ಅಂತರಿಕ್ಷದ ಅಲೆಮಾರಿಗಳು
ಲೇಖಕರು: ಆರ್. ಬಿ. ಗುರುಬಸವರಾಜ
ಆಂಗ್ಲ ಭಾಷಾ ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ ಬಸರಕೋಡು.
ಹಗರಿಬೊಮ್ಮನಹಳ್ಳಿ(ತಾ) ವಿಜಯನಗರ(ಜಿ)
ಮೋಡಗಳಿಲ್ಲದ ರಾತ್ರಿ ಆಗಸ ನೋಡುವುದೇ ಒಂದು ಸೊಗಸು. ನಮ್ಮ ಸೌರವ್ಯೂಹದಲ್ಲಿ ಅನೇಕ ಕುತೂಹಲಕಾರಿ ವಿದ್ಯಮಾನಗಳು ನಡೆಯುತ್ತಲೇ ಇರುತ್ತವೆ. ಹಗಲಿನಲ್ಲಿ ಸೂರ್ಯನ ಪ್ರಖರವಾದ ಬೆಳಕು ಇರುವುದರಿಂದ ಇಂತಹ ವಿದ್ಯಮಾನಗಳನ್ನು ನೋಡಲಾಗುವುದಿಲ್ಲ. ರಾತ್ರಿಯಾದರೆ ಇಂತಹ ಎಲ್ಲಾ ವಿದ್ಯಮಾನಗಳನ್ನು ಬರಿಗಣ್ಣಿನಿಂದ ನೋಡಬಹುದು. ಅವುಗಳ ಹಿಂದಿರುವ ವಿಜ್ಞಾನವನ್ನು ತಿಳಿಯಬಹುದು ಅಲ್ಲವೇ? ಈಗ ನಾವು ಅಂತರಿಕ್ಷಕದ ಕಲ್ಲುಗಳ ಬಗ್ಗೆ ಒಂದಿಷ್ಟು ಚರ್ಚಿಸೋಣ.
