Wednesday, May 4, 2022
ಸಂಪಾದಕರ ಡೈರಿಯಿಂದ
ಸಂಪಾದಕರ ಡೈರಿಯಿಂದ
‘ಸವಿಜ್ಞಾನ’ ಇ-ಪತ್ರಿಕೆಯ ಎರಡನೆಯ ವರ್ಷದ
ಐದನೇ ಸಂಚಿಕೆ. ಎಂದಿನಂತೆ, ಮಾಹಿತಿಪೂರ್ಣ, ವೈವಿಧ್ಯಮಯ ಲೇಖನಗಳೊಂದಿಗೆ ಸಂಚಿಕೆ ಪ್ರಕಟವಾಗಿದೆ. ವಿಜ್ಞಾನದಲ್ಲಿ ಸೆರೆಪಿಂಡಿಟಿಯ ಬಗ್ಗೆ
ಈ ಹಿಂದೆ ಪ್ರಕಟವಾಗಿದ್ದ ಲೇಖನಗಳ ಜೊತೆಗೆ, ಈ ಬಾರಿ ಎಡ್ವರ್ಡ್ ಜೆನ್ನರ್‌ಸಿಡುಬು ರೋಗಕ್ಕೆ ಲಸಿಕೆಯನ್ನು ಕಂಡು ಹಿಡಿದ ಸಂದರ್ಭವನ್ನು
ನವಿರಾಗಿ ವಿವರಿಸಿದ್ದಾರೆ ಡಾ.ಎಂ.ಜೆ. ಸುಂದರರಾಮ್. ಹಕ್ಕಿಗಳ ಹಾಗೂ ವನ್ಯಜೀವಿಗಳ ಜೀವನ
ಶೈಲಿಯನ್ನು ಪರಿಚಯ ಮಾಡಿಕೊಡುತ್ತಿರುವ ಕೃಷ್ಣ ಚೈತನ್ಯ ಈ ಬಾರಿ ಹಾವುಗಳ ಸಂರಕ್ಷಣೆಯ ಅವಶ್ಯಕತೆ
ಕುರಿತು ಲೇಖನ ಬರೆದಿದ್ದಾರೆ. ಶ್ರೀನಿವಾಸ ಬರೆದಿರುವ ಲೇಖನ ನಿದ್ರೆಯ ಪ್ರಾಮುಖ್ಯತೆಯ ಮೇಲೆ
ಬೆಳಕು ಚೆಲ್ಲಿದೆ. ಸೂಕ್ಷ್ಮ ಜೀವಿಗಳಿಗೆ ಸಂಬಂಧಿಸಿದಂತೆ ಲೂಯಿ ಪಾಶ್ಚರನ ನಡೆಸಿದ ಸಂಶೋಧನೆಯ
ಪರಿಚಯವನ್ನು ಮಾಡಿಕೊಟ್ಟಿದ್ದಾರೆ, ರಾಮಚಂದ್ರ ಭಟ್.
ಸರ್ಕಾರಿ ಪ್ರಾಥಮಿಕ ಶಾಲೆಯ ಕ್ರಿಯಾಶೀಲ ಶಿಕ್ಷಕರಾದ ಮುನಿರಾಜು ಅವರನ್ನು ಪರಿಚಯಿಸಿದ್ದಾರೆ, ಗುರುದತ್ ಅವರು. ಇವೆಲ್ಲದರ ಜೊತೆಗೆ, ಸ್ಥಿರ ಶೀರ್ಷಿಕೆಗಳಾದ ಪದಬಂಧ, ಒಗಟುಗಳು, ವ್ಯಂಗ್ಯ ಚಿತ್ರಗಳು, ಹಾಗೂ ಈ ತಿಂಗಳ ಪ್ರಮುಖ ದಿನಾಚರಣೆಗಳ ಪರಿಚಯ ಎಲ್ಲವನ್ನೂ ಸಂಚಿಕೆ
ಒಳಗೊಂಡಿದೆ.
‘ಸವಿಜ್ಞಾನ’ವನ್ನು ಇನ್ನಷ್ಟು ಸವಿಯಾಗಿ
ಉಣಬಡಿಸುವ ಸಂಕಲ್ಪ ನಮ್ಮದು. ಈ ನಿಟ್ಟಿನಲ್ಲಿ ಇನ್ನಷ್ಟು ಹೊಸ ಬರಹಗಾರರನ್ನು ಪರಿಚಯಿಸುವ ಇಚ್ಛೆ
ನಮಗಿದೆ.. ನೀವೂ ಸಹ ಲೇಖನಗಳನ್ನು, ಒಗಟುಗಳನ್ನು, ಪದಬಂಧಗಳನ್ನು ರಚಿಸಿ ಕಳಿಸುವಿರಾದರೆ, ಅದಕ್ಕೆ ನಮ್ಮ ಸ್ವಾಗತವಿದೆ. ಈ ರಜೆಯ ಅವಧಿಯಲ್ಲಿ ಪ್ರಯತ್ನಿಸಬಾರದೇಕೆ? ಈ ಸಂಚಿಕೆಯ ಬಗ್ಗೆ ನಿಮ್ಮ ವಿದ್ಯಾರ್ಥಿಗಳಿಗೂ, ಸಹೋದ್ಯೋಗಿಗಳಿಗೂ, ಬಂಧು,
ಮಿತ್ರರಿಗೂ ತಿಳಿಸಿ. ಅªರೂ ಓದುವಂತೆ ಪ್ರೇರೇಪಿಸಿ.
ಡಾ. ಟಿ. ಎ. ಬಾಲಕೃಷ್ಣ ಅಡಿಗ
ಪ್ರಧಾನ ಸಂಪಾದಕರು
ಸಿಡುಬಿಗೊಂದು ಲಸಿಕೆ
ಸಿಡುಬಿಗೊಂದು ಲಸಿಕೆ
ನಿವೃತ್ತ ಪ್ರಾಣಿಶಾಸ್ತ್ರ ಪ್ರಾಧ್ಯಾಪಕರು ಹಾಗೂ ವಿಜ್ಞಾನ ಸಂವಹನಕಾರರು
ರೋಮಾಂಚಕವಾಗಿ ವಿಜ್ಞಾನದ ಕತೆಗಳನ್ನು
ಹೇಳುವುದರಲ್ಲಿ ಸಿದ್ಧಹಸ್ತರಾದ ಡಾ. ಎಂ.ಜೆ. ಸುಂದರರಾಮ್ ಅವರು ಈ ಲೇಖನದಲ್ಲಿ ಎಡ್ವರ್ಡ್
ಜೆನ್ನರ್ ಸಿಡುಬು ರೋಗಕ್ಕೆ ಲಸಿಕೆ ಕಂಡುಹಿಡಿದ ಘಟನೆಯನ್ನು ಸ್ವಾರಸ್ಯವಾಗಿ ವಿವರಿಸಿದ್ದಾರೆ.
ಹಾವು ಮತ್ತು ನಾವು
ಹಾವು ಮತ್ತು ನಾವು
ಡಿ. ಕೃಷ್ಣಚೈತನ್ಯ
ವಿಜ್ಞಾನ ಮಾರ್ಗದರ್ಶಕರು ಹಾಗು ವನ್ಯಜೀವಿ ತಜ್ಞರು.
ಗೋಣಿಕೊಪ್ಪಲು ಪ್ರೌಢಶಾಲೆ. ಗೋಣಿಕೊಪ್ಪಲು.
ಕೊಡಗು ಜಿಲ್ಲೆ.
ಶಿಕ್ಷಕ ಮತ್ತು ವನ್ಯಜೀವಿ ತಜ್ಞ ಶ್ರೀ ಕೃಷ್ಣ ಚೈತನ್ಯ ಅವರು ಈ ಬಾರಿಯ ತಮ್ಮ ಲೇಖನದಲ್ಲಿ ಹಾವುಗಳ ಬಗ್ಗೆ ನಮಗಿರುವ ಕೆಲವು ತಪ್ಪು ಕಲ್ಪನೆಗಳತ್ತ ಬೆಳಕು ಚೆಲ್ಲಿ, ಹಾವುಗಳನ್ನು ಸಂರಕ್ಷಿಸುವ ಅವಶ್ಯಕತೆಯ ಬಗ್ಗೆ ಒತ್ತಿ ಹೇಳಿದ್ದಾರೆ.
ನಿದ್ರೆ....... ನೀನಿದ್ದರೆ ನಾ ಗೆದ್ದೆ
ನಿದ್ರೆ....... ನೀನಿದ್ದರೆ ನಾ ಗೆದ್ದೆ
ಎ. ಶ್ರೀನಿವಾಸ್
ಸರ್ಕಾರಿ ಪ್ರೌಢಶಾಲೆ, ಮುತ್ತೂರು,
ಶಿಡ್ಲಘಟ್ಟ (ತಾ), ಚಿಕ್ಕಬಳ್ಳಾಪುರ (ಜಿ).
ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾದ
ನಿದ್ರೆಯ ಮಹತ್ವವನ್ನು ತಮ್ಮದೇ ಆದ ಲಘು ಶೈಲಿಯಲ್ಲಿ ವಿವರಿಸಿದ್ದಾರೆ, ʼಸವಿಜ್ಞಾನʼ ತಂಡದ ಸದಸ್ಯ ಹಾಗೂ ಶಿಕ್ಷಕ ಶ್ರೀನಿವಾಸ್ ಅವರು.
ಸಂವೇದನಾಶೀಲ, ಮಾತೃಹೃದಯಿ ವಿಜ್ಞಾನಿ - ಲೂಯಿ ಪಾಶ್ಚರ್
ಸಂವೇದನಾಶೀಲ, ಮಾತೃಹೃದಯಿ ವಿಜ್ಞಾನಿ - ಲೂಯಿ ಪಾಶ್ಚರ್
ವಿಜ್ಞಾನ ಶಿಕ್ಷಕರು
ಅದು 1885ನೇ ಇಸವಿಯ ಘಟನೆ. ತೀವ್ರರೋಗದಿಂದ ಬಳಲುತ್ತಿರುವ ಬಾಲಕನೊಬ್ಬನನ್ನು ಆತನ ತಂದೆ, ತಾಯಿ ಕಂಡ, ಕಂಡ ವೈದ್ಯರ ಬಳಿಗೆ ಕರೆದೊಯ್ಯುತ್ತಿದ್ದರು. ಎಲ್ಲಾ ವೈದ್ಯರು ಅಸಹಾಯಕರಾಗಿ ಕೈ ಚೆಲ್ಲಿ ನಿಮ್ಮ ಮಗನನ್ನು ‘ದೇವರೇ ಕಾಪಾಡಬೇಕು’ ಎಂದರು. ತಂದೆ, ತಾಯಿ ದೇವರಿಗೆ ಇನ್ನಿಲ್ಲದ ಸೇವೆ ಮಾಡಿದರು. ಆಗ ಯಾರೋ ಈ ವ್ಯಕ್ತಿಯ ಬಗ್ಗೆ ತಿಳಿಸಿದರು. ಈತನೇನೂ ವೈದ್ಯನೂ ಅಲ್ಲ ಮಂತ್ರವಾದಿಯೂ ಅಲ್ಲ.. ಮುಳುಗುತ್ತಿರುವವನಿಗೆ ಹುಲ್ಲು ಕಡ್ಡಿಯೂ ಆಸರೆ ಅಲ್ಲವೇ? ಯಾರಿಂದಲೋ ಈತನ ಬಗ್ಗೆ ಕೇಳಿ, ಕೊನೆಯ ಪ್ರಯತ್ನವಾಗಿ ಮರಣಶಯ್ಯೆಯಲ್ಲಿದ್ದ ಮಗುವನ್ನು ಈತನ ಬಳಿಗೆ ಕರೆತಂದರು. ಬೇರೆ ಯಾವುದೇ ಆಯ್ಕೆ ಇಲ್ಲದ ಕಾರಣ ಆದದ್ದಾಗಲಿ ದೈವೇಚ್ಛೆ ಎಂದುಕೊಂಡು ಆಗ ತಾನೆ ತಾನು ಕಂಡುಹಿಡಿದಿದ್ದ ಚುಚ್ಚುಮದ್ದನ್ನು ಪ್ರಾಯೋಗಿಕವಾಗಿ ನೀಡಿದ! ಅಚ್ಚರಿ ಎನ್ನುವಂತೆ ಈತನ ಈ ಚಿಕಿತ್ಸೆಯಿಂದ ಬಾಲಕ ಎದ್ದು ಕುಳಿತ! ಅಂದು ಸಾವೊಂದೇ ಪರಿಹಾರವಾಗಿದ್ದ ರೇಬಿಸ್ ಎಂಬ ಕಾಯಿಲೆಯಿಂದ ನರಳುತ್ತಿದ್ದ ಈ ಬಾಲಕ ಪವಾಡ ಸದೃಶವಾಗಿ ಬದುಕುಳಿದ. ಹೀಗೆ, ರೇಬಿಸ್ ಕಾಯಿಲೆಗೆ ಚುಚ್ಚುಮದ್ದನ್ನು ಕಂಡು ಹಿಡಿದು ಮನುಕುಲವನ್ನು ರೇಬಿಸ್ ರೋಗದಿಂದ ಪಾರುಮಾಡಿದ ಆ ಮಹಾನ್ ವ್ಯಕ್ತಿಯೇ ಲೂಯಿ ಪಾಶ್ಚರ್.
ಆದ್ವಿತೀಯ ಸಾಧನೆಗಳ ಸರದಾರ – ‘ಮೆಟೀರಿಯಲ್ ಮುನಿರಾಜು’
ಆದ್ವಿತೀಯ ಸಾಧನೆಗಳ ಸರದಾರ – ‘ಮೆಟೀರಿಯಲ್ ಮುನಿರಾಜು’
ಶಿಕ್ಷಕನೊಬ್ಬ ಮನಸ್ಸು ಮಾಡಿದರೆ ವಿದ್ಯಾರ್ಥಿಗಳಲ್ಲಿ ಮತ್ತು ಶಾಲೆಯ ವಾತಾವರಣದಲ್ಲಿ ಗಮನಾರ್ಹ ಬದಲಾವಣೆ ತರಬಹುದು ಎಂಬುದಕ್ಕೆ ಹಲವಾರು ಉದಾಹರಣೆಗಳು ನಮ್ಮ ಮುಂದಿವೆ. ಈ ಬಾರಿಯ ನಮ್ಮ ಸಾಧಕ ಶಿಕ್ಷಕರಾಗಿ ನಾವು ಪರಿಚಯಿಸುತ್ತಿರುವುದು ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಸಿ.ಮುನಿರಾಜು ಅವರನ್ನು.
ಪದಬಂಧ - ಮೇ 2022
ಪದಬಂಧ - ಮೇ 2022
ಸುಳಿವುಗಳು
ಎಡದಿಂದ
ಬಲಕ್ಕೆ;
1. ಕಾಯವು
ಚಲಿಸಿದ ಕನಿಷ್ಠ ದೂರ (4)
2. ಒಂದೊಂದನ್ನೇ
ಎಣಿಸಿ ಅಳೆಯುವ ಪ್ರಮಾಣ (4)
3. ಇಂತಹ
ಬಲಪ್ರಯೋಗದಿಂದ ಕಾಯವು ಒಂದಿಷ್ಟೂ ಅಲುಗಾಡದು (6)
4. ಕಾಯದ
ಚಲನೆಯನ್ನು ವಿರೋಧಿಸುವ ಬಲ (5)
5. ಕೇರಂ
ಪಾನ್‌ಗಳು ಈ ನಿಯಮವನ್ನು ಅನುಸರಿಸಿಯೇ ಚದರುತ್ತವೆ (7)
ಮೇಲಿನಿಂದ ಕೆಳಕ್ಕೆ;
1. ಭೌತಿಕವಾಗಿ
ಅಳತೆಗೆ ಸಿಗುವಂತಹದ್ದು (4)
2. ನಿರ್ದಿಷ್ಟ
ಸಮಯದಲ್ಲಿ ನಿರ್ದಿಷ್ಟ ದೂರವನ್ನು ಕ್ರಮಿಸುವ ಚಲನೆ (7)
3. ನೆಲದ ಮೇಲಿನ ಕಾಯಗಳ ಚಲನೆ ಮಾತ್ರವಲ್ಲದೆ ದೂರದರ್ಶಕದ ಮೂಲಕ ಆಕಾಶಕಾಯಗಳ ಚಲನೆಯನ್ನೂ ಗಮನಿಸಿ ಗೆಲಿದವನಿವ (4)
4. ಕಾಯದ
ಚಲನೆಗೆ ಬೇಕಾದ್ದು ಅಂತಿಂಥ ಬಲವಲ್ಲ ಇಂತಹ ಬಲ (7)
5. ವೇಗದಲ್ಲಿನ ಬದಲಾವಣೆ ಕೆಳಗಿನಿಂದ ಮೇಲ್ಮುಖವಾಗಿ ಆದರೆ ಅದು (4)
ಏಪ್ರಿಲ್ ಪದಬಂಧದ ಉತ್ತರಗಳು
ರಚನೆ: ವಿಜಯಕುಮಾರ್ ಹುತ್ತನಹಳ್ಳಿ