ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Monday, August 4, 2025

ವಿಜ್ಞಾನ ಬೋಧನೆಗೆ ಸಿಮ್ಯುಲೇಶನ್ ಗಳು

 ವಿಜ್ಞಾನ ಬೋಧನೆಗೆ ಸಿಮ್ಯುಲೇಶನ್ ಗಳು

ಲೇಖಕರು:    ಗಜಾನನ ಎನ್. ಭಟ್ಟ (ಹವ್ಯಾಸಿ ಲೇಖಕರು, ವಿಜ್ಞಾನ ಶಿಕ್ಷಕರು)

             ಸರಕಾರಿ ಪ್ರೌಢಶಾಲೆ, ಉಮ್ಮಚಗಿ, ಯಲ್ಲಾಪುರ ತಾ. ಶಿರಸಿ, ಉತ್ತರ ಕನ್ನಡ.

ಇಂದು ಶೈಕ್ಷಣಿಕ ವ್ಯವಸ್ಥೆ ಹೊಸತನಕ್ಕೆ ತನ್ನನ್ನು ತೆರದುಕೊಳ್ಳುತ್ತಿದೆ.ಕಲಿಕಾಸಕ್ತರಿಗೆ ಹೊಸದನ್ನು ನೀಡಲು ಶಿಕ್ಷಣ ವ್ಯವಸ್ಥೆಯ ಭಾಗಿದಾರರು ಸದಾ ತಮ್ಮನ್ನು ಅಣಿಗೊಳಿಸಕೊಳ್ಳ ಬೇಕಾದದ್ದು ಅನಿವಾರ್ಯ.ಇದಕ್ಕಾಗಿ ನಿರಂತರ ಶ್ರಮ ಹಾಕುವುದು ಶಿಕ್ಷಣ ರಂಗಕ್ಕೆ ನ್ಯಾಯ ಒದಗಿಸಲು ತೀರಾ ಅಗತ್ಯವಾಗಿದೆ.

ಇತರ ವಿಷಯಗಳಿಗಿಂತ ವಿಜ್ಞಾನ ಬೋಧಕನಿಗೆ ತನ್ನ ತರಗತಿಯನ್ನು ಹೆಚ್ಚು ಆಧುನಿಕತೆಗೆ ಅನುಗುಣವಾಗಿ ನಾವೀನ್ಯತೆಗೆ ತೆರೆದುಕೊಳ್ಳಲು ಅವಕಾಶವಿದೆ.ಇದಕ್ಕಾಗಿ ಪ್ರಯೋಗ ಉಪಕರಣಗಳು, ತಂತ್ರಜ್ಞಾನ ಅಳವಡಿಕಾ ಬೋಧನೆಗೆ ಒತ್ತು ನೀಡಿ ಮಗುವನ್ನು ವಿಜ್ಞಾನ ಲೋಕಕ್ಕೆ ಸೆಳಯಬಹುದಾಗಿದೆ.ಇತ್ತಿತ್ತಲಾಗಿ ವಿಜ್ಞಾನ ಬೋಧನೆಯಲ್ಲಿ ಸಿಮ್ಯುಲೇಶನ್‌ ಗಳು ಪ್ರಮುಖ ಪಾತ್ರ ವಹಿಸುತ್ತಿದೆ.

ಸಿಮ್ಯುಲೇಶನ್ ಗಳು‌ ಎಂದರೇನು..?

ಅಂತರ್ಜಾಲ ಸಹಿತವಾಗಿ ಅಥವಾ ಡೌನ್ಲೋಡ್ ಮಾಡಿಕೊಂಡು ವಿಜ್ಞಾನ ದ ಕೆಲವು ಪರಿಕಲ್ಪನೆಗಳ ಮೂರ್ತ ಕಲ್ಪನೆಯನ್ನು ,ನೈಜ ಅನುಭವವನ್ನು ಮಕ್ಕಳಿಗೆ ಒದಗಿಸುವುದೆ ಸಿಮ್ಯುಲೇಶನ್‌ ಗಳಾಗಿವೆ.ಇವುಗಳ ನೆರವಿನಿಂದ ಅಂತರ್ಜಾಲ ವ್ಯವಸ್ಥೆ ಇಲ್ಲದ ಸಂದರ್ಭಗಳಲ್ಲೂ ಮಗುವು ವಿಷಯದ ಕುರಿತಾಗಿ ಪ್ರಾಯೋಗಿಕ ಅನುಭವಗಳನ್ನು ಪಡೆಯಲು ಸಾಧ್ಯವಿದೆ. ವಿಜ್ಞಾನದ ಪ್ರತಿಯೊಂದು ಪರಿಕಲ್ಪನೆಗಳಿಗೆ ಮೂರ್ತ ಅನುಭವ ನೀಡುವುದರಿಂದ ವಿಷಯದ ಕುರಿತು ಹಚ್ಚಿನ ಕುತೂಹಲಿಗಳಾಗುವಂತೆ ಮಕ್ಕಳನ್ನು ರೂಪಿಸಬಹುದು.

ಸಿಮ್ಯುಲೇಶನ್‌ ವಿಧಗಳು..

ಸಿಮ್ಯುಲೇಶನ್‌ ಗಳು ಬಳಕೆಯಾಗುವ ರೀತಿ, ಬಳಕೆಯಾಗುತ್ತಿರುವ ವಿಜ್ಞಾನದ ವಿಭಾಗಕ್ಕನುಗುಣವಾಗಿ ಈ ಕೆಳಗಿನ ವಿಭಾಗಗಳಾಗಿ ವಿಂಗಡಿಸಬಹುದು...

1)PhET  OLabs:ಇವು ವಿವಿಧ ವಿಜ್ಞಾನದ ಪ್ರಯೋಗಗಳ ನೈಜ ಅನುಭವ ಒದಗಿಸುತ್ತದೆ. ಮಕ್ಕಳು ಪ್ರಯೋಗಾಲಯದಲ್ಲಿ ಸ್ವತಃ ಉಪಕರಣಗಳನ್ನು ಬಳಸಿ ಪ್ರಯೋಗ ಮಾಡಿದ ಅನುಭವವನ್ನು ಇಲ್ಲಿ ಪಡೆಯುತ್ತಾರೆ. ಪ್ರಯೋಗಾಲಯದ ಕೊರತೆ ಇರುವ ಕಡೆ ಅಥವಾ ಯುಕ್ತ ಪ್ರಮಾಣದ ಪ್ರಯೋಗ ‌ಸಾಮಗ್ರಿಗಳು ಇಲ್ಲದಿರುವ ಕಡೆ ಬಳಸಬಹುದು.ಆಮ್ಲ ಪ್ರತ್ಯಾಮ್ಲ ವರ್ತನೆಯ ಅಧ್ಯಯನ ,ಬೆಳಕು ,ವಕ್ರೀಭವನ ಮುಂತಾದ ಪರಿಕಲ್ಪನೆಗಳ ಮೇಲಿನ ಪ್ರಯೋಗ ಅಧ್ಯಯನ ಹಾಗೂ ರೇಖಾಗಣಿತದ ಮಾದರಿ ತೆಯಾರಿಕೆಗೆ ಅಗತ್ಯ ಸೂಕ್ತ ಸಿಮ್ಯುಲೇಶನ್‌ ಗಳನ್ನು ಒದಗಿಸುತ್ತದೆ.



2) LabXchange: ತಾಂತ್ರಿಕ ವಿಷಯಗಳ ಕುರಿತಾದ ಅಧ್ಯಯನಕ್ಕೆ ಇವು ಅತ್ಯಂತ ಸೂಕ್ತವಾಗಿದೆ.ಯಂತ್ರದ ಭಾಗಗಳು,ಅವುಗಳ ಕಾರ್ಯವಿಧಾನದ, ಅವುಗಳ ಜೋಡನೆಯ ಕುರಿತಾದ ಅಧ್ಯಯನಕ್ಕೆ ಅತ್ಯಂತ ಸೂಕ್ತ..

3)Virtual Labs:ಇದು ಸಂಪೂರ್ಣವಾಗಿ ಅಂತರ್ಜಾಲ ನಿಯಂತ್ರಿತ ಸಿಮ್ಯುಲೇಶನ್‌ ಆಗಿದೆ.ವಿಜ್ಞಾನ ಉಪಕರಣಗಳ ಜೋತೆ ನೈಜ ಅಂತಕ್ರಿಯೆ ನಡೆಸಲು ಸಹಾಯಕ.

ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ ಸಿಮ್ಯುಲೇಶನ್‌ ಅನುಕೂಲತೆಗಳು...

ತಾಂತ್ರಕತೆ ಅಭಿವೃದ್ಧಿ ಹೊಂದಿದಂತೆ ಬೋಧನಾ ಪ್ರಕ್ರಿಯೆಯನ್ನು ಮೇಲ್ದರ್ಜೆಗೆರಿಸಿಕೊಳ್ಳುವುದು, ಕಲಿಕಾ ವಾತಾವರಣವನ್ನು ಆಕರ್ಷಿತಗೊಳಿಸುವುದು  ಮತ್ತು ವಿಷಯ ವಿಸ್ತಾರಗೊಳಿಸುವುದು ತೀರಾ ಅನಿವಾರ್ಯವಾಗಿದೆ.ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ವಿಶೇಷವಾಗಿ ವಿಜ್ಞಾನ ಬೋಧನೆಯಲ್ಲಿ ಸಿಮ್ಯುಲೇಶನ್‌ ಗಳನ್ನು ಅಳವಡಿಸಿಕೊಂಡರೆ ಈ ಕೆಳಗಿನ ಕೆಲವು ಪ್ರಯೋಜನಗಳನ್ನು ಕಾಣಬಹುದು...

1) ಸುಲಭವಾಗಿ ವಿಷಯ ಸಂಪದೀಕರಣಗೊಳಿಸಿ ವಿಷಯದಲ್ಲಿ ಆಸಕ್ತಿ ಕೆರಳಿಸಬಹುದು.

2) ಇವುಗಳು ವಿಜ್ಞಾನ ಬೋಧನೆಗೆ ಅತೀ ಉಪಯುಕ್ತವಾಗಿದ್ದು ಕ್ಲಿಷ್ಟ ಪರಿಕಲ್ಪನೆಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಹಾಯಕ.

3) ಕೆಲವು ಸಿಮ್ಯುಲೇಶನ್‌ ಗಳನ್ನು ಅಂತರ್ಜಾಲ ಅಗತ್ಯ ವಿಲ್ಲದೇ ಸುಲಭವಾಗಿ ಬಳಸಬಹುದಾಗಿದ್ದರಿಂದ ಗ್ರಾಮೀಣ ಪ್ರದೇಶದ  ವಿದ್ಯಾರ್ಥಿಗಳು ಅಂತರ್ಜಾಲ ರಹಿತ ಪ್ರದೇಶದಲ್ಲೂ ಸುಲಭವಾಗಿ ಬಳಸಬಹುದು.

4) ಪ್ರಯೋಗ ಶಾಲೆ ಇಲ್ಲದ ಕಡೆ ವಿಜ್ಞಾನ ಪ್ರಯೋಗಗಳ ನೈಜ ಅನುಭವವನ್ನು ಮಕ್ಕಳಿಗೆ ಒದಗಿಸಬಹುದು.

5)ಶಿಕ್ಷಕರು ರಜೆ ಅಥವಾ ತರಬೇತಿಯಲ್ಲಿದ್ದಾಗಿ ಅವರ ಅನುಪಸ್ಥಿತಿಯಲ್ಲಿ ವಿಜ್ಞಾನ ಪರಿಕಲ್ಪನೆಗಳ ಸ್ಪರ್ಶವನ್ನು ವಿದ್ಯಾರ್ಥಿಗಳಿಗೆ ಒದಗಿಸಬಹುದು.

6) ಮಗುವಿನಲ್ಲಿ ಸಮಸ್ಯಾ ಪರಿಹಾರ ,ತಾರ್ಕಿಕ ಕೌಶಲ್ಯ ಬೆಳೆಸುತ್ತದೆ.

7) ಕಣ್ಣಿಗೆ ಕಾಣದ ಪರಿಕಲ್ಪನೆಗಳಾದ ಜೀವಕೋಶ, ಪರಮಾಣು,ಅಣು ಮುಂತಾದ ಪರಿಕಲ್ಪನೆಗಳಿಗೆ ಮೂರ್ತ ರೂಪ ನೀಡುತ್ತದೆ.

8 ) ವಿಜ್ಞಾನದ ಪರಿಕಲ್ಪನೆಯನ್ನು ಸಂಕೀರ್ಣತೆಯಿಂದ ಸುಲಭದಕಡೆಗೆ ಕೊಂಡೊಯ್ಯಲು ಸಹಕಾರಿ.

9)ಅಂತರ್ಜಾಲದಲ್ಲಿ ಇವು ಸಂಪೂರ್ಣ ಉಚಿತವಾಗಿದ್ದು ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಭೂ ವಿಜ್ಞಾನದ ಕುರಿತಾಗಿ ಹೆಚ್ಚಿನ  ಮಾಹಿತಿ ಒದಗಿಸುತ್ತದೆ.

10)ಫಲಿತಾಂಶ ಉತ್ತಮ ಪಡಿಸಲು, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಷಯಕ್ಕೆ ಪೂರಕವಾದ ಮಾಹಿತಿ ನೀಡಲು ತುಂಬಾ ಸಹಕಾರಿ.

11) ವಿವಿಧ ವಿಜ್ಞಾನದ ಮಾದರಿಗಳನ್ನು ತಯಾರಿಸಲು ಸಿಮ್ಯುಲೇಶನ್‌ ಬಳಸಬಹುದು.

 ಹೀಗೆ ಸಿಮ್ಯುಲೇಶನ್ ವಿಜ್ಞಾನ ಬೋಧನೆಯಲ್ಲಿ ಮಗುವಿನ ಕಲಿಕಾ ಜ್ಞಾನ ಹೆಚ್ಚಿಸಲು ಪೂರಕವಾಗಿ ಸಹಾಯ ಮಾಡುವಲ್ಲಿ ಬೋಧಕನಿಗೆ ಬೆನ್ನೆಲುಬಾಗಿ ನಿಲ್ಲುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.ಬೋಧಕನ ಕೌಶಲ್ಯದ ಆಧಾರ ಹಾಗೂ ಸಮಯ ಹೊಂದಾಣಿಕೆ ಮಾಡಿಕೊಂಡು ಯುಕ್ತ ರೀತಿಯಲ್ಲಿ ಬಳಸಿದಾಗ ಇದೊಂದು ಪರಿಪೂರ್ಣ ಕಲಿಕಾ ಸಾಮಗ್ರಿ ಯಾಗುವಲ್ಲಿ ಯಾವುದೇ ಸಂಶಯವಿಲ್ಲ.

1 comment:

  1. ತುಂಬ ಚೆನ್ನಾಗಿದೆ...ಸರಳವಾಗಿ ಮತ್ತು ಅರ್ಥಬದ್ದ ಲೇಖನ

    ReplyDelete