ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Friday, December 5, 2025

🌸 ಡಿಸೆಂಬರ್ 2025ರ ಲೇಖನಗಳು 🌸

🌸 ಡಿಸೆಂಬರ್ 2025ರ ಲೇಖನಗಳು 🌸


✨ ವಿಶೇಷ ಲೇಖನಗಳು ✨

  1. ನಮಗರಿಯದ ಮರಗಳ ಸಹಕಾರದ ಬೃಹತ್ www. ಜಾಲ!!
    ✍️ ಲೇಖಕರು: ರಾಮಚಂದ್ರಭಟ್‌ ಬಿ.ಜಿ.
    [ಮರಗಳು ಪರಸ್ಪರ ಮಾಹಿತಿ ಹಂಚಿಕೊಳ್ಳುವ ‘Wood Wide Web’ ಎಂಬ ಅದ್ಭುತ ಪ್ರಕೃತಿ ಜಾಲದ ವೈಜ್ಞಾನಿಕ ಅನಾವರಣ.]

  2. ಮೈಕ್ರೋ ಜಗತ್ತಿನ ಮ್ಯಾಕ್ರೋ ಚಿತ್ರಣ
    ✍️ ಲೇಖಕರು: ಕೃಷ್ಣ ಸುರೇಶ
    [ಸೂಕ್ಷ್ಮ ಜಗತ್ತಿನ ವೈಶಿಷ್ಟ್ಯಗಳನ್ನು ಹಿಡಿಯುವ ಮ್ಯಾಕ್ರೋ ಫೋಟೋಗ್ರಫಿಯ ವಿಜ್ಞಾನ ಮತ್ತು ಕಲೆ.]

  3. ಮನೆಯೊಳಗೊಂದು ಬಾಣಂತನ
    ✍️ ಲೇಖಕರು: ಶ್ರೀ ಕೃಷ್ಣ ಚೈತನ್ಯ
    [ಒಳಾಂಗಣದಲ್ಲಿ ಬೆಳೆಸಬಹುದಾದ ‘ಬಾಣಂತನ’ಗಳ ವನ್ಯ–ವೈಜ್ಞಾನಿಕ ಮಾಹಿತಿ ಮತ್ತು ದಿನನಿತ್ಯದ ಅನುಭವಗಳ ಸಂಗ್ರಹ.]

  4. ಪರಿಸರವ್ಯವಸ್ಥೆಗಳು ಹೇಗೆ ವಿಕಾಸಗೊಳ್ಳುತ್ತವೆ?
    ✍️ ಲೇಖಕರು: ತಾಂಡವಮೂರ್ತಿ ಎ.ಎನ್‌
    [ಕ್ಲೈಮ್ಯಾಕ್ಸ್, ಸಕ್ಸೆಷನ್ ಮತ್ತು ಪರಿಸರವ್ಯವಸ್ಥೆಯ ವಿಕಾಸದ ವೈಜ್ಞಾನಿಕ ಹಂತಗಳ ವಿಶ್ಲೇಷಣೆ.]

  5. ನೊಬೆಲ್‌ ಪಾರಿತೋಷಕಗಳ ಹಿಂದಿರುವ ರೋಚಕ ಇತಿಹಾಸ
    ✍️ ಲೇಖಕರು: ಬಿ.ಎನ್. ರೂಪ
    [ನೊಬೆಲ್ ಪ್ರಶಸ್ತಿ ಸ್ಥಾಪನೆಯ ಹಿನ್ನೆಲೆ, ಕುತೂಹಲಕಾರಿ ಸಂಗತಿಗಳು, ಮತ್ತು ಮಹತ್ವದ ಘಟನೆಗಳು.]

  6. ಮಣ್ಣು ಜೀವಸಂಕುಲದ ಹೊನ್ನು — ಇದು ಪ್ರತಿ ಜೀವಿಯ ಜೀವನಾಧಾರ
    ✍️ ಲೇಖಕರು: ಬಸವರಾಜ ಎಮ್. ಯರಗುಪ್ಪಿ
    [ಮಣ್ಣಿನ ಜೈವಿಕ ವೈವಿಧ್ಯತೆ, ಸೂಕ್ಷ್ಮ ಜೀವಿಗಳ ಪಾತ್ರ ಹಾಗೂ ಪರಿಸರದ ಮೇಲೆ ಮಣ್ಣಿನ ಪ್ರಭಾವ.]

  7. ಡಿಸೆಂಬರ್ 2025 ರ ಸೈಂಟೂನ್‌ಗಳು
    ✍️ ಶ್ರೀಮತಿ ಜಯಶ್ರೀ ಶರ್ಮ


Thursday, December 4, 2025

ನಮಗರಿಯದ ಮರಗಳ ಸಹಕಾರದ ಬೃಹತ್ www. ಜಾಲ!!

 ನಮಗರಿಯದ ಮರಗಳ ಸಹಕಾರದ ಬೃಹತ್ www. ಜಾಲ!!

ಲೇಖಕರು : ರಾಮಚಂದ್ರಭಟ್‌ ಬಿ.ಜಿ.


 ಇದೇನು ಸಸ್ಯಗಳಲ್ಲೂ ಅಂತರಜಾಲವೇ? ಇದೆಂತಹ ಒಗಟು? ಬಾಲ್ಯದಲ್ಲಿ ಕಾಡುಮೇಡು ನನ್ನಂತೆಯೇ ನಿಮ್ಮನ್ನೂ ಬಹಳವಾಗಿ ಕಾಡಿರಬೇಕಲ್ಲ? ಅದೆಂತು ಅವು ಉಸಿರಾಡುತ್ತವೋ? ಹೇಗೆ ಬದುಕುತ್ತವೋ ? ನಮ್ಮಲ್ಲಿದ್ದಂತೆ ಅವೂ ಸಂವಹನ ನಡೆಸುತ್ತವೋ ?.... ಎನ್ನುವ ತಣಿಯದ ಕುತೂಹಲ. ಜೆ.ಸಿ. ಬೋಸರು ಸಸ್ಯಗಳಿಗೂ ಜೀವವಿದೆ ಎಂಬ ಸಂಶೋಧನೆ ಪಾಶ್ಚಾತ್ಯ ವೈಜ್ಞಾನಿಕ ಜಗತ್ತಿನಲ್ಲಿ ಬಿತ್ತಿದ ಕೋಲಾಹಲದ ಕಥೆ , ಜೊತೆಗೆ ಬಿ.ಜಿ.ಎಲ್‌ ಸ್ವಾಮಿಯವರ ಕಥಾನಕಗಳು ಮತ್ತಷ್ಟು ಕುತೂಹಲ ಹೆಚ್ಚಿಸಿದವು.  ಅದಷ್ಟೇ ಅಲ್ಲದೇ ನಮ್ಮ ಕನ್ನಡಿಗ ವಿಜ್ಞಾನಿ,‌ ಹಾಗೂ ಸಾಹಿತಿಗಳಾದ ಕೆ.ಎನ್‌. ಗಣೇಶಯ್ಯನವರ “ಸಸ್ಯಸಗ್ಗ” ಹೊಸದೊಂದು ಲೋಕವನ್ನು ಅನಾವರಣ ಮಾಡಿಸಿತು. ಪ್ರಾಣಿಗಳಲ್ಲಿ  ಮತ್ತು ಮಾನವರಲ್ಲಿ ಇರುವಂತೆ ದಾಯಾದಿ ಮತ್ಸರ ಮತ್ತು ಕೂಟನೀತಿಗಳು ಸಸ್ಯಗಳಲ್ಲೂ ಇದೆ ಎನ್ನುವ ಕುರಿತಂತೆ ಅದ್ಭುತ ಸಂಶೋಧನೆ ನಡೆಸಿ ರೋಚಕ ಮಾಹಿತಿಗಳನ್ನು “ಸಸ್ಯಸಗ್ಗ” ದಲ್ಲಿ ಎಳೆಎಳೆಯಾಗಿ ವಿವರಿಸಿದ್ದಾರೆ. ಅವರೊಂದಿಗೆ ನಾವು ನಡೆಸಿದ ಸಂವಾದದ ವಿಡಿಯೋವನ್ನು ನೀವು ನೋಡಿರಬಹುದು. ಲೇಖನವನ್ನು ಓದಿರಲೂಬಹುದು. ಈಗ, ಈ ಲೇಖನದಲ್ಲಿ ಸಸ್ಯ ಜಗತ್ತಿನ ಇನ್ನಷ್ಟು ರೋಚಕ ಮಾಹಿತಿ ನಿಮಗಾಗಿ ನೀಡುತ್ತಿದ್ದೇನೆ.

ನಮ್ಮ ಸುತ್ತಲೂ ಮೌನವಾಗಿ, ನಿಶ್ಚಲವಾಗಿ ನಿಂತಿರುವ ಮರಗಳನ್ನು ನಾವು ಕೇವಲ ಏಕಾಂಗಿ ಸಸ್ಯಗಳೆಂದು ಭಾವಿಸಿದ್ದೇವೆ. ಸಾವಿರಾರು ವರ್ಷ ಬದುಕುವ ಅವು, ಹೊರನೋಟಕ್ಕೆ ಕೇವಲ ಸೂರ್ಯನ ಬೆಳಕು ಮತ್ತು ನೀರನ್ನು ಹೀರಿ, ಉಳಿದವುಗಳೊಂದಿಗೆ ಪೈಪೋಟಿ ನಡೆಸುತ್ತವೆ ಎಂದು ನಂಬಿದ್ದೇವೆ. ಆದರೆ, ಈ ವಿಶಾಲ ವಿಶ್ವದಲ್ಲಿ ಪ್ರತಿಯೊಂದು ಜೀವಿಯೂ ತನ್ನ ಸ್ವಾರ್ಥಕ್ಕಾಗಿ ಮಾತ್ರ ಬದುಕುತ್ತಿಲ್ಲ; ಬದಲಿಗೆ, ಪರಸ್ಪರ ಹಂಚಿಕೊಂಡು ಬದುಕುವುದೇ 'ಸೃಷ್ಟಿಯ ಮೂಲ ಸೂತ್ರ'ಎಂಬ ಸತ್ಯವನ್ನು ಆಧುನಿಕ ಪರಿಸರ ವಿಜ್ಞಾನವು ಬಯಲು ಮಾಡಿದೆ.

ನಾವು ರಸಾಯನ ವಿಜ್ಞಾನದಲ್ಲಿ ಪರಮಾಣುಗಳ ಆಕರ್ಷಣೆ ಮತ್ತು ಎಲೆಕ್ಟ್ರಾನ್‌ಗಳ ಹಂಚಿಕೆಯಿಂದ ಸ್ಥಿರತೆ ಪಡೆಯುವ ಪಾಠವನ್ನು ಕಲಿತಂತೆ, ಮರಗಳು ಸಹ ತಮ್ಮ ನಿಶ್ಯಬ್ದದ ಆಳದಲ್ಲಿ ಅತ್ಯಂತ ಉದಾತ್ತವಾದ ಜೀವನ ಮೌಲ್ಯಗಳ ರಸಾಯನವನ್ನು ನಿರಂತರವಾಗಿ ಉಣಬಡಿಸುತ್ತಿವೆ. ಈ ಮೌನ ಗೋಡೆಗಳ ಕೆಳಗೆ, ನಮ್ಮ ಕಣ್ಣಿಗೆ ಕಾಣದ ಒಂದು ಗುಪ್ತ ಸಂವಹನ ಕ್ರಾಂತಿ ಸದಾ ಸಕ್ರಿಯವಾಗಿದೆ. ಈ ಜಾಲಬಂಧದ ಮೂಲಕ ಮರಗಳು ಸಂಪನ್ಮೂಲಗಳನ್ನು ಹಂಚಿಕೊಳ್ಳುತ್ತವೆ, ಅಪಾಯದ ಬಗ್ಗೆ ಎಚ್ಚರಿಕೆ ನೀಡುತ್ತವೆ, ಮತ್ತು ಪೀಳಿಗೆಯಿಂದ ಪೀಳಿಗೆಗೆ ಜ್ಞಾನವನ್ನು ವರ್ಗಾಯಿಸುತ್ತವೆ. ಅಂದರೆ, ಕಾಡು ಒಂದು ಏಕಾಂಗಿ ಸಮೂಹವಲ್ಲ, ಬದಲಿಗೆ 'ಒಂದೇ  ಜೀವಿಯಾಗಿ ಉಸಿರಾಡುವ' ಸಂಕೀರ್ಣ, ಸಮನ್ವಯದ ಸಮುದಾಯವಾಗಿದೆ ಎಂದರೆ ನಿಮಗೆ ಅಚ್ಚರಿಯಾದೀತು.

ಭೂಗತ ಮಾಯಾಲೋಕ: ಮೈಕೋರೈಜಲ್ ಮೈತ್ರಿ ಮತ್ತು ಕೋವಲೆಂಟ್ ಬಂಧ - ಮರಗಳ ನಡುವಿನ ಈ ಗುಪ್ತ ಭಾಷೆ ಬೇರುಗಳು ಮತ್ತು ಶಿಲೀಂಧ್ರಗಳ (Fungi)ನಡುವಿನ ಅದ್ಭುತ ಮೈತ್ರಿಯಿಂದ ಹುಟ್ಟಿದೆ. ಇದನ್ನು ಮೈಕೋರೈಜಲ್ ನೆಟ್‌ವರ್ಕ್ (Mycorrhizal Network )ಅಥವಾ "ವುಡ್ ವೈಡ್ ವೆಬ್" (Wood Wide Web) ಎಂದು ಕರೆಯಲಾಗುತ್ತದೆ.

ಶಿಲೀಂಧ್ರಗಳು ಮಣ್ಣಿನ ಸೂಕ್ಷ್ಮ ರಂಧ್ರಗಳಿಂದ ಮರಕ್ಕೆ ಅತ್ಯಗತ್ಯವಾದ ನೀರು, ರಂಜಕ (Phosphorus) ಮತ್ತು ಸಾರಜನಕದಂತಹ (Nitrogen)ಖನಿಜಗಳನ್ನು ಹೀರಿ ಒದಗಿಸುತ್ತವೆ. ಇದಕ್ಕೆ ಪ್ರತಿಯಾಗಿ, ಮರವು ದ್ಯುತಿಸಂಶ್ಲೇಷಣೆಯಿಂದ ಉತ್ಪಾದಿಸಿದ ಸಕ್ಕರೆಯನ್ನು ಶಿಲೀಂಧ್ರಗಳಿಗೆ ನೀಡುತ್ತದೆ. ಇದು ಕೇವಲ ಎರಡು ಜೀವಿಗಳ ನಡುವಿನ ವಿನಿಮಯವಲ್ಲ.ಇದು'ಸಹಬಾಳ್ವೆ'ಯ ಕೋವಲೆಂಟ್ ಬಂಧ.

ರೇಡಿಯೋ ವಿಕಿರಣದ ಪ್ರಯೋಗ: ಬ್ರಿಟಿಷ್ ಕೊಲಂಬಿಯಾದ ವಿಜ್ಞಾನಿ ಸುಝೇನ್ ಸಿಮ್ಮರ್ಡ್ ಅವರು ರೇಡಿಯೋ ವಿಕಿರಣಯುಕ್ತ ಇಂಗಾಲವನ್ನುಬಳಸಿ, ಒಂದು ಜಾತಿಯ ಮರವು (ಬರ್ಚ್) ಕಷ್ಟದಲ್ಲಿದ್ದ ಇನ್ನೊಂದು ಜಾತಿಯ ಮರಕ್ಕೆ (ಫರ್) ತನ್ನಲ್ಲಿದ್ದ ಹೆಚ್ಚುವರಿ ಆಹಾರವನ್ನು ಭೂಗತ ಜಾಲದ ಮೂಲಕ ಕಳುಹಿಸುವುದನ್ನು ಸ್ಪಷ್ಟವಾಗಿ ಸಾಬೀತುಪಡಿಸಿದರು. ಇದು ಅಗತ್ಯವಿರುವವರಿಗೆ ಸಹಾಯ ಮಾಡುವ, ಹೆಚ್ಚುವರಿಯಾದದ್ದನ್ನು ಹಂಚುವ ಅಯಾನಿಕ ಬಂಧದ ಧರ್ಮಕ್ಕೆ ಸಮಾನವಾಗಿದೆ.

ವಿಚಿತ್ರ ಸತ್ಯ: ಸತ್ತ ಬುಡದ ಬದುಕು

ಈ ಜಾಲಬಂಧದ ಶಕ್ತಿಗೆ ರೋಚಕ ಉದಾಹರಣೆ ಎಂದರೆ, ಕಾಡಿನಲ್ಲಿ ಕತ್ತರಿಸಲ್ಪಟ್ಟಮರದ ಬುಡಗಳು (Stumps)ಸಹ ಸುತ್ತಮುತ್ತಲಿನ ಆರೋಗ್ಯಕರ ಮರಗಳ ಮೂಲಕ ಸಂಪರ್ಕ ಹೊಂದಿ, ಹಲವು ವರ್ಷಗಳ ಕಾಲಜೀವಂತವಾಗಿ ಉಳಿಯಬಲ್ಲವು ಎಂಬುದು!!. ಇದನ್ನು ನೋಡಿದಾಗ, ಒಂದು ಅರಣ್ಯದಲ್ಲಿ ಬಿದ್ದವರನ್ನೂ, ನಾಶವಾದವರನ್ನೂ ಸಲುಹುವ ಒಂದು ದೊಡ್ಡ "ಪರೋಪಕಾರದ ಪಾಠ" ಇಲ್ಲಿರುವುದು ಅಚ್ಚರಿ ತಾರದಿರದು.

ನೆರಳು ಮತ್ತು ನೆರವು: ಬಂಧುತ್ವ, ಎಚ್ಚರಿಕೆ ಮತ್ತು ಜೈವಿಕ ಸಮತೋಲನ

ವುಡ್ ವೈಡ್ ವೆಬ್ ಕೇವಲ ಸಂಪನ್ಮೂಲ ಹಂಚಿಕೆಗಷ್ಟೇ ಸೀಮಿತವಾಗಿಲ್ಲ. ಇದು ಸಂಕೀರ್ಣ ಮಟ್ಟದ ಬುದ್ಧಿಮತ್ತೆ ಮತ್ತು  ರಕ್ಷಣೆಯನ್ನು  ಒಳಗೊಂಡಿದೆ.

ತಾಯಿ ಮರಗಳು ಮತ್ತು ಬಂಧುತ್ವದ ಗುರುತಿಸುವಿಕೆ!!!

ಕಾಡಿನ ದೊಡ್ಡ, ಹಳೆಯ ಮರಗಳು, ಅಂದರೆ 'ತಾಯಿ ಮರಗಳು' (Mother Trees), ಈ ಸಂಪೂರ್ಣ ಜಾಲಬಂಧದ ಕೇಂದ್ರ ಬಿಂದುಗಳಾಗಿ (Hubs) ಕೆಲಸ ಮಾಡುತ್ತವೆ.

·        ತಾಯಿ ಮರಗಳು ತಮ್ಮ ಮೈಕೋರೈಜಲ್ ಜಾಲದ ಮೂಲಕ ತಮ್ಮ ಬಂಧುತ್ವವನ್ನು ಗುರುತಿಸುತ್ತವೆ (Kin Recognition). ಅವು ತಮ್ಮದೇ ಬೀಜದಿಂದ ಬೆಳೆದ ಸಸಿಗಳಿಗೆ (Offspring) ಇತರ ಸಸಿಗಳಿಗಿಂತ ಹೆಚ್ಚು ಪೋಷಕಾಂಶಗಳನ್ನು ನಿರ್ದೇಶಿಸಿ ಕಳುಹಿಸುತ್ತವೆ.

·                   ಒಂದು ತಾಯಿ ಮರವು ಹಾನಿಗೊಳಗಾದಾಗ, ಅದು ತನ್ನ ಕೊನೆಯ ಶಕ್ತಿಯನ್ನು ಮತ್ತು ರಕ್ಷಣಾ ಸಂಕೇತಗಳನ್ನು ತನ್ನ ಮರಿ ಸಸಿಗಳಿಗೆ ಕಳುಹಿಸಿ, ಮುಂದಿನ ಪೀಳಿಗೆಯನ್ನು ಉಳಿಸಲು ಪ್ರಯತ್ನಿಸುತ್ತದೆ.ಯಾವುದೇ ಒಂದು ಮರಕ್ಕೆ ಕೀಟಗಳ ದಾಳಿಯಾದಾಗ, ಅದು ರಾಸಾಯನಿಕ ಸಂಕೇತಗಳನ್ನುತನ್ನ ಜಾಲದ ಮೂಲಕ ತಕ್ಷಣವೇ ರವಾನಿಸುತ್ತದೆ.ಈ ಸಂದೇಶ ಪಡೆದ ಮರಗಳು, ದಾಳಿ ತಮ್ಮನ್ನು ತಲುಪುವ ಮೊದಲೇ, ಕೀಟಗಳನ್ನು ತಿನ್ನಲು ಸಾಧ್ಯವಾಗದಂತಹ ವಿಷಕಾರಿ ಅಥವಾ ಕಹಿ ರುಚಿಯ ರಕ್ಷಣಾತ್ಮಕ  ಟ್ಯಾನಿನ್‌ಗಳನ್ನು (Tannins) ಉತ್ಪಾದಿಸಿ ಅಪಾಯವನ್ನು ಎದುರಿಸಲು ಸಿದ್ಧವಾಗುತ್ತವೆ. ಮರಗಳು ಕೇವಲ ತಮ್ಮನ್ನು ರಕ್ಷಿಸಿಕೊಳ್ಳುವುದಷ್ಟೇ ಅಲ್ಲ, ದಾಳಿಕೋರ ಕೀಟಗಳಶತ್ರುಗಳನ್ನು (Predators)ಆಕರ್ಷಿಸಲು ಸಹ ರಾಸಾಯನಿಕಗಳನ್ನು ಗಾಳಿಯಲ್ಲಿ ಮತ್ತು ಜಾಲದಲ್ಲಿ ಹೊರಹಾಕುತ್ತವೆ. ಉದಾಹರಣೆಗೆ, ಒಂದು ಮರವನ್ನು ತಿಂದ ಕಂಬಳಿಹುಳುವಿನ ಶತ್ರುಗಳಾದ ಪರಾವಲಂಬಿ ಕಣಜಗಳನ್ನು ಆಕರ್ಷಿಸುವ ರಾಸಾಯನಿಕ ವಸ್ತುವನ್ನು ಹೊರಹಾಕಿ ಶತ್ರು ಸಂಹಾರಕ್ಕೆ ವೇದಿಕೆ ಸೃಷ್ಟಿ ಮಾಡುತ್ತವೆ. ಎಂತಹ ಅದ್ಭುತ ಜೈವಿಕ ಯುದ್ಧತಂತ್ರ (Biological Warfare)ಅಲ್ಲವೇ ?

ಮರಗಳು ಕೇವಲ ರಾಸಾಯನಿಕವಾಗಿ ಮತ್ತು ಜೈವಿಕವಾಗಿ ಸಂವಹನ ನಡೆಸುವುದಲ್ಲ, ಬದಲಿಗೆ ಅವುಗಳ ಸ್ಥೂಲ ಶರೀರವು ಕೂಡ ಮೌಲ್ಯಗಳನ್ನು ಮತ್ತು ವಿಶಿಷ್ಟ ಗುಣಗಳನ್ನು ಪ್ರದರ್ಶಿಸುತ್ತದೆ.ಮರಗಳು ನಮಗೆ ಸಹನೆ (Patience)ಮತ್ತು ಸ್ಥಿರತೆ (Stability)ಯ ಪಾಠ ಕಲಿಸುತ್ತವೆ.ಮರದ ಕಾಂಡದಲ್ಲಿ ಕಾಣುವ ಪ್ರತಿ ವಾರ್ಷಿಕ ವಾರ್ಷಿಕ ಉಂಗುರಗಳು(Annual Rings) ಆ ಮರವು ಕಳೆದ ಹಾಗೂ ಅನುಭವಿಸಿದ ಒಂದು ವರ್ಷದ ಬದುಕಿನ ದಾಖಲೆ. ಬರಗಾಲ, ಮಳೆ, ಕಾಡ್ಗಿಚ್ಚಿನಂತಹ ಎಲ್ಲಾ ಇತಿಹಾಸವೂ ಈ ಪದರಗಳಲ್ಲಿ ಅಡಗಿರುತ್ತದೆ. ಈ ವಾರ್ಷಿಕ ಉಂಗುರಗಳ ವೈವಿಧ್ಯವು, ಕಷ್ಟದ ದಿನಗಳಲ್ಲೂ ಮರವು ತನ್ನ ಬೆಳವಣಿಗೆಯನ್ನು ನಿಲ್ಲಿಸದೆ, ನಿಧಾನವಾಗಿಯಾದರೂ ಮುಂದುವರಿಸಿದೆ ಎಂಬುದನ್ನು ತೋರಿಸುತ್ತದೆ.ಎಂತಹ ಬಿರುಗಾಳಿ ಬಂದರೂ ಮುರಿಯದೆ ನಿಲ್ಲುವ ಮರದ ಕಾಂಡವು, ಅದರೊಳಗಿನ ಸೆಲ್ಯುಲೋಸ್ ಮತ್ತು ಲಿಗ್ನಿನ್‌ನ ಅಣುಗಳ ಬಲವಾದ ಶಿಸ್ತಿನ ಜೋಡಣೆಯ (Solid State)ಫಲವಾಗಿದೆ. ಇದು, ಸಂಘಜೀವನ ಮತ್ತು ಶಿಸ್ತಿನ ಬಲದಿಂದ ಬಾಹ್ಯ ಒತ್ತಡಗಳನ್ನು ಎದುರಿಸುವ ಕಲೆಯನ್ನು ಕಲಿಸುತ್ತದೆ.ಮರಗಳು ತಮ್ಮ ಫ್ಲೋಯಂ (Phloem) ಅಂಗಾಂಶದ ಮೂಲಕ ಅಥವಾ ಶಿಲೀಂಧ್ರ ಜಾಲದ ಮೂಲಕ ವಿದ್ಯುತ್ ಸಂಕೇತಗಳನ್ನು (Electrical Impulses)ರವಾನಿಸುತ್ತವೆ. ಈ ಸಂಕೇತಗಳು ರಾಸಾಯನಿಕಗಳಿಗಿಂತ ಹೆಚ್ಚು ವೇಗವಾಗಿ ಚಲಿಸುತ್ತವೆ, ಇದು ಅನಿವಾರ್ಯ ಪರಿಸ್ಥಿತಿಗಳಲ್ಲಿ ತಕ್ಷಣದ ಪ್ರತಿಕ್ರಿಯೆ ನೀಡಲು ಸಹಾಯ ಮಾಡುತ್ತದೆ.

ಒಂದು ಕಾಡಿನ ಭಾಗದಲ್ಲಿ ಬರಗಾಲದ ಲಕ್ಷಣಗಳು ಕಂಡಾಗ, ಮೈಕೋರೈಜಲ್ ಜಾಲದ ಮೂಲಕ ಸಾಗುವ ಸಂಕೇತಗಳು ದೂರದಲ್ಲಿರುವ ಮರಗಳನ್ನೂ ತಲುಪುತ್ತವೆ. ಈ ಸಂದೇಶಗಳನ್ನು ಗ್ರಹಿಸಿದ ಮರಗಳು, ಬರಗಾಲ ಬರುವುದಕ್ಕಿಂತ ಮೊದಲೇ, ನೀರನ್ನು ಸಂರಕ್ಷಿಸಲು ತಮ್ಮ ಎಲೆಗಳಲ್ಲಿನ ಪತ್ರರಂಧ್ರಗಳನ್ನು (Stomata) ಮುಚ್ಚಲು ಪ್ರಾರಂಭಿಸುತ್ತವೆ. ಕಷ್ಟಕಾಲವನ್ನು ಊಹಿಸಿ ಅದಕ್ಕೆ ಹೇಗೆ ಸಿದ್ಧವಾಗಬೇಕೆಂದು ನಮಗೆ ಪಾಠ ಹೇಳುವಂತಿದೆ.

ಮರಗಳ ಗುಪ್ತ ಜೀವನದ ಸಾರಾಂಶ ಒಂದೇ:ಉಳಿದುಕೊಳ್ಳಲು ಪೈಪೋಟಿಗಿಂತ ಸಹಕಾರವೇ ಪ್ರಮುಖ ವಿಕಾಸದ ತಂತ್ರ. ಎಲೆಗಳನ್ನು ಉದುರಿಸುವ ಮೂಲಕ ಅಥವಾ ಬೆಳವಣಿಗೆಯನ್ನು ನಿಧಾನಗೊಳಿಸುವ ಮೂಲಕ ಮರವು ಕಠಿಣ ದಿನಗಳಲ್ಲಿ ಶಕ್ತಿಯನ್ನು ವ್ಯರ್ಥ ಮಾಡದೆ ಇರುವುದು, 18ನೇ ಗುಂಪಿನ ಜಡಾನಿಲಗಳ (Inert Gases) ರಾಜ ಗಾಂಭೀರ್ಯ ಗುಣವನ್ನು ನೆನಪಿಸುತ್ತದೆ. ಇದು 'ಜಿತೇಂದ್ರಿಯ'ರಂತೆ ಬದುಕುವ, ಆಂತರಿಕ ಸಮೃದ್ಧಿಯನ್ನು ಕಾಪಾಡಿಕೊಳ್ಳುವ ಮೌಲ್ಯವನ್ನು ಕಲಿಸುತ್ತದೆ.ಈ ಜಾಲಬಂಧದ ಕೇಂದ್ರ ಬಿಂದುಗಳಾದ ತಾಯಿ ಮರಗಳನ್ನು ಕತ್ತರಿಸಿದಾಗ, ನಾವು ಕತ್ತರಿಸುತ್ತಿರುವುದು ಮರವನ್ನಲ್ಲ, ಬದಲಿಗೆ ಮಿಲಿಯನ್‌ಗಟ್ಟಲೆ ವರ್ಷಗಳಿಂದ ನಿರ್ಮಾಣವಾದ ಒಂದು ಸೂಕ್ಷ್ಮ ಜಾಲಬಂಧವನ್ನು ಎನ್ನುವ ವಾಸ್ತವ ಪ್ರಜ್ಞೆ ನಮಗಿರಬೇಕು. ಈ ಸಂಪರ್ಕವನ್ನು ಉಳಿಸಿಕೊಂಡರೆ ಮಾತ್ರ, ಹೊಸ ಸಸಿಗಳು ಬೆಳೆದು ಹವಾಮಾನ ಬದಲಾವಣೆಯಂತಹ ಒತ್ತಡಗಳನ್ನು ಎದುರಿಸಲು ಸಾಧ್ಯ. ಮರಗಳಲ್ಲಿ ಸೃಜಿಸಿದ ,ಗುಪ್ತಗಾಮಿನಿಯಾದ ಸಹಕಾರ ಜಾಲಬಂಧವನ್ನು (Cooperative Network)ಹೆಚ್ಚು ವಿಕಾಸಗೊಂಡ ,ಅತಿ ಬುದ್ಧಿವಂತರೆನಿಸಿದ ಮನುಷ್ಯರಾದ ನಾವೂ ನಮ್ಮ ಸಮಾಜದಲ್ಲಿ, ನಮ್ಮ ಕುಟುಂಬದಲ್ಲಿ, ನಮ್ಮ ಸಂಬಂಧಗಳಲ್ಲೂ ಹಾಸು ಹೊಕ್ಕಾಗಿಸಬೇಕಿದೆ. ಆಗಲೇ ನಮ್ಮ ಬದುಕು ಮರಗಳಂತೆ ಸದೃಢ ಮತ್ತು ಸುಸ್ಥಿರವಾಗಿರಲು ಸಾಧ್ಯ.

ಮನೆಯೊಳಗೊಂದು ಬಾಣಂತನ

ಮನೆಯೊಳಗೊಂದು ಬಾಣಂತನ

ಲೇಖಕ: ಶ್ರೀ ಕೃಷ್ಣ ಚೈತನ್ಯ

                   ಶಿಕ್ಷಕರು ಹಾಗೂ 

ವನ್ಯಜೀವಿ ತಜ್ಞರು


 ಪ್ರತಿಯೊಂದು ಜೀವಿಗೂ ಆಶ್ರಯ ನೀಡುವ ಮನೆ ಒಂದು ಮೂಲಭೂತ ಅವಶ್ಯಕತೆ. ಇದಕ್ಕಾಗಿ ಮನುಷ್ಯ ಮದುವೆಯ ನಂತರ ತನ್ನ‌ ಕೈಲಾದ ಮಟ್ಟಿಗೆ ಒಂದು ಸ್ವಂತ ಗೂಡಿನ ಕನಸು ಕಾಣುವುದು ಸಾಮಾನ್ಯ. ಬೇರೆ ಪ್ರಾಣಿಗಳಿಗೆ ಹೋಲಿಸಿದರೆ ಮನುಷ್ಯನಿಗೆ ಅವಶ್ಯವೂ ಹೌದು. ಮನೆ ಕಟ್ಟಿಕೊಳ್ಳುವುದು ಕಷ್ಟವೇನಾದರೂ ಆದರೆ ಬಾಡಿಗೆ ಮನೆಯೋ ಅಥವಾ ಗುಡಿಸಲೊ ನಿರ್ಮಿಸಿಕೊಂಡು ಬದುಕು ಸಾಗಿಸುವುದನ್ನು ನೋಡಬಹುದು. ಆದರೆ ಪ್ರಾಣಿಗಳು ಮನೆ ಕಟ್ಟಿಕೊಳ್ಳದೇ ಇದ್ದರೂ, ಆವಾಸವೆಂದು ಒಂದಷ್ಟು ಜಾಗದಲ್ಲಿ ನೆಲೆಸುತ್ತವೆ. 

ಪಕ್ಷಿಗಳು ಮನೆ ಅಂತ ಕಟ್ಟಿಕೊಳ್ಳುವುದಿಲ್ಲ. ಅಂದರೆ ಗೂಡು! ಪಕ್ಷಿಗಳು ಗೂಡುಕಟ್ಟುವುದು ಸಂತಾನೋತ್ಪತ್ತಿಯ ಉದ್ದೇಶಕ್ಕಾಗಿಯೇ ಹೊರತು ಶಾಶ್ವತವಾಗಿ ವಾಸಿಸಲು ಅಲ್ಲವೇ ಅಲ್ಲ. ಮೊಟ್ಟೆ ಇಡುವ ಸಮಯ ಬಂದಾಗ ಗಂಡು ಮತ್ತು ಹೆಣ್ಣು ಹಕ್ಕಿಗಳು ಸೇರಿ ಗೂಡುಕಟ್ಟುವ ಸಾಮಾಗ್ರಿಗಳನ್ನು ಹೆಕ್ಕಿ ತಂದು ಕುಶಲಕರ್ಮಿಗಳಂತೆ ಕೆಲವೇ ದಿನಗಳಲ್ಲಿ ಗೂಡು ಸಿದ್ಧಪಡಿಸಿಬಿಡುತ್ತವೆ. ಆದರೆ ರೂಫಸ್ ವುಡ್ ಪೆಕ್ಕರ್ ಹಕ್ಕಿಯು ತನ್ನ ಮರಿಗಳ ಲಾಲನೆ ಪಾಲನೆಗೆ ಆಯ್ಕೆ ಮಾಡಿಕೊಳ್ಳುವ ಸ್ಥಳ ನೋಡಿದರೆ ನಿಮಗೆ ಆಶ್ಚರ್ಯವಾಗಬಹುದು! ಅದೆಂದರೆ ಮರಗಳ ಮೇಲೆ  ಇರುವೆಗಳು ಕಟ್ಟುವ  ಗೂಡು. ನನ್ನ ಪಕ್ಷಿ ವೀಕ್ಷಣೆ ಹವ್ಯಾಸದ ಆರಂಭಿಕ ದಿನಗಳಲ್ಲಿ ಇದರ ಬಗ್ಗೆ ಕೇಳಿದಾಗ ಸಖತ್ ಆಶ್ಚರ್ಯವಾಗಿತ್ತು. ಅಂದಿನಿಂದ, ನಮ್ಮ ಶಾಲಾ ಆವರಣದಲ್ಲಿದ್ದ ಮರಗಳನ್ನು, ಆ ಪಕ್ಷಿಗಳನ್ನು ಕಂಡಾಗ ಗಮನಿಸುತ್ತಿದ್ದ ಇವುಗಳ ಜೀವನಕ್ರಮ ಎಷ್ಟು ಚಂದ ಎನ್ನಿಸಿತು.

ಮನೆಯ ಬಳಿ ಕೀ..ಕೀ..ಎಂದು ದೊಡ್ಡ ಶಬ್ದವಾದೊಡನೆ ಬೈನಾಕ್ಯುಲಾರ್ ಎತ್ತಿಕೊಂಡು ಒಂದೈವತ್ತು ಅಡಿ ದೂರದಲ್ಲಿದ್ದ ತೋಟಕ್ಕೆ ದೌಡಾಯಿಸಿ, ಇರುವೆಗೂಡಿರುವ ಮರಗಳ ಕಡೆಗೆ ಗಮನ ಹರಿಸುತ್ತಿದ್ದೆ. ಮಾವಿನ ಮರ, ಸಿಲ್ವರ್ ಓಕ್, ಕಾಫಿಗಿಡ ಮುಂತಾದವುಗಳಲ್ಲಿ ಗೂಡುಕಟ್ಟುವ ಇರುವೆಗಳುಕಂಡುಬಂದವು. ಕಾಫಿ ಗಿಡಗಳಲ್ಲಿ ಈ ಇರುವೆಗಳು ಕಾಫಿ ಹಣ್ಣುಗಳ ಸುತ್ತಲೂ ಗೂಡುಕಟ್ಟಿ ಕೊಯ್ಲು ಸಂದರ್ಭದಲ್ಲಿ ಕೆಲಸಗಾರರಿಗೆ ಕಚ್ಚಿ ಉರಿಬರುವಂತೆ ಮಾಡುತ್ತವೆ. ಇನ್ನು ಮಾವಿನ ಮತ್ತು ಓಕ್ ಮರಗಳಲ್ಲಿ ತೊಂದರೆ ಇಲ್ಲದಿರುವುದರಿಂದ ಸುಮಾರು ಸಣ್ಣ ಬಿಂದಿಗೆಯ ಗಾತ್ರದಷ್ಟು ದಪ್ಪ ಗೂಡುಗಳನ್ನು ನಿರ್ಮಿಸುತ್ತವೆ. ಇವೇ ಮರಕುಟಿಗಗಳ ಮರಿ ಮಾಡಿಕೊಳ್ಳುವ ಬಾಣಂತನದ ಮನೆ. 

  ಸೂಕ್ತವಾದ ಗೂಡನ್ನು ಹುಡುಕಿ, ಗೂಡಿನ ಮೇಲ್ಭಾಗದಲ್ಲಿ ರಂಧ್ರ ಕೊರೆದು ಮೊಟ್ಟೆ ಇಟ್ಟು ಕಾವು ಕೊಡುತ್ತವೆ. ಒಂದಾದ ಮೇಲೊಂದು ಹಕ್ಕಿ ಕಾವು ಕೊಟ್ಟು ಮರಿ ಮಾಡಿಕೊಳ್ಳುತ್ತವೆ. ಆದರೆ ಮರಿಗಳಿಗೆ ಊಟ ತಂದುಕೊಡುತ್ತವೆಯೇ? ಇಲ್ಲ! ಮತ್ತೆ ಮರಿಗಳು ಸಾಯುವುದಿಲ್ಲವೇ? ಇಲ್ಲ! ಮತ್ತೆ ಮರಿಗಳು ಬದುಕುವುದಾದರೂ ಹೇಗೆ? ಇಲ್ಲೆ ಅಡಗಿರುವುದು ಕುತೂಹಲ! ಮೊಟ್ಟೆ ಒಡೆದು ಹೊರಬಂದ ಮರಿಗಳು ಆಹಾರಕ್ಕೆ ಪರಿತಪಿಸದೇ ತಮ್ಮ ಕಾಲ ಬುಡದಲ್ಲಿ ಸಿಗುವ ಇರುವೆಗಳನ್ನೆ ಭಕ್ಷಿಸುತ್ತಾ ಬೆಳೆಯುತ್ತವೆ. ಮೊಟ್ಟೆ ಇಡುವ ಮೊದಲು ಪೋಷಕ ಹಕ್ಕಿಗಳು ಕಾಲು ಭಾಗದಷ್ಟು ಇರುವೆಗಳನ್ನು ತಿಂದು ಮುಗಿಸಿದರೆ ಉಳಿದ ಮುಕ್ಕಾಲು ಭಾಗದಷ್ಟು ಮರಿಗಳಿಗೆ ಮೀಸಲು! ಮರಿಗಳು ಕಣ್ಣು ಬಿಡುವವರೆಗೆ ತಂದೆತಾಯಿ ಹಕ್ಕಿಗಳು ಅವುಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ವಹಿಸಿಕೊಳ್ಳುತ್ತವೆ. ಆಗಾಗ್ಗೆ ಮೇಲೆ ಹತ್ತಿಬರುವ ಇರುವೆಗಳು ಇವುಗಳಿಗೆ ಆಹಾರ. ಮರಿಗಳು ಬೆಳೆದಂತೆ ಇಡೀ ಗೂಡಿನಲ್ಲಿರುವ ಇರುವೆಗಳನ್ನು ಸ್ವಾಹ ಮಾಡಿ ಗೂಡನ್ನೆ ಬರಿದು ಮಾಡಿಬಿಡುತ್ತವೆ.

 ನೋಡಿ ಎಂತಾ ಅದ್ಭುತ! ಎಂತಾ ವಿಷಾದ! ಪಾಪ, ನೆಲೆ ಕೊಟ್ಟು ಆತ್ಮಾಹುತಿ ಮಾಡಿಕೊಳ್ಳುವ ಪರಿ ಈ ಇರುವೆಗಳದ್ದು. ರೂಫಸ್ ವುಡ್‌ಪೆಕರ್ (ಮರಕುಟುಕ) ನೋಡಲು ಬುಲ್-ಬುಲ್‌ಗಿಂತ ತುಸು ದಪ್ಪವಿದ್ದು ಮುಖ್ಯವಾಗಿ ಕಂದು ಬಣ್ಣವನ್ನು ಹೊಂದಿದೆ. ಸಮೀಪದಿಂದ ನೋಡಿದಾಗಷ್ಟೆ ಕಂದು ಪುಕ್ಕಗಳಲ್ಲಿ ಗೆರೆ ಎಳೆದಂತೆ ಕಡು ಕಂದು ಬಣ್ಣದ ಗೆರೆಗಳು ಇರುವುದು ಕಾಣುತ್ತವೆ. ಇವುಗಳ ಬಾಲ ತ್ರಿಶೂಲದಂತೆ ಮೂರು ಸೀಳಿಕೆಯಲ್ಲಿ ಜೋಡಣೆಯಾಗಿರುತ್ತವೆ. ಕಣ್ಣಗಳು ಮತ್ತು ಕೊಕ್ಕು ಕಪ್ಪಾಗಿವೆ. ಬಲಿಷ್ಠವಾದ ಕೊಕ್ಕು  ಮರದ ಗಟ್ಟಿ ಭಾಗವನ್ನು ಸೌದೆ ಸೀಳಿದಂತೆ ಚಕ್ಕೆ ಎಬ್ಬಿಸಿ ಒಳಗಿರುವ ಹುಳುಗಳನ್ನು ಎಳೆದು ತಿನ್ನುತ್ತವೆ. ನೆಲದ ಮೇಲೆ ಬಿದ್ದು ಒಣಗಿದ ಸೆಗಣಿಗೆ ಬರುವ ಕೀಟಗಳು, ಗೆದ್ದಲು ಇವುಗಳ ಪ್ರಮುಖ ಆಹಾರ. 


ಪರಿಸರವ್ಯವಸ್ಥೆಗಳು ಹೇಗೆ ವಿಕಾಸಗೊಳ್ಳುತ್ತವೆ?

 ಪರಿಸರವ್ಯವಸ್ಥೆಗಳು ಹೇಗೆ ವಿಕಾಸಗೊಳ್ಳುತ್ತವೆ?

 

ಲೇಖಕರು :   ತಾಂಡವಮೂರ್ತಿ ಎ.ಎನ್‌

           ಸರ್ಕಾರಿ ಪದವಿಪೂರ್ವ ಕಾಲೇಜು

           ನೆಲಮಂಗಲ

     

     ಒಂದು ಸುಸ್ಥಿರವಾದ ನಿತ್ಯಹರಿದ್ವರ್ಣ ಕಾಡು ಅದರ ಜೀವವೈವಿಧ್ಯತೆ, ರಮ್ಯ ದೃಶ್ಯವೈಭವ, ಅಗಾಧ ಜಲಸಿರಿ ಮತ್ತು ಅಸೀಮ ಸೌಂದರ್ಯದಿಂದ ನಮ್ಮನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. ಹಾಗಾದರೆ, ಇಂತಹ ಸುಸ್ಥಿರ, ನಯನ ಮನೋಹರ ನೈಸರ್ಗಿಕ ಪರಿಸರವ್ಯವಸ್ಥೆಗಳು ಹೇಗೆ ರೂಪುಗೊಳ್ಳುತ್ತವೆ?. ಈ ಸಂಕೀರ್ಣ ಪ್ರಕ್ರಿಯೆ ಪೃಕೃತಿಯ ಧ್ಯಾನ ಸ್ಥಸ್ಥಿತಿಯಲ್ಲಿ ಅತ್ಯಂತ ನಾಜೂಕಾಗಿ, ಸುಧೀರ್ಘ ಕಾಲಾನುಕ್ರಮದಲ್ಲಿ ನಡೆಯುವ ವಿದ್ಯಮಾನ. ಪರಿಸರವ್ಯವಸ್ಥೆಯೊಂದು ನಿರ್ಜೀವ ಪರಿಸರದಿಂದ ಪ್ರಾರಂಭವಾಗಿ, ಸುಸ್ಥಿರ ಸ್ಥಿರಪರಾಕಾಷ್ಠೆಯ ಜೀವಿಸಮುದಾಯಗಳು ರೂಪುಗೊಳ್ಳುವ ಈ ಒಟ್ಟಾರೆ ಪ್ರಕ್ರಿಯೆಗೆ  “ಪರಿಸರಅನುಕ್ರಮಣಿಕೆ” (Ecological succession) ಎಂದು ಕರೆಯಲಾಗುತ್ತದೆ.

ಪರಿಸರ ಅನುಕ್ರಮಣಿಕೆಯ ಒಟ್ಟಾರೆ ಪ್ರಕ್ರಿಯೆಯು ಐದು ಪ್ರಮುಖ ಹಂತಗಳನ್ನು ಒಳಗೊಂಡಿದ್ದು, ಈ ಐದು ಹಂತಗಳು ಒಂದಕ್ಕೊಂದು ಪೂರಕವಾಗಿ ಜರುಗುತ್ತವೆ. ಪರಿಸರ ಅನುಕ್ರಮಣಿಕೆಯ 5 ಹಂತಗಳು ಹೀಗಿವೆ-1.ನಿರ್ಜೀವೀಕರಣ(Nudation) 2.ಆಕ್ರಮಣ(Invasion) 3.ಸ್ಪರ್ಧೆ ಮತ್ತು ಸಹಕಾರ (Competetion and coaction) 4.ಪ್ರತಿವರ್ತನೆ (Reaction) ಮತ್ತು 5.ಸ್ಥಿರೀಕರಣ (Stabilisation-Climax community). ಈ ಐದು ಹಂತಗಳಲ್ಲಿ ಜರುಗುವ ಘಟನಾವಳಿಗಳ ಬಗ್ಗೆ ಈಗ ತಿಳಿದುಕೊಳ್ಳೋಣ.

1.ನಿರ್ಜೀವೀಕರಣ (Nudation)ಒಂದು ನಿರ್ದಿಷ್ಟ ಪ್ರದೇಶದಲ್ಲಿ ಜರುಗುವ ಜ್ವಾಲಾಮುಖಿ ಸ್ಫೋಟ, ಅಥವಾ ಪ್ರವಾಹದಂತಹ ನೈಸರ್ಗಿಕ ಪ್ರಕೋಪಗಳು ಸಂಪೂರ್ಣವಾಗಿ ನಿರ್ಜೀವ, ಬರಡು ಪ್ರದೇಶಗಳನ್ನು ರೂಪಿಸುವುದರೊಂದಿಗೆ ಪರಿಸರ ಅನುಕ್ರಮಣಿಕೆ ಪ್ರಾರಂಭವಾಗುತ್ತದೆ.

2.ಆಕ್ರಮಣ(Invasion)ಇಂತಹ ನಿರ್ಜೀವ ಪ್ರದೇಶಗಳಲ್ಲಿ ಮೊದಲಿಗೆ ತಮ್ಮ ವಸಾಹತುವನ್ನು ಸ್ಥಾಪಿಸುವುದು ಕಲ್ಲನ್ನು ಅರಳಿಸಿ ಹೂವಾಗಿಸುವ ಕಲ್ಲುಹೂಗಳು()ಮತ್ತುಹಾವಸೆಗಳು(). ನಿರ್ಜೀವ, ನಿರವಯವ ಪ್ರದೇಶಗಳಲ್ಲಿ ಮೊದಲಿಗೆ ತಮ್ಮ ವಸಾಹತುವನ್ನು ಸ್ಥಾಪಿಸುವ ಜೀವಿ ಪ್ರಭೇದಗಳಿಗೆ ಪ್ರವರ್ತಕ ಪ್ರಭೇದಗಳು (Pioneer species) ಎನ್ನಲಾಗುತ್ತದೆ .ಪ್ರವರ್ತಕ ಪ್ರಭೇದಗಳು ನಿಧಾನಗತಿಯಲ್ಲಿ ನಿರವಯವ ಪರಿಸರವನ್ನು ಸಾವಯವ ಪರಿಸರವಾಗಿ ರೂಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಮಣ್ಣನ್ನು ರೂಪಿಸಿ, ಜಲನಿಧಿಯನ್ನು ಸ್ಥಾಪಿಸಿ ಇತರ ಪ್ರಭೇದಗಳು ವಾಸಿಸಲು ಯೋಗ್ಯವಾದ ಪರಿಸರವನ್ನು ರೂಪಿಸುತ್ತವೆ.

3.ಸ್ಪರ್ಧೆ ಮತ್ತು ಸಹಕಾರ (Competetion and coaction): ಜನಸಂಖ್ಯೆ ಹೆಚ್ಚಾದಂತೆ, ಸೀಮಿತ ಸಂಪನ್ಮೂಲಗಳಿಗಾಗಿ ಜೀವಿಗಳ ನಡುವೆ ಪೈಪೋಟಿ ಪ್ರಾರಂಭವಾಗುತ್ತದೆ. ಪೈಪೋಟಿಯೊಂದಿಗೆ ಕೆಲವು ಪ್ರಭೇದಗಳು ಕೊಡು-ಕೊಳ್ಳುವ ಸಹ-ಜೀವನ ವಿಧಾನವನ್ನು ಅಳವಡಿಸಿಕೊಳ್ಳುತ್ತವೆ. ಈ ಒಟ್ಟಾರೆ ಪ್ರಕ್ರಿಯೆಯಲ್ಲಿ ಕೆಲವು ಪ್ರಭೇದಗಳು ಸ್ಥಳಾಂತರಗೊಳ್ಳುತ್ತವೆ, ಕೆಲವು ತಮ್ಮ ನೆಲೆಯನ್ನು ಸ್ಥಾಪಿಸಲು ಅಸಮರ್ಥವಾಗಿ ನಶಿಸಿಹೋಗುತ್ತವೆ. ಮತ್ತೆ ಕೆಲವು ತಮ್ಮ ವಸಾಹತುವನ್ನು ಭದ್ರವಾಗಿ ರೂಪಿಸಿಕೊಳ್ಳುತ್ತವೆ.

4.ಪ್ರತಿವರ್ತನೆ (Reaction)ಈ ಹಂತದಲ್ಲಿ ಜೀವಿಗಳು ತಮ್ಮ ಪರಿಸರದಲ್ಲಿ ಬಹಳಷ್ಟು ರೂಪಾಂತರಗಳನ್ನು ಉಂಟುಮಾಡುತ್ತವೆ. ಉದಾಹರಣೆಗೆ; ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವುದು, ಪೋಷಕಾಂಶ ಚಕ್ರಗಳಲ್ಲಿ ಬದಲಾವಣೆ, ನೆರಳಿನ ನಿರ್ಮಾಣ, ಸೂಕ್ಷ್ಮ ಹವಾಮಾನ ಬದಲಾವಣೆ. ಈ ಎಲ್ಲಾ ಬದಲಾವಣೆಗಳು ಜೀವಿಗಳು ಮತ್ತು ಅವುಗಳ ಪರಿಸರದೊಂದಿಗಿನ ಪ್ರತಿವರ್ತನೆಯಿಂದ ಸಾಧ್ಯವಾಗುತ್ತವೆ. ಸೂಕ್ಷ್ಮಪರಿಸರದಲ್ಲಾಗುವ ಈ ಬದಲಾವಣೆಗಳು ಹೊಸ ಪ್ರಭೇದಗಳ ಆಗಮನ ಮತ್ತು ವಸಾಹತು ಸ್ಥಾಪನೆಗೆ ಭೂಮಿಕೆಯನ್ನು ಒದಗಿಸುತ್ತವೆ.

5.ಸ್ಥಿರೀಕರಣ (Stabilisation-Climax community)ಪರಿಸರ ಅನುಕ್ರಮಣಿಕೆಯ ಕೊನೆಯ ಹಂತವಾದ ಸ್ಥಿರೀಕರಣದಲ್ಲಿ ತುಲನಾತ್ಮಕವಾಗಿ ಸುಸ್ಥಿರವಾದ, ಸಂಕೀರ್ಣ ಸ್ಥಿರಪರಾಕಾಷ್ಠೆಯ ಸಮುದಾಯ ರೂಪುಗೊಳ್ಳುತ್ತದೆ. ಸ್ಥಿರಪರಾಕಾಷ್ಠೆಯ ಸಮುದಾಯವು ಪರಿಸರ ಅನುಕ್ರಮಣಿಕೆಯ ಅಂತಿಮ, ಸುಸ್ಥಿರ ಹಂತವಾಗಿದ್ದುಅಲ್ಲಿ ಸಸ್ಯ ಮತ್ತು ಪ್ರಾಣಿ ಪ್ರಭೇದಗಳು ತಮ್ಮ ಪರಿಸರದೊಂದಿಗೆ ಸಮತೋಲನದ ಸ್ಥಿತಿಯಲ್ಲಿರುತ್ತವೆ. ಈ ಪ್ರಬುದ್ಧ ಪರಿಸರ ವ್ಯವಸ್ಥೆಯು ಸ್ಥಿರವಾದ ಪ್ರಭೇದ ಸಂಯೋಜನೆಸಂಕೀರ್ಣ ಆಹಾರ ಜಾಲಗಳು ಮತ್ತು ಹೆಚ್ಚಿನ ಜೀವವೈವಿಧ್ಯತೆಯಿಂದ ರೂಪುಗೊಳ್ಳುತ್ತದೆ ಮತ್ತು ಕಾಡ್ಗಿಚ್ಚು ಅಥವಾ ಮಾನವ ಹಸ್ತಕ್ಷೇಪದಂತಹ ಅಡಚಣೆ ಸಂಭವಿಸುವವರೆಗೆ ಅದು ತುಲನಾತ್ಮಕವಾಗಿ ಬದಲಾಗದೆ ಉಳಿಯುತ್ತದೆ.  ಸ್ಥಿರಪರಾಕಾಷ್ಠೆಯ ಸಮುದಾಯದ ಪ್ರಮುಖ ಗುಣಲಕ್ಷಣಗಳು ಹೀಗಿವೆ:

·        ಸ್ಥಿರತೆ ಮತ್ತು ಪ್ರಬುದ್ಧತೆ: ಸ್ಥಿರಪರಾಕಾಷ್ಠೆಯ ಸಮುದಾಯವು ಪರಿಸರ ಅನುಕ್ರಣಿಕೆಯ ಅಂತಿಮ ಹಂತವನ್ನು ಪ್ರತಿನಿಧಿಸುತ್ತದೆ, ಪ್ರಭೇದಗಳು ತಮ್ಮ ನಡುವೆ ಮತ್ತುತಮ್ಮ ಪರಿಸರದೊಂದಿಗೆ ಸಮತೋಲನವನ್ನು ಸಾಧಿಸುತ್ತವೆ.

·        ಪ್ರಭೇದ ಸಂಯೋಜನೆ: ಸಸ್ಯ ಮತ್ತು ಪ್ರಾಣಿ ಪ್ರಭೇದಗಳ ಸಂಯೋಜನೆಯು ಕಾಲಾನಂತರದಲ್ಲಿ ತುಲನಾತ್ಮಕವಾಗಿ ಸ್ಥಿರವಾಗಿರುತ್ತದೆ.

·        ಸಂಕೀರ್ಣ ರಚನೆ: ಸ್ಥಿರಪರಾಕಾಷ್ಠೆಯ ಸಮುದಾಯಗಳು ಸಂಕೀರ್ಣ ಆಹಾರ ಜಾಲಗಳು, ಉನ್ನತ ಪ್ರಭೇದ ವೈವಿಧ್ಯತೆ ಮತ್ತು ಅನೇಕ ವಿಶೇಷ ಜೀವನೆಲೆಗಳನ್ನು ಒಳಗೊಂಡಿರುತ್ತವೆ.

·        ಸ್ಥಿತಿಸ್ಥಾಪಕತ್ವ: ಸ್ಥಿರಪರಾಕಾಷ್ಠೆಯ ಅಥವಾ ಸ್ಥಿರಪರಾಕಾಷ್ಠೆ ಸಮುದಾಯಗಳು  ಹೆಚ್ಚು  ಸ್ಥಿತಿಸ್ಥಾಪಕತ್ವವನ್ನು ಹೊಂದಿವೆಅಂದರೆ ಅವುಗಳ ಸಂಕೀರ್ಣ ರಚನೆ ಮತ್ತು ಹೆಚ್ಚಿನ ಜೀವವೈವಿಧ್ಯತೆಯಿಂದಾಗಿ  ಸಣ್ಣ ಪ್ರಮಾಣದ ವಿಕೋಪಗಳಿಂದ ಬೇಗನೆ ಚೇತರಿಸಿಕೊಳ್ಳುತ್ತವೆ.

·        ಸಮತೋಲನ: ಈ ಹಂತದಲ್ಲಿ ಪರಿಸರ ಸಮತೋಲನದ ಸ್ಥಿತಿಯನ್ನು ತಲುಪುವುದರೊಂದಿಗೆ, ಸ್ಥಿರಪರಾಕಾಷ್ಠೆಯ ಸಮುದಾಯವು ಸ್ಥಳೀಯ ಹವಾಮಾನ ಮತ್ತು ಭೌಗೋಳಿಕತೆಗೆ ಅನುಗುಣವಾಗಿ ತನ್ನ ಸಂಪೂರ್ಣ ಸಾಮರ್ಥ್ಯವನ್ನು ತಲುಪುತ್ತದೆ.

·        ಹೊಂದಾಣಿಕೆ: ಅಸ್ತಿತ್ವದಲ್ಲಿರುವ ಪ್ರಭೇದಗಳು ಸ್ಥಳೀಯ ಪರಿಸ್ಥಿತಿಗಳಿಗೆ ಚೆನ್ನಾಗಿ ಹೊಂದಿಕೊಳ್ಳುತ್ತವೆ ಮತ್ತು ಸಂಪನ್ಮೂಲಗಳಿಗಾಗಿ ಪರಸ್ಪರ ಪೈಪೋಟಿ ನಡೆಸುತ್ತವೆ.

ಈ ರೀತಿ ರೂಪುಗೊಳ್ಳುವ ಸ್ಥಿರಪರಾಕಾಷ್ಠೆಯ ಸಮುದಾಯವು ಎಲ್ಲಾ ಪರಿಸರಗಳಲ್ಲಿ ಏಕರೂಪವಾಗಿರುತ್ತದೆಯೇ?

ಖಂಡಿತವಾಗಿಯೂ ಸಾಧ್ಯವಿಲ್ಲ, ಒಂದು ಪರಿಸರವ್ಯವಸ್ಥೆಯಲ್ಲಿ ರೂಪುಗೊಳ್ಳುವ ಸ್ಥಿರಪರಾಕಾಷ್ಠೆಯ ಸಮುದಾಯವು ಸ್ಥಳೀಯ ಹವಾಮಾನ, ಭೌಗೋಳಿಕತೆ ಮತ್ತು ಮಳೆಯ ಪ್ರಮಾಣವನ್ನು ಅವಲಂಬಿಸಿದೆ. ಉದಾಹರಣೆಗೆ, ಶುಷ್ಕ ಮತ್ತು ಅರೆಶುಷ್ಕ ಹವಾಮಾನ ಹೊಂದಿರುವ ಪ್ರದೇಶಗಳಲ್ಲಿ ಮುಳ್ಳುಕಂಟಿ-ಕುರುಚಲು ಕಾಡುಗಳು ರೂಪುಗೊಳ್ಳುತ್ತವೆ. ಮಧ್ಯಮ ಪ್ರಮಾಣದ ಮಳೆಬೀಳುವ ಪ್ರದೇಶಗಳಲ್ಲಿ ಎಲೆ ಉದುರುವ ಕಾಡುಗಳು, ಹೆಚ್ಚು ಮಳೆ ಯಾಗುವ ಪಶ್ಚಿಮ ಘಟ್ಟದಂತಹ ಪ್ರದೇಶಗಳಲ್ಲಿ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಕಂಡುಬರುವ ಸ್ಥಿರಪರಾಕಾಷ್ಠೆಯ ಸಮುದಾಯಗಳು ರೂಪುಗೊಳ್ಳುತ್ತವೆ. ಪರಿಸರವ್ಯವಸ್ಥೆಗಳು ರೂಪುಗೊಳ್ಳುವ ಈ ಪ್ರಕ್ರಿಯೆ ಅತ್ಯಂತ ಸಂಕೀರ್ಣ, ಹಾಗೂ ಅತ್ಯಂತ ಕುತೂಹಲಕಾರಿಯಾಗಿದೆ. ಆಲ್ಲವೇ?

                                                    -

 

 

ಮೈಕ್ರೋ ಜಗತ್ತಿನ ಮ್ಯಾಕ್ರೋ ಚಿತ್ರಣ

 ಮೈಕ್ರೋ ಜಗತ್ತಿನ ಮ್ಯಾಕ್ರೋ ಚಿತ್ರಣ.


ಲೇಖಕರು:  ಕೃಷ್ಣ ಸುರೇಶ






    ಛಾಯಗ್ರಹಣ ದುಬಾರಿಯಾದರೂ ಒಂದು ಒಳ್ಳೆಯ ಹವ್ಯಾಸ. ಜೀವನದ ಒಂದು ರಸಮಯ ಕ್ಷಣವನ್ನು ಶಾಶ್ವತವಾಗಿ ದಾಖಲಿಸುವ ಛಾಯಗ್ರಹಣವು ಕಲಿಯಲು ಮತ್ತು ಕಲಿತದ್ದನ್ನು ನಿರಂತರವಾಗಿ ಬೆಳೆಸಿಕೊಂಡು ಹೋಗಲು ನಿಷ್ಟೆಪರಿಶ್ರಮ ಮತ್ತು ತಾಳ್ಮೆಯನ್ನು ಬೇಡುವ ಒಂದು ಶಾಸ್ತ್ರವೆಂದರೆ ತಪ್ಪಲ್ಲ  ಲ್ಯಾಂಡ್‌ ಸ್ಕೇಪ್‌,  ಭಾವಚಿತ್ರಪ್ರವಾಸಸ್ಮಾರಕಗಳು,  ಕ್ಯಾಡಿಡ್‌ ಛಾಯಾಗ್ರಹಣವನ್ಯಮೃಗ ಛಾಯಾಗ್ರಹಣ, ಅಸ್ಟ್ರೋಫೋಟೋಗ್ರಫಿ, ಪತ್ರಿಕಾ ಛಾಯಗ್ರಹಣ ಹೀಗೆ ಹಲವಾರು ವಿಧಗಳಲ್ಲಿ ಇದನ್ನು ವಿಂಗಡಿಸ ಬಹುದು.ನಮ್ಮ ಬರಿಗಣ್ಣಿಗೆ ಸ್ಪಷ್ಟವಾಗಿ ಕಾಣದ ಸೌಂದರ್ಯವನ್ನು ಸೂಕ್ಷ ವಸ್ತುಗಳ ಜಗತ್ತು ಹೊಂದಿರುತ್ತದೆಸಸ್ಯದ  ಸಣ್ಣ ಭಾಗಗಳುಹೂಗಳುಪಾಚಿಕೀಟಗಳುಸೂಕ್ಷ್ಮಾಣು ಜೀವಿಗಳು ಮುಂತಾದವುಗಳನ್ನು  ಕ್ಯಾಮರಾದಲ್ಲಿ ಸೆರೆ ಹಿಡಿಯುವ ಕಲೆಯೇ ಮ್ಯಾಕ್ರೋ ಫೋಟೋಗ್ರಫಿ. ಛಾಯಾಗ್ರಹಣದಲ್ಲಿ   ಸಬ್ಜೆಕ್ಟ್‌ ಅಂದರೆ ನಾವು ಸೆರೆಹಿಡಿಯಲು ಹೊರಟಿರುವ ದೃಶ್ಯದ ಸಂಯೋಜನೆಯಲ್ಲಿ ಅಪರ್ಚರ್‌ ( ಕ್ಯಾಮರಾದ ಕಿಂಡಿ)ಷಟರ್‌ ಸ್ಪೀಡು ಮತ್ತು ಐ ಎಸ್‌ ಒ,  ಇವು ಗುಣಮಟ್ಟವನ್ನು ನಿರ್ಧರಿಸುವ ಬಹಳ ಮುಖ್ಯವಾದ ಅಂಶಗಳು. ಷಟರ್‌ ಸ್ಪೀಡ್‌ ಕಡಿಮೆ ಇದ್ದು ವಸ್ತು ಚಲನೆಯಲ್ಲಿದ್ದರೆ ಚಿತ್ರವು ಮಂಜು ಮಂಜಾಗುತ್ತದೆ (Motion blur). ಜಲಪಾತದಿಂದ ನೀರು ದುಮ್ಮಕ್ಕಿ ಇಳಿಯುವ ದೃಶ್ಯವನ್ನು ಉದ್ದೇಶಪೂರ್ವಕವಾಗಿ ಕಡಿಮೆ ಷಟರ್‌ ಸ್ಪೀಡಿನಲ್ಲಿ ಚಿತ್ರೀಕರಿಸಿದರೆ ಅದು ಹಾಲಿನ ಧಾರೆಯಂತೆ ಚಿತ್ರದಲ್ಲಿ ಮೂಡುತ್ತದೆ. ಹಾಗೆಯೆ ರಾತ್ರಿ ಕಾಲದಲ್ಲಿ ವಾಹನ ದಟ್ಟಣೆಯ ಚಿತ್ರೀಕರಿಸಿದರೆ ರಸ್ತೆಯ ಎಡಕ್ಕೆ ಕೆಂಪು ಗೆರೆಗಳು ಮತ್ತು ಬಲ ಬದಿಯಲ್ಲಿ ಬಳಿಯ ಗೆರೆಗಳಂತೆ ಚಿತ್ರಿತವಾಗಿ ಚಲನೆಯನ್ನು ಬಿಂಬಿಸುತ್ತದೆ. ಇದೇ ದೃಶ್ಯವನ್ನು ವೇಗದ ಷಟರ್‌ ಸ್ಪೀಡಿನಲ್ಲಿ ಚಿತ್ರೀಕರಿಸಿದರೆಎಡಬದಿಯಲ್ಲಿ ವಾಹನಗಳು ಮತ್ತು ಅವುಗಳ ಹಿಂದಿನ ಕೆಂಪು ದೀಪಗಳು ಹಾಗೆಯೇ ಬಲಬದಿಯಲ್ಲಿ ವಾಹನಗಳು ಅವುಗಳ ಹೆಡ್‌ ಲೈಟುಗಳು ನಮ್ಮ ಕಣ್ಣಿಗೆ ಸ್ಥಿರವಾಗಿರುವಂತೆ ಸ್ಪಷ್ಟವಾಗಿ ಚಿತ್ರಿತವಾಗುತ್ತದೆ. ಕ್ಯಾಮರಾ ಕಿಂಡಿ ದೊಡ್ಡದಾಷ್ಟು ಹೆಚ್ಚು ಬೆಳಕು ಕ್ಯಾಮರವನ್ನು ಪ್ರವೇಶಿಸುತ್ತದೆ. ಕಡಿಮೆ ಬೆಳಕು ಇರುವೆಡೆ ಇದು ಸಹಾಯಕ. ಆದರೆ ಹೆಚ್ಚಿನ ಬೆಳಕಿನಲ್ಲಿ  ಕಿಂಡಿಯ ಗಾತ್ರ ಕಿರಿದಾಗಿರಬೇಕು. 

 ಬದಲಿಗೆ ದೊಡ್ಡದಾಗಿದ್ದರೆ ದೃಶ್ಯದ ರಸಲ್ಯೂಷನ್‌ ಕಡಿಮೆಯಾಗುತ್ತದೆ. ದತ್ತ ಬೆಳಕಿನಲ್ಲಿ ಕಿಂಡಿಯ ಗಾತ್ರ ಅತಿಯಾದರೆ ದೃಶ್ಯವು ವೈಟ್ವಾಷ್‌ ಆಗಿ ಏನೂ ಗೋಚರಿಸದ ಬಿಳಿ ಗೋಡೆಯಂತಾಗುತ್ತದೆ.  ಹೆಚ್ಚಿನ ISO ಕಡಿಮೆ ಬೆಳಕಿನಲ್ಲಿದೃಶ್ಯವನ್ನು  ಹೆಚ್ಚು ಬೆಳಕಿನಲ್ಲಿ ತೆಗೆದಂತೆ ಚಿತ್ರಿಕರಿಸುವುದಕ್ಕೆ ಸಹಾಯಕವಾಗುತ್ತದೆ. ಆದರೆ ಎದ್ದು ಕಾಣುವ ಗೋಚರ ಕಣಗಳ ಕಾರಣದಿಂದಚಿತ್ರದ ಗುಣಮಟ್ಟ ಕುಗ್ಗುತ್ತದೆ.   ಇದರ ಜೊತೆ ಜೊತೆಗೆವೈಟ್‌ ಬಾಲೆನ್ಸ್ಬ್ರಾಕೆಟ್ಟಿಂಗ್‌ಡೇಲೈಟ್‌ ಅಡ್ಜಸ್ಟಮೆಂಟುಡೈನಾಮಿಕ್‌ ರೇಂಜುಪೋಕಸ್‌ ಪಾಯಿಂಟ್‌ಇವೆಲ್ಲದರ ಅಂದಾಜು ಮತ್ತು ಮೂಡ್‌ಕಾಲ,‌ ದೇಶ ಮತ್ತು   ದೃಶ್ಯವನ್ನು ಅವಲಂಬಿಸಿ ನಿರ್ಧರಿಸುವ  ಸಾಮರ್ಥ್ಯ ಛಾಯಾಗ್ರಾಹಕನಿಗೆ ಇರಬೇಕಾಗುತ್ತದೆ.

ಮ್ಯಾಕ್ರೋ ಫೋಟೋಗ್ರಫಿ ಮಾಡಲು ಬೇಕಾದ ಪರಿಕರಗಳಲ್ಲಿ ಮೊದಲನೆಯದು ಉತ್ತಮವಾದ ಕ್ಯಾಮರಾಈ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಕ್ಯಾಮರಾಗಳು ಅತ್ಯಂತ ದುಬಾರಿಯಾದರೂ ಬಳಸಲು ಅತಿ ಸುಲಭಇಂದು DSLR (Digital Single Lens Refelex) ಕ್ಯಾಮರಾಗಳ ಸಾಮ್ರಾಜ್ಯ ಮುಗಿಯುತ್ತಾ ಬಂದು Mirrorless Digital Camera ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ  ಕಾಲDSLRಗಳಿಗೆ ಹೋಲಿಸಿದರೆ Mirrorless Digital Cameraಗಳು ತೂಕ ಕಡಿಮೆ ಮತ್ತು ಹೆಚ್ಚು ಫೀಚರುಗಳನ್ನು ಹೊಂದಿವೆ. ಡಿಜಿಟಲ್‌ ಕ್ಯಾಮರಾಗಳನ್ನು ಸದ್ಯಕ್ಕೆ ಕ್ರಾಪಡು ಸೆನ್ಸಾರ್ ಕ್ಯಾಮರ ಮತ್ತು ಫುಲ್‌ ಫ್ರೇಮ್‌ ಸೆನ್ಸಾರ್  ಕ್ಯಾಮರ ಎಂದು ವಿಂಗಡಿಸಬಹುದುಇದರಲ್ಲಿ ಎರಡನೆಯ ಬಗೆಯದು ಹೆಚ್ಚು ವಿಸ್ತಾರವಾದ ಸೆನ್ಸಾರ್ ಅಥವಾ ತೆರೆ ಹೊಂದಿರುತ್ತದೆಫುಲ್‌ ಫ್ರೇಮ್ ಸೆನ್ಸಾರ್ಗಳಲ್ಲಿ ೨೪ಮೆಗಾ ಪಿಕ್ಸೆಲ್‌ ಮತ್ತು ೪೩.೮ ಮೆಗಾ ಪಿಕ್ಸೆಲ್‌ ಸೆನ್ಸಾರ್ ಗಳ ಆಯ್ಕೆಯೂ ಇದೆ.  ಒಂದು ಉತ್ತಮ ಕ್ಯಾಮರಾದ ಜೊತೆಗೆ ಅದನ್ನು ನಾವು ಯಾವ ಬಗೆಯ ಛಾಯಾಗ್ರಹಣಕ್ಕೆ ಬಳಸುತ್ತೇವೆ ಎಂಬುದನ್ನು ಅನುಸರಿಸಿ ಮಸೂರ (Lens) ಗಳನ್ನು ಕೊಳ್ಳಬೇಕಾಗುತ್ತದೆವನ್ಯಮೃಗ ಅಥವಾ ಕ್ರೀಡೆಗಳ ಛಾಯಗ್ರಹಣಕ್ಕೆ ಟೆಲಿ ಜೂಮ್‌ ಲೆನ್ಸ್ ಇರಲೇಬೇಕುಒಂದು ಒಳ್ಳೆಯ  ಟೆಲಿ ಜೂಮ್‌ ಲೆನ್ಸ್ ಬೆಲೆ ಹೇಳಬೇಕೆಂದರೆ ಉದಾಹರಣೆಗೆ ನಿಕಾನ್ ೧೮೦-೬೦೦ ಮಿಮೀ ಲೆನ್ಸಿಗೆ ೧,೪೮,೦೦೦ದಿಂದ ೧,೬೮,೦೦೦ ರೂಪಾಯಿಗಳ ಬೆಲೆಯಿದೆಬಹುಉಪಯೋಗಿ ನಿಕಾನ್‌ ೨೪-೭೦ ಮಿಮೀ F/೨.೮ S ಲೆನ್ಸಿನ ಬೆಲೆ ಕೇವಲ ೧,೬೮,೦೦೦ ರೂಪಾಯಿಗಳುಇನ್ನೂ ಮ್ಯಾಕ್ರೋ ಫೋಟೋಗ್ರಫಿಗೆ ಮೀಸಲಾದ ಮ್ಯಾಕ್ರೋ ಲೆನ್ಸುಗಳು ಕ್ಯಾಮರಾದ ಸೆನ್ಸಾರ್ ಮೇಲೆ  ಅತ್ಯಂತ ಸೂಕ್ಷ್ಮವಾದ ವಸ್ತುಗಳ ಪ್ರತಿಬಿಂಬನ್ನು ೧:೧ ಅನುಪಾತದಲ್ಲಿ ಮೂಡಿಸುವುದರಿಂದ ಅವುಗಳ ಅತ್ಯಂತ ಸ್ಪಷ್ಟ ಚಿತ್ರಗಳನ್ನು ಸೆರೆಹಿಡಿಯಲು ಸಹಕರಿಸುತ್ತವೆ. ಮ್ಯಾಕ್ರೋ ಲೆನ್ಸುಗಳ ಬೆಲೆಯೂ ಕೂಡ ಇಷ್ಟೇ ದುಬಾರಿಯಾಗಿರುತ್ತವೆ
. ಕೆಲವು ಸನ್ನಿವೇಶಗಳಲ್ಲಿ ಟೆಲಿ ಜೂಮ್‌ ಲೆನ್ಸು ಬಳಸಿಯೂ ಮ್ಯಾಕ್ರೋ ಚಿತ್ರೀಕರಣವನ್ನು ಮಾಡಬಹುದು.

 ಸೊಳ್ಳೆ ಮತ್ತು ಅದರ ಪ್ಯೂಪ
 ನೀವು ಮ್ಯಾಕ್ರೋ ಫೋಟೋಗ್ರಫಿಯನ್ನು  ಆರಂಭಿಸಬೇಕೆಂದು ಯೋಚಿಸಿರುವಿರಾದರೆ ದುಬಾರಿ ಬೆಲೆಯ ಮ್ಯಾಕ್ರೋ ಲೆನ್ಸ್ಗಗಳನ್ನು ಕೊಂಡು ಆರಂಭಿಸಬೇಕೆಂದೇನು ಇಲ್ಲ.  ನೀವು ಈ ಹೊಸ ಪ್ರಯೋಗವನ್ನು ಮಾಡುವುದಾದರೆ ನಿಮ್ಮ ಬಳಿಯಿರುವ ೧೮-೫೫ಮಿಮೀ ಕಿಟ್‌ ಲೆನ್ಸ್ ಅಥವಾ ೫೦ ಮಿಮೀ ಅಥವಾ ಯಾವುದೇ ಪ್ರೈಮ್‌ ಲೆನ್ಸಿನಿಂದಲೇ ಆರಂಭಿಸಬಹುದು.  ನಿಮ್ಮ ಲೆನ್ಸಿಗೆ ಹೊಂದಾಣಿಕೆಯಾಗುವ ಕ್ಲೋಸಪ್‌ ಫಿಲ್ಟರನ್ನು ಕೊಂಡು ತಂದು ಅದನ್ನು ನಿಮ್ಮ ಲೆನ್ಸಿಗೆ ಅಳವಡಿಸಿ ಮ್ಯಾಕ್ರೋ ಫೋಟೋಗ್ರಫಿ ಮಾಡಬಹುದು. ರೆನಾಕ್ಸ್‌ ಇಲ್ಲವೇ ನಿಸಿ ಬ್ರಾಂಡಿನಂತಹ ಅನೇಕ ಮ್ಯಾಕ್ರೋ ಫಿಲ್ಟರುಗಳು ಮಾರುಕಟ್ಟೆಯಲ್ಲಿ ದೊರೆಯುತ್ತದೆ.  ಈ ವಿಧಾನದಿಂದ ಕ್ರಿಸ್ಪಾಗಿಸ್ಪಷ್ಟವಾಗಿ ಇರುವ ಮ್ಯಾಕ್ರೋ ಚಿತ್ರಗಳನ್ನು ತೆಗೆಯುವುದು ಕಷ್ಟಸಾಧ್ಯ. ಇನ್ನಷ್ಟು ಅಗ್ಗದ ವಿಧಾನದಲ್ಲಿ ಆರಂಭಿಕ ಮ್ಯಾಕ್ರೋ ಫೋಟೋಗ್ರಾಫರಗಳು ಬಹಳ ಕಡಿಮೆ ಖರ್ಚಿನಿಂದ ತಮ್ಮ ಕಿಟ್‌ ಲೆನ್ಸನ್ನೆ ಮ್ಯಾಕ್ರೋ ಲೆನ್ಸಾಗಿ ಪರಿವರ್ತಿಸಿ ಮ್ಯಾಕ್ರೋ ಚಿತ್ರಗಳನ್ನು ತೆಗೆಯಬಹುದು.  ನಿಮಗೆ ಅದರಲ್ಲಿ ಅಭಿರುಚಿ ಮೂಡಿತೆಂದರೆ ವೃತ್ತಿಪರತೆಯಿಂದ  ಮುಂದುವರೆದು ಮ್ಯಾಕ್ರೋ ಲೆನ್ಸುಗಳನ್ನು ಕೊಂಡು ಮತ್ತಷ್ಟು ಉತ್ತಮವೆನಿಸಿದ ಚಿತ್ರಗಳನ್ನು ತೆಗೆಯಬಹುದು.

ಇಂತ ಕ್ಯಾಮರದಲ್ಲಿ ಷಟರ್‌ ಸ್ಪೀಡ್‌,ISO ಮುಂತಾದವುಗಳನ್ನು ನಿಯಂತ್ರಿಸಬಹುದಾದರೂ ಅಪರ್ಚರನ್ನುಕಂಪನ (Vibration Reduction) ಗಳನ್ನು ನಿಯಂತ್ರಿಸಲಾಗದು.
ನಿಮ್ಮ ಕ್ಯಾಮರಾದೊಂದಿಗೆ ಬಂದಿರುವ ಕಿಟ್ ಲೆನ್ಸಿನ‌ ರಚನೆಯನ್ನು ನೀವು ಗಮನಿಸಿದರೆ ಅದರ ಹಿಂದಿನ ತುದಿಯಲ್ಲಿ  ಕ್ಯಾಮರಾಗೆ ಲೆನ್ಸನ್ನು ಜೋಡಿಸಿ ಲಾಕ್‌ ಮಾಡುವ  ಲೆನ್ಸ್ ಅಡಾಪ್ಟರ್‌ ಇರುತ್ತದೆ.  ಲೆನ್ಸಿನ ಮುಂದಿನ ತುದಿಯಲ್ಲಿ ಒಂದು ಫಿಲ್ಟರ್‌ ತ್ರೆಡ್ ಇರುತ್ತದೆ.    ಈ ತ್ರೆಡ್ಡಿನ ಅಳತೆಗೆ ಸರಿಯಾಗಿ  ಹೊಂದುವ ರಿವರ್ಸ್‌ ರಿಂಗ್‌ ಒಂದನ್ನು ನೀವು ಖರೀದಿಸಿ ನಿಮ್ಮ ಕಿಟ್‌ ಲೆನ್ಸಗೆ ಅದನ್ನು ಅಳವಡಿಸಿದರೆ ನಿಮ್ಮ ಲೆನ್ಸಿಗೆ ಮತ್ತೊಂದು ಲೆನ್ಸ್ ಅಡಾಪ್ಟರ್ ದೊರೆಯುತ್ತದೆ. ಈಗ ನಿಮ್ಮ ಕ್ಯಾಮರಾದ ಲೆನ್ಸನ್ನು  ಈ ಹೊಸ ರಿಂಗ್‌ ಅಡಾಪ್ಟರಿನ ಸಹಾಯದಿಂದ ಹಿಂದೆ ಮುಂದಾಗಿ ಕ್ಯಾಮರಾಗೆ ಜೋಡಿಸಿದರೆ ಈ ವ್ಯವಸ್ಥೆಯು ಮ್ಯಾಕ್ರೋ ಲೆನ್ಸಾಗಿ  ಕೆಲಸಮಾಡುತ್ತದೆ! 
ಕಿಟ್‌ ಲೆನ್ಸನಲ್ಲಿ ಕಿಂಡಿ (Aperture) ಯನ್ನು  ಹೆಚ್ಚು ಮತ್ತು ಕಡಿಮೆ ಮಾಡುವ ಮೂಲಕ ಕ್ಯಾಮರದ ಪರದೆಯ ಮೇಲೆ ಬೀಳಬೇಕಾದ ಬೆಳಕಿನ ಪ್ರಮಾಣವನ್ನು ನಿಯಂತ್ರಿಸುವ ವ್ಯವಸ್ಥೆ ಇರುತ್ತದೆ. ಬೆಳಕಿನ ಕಿಂಡಿ  ಚಿಕ್ಕದಾದಷ್ಟು ಪರದೆಯ ಮೇಲೆ ಬೀಳುವ ಬೆಳಕಿನ ಪ್ರಮಾಣ ಕಡಿಮೆ ಮತ್ತು  ಅಲ್ಲಿ ಮೂಡುವ ದೃಶ್ಯವು ಹೆಚ್ಚು ಸ್ಪಷ್ಟವಾಗುತ್ತಾ ಹೋಗುತ್ತದೆ. ಆಧುನಿಕ ಕ್ಯಾಮರಾಗಳಲ್ಲಿ ಅಪರ್ಚರನ್ನು ಸ್ವಯಂಚಾಲಿತವಾಗಿ ಕ್ಯಾಮರಾದ ಯಾಂತ್ರಿಕತೆ ನಿಯಂತ್ರಿಸುವ ವ್ಯವಸ್ಥೆ ಇರುತ್ತದೆ. ಜೊತೆಗೆ ನಾವೇ ಲೆನ್ಸಿನಲ್ಲಿ ಅಳವಡಿಸಿರುವ  ಉಂಗುರಾಕೃತಿಯ ತಿರುಪನ್ನು ತಿರುಗಿಸುವುದರ ಮೂಲಕ ನಿಯಂತ್ರಿಸುವ ಆಯ್ಕೆಯು ಕೆಲವು ಲೆಂಸುಗಳಲ್ಲಿರುತ್ತದೆ.  ನಾವು ಲೆನ್ಸನ್ನು ರಿವರ್ಸ್‌ ರಿಂಗ್‌ ಸಹಾಯದಿಂದ ಹಿಂದು ಮುಂದಾಗಿ ಕ್ಯಾಮರಾಗೆ ಜೋಡಿಸಿದಾಗ ಉಂಟಾಗುವ ಒಂದು ತೊಡಕು ಎಂದರೆ ಕ್ಯಾಮರಾವನ್ನು ಲೆನ್ಸಿಗೆ ಜೋಡಿಸುವ ವಿದ್ಯುತ್‌ಸಂಪರ್ಕ ಏರ್ಪಡುವುದಿಲ್ಲ. ಹೀಗಾಗಿ ಲೆನ್ಸನ್ನು ಆಟೋಫೋಕಸ್‌ ಮುಂತಾಗಿ ಕ್ಯಾಮರಾದ ಯಾಂತ್ರಿಕತೆ ಮೂಲಕ ನಿಯಂತ್ರಿಸುವ ವ್ಯವಸ್ಥೆಯೂ  ಕಾರ್ಯನಿರ್ವಹಿ.ಸುವುದಿಲ್ಲ. 
ಇಂತಲ್ಲಿ ಲೆನ್ಸಿನಲ್ಲಿ ಅಪರ್ಚರನ್ನು ನಿಯಂತ್ರಿಸುವ ತಿರುಪು ಇದ್ದರೆ ಅದನ್ನು ತಿರುಗಿಸಿ ಅಪರ್ಚರನ್ನು ನಮಗೆ ಬೇಕಾದ ಗಾತ್ರಕ್ಕೆ ಇರಿಸಿಕೊಳ್ಳಬಹುದು.  ಅದು ಇಲ್ಲದಿದ್ದರೆ ಲೆನ್ಸಿನಲ್ಲಿರುವ ಅಪರ್ಚರನ್ನು ನಿಯಂತ್ರಿಸುವ ಲಿವರ್‌ಗೆ ಒಂದು ಅಂಚಿ ಕಡ್ಡಿಯನ್ನು ಅಳವಡಿಸಿದರೆ  ಮ್ಯಾಕ್ರೋ ಫೋಟೋಗ್ರಫಿಗೆ ಅಪೇಕ್ಷಣೀಯವಾದಷ್ಟು (f/̆̆೧೧ ಮತ್ತು  f/೨೨ ನಡುವೆ ) ಅಪರ್ಚರನ್ನು ನಾವು ನಿಗದಿಗೊಳಿಸಬಹುದು.   ಹಾಗೂ  ಸ್ಟಾಂಡ್‌ಗೆ ಕ್ಯಾಮರ ಅಳವಡಿಸಿ  ಮತ್ತು  ರಿಮೋಟ್‌ ಬಳಸಿ ಕ್ಲಿಕ್ ಮಾಡುವುದರಿಂದ  ಕ್ಯಾಮರಾದ ಕಂಪನವನ್ನು ತಡೆಯಬಹುದು. (ಎಚ್ಚರಿಕೆ: ಉತ್ತಮ ಗುಣಮಟ್ಟದ ಮತ್ತು ನಿಮ್ಮ ಲೆನ್ಸಿಗೆ ಕರಾರುವಕ್ಕಾದ ರಿವರ್ಸ್‌ ರಿಂಗ್‌ ಕೊಳ್ಳುವುದು ಬಹಳ ಮುಖ್ಯ ಕಳಪೆ ಮಾಲನ್ನು ಕೊಂಡು ಕ್ಯಾಮರಾದ ;ಲೆನ್ಸ್ ಹೋಲ್ಡರ್‌ ಮತ್ತು‌ ನಿಮ್ಮ ಲೆನ್ಸ್‌ ಎರಡನ್ನೂ ಹಾಳು ಮಾಡಿಕೊಳ್ಳದಿರಿ!)

               2 mm ಇರುವೆ ಜಗತ್ತು

ಮ್ಯಾಕ್ರೋ ಫೋಟೋಗ್ರಫಿಗೆ ಕ್ಯಾಮರಾ ಮತ್ತು ಲೆನ್ಸ್‌ ರೆಡಿ !!! ಆದರೆ ಬೆಳಕು?! ಹವ್ಯಾಸಿ ಫೋಟೋಗ್ರಾಫರಗಳು ಬೆಳಕನ್ನು ಅಭ್ಯಾಸ ಮಾಡುವ ವಿದ್ಯಾರ್ಥಿಗಳು ಎನ್ನುವ ಒಂದು ಮಾತಿದೆ. ಬೇಳಕಿನ ವಿನ್ಯಾಸದಿಂದಲೇ ಹೆಸರುವಾಸಿಯಾದ ವಿ ಕೆ ಮೂರ್ತಿಯವರಂತಹ ಅನೇಕ ಫೋಟೋಗ್ರಾಫರ್‌ ಮಹನೀಯರಿದ್ದಾರೆ. ಹಗಲಿನಲ್ಲಿ ಹೊರಾಂಗಣದಲ್ಲಿ ನೈಸರ್ಗಿಕ ಬೆಳಕನ್ನು ಬಳಸಿಕೊಳ್ಳಬಹುದು. ಇರುವ ಲಭ್ಯ     ಬೆಳಕಿನಲ್ಲಿ ಸರಿಯಾದ ISO ಹೊಂದಿಸಿ ಚಿತ್ರೀಕರಣ ಮಾಡಬಹುದು.

 ವಸ್ತುವಿಗೆ ತುಂಬಾ ಸಮೀಪದಲ್ಲಿ ಕ್ಯಾಮರವನ್ನು ಇರಿಸಿ ಮ್ಯಾಕ್ರೋ ಚಿತ್ರೀಕರಣ ಮಾಡಬೇಕಾಗುವುರಿಂದ ಫ್ಲಾಷನ ಗುರಿಗಿಂತ ಲೆಂಸ್‌ ವಸ್ತುವಿಗೆ ಸಮೀಪವಿರುತ್ತದೆ. ಹೀಗಾಗಿ ಎಷ್ಟೋ ಸಲ ಕ್ಯಾಮರಾಗೆ ಜೋಡಿಸಿದ  ಫ್ಲಾಷ್‌ನ ಬೆಳಕು ವಸ್ತುವಿನ ಮೇಲೆ ಕೇಂದ್ರೀಕರಿಸದೆಯೇ ಹೋಗತ್ತದೆ. ಇಲ್ಲವೇ ಲೆನ್ಸಿನ ನೆರಳು ವಸ್ತುವಿನ ಮೇಲೆ ಬೀಳುತ್ತಿರುತ್ತದೆ. ಆದ್ದರಿಂದ ಫ್ಲಾಷ್ ಬಳಸುವುದಾದರೆ ಫ್ಲಾಷ್‌ ಸ್ಪ್ರೆಡ್ಡರುಗಳನ್ನು ಬಳಸಿಕೊಳ್ಳಬಹುದು. ಕ್ಯಾಮರಾಗೆ ರಿಮೋಟ್‌ ಅಳವಡಿಸಿ ನಮಗೆ ಅಗತ್ಯವಾದ ಕೋನದಲ್ಲಿ ಮತ್ತು ಅಂತರದಲ್ಲಿ ಫ್ಲಾಷ್‌ ಇರಿಸಿ ಚಿತ್ರೀಕರಿಸಬಹುದು.

ನಮ್ಮ ಸುತ್ತಲಿನ  ಪರಿಸರದಲ್ಲಿಯೇ ಲೆಕ್ಕವಿಲ್ಲದಷ್ಟು  ಅಗತ್ಯವಾದ ಸಬ್ಜೆಕ್ಟಗಳು ಇರುವುದಾದರೂ ಮ್ಯಾಕ್ರೋ ಫೋಟೋಗ್ರಫಿಯು ಅಂದುಕೊಂಡಷ್ಟು ಸುಲಭದ ಕೆಲಸವಲ್ಲ. ಪ್ರಕೃತಿಯನ್ನು ಸೂಕ್ಷ್ಮವಾಗಿ ಗಮನಿಸುವ ಮನೋಭಾವತಾಳ್ಮೆ ಪರಿಶ್ರಮಅನ್ವೇಷಣೆಯ ಗುಣಗಳು ಬಹಳ ಅಗತ್ಯವೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಹೂಗಳುಕೀಟಗಳು, ಜೇಡಗಳು ಮುಂತಾದ ಸಂದಿಪದಿಗಳು,ಪಾಚಿ ಮುಂತಾದ ಸೂಕ್ಷ್ಮಾಣು ಜೀವಿಗಳು ಇವುಗಳನ್ನು ಅವುಗಳ ನೈಸರ್ಗಿಕ ಪರಿಸರದಲ್ಲಿ ಚಿತ್ರೀಕರಿಸುವುದು
ಉತ್ತಮ. 
ಯಾವುದೆ ಪ್ರಾಣಿಪಕ್ಷಿ,  ಕೀಟಚಿಟ್ಟೆಸೂಕ್ಷ್ಮಾಣು ಜೀವಿ ಎಲ್ಲದಕ್ಕೂ ಪ್ರಕೃತಿಯಲ್ಲಿ ನಮ್ಮಂತೆ ಬದುಕುವ ಹಕ್ಕಿರುತ್ತದೆ.  ನಮ್ಮ ಹವ್ಯಾಸಕ್ಕಿಂತ ಅವುಗಳ ಬದುಕು ಅಮೂಲ್ಯವೆನ್ನುವುದನ್ನು ಮನಸ್ಸಿನಲ್ಲಿರಿಸಿಕೊಳ್ಳುವುದು ಉತ್ತಮ. ಅವುಗಳನ್ನು ಹಿಡಿಯುವುದುಹಿಡಿದು ಹಿಂಸಿಸಿ ಚಿತ್ರಿಕರಿಸುವುದು ಅನೈತಿಕಅಮಾನವೀಯ ಮತ್ತು ಕಾನೂನುಬಾಹಿರ. ನಾವು ಚಿತ್ರೀಕರಿಸುವ ವಸ್ತು ಅವು ಏನೇ ಅಗಿರಲಿ ಪ್ರಕೃತಿಯಲ್ಲಿ ಒಂದು ಅಪರೂಪದ ಮಾದರಿ ಇದ್ದರೂ ಇರಬಹುದುಆದ್ದರಿಂದ ಅವುಗಳನ್ನು ಅವುಗಳ ಪಾತ್ರ ನಮಗಿಂತ ಹೆಚ್ಚಿನದಾಗಿರುತ್ತದೆ.  ಅವುಗಳ  ಪಾಡಿಗೆ ಬಿಟ್ಟು ಅವುಗಳಿಗೆ ತೊಂದರೆ ಆಗದಂತೆ ಗೌರವ ಭಾವದಿಂದ ಚಿತ್ರೀಕರಿಸುವುದು ಒಳ್ಳೆಯದು. ಚಿತ್ರೀಕರಣದ ವೇಳೆ ನಮ್ಮ ಸುರಕ್ಷತೆಯೂ ಬಹಳ ಮುಖ್ಯ. ಕೀಟಗಳು ಮುಂತಾದವುಗಳಿಂದ ಆಗುವ ದಾಳಿಕಡಿತಗಳಿಂದ ನಮ್ಮನ್ನು ನಾವು ಸುರಕ್ಷಿತವಾಗಿರಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ವಹಿಸುವುದು ಸಹ ಅತಿ ಮುಖ್ಯ.  ಪ್ರಾಣಿಗಳಪಕ್ಷಿಕೀಟಗಳ ಸ್ವಭಾವ ವರ್ತನೆಜೀವನ ಕ್ರಮದ ಅಲ್ಪವಾದರೂ ಅರಿವು ವನ್ಯಜೀವಿ ಛಾಯಗ್ರಾಹಕನಿಗೆ ಇರಬೇಕಾದ ಕನಿಷ್ಟ ಅರ್ಹತೆಯಾಗಿರುತ್ತದೆ. ಜೊತೆಗೆ ಅಪಾರವಾದ ತಾಳ್ಮೆಯೂ ಬಹಳ ಮುಖ್ಯ. 

       ಕಲಾವಿದನ ಕುಂಚದಿಂದ ಮೂಡಿದ ಚಿತ್ರ ಕಲೆಯನ್ನಾಗಲಿಛಾಯಗ್ರಾಹಕನಿಂದ ಚಿತ್ರತವಾದ ಚಿತ್ರವನ್ನಾಗಲಿ  ನೋಡಿ ಪ್ರಶಂಸಿಲು ನೋಡುಗನಿಗೆ ಕೆಲವು ಮೂಲಭೂತ ವಿಚಾರಗಳು ತಿಳಿದಿದ್ದರೆ ಉತ್ತಮ. ಅಂದ  ಮೇಲೆ ಛಾಯಾಗ್ರಾಹಕನೂ ಛಾಯಾಗ್ರಹಣದ  ನಿಯಮಗಳಿಗೆ ಅನುಸಾರವಾಗಿ  ಚೌಕಟ್ಟನ್ನು ಹಾಕಿಕೊಂಡು  ಚಿತ್ರೀಕರಣ ಮಾಡಬೇಕಾದ್ದು ಅಪೇಕ್ಷಣೀಯ ಎಂದಾಯಿತು. ಆ ನಿಯಮಗಳಲ್ಲಿ ಮೊದಲನೆಯದು ಮೂರನೇ ಒಂದರ ನಿಯಮ. ನಾವು ತೆಗೆಯಬೇಕಾದ ಛಾಯಚಿತ್ರದ ಚೌಕಟ್ಟನ್ನು ಅಡ್ಡವಾಗಿ ಮೂರು ಭಾಗಗಳು

ಪಾಚಿಯ ಮೊಗ್ಗಿನ ಚಿತ್ರ: ಮೂರನೇ ಒಂದರ ನಿಯಮ ( Rule of  1th third)

ಮತ್ತು ಉದ್ದನಾಗಿ ಮೂರು ಭಾಗಗಳಾಗಿಸಿ ಚೌಕಟ್ಟಿನ  ಮೂರನೆಯ ಒಂದು ಭಾಗದಲ್ಲಿ ಚಿತ್ರದ  ಮುಖ್ಯ ವಸ್ತು ಇರುವಂತೆ  ಕ್ಲಿಕ್ಕಿಸುವುದರಿಂದ ಚಿತ್ರಕ್ಕೆ ಸಮತೋಲನ ದೊರೆತು ಮುಖ್ಯ ವಸ್ತುವಿನ ಮಹತ್ವ ಹೆಚ್ಚುತ್ತದೆ.

ಎರಡನೆಯದು ಮುನ್ನೆಡೆಸುವ ರೇಖೆಗಳು. ನಾವು ನೋಡುವ ಯಾವುದೇ ದೃಶ್ಯವನ್ನು ಗಮನಿಸಿದರೆ ಅದರಲ್ಲಿನ ರಸ್ತೆಯ ಅಂಚುಗಳುರೈಲು ರಸ್ತೆಯ ಕಂಬಿಗಳುಹೊಲದ ಬದುಗಳುಬೆಟ್ಟಗುಡ್ಡಗಳ ಅಂಚುಗಳು-ತುದಿಗಳುಮರಳುಗಾಡಿನ  ದಿಣ್ಣೆಗಳುಮೋಡದ ಅಂಚುಗಳುಸೂರ್ಯಬೆಳಕಿನ  ಕಿರಣಗಳುಬೀದಿಯ ಅಂಚುಗಳು ಮುಂತಾದವುಗಳು ಚಿತ್ರದಲ್ಲಿ ಗೆರೆಗಳನ್ನು ಮೂಡಿಸುತ್ತವೆ. ನಮಗೆ ತಿಳಿಯದಂತೆಯೆ ಈ ಗೆರೆಗಳು ನಮ್ಮ ಕಣ್ಣುಗಳನ್ನು ಚಿತ್ರದ ಮುಖ್ಯ ಅಥವಾ  ಆಕರ್ಷಕ ವಸ್ತುವಿನ ಕಡೆಗೆ  ಪದೇ ಪದೇ ಸೆಳೆಯುತ್ತವೆ.  ಇದು   ಒಂದು ರೀತಿಯ ಬಲವಾದ ಮತ್ತು ಆಳವಾದ ಚಲನೆಯನ್ನು  ಮೂಡಿಸುವುದರಿಂದ ನೋಡುಗನ ನೋಟವನ್ನು ಮುಖ್ಯ ವಸ್ತುವಿನ ಕಡೆಗೆ ಸೆಳೆಯುತ್ತದೆ.      

ಮೂರನೆಯದು ಫೆಬನಾಚಿ ಸುರಳಿ . ಕೆಲವು ಚಿತ್ರಗಳನ್ನು ನೋಡುತ್ತಿದ್ದರೆ ನಮ್ಮ ಕಣ್ಣುಗಳು ನಮಗೆ ಅರಿವಿಲ್ಲದಂತೆಯೆ ಚಿತ್ರದ ಒಂದು ಯಾವುದೋ ಕೇಂದ್ರ ಭಾಗದಿಂದ ಆರಂಭಿಸಿ ಸುರಳಿಯಂತೆ ಸುತ್ತುತ್ತಾ ಚಿತ್ರವನ್ನು ಸ್ಕಾನ್‌ ಮಾಡುತ್ತಾ ಪದೇ ಪದೇ ತನ್ನಷ್ಟೆ ತಾನೆ ಚಿತ್ರದ ಒಳಗೆ ಸೆಳೆದುಕೊಂಡು ಹೋಗುತ್ತದೆ.  ಫೆಬನಾಚಿ ಸುರಳಿಗೆ ಇಂತಹ ಚಿತ್ರಗಳು ಉದಾಹರಣೆಯಾಗುತ್ತವೆ.



 







ಹಾಗೆ ನೋಡಿದರೆ ನಾವು ದಿನ ನಿತ್ಯ ಮೊಬೈಲ್‌ ಫೋನ್‌ ಹಿಡಿದು  ಯಾವುದೇ ನಿಯಮವನ್ನು ಪಾಲಿಸದೇ ತೆಗೆದ  ಫೋಟೋಗಳು  ಎಲ್ಲವೂ ಕಲಾಕೃತಿಗಳಾಗುವುದಿಲ್ಲವೇಹಾಗಂತ ಹೇಳಲಾಗದುಸಾಧಾರಣ ಕ್ಯಾಮರದಲ್ಲಿ ಅಚಾನಕ್ಕೆ ಕ್ಲಿಕ್ಕಿಸಿದ ಅನೇಕ ಛಾಯಾಚಿತ್ರಗಳು ಕಲಾಕೃತಿಗಳಾಗಿ ಉಳಿದಿರುವ  ಉದಾಹರಣೆಗಳು ಅನೇಕ ಇವೆ.. ಉತ್ತಮವೆನಿಸಿದ ಕ್ಯಾಮರದಲ್ಲಿ ನೂರಾರು ಚಿತ್ರಗಳನ್ನು ತೆಗೆದರೂ ಅವುಗಳಲ್ಲಿ ಕಲಾಕೃತಿಗಳಾಗುವುದಿರಲಿ ಸಾಧಾರಣ ಚಿತ್ರಗಳು ಅನ್ನಿಸುವುದು ಒಂದೋ ಎರಡೋ. ಅಂತಿರುವಾಗ  ನಾನು  ಚಿತ್ರಸಿರುವ ಅಂತಹ ಸಾವಿರಗಟ್ಟಳೆ  ಚಿತ್ರಗಳು ನನ್ನ  ಟ್ರಾಶ್‌ ಬಿನ್ನಿನಲ್ಲಿವೆ!!!