ಶಿಕ್ಷಣದಲ್ಲಿ ಆಟಿಕೆಗಳ ಬಳಕೆ – ಒಂದು ಪ್ರಯೋಗ
ಲೇಖಕರು: ಅನಿಲ್ ಕುಮಾರ್ ಸಿ.ಎನ್.
ಸರ್ಕಾರಿ ಪ್ರೌಢಶಾಲೆ ಅರಳಾಳುಸಂದ್ರ,ರಾಮನಗರ ತಾ||ರಾಮನಗರ ಜಿಲ್ಲೆ
ಆಟಿಕೆಗಳು ಅಂದ್ರೆ ಏನೋ ಖುಷಿ, ಮನಸ್ಸಿಗೆ ಹಿತ, ಕೈಗೆ ಸಿಕ್ಕ ಆಟಿಕೆಯನ್ನು ಹಿಡಿದು ಒಮ್ಮೆಯಾದರು ಆಟವಾಡಿಯೇ ತೀರಬೇಕೆನ್ನುವ ಬಯಕೆ. ಕಿರಿಯರಿಂದ ಹಿರಿಯರವರೆಗೆ ಎಲ್ಲರಿಗೂ ಅಚ್ಚುಮೆಚ್ಚು. ಅದರಲ್ಲಿಯೂ ಮಕ್ಕಳಿಗೆ ಆಟಿಕೆಗಳೊಂದಿಗೆ ಸಮಯ ಕಳೆಯುವುದೆಂದರೆ ಎಲ್ಲಿಲ್ಲದ ಪ್ರೀತಿ. ಮಕ್ಕಳು ಆಟಿಕೆಗಳನ್ನು ಇಷ್ಟ ಪಡುವಷ್ಟು ಅಥವಾ ಅದರೊಟ್ಟಿಗೆ ಕಾಲ ಕಳೆಯುವುದಕ್ಕೆ ತೋರಿಸುವಷ್ಟು ಅಸಕ್ತಿಯನ್ನು ಪಾಠ ಕಲಿಯಲು ನೀಡುವುದಿಲ್ಲ ಎಂದು ಶಿಕ್ಷಕರಾದ ನಾವುಗಳು ಬಹಳಷ್ಟು ಬಾರಿ ಗಮನಿಸಿ, ಮಕ್ಕಳಿಗೂ ಹೇಳಿದ್ದುಂಟು. ಹೌದಲ್ವಾ?
