ತಳಿಶಾಸ್ತ್ರದ ಸಿಂಡ್ರೆಲ್ಲಾ: ಡ್ರಾಸೋಫಿಲಾ
ಲೇಖಕರು :
ಬಿ.ಎನ್. ರೂಪ, ಶಿಕ್ಷಕರು,
ಕೆ.ಪಿ.ಎಸ, ಜೀವನ್ ಭೀಮ ನಗರ
ಬೆಂಗಳೂರು ದಕ್ಷಿಣ ವಲಯ -4
ಅಡುಗೆ ಮನೆಯಲ್ಲಿ, ಕೊಳೆಯುತ್ತಿರುವ ಹಣ್ಣು, ಪಾನೀಯಗಳ
ಬಳಿ ಸಾಮಾನ್ಯವಾಗಿ ಸನ್ನ ಕೀಟಗಳ ಗುಂಪೊಂದು ಆಕರ್ಷಿತವಾಗಿರುವುದನ್ನು ಗಮನಿಸಿರುತ್ತೇವೆ ಅಲ್ಲವೇ
? ಈ ಕೀಟಗಳೇ ಹಣ್ಣಿನಕೀಟ ಅಥವಾ ನೊಣ, ವಿನಿಗರ್ ನೊಣ, ಬಾಳೆನೊಣ,ಪೋಮೇಸ್
ನೊಣ ಎಂಬ ಹಲವಾರು ನಾಮಧೆಯಗಳನ್ನು ಹೊಂದಿರುವ ಡ್ರೊಸೊಫಿಲಾ ಮೆಲನೊಗ್ಯಾಸ್ಟರ್-Drosophila melanogaster ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು
ಎಂಬ ಕನ್ನಡದ ಗಾದೆಗೆ ಸೂಕ್ತ ಅನ್ವಯವಾಗಿರುವ ಈ ಚಿಕ್ಕ ನೊಣ, ಸಂಧಿಪದಿಗಳ (Arthropoda) ಡಿಪ್ಟೆರಾ ವರ್ಗದ ಡ್ರೋಸೋಫಿಲಿಡೇ ಕುಟುಂಬಕ್ಕೆ ಸೇರುವ ನೊಣದ ಒಂದು ಜಾತಿಯಾಗಿದೆ.
ಡ್ರೋಸೋಫಿಲ ಎಂಬ ಪದವು ಗ್ರೀಕ್ ಭಾಷೆಯಿಂದ ನಿಷ್ಪತ್ತಿಯಾಗಿದೆ. ಗ್ರೀಕ್ ನಲ್ಲಿ ‘ಡ್ರೊಸೋಸ್’ ಅಂದರೆ
ಇಬ್ಬನಿ ‘ಫಿಲಿಯ’ ಎಂದರೆ ಪ್ರೀತಿ. ಇಬ್ಬನಿಯನ್ನು ಪ್ರೀತಿಸುವ ಕೀಟ ಎಂಬ ಅರ್ಥವನ್ನು ಇದು ನೀಡುತ್ತದೆ.
ಗಾತ್ರದಲ್ಲಿ
ಕಿರಿದಾದ ಕೀಟ,
ಕೀರ್ತಿಯಲ್ಲಿ
ದೊಡ್ಡ ಪಟ್ಟ,
ತಳಿಶಾಸ್ತ್ರದ
ಅಧ್ಯಯನದ,
ಅಭಿ಼ಷಿಕ್ತ
ರಾಣಿ.
ಕೊಳೆಯುವ
ಹಣ್ಣುಗಳು ನಿನ್ನ ತಾಣ,
ಹುದುಗುವ
ಪಾನೀಯಕ್ಕೆ ನಿನ್ನ ಆಕರ್ಷಣೆ,
ತಳಿಶಾಸ್ತ್ರದ
ಅಧ್ಯಯನದ,
ಅಭಿಷಿಕ್ತ
ರಾಣಿ.
ಜೈವಿಕ
ಸಂಶೋಧನೆಯಲ್ಲಿ ನಿನ್ನ ಬಳಕೆ ಅಪಾರ,
ನಾಲ್ಕು
ಜೋಡಿ ವರ್ಣತಂತುಗಳ ಅಗರ,
ತಳಿಶಾಸ್ತ್ರದ
ಅಧ್ಯಯನದ,
ಅಭಿಷಿಕ್ತ ರಾಣಿ.
ಈ ಕೀಟವನ್ನು ಪ್ರಥಮ ಬಾರಿಗೆ 1908ರಲ್ಲಿ ತಳಿಶಾಸ್ತ್ರದ ಅಧ್ಯಯನಕ್ಕಾಗಿ ಥಾಮಸ್ ಹಂಟ್ ಮಾರ್ಗನ್
(Thomas Hunt Morgan) ಎಂಬ ವಿಜ್ಞಾನಿ ಬಳಸಿಕೊಂಡರು. ಥಾಮಸ್ ಹಂಟ್ ಮಾರ್ಗನ್ ಅವರು ತನ್ನ ತಳಿಶಾಸ್ತ್ರ
ಸಂಶೋಧನೆಗಾಗಿ ಡ್ರೊಸೊಫಿಲಾ ಮೆಲನೊಗ್ಯಾಸ್ಟರ್ ಅನ್ನು ಆರಿಸಿಕೊಂಡದ್ದು
ಏಕೆಂದರೆ, ಈ ಹಣ್ಣಿನ ನೊಣಗಳು ಪ್ರಯೋಗಾಲಯದಲ್ಲಿ ಸಂತಾನೋತ್ಪತ್ತಿ ಮಾಡಲು ಸೂಕ್ತವಾಗಿದ್ದುವು, ಅವು
ಕಡಿಮೆ ಅವಧಿಯ ಜೀವನ ಚಕ್ರವನ್ನು ಹೊಂದಿದ್ದುವು ಮತ್ತು ಪ್ರತಿ ಸಂಯೋಗಕ್ಕೆ ಅತಿ ಹೆಚ್ಚಿನ ಸಂಖ್ಯೆಯ
ಸಂತತಿಯನ್ನು ಉತ್ಪಾದಿಸುತ್ತಿದ್ದುವು. ಹೆಚ್ಚುವರಿಯಾಗಿ, ಅವು ಸರಳ ಸೂಕ್ಷ್ಮದರ್ಶಕದ ಅಡಿಯಲ್ಲಿಯೂ
ಸಹ ಸುಲಭವಾಗಿ ಗೋಚರಿಸುವ ವಿಶಿಷ್ಟ ಲಕ್ಷಣಗಳನ್ನು ಪ್ರದರ್ಶಿಸುತ್ತಿದ್ದುವು ಅಲ್ಲದೆ, ಸರಳವಾದ ವರ್ಣತಂತು
ರಚನೆಯನ್ನು ಹೊಂದಿದ್ದುವು. ಈ ವರ್ಣತಂತುಗಳ ಅಧ್ಯಯನಕ್ಕೆ ತಗಲುವ ವೆಚ್ಚ ಬಹಳ ಕಡಿಮೆ ಈ ಎಲ್ಲಾ ಪ್ರಯೋಜನಗಳಿಂದಾಗಿ,
ತಳಿಶಾಸ್ತ್ರ, ಅಂಗೀಕ ತಳಿಶಾಸ್ತ್ರ ಅಭಿವೃದ್ಧಿ ಜೀವಶಾಸ್ತ್ರದ ಕ್ಷೇತ್ರಗಳಲ್ಲಿ ಈ ಕೀಟಗಳನ್ನು ಪ್ರಮುಖವಾಗಿ
ಬಳಸಲಾಗುತ್ತದೆ. ಇಂದು ತಳಿಶಾಸ್ತ್ರದಲ್ಲಿ ಬಳಕೆಯಲ್ಲಿರುವ ಬಹುತೇಕ ಅನುವಂಶೀಯ ತತ್ವಗಳನ್ನು ಡ್ರಾಸೋಪಿಲಾದ
ಮೇಲಿನ ಪ್ರಯೋಗಗಳಿಂದಲೇ ವಿಜ್ಞಾನಿಗಳು ಅರ್ಥಮಾಡಿಕೊಂಡಿದ್ದಾರೆ. ಅಲ್ಲಿಂದೀಚೆಗೆ, ತಳಿಶಾಸ್ತ್ರ, ಶರೀರಶಾಸ್ತ್ರ,
ಸೂಕ್ಷ್ಮಜೀವಿಶಾಸ್ತ್ರ,ಮತ್ತಿತರ ಕ್ಷೇತ್ರಗಳಲ್ಲಿ ಅಧ್ಯಯನಕ್ಕಾಗಿ ಹಾಗೂ ಜೈವಿಕ ಸಂಶೋಧನೆಗಾಗಿ ವ್ಯಾಪಕವಾಗಿ
ಬಳಸಿಕೊಳ್ಳಲಾಗುತ್ತಿದೆ. ಹೀಗಾಗಿ, ಈ ಕೀಟಕ್ಕೆ ʼತಳಿಶಾಸ್ತ್ರದ ಸಿಂಡ್ರೆಲಾ “ ಎಂದು ಕರೆಯಲಾಗುತ್ತದೆ.
1946ರಲ್ಲಿ ಬಾಹ್ಯಾಕಾಶಕ್ಕೆ ಉಡಾಯಿಸಲ್ಪಟ್ಟ ಮೊದಲ ಕೀಟ ಡ್ರಾಸೋಫಿಲಾ ಆಗಿತ್ತು. 2017ರಲ್ಲಿ ಡ್ರೋಸೋಫಿಲಿಸ್ಟ್ ಗಳಿಗೆ ಆರು ನೋಬಲ್ ಪ್ರಶಸ್ತಿಗಳನ್ನು ತಳಿಶಾಸ್ತ್ರದ ಮೇಲಿನ ಅಧ್ಯಯನಕ್ಕಾಗಿ ನೀಡಲಾಗಿದೆ.
ಈ ಕೀಟಗಳು ಹಳದಿ ಮಿಶ್ರಿತ ಕಂದು ಬಣ್ಣದಲ್ಲಿದ್ದು,
ಕಣ್ಣುಗಳು ಕೆಂಪು ಮಿಶ್ರಿತ ಇಟ್ಟಿಗೆ ಬಣ್ಣ ಹೊಮದಿರುತ್ತವೆ. ಹೊಟ್ಟೆಯ ಮೇಲೆ ಅಡ್ಡವಾಗಿ ಕಪ್ಪುಪಟ್ಟಿಗಳನ್ನು
ಹೊಂದಿವೆ. ಇವುಗಳ ದೇಹವನ್ನು ಪ್ರಮುಖವಾಗಿತಲೆ,ಎದೆಮತ್ತುಹೊಟ್ಟೆಯಭಾಗ ಎಂಬ ಮೂರು ಭಾಗಗಳನ್ನಾಗಿ ವಿಂಗಡಿಸಲಾಗಿದೆ
ಕಣ್ಣುಗಳು ದೃಶ್ಯ ಘಟಕಗಳಾದ ನೂರಾರು ಒಮ್ಮಟಿಡಿಯಾಗಳನ್ನು ಹೊಂದಿವೆ. ಕಣ್ಣಿನ ನಡುವೆ ಅಂಟೆನಾಗಳಿವೆ
ಇವು ವಾಸನೆ ಹಾಗೂ ಗಾಳಿಯ ಕಂಪನಗಳನ್ನು ಪತ್ತೆಹಚ್ಚಲು ಸಹಾಯ ಮಾಡುತ್ತವೆ. ಮೂರು ಜೋಡಿ ಕಾಲುಗಳು ಹಾಗೂ
ಒಂದು ಜೋಡಿ ರೆಕ್ಕೆಗಳನ್ನು ಹೊಂದಿವೆ. ಈ ಕೀಟಗಳು ಲೈಂಗಿಕ ದ್ವಿರೂಪತೆಯನ್ನು ಪ್ರದರ್ಶಿಸುತ್ತದೆ.
ಹೆಣ್ಣು ಕೀಟಗಳು ಸುಮಾರು 2.5 m.m ನಷ್ಟು ಉದ್ದವಾಗಿದ್ದು, ಗಂಡು ಕೀಟಗಳು ಹೆಣ್ಣು ಕೀಟಗಳಿಗಿಂತ ಚಿಕ್ಕದಾಗಿರುತ್ತವೆ. ಸೂಕ್ತ ಬೆಳವಣಿಗೆಯ ಪರಿಸ್ಥಿತಿಗಳಲ್ಲಿ ಇವುಗಳ ಜೀವಿತಾವಧಿ ಮೊಟ್ಟೆಯಿಂದ ಸಾವಿನವರೆಗೂ ಸುಮಾರು 50 ದಿನಗಳು. ಇವುಗಳ ಜೀವನ ಚಕ್ರದಲ್ಲಿ ಭ್ರೂಣ, ಲಾರ್ವ, ಪ್ಯೂಪ ಹಾಗೂ ವಯಸ್ಕ ಕೀಟ ಎಂಬ ನಾಲ್ಕುಹಂತಗಳಿವೆ, ಇವುಗಳ ಲಾರ್ವ ಸಂಪೂರ್ಣ ರೂಪಾಂತರಕ್ಕೆ ಒಳಗಾಗುತ್ತವೆ. ಹಾಗಾಗಿ,ಇವು ಹೋಲೋಮೆಟಬಾಲಸ್ (holometabolous) ಬಗೆಯ ಕೀಟಗಳಾಗಿವೆ.
ಇತ್ತೀಚಿನ ವರ್ಷಗಳಲ್ಲಿ, ಡ್ರೊಸೊಫಿಲಾದಲ್ಲಿ ಆನುವಂಶೀಯ
ವಿಧಾನಗಳನ್ನು ಬಳಸಿಕೊಂಡು ಗ್ಲೈಕೊನ್ ಕಾರ್ಯಗಳ ಪರಿಣಾಮಕಾರಿ ವಿಶ್ಲೇಷಣೆ ಮಾಡಲಾಗುತ್ತಿದೆ. .ವಂಶವಾಹಿಗಳ
ಕಾರ್ಯಗಳನ್ನು ಅಧ್ಯಯನ ಮಾಡಲು ಯಾದೃಚ್ಛಿಕ ನಿರ್ದೇಶಿತ ಉತ್ಪರಿವರ್ತನೆಗಳ ಮೂಲಕ ಪ್ರತ್ಯೇಕ ವಂಶವಾಹಿಗಳನ್ನು ನಿಷ್ಕ್ರಿಯಗೊಳಿಸಿ ಅಧ್ಯಯನಮಾಡಲು ಬಳಸಲಾಗುತ್ತಿದೆ.
ಉತ್ಪರಿವರ್ತನೆಗಳನ್ನು ಪ್ರೇರೇಪಿಸಲು ರಾಸಾಯನಿಕಗಳನ್ನು ಬಳಸಿ ಹೊಸ ಅಂಶಗಳನ್ನು ಸಂಯೋಜಿಸಿ ರಾಸಾಯನಿಕ
ಪ್ರೇರಿತ ಉತ್ಪರಿವರ್ತನೆ ಟ್ರಾನ್ಸ್ಪೋಸ್ ನ ಮಧ್ಯಸ್ಥಿಕೆಯ ಅಳವಡಿಕೆಯನ್ನು ಅಧ್ಯಯನ ಮಾಡಲು ಬಳಸಲಾಗುತ್ತಿದೆ
.ಸಂಪೂರ್ಣ ವಂಶವಾಹಿಗಳ ಅಧ್ಯಯನ ಮಾಡಲು ಸಹ ಈ ಕೀಟಗಳನ್ನು ಬಳಸಲಾಗುತ್ತಿದೆ.
ಆರ್ ಎನ..ಎ. ಮಧ್ಯಸ್ಥಿತ ಜೀನ್ ಸೈಲೆನ್ಸ್ಸಿಂಗ್
ಅನ್ನು ವ್ಯಾಪಕವಾಗಿ ಸಾಧನವಾಗಿ ಬಳಸಲಾಗುತ್ತದೆ. ಔಷಧಿ ಅನ್ವೇಷಣೆ, ಜೈವಿಕಇಂಜಿನಿಯರಿಂಗ್, ಪುನರುತ್ಪಾದಕ
ಜೀವಿಶಾಸ್ತ್ರ ಇವುಗಳಲ್ಲಿ ಅಧ್ಯಯನ ಮಾಡಲು ಬಳಸಿ ಇದು ರೋಮಾಂಚನಕಾರಿಯಾದ ಫಲಿತಾಂಶಗಳನ್ನು ನೀಡಿದೆ.
ಹಲವು ಕ್ಷೇತ್ರಗಳ ಸಂಶೋಧನೆಯಲ್ಲಿ ಇವು ಮಾದರಿ ಜೀವಿಯಾಗಿ ಸಂಶೋಧನೆಯ ಭವಿಷ್ಯವು ಈ ಜೀವಿಗಳಿಂದ ಉಜ್ವಲವಾಗಿದೆ.
ಡ್ರೊಸೊಫಿಲಾವನ್ನು ಭವಿಷ್ಯದಲ್ಲಿ ರೋಗ ಮಾದರಿ ಔಷಧ
ಚೇತರಿಕೆ ಮತ್ತು ವಿಷಶಾಸ್ತ್ರೀಯ (ಟಾಕ್ಸಿಕಾಲಜಿಕಲ್)
ಸಂಶೋಧನೆಗೆ ಪ್ರಬಲ ಮತ್ತುವೆಚ್ಚ-ಪರಿಣಾಮಕಾರಿ ಜೀವಿಯಾಗಿನಿರಂತರಬಳಸಲಾಗುತ್ತಿದೆ. ಮಾನವನೊಂದಿಗೆ ಅದರ
ವಂಶವಾಹಿಗಳ ಹೆಚ್ಚಿನ ಸಂರಕ್ಷಣೆ, CRISPR-cas9 ನಂತಹ ಸಾಧನಗಳೊಂದಿಗೆ
ಆನುವಂಶೀಯ ಕುಶಲತೆ ಮತ್ತು ಅದರ ತ್ವರಿತ ಜೀವನ ಚಕ್ರದಿಂದಾಗಿ, ಹಣ್ಣಿನ ನೊಣವು ಪರಿಣಾಮಕಾರಿಯಾಗಿ
ಬಳಕೆಯಲ್ಲಿದೆ. ಪ್ರಾಣಿಗಳ ಔಷಧ ತಪಾಸಣೆಗೆ ಮತ್ತು ನರಶೂಲೆ ಅಸ್ವಸ್ಥತೆಗಳಿಂದ ಕ್ಯಾನ್ಸರ್ ಮತ್ತು
ಸಾಂಕ್ರಾಮಿಕ ರೋಗಗಳವರೆಗಿನ ಸಂಕೀರ್ಣ ಮಾನವ ಆರೋಗ್ಯ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಈ ಕೀಟಗಳು
ಅನುವುಮಾಡಿಕೊಡುತ್ತಿವೆ.