ಕಣ್ಣಿಗೆ ಕಾಣದ ವೈರಸ್‌ಗಳ ಜಗತ್ತು
ಸಹಶಿಕ್ಷಕರು,
ಕೆ.ಪಿ.ಎಸ್ ಜೀವನ್ ಭೀಮನಗರ
ಬೆಂಗಳೂರು ದಕ್ಷಿಣ ವಲಯ -4
ಭೂಮಿ, ನಮ್ಮ ಸೌರಮಂಡಲದ ಅತ್ಯಂತ ವಿಶಿಷ್ಟ ಗ್ರಹ. ವೈವಿಧ್ಯತೆಯನ್ನು ತೋರಿಸುವ ಜೀವಿಗಳ ತಾಣ. ಬೇರೆ ವಿವಿಧ ಗ್ಯಾಲಕ್ಸಿಗಳಲ್ಲಿ ನಮ್ಮ ಭೂಮಿಯ ರೀತಿಯ ವಿಶಿಷ್ಟ ಗ್ರಹ ಇರಬಹುದೇನೋ? ನಮಗೆ ಗೊತ್ತಿಲ್ಲ. ನಮ್ಮ ವೈಜ್ಞಾನಿಕ ಪ್ರಪಂಚದಲ್ಲಿ ಈನಿಟ್ಟಿನಲ್ಲಿ ಪ್ರಪಂಚಾದ್ಯಂತ ಸಂಶೋಧನೆ ನಡೆಯುತ್ತಿದೆ. ಅನೇಕ ವಿಧದ ಜೀವಿಗಳನ್ನು ನಾವು ನೋಡಿದ್ದೇವೆ, ಜೀವಿಗಳ ಇರುವಿಕೆ ಬಗ್ಗೆ ಕೇಳಿದ್ದೇವೆ, ಹಾಗೂ ಕೆಲವು ಜೀವಿಗಳ ಬಗ್ಗೆ ನಮಗೆ ಕೌತುಕತೆ ಸಹ ಇದೆ.
ಕಣ್ಣಿಗೆ ಕಾಣಿಸಿದಷ್ಟು
ಜೀವಿಪ್ರಪಂಚ ಅಲ್ಲ, ಇದಕ್ಕಿಂತಲೂ ಮೀರಿದ, ಅಳತೆಗೂ ಸಿಗದ ಜೀವಪ್ರಪಂಚ ಇದೆ. ಅದೇ ಸೂಕ್ಷ್ಮಾಣುಜೀವಿಗಳ
ಲೋಕ. ಯಾವುದೇ ವೈಜ್ಞಾನಿಕ ಉಪಕರಣದ ಸಹಾಯವಿಲ್ಲದೆ ಇವುಗಳಲ್ಲಿ ಬಹಳಷ್ಟನ್ನು ವೀಕ್ಷಿಸುವುದು ಅಸಾಧ್ಯ.
ಸೂಕ್ಷ್ಮಾಣುಜೀವಿಗಳು ಎಂದಕೊಡಲೇ ನಮ್ಮ ಅರಿವಿಗೆ ಬರುವುದು, ನೆಗಡಿ, ಶೀತ, ಕೆಮ್ಮು ಮುಂತಾದ ರೋಗಗಳು
ಕೋವಿಡ್- 19, ಲಸಿಕೆಗಳು ಇತ್ಯಾದಿ. ಸೂಕ್ಷ್ಮಜೀವಿಗಳಿಂದ ನಮಗೆ ಸಾಕಷ್ಟು ಅನುಕೂಲಗಳು, ಉಪಯೋಗಗಳು
ಸಹ ಇವೆ, ಹಾಗೆ ಪ್ರತಿಕೂಲ ಪರಿಣಾಮಗಳನ್ನು ಸಹ ಇವು ಬೀರುತ್ತವೆ. ನಮ್ಮ ಪರಿಸರವ್ಯವಸ್ಥೆಯ ಸಮತೋಲನ,
ಮಾನವನ ಆರೋಗ್ಯವನ್ನು ಕಾಪಾಡುವಲ್ಲಿ, ಲಸಿಕೆಗಳನ್ನು ಅಭಿವೃದ್ಧಿ ಪಡಿಸುವಲ್ಲಿ, ರೋಗನಿರೋಧಕ ಶಕ್ತಿಯ
ಅಭಿವೃದ್ಧಿ, ಆಹಾರ, ಕೈಗಾರಿಕೋದ್ಯಮ, ಜೈವಿಕಇಂಧನಇತ್ಯಾದಿಗಳಲ್ಲಿ ಸೂಕ್ಷ್ಮಜೀವಿಗಳನ್ನು ಬಳಸುತ್ತಿದ್ದೇವೆ.ಸೂಕ್ಷ್ಮಾಣುಜೀವಿಗಳನ್ನು
ಅವುಗಳ ಗಾತ್ರದ ಅನುಸಾರ ಈ ಕೆಳಕಂಡಂತೆ ವಿಂಗಡಿಸಲಾಗಿದೆ,ಆರ್ಕಿಯಾಬ್ಯಾಕ್ಟೀರಿಯಾಶಿಲೀಂದ್ರಪ್ರೋಟೋಜೋವಗಳುವೈರಸ್.
ನಮ್ಮ ಗ್ರಹದಲ್ಲಿ
ಪ್ರಾಬಲ್ಯತೆಯನ್ನು ಹೊಂದಿರುವ ಅತ್ಯಂತ ಪ್ರಾಚೀನ ಸೂಕ್ಷ್ಮಾಣುಜೀವಿಗಳ ಪ್ರಭೇದಗಳು ಕಂಡುಬಂದಿವೆ. ಸೂಕ್ಷ್ಮಜೀವಿಗಳು
ಸರ್ವವ್ಯಾಪಿ. ಭೂಮಿಯ ಗಾಳಿ, ನೀರು, ಮಣ್ಣಿನಲ್ಲಿ, ಉತ್ತರ- ದಕ್ಷಿಣ ಧ್ರುವಗಳು, ಮರುಭೂಮಿಗಳು, ಬಿಸಿನೀರಿನ
ಬುಗ್ಗೆಗಳು, ಮುಂತಾದ ಪ್ರತಿಕೂಲ ಪರಿಸರವ್ಯವಸ್ಥೆ ಸೇರಿದಂತೆ ಸಸ್ಯ, ಪ್ರಾಣಿ, ಮಾನವನ ದೇಹದಲ್ಲಿ ಸಹ
ಇವು ಕಂಡುಬರುತ್ತದೆ. ಜಲಚರ ಆಹಾರ ಸರಪಳಿಗಳಲ್ಲಿ ಪಾಚಿಗಳು ದ್ಯುತಿಸಂಶ್ಲೇಷಣೆಯ ಮೂಲಕ ಜಲಪರಿಸರವ್ಯವಸ್ಥೆಗಳಲ್ಲಿ
ಅತ್ಯಂತ ನಿರ್ಣಾಯಕ ಪಾತ್ರವನ್ನು ನಿರ್ವಹಿಸುತ್ತವೆ. ಇವುಗಳಲ್ಲಿ,ವೈರಸ್ ಒಂದು ಉಪಸೂಕ್ಷ್ಮದರ್ಶಕ ಜೈವಿಕ
ಘಟಕ. ಇವು ಬ್ಯಾಕ್ಟೀರಿಯಾ, ಆರ್ಕಿಯಾ, ಸಸ್ಯ, ಪ್ರಾಣಿ, ಮಾನವನನ್ನು ಒಳಗೊಂಡಂತೆ ಎಲ್ಲಾ ಜೀವರೂಪಗಳಲ್ಲಿ
ಸೋಂಕು ಉಂಟುಮಾಡುತ್ತದೆ. ಬಹುತೇಕ ಎಲ್ಲಾ ಪರಿಸರವ್ಯವಸ್ಥೆಗಳಲ್ಲಿ ಇವು ಕಂಡುಬರುತ್ತವೆ. 1990ರಲ್ಲಿ
ತಂಬಾಕು ಮೊಸೈಕ್ ವೈರಸ್ ಮೊದಲ ಆವಿಷ್ಕಾರದ ನಂತರ ಅನೇಕ ಲಕ್ಷಾಂತರ ವೈರಸ್ ಪ್ರಭೇದಗಳನ್ನು ಕಂಡುಹಿಡಿಯಲಾಗಿದೆ.ವೈರಾಲಜಿ ಎಂಬ ಸೂಕ್ಷ್ಮಜೀವವಿಜ್ಞಾನದ
ಉಪವಿಭಾಗದಲ್ಲಿ ಇವುಗಳ ಬಗ್ಗೆ ಅಧ್ಯಯನ ಮಾಡಲಾಗುತ್ತದೆ. 1892ರಲ್ಲಿ ಡಿಮಿಟ್ರಿ ಐವನೋಸ್ಕಿ ವೈರಸ್‌ಗಳನ್ನು
ಮೊದಲ ಬಾರಿಗೆ ಕಂಡು ಹಿಡಿದವರು. ತಂಬಾಕು ಎಲೆಗಳಲ್ಲಿ ಹೊಸ ವಿಧದ ಒಂದು ಸೂಕ್ಷ್ಮಾಣುಜೀವಿ ರೋಗಗಳನ್ನು
ಉಂಟುಮಾಡುವುದನ್ನು ಪತ್ತೆಮಾಡಿದರು. ಈ ಒಂದು ಹೊಸರೋಗಕ್ಕೆ ಬ್ಯಾಕ್ಟೀರಿಯಾ ಕಾರಣವಿರಬಹುದು ಎಂದು ಭಾವಿಸಿದರು.
ಆದರೆ, ಇವರ ಸೋಸುವಿಕೆ ಪ್ರಯೋಗದ ನಂತರ ಬ್ಯಾಕ್ಟೀರಿಯಾಗಿಂತಲೂ ಅತ್ಯಂತ ಚಿಕ್ಕದಾಗಿರುವ ಸೂಕ್ಷ್ಮಾಣುಜೀವಿ
ರೋಗವನ್ನು ಉಂಟುಮಾಡುತ್ತದೆ ಎಂದು ಕಂಡುಹಿಡಿದರು.
ಇತ್ತೀಚಿನ ಅಧ್ಯಯನಗಳ
ಪ್ರಕಾರ ಲಕ್ಷಾಂತರ ಪ್ರಭೇದಗಳ ವೈರಸ್ ಗಳನ್ನು ಮಾನವನ ದೇಹದ ಹೊರಭಾಗದಲ್ಲಿ, ಒಳಭಾಗದಲ್ಲಿ, ಹಲವಾರು
ವಿವಿಧ ಪರಿಸರವ್ಯವಸ್ಥೆಗಳಲ್ಲಿ ಕಂಡುಹಿಡಿಯಲಾಗಿದೆ. ಒಂದು ಅಧ್ಯಯನದ ಪ್ರಕಾರ ಸುಮಾರು 380 ಟ್ರಿಲಿಯನ್
ಬಗೆಯ ವೈರಸ್ ಗಳು ನಮ್ಮ ದೇಹದ ಒಳಭಾಗದಲ್ಲಿ ಹಾಗೂ ಹೊರಭಾಗದಲ್ಲಿ ಇರುವುದನ್ನು ಅಂದಾಜಿಸಲಾಗಿದೆ.
ನಮ್ಮ ದೇಹ ಕೇವಲ ಜೀವಕೋಶಗಳಿಂದ ಮಾಡಲ್ಪಟ್ಟಿಲ್ಲ. ಬ್ಯಾಕ್ಟೀರಿಯಾ ಹಾಗೂ ವೈರಸ್ಗಳ ಮೈಕ್ರೋಬಯೋಂಗಳ
ಒಂದು ಇರುವಿಕೆಯಿಂದ ಉಂಟಾಗಿದೆ. ವೈರಸ್ಗಳನ್ನು ಕಣಗಳು ಎಂದೂ ಸಹ ಕರೆಯಲಾಗುತ್ತದೆ. ʼಜೀವಿ
ಮತ್ತು ನಿರ್ಜೀವಿ ವಸ್ತುಗಳ ನಡುವಿನ ಕೊಂಡಿʼ ಎಂದೂ ಪರಿಣಿಸಲಾಗುತ್ತಿದೆ.
ವೈರಸ್ ಯಾವುದರಿಂದ
ಮಾಡಲ್ಪಟ್ಟಿದೆ?
ಒಂದು ರಕ್ಷಣಾತ್ಮಕ
ಕ್ಯಾಪ್ಸಿಡ್ ಎಂಬ ಹೊದಿಕೆಯ ಒಳಗೆ ಇರುವ ಒಂದು ಸಣ್ಣ ಆನುವಂಶಿಕ DNA ಅಥವಾ RNA ಮಾಹಿತಿಯನ್ನು ಒಳಗೊಂಡಿದೆ.
ಕೆಲವೊಮ್ಮೆ ಕ್ಯಾಪ್ಸಿಡ್‌ನ ಸುತ್ತಲೂ ಮತ್ತೊಂದು ಪದರವಿರುತ್ತದೆ. ಈ ಪದರ ಅಥವಾ ಹೊದಿಕೆ ಕೊಬ್ಬಿನಿಂದ
ರಚಿತವಾಗಿರುತ್ತದೆ. ಈ ಪದರ ಅಥವಾ ಹೊದಿಕೆ ಇಲ್ಲದಿರುವ ವೈರಸ್ ಗಳನ್ನು ಬೆತ್ತಲೆ ವೈರಸ್ ಎನ್ನಲಾಗುತ್ತದೆ.ಪರಾವಲಂಬಿ
ಜೀವಿಗಳಂತೆ ಇರುವ ಕಣಗಳಾದರೂ ಸಂತಾನೋತ್ಪತ್ತಿ ನಡೆಸಲು ಒಂದು ಅತಿಥೇಯ ಜೀವಿಯ ಅಗತ್ಯವಿದೆ. ಇವು ನಮ್ಮ
ದೇಹದ ಜೀವಕೋಶಗಳಿಗಿಂತ ನೂರರಿಂದ ಸಾವಿರಪಟ್ಟು ಚಿಕ್ಕದಾಗಿರುತ್ತದೆ,ವೈರಸ್ ಗಳು ವಿಭಿನ್ನ
ಆಕಾರವನ್ನುಹೊಂದಿವೆ, ಇವು, ಐಕೋಸಾಹೆಡ್ರಲ್ / ಪಾಲಿಹೆಡ್ರೇಲ್, ಸುರುಳಿಆಕಾರದ ಗೋಳಾಕಾರದ ಮುಂತಾದ ಸಂಕೀರ್ಣ
ರಚನೆಯನ್ನು ಹೊಂದಿವೆ. ಎಲೆಕ್ಟ್ರಾನ್ ಸೂಕ್ಷ್ಮದರ್ಶಕದ ಅಡಿಯಲ್ಲಿ ಮಾತ್ರ ಇವುಗಳನ್ನುವೀಕ್ಷಿಸಬಹುದು.
ವೈರಸ್ ಗಳನ್ನು ಅವುಗಳ
ಹೊಂದಿರುವ ವಿಭಿನ್ನ ಗಾತ್ರ, ಆಕಾರ ಹಾಗೂ ಹೊಂದಿರುವ ಅನುವಂಶಿಕ ವಸ್ತುಗಳ ಆಧಾರದ ಮೇಲೆ ತಜ್ಞರು ವರ್ಗೀಕರಿಸುತ್ತಾರೆ.ಇನ್ಫ್ಲುಯೆನ್ಸಾ ವೈರಸ್
ಕುಟುಂಬ - ಆರ್ಥೋಮಿಕ್ಸೊವಿರಿಡೆ
ಈ ಕುಟುಂಬವು
ಇನ್ಫ್ಲುಯೆನ್ಸಾ ಎ ಮತ್ತು ಬಿ ವೈರಸ್ ಗಳನ್ನು ಒಳಗೊಂಡಿದೆ. ಇವು ಇನ್ಫ್ಲುಯೆನ್ಸಾ ಜ್ವರವನ್ನು ಉಂಟುಮಾಡುತ್ತದೆ.
ಇನ್ಫ್ಲುಯೆನ್ಸಾ ಎ ತಳಿ ಪಕ್ಷಿಜ್ವರ ಮತ್ತು ಹಂದಿಜ್ವರಕ್ಕೆ (H1N1) ಕಾರಣವಾಗುತ್ತದೆ.
ಮಾನವ ಹರ್ಪಿಸ್ ವೈರಸ್ ಕುಟುಂಬ - ಹರ್ಪಿಸ್ಟೈರಿಡೆ
ಇದು ವೈರಸ್ ಗಳ ಒಂದು
ದೊಡ್ಡ ಕುಟುಂಬವಾಗಿದೆ. ಈ ವೈರಸ್ ಗಳು ಬಾಯಿ, ಜನನಾಂಗದ ಹರ್ಪಿಸ್ ಕನ್ಪಾಕ್ಸ್ ,ಶಿಂಗಲ್ಸ್, ಎಪ್‌ಸ್ಟೈನ್-ಬಾರ್,
ಸೈಟೊಮೆಗಾಲೊ ವೈರಸ್(CMV) ನಂತಹ ಹಲವಾರು ರೀತಿಯ ಕಾಯಿಲೆಗಳಿಗೆ ಕಾರಣವಾಗಿವೆ.ಕೊರೊನಾ ವೈರಸ್ಇದು ವೈರಸ್ ಗಳ ಉಪಕುಟುಂಬವಾಗಿದೆ.
ಕೋವಿಡ್ 19 ಗೆ ಕಾರಣವಾಗಿರುವ SARS-COV-2 ಈಗುಂಪಿಗೆ ಸೇರಿದೆ .ಅತ್ಯಂತ ಪ್ರಸಿದ್ಧವಾದ ಕರೋನ ವೈರಸ್
ಆಗಿದೆ.ಹ್ಯೂಮನ್
ಪ್ಯಾಪಿಲೊಮಾ ವೈರಸ್:- ನರಹುಲಿಗಳನ್ನು ಉಂಟುಮಾಡುತ್ತದೆ. ಕೆಲವು
ರೀತಿಯ HPVಕ್ಯಾನ್ಸರ್ ರೋಗಗಳಿಗೂ ಇವು ಕಾರಣವಾಗಬಹುದು.ಎಂಟರೋವೈರಸ್:-ಇದು ಕರುಳಿನ ಪ್ರವೇಶಕ್ಕೆ
ಸೋಂಕು ತಗಲುವ ವೈರಸ್ಸಿನ ಒಂದು ಗುಂಪು. ಪೋಲಿಯೋ ಕೈಕಾಲು ಮತ್ತು ಬಾಯಿರೋಗಕ್ಕೆಇವು ಕಾರಣವಾಗಿದೆ.ಪ್ಲೇವಿವೈರಸ್ ಗಳು:-ಈವೈರಸ್ಗಳು ಹೆಚ್ಚಾಗಿ
ಸೊಳ್ಳೆಗಳಿಂದ ಹರಡುತ್ತವೆ. ಡೆಂಗ್ಯೂಜ್ವರ, ಜೀಕಾ, ಹಳದಿಜ್ವರ, ಪಶ್ಚಿಮನ ರೋಗಗಳಿಗೆ ಇವು ಕಾರಣವಾಗಿವೆ.ಇವು ಗುಳ್ಳೆಗಳಂತಹ
ದದ್ದುಗಳನ್ನು ಉಂಟುಮಾಡುತ್ತವೆ.ಎಂಪಾಕ್ಸ್ ಮತ್ತು ಸಿಡುಬುಗಳು ಆರ್ಥೋಪ್ಯಾಕ್ಸ್‌ವೈರಸ್ ನಿಂದ ಉಂಟಾಗುತ್ತವೆ.ಹೆಪಟೈಟಿಸ್ ವೈರಸ್
ಗಳು:- ಒಂದೇ ಕುಟುಂಬಕ್ಕೆ ಸೇರಿಲ್ಲದ ಈ ವೈರಸ್‌ಗಳು ಯಕೃತ್ತಿಗೆ ಸೋಂಕನ್ನು ಉಂಟುಮಾಡುತ್ತದೆ. ಇವುಗಳಲ್ಲಿ ಹೆಪಟೈಟಿಸ್
ಎ, ಬಿ ಮತ್ತು ಸಿ ಎಂಬ ಬಗೆಗಳು ಸಾಮಾನ್ಯವಾಗಿವೆರೆಟ್ರೋ ವೈರಸ್ ಗಳು:-ರೆಟ್ರೋ ವೈರಸ್ ಗಳು:-
(DNA) ಡಿಎನ್ಎ ಅನ್ನು ತಯಾರಿಸಲು ವಿಶೇಷ ಪ್ರೋಟೀನ್‌ಗಳನ್ನುಬಳಸುವ RNA ವೈರಸ್ ಗಳಾಗಿವೆ. ನಮ್ಮ
ಜೀವಕೋಶಗಳು ವೈರಲ್ ಡಿಎನ್ಎ ಅನ್ನು ತನ್ನದೇ ಆದ ಸೂಚನೆಗಳಂತೆ ಓಡಿಸುತ್ತದೆ. ಹೆಚ್ಐವಿ ಮತ್ತು ಮಾನವನ
HTLV-1 ರೆಟ್ರೋವೈರಸ್ಗಳಾಗಿವೆ.ಆಂಕೊ ವೈರಸ್ ಗಳುಇವು ಕ್ಯಾನ್ಸರ್
ರೋಗಕ್ಕೆ ಕಾರಣವಾಗುವ ವೈರಸ್ ಗಳಾಗಿವೆ.HPV, ಹೆಪಟೈಟಿಸ್
ಬಿ ಮತ್ತು ಸಿ, HTLV-1, HHV-8, ಎಪ್‌ಸ್ಟೈನ್- ಬಾರ್.
ವೈರಸ್ ಗಳನ್ನು ಈ ಗುಂಪು ಒಳಗೊಂಡಿದೆ.ಉಪಗ್ರಹ ವೈರಸ್ ಗಳು:-ಇವು ಸಸ್ಯಗಳಲ್ಲಿ
ಕಂಡು ಬರುತ್ತವೆ. ಇತರೆ ಸಹಾಯಕ ವೈರಸ್ ಗಳಿಲ್ಲದೆ ಸಂತಾನೋತ್ಪತ್ತಿ ಮಾಡಲು ಇವುಗಳಿಗೆ ಸಾಧ್ಯವಿಲ್ಲ.ಬ್ಯಾಕ್ಟಿರಿಯೋಪೇಜ್
ಗಳು:-ಬ್ಯಾಕ್ಟೀರಿಯಾಗಳಿಗೆ
ನಿರ್ದಿಷ್ಟವಾಗಿ ಸೋಂಕು ತಗಲುವ ವೈರಸ್ ಗಳಾಗಿವೆ. ಪ್ರತಿಜೀವಕಗಳಿಗೆ ಪ್ರತಿಕ್ರಿಯಿಸದ ಬ್ಯಾಕ್ಟೀರಿಯದ
ಸೋಂಕುಗಳಿಗೆ ಚಿಕಿತ್ಸೆ ನೀಡಲು ಸಂಭಾವ್ಯ ಮಾರ್ಗವಾಗಿ ಬ್ಯಾಕ್ಟೀರಿಯೋಪೇಜ್ ಗಳನ್ನು ವಿಜ್ಞಾನಿಗಳು
ಈಗ ಅಧ್ಯಯನ ಮಾಡುತ್ತಿದ್ದಾರೆ. 
ವೈರಸ್ ಗಳು ಸಾಮಾನ್ಯವಾಗಿ
ನಮ್ಮ ದೇಹದಲ್ಲಿನ ಲೋಳೆಪೊರೆಗಳ ಮೂಲಕ ಪ್ರವೇಶಿಸುತ್ತವೆ. ಕಣ್ಣು, ಮೂಗು, ಬಾಯಿ, ಶಿಶ್ನ, ಯೋನಿ, ಗುದದ್ವಾರದ
ಮೂಲಕ ನಮ್ಮ ದೇಹವನ್ನು ಸೇರುತ್ತದೆ. ಜೀವಕೋಶಗಳಿಗೆ ಸೋಂಕು ತಗಲಿದ ನಂತರ ಇವು ತಮ್ಮ ಜೀವನ ಚಕ್ರದಲ್ಲಿ
ಬಾಂಧವ್ಯ, ಪ್ರವೇಶ, ಪ್ರತಿಜೋಡಣೆ ಒಟ್ಟುಗೂಡುವುದು ಮತ್ತು ಬಿಡುಗಡೆ ಮುಂತಾದ ಹಲವಾರು ಹಂತಗಳನ್ನು
ಹೊಂದಿವೆ.. ಇವುಗಳ ಬಗ್ಗೆ ಹಲವಾರು ಅಭಿಪ್ರಾಯಗಳಿವೆ. ಸಾಮಾನ್ಯವಾಗಿ ಜೀವಶಾಸ್ತ್ರಜ್ಞರು ವೈರಸ್ ಗಳನ್ನು
ಜೀವಂತ ಎಂದು ಪರಿಗಣಿಸುವುದಿಲ್ಲ. ಜೀವಂತ ಜೀವಿಗಳಂತೆ ಇವು ಕಾಯಕ ನಿರ್ವಹಿಸಲು ಸಾಧ್ಯವಿಲ್ಲ ಉದಾಹರಣೆಗೆ,
ಚಯಾಪಚಯ ಕ್ರಿಯೆ . ಆತಿಥೇಯ ಜೀವಕೋಶವಿಲ್ಲದೆ ಬದುಕಲು ಅಥವಾ ಸಂತಾನೋತ್ಪತ್ತಿ ಮಾಡಲು ಇವುಗಳಿಗೆ ಸಾಧ್ಯವಿಲ್ಲ.
ಹೀಗಾಗಿ, ಇವುಗಳನ್ನು ಜೀವಂತ ಮತ್ತು ನಿರ್ಜೀವ ವಸ್ತುಗಳ ನಡುವಿನ ಕೊಂಡಿ ಎಂದು ಪರಿಗಣಿಸಲಾಗುತ್ತಿದೆ.
ಆದರೂ, ಇವುಗಳ ಬಗ್ಗೆ ಸಾಕಷ್ಟು ಸಂಶೋಧನೆ ಹಾಗೂ ಅಭಿವೃದ್ಧಿ ಚಟುವಟಿಕೆಗಳು ಸೂಕ್ಷ್ಮಾಣು ಜೀವಶಾಸ್ತ್ರ
ಕ್ಷೇತ್ರದಲ್ಲಿ ನಡೆಯುತ್ತಿದೆ. ಇವುಗಳ ಬಗ್ಗೆ ಪರಿಶೋಧನೆ ಹಾಗೂ ಪರ್ಯಾಲೋಚನೆಗಳು ವೈದ್ಯಕೀಯ ಕ್ಷೇತ್ರದಲ್ಲಿ
ತೀವ್ರಗತಿಯಲ್ಲಿ ನಡೆಯುತ್ತಿವೆ.
A typical virus replication cycle
No comments:
Post a Comment