನ್ನು ಗುರುತಿಸಿ ಪ್ರೋತ್ಸಾಹಿಸಿದಲ್ಲಿ ಬಹುಶಃ ಇಂತಹ ಅನೇಕ ಪರಮೇಶ್ವರಯ್ಯನವರು ಹುಟ್ಟಿಕೊಳ್ಳಬಹುದು. ಹಾಗೆಯೇ ಇಂತಹ ತೆರೆಮರೆಯಲ್ಲಿರುವ ಶಿಕ್ಷಕರನ್ನು ಪರಿಚಯಿಸುವುದರ ಮೂಲಕವೂ ಎಲ್ಲಾ ಶಿಕ್ಷಕರಲ್ಲೂ ನಾನೂ ಇಂತಹ ಮಟ್ಟಕ್ಕೆ ಏರಬೇಕು ಎನ್ನುವ ಕನಸು ಚಿಗುರೊಡೆಯುವಂತೆ ಮಾಡುವುದು, ಜ್ಞಾನವಾಹಿನಿಯನ್ನು ವಿಸ್ತಾರವಾಗಿಸುವುದು, ಧನಾತ್ಮಕ ಪ್ರೇರಣೆ ನೀಡುವುದು ನಮ್ಮ ಉದ್ದೇಶ.

ಹೀಗೆ ಹತ್ತು ಹಲವು ಕಾರ್ಯಗಳ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಹೆಸರನ್ನು ಚಿರಸ್ಥಾಯಿಯಾಗಿಸಿದ ಶ್ರೀಯುತ ಹೆಚ್. ಎಸ್. ಪರಮೇಶ್ವರಯ್ಯರವರಿಗೆ ಸವಿಜ್ಞಾನ ತಂಡ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತದೆ. ಸ್ನೇಹಿತರೇ ಮಾದರಿ ಶಿಕ್ಷಕರಾದ ಇವರ ಶಾಲೆಗೆ ಭೇಟಿನೀಡಿ. ಶಿಕ್ಷಕರು ಮನಸ್ಸು ಮಾಡಿದರೆ ಸಮುದಾಯದ ಸಹಕಾರದಿಂದ ಏನೇನು ಮಾಡಬಹುದು ಎನ್ನುವುದನ್ನು ತಿಳಿಯಬಹುದು. ಹೊಸ ಚಿಂತನೆಗಳನ್ನು ಬೆಳೆಸಿಕೊಳ್ಳಬಹುದು. ಅನುಷ್ಠಾನಗೊಳಿಸಬಹುದು. ಇಂತಹ ಅನೇಕರು ನಮ್ಮ ಸುತ್ತಮುತ್ತಲಿರಬಹುದು. ಅವರನ್ನು ಗುರುತಿಸಿ ಬೆನ್ನುತಟ್ಟುವ ಸತ್ಕಾರ್ಯವಾಗಬೇಕು. ಇದರಿಂದ ಅವರಲ್ಲಿ ಇನ್ನಷ್ಟು ಸಾಮಾಜಿಕ ಜವಾಬ್ದಾರಿಯೊಡನೆ ಸಾಧನೆಯ ಹುಮ್ಮಸ್ಸು ಮೂಡುತ್ತದೆ. ಸ್ನೇಹಿತರೇ ನಿಮ್ಮ ಅನುಭವಗಳನ್ನೂ ನಮ್ಮೊಂದಿಗೆ ಹಂಚಿಕೊಳ್ಳಿ.


ಇದು ಗೋಡೆಯ ಮೇಲೆ ಪೈಂಟ್ ಮಾಡಿಸಿದ್ದು ಅಂದುಕೊಂಡ್ರಾ

ಇದು ಪುಟಾಣಿ ವಿದ್ಯಾರ್ಥಿಗಳು ಬರೆದದ್ದು ಎಂದರೆ ಅಚ್ಚರಿಯಾದೀತು!!!


ಈ ಲೇಖನದ ಪಿ.ಡಿ.ಎಫ಼್. ಫೈಲ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ: 

70 comments:

 1. Hatsoff to Inspirational people like you sir.

  ReplyDelete
 2. ಅತ್ಯುತ್ತಮವಾದ ಲೇಖನ

  ReplyDelete
 3. Very impressive n also motivational

  ReplyDelete
 4. ಅತ್ಯುತ್ತಮ ಸರ್

  ReplyDelete
  Replies
  1. ಅತ್ಯುತ್ತಮವಾದ ಲೇಖನ ಸರ್ ಅವರ ಬಗ್ಗೆ ನೀವು ಲೇಖನ ಬರೆದಿರುವುದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ.ಅರ್ಹ ವ್ಯಕ್ತಿಯ ಬಗ್ಗೆ ಉತ್ತಮ ವಿಚಾರಗಳನ್ನು ಬರೆದಿರುವುದು ಶ್ಲಾಘನೀಯ. ನಿಜವಾಗಿಯೂ ಪರಮೇಶ್ ಸರ್ ರವರು ಸರ್ಕಾರಿ ಶಾಲೆಯ ಅಭಿವೃದ್ದಿಯ ಹರಿಕಾರ

   Delete
  2. ವಂದನೆಗಳು....ತಮ್ಮೆಲ್ಲರ ಹಾರೈಕೆಯಿಂದ ಈ ಲೇಖನ ಸಾಧ್ಯವಾಗಿದೆ

   Delete
  3. ಮುಂದಿನ ಲೇಖನವನ್ನು ನಿನ್ನಿಂದ ಅಪೇಕ್ಷಿಸಲಾಗಿದೆ ಮೃತ್ಯುಂಜಯ ಸಾರ್

   Delete
 5. ಲೇಖನ ಅತ್ಯುತ್ತಮವಾಗಿದೆ,ನೈಜತೆಯಿಂದ ಕೂಡಿದೆ.
  ಇದು ಬೇರೆಯವರಿಗೆ ಸ್ಪೂರ್ತಿ ಹಾಗೂ ದಾರಿದೀಪವಾಗಲೆಂದು ಆಶಿಸುತ್ತೇನೆ.
  ಗಂಗಾಧರಯ್ಯ. ಪಿ.ಎಸ್
  ಕಾರ್ಯದರ್ಶಿ
  ಕ.ರಾ.ಪ್ರಾ.ಶಾ.ಶಿ.ಸಂಘ
  ಬೆಂ.ದ.ವಲಯ ೧

  ReplyDelete
 6. ಅಭಿನಂದನೆಗಳು ....ಉತ್ತಮ ಲೇಖನ ಗುರುದತ್ ಸರ್.

  ReplyDelete
 7. We are blessed to have teachers like u teachers like u are source of motivation to others

  ReplyDelete
 8. Super sir, you are a role model for all teachers. We are blessed to have a great teacher like you with us.

  ReplyDelete
 9. Role model for all teachers

  ReplyDelete
  Replies
  1. Nimmodane ondu varsha kelasa maadiddu nanna sowbhagyave sari, neeu needida margadarshana endigu nanage darideepavagide , danyavadagalu sir ,manaviya moulyavemba prithiya sagaravagiddiri

   Delete
 10. CONGRATS.. pleasure to read about the Scool and efforts of the Teacher.. fitting example of "where there is a will, there is a way! "... May kindly introduce FOLK-CAP way for Maths problem solving from early years of schooling. If interested my contact me drbssudhindra@gmail.com WhatsApp 9900171149 Best wishes

  ReplyDelete
 11. Very well written about an amazing person...

  ReplyDelete
 12. Am proud of my brother.god bless him in all the way.

  ReplyDelete
 13. ಎಲ್ಲ ಶಿಕ್ಷಕರಿಗೂ ತಾವು ಮಾದರಿಯಾಗಿರಿವಿರಿ ಸರ್

  ReplyDelete
 14. ಎಲ್ಲ ಶಿಕ್ಷಕರಿಗೂ ತಾವು ಮಾದರಿ ಸರ್.ಲೇಖನ ಉತ್ತಮವಾಗಿದೆ ಗುರುದತ್ ಸರ್

  ReplyDelete
 15. ಶ್ರೀಯುತ ಪರಮೇಶ್ ಸಾರ್ ಅವರು ಶಾಲೆಯ ಸರ್ವತೋಮುಖ ಪ್ರಗತಿ ಹೊಂದಲು ಪ್ರಮುಖ ಕಾರಣ ಅವರ ಬದ್ಧತೆ ಮತ್ತು ಕಾಳಜಿ ದೂರದ ಕುಗ್ರಾಮದಲ್ಲಿರುವ ಸರ್ಕಾರಿ ಶಾಲೆಯು ರಾಜ್ಯ ರಾಷ್ಟ್ರಮಟ್ಟದಲ್ಲಿ ಪ್ರಖ್ಯಾತಿ ಹೊಂದುವಂತೆ ಮಾಡಿದೆ ಅಲ್ಲದೆ ಶೈಕ್ಷಣಿಕ ಅಭಿವೃದ್ಧಿಗಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ವಿಧಾನ ಇತರ ಶಿಕ್ಷಕರಿಗೆ ಮಾರ್ಗದರ್ಶನ ಆಗಿದೆ ಇಂತಹ ಅತ್ಯುತ್ತಮ ಶಿಕ್ಷಕರೊಂದಿಗೆ ಇರುವುದು ನಮ್ಮ ಹೆಮ್ಮ

  ReplyDelete
  Replies
  1. ಸರ್ ಪರಮೇಶ್ವರ್ ಎಲ್ಲ ಶಿಕ್ಷಕರಿಗೂ ಸ್ಫೂರ್ತಿ... ಅವರು ನಮ್ಮ ಸಮೂಹದ ಹೆಮ್ಮೆ ಎಂದರೆ ಅತಿಶಯೋಕ್ತಿಯೇನಲ್ಲ

   Delete
 16. ನಿಮ್ಮ ಲೇಖನ ಉತ್ತಮವಾಗಿದೆ ಪರಮೇಶ್ ಸರ್ರವರ ಶಿಕ್ಷಣದ ಪ್ರಗತಿ ಅಭಿವೃದ್ಧಿ ಬಗ್ಗೆ ತುಂಬಾ ಚೆನ್ನಾಗಿ ನಿರೂಪಣೆ ಮಾಡಿದ್ದೀರ ಎಲ್ಲಾ ಶಿಕ್ಷಕರಿಗೂ ಇದು ಮಾದರಿಯಾಗಿದೆ ಗುರುದತ್ ಸರ್

  ReplyDelete
 17. ಕರ್ತವ್ಯವೇ ದೇವರೆಂದು ಭಾವಿಸುವ ನಮ್ಮ ಪರಮೇಶ್ ಸರ್ ರವರ ಪರಿಶ್ರಮ ಮತ್ತು ಉನ್ನತ ಉದ್ದೇಶ "ಶಾಲಾ ಕಟ್ಟಡದ ವಿನ್ಯಾಸದಲ್ಲಿ, ಅವರ ಸರಳ ಮತ್ತು ಶಾಶ್ವತ ಕಲಿಕೆಯನ್ನು ಉಂಟು ಮಾಡುವ ಕಲಿಕೋಪಕರಣಗಳಲ್ಲಿ,ಶಾಲೆಯ ಸರ್ವತೋಮುಖ ಅಭಿವೃದ್ಧಿ ಯಲ್ಲಿ ಎದ್ದು ಕಾಣುತ್ತದೆ".ಶಿಕ್ಷಕರ ಅವಿರತ ಪರಿಶ್ರಮ ಹಾಗೂ ಕಾರ್ಯತತ್ಪರತೆ ಒಂದು ಶಾಲೆಯು ಶಿಕ್ಷಣ ಇಲಾಖೆಯಲ್ಲಿ,ರಾಜ್ಯ, ರಾಷ್ಟ್ರ,ಹಾಗೂ ವಿದೇಶಗಳಲ್ಲೂ ಹೇಗೆ ತನ್ನದೇ ಆದ ಸ್ಥಾನವನ್ನು ಪಡೆಯುತ್ತದೆ ಎಂಬುದಕ್ಕೆ ನಮ್ಮ ಪರಮೇಶ್ ಸರ್ ಹಾಗೂ ಬಂಜಾರು ಪಾಳ್ಯದ ಶಾಲೆಯೇ ಅತುತ್ತಮ ನಿದರ್ಶನ.

  ಲೇಖನ ಅತ್ಯುತ್ತಮವಾಗಿ ಮೂಡಿ ಬಂದಿದೆ ಗುರುದತ್ ಸರ್ 🙂

  ReplyDelete
  Replies
  1. ವಂದನೆಗಳು ಸರ್ ತಮ್ಮ ಪ್ರಾಮಾಣಿಕ ಹಿಮ್ಮಾಹಿತಿಗರ

   Delete
 18. ಇಂತಹ ಶಾಲೆ ಮತ್ತು ಇಂತಹ ಶಿಕ್ಷಕರನ್ನು ಪರಿಚಯಿಸಿದ ಗುರುದತ್ತ ರವರಿಗೆ ವಂದನೆಗಳು

  ReplyDelete
 19. motivate all teacers very well written abouit stroy amezing

  ReplyDelete
 20. ಗುರುದತ್ ಸರ್ ಅವರಂತಹ ಉತ್ತಮ ಲೇಖಕರು ಪರಮೇಶ್ ಸರ್ ಅವರಂತಹ ಸಾಧಕರ ಬಗ್ಗೆ ಬರೆದಿರುವುದನ್ನು ಓದುವುದೇ ಒಂದು ಅಪೂರ್ವ ಅನುಭವ.ಈ ಇಬ್ಬರೂ ಅಪ್ರತಿಮ ವ್ಯಕ್ತಿಗಳು ನಮ್ಮ ಕ್ಲಸ್ಟರ್ ನ ಅನರ್ಘ್ಯ ರತ್ನಗಳು.

  ReplyDelete
 21. Very nice presentation. Inspirational to all of us.

  ReplyDelete
 22. Very nice presentation. Inspirational to all of us.

  ReplyDelete
 23. nice article sir ..keep Inspiring us with this type of articles

  ReplyDelete
 24. Paramesh is the legend...we feel happy to work with him...Role Model to many of us...Very nice Article Guru sir...keep inspiring us🙏👍💐💐💐

  ReplyDelete
 25. ಶೈಕ್ಷಣಿಕವಾಗಿ ಅತ್ಯುತ್ತಮ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸುತ್ತಿರುವ ಆತ್ಮೀಯರಾದ ಶ್ರೀ ಪರಮೇಶ್ ಸರ್ ಗೂ ಹಾಗೂ ಇಂತಹ ಉತ್ತಮ ಲೇಖನವನ್ನು ಪ್ರಸ್ತುತಪಡಿಸಿ ನಮ್ಮ ವಲಯ ಹಿರಿಮೆಯನ್ನು ಉನ್ನತ ಮಟ್ಟಕ್ಕೆ ಕೊಂಡುಯ್ಯುತ್ತಿರುವ ಆತ್ಮೀಯ ಗೆಳೆಯ ಗುರುದತ್ ಸರ್ ಗೂ ಸಮಸ್ತ ಶಿಕ್ಷಕರ ಪರವಾಗಿ ಅನಂತ ಧನ್ಯವಾದಗಳು
  By
  Kemparaj
  ��������������

  ReplyDelete
 26. ಶ್ರೀಯುತ ಪರಮೇಶ್ವರ್ ಸರ್ ರವರು ನಮ್ಮ ಶಿಕ್ಷಕರಿಗೆ ಮಾದರಿ ಅವರಿಗೆ ನನ್ನ ನಮಸ್ಕಾರಗಳು.ಈ ಲೇಖನ ಬರೆದಂತಹ ಗುರುದತ್ತ ಸರ್ ರವರಿಗೆ ಅಭಿನಂದನೆಗಳು

  ReplyDelete
 27. 30 ವರ್ಷಗಳಿಂದ ಒಂದೇ ಶಾಲೆಯಲ್ಲಿ ಸೇವೆ ಸಲ್ಲಿಸಿ ,ಕರ್ಮ ಭೂಮಿಯೇ ಸರ್ಕಾರಿ ಶಾಲೆ ಎಂದು ಕರ್ತವ್ಯ ನಿರ್ವಹಿಸಿದ ಅತ್ಯುತ್ತಮ ಶಿಕ್ಷಕ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಪಡೆದ ಶ್ರೀಯುತ ಪರಮೇಶ ಗುರುಗಳಿಗೆ ಮತ್ತು ಅವರ ಬಗ್ಗೆ ಉತ್ತಮವಾದ ಮಾಹಿತಿಗಳನ್ನು, ಬೇರೆಯವರಿಗೆ ಮಾದರಿ ಅಥವಾ ದಾರಿದೀಪವಾಗುವಂತೆ ಬರೆದ,(ನಿಮ್ಮ ಬರವಣಿಗೆಯು ಅತ್ಯುತ್ತಮವಾಗಿದೆ) ಗುರುದತ್ತ. ಎ.ಗುರುಗಳಿಗೂ ನನ್ನ ನಮಸ್ಕಾರಗಳು .(ಪರಿವರ್ತನೆ ಹರಿಕಾರ ಮತ್ತು ಉತ್ತಮ ಲೇಖಕರು.)

  ReplyDelete
  Replies
  1. ತಾವೆಲ್ಲರೂ ಬ್ಲಾಗ್ ನಲ್ಲಿರುವ ಎಲ್ಲ ಲೇಖನಗಳನ್ನು ಓದಿ ಆನಂದಿಸಬೇಕೆಂದು ...ಮತ್ತೊಮ್ಮೆ ಕೋರುತ್ತೇನೆ

   Delete
 28. Super Gurudatt sir the article written by you about paramesh sir. What you have written is 100 percent correct.

  ReplyDelete
 29. Very nice article gurudatt sir...Really
  Paramesh sir is a legend...we are very happy that we are working in the same cluster...we are very please to work under the guidence of the sir....and also we are blessed to have a great sir like you....

  ReplyDelete
 30. ಪೂಜ್ಯ ಗುರುಗಳಾದ ಶ್ರೀ ಪರಮೇಶ್ ಸಾರ್ ರವರ ಕಾರ್ಯ ವೈಖರಿ ಹಾಗೂ ಶಾಲೆ ಯ ಬಗ್ಗೆ ಮಕ್ಕಳ ಬಗ್ಗೆ ಮಕ್ಕಳ ಶೈಕ್ಷಣಿಕ ಪ್ರಗತಿ... ಇದಕ್ಕೆ ಪೂರಕವಾಗಿ ನಮ್ಮ ಇಲಾಖೆ ಹಾಗೂ ಸಮಾಜದ ಮುಖಂಡರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿರುವ.. ಹಾಗೂ ನಮ್ಮ ಶಿಕ್ಷಕರಿಗೆ ಹಲವಾರು ತರಬೇತಿ ಶಿಬಿರ ಗಳಲ್ಲಿ ಉತ್ತಮ ಸಂಪನ್ಮೂಲ ವ್ಯಕ್ತಿಯಾಗಿ ಶಿಕ್ಷಕ ರಿಗೂ ಉತ್ತಮ ಮಾರ್ಗ ದರ್ಶನ ಮಾಡುತ್ತಾ ... ರಾಷ್ಟ್ರ ಪ್ರಶಸ್ತಿ ಪುರಸ್ಕೃತ ರು ಆದ ಪರಮೇಶ್ ಸಾರ್ .. ನಮ್ಮ ವಲಯದ ಹೆಮ್ಮೆಯ ಶಿಕ್ಷಕ ಎಂದು ಹೇಳಿ ಕೊಳ್ಳಲು ನಮಗೆ ಸಂತೋಷ ವಾಗುತ್ತದೆ... ಹಾಗೆಯೇ ಈ ಎಲ್ಲಾ ವಿಚಾರಗಳನ್ನು ಅದ್ಬುತ ವಾಗಿ...ನಮ್ಮ ಹೆಮ್ಮೆಯ ಮತ್ತೊಬ್ಬ ಶಿಕ್ಷಕ .. ಗುರುದತ್ ರವರು ತಮ್ಮ ಲೇಖನದ ಮೂಲಕ ನಮಗೆಲ್ಲಾ ತಿಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ... ಶ್ರೀ ಯುತ ಪರಮೇಶ್ .. ಹಾಗೂ ಗುರುದತ್ ರವರಿಗೆ..ನನ್ನ ಪ್ರಣಾಮಗಳು...🙏🏻🌷🙏🏻ರಾಮಚಂದ್ರ
  KPSTA SOUTH-1

  ReplyDelete
 31. ನಾವುಗಳು ಪರಮೇಶ್ವರ್ ಸರ್ ಇವರ ಒಡನಾಟದಲ್ಲಿದ್ದರೂ ಅವರ ಬಗ್ಗೆ ಕೆಲವೊಂದು ವಿಚಾರಗಳು ನಮಗೆ ತಿಳಿದಿಲ್ಲವೆಂದು ಅನಿಸುತ್ತಿದೆ, ನಿಮ್ಮ ಲೇಖನವನ್ನು ಓದಿದಾಗ. ಸರ್ ಗೆ ಈ ಶಾಲೆ ಒಂದು ಕುಟುಂಬ ಇದ್ದಂತೆ ಈ ಕುಟುಂಬದ ಸರ್ವತೋಮುಖ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುವುದನ್ನು ನಾವು ನೋಡುತ್ತಿದ್ದೇವೆ. ಈ ಶಾಲೆಗೆ ಭೇಟಿ ನೀಡಿದ ಯಾರಿಗಾದರೂ ಬೇಗ ಬರಲು ಮನಸ್ಸಾಗುವುದಿಲ್ಲ ಏಕೆಂದರೆ, ಅಲ್ಲಿನ ಪರಿಸರ , ಶಾಲಾ ಸ್ವಚ್ಛತೆ, ಮಕ್ಕಳ ಶಿಸ್ತು,ಗೋಡೆ ಮೇಲಿನ ದುಂಡಾದ ಬರಹ, ಕಟ್ಟಡದ ರಚನೆ, ವಿಶೇಷವಾಗಿ ಅವರೇ ತಯಾರಿಸಿದ (low cost no cost) ಕಲಿಕೋಪಕರಣಗಳು ಯಾರನ್ನು ಸೆಳೆಯದೆ ಬಿಡುವುದಿಲ್ಲ. ಪ್ರಸ್ತುತ ದಿನಗಳಲ್ಲೂ ಕೂಡ ಪ್ರತಿದಿನ ಶಾಲೆಗೆ ಭೇಟಿ ನೀಡುವುದು ಅವರ ದಿನಚರಿಯಾಗಿದೆ. ನಿನ್ನೆ ಅವರನ್ನು ಭೇಟಿ ಮಾಡಿದಾಗ ಅವರು ಕಲಿಕೋಪಕರಣ ಮಾಡುವುದರಲ್ಲಿ ನಿರತರಾ ಗಿದ್ದರು. ಇದು ಅವರ ನಿರಂತರ ಚಟುವಟಿಕೆ &ಕ್ರಿಯಾಶೀಲತೆಗೆ ಕೈಗನ್ನಡಿಯಂತಿತ್ತು.ಇವರು ಶಿಕ್ಷಣ ಕ್ಷೇತ್ರದಲ್ಲಿ ಉತ್ತುಂಗದ ಶಿಖರ ವನ್ನೇರಿದರೂ ಲವ ಲೇಷವೂ ಹಮ್ಮು ಬಿಮ್ಮಿಲ್ಲದ ವ್ಯಕ್ತಿತ್ವ ಶ್ರೀಯುತ ಪರಮೇಶ್ವರ್ ಸರ್ ಅವರದು. ನಾವು ಇಂತಹವರ ಸಹವಾಸದಲ್ಲಿರುವುದು ತುಂಬಾ ಹೆಮ್ಮೆಯ ವಿಚಾರವಾಗಿದೆ. ಇಂತಹ ವ್ಯಕ್ತಿತ್ವ ವನ್ನು ಪರಿಚಯಿಸಿದ ಗುರುದತ್ ಸರ್ ಅವರ ಲೇಖನ ಅರ್ಥ ಪೂರ್ಣವಾಗೆದೆ ಎಂದು ಭಾವಿಸುತ್ತೇನೆ. ನಿಮಗೆ ಅನಂತ ಅನಂತ ಧನ್ಯವಾದಗಳು 🙏🙏🙏💐💐
  ಸುರೇಶಾಚಾರ್
  ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ
  ಲಕ್ಷ್ಮೀಪುರ
  ಬೆಂಗಳೂರು ದಕ್ಷಿಣ ವಲಯ 1

  ReplyDelete
  Replies
  1. ತಮ್ಮಂತಹ ಜ್ಞಾನಿಗಳು ಹಾಗೂ ಸ್ನೇಹಿತರು ಈ ಲೇಖನವನ್ನು ಓದಿ ಮೆಚ್ಚಿಕೊಂಡಿದ್ದು
   ...ನಮ್ಮೆಲ್ಲರಿಗೂ ಹೊಸ ಚೈತನ್ಯ ಮತ್ತು ಸ್ಫೂರ್ತಿ ತಂದಿದೆ ಸುರೇಶ್ ಸರ್

   Delete
 32. ಆತ್ಮೀಯರು ಹಾಗೂ ಕ್ರಿಯಾಶೀಲ ಮುಖ್ಯ ಶಿಕ್ಷಕರಾದ ಶ್ರೀಯುತ ಪರಮೇಶ್ವರ್ ಸರ್ ಹಾಗೂ ಅವರ ವ್ಯಕ್ತಿತ್ವವನ್ನು ಉತ್ತಮ ರೀತಿಯಲ್ಲಿ ಲೇಖನವನ್ನು ಪ್ರಸ್ತುತಪಡಿಸಿರುವ ಗುರುದತ್ತ ಸರ್ ನೀವಿಬ್ಬರೂ ನಮ್ಮ ವಲಯದ ಮುಕುಟಮಣಿಗಳು.ನಿಮ್ಮಿಬ್ಬರಿಗೂ ಸಮಸ್ತ ಶಿಕ್ಷಕರ ಪರವಾಗಿ ಹಾಗೂ ಶಿಕ್ಷಕರ ಸಂಘದ ಪರವಾಗಿಅನಂತಾನಂತ ಧನ್ಯವಾದಗಳು.
  ಶಿವರಾಜ್
  ಅಧ್ಯಕ್ಷರು
  ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ
  ಬೆಂಗಳೂರು ದಕ್ಷಿಣ ವಲಯ 1
  💐💐💐💐💐

  ReplyDelete
 33. ಶ್ರೀಯುತ ಪರಮೇಶ್ವರ್ ರವರು ಮುಖ್ಯ ಶಿಕ್ಷಕರಾಗಿ ಹೊಸ ಹೊಸ ಆವಿಷ್ಕಾರಗಳೊಂದಿಗೆ ಮಕ್ಕಳಿಗೆ ಪರಿಣಾಮ ಕಾರಿಯಾದ ಬೋಧನಾ ವಿಧಾನಗಳನ್ನು ಅಳವಡಿಸಿಕೊಂಡು ಮಕ್ಕಳಲ್ಲಿ ನಿರೀಕ್ಷಿತಾ ಕಲಿಕೆಯನ್ನು ಉಂಟು ಮಾಡುವಲ್ಲಿ ಯಶಸ್ವಿಯಾಗಿ ದ್ದಾರೆ. ಇದು ಇಡೀ ರಾಜ್ಯಕ್ಕೆ ಅನುಕರಣೀಯ. ಹಾಗೂ ಸಮುದಾಯದ ಸಹಾಭಾಗೀತ್ವದಲ್ಲಿ ಸರ್ಕಾರಿ ಶಾಲೆಯನ್ನು ಯಾವ ಖಾಸಗಿ ಶಾಲೆಗೂ ಕಮ್ಮಿ ಇಲ್ಲದಂತೆ ಅಭಿವೃದ್ಧಿ ಪಡಿಸಿದ್ದಾರೆ. ಇವರಿಗೆ ಅನಂತ ಅನಂತ ಧನ್ಯವಾದಗಳು.
  ಹಾಗೂ ಈ ವಿಚಾರ ಧಾರೆಗಳನ್ನು ತಮ್ಮ ಲೇಖನದ ಮೂಲಕ ಪ್ರಸ್ತುತ ಪಡಿಸಿದ ಸ್ನೇಹಿತರಾದ ಗುರುದತ್ ರವರಿಗೂ ಧನ್ಯವಾದಗಳು.💐💐💐💐💐
  ಸಿದ್ದಲಿಂಗಪ್ಪ ..ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಲಗಂಜನಹಳ್ಳಿ

  ReplyDelete
 34. 30 ವರ್ಷಗಳಿಂದ ಒಂದೇ ಶಾಲೆಯಲ್ಲಿ ಸೇವೆ ಸಲ್ಲಿಸಿ ,ಕರ್ಮ ಭೂಮಿಯೇ ಸರ್ಕಾರಿ ಶಾಲೆ ಎಂದು ಕರ್ತವ್ಯ ನಿರ್ವಹಿಸಿದ ಅತ್ಯುತ್ತಮ ಶಿಕ್ಷಕ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಪಡೆದ ಶ್ರೀಯುತ ಪರಮೇಶ ಗುರುಗಳಿಗೆ ಮತ್ತು ಅವರ ಬಗ್ಗೆ ಉತ್ತಮವಾದ ಮಾಹಿತಿಗಳನ್ನು, ಬೇರೆಯವರಿಗೆ ಮಾದರಿ ಅಥವಾ ದಾರಿದೀಪವಾಗುವಂತೆ ಬರೆದ,(ನಿಮ್ಮ ಬರವಣಿಗೆಯು ಅತ್ಯುತ್ತಮವಾಗಿದೆ) ಗುರುದತ್ತ. ಎ.ಗುರುಗಳಿಗೂ ನನ್ನ ನಮಸ್ಕಾರಗಳು .(ಪರಿವರ್ತನೆ ಹರಿಕಾರ ಮತ್ತು ಉತ್ತಮ ಲೇಖಕರು.)
  ಪದ್ಮಾವತಿ ಶಶಿಧರ್
  ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ
  ದೊಡ್ಡಕಲ್ಲಸಂದ್ರ

  ReplyDelete
 35. ಓದುತ್ತಿದ್ದರೆ ಯಾರೊಂದಿಗೋ ಒಡನಾಟದಲ್ಲಿ ಇದ್ದಂತ್ತೆ ಭಾಸವಾಯಿತು . ಒಬ್ಬ ಶ್ರೇಷ್ಠ ಗುರು ಇನ್ನೊಬ್ಬ ಶ್ರೇಷ್ಠಗುರುವಿನ ಹುಮ್ಮಸ್ಸಿನ ಸಾಧನೆಯ ಶಿಕರದ ಪು ಟ ಗಳ ಪ್ರತಿ ಬರಹವು ನಿಜಕ್ಕೂ ಅವಿಸ್ಮರಣೀಯ . ಆತ್ಮೀಯ ಗುರುವರ್ಯರೆ ನೀವು ನಮಗೆ ಪ್ರೇರಕರು💐💐💐💐💐👌🏻👌🏻👍👍👍
  ದೀಪ್ತಿ ಪ್ರಿಯ
  ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ತಲಘಟ್ಟಪುರ
  ಬೆಂಗಳೂರು ದಕ್ಷಿಣ ವಲಯ 1

  ReplyDelete
 36. ನಮ್ಮ ತಾಲ್ಲೂಕಿನಲ್ಲಿ ಅದು ನನ್ನ ವ್ಯಾಪ್ತಿಗೆ ಸೇರಿದ ಕ್ಲಸ್ಟರ್ ನಲ್ಲಿ ಇಂತಹ ಮಹತ್ ಸಾಧನೆ ಮಾಡಿದ್ದಾರೆ ಎಂದರೆ ನಮ್ಮ ಇಲಾಖೆಗೂ ಹೆಮ್ಮೆ ಎಲ್ಲಾ ಶಿಕ್ಷಕರಿಗೂ ಮಾದರಿಯಾಗಿದೆ ಧನ್ಯವಾದಗಳು ಸರ್ 🙏🙏💐 ಲೇಖಕರಾದ ಗುರುದತ್ ಸರ್ ರವರು ತುಂಬಾ ಚೆನ್ನಾಗಿ ವಿವರಿಸಿದ್ದಾರೆ 🙏🙏💐
  ಶ್ರೀಮತಿ ಪಾರ್ವತಿ
  ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು
  ಬೆಂಗಳೂರು ದಕ್ಷಿಣ ವಲಯ 1

  ReplyDelete
 37. ನಮ್ಮ ಪರಮೇಶ್ ನಮ್ಮ ಹೆಮ್ಮೆ ಬೆಂಗಳೂರು ದಕ್ಷಿಣ ವಲಯ ಒಂದರ ಮಾದರಿ ಶಾಲೆ ಬಂಜಾರ ಪಾಳ್ಯದ ರೂವಾರಿ ಶ್ರೀ ಪರಮೇಶ್ ಅವರಿಗೆ ಶುಭಾಶಯಗಳು . ಈ ಅಂಕಣ ಬರೆದು ಪ್ರಸ್ತುತಪಡಿಸಿದ ಗುರುದತ್ ರವರಿಗೆ ಧನ್ಯವಾದಗಳು
  ಕಾಂತರಾಜು
  ಸಮೂಹ ಸಂಪನ್ಮೂಲ ವ್ಯಕ್ತಿಗಳು
  ಬಸವನಗುಡಿ ಸಮೂಹ
  ಬೆಂಗಳೂರು ದಕ್ಷಿಣ ವಲಯ 1

  ReplyDelete
 38. ಪರಮೇಶ್ ಸರ್ ಅವರ ಸಾಧನೆ ಅತ್ಯುತ್ತಮವಾದುದು,ಅವರ ವೃತ್ತಿ ಜೀವನ ನಮ್ಮಲ್ಲರಿಗೂ ಅನುಕರಣೀಯ, ಅವರು ನಮ್ಮೊಂದಿಗೆ ಇರುವುದು ನಮ್ಮ ಸೌಭಾಗ್ಯವೇ ಸರಿ.
  ಶುಭಾಶಯಗಳು ಪರಮೇಶ್ ಸರ್
  ಲೇಖನ ಪ್ರಕಟಿಸಿದ ಗುರುದತ್ ಸರ್ ಅವರಿಗೂ ವಂದನೆಗಳು
  ಪುಟ್ಟರಾಜ ಬಿ ಎನ್
  ಸ.ಕಿ.ಪ್ರಾ.ಶಾಲೆ .ಉತ್ತರಿ

  ReplyDelete
 39. ಸರ್ಕಾರಿ ಶಿಕ್ಷಕರಿಗೆ ಮಾದರಿಯ ಹೆಮ್ಮೆಯ ಶಿಕ್ಷಕರಾಗಿ, ಉತ್ತಮ ಪ್ರಶಸ್ತಿಗಳಿಗೆ ಭಾಜನರಾಗಿರುವ,ಪರಮೇಶ್ವರಯ್ಯ ಸರ್ ರವರನ್ನು ಹತ್ತಿರದಿಂದ ನೋಡಬೇಕು, ಮತ್ತಷ್ಟು ಅವರ ಬಗ್ಗೆ ವಿಷಯ ತಿಳಿದುಕೊಳ್ಳಬೇಕಂಬ ಕುತೂಹಲವನ್ನು ನೀಗಿಸಿದ್ದೀರಾ ಸರ್.ನಿಜಕ್ಕೂ ಶ್ಲಾಘನೀಯ. ಪ್ರತಿಯೊಂದು ವಿಷಯವನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟಿದ್ದೀರಾ. ಒಬ್ಬ ಹೆಮ್ಮೆಯ, ಉತ್ತಮ ಮಾದರಿ ಶಿಕ್ಷಕರ ಬಗ್ಗೆ ಮತ್ತೊಬ್ಬ ಶಿಕ್ಷಕರು ಈ ರೀತಿ ಲೇಖನ ಬರೆದು ಪ್ರೋತ್ಸಾಹಿಸುವುದು ಕೂಡ ಒಬ್ಬ ಉತ್ತಮ ಶಿಕ್ಷಕರ ಲಕ್ಷಣವಾಗಿದೆ. ಇದು ಮತ್ತೊಬ್ಬ ಶಿಕ್ಷಕರಿಗೆ ಮಾದರಿಯಾಗಿ ಉತ್ತಮ ಪ್ರಜೆಗಳ ನಿರ್ಮಾಣವಾಗಲು ಸಹಕಾರಿ. ಇಬ್ಬರು ಶಿಕ್ಷಕ ಮಾಣಿಕ್ಯಗಳಿಗೆ ಹ್ಯಾಟ್ಸಪ್. ಧನ್ಯವಾದಗಳು.
  ರತ್ನಮ್ಮ ಎನ್ ಎಂ
  ಸಹಕಾರ್ಯದರ್ಶಿ
  ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ
  ಬೆಂಗಳೂರು ದಕ್ಷಿಣ ವಲಯ -03

  ReplyDelete
  Replies
  1. ರತ್ನಮ್ಮ ಮೇಡಂ ತಾವುಗಳು ಕೂಡ 1ಲೇಖನವನ್ನು ನಮ್ಮ ಸವಿಜ್ಞಾನ ಬ್ಲಾಗಿಗೆ ಬರೆದುಕೊಡಬೇಕೆಂದು ಈ ಮೂಲಕ ಕೋರುತ್ತೇನೆ

   Delete
 40. Makkala pragathi deshada pragathiyendu bhavisi thamma jeevanavanne mudupagittu seve sallisu5hiruva nimage anantha danyavadagalu

  ReplyDelete
 41. Guru sir your article about Parmesh Sir is really a beautiful one with simple literature. We are proud to be with you and work with you. Your a great inspiration to all. Stay blessed and be inspiring.

  ReplyDelete
 42. Great man great personality these type os person only make India great

  ReplyDelete
 43. ನಮ್ಮೂರ ಶಾಲೆಯ ಅತ್ಯುತ್ತಮ ಶಿಕ್ಷಕರು ಹಾಗೂ ಆತ್ಮೀಯ ಸ್ನೇಹಿತರಾದ ಶ್ರೀ ಪರಮೇಶ್ ಮಾಸ್ಟರ್ ರವರ ಕಾರ್ಯವೈಖರೀ, ಮಾನವೀಯ ಮೌಲ್ಯದ ಬಗ್ಗೆ, ರಾಷ್ಟ್ರದ ಉತ್ತಮ ಪ್ರಜೆಗಳಾಗಿ ಬಗ್ಗೆ ಮಕ್ಕಳಲ್ಲಿ ತಿಳಿಸುವ, ಶಾಲೆಯೇ ತಮ್ಮ ಕುಟುಂಬವೆಂದು ಸರ್ವತೋಮುಖ ಅಭಿವೃದ್ಧಿಗಾಗಿ ಯಾವಾಗಲೂ ಚಿಂತನೆ ಹಾಗೂ ಶ್ರಮಿಸುತ್ತಿರುವ ಸರಳ ವ್ಯಕ್ತಿತ್ವದ, ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಶ್ರೀ ಪರಮೇಶ್ ಮಾಸ್ಟರ್ ರವರಿಗೆ ಹಾಗೂ ಅವರ ಬಗ್ಗೆ ಅವರ ಬಗ್ಗೆ ಉತ್ತಮ ಲೇಖನ ಬರೆದ ಶ್ರೀ ಗುರುದತ್ತ ಮಾಸ್ಟರ್ ರವರಿಗೆ ಅನಂತ ಅನಂತ ಧನ್ಯವಾದಗಳು. ಶಿವನಂಜಪ್ಪ

  ReplyDelete
  Replies
  1. ವಂದನೆಗಳು ಶಿವನಂಜಪ್ಪ ಸಾರ್

   Delete
 44. Beautiful narration to introduce a fantastic personality

  ReplyDelete
 45. ಗುರುದತ್ತ ಸರ್ ಗೆ ಶ್ರೀ ಯುತ ಪರಮೇಶ್ವರ್ ಸರ ಗಿಂತ ಮೊದಲು ನಮಸ್ಕಾರಗಳು ,ತದನಂತರ ಪರಮೇಶ್ವರ್ ಸರ್ ಗೆ ಕೋಟಿ ನಮನಗಳು ನಿಮ್ಮಂತಹ ಧೈತ್ಯ ಗುರುಗಳ ಸಂಗಡ ನಾನು ಕೆಲಸ ಮಾಡಿದ್ದು ತರಬೇತಿ ಪಡೆದುಕೊಂಡಿದ್ದು ನನ್ನ ಪುಣ್ಯ ,ನಿವುಗಳು ನಿಜಕ್ಕೂ ಶಿಕ್ಷಣದ ಬದಲಾವಣೆ ಯ ಹರಿಕಾರರು ಅನೇಕ ಸಾರಿ ನಿಮ್ಮ ಸಲಹೆಗಳನ್ನು ಶಿಕ್ಷಣ ಇಲಾಖೆ ಒಪ್ಪಿ ಜಾರಿ ತಂದಿದೆ ,ನಿಮ್ಮ ಬೆಂಕಿಪಟ್ಟಣದ ಸೂಟಕೇಸ್ ರಾಜ್ಯಕ್ಕೆ ಮಾದರಿ ಸರ್ ನಿಮಗೆ ಭಗವಂತ ಶಿಕ್ಷಣಕ್ಷೇತ್ರದಲ್ಲಿ ಹೆಚ್ಚಿನ ಬದಲಾವಣೆ ಮಾಡಲು ಶಕ್ತಿಯನ್ನು ನೀಡಲೆಂದು ಆಶಿಸುತ್ತೇನೆ. ಹಾಗೆ ರವಿ ಕಾಣದ್ದನ್ನು ಕವಿ ಕಂಡ ಎನ್ನುವಂತೆ ಸ್ನೇಹಿತರಾದ ಶ್ರೀ ಗುರುದತ್ ಅವರು ಪರಮೇಶ್ವರ ಸರ ಬಗ್ಗೆ ಬರೆದ ಲೇಖನ ಶ್ಲಾಘನೀಯ ವಾದ್ದದ್ದು ಧನ್ಯವಾದಗಳು ಶ್ರೀ ಗುರುದತ್ತ ಗುರಗಳೇ ನಿಮ್ಮ ಕಾಯಕವು ಇಲಾಖೆಗೆ ಅಚ್ಚುಮೆಚ್ಚು....
  ಶಿವಾನಂದ ಕಾಕೋಳ್

  ReplyDelete
 46. ಲೇಖನ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಗುರು ಸರ್. ಪರಮೇಶ್ವರ ಸರ್ ರವರಿಗೆ ನನ್ನ ಅಭಿನಂದನೆಗಳು. ಅವರು ಮಾಡಿರುವ ಕಾರ್ಯ ಪ್ರತಿಯೊಬ್ಬ ಶಿಕ್ಷಕರಿಗೂ ಸ್ಪೂರ್ತಿ ತುಂಬಲಿ. 👏👏🙏
  ಶ್ರೀಮತಿ ಮಂಜುಳಾ ರಮೇಶ್
  ಹಾಸನ್ ಪಬ್ಲಿಕ್ ಸ್ಕೂಲ್
  ಹಾಸನ

  ReplyDelete
  Replies
  1. ಮಂಜುಳಾ ಮೇಡಂ ಸವಿಜ್ಞಾನ ಬ್ಲಾಗಿನ ಎಲ್ಲ ಲೇಖನಗಳನ್ನು ಓದಲು ಪೂರಕವಾಗಿ... ತಾವು ತಮ್ಮ ಜಿಲ್ಲೆಯ ವಾಟ್ಸ್ ಆಪ್ ಗುಂಪುಗಳಲ್ಲಿ ಹಂಚಿಕೊಳ್ಳಬೇಕೆಂದು ತಮ್ಮಲ್ಲಿ ಈ ಮೂಲಕ ಕೋರುತ್ತೇನೆ

   Delete
 47. ಸವಿಜ್ಞಾನ ಬ್ಲಾಗಿನಲ್ಲಿ ಪ್ರತಿ ತಿಂಗಳ ನಾಲ್ಕನೇ ತಾರೀಕಿನೊಂದು ವಿಜ್ಞಾನದ ಕುತೂಹಲಕಾರಿ ಲೇಖನಗಳನ್ನು ಬಿತ್ತರಿಸಲಾಗುತ್ತದೆ ...ಹಾಗಾಗಿ ಎಲ್ಲರೂ ಕೂಡ ಓದಿ ಅದರ ಅನುಭವವನ್ನು ಎಲ್ಲರೊಂದಿಗೆ ಹಂಚಿಕೊಳ್ಳಬೇಕೆಂದು... ಈ ಮೂಲಕ ಪ್ರಾರ್ಥಿಸುತ್ತೇನೆ

  ReplyDelete
 48. Such a beautiful narration by Gurudatta. The thing to look is a great teacher without any ego expressing other teacher ...don’t know whom to give credit ...but blesses to have too good friends with me....good one...with above all the blog articles are good....prasanna sir article is too good

  ReplyDelete
 49. Such a beautiful narration by Gurudatta. The thing to look is a great teacher without any ego expressing other teacher ...don’t know whom to give credit ...but blesses to have too good friends with me....good one...with above all the blog articles are good....prasanna sir article is too good

  ReplyDelete
 50. ಪೂಜ್ಯ ಗುರುಗಳಾದ ಶ್ರೀ ಪರಮೇಶ್ ಸಾರ್ ರವರ ಕಾರ್ಯ ವೈಖರಿ ಹಾಗೂ ಶಾಲೆ ಯ ಬಗ್ಗೆ ಮಕ್ಕಳ ಬಗ್ಗೆ ಮಕ್ಕಳ ಶೈಕ್ಷಣಿಕ ಪ್ರಗತಿ... ಇದಕ್ಕೆ ಪೂರಕವಾಗಿ ನಮ್ಮ ಇಲಾಖೆ ಹಾಗೂ ಸಮಾಜದ ಮುಖಂಡರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿರುವ.. ಹಾಗೂ ನಮ್ಮ ಶಿಕ್ಷಕರಿಗೆ ಹಲವಾರು ತರಬೇತಿ ಶಿಬಿರ ಗಳಲ್ಲಿ ಉತ್ತಮ ಸಂಪನ್ಮೂಲ ವ್ಯಕ್ತಿಯಾಗಿ ಶಿಕ್ಷಕ ರಿಗೂ ಉತ್ತಮ ಮಾರ್ಗ ದರ್ಶನ ಮಾಡುತ್ತಾ ... ರಾಷ್ಟ್ರ ಪ್ರಶಸ್ತಿ ಪುರಸ್ಕೃತ ರು ಆದ ಪರಮೇಶ್ ಸಾರ್ .. ನಮ್ಮ ವಲಯದ ಹೆಮ್ಮೆಯ ಶಿಕ್ಷಕ ಎಂದು ಹೇಳಿ ಕೊಳ್ಳಲು ನಮಗೆ ಸಂತೋಷ ವಾಗುತ್ತದೆ... ಹಾಗೆಯೇ ಈ ಎಲ್ಲಾ ವಿಚಾರಗಳನ್ನು ಅದ್ಬುತ ವಾಗಿ...ನಮ್ಮ ಹೆಮ್ಮೆಯ ಮತ್ತೊಬ್ಬ ಶಿಕ್ಷಕ .. ಗುರುದತ್ ರವರು ತಮ್ಮ ಲೇಖನದ ಮೂಲಕ ನಮಗೆಲ್ಲಾ ತಿಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ... ಶ್ರೀ ಯುತ ಪರಮೇಶ್ .. ಹಾಗೂ ಗುರುದತ್ ರವರಿಗೆ..ನನ್ನ ಪ್ರಣಾಮಗಳು...🙏🏻🌷🙏
  ನಾರಾಯಣಪ್ಪ
  KPSTA...SOUTH-1

  ReplyDelete
 51. Excellent article Gurudat sir ನಿಮ್ಮ ಲೇಖನ ತುಂಬಾ ಅದ್ಭುತವಾಗಿ ಮೂಡಿಬಂದಿದೆ ಹಾಗೂ ನಮ್ಮ ಮುಖ್ಯ ಶಿಕ್ಷಕರ ಆದಂತಹ ಶ್ರೀಯುತ ಪರಮೇಶ್ವರ್ ಸರ್ ಅವರಂಥ ರಾಷ್ಟ್ರಪ್ರಶಸ್ತಿ ವಿಜೇತರಾದ ಸಾಧಕರ ವಿಚಾರ ಬರೆದಿರುವುದು ನಮ್ಮ ಕ್ಲಸ್ಟರಿನ ಹೆಮ್ಮೆಯ ವಿಚಾರ ಹಾಗೂ ಶಿಕ್ಷಕರಾದ ನಮಗೆ ಸ್ಫೂರ್ತಿದಾಯಕವಾಗಿದೆ ಸರ್💐💐💐💐👌🤝🤝💐💐
  ಮಹೇಶ್ವರ
  ಮುಖ್ಯ ಶಿಕ್ಷಕರು
  ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
  ಅಗರ

  ReplyDelete
 52. ಸರ್ಕಾರಿ ಶಾಲೆಯನ್ನು ಬಹಳ ಉತ್ತಮವಾಗಿ ಪ್ರತಿಬಿಂಬಿಸಿದ್ದೀರಾ ಸರ್👍 ಈ ಶಾಲೆಯನ್ನು ಈ ಮಟ್ಟಕ್ಕೆ ಬೆಳೆಸಿರುವ ಮುಖ್ಯ ಶಿಕ್ಷಕರಾದ ಶ್ರೀ ಪರಮೇಶ್ವರ ಸರ್ ರವರನ್ನು ನಾನು ಬಹಳಷ್ಟು ಸಾರಿ ಭೇಟಿಮಾಡಿ ಅವರ ವಿಷಯ ನೈಪುಣ್ಯತೆಯನ್ನು ತಿಳಿದು ತಲೆಬಾಗಿದ್ದೇನೆ. ಅವರಿಂದ ಕಲಿತ ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ತಿಳಿದಿದ್ದೇನೆ, ಶ್ರೀ ಪರಮೇಶ್ವರ ಸರ್ ರವರ ಭಾಷಾಶುದ್ಧಿ,ಅಂಕೆಗಳನ್ನು ಬರೆಯುವ ಶೈಲಿ,ಗಣಿತ ಪಾಠ ಬೋಧನೆಯ ಸರಳಕ್ರಮ, ಶಾಲೆಗಾಗಿ, ವಿದ್ಯಾರ್ಥಿಗಳಿಗಾಗಿ ಗ್ರಾಮದ ಜನತೆಗಾಗಿ, ತಮ್ಮ ಜೀವನವನ್ನೇ ಮುಡುಪಾಗಿಟ್ಟ ಶ್ರೀಯುತ ಪರಮೇಶ್ವರ್ ಸರ್ ರವರಿಗೆ ನನ್ನಿಂದ ಹೃತ್ಪೂರ್ವಕ ನಮನ🙏🙏
  ಅವರ ಈ ಸಾಧನೆ ನಮ್ಮಂತಹ ಎಲ್ಲ ಶಿಕ್ಷಕರಿಗೆ ಒಂದು ಮಾದರಿಯಾಗಲಿ ಎಂದು ಆಶಿಸುತ್ತೇನೆ 👏🌹
  ಶಾಂತಲಾ ಎಸ್ ಭಟ್
  ಶಿಕ್ಷಣ ಸಂಯೋಜಕರು
  ಬೆಂಗಳೂರು ದಕ್ಷಿಣ ವಲಯ 1

  ReplyDelete
 53. This is a wonderful blog... this is 4th time i am reading this blog and every time i am going to get a new information... i am very happy for all the editors and the people and for article as well... i was searching for a good science blog.. which contains kannada literature ..i am very happy with it and i am pleased to see all these articles ...thank you ..
  sanjay chandrashekar
  San francisco

  ReplyDelete
 54. ಬಾಲಕೃಷ್ಣ ಅಡಿಗ ರವರ ಸಾರಥ್ಯದಲ್ಲಿ ಹಾಗೂ ಸಮಾನ ಮನಸ್ಕರ ಸೃಷ್ಟಿಯಲ್ಲಿ ಮೂಡಿಬಂದಿರುವ ವಿಗ್ನಾನ ಬ್ಲಾಕ್ ಅತ್ಯಂತ ಉತ್ಕೃಷ್ಟ ಮಟ್ಟದಲ್ಲಿದೆ
  ಮಾಲಿನಿ ಚಂದ್ರಶೇಖರ್

  ReplyDelete
 55. ಗುರುದತ್... ಈ ಬ್ಲಾಗಿನಲ್ಲಿರುವ ಎಲ್ಲ ವಿಜ್ಞಾನದ ಲೇಖನಗಳು ..ವ್ಯಂಗ್ಯಚಿತ್ರಗಳು ಮತ್ತು ಒಗಟುಗಳನ್ನು 6ತಿಂಗಳಿಗಳಿಗೊಮ್ಮೆ ..ಪುಸ್ತಕ ರೂಪದಲ್ಲಿ ಏಕೆ ಹೊರತರಬಾರದು ...ಒಮ್ಮೆ ಯೋಚಿಸಿ ನೋಡಿ
  ನಂದನ್

  ReplyDelete