ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಸವಿಜ್ಞಾನದ ಲೇಖನಗಳನ್ನು ಓದಿ, ಅಭಿಪ್ರಾಯ ದಾಖಲಿಸಿ. ನಿಮ್ಮ ಪ್ರೋತ್ಸಾಹಗಳೇ ಲೇಖಕರಿಗೆ ಶ್ರೀರಕ್ಷೆ Science is a beautiful gift to humanity; we should not distort it. A. P. J. Abdul Kalam
Showing posts with label HVK. Show all posts
Showing posts with label HVK. Show all posts

Sunday, July 4, 2021

ಜ್ಞಾನದ ಗರಡಿಯಲ್ಲಿ ಒಂದು ದಿನ – ವಿ.ಎಸ್.ಶಾಸ್ತ್ರೀ ಅವರೊಂದಿಗೆ ಒಂದು ಆತ್ಮೀಯ ಸಂದರ್ಶನ

ಜ್ಞಾನದ ಗರಡಿಯಲ್ಲಿ ಒಂದು ದಿನ – ವಿ.ಎಸ್.ಶಾಸ್ತ್ರೀ ಅವರೊಂದಿಗೆ ಒಂದು ಆತ್ಮೀಯ ಸಂದರ್ಶನ   

ಕೋಲಾರದ ಶಾಸ್ತ್ರೀಜಿಯವರ ಪರಿಚಯ ನಿಮ್ಮೆಲ್ಲರಿಗೂ ಈಗಾಗಲೇ ಆಗಿದೆ. ಅವರ ಜೀವನೋತ್ಸಾಹ, ಕಲಿಕೆಯಲ್ಲಿರುವ ಶ್ರದ್ಧೆ, ಬೇರೆಯವರಿಗೂ ತಮ್ಮ ಜ್ಞಾನವನ್ನು ಧಾರೆ ಎರೆಯುವ ಗುಣ, ಎಲ್ಲವೂ ಅನುಕರಣೀಯ, ಅನನ್ಯ. ಅಂಥ ಜ್ಞಾನದ ಗಣಿಯಲ್ಲಿ ಒಂದು ದಿನ ಕಳೆಯುವ ಅವಕಾಶ ನಮಗೆ ದೊರೆಯಿತು. ಶಾಸ್ತ್ರೀಜಿಯವರ ಮನೆಯೇ ಅಗಣಿತ ಕಲಿಕಾ ಮಂದಿರ. ಹೀಗಾಗಿ, ‘ಸವಿಜ್ಞಾನ’ದ ಓದುಗರಿಗೂ ಅದನ್ನು ತಲುಪಿಸುವ ಸಲುವಾಗಿ ಶ್ರೀನಿವಾಸ್, ವಿಜಯಕುಮಾರ್ ಹಾಗೂ ರಾಮಚಂದ್ರಭಟ್ ಅವರನ್ನೊಳಗೊಂಡ ನಮ್ಮ ಸವಿಜ್ಞಾನ ತಂಡ ಅವರ ಸಂದರ್ಶನ ಮಾಡಿತು. ಸುಮಾರು 2 ತಾಸುಗಳಿಗೂ ಹೆಚ್ಚಿನ ಕಾಲದವರೆಗೆ ನಮ್ಮ ಜೊತೆಗಿದ್ದು ಹಲವಾರು ವಿಚಾರಗಳ ಕುರಿತು ಮಾಹಿತಿ ನೀಡಿದರು. ಅವರ ಮನೆಯಲ್ಲಿ ಅವರನ್ನು ಸಂದರ್ಶಿಸಿದ್ದೂ ಅಲ್ಲದೇ, ಅವರೊಂದಿಗೆ ಕುಪ್ಪಂಗೂ ತೆರಳಿ ಅಲ್ಲಿನ ‘ಗಣಿತವನ’ವನ್ನೂ ವೀಕ್ಷಿಸಿದೆವು. ಮನೆಯಲ್ಲಿ ನಡೆಸಿದ ಸಂದರ್ಶನದ ಜೊತೆ, ದಾರಿಯುದ್ದಕ್ಕೂ ಶೈಕ್ಷಣಿಕ ದೃಷ್ಟಿಕೋನಕ್ಕೆ ಸಂಬಂಧಿಸಿದ ವಿಚಾರಗಳನ್ನು ಚರ್ಚಿಸಿದೆವು. ಇಳಿ ವಯಸ್ಸಿನಲ್ಲೂ ತುಂಬಾ ಉತ್ಸಾಹದಿಂದಲೇ ಯಾವುದೇ ಆಯಾಸವಿಲ್ಲದೆ, ನಮಗೆ ಹಲವಾರು ವಿಷಯಗಳ ಬಗ್ಗೆ ಕುತೂಹಲಭರಿತ ಮಾಹಿತಿಗಳನ್ನು ತಿಳಿಸಿಕೊಟ್ಟರು.

ನೆಲದ ಬಿಲದ ಸಿಂಹ

ನೆಲದ ಬಿಲದ ಸಿಂಹ 

ಲೇಖಕರು: ವಿಜಯಕುಮಾರ್‌ ಹುತ್ತನಹಳ್ಳಿ. 

ಸಹ ಶಿಕ್ಷಕರು. 

ಸ.ಪ್ರೌ.ಶಾಲೆ. ಕಾವಲ್‌ ಭೈರಸಂದ್ರ.

ಬೆಂಗಳೂರು ಉತ್ತರ ವಲಯ – 3


ಸಿಂಹ ಎಲ್ಲಿ ವಾಸಿಸುತ್ತೆ ಅಂದರೆ ಎಳೆ ಮಗು ಕೂಡ ಹೇಳುತ್ತೆ ಕಾಡಿನಲ್ಲಿ ಅಥವಾ ಗುಹೆಯಲ್ಲಿ ಅಂತ. ಆದರೆ ಮಣ್ಣಿನಲ್ಲಿ ವಾಸಿಸುವ ಸಿಂಹದ ಬಗ್ಗೆ ಗೊತ್ತ? ಅಂದರೆ ಕ್ಷಣ ಗಲಿಬಿಲಿಗೊಳ್ಳೋದು ಸಹಜ. ನಾನು ಈ ಲೇಖನದಲ್ಲಿ ಹೇಳ ಹೊರಟಿರುವುದು ಹಾಗೆ ಮಣ್ಣಿನಲ್ಲಿ ವಾಸಿಸುವ ಸಿಂಹದ ಬಗ್ಗೆ. ಆದರೆ ಇದು ನಿಜವಾದ ಸಿಂಹವಲ್ಲ. ಇರುವೆಗಳಿಗೆ ಸಿಂಹ ಸ್ವರೂಪವಾದ “ಇರುವೆಸಿಂಹ” ಅಂದರೆ Antlion ಎಂಬ ಸಣ್ಣ ಕೀಟದ ಬಗ್ಗೆ.

Saturday, April 3, 2021

ವನವಿಹಾರ!

 ವನವಿಹಾರ!

ಬರಹ: ವಿಜಯಕುಮಾರ್‌ ಹುತ್ತನಹಳ್ಳಿ. 

ಸಹ ಶಿಕ್ಷಕರು. 

ಸ.ಪ್ರೌ.ಶಾಲೆ. ಕಾವಲ್‌ ಭೈರಸಂದ್ರ.

ಬೆಂಗಳೂರು ಉತ್ತರ ವಲಯ – 3

ವಿದ್ಯಾ: ಹೇ ವಿನಯ್‌, ಗಣಿತ ಲೆಕ್ಕಗಳನ್ನು ಮಾಡಿ ಮಾಡಿ ಬೇಜಾರಾಗ್ತಿದೆ, ಬಾರೋ ಹೀಗೇ ಪಾರ್ಕ್‌ ನಲ್ಲಿ ಒಂದು ಸುತ್ತು ಹಾಕ್ಕೊಂಡು ಬರೋಣ ಹಾಯಾಗಿ.

ವಿನಯ್‌: ಓ! ಹೌದಾ? ಹಾಗಾದರೆ ಗಣಿತ ಪಾರ್ಕ್‌ ಅಂದರೆ ಗಣಿತವನದಲ್ಲೇ ಸುತ್ತಾಡಿಕೊಂಡು ಬರೋಣ ಬಾ.

ವಿದ್ಯಾ: ಏನು? ಗಣಿತವನಾನ? ಹಾಗಂದರೆ ಏನೋ? ಎಲ್ಲಿರುತ್ತೋ ಅಂತಹ ವನ? ನಾನು ಗಣಿತ ಸಮಸ್ಯೆಗಳನ್ನು ಬಿಡಿಸಿ ಬೋರಾಯ್ತು ಪಾರ್ಕ್‌ ಗೆ ಹೋಗಿ ಸುತ್ತಾಡಿಕೊಂಡು ಬರೋಣ ಅಂದರೆ, ಅಲ್ಲೂ ಗಣಿತ ಅಂತಿಯಲ್ಲಾ?

Wednesday, February 3, 2021

ನೀರ ಒಲೆ !!!

 ನೀರ ಒಲೆ !!!



ವಿಜಯಕುಮಾರ್‌ ಹುತ್ತನಹಳ್ಳಿ. 

ಸಹ ಶಿಕ್ಷಕರು. 

ಸ.ಪ್ರೌ.ಶಾಲೆ. ಕಾವಲ್‌ ಭೈರಸಂದ್ರ.

ಬೆಂಗಳೂರು ಉತ್ತರ ವಲಯ – 3.


ಕಟ್ಟಿಗೆ ಒಡೆದು ಒಲೆ ಉರಿಸುತ್ತಿದ್ದ ಕಾಲ ಒಂದಿತ್ತು, ಕೈಗಾರಿಕೀಕರಣ, ನಗರೀಕರಣದ ಫಲವಾಗಿ ಮರಗಳೇ ಮಾಯವಾಗುತ್ತಿರುವಾಗ ಇಂದು ಅದು ಸಾಧ್ಯವೂ ಅಲ್ಲ, ಸಾಧುವೂ ಅಲ್ಲ.  ಏಕೆಂದರೆ ಕಟ್ಟಿಗೆ ಉರಿಸುವುದು ಮಾಲಿನ್ಯಕಾರಿ,ಜಾಗತಿಕ ತಾಪಮಾನಕ್ಕೂ ಕಾರಣವಾಗುತ್ತದೆ, ಆದ್ದರಿಂದ ನಾವು ಇಂದು ಅಸಾಂಪ್ರದಾಯಿಕ, ಪರಿಸರ ಸ್ನೇಹಿ ಇಂಧನಗಳನ್ನು ಹುಡುಕಿಕೊಳ್ಳಬೇಕಿದೆ.    ಈ ದಿಸೆಯಲ್ಲಿ ಹಗಲಿರುಳು ಪ್ರಯೋಗಗಳಲ್ಲಿ ತೊಡಗಿಕೊಂಡಿರುವ ವಿಜ್ಞಾನಿಗಳಿಗೆ ಹೊಸ ಸಾಧ್ಯತೆಯಾಗಿ ಕಂಡದ್ದು ಸಮುದ್ರದ ನೀರು.   ಏನು ?  ನೀರನ್ನು ಇಂಧನವಾಗಿ ಬಳಸುವುದೆ ?  ಎಂದು ಆಶ್ಚರ್ಯಪಡಬೇಡಿ.  ಹೌದು ಇನ್ನು ಮುಂದೆ ನೀರನ್ನು ಒಡೆದು ಒಲೆ ಉರಿಸಲು ಸಂಶೋಧನೆಗಳು ಮುಂದುವರೆಯುತ್ತಿವೆ.