ವಿಜ್ಞಾನದ ಒಗಟುಗಳು : ಡಿಸೆಂಬರ್ 2021
ನೈಜ
ನ್ಯೂಕ್ಲಿಯಸ್ ನನ್ನೊಳಿಲ್ಲ
ಹೆಸರು ಕಾಳ
ಜಾತಿಯ ಸಸ್ಯಗಳೇ ನನ್ನ ಆವಾಸ
ಪ್ರೋಟೀನ್ ಗಳಿಗೆ ಬೇಕಾದ ಧಾತು ರೂಪದಲ್ಲಿ
ನಾ ನೀಡುವ
ಮನೆ ಬಾಡಿಗೆಯ !!!
ಜಾಣರೇ
ಸುಳಿವ ಬಳಸಿ ಪತ್ತೆಹಚ್ಚುವಿರೇ ನನ್ನ?
ರಾಸಾಯನಿಕಗಳಿಗೆ
ನಾ ರಾಜ ಆದರೆ ಕಬ್ಬಿಣವಲ್ಲ
ನನಗೋ ತೀರಾ
ನೀರಡಿಕೆ ಶುಷ್ಕನಗೊಳಿಸುವೆ ನಾ
ನಾನೇ
ಕೈಗಾರಿಕೆಗಳ ಗುಣಮಟ್ಟ ನಿರ್ಧಾರಕ
ಉಪ್ಪಿನೊಡನೆ
ಸೇರಲು ಕೊಡುವೆ ಪ್ರಬಲಾಮ್ಲ
ಸತುವಿನೊಂದಿಗೆ
ವರ್ತಿಸಿ ಬಿಡುಗಡೆ ಮಾಡುವೆ ಅತಿಹಗುರ ಧಾತು
ಬಿಡಿಸಿ
ಹೇಳುವೆಯೋ ಒಗಟಿನ ಈ ಸಿಕ್ಕು?
ದೇಹವೇನೋ
ಮೃದು ಆದರೆ ಮೃದ್ವಂಗಿಯಲ್ಲ
ದುಂಡಗಿನ
ದೇಹವಿದೆ ದುಂಡುಹುಳುವಲ್ಲ
ಕಾಲುಗಳೇನೂ
ಕಾಣವು ಆದರೆ ನಾ ಹಾವಲ್ಲ.
ದೇಹದಲ್ಲಿವೆ
ಉಂಗುರದ ರಚನೆಗಳು ಆದರೆ ಜಿಗಣೆಯಲ್ಲಾ
ಮಣ್ಣ
ಫಲವತ್ತತೆ ಹೆಚ್ಚಿಸುವ ನನಗೆ ಕಾಸು ಕೊಡಬೇಕಿಲ್ಲ
ಜಾಣ
ಜಾಣೆಯರೇ ನನ್ನ ಗುರುತು ಹಿಡಿಯಬಲ್ಲಿರೇ ?
ನೆಲದ ಮೇಲೆ
ನೀ ಚಲಿಸುವುದು ನನ್ನ ಬಲದಿಂದ
ನಾನಿಲ್ಲದೆ
ನೀ ಜಾರಿ ಬೀಳುವೆಯಲ್ಲ
ನನ್ನ ಬಲ
ಹೆಚ್ಚಿದರೂ ನೀ ಚಲಿಸಲಾರೆ
ಸ್ನೇಹಕಗಳ
ಬಳಸಿ ನನ್ನ ಹಿಡಿತದಲ್ಲಿ ಇಡಬಲ್ಲೆ
ಒಲವಿಂದ
ಹೇಳಬಲ್ಲೆಯಾ ಈ ಬಲವ?
ಆಮ್ಲದ
ಜೊತೆಯೂ ವರ್ತಿಸಬಲ್ಲೆ
ಕ್ಷಾರದ
ಜೊತೆಯೂ ವರ್ತಿಸಬಲ್ಲೆ
ನನ್ನಿರುವಲ್ಲಿ
ಕಬ್ಬಿಣ ತುಕ್ಕು ಹಿಡಿಯದು
ಕಬ್ಬಿಣದಂತಹ
ವಸ್ತುಗಳ ಆಕರ್ಷಣೆಯ ಹೆಚ್ಚಿಸಬಲ್ಲೆ
ವಿದ್ಯುತ್
ಕೋಶದ ಕವಚವಾಗಿರುವೆ
ಜಾಣ ಜಾಣೆಯರೇ ಸುಳಿವ ಹಿಡಿದು
ಹೇಳಿರಿ ಕ್ಷಣದಲ್ಲಿ
ರಚನೆ : ರಾಮಚಂದ್ರ ಭಟ್ ಬಿ.ಜಿ.
ಉತ್ತರಗಳು : ಮುಂದಿನ ಸಂಚಿಕೆಯಲ್ಲಿ