SISF - 2025 : ಅಭಿನಂದನೆಗಳು
2025 ನೇ ಸಾಲಿನಲ್ಲಿ ದಕ್ಷಿಣ ಭಾರತ ವಿಜ್ಞಾನ ಮೇಳದಲ್ಲಿ ಪಾಲ್ಗೊಂಡು ವಿಜ್ಞಾನದ ಸೊಡರನ್ನು ಪ್ರಜ್ವಲಿಸಿ ಕರ್ನಾಟಕದ ಕೀರ್ತಿಯನ್ನು ಹೆಚ್ಚಿಸಿದ ಬಹುಮಾನಿತ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಸವಿಜ್ಞಾನ ಬಳಗವು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತದೆ.
1.
ಮೊದಲ ಬಹುಮಾನದ ಆಕರ್ಷಕ ಟ್ರೋಫಿ, ಬಹುಮಾನಗಳು
೬ ಪ್ರಾಂತ್ಯಗಳ ಗುಂಪು ವಿಭಾಗದ ಸ್ಪರ್ಧೆಯಲ್ಲಿ NCSM ಪ್ರಥಮ ಬಹುಮಾನವು ಹಾಸನದ ವಿಜಯ ಶಾಲೆಯ ಪಾಲಾಯಿತು. ಶ್ರೀಮತಿ ಅನಿತಾ ಜೆ ಯವರ ಮಾರ್ಗದರ್ಶನದಲ್ಲಿ ೧೦ನೇ ತರಗತಿಯ ವಿದ್ಯಾರ್ಥಿಗಳಾದ ವರುಣ್ ಎಚ್ ಎಂ ಮತ್ತು ತ್ರಿಭುವನ್ ಎಸ್ ಗೌಡ ರವರು "ಮ್ಯಾಗ್ನೆಟೋಹೈಡ್ರೋಡೈನಾಮಿಕ್ ಡ್ರೈವ್" ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಿದರು.
2.

3.
ವಿದ್ಯಾರ್ಥಿಗಳ ವೈಯಕ್ತಿಕ ವಿಭಾಗದಿಂದ ಪ್ರಥಮ ಬಹುಮಾನ ಬೆಂಗಳೂರಿನ ಹೊಸರೋಡ್ ನ ಚನ್ನಕೇಶವ ಪಬ್ಲಿಕ್ ಶಾಲೆಯ ೮ನೆ ತರಗತಿಯ ಪಾಂಡುರಂಗನ ಪಾಲಾಯಿತು ಮಾರ್ಗದರ್ಶಿ ಶಿಕ್ಷಕ ಜೋಶುವಾ ಜೊತೆ ವಿದ್ಯಾರ್ಥಿ

4.
ಹುಬ್ಬಳ್ಳಿಯ ಜೆ.ಕೆ. ಇಂಗ್ಲಿಷ್ ಮೀಡಿಯಂ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿ ತೇಜಸ್ ಮಂಗಳೂರು ಮಠ ಹಾಗೂ ಹತ್ತನೆಯ ತರಗತಿಯ ವಿದ್ಯಾರ್ಥಿ ಭರತ್ ಇಂಗಳಗೊಂಡಿ ತಮ್ಮ ಕೃತಕ ಉಸಿರಾಟಕ್ಕೆ ಸಂಬಂಧಿಸಿದ ಮಾದರಿಯೊಂದಿಗೆ
5.
ಶಿಕ್ಷಕರ ವಿಭಾಗದ ದ್ವಿತೀಯ ಬಹುಮಾನವು ಶ್ರೀ ಅನಿಲ್ ಗಾಂವ್ಕರ್ ರವರ ಪಾಲಾಯಿತು.
6.
ಕರ್ನಾಟಕದಿಂದ ತೃತೀಯ ಬಹುಮಾನ ಪಡೆದ ಚಿತ್ರದುರ್ಗದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಮಾರ್ಗದರ್ಶಿ ಶಿಕ್ಷಕರಾದ ಶ್ರೀಮತಿ ಆಶಾರವರೊಂದಿಗೆ 7.
No comments:
Post a Comment