ಭಾರತ ಕಂಡಂತಹ ಓರ್ವ ಅಪ್ರತಿಮ ಮಹಿಳಾ ಸಾಧಕಿ - ಸುಧಾ ಮೂರ್ತಿ
ಲೇಖಕರು -ಬಿ.ಎನ್.ರೂಪ,
ಕೆಪಿಎಸ್ ಜೀವನ್ ಬಿಮಾ ನಗರ,
ಬೆಂಗಳೂರು ದಕ್ಷಿಣ ವಲಯ -4
ಯಾವುದೇ ಕ್ಷೇತ್ರದಲ್ಲಿ ಮಹಿಳೆಯೊಬ್ಬರು ಉನ್ನತ ಸ್ಥಾನಕ್ಕೆ ಇರುವುದು ಸುಲಭದ ಮಾತಲ್ಲ. ಪುರುಷ ಪ್ರಧಾನ ಸಮಾಜದಲ್ಲಿ ಕೆಲವೊಮ್ಮೆ ತಮ್ಮತನವನ್ನು ಉಳಿಸಿಕೊಂಡು ಸಾಧನೆ ಮಾಡುವುದು ಕಷ್ಟಕರ. ಮಹಿಳೆಯಾಗಿ ತನ್ನ ಕರ್ತವ್ಯದ ಜೊತೆ ಹೊರ ಪ್ರಪಂಚದಲ್ಲಿ ಗುದ್ದಾಡುತ್ತಲೇ ಯಶಸ್ಸಿನ ಮೆಟ್ಟಿಲೇರಬೇಕಾದ ಪರಿಸ್ಥಿತಿ ಹಿಂದೆ ಇತ್ತು. ಇಂದೂ ಸಹ ಇದೆ.
ಆದರೂ ನಮ್ಮಲ್ಲಿ ಅನೇಕ ಮಹಿಳೆಯರು ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ ಇಂಜಿನಿಯರಿಂಗ್, ಸಂಶೋಧನೆ, ಶಿಕ್ಷಣ………, ಹೀಗೆ ಹಲವಾರು ಕ್ಷೇತ್ರಗಳಲ್ಲಿ ತಮ್ಮಚಾಪನ್ನು ಮೂಡಿಸಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಇವರೆಲ್ಲ ನಮ್ಮ ಬದುಕನ್ನು ಕಟ್ಟಿಕೊಳ್ಳಲು ಪ್ರೇರೇಪಕರು, ಮಾರ್ಗದರ್ಶಕರು, ಪ್ರೋತ್ಸಾಹಕರಾಗಿದ್ದಾರೆ ಇವರೇ ನಮ್ಮ ಇಂದಿನ ಹಾಗೂ ಮುಂದಿನ ಪೀಳಿಗೆಗೆ ಆದರ್ಶಪ್ರಾಯರು. ಇವರೇ ನಮ್ಮ ಸಮಾಜದ ನಾಯಕಿ,ನಾಯಕ ಗಳಾಗಿದ್ದಾರೆ, ಚಲನಚಿತ್ರದಲ್ಲಿ ನಟಿಸುವ ನಟಿ ಮಣಿಯರು ಮನೋರಂಜನಕಾರರು ಅಷ್ಟೇ. ಆದರೆ, ನಮ್ಮ ಸಮಾಜದ ಏಳಿಗೆಗೆ ಚುಕ್ಕಾಣಿ ಹಿಡಿದು ಶ್ರಮಿಸುವ ವೈದ್ಯರು, ಶಿಕ್ಷಕರು ,ಇಂಜಿನಿಯರ್, ಸಂಶೋಧನಕಾರರು…… ಹೀಗೆ ಹಲವಾರು ಸ್ವರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅನೇಕ ಮಂದಿ ನಮ್ಮ ನಿಜವಾದ ನಾಯಕಿಯರು ಹಾಗೂ ನಾಯಕರಾಗಿದ್ದಾರೆ.
The President, Smt. Droupadi Murmu presenting the Padma Bhushan Award to Smt. Sudha Murty at the Civil Investiture Ceremony-II at Rashtrapati Bhavan, in New Delhi on April 5, 2023.
ವಿಜ್ಞಾನ ಕ್ಷೇತ್ರದಲ್ಲಿ ಅನೇಕ ಭಾರತೀಯ ಮಹಿಳೆಯರು ಅನ್ವೇಷಣೆ ನಡೆಸಿ, ಉನ್ನತವಾದ ಕೊಡುಗೆಗಳನ್ನು ನೀಡಿ ಅಭಿವೃದ್ಧಿಯ ಚುಕ್ಕಾಣೆ ಹಿಡಿದು ಮುನ್ನಡೆಸುತ್ತಿರುವ ಬಗ್ಗೆ ನಮ್ಮ ಭಾರತ ರಾಷ್ಟ್ರವು ಹೆಮ್ಮೆಪಡುತ್ತದೆ. ನಮ್ಮ ದೇಶದ ಮಹಿಳೆಯರನ್ನು ಸಬಲೀಕರಣಗೊಳಿಸಲು, ಪ್ರೋತ್ಸಾಹಿಸಲು, ಪ್ರೇರೇಪಿಸಲು ಹಲವಾರು ಮಹಿಳೆಯರು ಹಲವಾರು ಕೊಡುಗೆಗಳನ್ನು ನೀಡುತ್ತಿದ್ದಾರೆ. ಇವರಲ್ಲಿ ಪ್ರಮುಖರೆಂದರೆ, ಆನಂದಿಬಾಯಿ ಗೋಪಾಲ್ ರಾವ್, ಜಾನಕಿ ಅಮ್ಮಾಳ್, ಅಸೀಮಾ ಚಟರ್ಜಿ, ಕಲ್ಪನಾ ಚಾವ್ಲಾ, ರಾಜೇಶ್ವರಿ ಚಟರ್ಜಿ, ಡಾ. ಇಂದಿರಾ ಹಿಂದೂಜಾ, ಡಾಕ್ಟರ್ ಅದಿತಿ ಪಂತ್, ನಂದಿನಿ ಹರಿನಾಥ್, ರೇವತಿ ಹರಿಕೃಷ್ಣ, ಉಷಾ, ಕಲ್ಪನಾ ಅರವಿಂದ್…… ಹೀಗೆ ಈ ಪಟ್ಟಿ ಬೆಳೆಯುತ್ತಲೇ ಇದೆ ಇವರೆಲ್ಲರ ಸಂಶೋಧನೆ ಹಾಗೂ ಸಾಧನೆಯಿಂದ ನಾವು ಇಂದು ಇಷ್ಟು ಪ್ರಗತಿ ಸಾಧಿಸಿದ್ದೇವೆ ಇಂಥ ಸಾಧಕಿಯರಲ್ಲಿ ಇತ್ತೀಚೆಗೆ ನನ್ನ ಗಮನಸೆಳೆದವರು ಶ್ರೀಮತಿ ಸುಧಾ ಮೂರ್ತಿ, ಇವರು ಇಂಜಿನಿಯರ್ ಲೋಕೋಪಕಾರಿ ಶಿಕ್ಷಣ ತಜ್ಞರು ಹಾಗೂ ಜನಪ್ರಿಯ ಲೇಖಕರೂ ಆಗಿದ್ದಾರೆ.
ಸುಧಾ ಮೂರ್ತಿಯವರು 19 ಆಗಸ್ಟ್ 1950ರಲ್ಲಿ ಭಾರತದ ಕರ್ನಾಟಕ ರಾಜ್ಯದ ಹಾವೇರಿ ಜಿಲ್ಲೆಯ ಶಿಗ್ಗಾಂವ್ ನಲ್ಲಿ ಕನ್ನಡ ಮಾತನಾಡುವ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ಶಸ್ತ್ರಚಿಕಿತ್ಸಕ, R.H. ಕುಲಕರ್ಣಿ ಹಾಗೂ ತಾಯಿ ಶಾಲಾ ಶಿಕ್ಷಕಿ, ವಿಮಲ ಕುಲಕರ್ಣಿ. ಶೈಕ್ಷಣಿಕವಾಗಿ ಮುಂಚೂಣಿಯಲ್ಲಿ ಇರುವ ಕುಟುಂಬಕ್ಕೆ ಸೇರಿರುವುದರಿಂದ ಇವರಿಗೆ ಚಿಕ್ಕಂದಿನಿಂದಲೇ ಪುಸ್ತಕ ಓದುವ ಅಭ್ಯಾಸ. 10ನೇ ತರಗತಿಯವರೆಗೂ ಕನ್ನಡ ಮಾಧ್ಯಮ ಶಾಲೆಯಲ್ಲಿ ಶಿಕ್ಷಣವನ್ನ ಪಡೆದಿದ್ದಾರೆ.
ಇವರು ಹುಬ್ಬಳ್ಳಿಯಲ್ಲಿರುವ ಬಿವಿಬಿ ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ನಲ್ಲಿ B.E ಪದವಿಯನ್ನು ಪಡೆದರು. ನಂತರ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಿಂದ ಕಂಪ್ಯೂಟರ್ ಸೈನ್ಸ್ ನಲ್ಲಿ ಮಾಸ್ಟರ್ ಆಫ್ ಇಂಜಿನಿಯರಿಂಗ್ ಪದವಿಯನ್ನು 1974 ರಲ್ಲಿ ಪಡೆದರು. ಶೈಕ್ಷಣಿಕ ಸಾಧನೆಗಾಗಿ ಚಿನ್ನದ ಪದವಿಯನ್ನು ಸಹ ಇವರು ಗೆದ್ದಿದ್ದಾರೆ. ಆ ಸಮಯದಲ್ಲಿ ಮಹಿಳೆಯರು ತುಳಿಯದ ಅಸಂಪ್ರದಾಯಿಕ ಹಾದಿಯನ್ನು ತುಳಿದು ಅಸಮಾನ್ಯ ಸಾಧನೆಯನ್ನು ಮಾಡಿದ ಖ್ಯಾತಿ ಇವರದ್ದು.
ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಏಕೈಕ ಮಹಿಳೆಯಾಗಿ, ಸಮಾಜದ ಗಂಡು ಹೆಣ್ಣು ಎಂಬ ಪಕ್ಷಪಾತ ಸಂಪೂರ್ಣ ತಾರತಮ್ಯವನ್ನು ಮೀರಿ, ಕರ್ನಾಟಕದ ಎಲ್ಲಾ ಇಂಜಿನಿಯರಿಂಗ್ ವಿಶ್ವವಿದ್ಯಾನಿಲಯಗಳಿಗೆ ಸೇರಿ ಅತ್ಯಧಿಕ ಅಂಕಗಳನ್ನು ಗಳಿಸಿದ್ದಕ್ಕಾಗಿ ಭಾರತದ ಇಂಜಿನಿಯರಿಂಗ್ ಸಂಸ್ಥೆಯಿಂದ ಚಿನ್ನದ ಪದಕ ಹಾಗೂ ಕರ್ನಾಟಕದ ಮುಖ್ಯಮಂತ್ರಿ ಯಿಂದ ಬೆಳ್ಳಿ ಪದಕವನ್ನು ಪಡೆದಂತಹ ಅಪ್ರತಿಮ ಸಾಧಕರು.
ಇವರು ಟೆಲ್ಕೋ ಸಂಸ್ಥೆಯಲ್ಲಿ ಮೊದಲ ಮಹಿಳಾ ಇಂಜಿನಿಯರ್ ಎಂದು ಪ್ರಸಿದ್ಧರಾಗಿದ್ದಾರೆ .ಇವರು ಕೆಲಸಕ್ಕೆ ಅರ್ಜಿ ಸಲ್ಲಿಸುವಾಗ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಎಂದು ಕರ ಪತ್ರದಲ್ಲಿ ಉಲ್ಲೇಖಿತವಾಗಿದ್ದಾಗ, ಈ ದ್ವಂದ್ವ ನೀತಿಯನ್ನು ಪ್ರಶ್ನಿಸಿ ನೇರವಾಗಿ JRD ಟಾಟಾ ರವರಿಗೆ ಪತ್ರ ಬರೆದರು. ಸ್ವಲ್ಪ ದಿನದ ನಂತರ ಇವರನ್ನು ಸಂದರ್ಶನಕ್ಕೆ ಆಹ್ವಾನಿಸಲಾಯಿತು ನಂತರ, ಆಯ್ಕೆಯಾದ ಮೊದಲ ಮಹಿಳಾ ಇಂಜಿನಿಯರ್ ಎನಿಸಿಕೊಂಡರು.
ಇವರು 1978ರಲ್ಲಿ ನಾರಾಯಣ ಮೂರ್ತಿ ಅವರನ್ನು ವಿವಾಹವಾದರು. ವಿವಾಹದ ವಾರ್ಷಿಕೋತ್ಸವ ಸಂದರ್ಭದಲ್ಲಿ ಪತಿಯವರಾದ ನಾರಾಯಣ್ ಮೂರ್ತಿ ತಮ್ಮ ಕರ್ತವ್ಯಕ್ಕೆ ರಾಜೀನಾಮೆ ಕೊಟ್ಟು ಬಂದು, ಇನ್ಫೋಸಿಸ್ ಅನ್ನುವ ಸಂಸ್ಥೆಯನ್ನು ಮಾಡಬೇಕು ಎಂದಾಗ ತಮ್ಮ ಬಳಿ ಇದ್ದ ಹತ್ತು ಸಾವಿರ ರೂಗಳನ್ನು ಪತಿಯವರಿಗೆ ನೀಡಿ ಪ್ರೋತ್ಸಾಹವನ್ನು ನೀಡಿದಂತಹ ಆದರ್ಶ ಪತ್ನಿ ಎನಿಸಿಕೊಂಡರು. ಈ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ .
1996 ರಲ್ಲಿ ಇವರು ಇನ್ಫೋಸಿಸ್ ಫೌಂಡೇಶನ್ ಅನ್ನು ಸ್ಥಾಪಿಸಿದರು. ಪ್ರತಿಷ್ಠಾನದ ಅಧ್ಯಕ್ಷೆಯಾಗಿ ಭಾರತಾದ್ಯಂತ ಹಲವಾರು ಶಾಲೆಗಳು ಆಸ್ಪತ್ರೆಗಳು ಅನಾಥಾಶ್ರಮವನ್ನು ಸ್ಥಾಪಿಸಿದ್ದಾರೆ .ಮಹಿಳಾ ಸಬಲೀಕರಣಕ್ಕಾಗಿ ಪ್ರಮುಖ ಕೊಡುಗೆ ಎಂದರೆ ದೇವದಾಸಿ ಸಮುದಾಯದ ಮಹಿಳೆಯರೊಂದಿಗೆ ವ್ಯಾಪಕವಾಗಿ ಕೆಲಸ ಮಾಡಿ ಅವರಿಗೆ ಪುನರ್ವಸತಿಯನ್ನು ಕಲ್ಪಿಸಿ ಕೊಟ್ಟಿದ್ದಾರೆ.
ಸಾಮಾಜಿಕ ಕಾರ್ಯಗಳಿಗೆ ಹಲವಾರು ಗಮನಾರ್ಹ ಪ್ರಶಸ್ತಿಗಳನ್ನು ಪಡೆದಿದ್ದಾರೆ .ಇವರ ಅತ್ಯುತ್ತಮ ಬರಹಗಾರ್ತಿಯು ಹೌದು .ಇವರ ಗಮನಾರ್ಹ ಕೃತಿಗಳೆಂದರೆ
, ʼಮಹಾಶ್ವೇತʼ ,ʼಡಾಲರ್ ಬಹುʼ, ʼನನ್ನ ಅಜ್ಜಿಗೆ ನಾನು ಓದಲು ಹೇಗೆ ಕಲಿಸಿದೆʼ, ʼಯಶಸ್ಸುʼ ,ಕಂಪ್ಯೂಟರ್ ಲೋಕದಲ್ಲಿ,…. ಹೀಗೆ, 40ಕ್ಕೂ ಹೆಚ್ಚು ಬರಹಗಳನ್ನು ಕನ್ನಡ ,ಇಂಗ್ಲಿಷ್ ,ಮರಾಠಿ ಭಾಷೆಗಳಲ್ಲಿ ಬರೆದಿದ್ದಾರೆ.ತಮ್ಮ ಸಾಮಾಜಿಕ ಕಾರ್ಯಗಳಿಗಾಗಿ ಹಲವಾರು ಪ್ರಶಸ್ತಿಗಳನ್ನು ಇವರು ಗಳಿಸಿದ್ದಾರೆ. ಅವುಗಳಲ್ಲಿ ಪ್ರಮುಖವಾದುವು, 2006ರಲ್ಲಿ ಪದ್ಮಶ್ರೀ ಪ್ರಶಸ್ತಿ, 2023ರಲ್ಲಿ ಪದ್ಮಭೂಷಣ ಪ್ರಶಸ್ತಿ, ರಾಜ್ಯಲಕ್ಷ್ಮಿ ಪ್ರಶಸ್ತಿ, ಬಾಲ ಸಾಹಿತ್ಯ ಪುರಸ್ಕಾರ ಪ್ರಶಸ್ತಿ ,ಗ್ಲೋಬಲ್ ಇಂಡಿಯನ್ ಪ್ರಶಸ್ತಿ, ಇತ್ಯಾದಿ. ಸಾಮಾಜಿಕ ಕಾರ್ಯ ಹಾಗೂ ಶಿಕ್ಷಣಕಾಗಿ ನೀಡಿದ ಕೊಡುಗೆಗಾಗಿ ಇವರನ್ನು ಮಾರ್ಚ್ 8- 2024 ರಂದು ಸಂಸತ್ ಸದಸ್ಯರಾಗಿ ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಯಿತು.
74ರ ವಯಸ್ಸಿನಲ್ಲೂ ಅವರ ಉತ್ಸಾಹ ಎಂತವರನ್ನು ಮರಳು ಮಾಡುತ್ತದೆ. ಒಬ್ಬ ವ್ಯಕ್ತಿಯ ಜೀವಿತಾವಧಿಯಲ್ಲಿ ಇಷ್ಟೊಂದು ಸಾಧನೆ, ಸಾಧ್ಯವೇ ? ಅನ್ನುವ ಪ್ರಶ್ನೆ ಇರುವುದು ಸಹಜ .ಆದರೂ ಇವರು ನಮ್ಮ ಕಣ್ಮುಂದೆ ಇರುವಂತಹ ಅಪ್ರತಿಮ ಸಾಧಕರು .ಇವರು ನಮಗಷ್ಟೇ ಅಲ್ಲ ಮುಂದಿನ ಪೀಳಿಗೆಗೂ ಸಹ ರೋಲ್ ಮಾಡೆಲ್, ಆದರ್ಶಪ್ರಾಯರು ಆಗಿದ್ದಾರೆ. ಇವರ ಸಾಧನೆ ಅನುಕರಣೆಯವೂ ಹೌದು.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಹೊಸಲಿನಲ್ಲಿರುವ ಎಲ್ಲಾ ಮಹಿಳೆಯರಿಗೂ ಮಹಿಳಾ ದಿನಾಚರಣೆಯ ಹಾರ್ದಿಕ ಶುಭಾಶಯಗಳು ಅಭಿನಂದನೆಗಳನ್ನು ಸಲ್ಲಿಸುತ್ತಾ, ಹೀಗೆ ಹತ್ತು ಹಲವಾರು ಸಾಧಕರನ್ನ ಅವರ ಕಾಯಕಗಳನ್ನ ಸ್ವಲ್ಪ ಮಟ್ಟಿಗಾದರೂ ಇತರ ಮಹಿಳೆಯರು ಅನುಕರಿಸಲಿ ಎಂದು ಹಾರೈಸುತ್ತೇನೆ.
Sooper dear👍🙏🙏
ReplyDelete