ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಸವಿಜ್ಞಾನದ ಲೇಖನಗಳನ್ನು ಓದಿ, ಅಭಿಪ್ರಾಯ ದಾಖಲಿಸಿ. ನಿಮ್ಮ ಪ್ರೋತ್ಸಾಹಗಳೇ ಲೇಖಕರಿಗೆ ಶ್ರೀರಕ್ಷೆ Science is a beautiful gift to humanity; we should not distort it. A. P. J. Abdul Kalam

Sunday, October 4, 2026

ಜೇನುದನಿಗಳು

 ಜೇನುದನಿಗಳು

   ಜೇನು ಎಂದರೆ ಯಾರಿಗೆ ಇಷ್ಟವಾಗಲ್ಲ ಹೇಳಿ. ಅದರ ಮಧುರವಾದ ಸಿಹಿ ಎಂಥವರನ್ನೂ ಆಕರ್ಷಿಸಿಬಿಡುತ್ತದೆ. ಜೇನುದನಿ ಅಂದರೇನು ಎಂದು ತಮಗೆ ಆಶ್ಚರ್ಯವಾಗಿರಬಹುದಲ್ಲವೇ? ಖಂಡಿತವಾಗಿಯೂ ಆಗಿರಲೇಬೇಕು. ನಾನೀಗ ಹೇಳಹೊರಟಿರುವುದು ಒಂದು ಹಕ್ಕಿಯ ಬಗ್ಗೆ! ಇಂಗ್ಲೀಷ್ ನಲ್ಲಿ ಹನಿಬಜರ‍್ಡ್ ಎಂದು ಕರೆಯುವ ಒಂದು ಬಗೆಯ ರ‍್ಯಾಪ್ಟರ್. ಅಂದರೆ ಹದ್ದು, ಗಿಡುಗ ರೀತಿಯ ಮಾಂಸಹಾರಿ ಪಕ್ಷಿ. ಇದರ ವೈಜ್ಞಾನಿಕ ಹೆಸರು ಪರ್ನಿಸ್ ಟಿಲೊರೈನ್ಕಸ್(Peಡಿಟಿis ಠಿಣiಟoಡಿhಥಿಟಿಛಿhus) ಭಾರತದಲ್ಲಿ ಸುಮಾರು ಆರು ಬಜರ‍್ಡ್ ಪ್ರಬೇಧಗಳಿದ್ದರೂ ಅದರಲ್ಲಿ ಜೇನುದನಿ ಅಥವಾ ಹನಿಬಜರ‍್ಡ್ ಒಂದೇ.  ಇದಕ್ಕೆ ಏಕೆ ಜೇನು ಪದ ಸೇರಿಕೊಂಡಿತು ಎಂದು ನೋಡಿದಾಗ ಜೇನು ಗೂಡುಗಳೇ ಇವುಗಳ ಆಹಾರದ ಮೂಲ. ಜೇನುನೊಣ ಹಿಡುಕಗಳ ಬಗ್ಗೆ ತಿಳಿದಿದ್ದೇವೆ. ಇದು ಭಕ್ಷಿಸುವುದು ಜೇನು ನೊಣಗಳನ್ನಲ್ಲ! ಬದಲಾಗಿ ಜೇನುನೊಣಗಳ ಲಾರ್ವಾ ಅಂದರೆ ಹುಳುಗಳನ್ನು! 

  ಬನ್ನಿ ಇದರ ಪರಿಚಯ ಮಾಡಿಕೊಳ್ಳೋಣ. ಇದು ಸುಮಾರು ಹದ್ದಿನಷ್ಟೆ ಗಾತ್ರವನ್ನು ಹೊಂದಿವೆ. ತಲೆ ಪಾರಿವಾಳದಂತೆ ಸಣ್ಣದಾಗಿದ್ದು ದೇಹ ಸಾಮಾನ್ಯ ಹದ್ದುವಿನಷ್ಟೆ ಇರುತ್ತದೆ. ಕೊಕ್ಕು ಹುಳುಗಳನ್ನು ಗೂಡಿನ ಸಣ್ಣ ಸಣ್ಣ ಕೋಣೆಗಳಿಂದ ಎಳೆದು ತಿನ್ನಲು ಸಹಕಾರಿಯಾಗುವಂತೆ ಚೂಪಾಗಿಯೂ ಚಿಕ್ಕದಾಗಿಯೂ ಇದೆ. ದೃಷ್ಟಿ ಸಾಮರ್ಥ್ಯ ಅತ್ಯಂತ ತೀಕ್ಣವಾಗಿದೆ.   


ದೇಹದ ಗರಿಗಳು ತಿಳಿ ಮತ್ತು ಕಡುಗಂದು ಬಣ್ಣವನ್ನು ಹೊಂದಿದ್ದು ಕುತ್ತಿಗೆ, ಎದೆ ಮತ್ತು ಹೊಟ್ಟೆ ಗರಿಗಳು ಬಿಳಿಮಿಶ್ರಿತವಾಗಿವೆ. ಈ ಹಕ್ಕಿಗಳ ಜಾತಿಯ ಎಲ್ಲಾ ಹದ್ದುಗಳಲ್ಲಿ ಕಣ್ಣಿನ ರೆಪ್ಪೆಯ ಜೊತೆಗೆ ಮತ್ತೊಂದು ಪೊರೆಯಿದ್ದು ವಿಶಿಷ್ಟ ರಕ್ಷಣೆಯನ್ನು ಕೊಡುತ್ತದೆ. ಚೂಪಾದ ಉಗುರುಗಳನ್ನು ಹೊಂದಿರುವ ಬಲಿಷ್ಟ ಕಾಲುಗಳು ಗೂಡಿಗೆ ಚುಚ್ಚಿ. ಕಿತ್ತು. ಹಿಡಿದು ತರಲು ಸಹಕಾರಿಯಾಗಿವೆ. 

  ಎಲ್ಲಾ ಮಾಂಸಹಾರಿ ಪಕ್ಷಿಗಳು ಇತರ ಪಕ್ಷಿ ಅಥವಾ ಪ್ರಾಣಿಗಳನ್ನು ಬೇಟೆಯಾಡಿ ಭಕ್ಷಿಸಿದರೆ ಇವುಗಳ ಆಹಾರ ಕ್ರಮ ವಿಶಿಷ್ಟವಾಗಿದೆ. ಇವು ಜೇನು ಮತ್ತು ಕಡಜಗಳ ಲಾರ್ವಾಗಳನ್ನು ತಿನ್ನುವುದು ವಿಶಿಷ್ಟ. ಜೇನುಹುಳುಗಳು ಮಾನವನಿಗೆ ಕಚ್ಚಿದರೆ ಅದರ ಪರಿಣಾಮ ಘೋರ! ಒಂದೋ ಎರಡೋ ಕಚ್ಚಿದರೆ ಉರಿಯಿಂದ, ನೋವಿನಿಂದ ಒದ್ದಾಡುತ್ತೇವೆ. ಹೆಚ್ಚಿನ ಸಂಖ್ಯೆಯಲ್ಲಿ ಕಚ್ಚಿದರೆ ಸಾವು ಕೂಡ ಸಂಭವಿಸುತ್ತದೆ. ಇನ್ನು ಅತ್ಯಂತ ವಿಷಪೂರಿತ ಕಡಜ ಅದುವೆ ವಿಶ್ವದಲ್ಲೆ ಅತ್ಯಂತ ವಿಷಪೂರಿತವಾದ ಹೆಗ್ಗಡಜ(ಹಾರ್ನೆಟ್ ವಾಸ್ಪ್), ಇದರ ಲಾರ್ವಾಗಳನ್ನೂ ಸಹ ಬಿಡದೆ ತಿನ್ನುತ್ತವೆ. ಕೆಲವೊಮ್ಮೆ ಗೂಡಿನ ಭಾಗವನ್ನು ಕಿತ್ತು ತಿಂದು ಹಾಕುತ್ತವೆ. ಜೇನಿನ ರುಚಿ ಇವುಗಳಿಗೆ ಹತ್ತಿರುವುದು ಜೀವವೈವಿದ್ಯತೆಗೆ ಮತ್ತು ವಿಕಾಸದ ಹಾದಿಯಲ್ಲಿ ಆಹಾರದ ಹಂಚಿಕೆಗೆ ದಾರಿ ಮಾಡಿರುವುದು ಪರಮಾಶ್ಚರ್ಯ!

  ಕಡಜ ಮತ್ತು ಜೇನು ಹುಳುಗಳ ಹೊಟ್ಟೆಯ ಕೊನೆಯಲ್ಲಿ ಇರುವ ಮುಳ್ಳು ವಿಷದ ಚೀಲವನ್ನು ಹೊಂದಿದ್ದು ಅವು ಕಚ್ಚಿದಾಗ ಮನುಷ್ಯ ಮತ್ತು ಇತರ ಪ್ರಾಣಿಗಳಿಗೆ ಚುಚ್ಚಿ ಉಪದ್ರವ ಕೊಡುತ್ತವೆ. ಆದರೆ ಬಜರ‍್ಡ್ ಅಂದರೆ ಜೇನುದನಿಗಳಿಗೆ ತೊಂದರೆಯಾಗುವುದಿಲ್ಲವೇ ಎಂದು ಆಶ್ಚರ್ಯವಾಗುವುದಿಲ್ಲವೇ? ಹೌದು! ನನಗಂತು ಆಗಿತ್ತು. ಆದರೆ ಜೇನುದನಿಗಳ ರಕ್ಷಣಾ ಕ್ರಮ ತಿಳಿದು ಮೂಖವಿಶ್ಮಿತನಾದೆ. ಒಂದನೆಯ ರಕ್ಷಣೆ ಎಂದರೆ ಈ ಪಕ್ಷಿಗಳಿಗೆ ಗರಿಗಳು ಇರುವುದು. ಎರಡನೆಯದು ಒಂದಷ್ಟು ಜೇನುಹುಳಗಳು ಅಥವಾ ಕಡಜಗಳು ಕಚ್ಚದರೆ ಅವುಗಳ ವಿಷವನ್ನು ತಡೆದುಕೊಳ್ಳುವ ಸಾಮರ್ಥ್ಯ. ಅದರಲ್ಲೂ ಕಚ್ಚಿಸಿಕೊಳ್ಳಲು ಇರುವ ಜಾಗ ಅಂದರೆ ಗರಿಗಳ ಒಳಗೆ ಪ್ರವೇಶಿಸಿ ಚರ್ಮಕ್ಕೆ ಚುಚ್ಚುವುದು. ಇನ್ನು ಕಣ್ಣಿನಲ್ಲಿರುವ ವಿಶಿಷ್ಟ ಪೊರೆಯೂ ಸಹ ಜೇನುಹುಳುಗಳು ಕಚ್ಚದಂತೆ ರಕ್ಷಣೆ ಕೊಡುತ್ತದೆ!

  ಅರಣ್ಯಗಳಲ್ಲಿರುವ ಎತ್ತರದ ಮರಗಳ ಕೊಂಬೆಗಳಲ್ಲಿ ಗೂಡು ನಿರ್ಮಿಸಿ ಎರಡು ಮೊಟ್ಟೆಗಳನ್ನು ಇಟ್ಟು ಮರಿಮಾಡಿಕೊಳ್ಳುತ್ತವೆ. ಸುಮಾರು 33 ಅಡಿಗಳಿಂದ 65 ಅಡಿಗಳಷ್ಟು ಎತ್ತರದ ಮರಗಳು ಅವಶ್ಯ. ಮರಿಗಳಿಗೆ ಜೇನು ಅಥವಾ ಕಡಜಗಳ ಗೂಡನ್ನು ಕಿತ್ತು ತಂದು ಅದರಲ್ಲಿರುವ ಲಾರ್ವಾಹುಳುಗಳನ್ನು ತಿನ್ನಿಸುತ್ತವೆ. ಏಕೆಂದರೆ ಪ್ರೊಟೀನ್‌ಗಳ ಕಣಜ. ಸಣ್ಣ ಹೆಂಟೆಗೊದ್ದ, ಹಾವುರಾಣಿ, ಕಪ್ಪೆಗಳನ್ನು ಹಿಡಿದು ತಂದು ತಿನ್ನಿಸುತ್ತವೆ. ಜೇನುದನಿಗಳ ಜೀವನ ಹೇಗಿದೆ ಅಲ್ಲವೇ?


ಕ್ರೆಸ್ಟಡ್ ಬಜರ‍್ಡ್                            ವ್ಹೆöÊಟ್ ಐ ಬಜರ‍್ಡ್

No comments:

Post a Comment