ವಿಜ್ಞಾನ ಎಂಬ ವಿಸ್ಮಯ
ಲೇಖಕರು:
ಬಿ.ಎನ್.
ರೂಪ ,
ಸಹಾಯಕ
ಶಿಕ್ಷಕರು,
ಸರ್ಕಾರಿ
ಉರ್ದು ಮತ್ತು ಆಂಗ್ಲ ಪ್ರೌಢಶಾಲೆ ಗೋರಿಪಾಳ್ಯ,
ಬೆಂಗಳೂರು
ದಕ್ಷಿಣ ತಾಲ್ಲೂಕು-2.
ವಿಜ್ಞಾನ ಈ ಪದದಲ್ಲಿ ಇದೆ ಜ್ಞಾನ,
ನಮ್ಮನ್ನು
ಅಲೌಕಿಕ ದಿಂದ ಲೌಕಿಕದೆಡೆಗೆ,
ಸೆಳೆಯುವ ಸುಜ್ಞಾನ,
ನಮ್ಮನ್ನು ರೋಮಾಂಚನಗೊಳಿಸುವ ಜ್ಞಾನಾಮೃತ,
ವಿಶ್ವದ ಸಕಲ ಜ್ಞಾನದ ಭಂಡಾರ.
ವಿಶ್ವದಲ್ಲಿ ನಡೆಯುವ ವಿದ್ಯಮಾನಕ್ಕೆ ಉತ್ತರದ ಹೆದ್ದಾರಿ ನೀ,
ಕತ್ತಲನ್ನು ಓಡಿಸಿ ಬೆಳಕಿನೆಡೆಗೆ ಕೊಂಡೊಯ್ಯುವ,
ಸತ್ಯದೆಡೆಗೆ ನಮ್ಮನ್ನು ಕೊಂಡೊಯ್ಯುವ,
ವಿಶ್ವದ
ಸಕಲ
ಜ್ಞಾನದ
ಭಂಡಾರ.
ನಮ್ಮಲ್ಲಿ
ವೈಜ್ಞಾನಿಕ ವೈಚಾರಿಕತೆ,
ವೈಜ್ಞಾನಿಕ ಮನೋಭಾವ ಬೆಳೆಸುವ ಹೆದ್ದಾರಿ,
ನಮ್ಮ
ದೈನಂದಿನ ಜೀವನದ ಹಾದಿಯನ್ನು ಸುಲಭಗೊಳಿಸುವ ಸುಜ್ಞಾನ,
ವಿಶ್ವದ ಸಕಲ ಜ್ಞಾನದ ಭಂಡಾರ.
ಹೊಸ
ಅನ್ವೇಷಣೆ ,ಸಂಶೋಧನೆ, ಆವಿಷ್ಕಾರಕ್ಕೆ ನಾಂದಿ ಹಾಡುವ,
ಈ ಭೂಮಿಯಲ್ಲಿ ನಡೆಯುವ ಪ್ರಕ್ರಿಯೆಗೆ ಉತ್ತರ ಸಿಗುವಂತೆ ಮಾಡುವ
ಜ್ಞಾನ,
ವಿಶ್ವದ ಸಕಲ ಜ್ಞಾನದ ಭಂಡಾರ,
ನೀ
ವಿಶ್ವದ
ಸಕಲ ಜ್ಞಾನದ ಭಂಡಾರ
ನಮ್ಮ
ಬದುಕು ವಿಜ್ಞಾನಮಯವೇ ಆಗಿದೆ ಎಂದರೆ ಅತಿಶಯೋಕ್ತಿಯೇನಲ್ಲ. ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವರೆಗೂ ವಿಜ್ಞಾನ ಬದುಕಿನ
ಹಾಸುಹೊಕ್ಕಾಗಿದೆ. ವಿಜ್ಞಾನದ ಹಲವು ಆವಿಷ್ಕಾರಗಳನ್ನು ಬಳಸಿಕೊಂಡು ಬದುಕನ್ನು ಹೆಚ್ಚು ಸಂತೃಪ್ತಿಯೊಂದಿಗೆ
ಅಸ್ವಾದಿಸುತ್ತಾ ಬಂದಿದ್ದೇವೆ. ಹುಟ್ಟಿನಿಂದ ಸಾಯುವವರೆಗೂ ವಿಜ್ಞಾನದ ಹಲವಾರು ಪ್ರಕ್ರಿಯೆಗಳನ್ನು
ವೈಚಾರಿಕತೆಯೊಂದಿಗೆ ಮೇಳೈಸಿಕೊಂಡು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಸಿಕೊಂಡಿದ್ದೇವೆ.
ನಮ್ಮ
ಆಹಾರ, ಉಡುಗೆ,ಕೃಷಿ ,ನೀರಾವರಿ, ನಾವು ಬಳಸುವ ವಿವಿಧ ವಿದ್ಯುತ್ ಪರಿಕರಗಳು, ಮೋಟಾರುಗಳು ವಿಜ್ಞಾನದ ದೇಣಿಗೆಯಾಗಿವೆ.
ಇಂದಿನ
ನಮ್ಮ ಆಧುನಿಕ ಜೀವನ ಶೈಲಿ ಇಷ್ಟೊಂದು ಆರಾಮದಾಯಕ ಹಾಗೂ ಸುಸೂತ್ರವಾಗಿರುವುದಕ್ಕೆ ವಿಜ್ಞಾನದ ಕೊಡುಗೆಯೇ
ಕಾರಣ.
ಅಡುಗೆ
ಮನೆಯಲ್ಲಿ ಪಾತ್ರೆಗಳು ಸಂಗ್ರಹಾಗಾರಗಳು, ರುಚಿಕರ ಪದಾರ್ಥಗಳು. ಶಾಖದ ಬಳಕೆ, ಇಂಧನದ ಆಯ್ಕೆ , ಅದರ
ದಹನ, ಜೀರ್ಣಕ್ರಿಯೆ, ಆಹಾರವನ್ನುವಿಭಜಿಸುವುದು, ಸ್ವಾದಕಾರಕಗಳು, ರುಚಿ ಹೆಚ್ಚಿಸುವ ವಿವಿಧ ಪ್ರಕ್ರಿಯೆಗಳು, ಸೇರಿಸುವ ವಸ್ತುಗಳು, ಆಹಾರ ವಸ್ತುಗಳು , ಹಣ್ಣು ತರಕಾರಿಗಳ ವಿವಿಧ ಸಂಯೋಜನೆ
, ಧಾನ್ಯಗಳ ಮಾರ್ಪಾಡು, ಸೌರ ಉಪಕರಣಗಳಿಂದ ನೀರನ್ನು
ಕಾಸುವುದು, ವಿದ್ಯುತ್ ಉಪಕರಣಗಳು, ಪಳೆಯುಳಿಕೆ ಇಂಧನಗಳ ಬಳಕೆ, ಟೂತ್‌ಪೇಸ್ಟ್ ಬಳಸಿ ಬಾಯಿಯಲ್ಲಿ ಬ್ಯಾಕ್ಟೀರಿಯಾ
ನಾಶ. ಇಗೆ ಒಂದೇ ಎರಡೇ ?
ಪ್ರಯಾಣಕ್ಕೆ
ಬಳಸುವ ವಿವಿಧ ಬಗೆಯ ಸಾರಿಗೆ ವ್ಯವಸ್ಥೆ, ಸುಧಾರಿತ ಇಂಧನ ವ್ಯವಸ್ಥೆ , ವಸ್ತುಗಳು ಸಾಗಾಣಿಕೆ, ವಿವಿಧ ಬಗೆಯ ಕೃತಕ ಮತ್ತು ನೈಸರ್ಗಿಕ
ನೂಲುಗಳು , ಅವುಗಳಿಂದ ಬಟ್ಟೆ ಮತ್ತು ಜವಳಿ, ರಂಗುಗಳು, ಲೋಹಗಳ ವೈವಿಧ್ಯಮಯ ಬಳಕೆ, ಮೂಲ ವಿಜ್ಞಾನದಿಂದ
ಬೇರೆಯಾಗಿ ಬೆಳೆದ ತಂತ್ರಜ್ಞಾನ ಇಂದು ಅಂಗಳದಿಂದ ತಿಂಗಳನನ್ನೂ ದಾಟಿ ಹೋಗುವಷ್ಟು ಸಾಮರ್ಥ್ಯ ನೀಡಿದೆ.
ಲಸಿಕೆಗಳ ಬಳಕೆ, ಶಸ್ತ್ರಚಿಕಿತ್ಸೆಯಲ್ಲಿ ಕೃತಕ ಬುದ್ಧಿಮತ್ತೆ ರೊಬೊಟಿಕ್ಸ್ನ ಬಳಕೆ ಆರೋಗ್ಯ ಕ್ಷೇತ್ರದಲ್ಲಿನ ಉತ್ಕ್ರಾಂತಿಗೆ ಕಾರಣವಾಗಿದೆ.
ಇದು ಮಾನವರ
ಜೀವಿತಾವಧಿಯನ್ನೂ ಹೆಚ್ಚಿಸಿದೆ.
ನಾವು
ಬೆಳೆಯುವ
ವಿವಿಧ ಬಗೆಯ
ಉಚ್ಚ ಗುಣಮಟ್ಟದ ಪೋಷಕಾಂಶಗಳುಳ್ಳ ಧಾನ್ಯಗಳು, ರಸಗೊಬ್ಬರಗಳು, ನೀರಾವರಿ ವಿಧಾನಗಳು, ಆಹಾರದ ಬಳಕೆ, ಸಾವಯವ ವಸ್ತುಗಳ ಬಳಕೆ, ಮನೆಯ ಒಳಗೆ ಮತ್ತು ಹೊರಗೆ ಬಳಸುವ ಸಾಬೂನುಗಳು ಮತ್ತು ಮಾರ್ಜಕಗಳು, ಶಾಂಪೂ, ಟೂತ್ ಪೇಸ್ಟ್, ಆಹಾರದ ಸಂರಕ್ಷಕಗಳು ಹುದುಗುವಿಕೆ ಇತ್ಯಾದಿ ಅಂತ್ಯವಿಲ್ಲದ ಅನುಕೂಲಗಳ
ಅನಂತಗಳು ನಮ್ಮ
ಬದುಕಿಗೆ ಹೊಸ ರಂಗು ತುಂಬಿವೆ. ವೈಜ್ಞಾನಿಕ ಸಂಸ್ಕೃತಿಗೆ ಮುನ್ನುಡಿ
ಬರೆದಿವೆ.
ದಿನದಿಂದ ದಿನಕ್ಕೆ ಅಗಣಿತ
ಶಾಖೆಗಳಾಗಿ ಟಿಸಿಲೊಡೆಯುತ್ತಾ ಪ್ರವರ್ಧಮಾನಕ್ಕೆ ಬರುತ್ತಾ ಹೊಸ ಮನ್ವಂತರಕ್ಕೆ ಕಾರಣವಾದ ವಿಜ್ಞಾನಕ್ಕೆ ಅನಂತ ಧನ್ಯವಾದಗಳು,