ಬೆರಳು ಗೊಂಬೆಗಳು
ಸಿದ್ದು ಬಿರಾದಾರ, ವಿಜ್ಞಾನ ಶಿಕ್ಷಕ
ಸರಕಾರಿ ಪ್ರೌಢ ಶಾಲೆ ಚಿಬ್ಬಲಗೇರಿ
ತಾ: ಹಳಿಯಾಳ, ಶಿರಿಸಿ ಶೈಕ್ಷಣಿಕ ಜಿಲ್ಲೆ
ಉತ್ತರ ಕನ್ನಡ
ಆತ್ಮೀಯರೇ, ಹಿಂದಿನ ತಿಂಗಳಲ್ಲಿ ಪ್ರಕಟವಾದ “ಬೊಂಬೆಯಾಟದ ಮೂಲಕ ವಿಜ್ಞಾನ ಕಲಿಕೆಯ” ಬೋಧನಾ ಅನುಭವದ ಲೇಖನವನ್ನು ತಾವೆಲ್ಲರೂ ಓದಿದ್ದೀರಿ, ತಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಬರೆದು ತಿಳಿಸಿದ್ದೀರಿ. ಜೊತೆಗೆ ನನಗೆ ಸೂಕ್ತ ಮಾರ್ಗದರ್ಶನವನ್ನೂ ಕೂಡಾ ನೀಡಿದ್ದೀರಿ. ತಮಗೆ ಅಭಿನಂದನೆಗಳು. ಲೇಖನ ಓದಿದ ಅನೇಕ ಜನರ ಅಪೇಕ್ಷೆಯ ಮೇರೆಗೆ ವಿಜ್ಞಾನ ಕಲಿಕೆಯಲ್ಲಿ ಯಾವ ಸಾಮಥ್ರ್ಯಗಳಿಗೆ ಯಾವ ಯಾವ ಬೊಂಬೆಗಳನ್ನು ಬಳಸುತ್ತೀರಿ ಮತ್ತು ಅವುಗಳನ್ನು ಹೇಗೆ ತಯಾರಿಸುತ್ತೀರಿ ಮತ್ತು ತಯಾರಿಸುವ ವಿಧಾನದ ಕುರಿತು ಅನುಭವವನ್ನು ಹಂಚಿಕೊಳ್ಳಲು ಕೇಳಿರುತ್ತೀರಿ. ತಮ್ಮ ನಿರೀಕ್ಷೆಯಂತೆ ಗೊಂಬೆಗಳಲ್ಲಿ ಅನೇಕ ಪ್ರಕಾರಗಳಿರುವುದು ನಿಮಗೆ ತಿಳಿದಿದೆ. ಅದರಲ್ಲಿ ಕಡಿಮೆ ಖರ್ಚಿನಲ್ಲಿ ಸುಲಭವಾಗಿ ತಯಾರಿಸಬಹುದಾದ ಬೆರಳು ಬೊಂಬೆಗಳ ಮೂಲಕ ವಿಜ್ಞಾನ ಕಲಿಕೆಯನ್ನು ಹೇಗೆ ಮಾಡಬಹುದು ಎಂಬ ಅನುಭವಗಳನ್ನು ಹಂಚಿಕೊಳ್ಳುತ್ತೇನೆ.
ಕೇವಲ ಗೊಂಬೆಗಳಿಂದಲೇ ಎಲ್ಲ ಪಾಠವನ್ನು ಮಾಡುತ್ತೇನೆಂದು ಹೇಳಲಾಗುವುದಿಲ್ಲ. ಆದರೆ ಮಕ್ಕಳಿಗೆ ಪಾಠ ಕಲಿಯುವುದರಲ್ಲಿ ಆಸಕ್ತಿ ಬರುವಂತೆ ಮಾಡಬಹುದು. ಮಕ್ಕಳಿಗೆ ಗೊಂಬೆಗಳೆಂದರೆ ತುಂಬಾ ಆಸಕ್ತಿ ಅವರ ಅವಧಾನ ಕೇಂದ್ರೀಕರಿಸುವಲ್ಲಿ ವಿಶೇಷ ಪಾತ್ರವಹಿಸುತ್ತವೆ. ಪಾಠದ ಆರಂಭದಲ್ಲಿ ಕೇವಲ ಮೂರು ನಾಲ್ಕು ನಿಮಿಷಗಳಲ್ಲಿ ಈ ಗೊಂಬೆಗಳ ಮೂಲಕ ಸಣ್ಣ ಸಂಭಾಷಣೆಯನ್ನು ಮಾಡುತ್ತಾ ಅವರ ಅವಧಾನವನ್ನು ಸೆಳೆಯಲು ಪ್ರಯತ್ನಿಸಬಹುದು. ಮಕ್ಕಳ ಅವಧಾನವನ್ನು ಕೇಂದ್ರೀಕರಿಸಿದಾಗ ನಾವು ಮಕ್ಕಳಿಗೆ ಸುಲಭವಾಗಿ ಪಾಠದ ಸಾಮಥ್ರ್ಯಗಳಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಮಾಡಬಹುದು.
ಬೆರಳು ಗೊಂಬೆಗಳು ವಿಶೇಷವಾಗಿ ಒಂದನೇ ತರಗತಿಯಿಂದ ಐದನೇ ತರಗತಿಯವರೆಗೆ ಅಷ್ಟೇ ಏಕೆ ಯಾವುದೇ ತರಗತಿಯ ವಿದ್ಯಾರ್ಥಿಗಳಿಗೂ ಪರಿಸರ ಅಧ್ಯಯನ ಮತ್ತು ವಿಜ್ಞಾನ ಕಲಿಕೆಯಲ್ಲಿ, ಸೃಜನಶೀಲ ಅಭಿವ್ಯಕ್ತಿಯಲ್ಲಿ ಹೆಚ್ಚು ಉಪಯುಕ್ತವಾಗಿವೆ. ಇವುಗಳನ್ನು ಸುಲಭವಾಗಿ ತಯಾರಿಸಬಹುದು. ಇವುಗಳನ್ನು ತಯಾರಿಸಲು ವಿಶೇಷ ಪರಿಣಿತಿಯ ಅವಶ್ಯಕತೆ ಇರುವುದಿಲ್ಲ. ಒಂದನೇ ತರಗತಿಯ ಮಕ್ಕಳಿಗೆ ಪರಿಸರ ಅಧ್ಯಯನ ವಿಷಯದ ಆರನೇಯ ಕಲಿಕಾ ಫಲದಲ್ಲಿ ಮಗು ತನ್ನ ದಿನನಿತ್ಯದ ಅಗತ್ಯತೆಯ ವಸ್ತುಗಳ ಪರಿಚಯ, ಮನೆಯಲ್ಲಿ ಬಳಸುವ ತರಕಾರಿಗಳ, ಹೂ, ಹಣ್ಣು ಮತ್ತು ಗಿಡಮರಗಳ ಪರಿಚಯವನ್ನು ನಾವು ಬೆರಳು ಗೊಂಬೆಗಳ ಮೂಲಕ ಮಾಡಿಸಬಹುದು. ಎರಡನೇಯ ತರಗತಿಯಲ್ಲಿ ಪರಿಸರ ಅಧ್ಯಯನದ ಮೂರು, ನಾಲ್ಕು ಮತ್ತು ಐದನೇ ಕಲಿಕಾಫಲದಲ್ಲಿ ಮಗು ತನ್ನ ಪರಿಸರದಲ್ಲಿ ಪ್ರಾಣಿ, ಪಕ್ಷಿ, ಸಸ್ಯ, ಹೂ ಹಣ್ಣುಗಳ ಮತ್ತು ತರಕಾರಿಗಳ ಪರಿಚಯವನ್ನು ಮಾಡಿಕೊಳ್ಳುವುದು. ಮೂರನೇ ತರಗತಿಯ ಎರಡು, ಮೂರು ಮತ್ತು ಐದನೇಯ ಕಲಿಕಾಫಲಗಳು. ನಾಲ್ಕನೇಯ ತರಗತಿಯ ಒಂದು ಮತ್ತು ಆರನೇಯ ಕಲಿಕಾಫಲಗಳು. ಐದನೇ ತರಗತಿಯ ಒಂದು, ಎರಡು ಮತ್ತು ಮೂರು ಈ ಕಲಿಕಾ ಫಲಗಳನ್ನು ಬೆರಳು ಗೊಂಬೆಗಳ ಮೂಲಕ ಮಕ್ಕಳಿಗೆ ಸುಲಭವಾಗಿ ಕಲಿಸಬಹುದು. ಇಷ್ಟೇ ಕಲಿಕಾಫಲಗಳನ್ನು ಈಡೇರಿಸಬೇಕೆಂಬ ನಿಯಮವೇನಿಲ್ಲ, ನಿಮ್ಮ ವಿವೇಚನೆ ಮತ್ತು ಕ್ರಿಯಾಶಿಲತೆಯ ಆಧಾರದ ಮೇಲೆ ಇನ್ನೂ ಹೆಚ್ಚಿನದನ್ನು ಕೂಡಾ ಮಾಡಿ ಮಕ್ಕಳನ್ನು ರಂಜಿಸಿ, ನಲಿಸಿ ಕಲಿಸಬಹುದು. ಈಗ ಬೆರಳುಗೊಂಬೆಗಳನ್ನು ತಯಾರಿಸುವ ವಿಧಾನವನ್ನು ತಿಳಿದುಕೊಳ್ಳೋಣ.
ಬೇಕಾಗುವ ಸಾಮಗ್ರಿಗಳು: ಕಾರ್ಡ್ ಬೋರ್ಡ್‍ಶೀಟ್, ಅಂಟು, ಸ್ಕೆಚ್‍ಪೆನ್, ಬಣ್ಣದ ಹಾಳೆ, ಪರಪರೆ ಹಾಳೆ. ಪಕ್ಷಿ-ಪ್ರಾಣಿಗಳ ಚಿತ್ರಗಳು, ತರಕಾರಿಯ ಚಿತ್ರಗಳು. ಹೂ ಮತ್ತು ಹಣ್ಣುಗಳ ಚಿತ್ರ, ಅವಶ್ಯವಿರುವ ಇತರೆ ಚಿತ್ರಗಳು. ಚಿತ್ರಗಳನ್ನು ನೀವೇ ಬಿಡಿಸಬಹುದು, ಇಲ್ಲ ಯಾವುದೇ ಪತ್ರಿಕೆಯಲ್ಲಿ ಅಥವಾ ಹಳೆಯ ಪುಸ್ತಕದಲ್ಲಿ ಇರುವ ಚಿತ್ರಗಳನ್ನು ಬಳಸಬಹುದು.
ಮಾಡುವ ವಿಧಾನ:
1) ಕಾರ್ಡಶೀಟನ್ನು 10cm x 15cm ಆಯತಾಕಾರದಲ್ಲಿ ಕತ್ತರಿಸಿ ಬೆರಳಿಗೆ ಅನುಗುಣವಾಗುವಂತೆ ಗೋಲಾಕೃತಿಯಲ್ಲಿ ಸಮವಾಗಿ ಒಂದು ಬೆರಳಿಗೆ ಸುತ್ತಿಕೊಳ್ಳಬೇಕು. (ಚಿತ್ರ ನೋಡಿ) ನಂತರ ಕೊನೆಯ ಸುತ್ತನ್ನು ಅಂಟಿನಿಂದ ಭದ್ರಪಡಿಸಬೇಕು. ಬೆರಳಿನಿಂದ ತೆಗೆದಿಡಬೇಕು.
2) ಮತ್ತೊಂದು 10cm x 15cm ಅಳತೆಯ ಕಾರ್ಡಶೀಟನ್ನು ತೆಗೆದುಕೊಳ್ಳಿ. ನಂತರ ಆಯತಾಕಾರದ ಮತ್ತೊಂದು ಹಾಳೆಯನ್ನು ಚಿತ್ರದಲ್ಲಿ ತೋರಿಸಿದಂತೆ ಮಡಚಬೇಕು. ಬೇರೆ ಬೇರೆ ಆಕೃತಿಗೆ ಬೇರೆ ಬೇರೆ ರೀತಿಯಾಗಿ ಚಿತ್ರದಲ್ಲಿರುವಂತೆ ಮಡಚಬೇಕು. (ಚಿತ್ರ ನೋಡಿ)
3) ಮಡಚಿದ ಎರಡನೇಯ ಹಾಳೆಯ ಮೇಲೆ ಸಮಮಿತಿ ಆಕೃತಿಗೆ ಅನುಗುಣವಾಗಿ ಅರ್ಧ ಚಿತ್ರ ಮಾತ್ರ ಬಿಡಿಸಬೇಕು. ಚಿತ್ರದಲ್ಲಿರುವಂತೆ ಮಡಚಿದ ಹಾಳೆಯನ್ನು ಸರಿಯಾಗಿ ಹಿಡಿದು ಕತ್ತರಿಯಿಂದ ಕತ್ತರಿಸಬೇಕು.
4) ಕತ್ತರಿಸಿದ ಆಕೃತಿಗೆ ಸ್ಕೆಚ್‍ಪೆನ್‍ನಿಂದ ಕಣ್ಣು ಮೂಗು ಬಾಯಿ ಮತ್ತು ಕಿವಿಯನ್ನು ಬಿಡಿಸಬೇಕು. ಇದರಲ್ಲಿ ಬೇರೆ ಬೇರೆ ಬಣ್ಣಗಳನ್ನು ಕೂಡಾ ಬಳಸಬಹುದು. ಒಂದು ವೇಳೆ ಸರಿಯಾಗಿ ಸಮಮಿತಿ ಆಕೃತಿಯನ್ನು ಬಿಡಿಸಲು ಬರದಿದ್ದರೆ ನಮಗೆ ಬೇಕಾದ ಪಾಣಿ, ಪಕ್ಷಿ, ತರಕಾರಿ, ಗಿಡ, ಹೂ, ಹಣ್ಣು, ಮತ್ತು ಮನುಷ್ಯರ ಚಿತ್ರಗಳ ಮುಖಗಳನ್ನೆ ಬಳಸಬಹುದು.
5) 10cm x 15cm, ಸೈಜಿನ ಬೇರೆ ಬೇರೆ ಬಣ್ಣದ ಹಾಳೆಯ ಮೇಲೆ ಚಿತ್ರದಲ್ಲಿ ತೊರಿಸಿರುವಂತೆ ಬೆರಳು ಗೊಂಬೆಗಳಿಗೆ ಪ್ಯಾಂಟು, ಶರ್ಟ್ ಮತ್ತು ಚೂಡಿದಾರ ಹೀಗೆ ಬೇಕಾದ ರೀತಿಯಲ್ಲಿ ಗೊಂಬೆಗಳಿಗೆ ಅಲಂಕಾರ ಮಾಡಬೇಕು. ಇಲ್ಲಿ ಎಲ್ಲ ಗೊಂಬೆಗಳಿಗೆ ಅಲಂಕರಿಸಬಹುದು. ಏಕೆಂದರೆ ಇದು ಮಕ್ಕಳಿಗೆ ಆಕರ್ಷಣೀಯವಾಗಿರಬೇಕು.
6) ಕೊನೆಯಲ್ಲಿ ಕಾರ್ಡ್‍ಶೀಟ್ ಹಾಳೆಯಿಂದ ಕೈಕಾಲುಗಳ ಚಿತ್ರಗಳನ್ನು ಬಿಡಿಸಿ ಕತ್ತರಿಸಿ ಅಂಟಿಸಬೇಕು. ಅವುಗಳು ಅಲುಗಾಡುವಂತಿರಲಿ.
ಈ ರೀತಿಯಾಗಿ ಬೆರಳು ಗೊಂಬೆಗಳಲ್ಲಿ ಅನೇಕ ಹೂಗಳ ಪರಿಚಯ ಹಾಗೂ ಪಕ್ಷಿ-ಪ್ರಾಣಿ, ಕೀಟ, ಹೂ, ಹಣ್ಣುಗಳ ಪರಿಚಯವನ್ನು ಆಟದೊಂದಿಗೆ ಮಕ್ಕಳಿಗೆ ಸುಲಭವಾಗಿ ಕಲಿಸಲು ಸಾಧ್ಯವಾಗುವುದು. ತಯಾರಿಸಿದ ಗೊಂಬೆಗಳನ್ನು ಯಾವುದೇ ಕೈಯಲ್ಲಿನ ಎಲ್ಲ ಬೆರಳುಗಳಿಗೆ ಅಥವಾ ಕೆಲವು ಬೆರಳಿಗೆ ಹಾಕಿಕೊಂಡು ಮಕ್ಕಳೊಂದಿಗೆ ಮಾತನಾಡುತ್ತಾ ಬಳಸಬಹುದು. ಉದಾಹರಣೆಗೆ ಎಲ್ಲ ಬೆರಳುಗಳಿಗೆ ಹೂಗಳ ಗೊಂಬೆಗಳನ್ನು ಹಾಕಿಕೊಂಡು ಹಾಡನ್ನು ಹೇಳುತ್ತಾ ಹೂಗಳ ಪರಿಚಯ ಮಾಡಬಹುದು. ಕೆಲವು ಪ್ರಾಣಿ ಪಕ್ಷಿಗಳ ಬೊಂಬೆಗಳನ್ನು ಬಳಸಿ ಪರಿಚಯ ಮಾಡಬಹುದು. ಹೂ ಹಣ್ಣು ತರಕಾರಿಗಳ ಪರಿಚಯ ಮಾಡಬಹುದು. ಕೆಲವು ಸಂಭಾಷಣೆಗಳ ಲಿಂಕನ್ನು ಕೆಳಗೆ ನೀಡಲಾಗಿದೆ. ಅವುಗಳನ್ನು ಪಾಠ ಬೋಧನೆಯಲ್ಲೆ ಬಳಸಬಹುದು.
• ಪಕ್ಷಿಗಳ ಪರಿಚಯದ ಗೊಂಬೆಯಾಟ
• ದೇಹದ ಅಂಗಗಳ ಪರಿಚಯ
• ದೇಹದ ಅಂಗಗಳ ಪರಿಚಯ
• ತರಕಾರಿಗಳ ಪರಿಚಯ
• ನಾವು ಹಣ್ಣುಗಳು
• ಹೂಗಳ ಪರಿಚಯ
ಬೆರಳು ಗೊಂಬೆಗೆ ಬೇಕಾದ ಡೈಲಾಗ್ ಲಿಂಕ್ ಇಲ್ಲಿದೆ ಬೇಕೆಂದರೆ ಬಳಸಿ
ReplyDeletehttps://drive.google.com/file/d/1g_8giwcUJhJCCQsax2Fx7usjxNaXnceW/view?usp=sharing
ಸೊಗಸಾಗಿದೆ ಗೆಳೆಯ
DeleteSir nim e kelasa ellarigu sahayakavagide ...nim e seve nirantavagirali
ReplyDeleteTq sir
DeleteUttama kalikegagi ಅತುತ್ತಮ ಚಿಂತನ...asaktidayaka kalivina ಚಿಗುರಿನ mana ಮಂಥನ ಅನಾವರಣ sirrrrrrrrr
ReplyDelete👌sir ತುಂಬಾ ಚೆನ್ನಾಗಿದೆ ವಿಧಾನ ಮಾಹಿತಿ ಚೆನ್ನಾಗಿ ಬಂದಿದೆ ಥ್ಯಾಂಕ್ಯು ಸರ್
ReplyDeleteBeutifull sir thanks sir
ReplyDeleteSuuuuuuper
ReplyDeleteಪ್ರಾಥಮಿಕ ಶಾಲೆಗಳ ಶಿಕ್ಷಕರ ಬೋಧನೆಯ ಅವಧಿಯಲ್ಲಿ ಈ ಬೆರಳು ಗೊಂಬೆಗಳ ಬಳಕೆ ಅತಿ ಅಗತ್ಯ ಮತ್ತು ಪರಿಣಾಕಾರಿ ಕಲಿಕಾ ಫಲ ಉಂಟಾಗಲು ಸಾಧ್ಯತೆ ಇದೆ ನೀವು ತಿಳಿಸಿದ ಮಾದರಿ ಗೊಂಬೆ ತಯಾರಿಕೆ ಉಪಯೋಗಕಾರಿ ಸರ್ ನಿಮಗೆ ಧನ್ಯವಾದಗಳು
ReplyDeletesuper
ReplyDelete👌🙏🙏🙏🙏
ReplyDeleteExplained Very nicely
ReplyDeleteExcellent sir
ReplyDeleteNice work sir
ReplyDeleteVery nice sir 👌
ReplyDelete