ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಸವಿಜ್ಞಾನದ ಲೇಖನಗಳನ್ನು ಓದಿ, ಅಭಿಪ್ರಾಯ ದಾಖಲಿಸಿ. ನಿಮ್ಮ ಪ್ರೋತ್ಸಾಹಗಳೇ ಲೇಖಕರಿಗೆ ಶ್ರೀರಕ್ಷೆ Science is a beautiful gift to humanity; we should not distort it. A. P. J. Abdul Kalam

Tuesday, August 4, 2026

ರಾಷ್ಟ್ರೀಯ ಬಾಹ್ಯಾಕಾಶ ದಿನ

                 ರಾಷ್ಟ್ರೀಯ ಬಾಹ್ಯಾಕಾಶ ದಿನ 

             (NATIONAL SPACE DAY)


ಲೇಖಕರು :  
ಬಿ .ಎನ್. ರೂಪ,  

ಸಹಶಿಕ್ಷಕರು,

ಕೆ.ಪಿ.ಎಸ್‌  ಜೀವನ್‌ ಭೀಮನಗರ

ಬೆಂಗಳೂರು ದಕ್ಷಿಣ ವಲಯ -4



ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಪ್ರತಿವರ್ಷ ಆಗಸ್ಟ್23ರಂದು ಆಚರಿಸಲಾಗುತ್ತಿದೆ. ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಪ್ರಥಮ ಬಾರಿಗೆ ಆಗಸ್ಟ್ 23, 2024 ರಂದು ಆಚರಿಸಲಾಯಿತು. ಇದು ಭಾರತ ಆಗಸ್ಟ್ 23 ರಂದು ಚಂದ್ರಯಾನ-3 ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದ ದಿನದ ಸ್ಮರಣಾರ್ಥವಾಗಿ ದೇಶದಲ್ಲಿ ವಾರ್ಷಿಕ ಆಚರಣೆಯಾಗಿದೆ. ಈ ಸಾಧನೆಯಿಂದಾಗಿ ಭಾರತವನ್ನು ಚಂದ್ರನ ದಕ್ಷಿಣ ಧ್ರುವವನ್ನು ತಲುಪಿದ ಮೊದಲನೇ ದೇಶವನ್ನಾಗಿ ಗುರುತಿಸಾಲಾಗುತ್ತಿದೆ. ಅಲ್ಲದೆ, ಚಂದ್ರನ ಮೇಲೆ  ಮೃದುವಾದ ಇಳಿಯುವಿಕೆ ಸಾಧಿಸಿದ ನಾಲ್ಕನೇ ದೇಶವನ್ನಾಗಿ ಮಾಡಿದೆ.

ಭಾರತ ಇಲ್ಲಿವರೆಗೂ ಉಡಾಯಿಸಿದ 424 ವಿದೇಶಿ ಉಪಗ್ರಹಗಳಲ್ಲಿ 389 ಉಪಗ್ರಹಗಳನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಕಳೆದ 9 ವರ್ಷಗಳಲ್ಲಿ ಉಡಾವಣೆ ಮಾಡಿದೆ. ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತ ಸರ್ಕಾರವು ಬಾಹ್ಯಾಕಾಶ ಕ್ಷೇತ್ರದಲ್ಲಿ ಕ್ರಾಂತಿಕಾರಿ ಸುಧಾರಣೆಯನ್ನು ಪ್ರಾರಂಭಿಸಿದೆ. ಶಿಕ್ಷಣ, ಸಂಶೋಧನೆ ಮತ್ತು ಅಭಿವೃದ್ಧಿಯನ್ನುಉತ್ತೇಜಿಸುವ ಮತ್ತು ಮುನ್ನಡೆಸುವ ಮಹತ್ವಾಕಾಂಕ್ಷೆಯ ಗುರಿಯನ್ನುಹೊಂದಿದೆ.ಆಗಸ್ಟ್ 26ರಂದು ಬೆಂಗಳೂರಿನಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಪ್ರಧಾನ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿಯವರುವಿಕ್ರಂ ಲ್ಯಾಂಡರ ಯಶಸ್ಸಿನ ನಂತರ ಆಗಸ್ಟ್ 23 ರನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನಾಗಿ ಆಚರಿಸುವುದಾಗಿ ಘೋಷಿಸಿದರು

ಇಸ್ರೋದ ಚಂದ್ರಯಾನ ಮೂರರ ಲ್ಯಾಂಡರ ಮತ್ತು ರೋವರ ಅನ್ನು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಸುವ ಮೂಲಕ ಮಹತ್ವದ ಮೈಲಿಗಲ್ಲನ್ನು ಭಾರತ ಸಾಧಿಸಿದೆ. ಇದರೊಂದಿಗೆ ಭಾರತ ಚಂದ್ರನ ಮೇಲೆ ಇಳಿದ ನಾಲ್ಕನೇ ದೇಶ ಎನಿಸಿಕೊಂಡಿತು. ಒಂದು ಕಾಲದಲ್ಲಿ ಅಸಾಧ್ಯವೆಂದು ಭಾವಿಸಿದ್ದನ್ನು ನಮ್ಮ ISR೦ ಸಾಧಿಸಿತು. ಜುಲೈ 14 2018ರಲ್ಲಿ ಶ್ರೀಹರಿ ಕೋಟದಿಂದ ಶಕ್ತಿಶಾಲಿ LVM3-M4 ರಾಕೆಟ್ನಲ್ಲಿ ಉಡಾವಣೆಯು ಅದರ ನಿಖರತೆ ಮತ್ತು ತಾಂತ್ರಿಕ ಪ್ರತಿಭೆಯಿಂದ ಪ್ರಪಂಚದ ಗಮನ ಸೆಳೆಯಿತು. ಈ ಐತಿಹಾಸಿಕ ಸಾಧನೆಯು ರಾಷ್ಟ್ರದ ಸಾಮೂಹಿಕ ಸ್ಮರಣೆಯಲ್ಲಿ ಶಾಶ್ವತವಾಗಿ ಕೆತ್ತಲ್ಪಟ್ಟಿದೆ. ಇದರಿಂದಾಗಿ ವಿಜ್ಞಾನ ತಂತ್ರಜ್ಞಾನ ಮತ್ತು ಬಾಹ್ಯಾಕಾಶ ಸಂಶೋಧನೆಯನ್ನುಉತ್ತೇಜಿಸಲು ಸಾಧ್ಯವಾಗಿದೆ.

 ದಕ್ಷಿಣ ಧ್ರುವ ಪ್ರದೇಶದಲ್ಲಿ ಮೇಲ್ಮೈ ತುಂಬಾ ಅಸಮ ಮತ್ತು ಕುಳಿ ಹಾಗೂ ಬಂಡೆಗಳಿಂದ ತುಂಬಿರುವ ಪ್ರದೇಶದಲ್ಲಿ ಲ್ಯಾಂಡರ್  ಅನ್ನು ಇಳಿಸುವುದು ತುಂಬಾ ಕಷ್ಟ. 2019ರಲ್ಲಿ ಮೃದುವಾಗಿ ಇಳಿಯಲು ಪ್ರಯತ್ನಿಸಿದ ಭಾರತದ ಎರಡನೇ ಚಂದ್ರನ ಕಾರ್ಯಾಚರಣೆ ವಿಫಲವಾಗಿತ್ತು. ಅದರ ಲ್ಯಾಂಡರ್‌ ಮತ್ತು ರೋವರ್‌ ನಾಶವಾದವು. ಆದರೂ ಅದರ ಅರ್ಬಿಟರ್‌ ಬದುಕುಳಿಯಿತು.

ವಿಕ್ರಂ ಲ್ಯಾಂಡರ್‌ ಪ್ರಜ್ಞಾನ್ ಎಂಬ 26 ಕೆಜಿ ತೂಕದ ರೋವರನ್ನು ಹೊಟ್ಟೆಯೊಳಗೆ ಹೊತ್ತುಕೊಂಡು ಅನಿಶ್ಚಿತ ಇಳಿಯುವಿಕೆಯನ್ನು ಪ್ರಾರಂಭಿಸಿತು. ಲ್ಯಾಂಡರ್‌ ನ ವೇಗವನ್ನು ಕ್ರಮೇಣ ಸೆಕೆಂಡಿಗೆ 1.68 km ನಿಂದ ಬಹುತೇಕ ಶೂನ್ಯಕ್ಕೆ ಇಳಿಸಲಾಯಿತು. ಇದರಿಂದಾಗಿ ಚಂದ್ರನ ಮೇಲ್ಮೈಯಲ್ಲಿ ಮೃದುವಾದ ಇಳಿಯುವಿಕೆ ಸಾಧ್ಯವಾಯಿತು. ಕೆಲವು ಗಂಟೆಗಳು ದೂಳು ಇಳಿದ ನಂತರ ಆರು ಚಕ್ರಗಳ ರೋವರ್‌ ಲ್ಯಾಂರ್ಡರ್ನ‌ ಹೊಟ್ಟೆಯಿಂದ ತೆವಳುತ್ತ ಚಂದ್ರನ ಮೇಲ್ಮೈ ಇರುವ ಬಂಡೆಗಳು ಮತ್ತು ಕುಳಿಗಳ ಸುತ್ತಲೂ ಸಂಚರಿಸುತ್ತಿದೆ. ಭೂಮಿಗೆ ಕಳಿಸಬೇಕಾದ ನಿರ್ಣಾಯಕ ದತ್ತಾಂಶ ಮತ್ತು ಚಿತ್ರಗಳನ್ನು ಸಂಗ್ರಹಿಸುತ್ತದೆ.

ಈ ಕಾರ್ಯಾಚರಣೆಯ ಪ್ರಮುಖ ಗುರಿಗಳಲ್ಲಿ ಒಂದು ನೀರು ಆಧಾರಿತ ಮಂಜು ಗಡ್ಡೆಯನ್ನು ಬೇಟೆಯಾಡುವುದು. ಇದು ಭವಿಷ್ಯದಲ್ಲಿ ಚಂದ್ರನ ಮೇಲೆ ಮಾನವ ವಾಸಕ್ಕೆ ಸಹಾಯ ಮಾಡುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಮಂಗಳ ಮತ್ತು ಇತರ ದೂರದ ಸ್ಥಳಗಳಿಗೆ  ಹೋಗುವ  ಬಾಹ್ಯಾಕಾಶ ನೌಕೆಗಳಿಗೆ ಸಹ ಇದನ್ನು ಬಳಸಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ.

ಇದು ಚಂದ್ರನ ಮೇಲ್ಮೈಯ ಬೌತಿಕ ಗುಣಲಕ್ಷಣಗಳು ಮೇಲ್ಮೈಗೆ ಹತ್ತಿರವಿರುವ ವಾತಾವರಣ ಮತ್ತು ಮೇಲ್ಮೈ ಕೆಳಗೆ ಏನು ನಡೆಯುತ್ತದೆ ಎಂಬುದನ್ನು ಅಧ್ಯಯನ ಮಾಡಲು ಟೆಕ್ಟೋನಿಕ್ ಚಟುವಟಿಕೆಯನ್ನು ಕಂಡು ಹಿಡಿಯಲು ಸಹಾಯ ಮಾಡುತ್ತದೆ. ಈರೋವರ್‌ ಭಾರತೀಯ ಧ್ವಜವನ್ನು ಹೊತ್ತಿದ್ದು ಅದರ ಚಕ್ರಗಳ ಮೇಲೆ ಇಸ್ರೋದ ಲೋಗೋ ಮತ್ತು ಲಾಂಛನವನ್ನು ಉಬ್ಬು ರೂಪದಲ್ಲಿ ಮುದ್ರಿಸಲಾಗಿದೆ.

2008ರಲ್ಲಿ ದೇಶದ ಮೊದಲ ಚಂದ್ರಯಾನ ಒಂದು ಯೋಜನೆಯು ಚಂದ್ರನ ಮೇಲ್ಮೈಯಲ್ಲಿ ನೀರಿನ ಅಣುಗಳ ಉಪಸ್ಥಿತಿಯನ್ನು ಕಂಡುಹಿಡಿದು ಚಂದ್ರನಿಗೆ ಹಗಲಿನ ವೇಳೆಯಲ್ಲಿ ವಾತಾವರಣವಿದೆ ಎಂದು ಸ್ಥಾಪಿಸಿದೆ.  15 ವರ್ಷಗಳ ನಂತರ ಈ ಯಾನ ಆಗಿದೆ. ಚಂದ್ರಯಾನ 2 ಸಂಪೂರ್ಣ ದತ್ತಾಂಶವನ್ನು ಕಳಿಸಲು ಸಹಾಯ ಮಾಡುತ್ತಿದೆ.


ಚಂದ್ರಯಾನ ಈ ಸಾಧನೆ ಮಾಡಿರುವುದು ನಮ್ಮ ಭಾರತ ಏಕೈಕ ದೇಶವೆಲ್ಲ. ಜಾಗತಿಕವಾಗಿ ಇದರ ಬಗ್ಗೆ ಆಸಕ್ತಿ ಇನ್ನೂ ಹೆಚ್ಚುತ್ತಲಿದೆ. ಮುಂದಿನ ದಿನಗಳಲ್ಲಿ ಚಂದ್ರನ ಮೇಲ್ಮೈಗೆ ಇನ್ನೂ ಅನೇಕ ಕಾರ್ಯಚರಣೆಗಳು ನಡೆಯಲಿವೆ. ವಿಜ್ಞಾನಿಗಳು ಹೇಳುವ ಪ್ರಕಾರ ಚಂದ್ರನ ಬಗ್ಗೆ ಇನ್ನೂ ಬಹಳಷ್ಟು ಅರ್ಥ ಮಾಡಿಕೊಳ್ಳಬೇಕಾಗಿದೆ. ಆಳವಾದ ಬಾಹ್ಯಾಕಾಶಕ್ಕೆ ದ್ವಾರ ಎಂದುಇದನ್ನು ವಿವರಿಸಲಾಗುತ್ತಿದೆ.

ಈ ದಿನದ ಮೂಲಭೂತ ಧ್ಯೇಯವಾಕ್ಯವು “ಜೀವಗಳನ್ನು ಸ್ಪರ್ಶಿಸುತ್ತ ಚಂದ್ರನನ್ನು ಸ್ಪರ್ಶಸುತ್ತಲೇ-ಭಾರತದ ಬಾಹ್ಯಾಕಾಶ ಸಾಹಸಗಾಥೆ ದೇಶದ ಮೊದಲ ರಾಷ್ಟ್ರೀಯ ಬಾಹ್ಯಾಕಾಶ ದಿನಕ್ಕಾಗಿ ಸ್ಥಾಪಿಸಲಾದ ಥೀಮ್.


    ಬಾಹ್ಯಾಕಾಶ ಇಲಾಖೆಯಿಂದ ಆಯೋಜಿಸಲಾದ ಆಚರಣೆಗಳು, ರಾಷ್ಟ್ರೀಯ ಶೈಕ್ಷಣಿಕ ಸಂಪರ್ಕ ಕಾರ್ಯಕ್ರಮಗಳು, ಬಾಹ್ಯಾಕಾಶ ಪರೀಕ್ಷೆಗಳು. ವಿಜ್ಞಾನದ ಜಾಗೃತಿಗಾಗಿ ಮುಂಬರುವ ಮೈಲಿಗಲ್ಲುಗಳ ಏಕೀಕರಣದ ಮೇಲೆ ಕೇಂದ್ರೀಕರಿಸುತ್ತವೆ.

ಚಂದ್ರಯಾನ-3ರ ಯಶಸ್ಸಿನ ನಂತರ ನಮ್ಮ ಭಾರತದ ಯಶಸ್ಸಿನ ಸಾಹಸಗಾಥೆ ಹೀಗೆ ಮುಂದುವರೆಯಲಿದೆ. ಮುಂದಿನ ಪೀಳಿಗೆಯ ವಿದ್ಯಾರ್ಥಿಗಳಲ್ಲಿ ಬಾಹ್ಯಾಕಾಶದ ಬಗ್ಗೆ ಆಸಕ್ತಿ ವಿಜ್ಞಾನ ಸ್ಟೆಮ್ಶಿ ಕ್ಷಣದ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸಲು ಸಹಕಾರಿಯಾಗಿದೆ.

ಚಂದ್ರಯಾನ-3 ರ ಯಶಸ್ಸಿನ ನಂತರ ಚಂದ್ರನ ಪರಿಸರದ ಬಗ್ಗೆ ಹೆಚ್ಚಿನ ಅಧ್ಯಯನವನ್ನು ಮಾಡಲು,ಉನ್ನತ ಹಾಗೂ ಅಭಿವೃದ್ಧಿ ಹೊಂದಿರುವ ತಾಂತ್ರಿಕತೆ ಹಾಗೂ ತಂತ್ರಜ್ಞಾನವನ್ನು ಬಳಸುವುದು, .ಆಳವಾದ ಬಾಹ್ಯಾಕಾಶದ ಸಂಶೋಧನೆಯನ್ನು ನಡೆಸುವುದು ಹಾಗೂ ಭವಿಷ್ಯದಲ್ಲಿ ಜನರನ್ನು ಹೊತ್ತೊಯ್ಯುವ ಬಾಹ್ಯಾಕಾಶ ನೌಕೆಗಳನ್ನು ಸಿದ್ಧಪಡಿಸುವುದು.

ಹೀಗೆ, ನವಭಾರತದ ಯಶೋಗಾಥೆ ಮುಂದುವರೆಯಲಿ. ಇನ್ನೆಷ್ಟು ಹೊಸ ತಂತ್ರಜ್ಞಾನ ಅಭಿವೃದ್ಧಿ ಹೊಂದಿರುವ ತಾಂತ್ರಿಕತೆಯನ್ನು ಬಳಸಿಕೊಂಡು ಉನ್ನತ ಮಟ್ಟದ ಸಾಧನೆಯನ್ನು ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಧಿಸಲಿ ಎಂದು ಆಶಿಸೋಣ.

1 comment:

  1. ಸಾಂದರ್ಭಿಕ ವಿಶೇಷ ಲೇಖನ ರಾಷ್ಟ್ರೀಯ ವ್ಯೋಮ ದಿನದ ಬಗ್ಗೆ ಚೆನ್ನಾಗಿ ಮೂಡಿ ಬಂದಿದೆ. ಅಭಿನಂದನೆಗಳು ಮೇಡಂ

    ReplyDelete