ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಸವಿಜ್ಞಾನದ ಲೇಖನಗಳನ್ನು ಓದಿ, ಅಭಿಪ್ರಾಯ ದಾಖಲಿಸಿ. ನಿಮ್ಮ ಪ್ರೋತ್ಸಾಹಗಳೇ ಲೇಖಕರಿಗೆ ಶ್ರೀರಕ್ಷೆ Science is a beautiful gift to humanity; we should not distort it. A. P. J. Abdul Kalam

Sunday, December 4, 2022

ಸಾಧಕ ಶಿಕ್ಷಕರ ಪರಿಚಯ : ಡಾ. ನವೀನ್ ಕುಮಾರ್ R U

 ವಿಜ್ಞಾನ ಬೋಧನೆಯಲ್ಲಿ ನವೀನತೆ ತಂದಿರುವ ನವೀನ್‌ ಕುಮಾರ್‌ 

    ಲೇ :  ಶ್ರೀನಿವಾಸ್‌ ಎ

ವಿಜ್ಞಾನ ಬೋಧನಾ ವಿಧಾನಗಳನ್ನು ಬಿ.ಇಡಿ., ತರಬೇತಿಯಲ್ಲಿ ವಿಜ್ಞಾನ ಶಿಕ್ಷಕರು ಕಲಿತಿರುತ್ತಾರೆ, ಅವುಗಳೆಂದರೆ ಅನುಗಮನ, ನಿಗಮನ, ಸಂಶೋಧನಾ, ಪ್ರಾಯೋಗಿಕ ಹೀಗೆ ಪರಿಕಲ್ಪನೆಗಳಿಗೆ ಅನುಸಾರವಾಗಿ ತರಗತಿಯಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲಿಸುವಲ್ಲಿ ಹಲವು ವಿಧಾನಗಳು. ಇಲ್ಲೊಬ್ಬ ಶಿಕ್ಷಕರು ವಿಜ್ಞಾನವನ್ನು ಹಾಡಿನ ಮೂಲಕ ಅನುಕೂಲಿಸುವ ವಿನೂತನ ವಿಧಾನವನ್ನು ಬಳಸುವ ಮೂಲಕ ಎಲ್ಲರ ಗಮನ ಸೆಳೆಯುತ್ತ್ತಿದ್ದಾರೆ.  ಯಾರೆಂದು ಯೋಚಿಸುತ್ತಿದ್ದೀರಾ! ಅವರೇ ತಮ್ಮ ಹಾಡಿನ ಮೂಲಕ ಶಿಕ್ಷಣಾಸಕ್ತರನ್ನು ತಮ್ಮತ್ತ ಸೆಳೆದಿರುವ ಡಾ|| ನವೀನ್‌ ಕುಮಾರ್.‌ ಆರ್.‌ ಯು.

 


ಶ್ರೀಯುತರು. USA Florida Univiersity ಯಲ್ಲಿ “Science teaching and learning through sing a song” ಪ್ರೌಢ ಪ್ರಬಂಧವನ್ನು ಮಂಡಿಸಿ ಡಾಕ್ಟರೇಟ್‌ ಪದವಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಮೊದಲಿಗೆ ಆರಕ್ಷಕ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದವರು, ಶಿಕ್ಷಕನಾಗಬೇಕೆಂಬ ಮಹಾದಾಸೆಯಿಂದ, 2007ರಲ್ಲಿ ಶಿಕ್ಷಕ ವೃತ್ತಿಯನ್ನು ಪ್ರಾರಂಬಿಸಿ ಸ.ಪ್ರೌ.ಶಾಲೆ, ಅಲೀಪುರ, ಗೌರಿಬಿದನೂರು(ತಾ), ಚಿಕ್ಕಬಳ್ಳಾಪುರ(ಜಿ) ಕಾರ್ಯ ನಿರ್ವಹಿಸುತ್ತಿದ್ದಾರೆ. ಶಾಲೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಏಳ್ಗೆಯನ್ನೆ ಧ್ಯೇಯವಾಗಿಟ್ಟುಕೊಂಡು ಹಾಡು ಮತ್ತು ನಾಟಕಗಳ ಮೂಲಕ ವಿಜ್ಞಾನ ಬೋಧನೆ ಎಂಬ ವಿನೂತನ ಪದ್ಧತಿ ಪ್ರಾರಂಭಿಸಿ ವಿದ್ಯಾರ್ಥಿ ಮತ್ತು ಶಿಕ್ಷಣ ಇಲಾಖೆಯಿಂದ ಮೆಚ್ಚುಗೆ ಪಡೆದಿದ್ದಾರೆ. ಕ್ರಿಯಾಶೀಲ ವ್ಯಕ್ತಿತ್ವ ಹೊಂದಿರುವ ನವೀನ್‌ರವರು ವಿದ್ಯಾರ್ಥಿಗಳಿಗಾಗಿ, NEP-2020ರ ಆಶಯದಂತೆ ಕೌಶಲ್ಯ ಅಭಿವೃದ್ಧಿಗಾಗಿ, ಇಟ್ಟಿಗೆ ಮಾಡುವಿಕೆ, ಚಿತ್ರಕಲೆ, ತೋಟಗಾರಿಕೆ, ಮಾದರಿ ತಯಾರಿಕೆ, ಮಡಿಕೆ ತಯಾರಿಕೆ, ಪೀಠೋಪಕರಣಗಳ ರಿಪೇರಿ, ಪ್ರಯೋಗಾಲಯ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ.

ಸ್ವಚ್ಛತೆ ಮತ್ತು ಆರೋಗ್ಯಕ್ಕೆ ಒತ್ತು ನೀಡಿ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.ವಿಜ್ಞಾನ ಪ್ರದರ್ಶನಗಳಲ್ಲಿ ಭಾಗವಹಿಸಿ ಜಿಲ್ಲೆ, ರಾಜ್ಯ ಮತ್ತು ರಾಷ್ರ್ಟ ಮಟ್ಟದಲ್ಲಿ ಹಲವು ಬಹುಮಾನಗಳನ್ನು ಪಡೆದಿದ್ದಾರೆ. Covid-19 lockdown ಸಮಯದಲ್ಲಿ ಡಾ||. ನವೀನ್‌ ಕುಮಾರ್‌ ಸಂವೇದ ವೀಡಿಯೊ ತರಗತಿಗಳನ್ನು ಮಾಡಿರುತ್ತಾರೆ. ಸಂಪನ್ಮೂಲ ವ್ಯಕ್ತಿಯಾಗಿ ಜೆಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಹಲವು ಕಾರ್ಯಗಾರಗಳನ್ನು ನಡೆಸಿಕೊಟ್ಟಿದ್ದಾರೆ. ಇವರ ಸಾಧನೆಯ ಪಟ್ಟಿ ದೊಡ್ಡದೆ ಇದೆ. ಹಾಗಾಗಿ ಇವರನ್ನು ಅರಿಸಿ ಬಂದ ಬಹುಮಾನ ಮತ್ತು ಸನ್ಮಾನಗಳ ಪಟ್ಟಿಯೂ ದೊಡ್ಡದೆ ಇದೆ.

ಅದಲ್ಲದೆ ಹಲವು ಸಂಘ ಸಂಸ್ಥೆಗಳೊಂದಿಗೆ ಹಲವು ವಿಜ್ಞಾನ ಕಾರ್ಯಕ್ರಮಗಳನ್ನು ನಡೆಸಿ ವಿಜ್ಞಾನದ ಪ್ರಚಾರಕ್ಕೆ ಕಂಕಣ ತೊಟ್ಟಿದ್ದಾರೆ.



ಡಾ|| ನವೀನ್‌ ಕುಮಾರ್‌ ಅವರ ಸೇವೆ ಹೀಗೆ ಮುಂದುವರೆದು ಇನ್ನೂ ಹೆಚ್ಚಿನ ಸಾಧನೆ ಮತ್ತು ಮೆಚ್ಚುಗೆಗಳಿಗೆ ಪಾತ್ರವಾಗಲಿ ಎಂದು ಹಾರೈಸೋಣ.

 

ಪದಬಂಧ - 12

ಪದಬಂಧ - 12  

 ಪದಬಂಧ ಡಿಸೆಂಬರ್‌ 2022

1

 

 

 

 

 

 

 

 

2

 

 

 

 

2

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

3

 

4

 

 

 

 

 

 

 

 

 

 

 

 

 

 

 

 

 

 

 

 

 

 

 

 

3

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

5

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

7

 

 

 

6

 

 

 

 

 

 

 

 

 

 

 

 

 

 

 

6

 

 

 

 

 

 

 

 

 

 

 

 

 

 

 

 

 

 

 

 

 

 

 

7

 

 

 

 ಎಡದಿಂದ ಬಲಕ್ಕೆ:  

1. ಸಜಾತಿ ವಿದ್ಯುದಾವೇಶಗಳ ನಡುವೆ ಆಗುವಂತಹದ್ದು (4)

2. ಭೂಕಂಪನದ ತೀವ್ರತೆಯ ಅಳತೆಯ ಜೊತೆಯಾಯಿತು ವಿಜ್ಞಾನಿ ಹೆಸರು (6)

೩. ಸಿಸ್ಮೋಗ್ರಾಫ್‌ ನ ಕನ್ನಡ ರೂಪ (6)

೪. ಪ್ರಾಣಿ ಜನ್ಯ ಪದಾರ್ಥದಿಂದಾದ್ದು ಚಳಿಗೆ ಹೊದಿಯಲೂ ಆಯಿತು ಉಜ್ಜಿದರೆ ಆವೇಶಭರಿತವೂ ಆಯಿತು (3)

೫. ವಿಜಾತೀಯ ವಿದ್ಯುದಾವೇಶಗಳ ನಡುವೆ ಆಗುವಂತಹದ್ದು (4)

೬. ಬೆಕ್ಕು ಬಲದಿಂದ ಎಡಕ್ಕೆ ಹಾದುಹೋಗುವುದು ಹಾಳಲ್ಲ , ಭೂಕಂಪ, ಚಂಡಮಾರುತಗಳು ವಿಪರೀತ ಹಾಳು ಮಾಡುವಂತಹವು ಆದಾವು (5)

೭. ತಣ್ಣನೆ ಬೀಸುವುದು (2)

ಮೇಲಿನಿಂದ ಕೆಳಕ್ಕೆ:

೧. ಆವೇಶಗಳನ್ನು ಪತ್ತೆ ಹಚ್ಚಿ ತೋರಿಸುವುದು (5)

೨. ಚಳಿಗೆ ಆಗುವುದಲ್ಲ ಭೂಮಿ ಕಂಪಿಸುವುದು (3)

೩. ಪ್ರಚಂಡವಾಗಿ ಬೀಸಿ ಹಾಳುಗೆಡಹುವ ಗಾಳಿ (5)

೪. ಭೂಕಂಪನ ಹೆಚ್ಚಾಗಿ ಆಗುವ ಪ್ರದೇಶಗಳಲ್ಲಿ ಮನೆಗಳು ನಡುಗದೆ ಇರಬೇಕಾದ ರೀತಿ (6)

೫. ಮಿಂಚು ಉಂಟುಮಾಡುವ ʼಆʼ ಮೋಡಗಳು ಇರುವ ರೀತಿ (6)

೬. ಸಮುದ್ರದ ಆಳದಲ್ಲಿ ಭೂಕಂಪವಾದರೆ ಸಮುದ್ರದಲ್ಲಿ ಏಳುವುದು (3)

೭. ಬಿರುಸಾಗಿ ಬೀಸುವ ಗಾಳಿ ಮರಗಳ ಮುರಿದೀತು(4)

 

ರಚನೆ:

ವಿಜಯಕುಮಾರ್‌ ಹುತ್ತನಹಳ್ಳಿ

ಸಹಶಿಕ್ಷಕರು

ಸ.ಪ್ರೌ.ಶಾಲೆ, ಕಾವಲ್ ಭೈರಸಂದ್ರ

ಬೆಂಗಳೂರು ಉತ್ತರ ವಲಯ-03