ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Tuesday, July 5, 2022

ಸವಿಜ್ಞಾನ ಜುಲೈ 2022 ರ ಲೇಖನಗಳು

 ಸವಿಜ್ಞಾನ ಜುಲೈ 2022 ರ ಲೇಖನಗಳು :

ಸಂಪಾದಕರ ಡೈರಿಯಿಂದ . . . . . - ಡಾ. ಟಿ.ಎ.ಬಾಲಕೃಷ್ಣ ಅಡಿಗ 

ಕುರಿಗಳು ಸಾರ್, ನಾವು ಕುರಿಗಳು !ಲೇಖಕರು : ಡಾ. ಎಮ್.ಜೆ.ಸುಂದರರಾಮ್

ಐನ್‌ಸ್ಟೀನ್‌ರ ಮೆದುಳು ಕಳವಾಗಿತ್ತೇ ? ಲೇಖಕರು : ಸುರೇಶ ಸಂಕೃತಿ, 

ಕೀಟಾಹಾರಿ ಸಸ್ಯಗಳು ಲೇಖಕರು : ಡಿ. ಕೃಷ್ಣಚೈತನ್ಯ

ಜೇನುಗೂಡಿನಲ್ಲಿ ಜ್ಯಾಮಿತಿ !   ಲೇಖಕರು : ಹೆಚ್‌.‌ ಅನಿಲ್‌ ಕುಮಾರ್.

ಸಂಘಟನಾ ಚತುರ, ಹೆಮ್ಮೆಯ ಶಿಕ್ಷಕ ಶ್ರೀ ಸಂಗನ ಶರಣ ಚನ್ನಬಸವ ವೀರಬಸಪ್ಪ ಬುರ್ಲಿ  ಲೇಖನ: ಶ್ರೀ ರಾಮಚಂದ್ರ ಭಟ್  B.G

ಸವಿಜ್ಞಾನ ಪದಬಂಧ-7 ಲೇಖಕರು : ವಿಜಯಕುಮಾರ್‌.ಹೆಚ್.ಜಿ.

ಒಗಟುಗಳು : ಜುಲೈ 2022 ರಚನೆ: ರಾಮಚಂದ್ರ ಭಟ್‌ ಬಿ.ಜಿ.

ವ್ಯಂಗ್ಯ ಚಿತ್ರಗಳು - ಜುಲೈ 2022 ರಚನೆ : ಶ್ರೀಮತಿ ಜಯಶ್ರೀ ಬಿ ಶರ್ಮ

Monday, July 4, 2022

ಸಂಪಾದಕರ ಡೈರಿಯಿಂದ . . . . .

ಸಂಪಾದಕರ ಡೈರಿಯಿಂದ . . . . . . . . .

ಸವಿಜ್ಞಾನ ಇ-ಪತ್ರಿಕೆಯ ಜುಲೈ ತಿಂಗಳ ಸಂಚಿಕೆ ವೈವಿಧ್ಯಮಯ ಲೇಖನಗಳೊಂದಿಗೆ ಪ್ರಕಟವಾಗಿದೆ.  ನಮ್ಮಲ್ಲಿ ಬಹು ಮಂದಿ ತಮ್ಮ ದೈನಂದಿನ ಜೀವನ ಪ್ರಾರಂಭಿಸುವುದು ಒಂದು ಲೋಟ ಕಾಫಿಯ ಜೊತೆಗೆ. ಈ ಕಾಫಿ ಮಾನವನ ಜೀವನವನ್ನು ಪ್ರವೇಶಿಸಿದ ಸಂದರ್ಭವನ್ನು ವಿವರಿಸುವ ಲೇಖನವೊಂದನ್ನು ಎಂದಿನಂತೆ ತಮ್ಮ ನವಿರಾದ ಶೈಲಿಯಲ್ಲಿ ವಿವರಿಸಿದ್ದಾರೆ ಹಿರಿಯ ಲೇಖಕ ಡಾ. ಸುಂದರರಾಮ್. ಕೀಟಾಹಾರಿ ಸಸ್ಯಗಳ ಬಗ್ಗೆ ವಿವರಣಾತ್ಮಕವಾಗಿ ಬರೆದಿದ್ದಾರೆ, ಶ್ರೀ ಕೃಷ್ಣ ಚೈತನ್ಯ ಅವರು. ಖ್ಯಾತ ವಿಜ್ಞಾನಿ ಐನ್‌ಸ್ಸ್ಟೀನ್‌ರ ಮಿದುಳು ಅವರ ಮರಣಾನಂತರ ಕಳವಾಗಿತ್ತೆಂಬ ಕಥೆಯನ್ನು ಸೊಗಸಾಗಿ ವಿವರಿಸಿದ್ದಾರೆ ಸುರೇಶ್‌ ಸಂಕೃತಿ ಅವರು. ಜೇನುನೊಣಗಳು ಕಟ್ಟುವ ಗೂಡಿನ ರಚನೆಯ ಹಿಂದಿರುವ ಗಣಿತೀಯ ತತ್ವಗಳನ್ನು ವಿವರಿಸಿದ್ದಾರೆ ಗಣಿತ ಶಿಕ್ಷಕ ಅನಿಲ್‌ ಕುಮಾರ್.‌ ಈ ಬಾರಿಯ ನಮ್ಮ ಸಾಧಕ ಶಿಕ್ಷಕ ಶ್ರೀ ಬುರ್ಲಿ ಅವರ ಸಾಧನೆಗಳನ್ನು ಪರಿಚಯ ಮಾಡಿದ್ದಾರೆ ಶ್ರೀ ರಾಮಚಂದ್ರ ಭಟ್‌ ಅವರು. ಇವೆಲ್ಲದರ ಜೊತೆಗೆ, ಒಗಟುಗಳು ಪದಬಂಧ ಹಾಗೂ ವ್ಯಂಗಚಿತ್ರಗಳು, ಎಂದಿನಂತೆ ಈ ಬಾರಿಯೂ ಪ್ರಕಟವಾಗಿವೆ.

ಸಂಚಿಕೆಯ ಲೇಖನಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ದಾಖಲಿಸಿ. ನಿಮ್ಮ ಶಿಕ್ಷಕ ಸಹೋದ್ಯೋಗಿಗಳಿಗೆ ʼಸವಿಜ್ಞಾನʼ ವನ್ನು ಪರಿಚಯಿಸಿ. ಸಲಹೆಗಳಿದ್ದರೆ ಸ್ವಾಗತ.

                                                   ಪ್ರಧಾನ ಸಂಪಾದಕರು

ಕುರಿಗಳು ಸಾರ್, ನಾವು ಕುರಿಗಳು !

ಕುರಿಗಳು ಸಾರ್, ನಾವು ಕುರಿಗಳು !

ಲೇಖಕರು : ಡಾ. ಎಮ್.ಜೆ.ಸುಂದರರಾಮ್
ನಿವೃತ್ತ ಪ್ರಾಣಿಶಾಸ್ತ್ರ ಪ್ರಾಧ್ಯಾಪಕರು ಹಾಗೂ
ವಿಜ್ಞಾನ ಸಂವಹನಕಾರರು





ಪ್ರತಿ ದಿನ, ಅದರಲ್ಲಿಯೂ ಬೆಳಿಗ್ಗೆ ನಾವೆಲ್ಲರೂ ಸೇವಿಸಲು ಇಚ್ಛಿಸುವುದು ಒಂದು ಲೋಟ ಬಿಸಿಯಾದ ಸ್ಟ್ರಾಂಗ್‌ ಕಾಫಿ, ಅಲ್ಲವೇ? ಆದರೆ, ಕಾಫಿ ಒಂದು ಪಾನೀಯವಾಗಿ ಬಳಕೆಗೆ ಬಂದಿರುವುದರ ಹಿಂದೆ ಒಂದು ಕುತೂಹಲಕಾರಿಯಾದ ಕತೆ ಇದೆ. ಅದನ್ನು ಸ್ವಾರಸ್ಯಕರವಾಗಿ ಈ ಲೇಖನದಲ್ಲಿ ವಿವರಿಸಿದ್ದಾರೆ ಹಿರಿಯ ಲೇಖಕರಾದ ಡಾ. ಎಮ್.ಜೆ. ಸುಂದರರಾಮ್ ಅವರು.

ಐನ್‌ಸ್ಟೀನ್‌ರ ಮೆದುಳು ಕಳವಾಗಿತ್ತೇ ?

ಐನ್‌ಸ್ಟೀನ್‌ರ ಮೆದುಳು ಕಳವಾಗಿತ್ತೇ ?

ಲೇಖಕರು : ಸುರೇಶ ಸಂಕೃತಿ

ಗಣಿತವಿಜ್ಞಾನ ಬೋಧಕರು,

ನಂದಾಶ್ರೀ ಹತ್ತಿರಹೊಸಕೋಟೆ

ಬೆಂಗಳೂರು ಗ್ರಾಮಾಂತರ ಜಿಲ್ಲೆ



ಮಹಾ ಮೇಧಾವಿ, ಪ್ರಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನ್ ಮರಣದ ನಂತರ ಅವರ ಮಿದುಳನ್ನು ಕಳವು ಮಾಡಲಾಗಿತ್ತೆ? ವಿಜ್ಞಾನ ಪ್ರಪಂಚದಲ್ಲಿ ಇದೊಂದು ಬಹಳ ಚರ್ಚಿತ ವಿಷಯ. ಅದರ ಬಗ್ಗೆ ವಿವರಣೆ ನೀಡಿದ್ದಾರೆ ಸುರೇಶ್ ಸಂಕೃತಿ ಅವರು, ಈ ಲೇಖನದಲ್ಲಿ.

ಕೀಟಾಹಾರಿ ಸಸ್ಯಗಳು

ಕೀಟಾಹಾರಿ ಸಸ್ಯಗಳು

ಡಿ. ಕೃಷ್ಣಚೈತನ್ಯ

ವಿಜ್ಞಾನ ಮಾರ್ಗದರ್ಶಕರು ಹಾಗು ವನ್ಯಜೀವಿ ತಜ್ಞರು.

ಗೋಣಿಕೊಪ್ಪಲು ಪ್ರೌಢಶಾಲೆ. ಗೋಣಿಕೊಪ್ಪಲು.

ಕೊಡಗು ಜಿಲ್ಲೆ.


ವನ್ಯ ಜೀವಿಗಳ ಬಗ್ಗೆ ಅಧ್ಯಯನ ನಡೆಸಿರುವ ಹಿನ್ನೆಲೆಯಲ್ಲಿ, ಕೆಲವು ವನ್ಯ ಜೀವಿಗಳ ಬಗ್ಗೆ ಲೇಖನಗಳನ್ನು ಬರೆಯುತ್ತಾ, ‘ಸವಿಜ್ಞಾನ’ ಓದುಗರಿಗೆ ಪರಿಚಿತರಾಗಿರುವ ಕೃಷ್ಣ ಚೈತನ್ಯ ಅವರು ಈ ಬಾರಿಯ ಲೇಖನದಲ್ಲಿ ನಮ್ಮಲ್ಲಿ ಕಂಡುಬರುವ ಕೆಲವು ಕೀಟಾಹಾರಿ ಸಸ್ಯಗಳನ್ನು ಪರಿಚಯಿಸಿದ್ದಾರೆ.

ಜೇನುಗೂಡಿನಲ್ಲಿ ಜ್ಯಾಮಿತಿ !

ಜೇನುಗೂಡಿನಲ್ಲಿ ಜ್ಯಾಮಿತಿ !

ಲೇಖಕರು : ಹೆಚ್‌.‌ ಅನಿಲ್‌ ಕುಮಾರ್.
ಗಣಿತ ಶಿಕ್ಷಕರು

ಪ್ರಕೃತಿಯಲ್ಲಿನ ಪ್ರತಿಯೊಂದು ಜೀವಿಯೂ ಕುತೂಹಲಕರ. ಹುಡುಕುತ್ತ ಹೊರಟರೆ, ಜೀವಿಗಳ ರಚನೆ, ಹೊಂದಾಣಿಕೆ ಮುಂತಾದ ಎಲ್ಲ ಅಂಶಗಳಲ್ಲಿಯೂ ವೈವಿಧ್ಯತೆಯ ಜೊತೆಗೆ ಸ್ವಾರಸ್ಯ ಹಾಸು ಹೊಕ್ಕಾಗಿದೆ. ಅನೇಕ ಜೀವಿಗಳು ತೋರುವ ರಚನಾ ಕೌಶಲ್ಯದಲ್ಲಿ ವೈಜ್ಞಾನಿಕ ಹಾಗೂ ಗಣಿತೀಯ ತತ್ವಗಳು ಅಡಕವಾಗಿವೆ. ಈ ಲೇಖನದಲ್ಲಿ ಶಿಕ್ಷಕ ಅನಿಲ್‌ ಕುಮಾರ್‌ ಅವರು ಜೇನುಗೂಡಿನ ರಚನೆಯಲ್ಲಿನ ಗಣಿತೀಯ ತತ್ವವನ್ನು ವಿವರಿಸಿದ್ದಾರೆ.

ಸಂಘಟನಾ ಚತುರ, ಹೆಮ್ಮೆಯ ಶಿಕ್ಷಕ ಶ್ರೀ ಸಂಗನ ಶರಣ ಚನ್ನಬಸವ ವೀರಬಸಪ್ಪ ಬುರ್ಲಿ

ಸಂಘಟನಾ ಚತುರ, ಹೆಮ್ಮೆಯ ಶಿಕ್ಷಕ ಶ್ರೀ ಸಂಗನ ಶರಣ ಚನ್ನಬಸವ ವೀರಬಸಪ್ಪ ಬುರ್ಲಿ

                                                                                     ಲೇಖನ: ಶ್ರೀ ರಾಮಚಂದ್ರ ಭಟ್  B.G

ʼಸವಿಜ್ಞಾನʼದ ಕಳೆದ ಸಂಚಿಕೆಯಲ್ಲಿ  ಕಾಬಾಳೆಯ ಬಗ್ಗೆ ಬಂದಿದ್ದ ಲೇಖನ ಓದಿದ ನೆನಪಿರಬಹುದು. ಈ ಲೇಖನದ ಮೂಲಕ ನಮ್ಮ ಬರಹಗಾರರ ಬಳಗ ಸೇರಿರುವ ಶಿಕ್ಷಕ ಶ್ರೀ ಬುರ್ಲಿ ಅವರ ಅಸಾಧಾರಣ ಸಾಧನೆಯ ಪರಿಚಯವನ್ನು ಮಾಡಿಕೊಟ್ಟಿದ್ದಾರೆ, ಶ್ರೀ ರಾಮಚಂದ್ರ ಭಟ್‌ ಅವರು

ಸವಿಜ್ಞಾನ ಪದಬಂಧ - 7

 ಸವಿಜ್ಞಾನ ಪದಬಂಧ-7.

         (9ನೇ ತರಗತಿಯ “ಕೆಲಸ ಮತ್ತು ಶಕ್ತಿ” ಪಾಠದಿಂದ ಆರಿಸಿದ ಪದಗಳು)

1

 

 

2

 

 

 

 

 

4

 

 

4.

 

 

 

2

 

 

 

3.

 

 

 

 

 

 

5.

 

 

 

 

 

 

 

 

 

 

 

6

 

 

 

 

 

3.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

9

 

 

6.

 

 

7.

 

 

 

 

 

 

 

 

 

 

 

 

 

 

 

 

 

 

 

 

 

 

8

 

 

 

 

 

 

 

 

 

 

 

 

 

 

 

7.

 

 

 

 

 

 

9

 

 

 

 

8

 

 

 

 

 

 

 

 

 

 

 

 

 

 











ಸುಳಿವುಗಳು.

ಎಡದಿಂದ ಬಲಕ್ಕೆ

1.ಕಾಯದ ಚಲನ ಶಕ್ತಿಯು ಇದರ ವರ್ಗಕ್ಕೆ ನೇರ ಅನುಪಾತದಲ್ಲಿರುತ್ತದೆ. (2)

2. ಗೋಡೆ ಮೇಲೆ ನಾನು ನನ್ನ ಬಲಪ್ರಯೋಗ ಎಷ್ಟೇ ಮಾಡಿದರೂ ಇದು ಮಾತ್ರ ಸೊನ್ನೆಯೇ

  ತಾನೆ? (3)

3. “ಶಕ್ತಿಯನ್ನು ಸೃಷ್ಟಿಸಲೂ ಸಾಧ್ಯವಿಲ್ಲ, ನಾಶಗೊಳಿಸಲೂ ಸಾಧ್ಯವಿಲ್ಲ” ಹೀಗೆ ಹೇಳುವುದು (9)

4. “ಶಕ್ತಿಯ ಬಳಕೆಯ ದರ”ಎಂಬಲ್ಲಿ ದರವನ್ನು ನಿರ್ಧರಿಸುವುದು ಇದರ ಮೇಲೆ ಅಲ್ಲವೇ? (2)

6. ಕಾಯವೊಂದನ್ನು ಭೂಮಿಯ ಮೇಲ್ಮೈನಿಂದ ಎತ್ತರ ಎತ್ತರಕ್ಕೆ ಏರಿಸಿದಂತೆಲ್ಲಾ ಹೆಚ್ಚಾಗುವ

   ಶಕ್ತಿ (8)

7. ವಿದ್ಯುತ್‌ ಮೋಟಾರ್‌ ಒದಗಿಸುವ ಶಕ್ತಿ (5)

8. ಸಾಮರ್ಥ್ಯದ ಅಂತಾರಾಷ್ಟ್ರೀಯ ಏಕಮಾನ ಎಡದಿಂದ ಬಲಕ್ಕೆ ಹೋದರೂ ಅದೇ ತಾನೆ (2)

9. ಇದು ಇದ್ದರೆ ಮಾತ್ರ ಮಾಡಿದ ಕೆಲಸಕ್ಕೆ ಒಂದು ಮೌಲ್ಯ (5)

ಮೇಲಿನಿಂದ ಕೆಳಕ್ಕೆ

1.   ʼaʼ ಎಂಬ ಅಕ್ಷರದಿಂದ ಸಂಕೇತಿಸಲ್ಪಡುವ ಭೌತಿಕ ಪರಿಮಾಣ.(4)

2.  ಬಿಲ್ಲಿನಿಂದ ಬಿಟ್ಟ ಬಾಣ ಈ ಶಕ್ತಿಗೆ ಉದಾಹರಣೆ (5)

3.  ಪ್ರಚ್ಛನ್ನಶಕ್ತಿ ಅವಲಂಬಿಸಿರುವ ಅಂಶಗಳಲ್ಲಿ ಇದೂ ಒಂದು (3)

4.  ಶುಷ್ಕಕೋಶದಿಂದ ದೊರೆಯುವ ಶಕ್ತಿ ಈ ಬಗೆಯದು (7)

5.  ಕೆಲಸ ಮಾಡಲು ಅಗತ್ಯವಾದದ್ದು ಇಲ್ಲಿ ಕೆಳಗಿನಿಂದ ಮೇಲಕ್ಕೆ ಪ್ರಯೋಗವಾಗಿದೆ (2)

6.  ಶಕ್ತಿಯ ಬಳಕೆಯ ದರ (3)

7.  ಕಾಯದ ಸ್ಥಾನದಿಂದ ಪಡೆಯುವ ಶಕ್ತಿ(5)

8.  ವಿದ್ಯುತ್ ಶಕ್ತಿಯ ವ್ಯಾವಹಾರಿಕ ಏಕಮಾನ ಕಿಲೋವ್ಯಾಟ್-ಗಂಟೆಗೆ ಹೀಗೆನ್ನುವರು(3)

9.  ಕೆಲಸದ ಮೂಲಮಾನ ವಿಜ್ಞಾನಿಯ ಹೆಸರಿನಿಂದ ಪ್ರಾರಂಭ(6)

              _______________________ 

 ಸವಿಜ್ಞಾನ ಪದಬಂಧ-6 ಉತ್ತರಗಳು





                        







ವಿಜಯಕುಮಾರ್‌.ಹೆಚ್.ಜಿ.

                                  ಭೌತವಿಜ್ಞಾನ ಶಿಕ್ಷಕರು,

                                  ಸ.ಪ್ರೌ.ಶಾಲೆ, ಕಾವಲ್‌ ಭೈರಸಂದ್ರ,

                                  ಬೆಂಗಳೂರು ಉತ್ತರ ವಲಯ-3.