ವಿಜ್ಞಾನದ ಒಗಟುಗಳು : ಅಕ್ಟೋಬರ್ 2021
-1-
ಒಂದೇ ನಾಣ್ಯದ ಎರಡು ಮುಖಗಳು ನಾವು
ದಿಕ್ಕೇನಿಲ್ಲ
, ಕೇವಲ ಪರಿಮಾಣವಾಗಿಹೆವು
ಉಷ್ಣದ
ಲಕ್ಷಣಗಳ ತಿಳಿಸಿದಾತನ ನಾಮವು
ಆಗಿದೆ
ನಮ್ಮಯ ( S.I ) ಅಂತಾರಾಷ್ಟ್ರೀಯ ಏಕಮಾನವು
ನಮ್ಮನು
ಹೆಸರಿಸುವಿರಾ ಜಾಣರು ನೀವು. ಉತ್ತರ: ಶಕ್ತಿ ಮತ್ತು ಕೆಲಸ, S.I ಏಕಮಾನ ಜೂಲ್
-2-
ಉದ್ದವಿಲ್ಲ, ಅಗಲವಿಲ್ಲ, ತೂಕವೂ ಇಲ್ಲ
ಆದರೂ ನನ್ನನು ಅಳೆಯಬಲ್ಲರು ಎಲ್ಲಾ
ನಾನು ಮೇಲೆ ಮೇಲೆ ಏರಲು ಬಲ್ಲೆ
ಹಾಗೇ ಕೆಳಗಿಳಿದು ತಣ್ಣಗಿರಲು ಬಲ್ಲೆ
ನಾ ಬಲ್ಲೆ ನೀ ನನ್ನ ಹೆಸರ ಹೇಳಬಲ್ಲೆ. ಉತ್ತರ : ತಾಪ (Temperature)
-3-
ನನ್ನನು ಅಳೆಯಲು ಮೂರು ಅಳತೆ ಕೋಲುಗಳು
ಒಂದು ವೈದ್ಯರ ಕೈಯಲ್ಲಿ
ಇನ್ನೊಂದು ಪ್ರಯೋಗಾಲಯದಲ್ಲಿ
ಮತ್ತೊಂದು ಜಗತ್ತಿನೆಲ್ಲೆಡೆ ಏಕರೂಪದಲ್ಲಿ
ಹಾಗಾದರೆ ನಾನು ಯಾರು ?
ಅಳತೆಕೋಲುಗಳಾವವು ಮೂರು ?
ಉತ್ತರ : ತಾಪ, ಡಿಗ್ರಿ ಸೆಲಿಷಿಯಸ್, ಡಿಗ್ರಿ ಫ್ಯಾರನ್ ಹೀಟ್ ಮತ್ತು ಕೆಲ್ವಿನ್.
ವಿಜಯಕುಮಾರ್ ಹುತ್ತನಹಳ್ಳಿ
ಪ್ರೌಢಶಾಲಾ ಸಹಶಿಕ್ಷಕ
ಸರ್ಕಾರಿ ಪ್ರೌಢಶಾಲೆ, ಕಾವಲ್ ಭೈರಸಂದ್ರ
ಬೆಂಗಳೂರು ಉತ್ತರ ವಲಯ – 3
1) ನಾನು ಜೀವಿ ನಿರ್ಜೀವಿಗಳ ನಡುವಿನ ಕೊಂಡಿ,
ಜೀವಿಯ ದೇಹದ
ಹೊರಗೆ ನಾನು ಕಣ ,
ಆತಿಥೇಯ ಜೀವಿಯ
ದೇಹದ ಒಳಗೆ ನನ್ನ ಹವಾ,
ಹಾಗಿದ್ದಲ್ಲಿ ನಾನು ಯಾರು? ಉತ್ತರ : ವೈರಸ್
2) ಮಾನವನ ದೇಹದ ನಿರ್ನಾಳ ಗ್ರಂಥಿಗಳ ವ್ಯೂಹದ ವಾದ್ಯಘೋಷಕ,
ಮೂರ್ತಿ ಚಿಕ್ಕದು
ಎಂದು ಹೀಗಳೆಯಬೇಡಿ,
ಆದರೆ ನನ್ನ ಕೀರ್ತಿ ದೊಡ್ಡದು, ಹಾಗಾದರೆ ನಾನು ಯಾರು
? ಉತ್ತರ : ಪಿಟ್ಯೂಟರಿ ಗ್ರಂಥಿ
3) ನಾನು ಸಸ್ಯ
ಹಾರ್ಮೋನ್ ಗಳಲ್ಲಿ ಒಬ್ಬ
ನನ್ನ ಸಂಕೇತ ಸಸ್ಯಗಳ ಬೆಳವಣಿಗೆ ನಿಲ್ಲಿಸಲು ಅಗತ್ಯ
ನನ್ನ ಹೆಸರು
ಆಮ್ಲದಿಂದ ಕೊನೆಗೊಳ್ಳುತ್ತದೆ
ನಾನು ಬೆಳವಣಿಗೆಯನ್ನು ಪ್ರತಿಬಂಧಿಸುತ್ತೇನೆ
ಹಾಗಿದ್ದಲ್ಲಿ ನಾನು……. ಉತ್ತರ : ಅಬ್ಸಿಸಿಕ್ ಆಮ್ಲ
4) ತಟ್ಟೆಯಾದರೂ ಉಣಲಾಗದು
ಕಿರಿದಾದರೂ ಕಾರ್ಯ ಹಿರಿದು
ಗಾಯವಾದ ಪ್ರದೇಶದಲಿ
ಕಾರ್ಯ ನನದು
ನನ್ನ ಹೆಸರ
ಹೇಳುವ ಕೆಲಸ ನಿಮ್ಮದು. ಉತ್ತರ : ಕಿರುತಟ್ಟೆಗಳು / ಪ್ಲೇಟ್‌ಲೆಟ್ಸ್
5) ಅಂಬರದ ಛತ್ರಿ
ನಾನು,
ಸ್ತರಗೋಳದಲಿ ಹಾಜರಿರುವವನು,
ನೇರಳಾತೀತ
ಕಿರಣಗಳ ಶೋಧಕನು,
ವಸುಂದರೆಯ ಒಡಲಿನ ಸಕಲ ಜೀವಿಗಳ ರಕ್ಷಕನು ,
ಹೇಳಿ ಯಾರು
ನಾನು………………………. ಉತ್ತರ : ಓಜ಼ೋನ್ ಪದರ
ಲೇಖಕರು :
ಬಿ. ಎನ್. ರೂಪ ,
ಸಹಶಿಕ್ಷಕರು ,
ಸರ್ಕಾರಿ ಉರ್ದು ಮತ್ತು ಆಂಗ್ಲ ಪ್ರೌಢ ಶಾಲೆ ಗೋರಿಪಾಳ್ಯ,
ಬೆಂಗಳೂರು ದಕ್ಷಿಣ ವಲಯ 2.