ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಸವಿಜ್ಞಾನದ ಲೇಖನಗಳನ್ನು ಓದಿ, ಅಭಿಪ್ರಾಯ ದಾಖಲಿಸಿ. ನಿಮ್ಮ ಪ್ರೋತ್ಸಾಹಗಳೇ ಲೇಖಕರಿಗೆ ಶ್ರೀರಕ್ಷೆ Science is a beautiful gift to humanity; we should not distort it. A. P. J. Abdul Kalam

Wednesday, February 3, 2021

ಬೆಳಕನ್ನೇ ಬೇಧಿಸಿದ ರಾಮನ್

ಬೆಳಕನ್ನೇ ಬೇಧಿಸಿದ ರಾಮನ್

ಲೇಖಕರು : ಗುರುದತ್ತ.A

ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ 

ದೊಡ್ಡಕಲ್ಲಸಂದ್ರ

 ಬೆಂಗಳೂರು ದಕ್ಷಿಣ ವಲಯ 1


ಇವತ್ತು ನಾನು ನಿಮಗೆ ಪರಿಚಯಿಸಲು ಹೊರಟಿರುವ ಮಹಾನ್ ವಿಜ್ಞಾನಿ. ”ನ ಭೂತೋ ನ ಭವಿಷ್ಯತಿ” ಎಂಬ ಉಕ್ತಿಗೆ ಸೂಕ್ತರಾದವರು. ಇವರು ಮಾಡಿರುವ ಸಾಧನೆಯನ್ನು ಹಿಂದೆ ಯಾರೂ ಮಾಡಿರಲಿಲ್ಲ ಮುಂದೆ ಯಾರೂ ಮಾಡುವ ಸೂಚನೆಗಳೂ ಕಂಡುಬಂದಿಲ್ಲ. ಯಾಕೆ ಎಂಬ ಯೋಚನೆ ನಿಮ್ಮ ಮನದಲ್ಲಿ ಮೂಡಿರಬಹುದು. ಆದರೆ ವಿಜ್ಞಾನ ಕ್ಷೇತ್ರದಲ್ಲಿ ಭಾರತಕ್ಕೆ ಪ್ರಪ್ರಥಮ ನೋಬೆಲ್ ಪ್ರಶಸ್ತಿಯನ್ನು ತಂದುಕೊಟ್ಟಂತಹ ಮಹಾನ್ ಚೇತನ ಸರ್ ಸಿ.ವಿ.ರಾಮನ್. ಇವರ ಹೆಸರು ಚಿರಪರಿಚಿತ  ರಾಮನ್‌ರವರ ಜೀವನಶೈಲಿ ಮತ್ತು ಚಿಂತನೆಗಳು ಇಂದಿಗೂ ಅನುಸರಣೀಯ.

ಜಲಸಸ್ಯಗಳು ಒಂದು ರೋಚಕ ಕಥೆ



ರಾಘವೇಂದ್ರ ಮಯ್ಯ ಎಂ.ಎನ್. 
ಸ.ಶಿ.  ಸರ್ಕಾರಿ ಪ್ರೌಢಶಾಲೆ ,
ಬೈರಾಪಟ್ಟಣ. ಚನ್ನಪಟ್ಟಣ. 
ರಾಮನಗರ ಜಿಲ್ಲೆ . 


ಚಿಕ್ಕಂದಿನಲ್ಲಿ ನಮಗೆ ಎಲ್ಲವೂ ಅದ್ಭುತವೇ,  ಪ್ರತಿಯೊಂದು ಪ್ರಾಣಿಯನ್ನೂ, ಪಕ್ಷಿಯನ್ನೂ, ಸಸ್ಯವನ್ನೂ  ಅದ್ಭುತವೆಂಬಂತೆ ನೋಡುತ್ತಿದ್ದೆವು. ನಮ್ಮ ಮನೆಯ ಹಿಂದೆ ಒಂದು ದೊಡ್ಡ ನೀಲಗಿರಿ ಮರ ಇತ್ತು. ನನ್ನ  ಕಣ್ಣಿಗೆ ಆ ಮರ ಕಂಡಾಗಲೆಲ್ಲ ಅದರ ತುದಿಯವರೆಗೂ ನೀರು ಹೇಗೆ ಹೋಗುತ್ತದೆ ಎಂದು ಯೋಚಿಸುತ್ತಿದ್ದೆ. ನಮ್ಮ ಮನೆಯ ಹಿತ್ತಲಲ್ಲಿ ಒಂದು ಬಾವಿ ಇದೆ. ಅದರಿಂದ ನೀರೆತ್ತಲು ಒಂದು ಪಂಪ್ ಸೆಟ್ ಹಾಕಿದ್ದರು. ಅದನ್ನು ನೋಡಿದ್ದ ನಾನು ‘ಮರದ ಬುಡದಲ್ಲೂ, ಒಳಗೊಂದು ಪಂಪ್ ಸೆಟ್ ಇದೆ, ಅದು ಮರದ ತುದಿಯವರೆಗೂ ನೀರನ್ನು ಪಂಪ್ ಮಾಡುತ್ತದೆ’ ಎಂದು ಕೊನೆಗೊಮ್ಮೆ ತೀರ್ಮಾನಿಸಿ ಸುಮ್ಮನಾಗಿದ್ದೆ. ಮುಂದೆ ಶಾಲೆಯಲ್ಲಿ ಮಾಡಿದ ಪಾಠಗಳೆಲ್ಲವನ್ನೂ ಗಮನಿಸುವ ವಯಸ್ಸು ಬಂದಾಗ ಉಪಾಧ್ಯಾಯರು  ‘ಸಸ್ಯಗಳು ಬಹಳ ಕಾಲ ನೀರಿನ ಸಂರ್ಪಕದಲ್ಲಿದ್ದರೆ ಅಥವಾ ಅವುಗಳಿಗೆ ಹೆಚ್ಚು ನೀರುಣಿಸಿದರೆ ಅವು ಕೊಳೆಯುತ್ತವೆ ಎಂದು ಹೇಳಿದ್ದು ನೆನಪಲ್ಲಿ ಉಳಿಯಿತು, ಹಾಗಾದರೆ ಹೊಳೆಯಲ್ಲಿ, ಕೆರೆಯಲ್ಲಿ ಗಿಡಗಳು ಬೆಳೆಯುತ್ತವಲ್ಲ! ಅವು ಏಕೆ ಕೊಳೆಯುವುದಿಲ್ಲ ಎಂದು ಆಗಲೇ ಎದ್ದ ಪ್ರಶ್ನೆಯೊಂದಿಗೆ ಜಲಸಸ್ಯಗಳ ಬಗ್ಗೆ ಕುತೂಹಲವೊಂದು ನನ್ನಲ್ಲಿ ಮೂಡಲಾರಂಭಿಸಿತು. ವೀರಪ್ಪ ಮೇಷ್ಟ್ರ ರೌದ್ರಾವತಾರ ಗೊತ್ತಿದ್ದ ನಾನು ಆ ಪ್ರಶ್ನೆಯನ್ನು ಅವರಿಗೆ ಕೇಳುವ ಗೋಜಿಗೆ ಹೋಗಿರಲಿಲ್ಲ . ನಾನು ದ್ವಿತೀಯ ಡಿಗ್ರಿಗೆ ಬರುವವರೆಗೂ ಆ ಪ್ರಶ್ನೆಗೆ ಸಮರ್ಪಕ ಉತ್ತರ ಸಿಕ್ಕಿರಲಿಲ್ಲ.

ಫ್ಲೋರೀನ್ ಹುತಾತ್ಮರು

 ಫ್ಲೋರೀನ್ ಹುತಾತ್ಮರು

ಲೇಖಕರು :

ಶಿವಕುಮಾರ. ಕೆ. ಟಿ., 

ಸಹಶಿಕ್ಷಕರು

ಬಾಲಕಿಯರ ಸ.ಪ.ಪೂ. ಕಾಲೇಜು (ಪ್ರೌ.ಶಾ.ವಿ)

ಸಿರಾ, ತುಮಕೂರು ಉತ್ತರ (ಮಧುಗಿರಿ ಶೈ. ಜಿ).



ಪ್ರಿಯ ಓದುಗ ಮಿತ್ರ, 

ನಮ್ಮಲ್ಲಿ ಒಂದು ನುಡಿ ಮುತ್ತು ಇದೆ- “ಸವಿದವನೇ ಬಲ್ಲ, ಬೆಲ್ಲದ ರುಚಿಯ”. ಈ ಮಾತು ಏಕೆ ಬಳಕೆಯಲ್ಲಿದೆ ಅಂದರೆ, ಬೆಲ್ಲ ತುಂಬಾ ಸಿಹಿಯಾಗಿರಬಹುದು, ಉಪ್ಪುಪ್ಪಾಗಿರಬಹುದು, ಹುಳಿ ರುಚಿ ಸಹ ಇರಬಹುದು. ಹಾಗಾಗಿ ಬೆಲ್ಲವನ್ನ ನೋಡಿದವರು ಅದರ ರುಚಿಯನ್ನ ಹೇಳೋಕಾಗಲ್ಲ. ಆದರೆ ತಿಂದವರಿಗೆ ಮಾತ್ರ ಅದರ ರುಚಿ ಗೊತ್ತಾಗುತ್ತೆ.

ಅರೆ, ವಿಜ್ಞಾನ ಲೇಖನದಲ್ಲಿ ಏಕಪ್ಪಾ ಬೆಲ್ಲದ ರುಚಿ ಕುರಿತು ಹೇಳ್ತಾ ಇದಾರೆ ಅಂದ್ಕೊಂಡ್ರಾ? ಅದಕ್ಕೆ ಕಾರಣ ಇದೆ.

ವೈಜ್ಞಾನಿಕ ಆನ್ವೇಷಣೆ ಮತ್ತು ವೈಜ್ಞಾನಿಕ ಮನೋಭಾವ

ವೈಜ್ಞಾನಿಕ ಅನ್ವೇಷಣೆ ಮತ್ತು ವೈಜ್ಞಾನಿಕ ಮನೋಭಾವ


ಲೇಖಕರು : ಗುರುದತ್ತ.A

ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ 

ದೊಡ್ಡಕಲ್ಲಸಂದ್ರ

 ಬೆಂಗಳೂರು ದಕ್ಷಿಣ ವಲಯ 1

'ಪ್ರಾಥಮಿಕ ಶಾಲಾ ವಿಜ್ಞಾನಕ್ಕೆ ಸಂಬಂಧಿಸಿದಂತೆ UNESCO ಸಂಪನ್ಮೂಲ ಪುಸ್ತಕದಲ್ಲಿನ ಕೊಡಲಾದ “ವೈಜ್ಞಾನಿಕ ಪ್ರಕ್ರಿಯೆ ಕೌಶಲ್ಯ ಮತ್ತು ವೈಜ್ಞಾನಿಕ ಮನೋಭಾವ” ಎಂಬ ಲೇಖನದ ಸಾರ ಸಂಗ್ರಹವನ್ನು ಶ್ರೀಮತಿ ಚಂದ್ರಿಕಾ ಮುರಳೀಧರ ರಚಿಸಿ ಕೊಟ್ಟಿದ್ದಾರೆ. ಅದರ ಕನ್ನಡಾನುವಾದವನ್ನು ಇಲ್ಲಿ ಕೊಡಲಾಗಿದೆ:

ವಿಜ್ಞಾನ ಶಿಕ್ಷಣದ ಗುರಿಗಳು : ವೈಜ್ಞಾನಿಕ ಅನ್ವೇಷಣೆ ಮತ್ತು ವೈಜ್ಞಾನಿಕ ಮನೋಭಾವ

ವಿಜ್ಞಾನವನ್ನು ಕುರಿತು ನ್ಯಾಷನಲ್ ಫೋಕಸ್ ಆಫ್ ಗ್ರೂಪ್ ಸೈನ್ಸ್ ಮಂಡಿಸಿದ ವಸ್ತು ಸ್ಥಿತಿ ಪತ್ರ (Position Paper)ನಲ್ಲಿ ಹೀಗೆ ಹೇಳಲಾಗಿದೆ.

ನೀರ ಒಲೆ !!!

 ನೀರ ಒಲೆ !!!



ವಿಜಯಕುಮಾರ್‌ ಹುತ್ತನಹಳ್ಳಿ. 

ಸಹ ಶಿಕ್ಷಕರು. 

ಸ.ಪ್ರೌ.ಶಾಲೆ. ಕಾವಲ್‌ ಭೈರಸಂದ್ರ.

ಬೆಂಗಳೂರು ಉತ್ತರ ವಲಯ – 3.


ಕಟ್ಟಿಗೆ ಒಡೆದು ಒಲೆ ಉರಿಸುತ್ತಿದ್ದ ಕಾಲ ಒಂದಿತ್ತು, ಕೈಗಾರಿಕೀಕರಣ, ನಗರೀಕರಣದ ಫಲವಾಗಿ ಮರಗಳೇ ಮಾಯವಾಗುತ್ತಿರುವಾಗ ಇಂದು ಅದು ಸಾಧ್ಯವೂ ಅಲ್ಲ, ಸಾಧುವೂ ಅಲ್ಲ.  ಏಕೆಂದರೆ ಕಟ್ಟಿಗೆ ಉರಿಸುವುದು ಮಾಲಿನ್ಯಕಾರಿ,ಜಾಗತಿಕ ತಾಪಮಾನಕ್ಕೂ ಕಾರಣವಾಗುತ್ತದೆ, ಆದ್ದರಿಂದ ನಾವು ಇಂದು ಅಸಾಂಪ್ರದಾಯಿಕ, ಪರಿಸರ ಸ್ನೇಹಿ ಇಂಧನಗಳನ್ನು ಹುಡುಕಿಕೊಳ್ಳಬೇಕಿದೆ.    ಈ ದಿಸೆಯಲ್ಲಿ ಹಗಲಿರುಳು ಪ್ರಯೋಗಗಳಲ್ಲಿ ತೊಡಗಿಕೊಂಡಿರುವ ವಿಜ್ಞಾನಿಗಳಿಗೆ ಹೊಸ ಸಾಧ್ಯತೆಯಾಗಿ ಕಂಡದ್ದು ಸಮುದ್ರದ ನೀರು.   ಏನು ?  ನೀರನ್ನು ಇಂಧನವಾಗಿ ಬಳಸುವುದೆ ?  ಎಂದು ಆಶ್ಚರ್ಯಪಡಬೇಡಿ.  ಹೌದು ಇನ್ನು ಮುಂದೆ ನೀರನ್ನು ಒಡೆದು ಒಲೆ ಉರಿಸಲು ಸಂಶೋಧನೆಗಳು ಮುಂದುವರೆಯುತ್ತಿವೆ.