ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಸವಿಜ್ಞಾನದ ಲೇಖನಗಳನ್ನು ಓದಿ, ಅಭಿಪ್ರಾಯ ದಾಖಲಿಸಿ. ನಿಮ್ಮ ಪ್ರೋತ್ಸಾಹಗಳೇ ಲೇಖಕರಿಗೆ ಶ್ರೀರಕ್ಷೆ Science is a beautiful gift to humanity; we should not distort it. A. P. J. Abdul Kalam
Showing posts with label RMN. Show all posts
Showing posts with label RMN. Show all posts

Tuesday, May 4, 2021

ಚಾರ್ಲ್ಸ್ ಡಾರ್ವಿನ್ - ಮನುಕುಲದ ಅರಿವನ್ನು ವಿಸ್ತರಿಸಿದ ಮಹಾಚೇತನ

ಚಾರ್ಲ್ಸ್ ಡಾರ್ವಿನ್ - ಮನುಕುಲದ ಅರಿವನ್ನು ವಿಸ್ತರಿಸಿದ ಮಹಾಚೇತನ

ಲೇಖಕರು: ರಾಘವೇಂದ್ರ ಮಯ್ಯ ಎಂ.ಎನ್. 

ಸ.ಶಿ.  ಸರ್ಕಾರಿ ಪ್ರೌಢಶಾಲೆ ,

ಬೈರಾಪಟ್ಟಣ. ಚನ್ನಪಟ್ಟಣ. 

ರಾಮನಗರ ಜಿಲ್ಲೆ . 




ಅದು 1860ನೇ ಇಸವಿಯ ಒಂದು ದಿನ, ಆಕ್ಸ್ಫರ್ಡ್ ಸಭಾಂಗಣದಲ್ಲಿ ಜನರು ಕಿಕ್ಕಿರಿದು ನೆರೆದಿದ್ದರು. ವೇದಿಕೆಯ ಮೇಲೆ ಬಿಷಪ್ ಸಾಮ್ಯುಯಲ್ ವಿಲ್‌ಬರ್‌ಫೋರ್ಸ್ ಮತ್ತು ವಿಜ್ಞಾನಿಗಳಾದ ಹಕ್ಸ್ಲೀ ಮತ್ತು ಹೂಕರ್ ಇದ್ದರು. ನೆರೆದಿದ್ದವರಲ್ಲಿ ಬಹುಪಾಲು ಕ್ರೈಸ್ತ ಆಸ್ತಿಕರು. ಕೆಲವೇ ದಿನಗಳ ಹಿಂದೆ ಅವರು ಗ್ರಂಥವೊಂದನ್ನು ಸುಡಲು ಯೋಜಿಸಿದ್ದರು. ಆ ಗ್ರಂಥ ಅವರ ಧಾರ್ಮಿಕ ಭಾವನೆಯ ಮೇಲೆ ಗಧಾ ಪ್ರಹಾರ ಮಾಡಿತ್ತು. ಕ್ರೈಸ್ತ  ಗುರುಗಳು ತತ್ತರಿಸಿ ಹೋಗಿದ್ದರು. ಆ ಗ್ರಂಥದಲ್ಲಿನ ಸಿದ್ಧಾಂತ ಸುಳ್ಳೆಂದು ಸಾಬೀತು ಮಾಡುವುದಕ್ಕೆಂದೇ ಬ್ರಿಟಿಷ್ ಅಸೋಸಿಯೇಷನ್‌ನ ಆ ಸಭೆಯನ್ನು ಆಕ್ಸ್‌ಫರ್ಡ್  ಸಭಾಂಗಣದಲ್ಲಿ ಸೇರಿಸಲಾಗಿತ್ತು. ಗ್ರಂಥದ ಲೇಖಕನಿಗೆ ಇವರನ್ನು ಎದುರಿಸುವ ಚೈತನ್ಯವಿರಲಿಲ್ಲ. ಜೊತೆಗೆ, ತೀವ್ರತರವಾದ ಖಾಯಿಲೆ. ಹೀಗಾಗಿ ಅವನ ಗೆಳೆಯರಾದ ಡಾ|| ಹಕ್ಸ್ಲೀ ಮತ್ತು ಪ್ರೊ|| ಹೂಕರ್ ಬಂದಿದ್ದರು. ಬಿಷಪ್ ಎದ್ದು ನಿಂತರು. ಗಿಜಿಗುಡುತ್ತಿದ್ದ ಸಭಾಂಗಣ ಶಾಂತವಾಯಿತು. ಅತ್ಯುತ್ತಮ ವಾಗ್ಮಿ ಎಂದು ಹೆಸರು ಮಾಡಿದ್ದ ಬಿಷಪ್ ಸ್ವತಃ ಪುಸ್ತಕ ಓದಿರಲಿಲ್ಲ. ಸಹಾಯಕರು ಹೇಳಿದ ಸಾರಾಂಶ ಅವರ ತಲೆಯಲ್ಲಿತ್ತು. ಸತತ ಒಂದು ಗಂಟೆಯ ಕಾಲ ಗ್ರಂಥವನ್ನು ಟೀಕಿಸಿ ಅವರು ಮಾತನಾಡಿದರು. ನಂತರ ಹಕ್ಸ್ಲೀ ಕಡೆಗೆ ತಿರುಗಿ ವ್ಯಂಗ್ಯವಾಗಿ ಕೇಳಿದರು. “ನೀವು ಯಾವ ಕಡೆಯ ಮಂಗನಿಂದ ಇಳಿದು ಬಂದಿರೋದು? ಅಜ್ಜನ ಕಡೆಯ ಮಂಗನಿಂದಲೋ? ಅಜ್ಜಿ ಕಡೆಯ ಮಂಗನಿಂದಲೋ? ವಾತಾವರಣ ಕೂಡಲೇ ತಿಳಿಯಾಗಿ ಹೋಯ್ತು. ಗ್ರಂಥ ವಿರೋಧಿಗಳು ಚಪ್ಪಾಳೆ ತಟ್ಟಿದರು. ಅಣಕಿಸುವ ಧ್ವನಿ ಹೊರಡಿಸಿದರು. ಇದೆಲ್ಲವನ್ನೂ ಸಹಿಸಿದ ಡಾ|| ಹಕ್ಸ್ಲೀ ಭಾಷಣಕ್ಕೆ ಎದ್ದು ನಿಂತರು. ನಿಧಾನವಾಗಿ ಭಾಷಣ ಪ್ರಾರಂಭಿಸಿದ ಅವರು ಬಿಷಪ್‌ರ ಆಕ್ಷೇಪಣೆಗಳಿಗೆಲ್ಲ ಉತ್ತರ ನೀಡಿ ಗ್ರಂಥಕರ್ತನ ನಿಲುವನ್ನು ಸಮರ್ಥಿಸಿದರು. ಕೊನೆಗೆ ಬಿಷಪ್‌ರ ಕಡೆ ತಿರುಗಿ ಗಂಭೀರವಾಗಿಯೇ ನುಡಿದರು . “ನಾನು ಯಾವ ಕಡೆಯ ಕಪಿಯಿಂದ ಇಳಿದು ಬಂದರೇನು? ಸತ್ಯವನ್ನು ಮರೆಮಾಚಲು ತನ್ನೆಲ್ಲಾ ಮಾತಿನ ಕೌಶಲವನ್ನು ಬಳಸುವ ಮನುಷ್ಯನ ಮೂಲಕ ಭೂಮಿಗೆ ಬರುವುದಕ್ಕಿಂತ ಕಪಿಯಿಂದ ವಿಕಾಸವಾಗುವುದೇ ಉತ್ತಮ ಎಂದು ನಾನು ಭಾವಿಸುತ್ತೇನೆ”. ‘ಸೋಪಿ ಸ್ಯಾಂ’ ಎಂದೇ ಹೆಸರಾಗಿದ್ದ ಬಿಷಪ್ ವಿಲ್ಬರ್ ಫೋರ್ಸ್ರ ಮುಖ ಕಪ್ಪಿಟ್ಟಿತು. ಅವರು ತಲೆ ತಗ್ಗಿಸಿದರು. ಹೂಕರ್‌ಗೆ ಅತ್ಯಂತ ಸಂತಸವಾಗಿತ್ತು. ಧಾರ್ಮಿಕ ಪ್ರತಿನಿಧಿಗಳ ತಂಡವೊಂದು ಘೋಷಣೆ ಕೂಗಿ ಪ್ರತಿಭಟಿಸಿದರು. ಅಂತಿಮವಾಗಿ ‘ಬ್ರಿಟಿಷ್ ಅಸೋಸಿಯೇಷನ್ ಫಾರ್ ದಿ ಅಡ್ವಾನ್ಸ್ಮೆಂಟ್ ಆಫ್ ಸೈನ್ಸ್ನ  ಆ ಸಭೆ ಗ್ರಂಥದ ಸಿದ್ಧಾಂತವನ್ನು ಒಪ್ಪಿಕೊಂಡಿತು. ಆ ಗ್ರಂಥವೇ ... 
‘ದಿ ಆರಿಜನ್ ಆಫ್ ಸ್ಪೀಷೀಸ್ ಬೈ ಮೀನ್ಸ್ ಆಫ್ ನ್ಯಾಚುರಲ್ ಸೆಲೆಕ್ಷನ್’.            
ಅದರ ಲೇಖಕ ಚಾರ್ಲ್ಸ್ ರಾಬರ್ಟ್ ಡಾರ್ವಿನ್. ನಿಜಕ್ಕೂ ಆ ಪುಸ್ತಕದಲ್ಲಿ ಏನಿದೆ? ಅದೊಂದು ರೋಮಾಂಚಕ ಗಾಥೆ. ಬನ್ನಿ ತಿಳಿಯೋಣ.

Wednesday, February 3, 2021

ಜಲಸಸ್ಯಗಳು ಒಂದು ರೋಚಕ ಕಥೆ



ರಾಘವೇಂದ್ರ ಮಯ್ಯ ಎಂ.ಎನ್. 
ಸ.ಶಿ.  ಸರ್ಕಾರಿ ಪ್ರೌಢಶಾಲೆ ,
ಬೈರಾಪಟ್ಟಣ. ಚನ್ನಪಟ್ಟಣ. 
ರಾಮನಗರ ಜಿಲ್ಲೆ . 


ಚಿಕ್ಕಂದಿನಲ್ಲಿ ನಮಗೆ ಎಲ್ಲವೂ ಅದ್ಭುತವೇ,  ಪ್ರತಿಯೊಂದು ಪ್ರಾಣಿಯನ್ನೂ, ಪಕ್ಷಿಯನ್ನೂ, ಸಸ್ಯವನ್ನೂ  ಅದ್ಭುತವೆಂಬಂತೆ ನೋಡುತ್ತಿದ್ದೆವು. ನಮ್ಮ ಮನೆಯ ಹಿಂದೆ ಒಂದು ದೊಡ್ಡ ನೀಲಗಿರಿ ಮರ ಇತ್ತು. ನನ್ನ  ಕಣ್ಣಿಗೆ ಆ ಮರ ಕಂಡಾಗಲೆಲ್ಲ ಅದರ ತುದಿಯವರೆಗೂ ನೀರು ಹೇಗೆ ಹೋಗುತ್ತದೆ ಎಂದು ಯೋಚಿಸುತ್ತಿದ್ದೆ. ನಮ್ಮ ಮನೆಯ ಹಿತ್ತಲಲ್ಲಿ ಒಂದು ಬಾವಿ ಇದೆ. ಅದರಿಂದ ನೀರೆತ್ತಲು ಒಂದು ಪಂಪ್ ಸೆಟ್ ಹಾಕಿದ್ದರು. ಅದನ್ನು ನೋಡಿದ್ದ ನಾನು ‘ಮರದ ಬುಡದಲ್ಲೂ, ಒಳಗೊಂದು ಪಂಪ್ ಸೆಟ್ ಇದೆ, ಅದು ಮರದ ತುದಿಯವರೆಗೂ ನೀರನ್ನು ಪಂಪ್ ಮಾಡುತ್ತದೆ’ ಎಂದು ಕೊನೆಗೊಮ್ಮೆ ತೀರ್ಮಾನಿಸಿ ಸುಮ್ಮನಾಗಿದ್ದೆ. ಮುಂದೆ ಶಾಲೆಯಲ್ಲಿ ಮಾಡಿದ ಪಾಠಗಳೆಲ್ಲವನ್ನೂ ಗಮನಿಸುವ ವಯಸ್ಸು ಬಂದಾಗ ಉಪಾಧ್ಯಾಯರು  ‘ಸಸ್ಯಗಳು ಬಹಳ ಕಾಲ ನೀರಿನ ಸಂರ್ಪಕದಲ್ಲಿದ್ದರೆ ಅಥವಾ ಅವುಗಳಿಗೆ ಹೆಚ್ಚು ನೀರುಣಿಸಿದರೆ ಅವು ಕೊಳೆಯುತ್ತವೆ ಎಂದು ಹೇಳಿದ್ದು ನೆನಪಲ್ಲಿ ಉಳಿಯಿತು, ಹಾಗಾದರೆ ಹೊಳೆಯಲ್ಲಿ, ಕೆರೆಯಲ್ಲಿ ಗಿಡಗಳು ಬೆಳೆಯುತ್ತವಲ್ಲ! ಅವು ಏಕೆ ಕೊಳೆಯುವುದಿಲ್ಲ ಎಂದು ಆಗಲೇ ಎದ್ದ ಪ್ರಶ್ನೆಯೊಂದಿಗೆ ಜಲಸಸ್ಯಗಳ ಬಗ್ಗೆ ಕುತೂಹಲವೊಂದು ನನ್ನಲ್ಲಿ ಮೂಡಲಾರಂಭಿಸಿತು. ವೀರಪ್ಪ ಮೇಷ್ಟ್ರ ರೌದ್ರಾವತಾರ ಗೊತ್ತಿದ್ದ ನಾನು ಆ ಪ್ರಶ್ನೆಯನ್ನು ಅವರಿಗೆ ಕೇಳುವ ಗೋಜಿಗೆ ಹೋಗಿರಲಿಲ್ಲ . ನಾನು ದ್ವಿತೀಯ ಡಿಗ್ರಿಗೆ ಬರುವವರೆಗೂ ಆ ಪ್ರಶ್ನೆಗೆ ಸಮರ್ಪಕ ಉತ್ತರ ಸಿಕ್ಕಿರಲಿಲ್ಲ.