ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Friday, April 4, 2025

ಬೆಳಕನ್ನೇ ಹರಳುಗಟ್ಟಿಸಿದ ವಿಜ್ಞಾನಿಗಳು!!!

 ಬೆಳಕನ್ನೇ ಹರಳುಗಟ್ಟಿಸಿದ ವಿಜ್ಞಾನಿಗಳು!!!

                     

 ಲೇಖನ :ರಾಮಚಂದ್ರಭಟ್‌ ಬಿ.ಜಿ.


ಒಂಭತ್ತನೇ ತರಗತಿಯ ವಿಜ್ಞಾನ ಪಠ್ಯಪುಸ್ತಕವನ್ನು ಭಾಷಾಂತರಿಸುತ್ತಿದ್ದಾಗ ನನಗೆ ಇದ್ದಕ್ಕಿದ್ದಂತೆ ದ್ರವ್ಯದ ೫ನೇ ಸ್ಥಿತಿಯಾದ ಬೋಸ್-ಐನ್‌ಸ್ಟೀನ್‌ ಕಂಡನ್ಸೇಟ್‌ ಕುರಿತು ಅನೇಕ ಅನುಮಾನಗಳು ಮೂಡತೊಡಗಿದವು.  ಬೆಳಕನ್ನೂ ಹೀಗೆಯೇ ಹೆಪ್ಪುಗಟ್ಟಿಸಬಹುದೇ ? ಹೌದಾದಲ್ಲಿ, ಅದು ಹೇಗಿರಬಹುದು? ಎಂಥ ಮೂರ್ಖತನದ ಆಲೋಚನೆಗಳೊ? ಇತ್ತೀಚೆಗೆ ಬೆಳಕನ್ನೂ ಹರಳುಗಟ್ಟಿಸಿದ ವಿಜ್ಞಾನಿಗಳು ಎಂಬ ಸುದ್ದಿ ಕೇಳಿದ ಮೇಲೆ ಇನ್ನಷ್ಟುಅಚ್ಚರಿಗೆಕಾರಣವಾಯಿತು. ಇದು ವೈಜ್ಞಾನಿಕ ಜಗತ್ತಿನಲ್ಲಿ ಮಹಾನ್‌ ಅಲ್ಲೋಲಕಲ್ಲೋಲ ಹುಟ್ಟುಹಾಕಬಹುದಾದ ಸಂಶೋಧನೆಗಳಲ್ಲಿ ಒಂದು, ಎಂದೇ ಪರಿಗಣಿಸಲ್ಪಡುತ್ತದೆ.


Source : https://physics.aps.org/assets/09947a9e-c1bb-451c-9ca3-f60ad4752c79/e7_1.png  

Figure: A Bose-Einstein condensate of photons. (Top) Schmitt et al. produce a photon BEC by using an optical pump to excite dye molecules in an optical cavity. The surrounding molecules act as a heat bath and a particle reservoir. (Center) When the effective size of the reservoir is large enough, the setup produces grand-canonical conditions and Schmitt et al. observe large fluctuations in the number of particles in the condensate. (Bottom) These fluctuations disappear with a small reservoir.

ಇತ್ತೀಚಿನ ದಿನಗಳಲ್ಲಿ ವಿಜ್ಞಾನಿಗಳು ಬೆಳಕನ್ನು "ಸ್ಫಟಿಕೀಕರಿಸುವ" ಒಂದು ಅದ್ಭುತ ತಂತ್ರಜ್ಞಾನವನ್ನು ಕಂಡುಹಿಡಿದಿದ್ದಾರೆ. ಇದು ಕೇವಲ ಒಂದು ಸಾಧನೆಯಲ್ಲ, ಬದಲಿಗೆ ಬೆಳಕನ್ನು ಘನವಸ್ತು ಮತ್ತು ದ್ರವದ ಗುಣಗಳನ್ನು ಒಟ್ಟಿಗೆ ಹೊಂದಿರುವ ರೀತಿಯಲ್ಲಿ ಪರಿವರ್ತಿಸುವ ಮಾಂತ್ರಿಕ ಕ್ಷಣ ! ಪೊಲಾರಿಟಾನ್ ಎಂಬ ಬೆಳಕು-ವಸ್ತು ಸಂಯೋಗದ ಮೂಲಕ ಈ ಸಾಧನೆ ಸಾಧ್ಯವಾಗಿದೆ. ಕ್ವಾಂಟಮ್ ಭೌತಶಾಸ್ತ್ರದಲ್ಲಿ ಇದೊಂದು ಕ್ರಾಂತಿಕಾರಿ ಹೆಜ್ಜೆಯಾಗಿದ್ದು, ಕ್ವಾಂಟಮ್ ಕಂಪ್ಯೂಟಿಂಗ್, ಫೋಟೊನಿಕ್ಸ್ ಮತ್ತು ಇನ್ನೂ ಅನೇಕ ಕ್ಷೇತ್ರಗಳಲ್ಲಿ ದೊಡ್ಡ ಬದಲಾವಣೆ ತರುವ ನಿರೀಕ್ಷೆ ಇದೆ.. ಅದೆಷ್ಟು ಹೊಸ ಸಂಶೋಧನಾ ಕ್ಷೇತ್ರಗಳ ಉಗಮಕ್ಕೆಇದು ಕಾರಣವಾದೀತು. ಮಾರ್ಚ್ 5, 2025ರಂದು *ನೇಚರ್* ಪತ್ರಿಕೆಯಲ್ಲಿ ಪ್ರಕಟವಾದ ಈ ಸಂಶೋಧನೆ, ಬೆಳಕಿನ ಅಸಾಧ್ಯ ಗುಣಗಳನ್ನು ತೋರಿಸುವ ಒಂದು ರೋಮಾಂಚಕ ಕಥೆಯಾಗಿದೆ.

 ಬೆಳಕಿನ ಸ್ಫಟಿಕೀಕರಣದ ಹಿಂದಿನ ರಹಸ್ಯ : 

ಈ ಆವಿಷ್ಕಾರದ ಕೇಂದ್ರ ಬಿಂದು "ಸೂಪರ್‌ಸಾಲಿಡ್" ಎಂಬ ಅಪರೂಪದ ಮತ್ತು ವಿಚಿತ್ರವಾದ ವಸ್ತುಸ್ಥಿತಿ. ಇದು ಸ್ಫಟಿಕದಂತಹ ಘನ ರಚನೆಯನ್ನು ಹೊಂದಿದ್ದರೂ, ಸೂಪರ್‌ಫ್ಲೂಯಿಡ್‌ನಂತೆ ಘರ್ಷಣೆ ಇಲ್ಲದ ತರಲ (ಹರಿಯುವ) ಗುಣವನ್ನು ಒಳಗೊಂಡಿದೆ. ಸಾಮಾನ್ಯವಾಗಿ ಸೂಪರ್‌ಸಾಲಿಡ್‌ಗಳನ್ನು ಅತಿ ಶೀತಲ ಪರಿಸ್ಥಿತಿಯಲ್ಲಿ ಪರಮಾಣುಗಳ ಮೂಲಕ ಮಾತ್ರ ಕಾಣಬಹುದಾಗಿತ್ತು. ಆದರೆ ಇಟಲಿಯ ರಾಷ್ಟ್ರೀಯ ಸಂಶೋಧನಾ ಮಂಡಳಿಯ (CNR) ವಿಜ್ಞಾನಿಗಳ ತಂಡವು ಬೆಳಕನ್ನೇ ಈ ಪ್ರಯೋಗಕ್ಕೆ ಬಳಸಿ ಇತಿಹಾಸ ಸೃಷ್ಟಿಸಿದೆ. ಭಾರತದ IISER, ಪುಣೆಯ ಸಂಶೋಧಕರು ಕೂಡ ಫೋಟೊನಿಕ್ ಸ್ಫಟಿಕಗಳು ಮತ್ತು ಪೊಲಾರಿಟಾನ್‌ಗಳ ಕ್ವಾಂಟಮ್ ಗುಣಗಳ ಬಗ್ಗೆ ಸಂಶೋಧನೆ ನಡೆಸಿದ್ದಾರೆ. 2022ರಲ್ಲಿ ಅವರು ʼನೇಚರ್ ಫೋಟೋನಿಕ್ಸ್‌ʼನಲ್ಲಿ ಪ್ರಕಟಿಸಿದ ಲೇಖನದಲ್ಲಿ ಬೆಳಕಿನ ಕಣಗಳನ್ನು ನಿಯಂತ್ರಿಸುವ ಹೊಸ ವಿಧಾನಗಳನ್ನು ಪ್ರಸ್ತಾಪಿಸಿದ್ದರು. ಇದು ಪ್ರಸ್ತುತ ಸಂಶೋಧನೆಗಳಿಗೆ ಸಂಬಂಧಿಸಿದಂತೆ ಮಹತ್ವದ ಸಾಧನೆಯಾಗಿದೆ. 

 ಇಟಲಿಯ ಸಂಶೋಧಕರು ಅಲ್ಯೂಮಿನಿಯಂ ಗ್ಯಾಲಿಯಂ ಆರ್ಸೆನೈಡ್ ಎಂಬ ಅರೆವಾಹಕ ವಸ್ತುವನ್ನು ಮೈಕ್ರೊಕ್ಯಾವಿಟಿಯಲ್ಲಿ ಇರಿಸಿ, ಬೆಳಕನ್ನು ಸೆರೆಹಿಡಿದರು. ಫೋಟಾನ್‌ಗಳು (ಬೆಳಕಿನ ಕಣಗಳು) ಮತ್ತು ಎಕ್ಸಿಟಾನ್‌ಗಳ (ಅರೆವಾಹಕದಲ್ಲಿ ಎಲೆಕ್ಟ್ರಾನ್-ರಂಧ್ರ ಜೋಡಿಗಳು) ಸಂಯೋಗದಿಂದ ಪೊಲಾರಿಟಾನ್‌ಗಳು ಉತ್ಪತ್ತಿಯಾದವು. ಈ ಪೊಲಾರಿಟಾನ್‌ಗಳನ್ನು ಫೋಟೊನಿಕ್-ಕ್ರಿಸ್ಟಲ್ ವೇವ್‌ಗೈಡ್‌ನಲ್ಲಿ ಚಲಿಸುವಂತೆ ಮಾಡಲಾಯಿತು. ಆಗ ಅವು ಸ್ವಯಂಪ್ರೇರಿತವಾಗಿ ಸ್ಫಟಿಕದಂತಹ ರಚನೆಯನ್ನು ರೂಪಿಸಿದವು. ಘರ್ಷಣೆ ಇಲ್ಲದೆ ಹರಿಯುವ ಗುಣವನ್ನು ಇವು ಕಾಯ್ದುಕೊಂಡವು. ಹೀಗೆ, ಬೆಳಕು ಸೂಪರ್‌ಸಾಲಿಡ್ ಎಂಬ ಅತಿ ಘನ ರಚನೆಯ ಜೊತೆಗೆ ತರಲಗಳ ಮಾಯಾಜಾಲ !

ಈ ಸಂಶೋಧನೆಗೆ ಸಮಾನಾಂತರವಾಗಿ, ಭಾರತೀಯ ವಿಜ್ಞಾನಿಗಳು ಕೂಡ ಕ್ವಾಂಟಮ್ ದ್ರವಗಳು ಮತ್ತು ಸೂಪರ್‌ಸಾಲಿಡ್‌ಗಳ ಕ್ಷೇತ್ರದಲ್ಲಿ ಗಮನಾರ್ಹ ಕೊಡುಗೆ ನೀಡಿದ್ದಾರೆ. 2020ರಲ್ಲಿ, ಭಾರತೀಯ ವಿಜ್ಞಾನ ಸಂಸ್ಥೆ (IISc), ಬೆಂಗಳೂರು ಮತ್ತು ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆ (TIFR)ಯ ವಿಜ್ಞಾನಿಗಳು ಬೋಸ್-ಐನ್ಸ್ಟೈನ್ ಕಂಡೆನ್ಸೇಟ್ (BEC) ಮೂಲಕ ಸೂಪರ್‌ಸಾಲಿಡ್ ಸ್ಥಿತಿಯನ್ನು ಪ್ರಯೋಗಶಾಲೆಯಲ್ಲಿ ರಚಿಸುವಲ್ಲಿ ಯಶಸ್ವಿಯಾಗಿದ್ದರು. ಈ ಸಂಶೋಧನೆ ʼಫಿಸಿಕಲ್ ರಿವ್ಯೂ ಲೆಟರ್ಸ್ʼ ನಲ್ಲಿ ಪ್ರಕಟವಾಗಿತ್ತು ಮತ್ತು ಕ್ವಾಂಟಮ್ ವಸ್ತುಗಳ ಅಸಾಧಾರಣ ಗುಣಗಳನ್ನು ಅರ್ಥಮಾಡಿಕೊಳ್ಳಲು ಹೊಸ ದಾರಿ ತೆರೆದಿತ್ತು. 

ಹಿಂದಿನ ಸಾಧನೆಗಳನ್ನು ಮೀರಿದ ಮೈಲಿಗಲ್ಲು

ಬೆಳಕನ್ನು ದ್ರವದಂತೆ ಮಾಡುವ ಪ್ರಯತ್ನ ಹೊಸದೇನಲ್ಲ. ಹತ್ತು ವರ್ಷಗಳ ಹಿಂದೆಯೇ CNR ಸಂಶೋಧಕ ಡೇನಿಯಲ್ ಸ್ಯಾನ್‌ವಿಟ್ಟೊ ಪೊಲಾರಿಟಾನ್‌ಗಳ ದ್ರವ ಗುಣವನ್ನು ತೋರಿಸಿದ್ದರು. ಆದರೆ, ಈ ಹೊಸ ಸಂಶೋಧನೆ ಒಂದು ಹೆಜ್ಜೆ ಮುಂದೆ ಹೋಗಿ, ಬೆಳಕನ್ನುಅದರ ಕ್ವಾಂಟಮ್ ಹರಿವನ್ನು ಕಳೆದುಕೊಳ್ಳದಂತೆ ಘನ ರಚನೆಯಾಗಿ ಪರಿವರ್ತಿಸಿದೆ.ಈ ಪ್ರಯೋಗದ ಸಂಕೀರ್ಣತೆಯನ್ನು ಒತ್ತಿ ಹೇಳುತ್ತಾ ಸ್ಯಾನ್‌ವಿಟ್ಟೊ "ಬೆಳಕಿನಿಂದ ಸೂಪರ್‌ಸಾಲಿಡ್ ಪಡೆದಿರುವುದು ಇದೇ ಮೊದಲು" ಎಂದು ಹೇಳಿದ್ದಾರೆ.

ಅತಿ ಶೀತಲ ಪರಮಾಣುಗಳ ಬದಲು ಅರೆವಾಹಕವನ್ನು ಬಳಸಿದ್ದು ಈ ಸಂಶೋಧನೆಯ ವಿಶೇಷತೆ. ಇದರಿಂದ ಈ ತಂತ್ರಜ್ಞಾನವನ್ನು ಸುಲಭವಾಗಿ ಬಳಸಬಹುದಾದ ತಾಪಮಾನದಲ್ಲಿ ಪರೀಕ್ಷಿಸಲು ಸಾಧ್ಯವಾಗಿದೆ. ಪೊಲಾರಿಟಾನ್‌ಗಳು ಬೆಳಕು ಮತ್ತು ದ್ರವ್ಯದ ಸೇತುವೆಯಾಗಿ, ಈ ಆವಿಷ್ಕಾರಕ್ಕೆ ದಾರಿ ಮಾಡಿಕೊಟ್ಟಿವೆ.

 ತಂತ್ರಜ್ಞಾನಕ್ಕೆ ಒಂದು ಹೊಸ ದಿಕ್ಕು:

ಬೆಳಕಿನ ಸೂಪರ್‌ಸಾಲಿಡ್ ರಚನೆ ಭವಿಷ್ಯದ ತಂತ್ರಜ್ಞಾನಗಳ ಅಭಿವೃದ್ಧಿಗೆ ಅಪೂರ್ವ ಜ್ಞಾನದ ಅಕ್ಷಯ ಗಣಿಯಾಗಬಹುದು. ಕ್ವಾಂಟಮ್ ಕಂಪ್ಯೂಟಿಂಗ್‌ನಲ್ಲಿ, ಇದು ಮಾಹಿತಿಯ ಸಂಸ್ಕರಣೆ ಮತ್ತು ಸಂಗ್ರಹಣೆಗೆ ಹೊಸ ವೇದಿಕೆಯಾಗಬಹುದು.ಈಗ ಶಕ್ತಿಯ ಸಾಗಾಣಿಕೆಯಲ್ಲಿ ಶೇಕಡಾ ೪೦ರಷ್ಟು ಶಕ್ತಿಯ ನಷ್ಟವಾಗುತ್ತಿರುವುದು ಗೊತ್ತೇ ಇದೆ. ಹೊಸ ಸಂಶೋಧನೆಯಿಂದ ಘರ್ಷಣೆ ಇಲ್ಲ ಹರಿವು ಶಕ್ತಿಯನ್ನು ಅತ್ಯಂತ ಸಮರ್ಥವಾಗಿ ಸಾಗಿಸಲು ಸಹಕಾರಿಯಾಗಲಿದೆ. ಜೊತೆಗೆ ಸ್ಫಟಿಕ ರಚನೆಯಿಂದ ಸೂಕ್ಷ್ಮ ಸಂವೇದಕಗಳು ಅಥವಾ ಹೊಸ ಆಪ್ಟಿಕಲ್ ಉಪಕರಣಗಳನ್ನು ಇನ್ನಷ್ಟು ಉತ್ಕೃಷ್ಟವಾಗಿ ರೂಪಿಸಬಹುದು.

ಭಾರತೀಯ ಸ್ಪೇಸ್ ರಿಸರ್ಚ್ ಆರ್ಗನೈಸೇಶನ್ (ISRO) ಮತ್ತು ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಆರ್ಗನೈಸೇಶನ್ (DRDO) ಈ ತಂತ್ರಜ್ಞಾನವನ್ನು ಸಂವೇದಕಗಳು ಮತ್ತು ಸುರಕ್ಷಿತ ಸಂವಹನ ವ್ಯವಸ್ಥೆಗಳಲ್ಲಿ ಬಳಸುವ ಬಗ್ಗೆ ಆಸಕ್ತಿ ತೋರಿಸಿವೆ. ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (DST) ಮತ್ತು ಸರ್ಕಾರಿ ಕ್ವಾಂಟಮ್ ತಂತ್ರಜ್ಞಾನ ಯೋಜನೆ ಈ ಕ್ಷೇತ್ರದಲ್ಲಿ ಹೂಡಿಕೆ ಮಾಡುತ್ತಿವೆ. IISc, TIFR, ಮತ್ತು IISERಗಳು ಕ್ವಾಂಟಮ್ ಫೋಟೊನಿಕ್ಸ್‌ನಲ್ಲಿ ಪ್ರಪಂಚದ ಮುಂಚೂಣಿ ಸಂಸ್ಥೆಗಳಾಗಿ ಮಾರ್ಪಡುತ್ತಿವೆ.

ತಂತ್ರಜ್ಞಾನದ ಜೊತೆಗೆ, ಇದು ಶುದ್ಧ ವಿಜ್ಞಾನವಾದ ಕ್ವಾಂಟಮ್ ಭೌತಶಾಸ್ತ್ರದ ಅರಿವು ಹೆಚ್ಚಿಸಿ ಇನ್ನಷ್ಟು ಆಳವಾದ ಒಳನೋಟವನ್ನು ನೀಡುತ್ತದೆ. ಸೊರ್ಬೊನ್ ವಿಶ್ವವಿದ್ಯಾಲಯದ ಭೌತಶಾಸ್ತ್ರಜ್ಞ ಆಲ್ಬರ್ಟೊ ಬ್ರಮತಿ ಹೇಳುವಂತೆ, ಈ ಸಂಶೋಧನೆ ಕ್ವಾಂಟಮ್ ವಸ್ತುಗಳ ಸ್ಥಿತಿಗಳ ಬದಲಾವಣೆಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಬೆಳಕನ್ನೊಳಗೊಂಡ ಸೂಪರ್‌ಸಾಲಿಡ್‌ಗಳು ಭವಿಷ್ಯದಲ್ಲಿ ಇನ್ನಷ್ಟು ವಿಚಿತ್ರ ಸ್ಥಿತಿಗಳನ್ನು ಅನ್ವೇಷಿಸಲು ದಾರಿ ಮಾಡಿಕೊಡಬಹುದು.

ಮುಂದಿನ ಹಾದಿ :

ಈ ಫಲಿತಾಂಶಗಳು ರೋಮಾಂಚಕವಾಗಿದ್ದರೂ, ಈ ಹೊಸ ವಸ್ತುಸ್ಥಿತಿಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಇನ್ನಷ್ಟು ಸಂಶೋಧನೆ ಆಗಬೇಕು. ಹೆಚ್ಚಿನ ಮಾಪನಗಳು ಮತ್ತು ಪ್ರಯೋಗಗಳು ಈ ಸೂಪರ್‌ಸಾಲಿಡ್‌ನ ಗುಣಗಳನ್ನು ಸ್ಪಷ್ಟಪಡಿಸಲಿವೆ. ಮುಖ್ಯ ಸಂಶೋಧಕ ಡಿಮಿಟ್ರಿಸ್ ಟ್ರೈಪೊಗಿಯೊರ್ಗೊಸ್ ಈ  ಆಶಾಭಾವನೆ ವ್ಯಕ್ತಪಡಿಸಿದ್ದಾರೆ, "ಬೆಳಕಿನ ಹರಳುಗಳನ್ನು ಪರಮಾಣುಗಳಿಗಿಂತ ಸುಲಭವಾಗಿ ನಿಯಂತ್ರಿಸಬಹುದು" ಎಂದು ಹೇಳಿದ್ದಾರೆ.

ಕ್ವಾಂಟಮ್ ಭೌತಶಾಸ್ತ್ರದ ಈ ಪಯಣದಲ್ಲಿ, ಬೆಳಕನ್ನು ಸ್ಫಟಿಕೀಕರಿಸುವ ಈ ಸಾಧನೆ ಮಾನವ ಬುದ್ಧಿಮತ್ತೆ, ಕೃತುಶಕ್ತಿಗೆ ಸಾಕ್ಷಿಯಾಗಿದೆ. ಇದು ಕೇವಲ ಒಂದು ಪ್ರಯೋಗವಲ್ಲ, ಬದಲಿಗೆ ಭವಿಷ್ಯದಲ್ಲಿ ವಿಶ್ವದ ಮೂಲಭೂತ ತತ್ವಗಳನ್ನು ಮರುರೂಪಿಸುವ ಅಲಾದೀನನ ಮಾಂತ್ರಿಕ ದೀಪವೇ ಸರಿ!!!.  ಮುಂದಿನ ದಿನಗಳಲ್ಲಿ ಈ ಆವಿಷ್ಕಾರ ತಂತ್ರಜ್ಞಾನ ಮತ್ತು ಸತ್ಯದ ಹೊಸ ಮಾರ್ಗಗಳನ್ನು ಬೆಳಗಬಹುದು!

 

**ಉಲ್ಲೇಖಗಳು:** 

1. Nature (2025), "Light Crystallization in Quantum Materials." 

2. Physical Review Letters (2020), "Observation of Supersolidity in a Bose-Einstein Condensate." 

3. Nature Photonics (2022), "Advanced Control of Polaritons in Photonic Crystals." 

4. DST, Government of India – Quantum Mission Reports.

 

ಓ ಬಣ್ಣದ ಚಿಟ್ಟೆ! ನಿನ್ನ ಮರೆತರೆ ನಾ ಕೆಟ್ಟೆ!!

   ಬಣ್ಣದ ಚಿಟ್ಟೆನಿನ್ನ ಮರೆತರೆ ನಾ ಕೆಟ್ಟೆ!!

                                                    

ಲೇಖಕರು : ಡಾಶಶಿಕುಮಾರ್ಎಲ್          
ವೈಜ್ಞಾನಿಕ ಅಧಿಕಾರಿ ಹಾಗೂ ಚಿಟ್ಟೆ ಸಂಶೋಧಕ 

 ಜೀವಶಾಸ್ತ್ರ ವಿಭಾಗ ,

ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ 

ಜಲಪುರಿ. ಕೆಪಿಎ ಆವರಣ   ಮೈಸೂರು - 19


    'ಪಾತರಗಿತ್ತಿ ಪಕ್ಕಾ... ನೋಡಿದ್ಯೇನ ಅಕ್ಕ!' ಎಂದು ಕವಿ ಬೆಂದ್ರೆ ಅವರು ಚಿಟ್ಟೆಯ ಬಗ್ಗೆ ವರ್ಣಿಸಿದ್ದಾರೆಪಾತರಗಿತ್ತಿ ಎಂದು ಕರೆಯುವ ಚಂದದ ಚಿಟ್ಟೆಯ ಸುಳಿದಾಟವನ್ನು ನಾವೆಲ್ಲರೂ ಆಗಾಗ್ಗೆ ಗಮನಿಸುತ್ತಿರುತ್ತೇವೆಬಣ್ಣ ಬಣ್ಣದ ಚಿಟ್ಟೆಗಳು ನೋಡಲು ಎಷ್ಟು ಆಕರ್ಷಕವೋ ಅವುಗಳ ಜೀವನವೂ ಅಷ್ಟೇ ಸೋಜಿಗಭೂಮಿಯಲ್ಲಿ ಮನುಷ್ಯನು ವಿಕಾಸಗೊಳ್ಳುವುದಕ್ಕಿಂತ 970 ಲಕ್ಷ ವರ್ಷಗಳಿಗೆ ಮುನ್ನವೇ ಹೂ ಬಿಡುವ ಸಸ್ಯಗಳ ಜೊತೆ ಜೊತೆಗೇ ಚಿಟ್ಟೆಗಳು  ವಿಕಾಸಗೊಂಡಿವೆ  ಎಂದು ಹೇಳಲಾಗಿದೆಪ್ರಪಂಚದಲ್ಲಿ ಸುಮಾರು 17000 ಚಿಟ್ಟೆ ಪ್ರಭೇದಗಳಿದ್ದುಅವುಗಳಲ್ಲಿ 1501 ಚಿಟ್ಟೆ ಪ್ರಭೇದಗಳು ಭಾರತದಲ್ಲಿವೆ ಕೌತುಕಮಯ ಚಿಟ್ಟೆಗಳ ಹಲವು ಪ್ರಭೇದಗಳು ಈಗಾಗಲೇ ಅಳಿವಿನಂಚಿನಲ್ಲಿವೆ ಎನ್ನುವ ವಿಚಾರ ಎಲ್ಲರ ಮನಸ್ಸಿಗೆ ಬೇಸರವನ್ನುಂಟು ಮಾಡಿಸುತ್ತದೆ


ಬಣ್ಣ ಬಣ್ಣದ ಹೂಗಳಿದ್ದ ಪ್ರದೇಶಗಳಲ್ಲಿ ಚಿಟ್ಟೆಗಳನ್ನು ಕಾಣುವುದು ಸಾಮಾನ್ಯ ಅಂಶಹಾದಿಬದಿಯ ಹುಲ್ಲು,  ಕಳೆಗಿಡಗಳುಕುರುಚಲು ಕಾಡಿನ ಗಿಡಗಳುಇಳಿಜಾರು ಪ್ರದೇಶದಟ್ಟ ಅರಣ್ಯದ ವೃಕ್ಷರಾಶಿಯಲ್ಲಿ, ಹೀಗೆ ತಮ್ಮ ಮರಿಗಳಿಗೆ ತಿನ್ನಲು ಆಹಾರವಾಗಿರುವಂತಹ ತಳಿರೆಲೆಗಳು ಸಿಗುವಲ್ಲಿಪೋಷಕಾಂಶಗಳು ಸಿಗುವ ತಿಪ್ಪೆಯಲ್ಲಿಒದ್ದೆ ಮಣ್ಣಿನ ಮೇಲೆ ಹಾಗೂ ಹಲವು ರೀತಿಯ ಪರಿಸರಗಳಲ್ಲಿ ಚಿಟ್ಟೆಗಳನ್ನು ಕಾಣಬಹುದು.  ಚಿಟ್ಟೆಗಳು ತಾಪವನ್ನು ಹೆಚ್ಚಾಗಿ ಇಷ್ಟಪಡುವ ಜೀವಿಗಳುಭಾರತದಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಚಿಟ್ಟೆಗಳನ್ನು ನೋಡಬಹುದಾಗಿದೆಹಲವು ರೀತಿಯ ಚಿಟ್ಟೆಗಳು ಹಲವು ಬಗೆಯ ಪ್ರದೇಶಗಳಲ್ಲಿ ಕಾಣಬರುತ್ತವೆ.

 ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಚಿಟ್ಟೆಯ ಬಗೆಗಳಾದ ಮಲಬಾರ್   ಟ್ರಿ ನಿoಪ್,  ಕ್ಲಿಪ್ಪರ್,   ರೆಡ್ ಸ್ಪಾಟ್ ಡ್ಯೂಕ್ ಹಾಗೂ  ಬ್ಲೂ ಬಾಟಲ್ ಗಳನ್ನು ನೋಡಬಹುದು.  ಅರೆಹರಿದ್ವರ್ಣ ಕಾಡುಗಳಲ್ಲಿ ಕಮಾಂಡರ್,  ಫ್ಯಾನ್ಸಿನವಾಬ್  ಮುಂತಾದ ಚಿಟ್ಟೆಗಳು ಕಾಣಸಿಗುತ್ತವೆಚಿಟ್ಟೆಗಳು ಮತ್ತು ಪತಂಗಗಳು ಲೆಪಿಡಾಪ್ಟ್ರಾ ಗುಂಪಿಗೆ ಸೇರಿದ್ದರೂ  ಅವುಗಳ ಮಧ್ಯೆ ಕೆಲವು ವ್ಯತ್ಯಾಸಗಳು ಕಂಡುಬರುತ್ತವೆ

ಚಿಟ್ಟೆಗಳು ಹಗಲು ಜೀವಿಗಳಾದರೆ ಪತಂಗಗಳು ನಿಶಾಚಾರಿಗಳುಚಿಟ್ಟೆಗಳು ರೆಕ್ಕೆಗಳನ್ನು ಬೆನ್ನ ಹಿಂಭಾಗದಲ್ಲಿ ಮಡಚಿಕೊಳ್ಳುತ್ತವೆಆದರೆ ಪತಂಗಗಳು ವಿಮಾನದ ರೆಕ್ಕೆಗಳಂತೆ ಅಡ್ಡಡ್ಡವಾಗಿ ಅಗಲಿಸಿರುತ್ತವೆಚಿಟ್ಟೆಗಳು ಚಟುವಟಿಕೆಯಿಂದ ಹಾರಾಡಿಕೊಂಡಿರಲು ಅವುಗಳ ದೇಹದ ಉಷ್ಣತೆ ಕನಿಷ್ಠ 25°c ಆದರೂ ಇರಬೇಕುಹಾಗೆ ಬೇಕಾದ ಉಷ್ಣತೆಯನ್ನು ಅವುಗಳು ಸೂರ್ಯನ ಬೆಳಕಿಗೆ ಮೈಯೊಡ್ಡಿ ಪಡೆಯುತ್ತವೆಇದಕ್ಕೆ ಸೂರ್ಯಸ್ನಾನ ಎನ್ನುತ್ತಾರೆ.

ಮೊಟ್ಟೆಯಿಂದ ಹುಳುವಾಗಿ ಕೋಶಾವಸ್ಥೆಗೆ ತೆರಳಿ ಬಣ್ಣದ ಚಿಟ್ಟೆಯಾಗುವ ರೀತಿ ಆಶ್ಚರ್ಯ ಹುಟ್ಟಿಸುವಂತಹುದು.

ಸಾಮಾನ್ಯವಾಗಿ ಪಕ್ಷಿಗಳಲ್ಲಿ ಹೆಣ್ಣಿಗಿಂತ ಗಂಡು ಆಕರ್ಷಕವಾಗಿರುವಂತೆ ಚಿಟ್ಟೆಯಲ್ಲೂ  ಗಂಡೇ ಹೆಚ್ಚು  ಸುಂದರಗಂಡು ಚಿಟ್ಟೆಗಳು ಹೆಣ್ಣು ಚಿಟ್ಟೆಯನ್ನು ಆಕರ್ಷಿಸಲು ತಮ್ಮ ದೇಹದಿಂದ ರಾಸಾಯನಿಕ ಕಂಪನ್ನು (ಫಿರೋಮೊನ್ಹೊರಸೂಸುತ್ತವೆ

            ಹೆಣ್ಣು ಕೂಡ ಕೋಶಾವಸ್ಥೆಯಿಂದ  ಹೊರಬಂದ ತಕ್ಷಣ ಹಾರಾಡ ಲಾರoಭಿಸುತ್ತದೆಗಂಡು ಹೆಣ್ಣನ್ನು ಹಿಂಬಾಲಿಸುತ್ತದೆಹಲವು ಗಂಟೆಗಳ ಸಂಗಮದ ನಂತರ ಗಂಡು ಹೆಣ್ಣುಗಳು ಬೇರ್ಪಟ್ಟು ಹೆಣ್ಣು ಮೊಟ್ಟೆ ಇಡಲು ಪ್ರಾರಂಭಿಸುತ್ತದೆಹೆಣ್ಣು ಚಿಟ್ಟೆಯು ತನ್ನ ಮರಿ ಹುಳುವಿನ ಆಹಾರ ಸಸ್ಯದ ಎಲೆಗಳ ಕೆಳಭಾಗದಲ್ಲಿ ಮೊಟ್ಟೆ ಇಡುತ್ತದೆ.  ಚಿಟ್ಟೆಗಳು ಗರಿಷ್ಠ 500 ರವರೆಗೆ ಮೊಟ್ಟೆಗಳನ್ನು ಇಡುತ್ತವೆ ಎನ್ನುತ್ತಾರೆ ತಜ್ಞರು.  

  ಚಿಟ್ಟೆಗಳು ಬೆಳೆಗಳ ಪರಾಗಸ್ಪರ್ಶದಲ್ಲಿ ಪ್ರಮುಖ ಪಾತ್ರವಹಿಸಿ ತನ್ಮೂಲಕ  ಸಸ್ಯಗಳ ಪೀಳಿಗೆ ಮುಂದುವರಿಯುವಂತೆ ಮಾಡುತ್ತವೆಕೊಳೆತ ದ್ರವ್ಯಗಳನ್ನು ತಿಂದು ಸ್ವಚ್ಛಗೊಳಿಸುವ ಕಾರ್ಯವನ್ನು ಚಿಟ್ಟೆ ನಿರ್ವಹಿಸುತ್ತದೆಚಿಟ್ಟೆಯ ಕಂಬಳಿ ಹುಳುಗಳು ಹಲವಾರು ಪಕ್ಷಿಗಳಿಗೆಜೇಡಕಡ್ಡಿ ಹುಳಗಳಿಗೆ ಆಹಾರ ಆಗಿರುತ್ತದೆಹೀಗೆ, ಆಹಾರ ಸರಪಣಿಯಲ್ಲಿ ಚಿಟ್ಟೆಯು ಪ್ರಮುಖ ಕೊಂಡಿಯಾಗಿದೆಹೆಚ್ಚಿನ ಚಿಟ್ಟೆಗಳು ಪರಿಸರ ನೈರ್ಮಲ್ಯ ಸೂಚಿಸುವ ದಿಕ್ಸೂಚಿ ಪ್ರಭೇದ ಕೂಡ ಎಂಬುದು ಸಂಶೋಧನೆಯಿಂದ ತಿಳಿದು ಬಂದಿದೆ.

  ಚಿಟ್ಟೆಗಳು ಚಿಕ್ಕ ಹಾಗೂ ದೊಡ್ಡ ಹೂಗಳ ಮಕರಂದವನ್ನು ಹೀರುತ್ತವೆಎಲ್ಲಾ ಚಿಟ್ಟೆಗಳು ಒಂದೇ ಜಾತಿಯ ಹೂಗಳನ್ನು ಆಶ್ರಯಿಸುವುದಿಲ್ಲಅಂತೇಯೇ ಚಿಟ್ಟೆಯ ಕಂಬಳಿ ಹುಳುಗಳು ಅವುಗಳ ಜಾತಿಗನುಗುಣವಾಗಿ ಕೆಲವು ಗೊತ್ತಾದ ಸಸ್ಯಗಳ ಎಲೆಗಳನ್ನು ಮಾತ್ರ ತಿನ್ನುತ್ತವೆಸಾಮಾನ್ಯ ಮಕರಂದ ಸಸ್ಯಗಳಾದ ಸಣ್ಣ ಸೇವಂತಿಕೇಪಳಲಂಟನಾಡೈಸಿತೇರು ಹೂಹುಳಿ ಸೊಪ್ಪುತುಂಬೆಕನಕಾಂಬರದಾಸವಾಳ ಹಾಗು ಇತರ ಹೂಗಳಿಂದ ಚಿಟ್ಟೆಗಳು ಮಕರಂದ ಹೀರುತ್ತವೆ.

     ಹೂಗಳಲ್ಲಿನ ಮಕರಂದ ಚಿಟ್ಟೆಗಳಿಗೆ ಸಂಪೂರ್ಣ ಪೋಷಕಾಂಶ ದೊರಕಿಸಿ ಕೊಡುವುದಿಲ್ಲದ ಕಾರಣ ಅವುಗಳು ಒದ್ದೆ ಮಣ್ಣುಕೊಳಚೆ ನೀರುಕೊಳೆತ ಹಣ್ಣುಪಕ್ಷಿ ಹಿಕ್ಕೆಗಳು ಮುಂತಾದವುಗಳ ಮೇಲೆ ಕುಳಿತು ಸಸಾರಜನಕಯುಕ್ತ  ಲವಣಾಂಶಗಳನ್ನು ಹೀರುತ್ತವೆಇದು ಅವುಗಳ ಸಂತಾನಭಿವೃದ್ಧಿಗೆ ಸಹಾಯಕವಾಗುತ್ತದೆಕೆಲವೊಂದು ಬಗೆಯ ಚಿಟ್ಟೆಗಳು ಗುಂಪು ಗುಂಪಾಗಿ ಕುಳಿತು ಒದ್ದೆ ಮಣ್ಣಿನಲ್ಲಿ ನೀರನ್ನು ಹೀರುತ್ತವೆಕೆಲವು ಜಾತಿಯ ಚಿಟ್ಟೆಗಳು ಪಕ್ಷಿಗಳಂತೆ ವಲಸೆ ಹೋಗುತ್ತವೆಕುತೂಹಲಕಾರಿ ವಿಷಯವೇನೆಂದರೆ ಪಕ್ಷಿಪ್ರಾಣಿಗಳು ತಿನ್ನಬಹುದಾದ ಕೆಲವು ಚಿಟ್ಟೆಗಳು ಮತ್ತೊಂದು ತಿನ್ನಲಾರದ ಚಿಟ್ಟೆಯ ಬಣ್ಣವನ್ನು ಅನುಕರಿಸಿ ಶತ್ರುಗಳಿಂದ ಪಾರಾಗುತ್ತವೆ

 ಚಿಟ್ಟೆಗಳು ಮೂಲತಃ ಗಿಡಮರಬಳ್ಳಿಗಳಂತಹ ಸಸ್ಯಗಳ ಆಸರೆಯಲ್ಲಿರುವ ಜೀವಿಗಳುಅವುಗಳಿಂದಲೇ ತಮ್ಮ ಆಹಾರವನ್ನುರಕ್ಷಣೆಯನ್ನು ಪಡೆಯುತ್ತವೆಸಹಜವಾಗಿಯೇ ಸಸ್ಯಲೋಕದ ಏರುಪೇರುಗಳಿಗೆ ತಕ್ಷಣ ಸ್ಪಂದಿಸದಿದ್ದರೆ ಅವು ಉಳಿಯಲಾರವುಚಿಟ್ಟೆಗಳಿಂದ ಪ್ರಕೃತಿಯಲ್ಲಿ ಹಲವು ಪ್ರಯೋಜನಗಳಿರುವುದರಿಂದ ಅವುಗಳನ್ನು ಸಂರಕ್ಷಿಸುವುದು ಆದ್ಯ ಕರ್ತವ್ಯ ಆಗಬೇಕಿದೆ

 ಮಾನವನ ಹಸ್ತಕ್ಷೇಪದಿಂದ ಚಿಟ್ಟೆಗಳ ಪರಿಸರ ಹಾಳಾಗುತ್ತಿದೆಆವಾಸಸ್ಥಾನದ ನಷ್ಟನಗರೀಕರಣಹವಾಮಾನ ಬದಲಾವಣೆ,  ಅತಿಯಾದ ಕೀಟನಾಶಕಗಳ ಬಳಕೆ,  ಅಳಿವಿನಂಚಿನಲ್ಲಿರುವ ಚಿಟ್ಟೆಗಳ ಬೇಟೆಯಾಡುವಿಕೆ ಹಾಗೂ ಅರಣ್ಯ ಬೆಂಕಿಗೆ ಹಲವಾರು ಬಗೆಯ ಚಿಟ್ಟೆಗಳು ನಶಿಸುತ್ತಿವೆವಿವಿಧ ಬಗೆಯ ಚಿಟ್ಟೆಗಳಾದ ಕ್ರಿಮ್ಸನ್ ರೋಸ್ಕಾಮನ್ ಪೈರೂಟ್ಕ್ರಿಮ್ಸನ್ ನವಾಬ್ಡನೈಡ್ ಎಗ್ ಫ್ರೈಕಾಮನ್  ಮಾರ್ಮನ್ ಹಾಗೂ ಮುಂತಾದ ಚಿಟ್ಟೆಗಳು ಐಯುಸಿಎನ್ ( ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಷನ್ ಆಫ್ ನೇಚರ್ಕೆಂಪು ಪಟ್ಟಿ ಸೇರಿವೆಪ್ರೌಢ ಚಿಟ್ಟೆಗಳಿಗೆ ಬೇಕಾದ ಮಕರಂದ ನೀಡುವ ಮತ್ತು ಅವುಗಳ ಕಂಬಳಿ ಹುಳುಗಳಿಗೆ ತಿನ್ನಲು ಬೇಕಾದ ಸಸ್ಯಗಳನ್ನು ಎಲ್ಲಾ ಕಡೆ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಸಿ ಪ್ರಕೃತಿಯ ಪ್ರಮುಖ ಕೊಂಡಿ ಯಾಗಿರುವ ಚಿಟ್ಟೆಗಳನ್ನು ಉಳಿಸಿಕೊಳ್ಳಬೇಕಾದ ಅಗತ್ಯವನ್ನು ರಾಷ್ಟ್ರೀಯ ಚಿಟ್ಟೆ ದಿನದ (ಮಾ. 14)  ಸುಸಂದರ್ಭದಲ್ಲಾದರೂ ನಾವೆಲ್ಲರೂ ತುರ್ತಾಗಿ ಅರಿಯಬೇಕಾಗಿದೆಯಲ್ಲವೇ