ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Thursday, September 4, 2025

ನಾವು ನಮ್ಮ ಮೆದುಳಿನ ಸಾಮರ್ಥ್ಯದಲ್ಲಿ ಪ್ರತಿಶತ ಎಷ್ಟನ್ನು ಬಳಸುತ್ತಿದ್ದೇವೆ ?

 

ನಾವು ನಮ್ಮ ಮೆದುಳಿನ ಸಾಮರ್ಥ್ಯದಲ್ಲಿ ಪ್ರತಿಶತ ಎಷ್ಟನ್ನು ಬಳಸುತ್ತಿದ್ದೇವೆ ?

            ಲೇಖಕರು :     ಬಿ.ಎನ್.ರೂಪ

                                  ಸಹಶಿಕ್ಷಕರು,

                                  ಕೆ.ಪಿ.ಎಸ್‌ . ಜೀವನ್‌ ಭೀಮನಗರ

                                  ಬೆಂಗಳೂರುದಕ್ಷಿಣ ವಲಯ-4


ನಮ್ಮ ದೇಹದಲ್ಲಿ ಇರುವ ಪ್ರತಿಯೊಂದು ಅಂಗ ಹಾಗು ಅದರ ಕಾರ್ಯವ್ಯಾಪ್ತಿ ವರ್ಣನಾತೀತ. ಅತ್ಯಂತ ಪ್ರಮುಖ ಅಂಗವಾದ ಮೆದುಳು ದೇಹದ ಎಲ್ಲಾ ಕಾರ್ಯ ಚಟುವಟಿಕೆಗಳನ್ನು ನಿಯಂತ್ರಿಸಿ ಎಲ್ಲಾ ಅಂಗಗಳ ನಡುವೆ ಸಮನ್ವಯ ಸಾಧಿಸಿ ಸೂಕ್ತ, ನಿರ್ದಿಷ್ಟ, ನಿಖರ,ಪ್ರತಿಕ್ರಿಯೆ ನೀಡುವಂತೆ ಮಾಡುತ್ತದೆ.

ಸಂಕೀರ್ಣ ಯೋಚನೆ, ತಾರ್ಕಿಕ ಚಿಂತನೆ, ತರ್ಕಬದ್ದವಾದ ಮಂಡನೆ, ಸರಿ ತಪ್ಪುಗಳ,ಸಾಧಕ ಭಾದಕಗಳ ಆಲೋಚನೆ, ಬುದ್ಧಿವಂತಿಕೆ,ಗುರಿಸಾಧನೆ,ಸ್ಮರಣೆ,ಪ್ರಜ್ಞೆ,ಸಂಗ್ರಹಿಸಿದ ಮಾಹಿತಿಗಳ ರವಾನೆ……. ಒಂದೇ, ಎರಡೇ. ನಮ್ಮ ನಿಲುಕಿಗೆ ಬಾರದ ಅಪಾರ ಕಾರ್ಯ ವ್ಯಾಪ್ತಿಯನ್ನು ನಿರ್ವಹಿಸುವ ಅಂಗವೇ ಮೆದುಳು. ಅಪಾರ ಬುದ್ಧಿಮತ್ತೆ ಹೊಂದಿರುವ ನಾವು ಮಿದುಳಿನ ಸಹಾಯದಿಂದ ಹಲವಾರು ಸಂಕೀರ್ಣ ಚಟುವಟಿಕೆಗಳನ್ನು ಏಕಕಾಲದಲ್ಲಿ  ನಿರ್ವಹಿಸುತ್ತೇವೆ. ಮಾನವನ ಮೆದುಳು ಏನನ್ನಾದರೂ ಸಾಧಿಸಬಹುದು ಇದಕ್ಕೆ ಮಿತಿ ಇಲ್ಲ.

ಮೆದುಳಿನ ಹತ್ತು ಪ್ರತಿಶತ ಪುರಾಣದ ಪ್ರಕಾರ ಮೆದುಳಿನ 10ನೇ ಒಂದು ಭಾಗವನ್ನು ಮಾತ್ರ ಬಳಸುತ್ತಾರೆ ಎಂದು ಹೇಳುತ್ತದೆ. ಆದರೆ, ಮೆದುಳಿನ ಅಧ್ಯಯನ ಮ್ಯಾಪಿಂಗ್ ಆಧಾರದ ಮೇಲೆ ಮೆದುಳಿನ ಎಲ್ಲಾ ಪ್ರದೇಶಗಳು ಒಂದಲ್ಲ ಒಂದು ಕಾರ್ಯವನ್ನು ಹೊಂದಿವೆ ಮತ್ತು ಅವುಗಳನ್ನು ಬಹುತೇಕ ಎಲ್ಲಾ ಸಮಯದಲ್ಲೂ ಬಳಸಲಾಗುತ್ತದೆ ಎಂದು ಸೂಚಿಸುತ್ತದೆ.

 ಹತ್ತರ ಪ್ರತಿಶತ ಪುರಾಣದ ಪ್ರವರ್ತಕರು ಹಾರ್ವರ್ಡ್ಮನ ಸ್ಶಾಸ್ತ್ರಜ್ಞರಾದ ವಿಲಿಯಂ ಜೇಮ್ಸ್ ಮತ್ತು‌ ಬೋರಿಸ್ಸಿಡೀಸ್ ಇದನ್ನು ಶಕ್ತಿ ಸಿದ್ಧಾಂತವಾಗಿ ಪ್ರತಿಪಾದಿಸಿದರು .ದಶಕದ ಸ್ವಸಹಾಯ ಚಳುವಳಿಯಲ್ಲಿ ಪ್ರಸಾರವಾಗುವ ಮೂಲಕ ಈ ಪರಿಕಲ್ಪನೆಯು ಜನಪ್ರಿಯವಾಯಿತು. ವಿಜ್ಞಾನಿಗಳು ಮತ್ತು ಮನಶಾಸ್ತ್ರಜ್ಞರು ನಾವು ನಮ್ಮ ಮೆದುಳಿನ ಶಕ್ತಿಯ 10 ಪ್ರತಿಶತವನ್ನುಮಾತ್ರಬಳಸುತ್ತೇವೆಎಂದುಹೇಳುತ್ತಾರೆ. 1932ರ ಸಣ್ಣ ಕಥೆಯಲ್ಲಿ ವೈಜ್ಞಾನಿಕ ಕಾದಂಬರಿ ಬರಹಗಾರ ಮತ್ತು ಸಂಪಾದಕರಾದ ಜಾನ್ ಡಬ್ಲ್ಯೂ ಕ್ಯಾಂಪ್ಬೆಲ್ ಇತಿಹಾಸದಲ್ಲಿ ಯಾವುದೇ ಮನುಷ್ಯನು ತನ್ನ ಮೆದುಳಿನ ಅರ್ಧದಷ್ಟು ಆಲೋಚನಾ ಭಾಗವನ್ನು ಸಹ ಬಳಸಲು ಸಾದ್ಯವಾಗಿಲ್ಲ ಎಂದು ಬರೆದಿದ್ದಾರೆ.



 ಹೀಗೆ ಹಲವಾರು ಮನಶಾಸ್ತ್ರಜ್ಞರು ಬರಹಗಾರರು ತಮ್ಮ ಲೇಖನಗಳಲ್ಲಿ ಇದಕ್ಕೆ ಪುಷ್ಠಿಕೊಡುವಂತೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುತ್ತಾರೆ.  ಆದರೆ, ಸಂಶೋಧನೆಗಳು ಮಾನವ ತನ್ನ ಮೆದುಳಿನ ಹೆಚ್ಚಿನ ಭಾಗವನ್ನು ಬಳಸುತ್ತಾನೆ ಎಂದು ಸೂಚಿಸುತ್ತದೆ.

ಮಾನವನ ಮೆದುಳು ಸುಮಾರು ಒಂದುವರೆ ಕೆಜಿ ತೂಕವಿದ್ದು, ಅಂದಾಜು ನೂರು ಬಿಲಿಯನ್‌ ನ್ಯೂರಾನ್‌ಗಳನ್ನು ಹೊಂದಿರುತ್ತದೆ. 2013ರ ಒಂದು ಸಮೀಕ್ಷೆಯ ಪ್ರಕಾರ 65 ಪ್ರತಿಶತ ಅಮೆರಿಕನರು ತಮ್ಮ ಮೆದುಳಿನ ಕೇವಲ 10 ಪ್ರತಿಶತವನ್ನು ಮಾತ್ರ ಬಳಸುತ್ತೇವೆ ನಂಬುತ್ತಾರೆ. ಆದರೆ ಇದು ಕೇವಲ ಒಂದು ಪುರಾಣ. ಮಾನವನ ಮೆದುಳು ನಂಬಲಾರದಷ್ಟು ಸಂಕೀರ್ಣ ಉನ್ನತ ಮಠದ ಕಾರ್ಯವ್ಯಾಪ್ತಿಯನ್ನು ಹೊಂದಿದೆ  ನಮ್ಮ ಮೆದುಳು ಕೇವಲ ಶೇಕಡ 10 ರಷ್ಟು ಮಾತ್ರರವಲ್ಲ, ಒಂದು ಸಣ್ಣ ಕಾರ್ಯವನ್ನು ನಿರ್ವಹಿಸಲು ಅತ್ಯಧಿಕ ಪ್ರಮಾಣದ ಸಂಕೀರ್ಣ ಚಟುವಟಿಕೆಗಳನ್ನು ಒಳಗೊಂಡಿರುವುದನ್ನು ಆಧುನಿಕ ವಿಜ್ಞಾನದ ಹಲವಾರು ಸಂಶೋಧನೆಗಳು ತೋರಿಸಿಕೊಟ್ಟಿವೆ.

ನರವಿಜ್ಞಾನಿ ಬ್ಯಾರಿ ಗಾರ್ಡನ್ ಅವರ ಪ್ರಕಾರ ಮೆದುಳಿನ ಬಹುಪಾಲು ಭಾಗವು ಯಾವಾಗಲೂ ಸಕ್ರಿಯವಾಗಿರುತ್ತದೆ..

ಮೆದುಳಿನ ಚಟುವಟಿಕೆವ್ಯಾಪಕವಾಗಿದೆಎಂದು MR ಮತ್ತು PET ಚಿತ್ರಣಗಳು ತೋರಿಸಿವೆ

ಸಕ್ರಿಯ ಮ್ಯಾಗ್ನೆಟಿಕ್‌ ರೆಸೋನೆನ್ಸ್ ಇಮೇಜಿಂಗ್ ಎಂದು ಕರೆಯಲ್ಪಡುವ ಮೆದುಳಿನ ಚಿತ್ರಣ ತಂತ್ರವು ವ್ಯಕ್ತಿಯು ವಿಭಿನ್ನ ಕಾರ್ಯಗಳನ್ನು ನಿರ್ವಹಿಸುತ್ತಿರುವಾಗ ಮೆದುಳಿನಲ್ಲಿ ನಡೆಯುವ ಚಟುವಟಿಕೆಗಳನ್ನು ಅಳೆಯುವ ವಿಧಾನವಾಗಿದೆ. ಒಂದು ಸರಳವಾದ ಕ್ರಿಯೆಯನ್ನು ಮಾಡುವಾಗ ಸಹ ನಮ್ಮ ಮೆದುಳಿನ ಹೆಚ್ಚಿನ ಸಮಯ ಬಳಕೆಯಲ್ಲಿದೆ ಎಂದು ಸಂಶೋಧಕರು ಅಬಿಪ್ರಾಯ ಪಡುತ್ತಾರೆ.

ನಮ್ಮ ಮೆದುಳಿನಲ್ಲಿ ಅಸ್ಪಷ್ಟವಾದ ಮೂಕ ಪ್ರದೇಶಗಳಿವೆ ಎಂದು ದಶಕಗಳಿಂದ ನಂಬಲಾಗಿತ್ತು. ಮುಂಭಾಗದ ಹಾಲೆಗಳು, ಕಪಾಲಭಿತ್ತಿಯ ಹಾಲೆಗಳು ಸಮಗ್ರತೆ, ಅಮೂರ್ತ ಚಿಂತನೆ, ಹೊಂದಿಕೊಳ್ಳುವಿಕೆ, ನಿರ್ಧಾರ ತೆಗೆದುಕೊಳ್ಳುವಿಕೆ, ತಾರ್ಕಿಕ ಯೋಜನೆಯಲ್ಲಿ ತೊಡಗಿಸಿಕೊಂಡಿರುವುದು ಕಂಡುಬರುತ್ತದೆ.

ಹೆಚ್ಚಿನ ಶಕ್ತಿಯ ಬಳಕೆ:-

ಮಾನವ ಮೆದುಳಿನಲ್ಲಿರುವ 86 ಬಿಲಿಯನ್‌ ದಟ್ಟವಾಗಿ ಪ್ಯಾಕ್‌ ಮಾಡಲಾದ ನರಕೋಶಗಳು ಸಂದೇಶಗಳನ್ನು ವಿದ್ಯುತ್‌ ಸಂಕೇತಗಳಾಗಿ ಪರಿವರ್ತಿಸಲು ಪ್ರತಿನಿಮಿಷಕ್ಕೆ  3x1024  atp ಅನ್ನುಬಳಸುತ್ತವೆ ಎಂದು ಅಂಧಾಜಿಸಲಾಗಿದೆ. ಮಾನವನ ಮೆದುಳು ದೇಹದ ಒಟ್ಟಾರೆ ಶೇಕಡ 50ರಷ್ಟು ಗ್ಲುಕೋಸ್ 20ರಷ್ಟು ಆಕ್ಸಿಜನನ್ನು ಬಳಸುವ ಒಂದು ಅದ್ಭುತ ಅಂಗವಾಗಿದೆ ಇದು, ಮಾನವನ ಮೆದುಳಿನ ಕಾರ್ಯ ವೈಖರಿಯನ್ನು ಸೂಚಿಸುವ ಅಂಶವಾಗಿದೆ ನಾವು ನಮ್ಮ  ಮೆದುಳನ್ನು ಶೇಕಡಾ ನೂರರಷ್ಟು ಬಳಕೆ ಮಾಡುತ್ತೇವೆ ಆದರೆ, ಎಲ್ಲಾ ಭಾಗಗಳನ್ನೂ ಒಮ್ಮೆಗೇ ಅಲ್ಲ, ನಾವು ನಿದ್ರಿಸುತ್ತಿರುವಾಗಲೂ ನಮ್ಮ ಮೆದುಳು ಕಾರ್ಯೋನ್ಮುಖವಾಗಿರುತ್ತದೆ.

ವಿಕಾಸಾತ್ಮಕ ದೃಷ್ಟಿಕೋನ.

ಮಾನವನ ವಿಕಾಸದ ಇತಿಹಅಸವನ್ನು ಅಧ್ಯಯನವನ್ನು ಮಾಡಿದಾಗ ಮಾನವನ ಮೆದುಳಿನ ಗಾತ್ರ ಹಾಗೂ ಸಾಂದ್ರತೆಯಲ್ಲಿ ಹೆಚ್ಚಳ ಆಗಿರುವುದನ್ನು ಸ್ಪಷ್ಟವಾಗಿ ನಿರೂಪಿಸುತವಾಗಿದೆ.

ಮೆದುಳಿನ. ಒಂದು ಸಣ್ಣ ಭಾಗವು ಹಾನಿಗೊಳಗಾಗಿದ್ದರೂ ಸಹ ಆ ಕಾರ್ಯವು ಸಂಪೂರ್ಣವಾಗಿ ದುರ್ಬಲಗೊಳ್ಳುತ್ತದೆ. ಮೆದುಳಿನ ಪೂರ್ಣ ಸಾಮರ್ಥ್ಯವನ್ನು ಪಡೆಯಲು ನಾವು ಈ ಕೆಳಗಿನ ಮಾರ್ಗಗಳನ್ನು ಅನುಸರಿಸಬಹುದು:-

1. ದೈನಂದಿನ ವ್ಯಾಯಾಮ, ನಡಿಗೆ, ಬೈಕಿಂಗ್, ಏರೋಬಿಕ್ ಚಟುವಟಿಕೆಗಳು,

2. ಸ್ನೇಹಿತರು ಮತ್ತು ಪ್ರೀತಿ ಪಾತ್ರರೊಂದಿಗೆ ಸಂಪರ್ಕದಲ್ಲಿರುವುದು.

3. ಹೊಸ ಕೌಶಲ್ಯ, ಹೊಸ ಹವ್ಯಾಸಗಳನ್ನು ಕಲಿಯುವುದು.

4. ಯಾವಾಗಲೂ ಸಕ್ರಿಯರಾಗಿರುವುದು.

5‌. ಮೊಬೈಲ್‌ ಸ್ಕ್ರೀನ್ ಸಮಯವನ್ನು ಕಡಿಮೆಮಾಡುವುದು

6. ಕಲಿಕೆಗೆ ವಯಸ್ಸಿನ ಮಿತಿಯಿಲ್ಲ, ಅದ್ದರಿಂದ ಕಲಿಯುತ್ತಲೇ ಇರುವುದು ಮತ್ತು ಅ ಮೂಲಕ ಮೆದುಳನ್ನು       ಸಕ್ರಿಯವಾಗಿರಿಸಿಕೊಳ್ಳುವುದು.

7. ಒಗಟು, ಪದಬಂಧ ಬಿಡಿಸುವುದು ಮುಂತಾದ ಮೆದುಳಿಗೆ ಕಸರತ್ತು ನೀಡುವ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದು..

8. ಹೊಸ ಭಾಷೆಗಳನ್ನು ಕಲಿಯುವುದು….ಇತ್ಯಾದಿ

ಹೀಗೆ ನಾವು ಹೊಸ ವಿಷಯಗಳನ್ನ ಕಲಿಯುತ್ತಾ, ಕಲಿಸುತ್ತಾ ಚಟುವಟಿಕೆಯಿಂದ ಕೂಡಿ ಹಸನ್ಮುಖರಾಗಿ ಇದ್ದಲ್ಲಿ, ನಮ್ಮ ಮೆದುಳು ತನ್ನ ಕಾರ್ಯವನ್ನು ಇನ್ನೂ ಹೆಚ್ಚಿನ ಉನ್ನತಮಟ್ಟದಲ್ಲಿ ನಿರ್ವಹಿಸುವಂತೆ ಮಾಡಬಹುದಾಗಿದೆ.

 

No comments:

Post a Comment