ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಸವಿಜ್ಞಾನದ ಲೇಖನಗಳನ್ನು ಓದಿ, ಅಭಿಪ್ರಾಯ ದಾಖಲಿಸಿ. ನಿಮ್ಮ ಪ್ರೋತ್ಸಾಹಗಳೇ ಲೇಖಕರಿಗೆ ಶ್ರೀರಕ್ಷೆ Science is a beautiful gift to humanity; we should not distort it. A. P. J. Abdul Kalam

Wednesday, January 4, 2023

ಎದ್ದು ಬಂದನೇ ಹಿಮಮಾನವ?

 ಎದ್ದು ಬಂದನೇ ಹಿಮಮಾನವ?

ಲೇಖಕರು : ಶ್ರೀ ಸುರೇಶ ಸಂಕೃತಿ

ಆಟ್ಸಿಯ ಪುನರ್ ನಿರ್ಮಿತ ಪ್ರತಿಮೆಯ  ಚಿತ್ರ 

ಕೃಪೆ : ಸೌತ್ ಥೈರೋಲ್ ಮ್ಯೂಸಿಯಂ, ಬೊಲ್ಜಾನ , ಇಟಲಿ.

 ಜರ್ಮನಿಯ  ಪರ್ವತಾರೋಹಿ  ದಂಪತಿಗಳಾ ಹೆಲ್ಮಟ್ ಮತ್ತು ಎರಿಕಾ ಸೈಮನ್ ಆಸ್ಟ್ರೀಯ ಮತ್ತು ಇಟಲಿಯ ಗಡಿ ಭಾಗದಲ್ಲಿ ಪರ್ವತಾರೋಹಣದಲ್ಲಿ ತೊಡಗಿರುತ್ತಾರೆ. ೧೯/೯/೧೯೯೧ ರಂದು ಹಲ್ಮಟ್ ಏಕಾಂಗಿಯಾಗಿ ಚಾರಣ ಮಾಡುತ್ತಿರ ಅಚಾನಕ್ಕಾಗಿ 3,210 ಮೀಟರ್ ಎತ್ತರದ ಮರಗಟ್ಟಿದ ಹಿಮನದಿಯೊಂದರಲ್ಲಿ ಮಾನವ ಮೃತ ದೇಹವನ್ನು ಕಂಡು ಗಾಬರಿಯಾಗುತ್ತಾನೆ.  ಈ ವಿಚಾರವನ್ನು ತಿಳಿದ ಸ್ಥಳೀಯ ಪೋಲೀಸರು ಅಲ್ಲಿಗೆ ದಾವಿಸಿ  ಬರುತ್ತಾರೆ.   ಘನೀಭವಿಸಿದ ಹಿಮನದಿಯಲ್ಲಿ ಸೊಂಟದಿಂದ ಕೆಳಕ್ಕೆ ಮುಳುಗಿದ್ದ ಮೃತ ದೇಹವನ್ನು ಮಂಜನ್ನು ಅಗೆದು ಬಗೆದು ಎರಡು ದಿನ ಪ್ರಯಾಸಪಟ್ಟು ಹೊರತೆಗೆಯುತ್ತಾರೆ. ಪರ್ವತಾರೋಹಣದಲ್ಲಿ ತೊಡಗಿದ್ದ ಯಾರೋ ನತದೃಷ್ಟ ಪ್ರವಾಸಿ ಅಪಘಾತಕ್ಕೆ ಒಳಗಾಗಿ ಸತ್ತಿರುವನೆಂದು ಭಾವಿಸಿ  ಆ ಶವವನ್ನು ಮತ್ತು ಅದರೊಂದಿಗೆ ದೊರೆತ ವಸ್ತುಗಳ ಹತ್ತಿರದ ವಿಧಿವಿಜ್ಞಾನ ಪ್ರಯೋಗಾಲಕ್ಕೆ ತಲುಪಿಸುತ್ತಾರೆ. 

 ಚಿತ್ರ ಕೃಪೆ : ಸೌತ್ ಥೈರೋಲ್ ಮ್ಯೂಸಿಯಂ, ಬೊಲ್ಜಾನ , ಇಟಲಿ.

ಅದು ಗಂಡಸಿನ ಶವವಾಗಿರುತ್ತದೆ.  ಅದು ಸಂಪೂರ್ಣವಾಗಿ ಮಮ್ಮೀಕರಣವಾಗಿದ್ದರಿಂದ ತೀರಾ ಇತ್ತೀಚೆಗೆ ಮೃತಗೊಂಡ ವ್ಯಕ್ತಿಯ ಶವವಲ್ಲವೆಂದು ದೃಢಪಡುತ್ತದೆ. ಶವದೊಂದಿಗೆ ಇದ್ದ ವಸ್ತುಗಳ ವಿನ್ಯಾಸವನ್ನು ವಿಶ್ಲೇಷಿಸಿದ ಪ್ರಾಚ್ಯವಸ್ತು ಶಾಸ್ತ್ರಜ್ಞರು ಅವು ಸುಮಾರು ೫೦೦೦ ವರ್ಷಗಳ ಹಿಂದೆ ಮಾನವರು ಬಳಸುತ್ತಿದ್ದ ವಸ್ತುಗಳೆಂದು ಅಂದಾಜು ಮಾಡುತ್ತಾರೆ. ಶವದ ಅಂಗಾಂಶದ ಕಾರ್ಬನ್  ಡೇಟಿಂಗ್ ನಿಂದ ಆ ಮೃತ ವ್ಯಕ್ತಿಯು ಕ್ರಿಸ್ತಪೂರ್ವ ೧೨೦೦ ವರ್ಷಗಳ ಹಿಂದೆ ಜೀವಿಸಿದ್ದವನು ಎಂಬ ಅಂಶವು ಕಂಡು ಬರುತ್ತದೆ. ಹೀಗಾಗಿ ಆ ಶವವು ಸುಮಾರು ೫ ಸಾವಿರ ವರ್ಷಗಳ ಕಾಲ ಹಿಮದಲ್ಲಿ ಹೂತು ಹೋಗಿದ್ದು ಮಮ್ಮೀಕರಣ ಹೊಂದಿದ ಶವಗಳಲ್ಲಿ ಅತ್ಯಂತ ಪ್ರಾಚೀನವಾದದ್ದು ಎಂಬ ಅಂಶ ಬಳಕಿಗೆ ಬರುತ್ತದೆ.  ಸುಮಾರು ೫ ಅಡಿ ೨ ಇಂಚು ಎತ್ತರದ ೪೫-೪೬ ವರ್ಷ ವಯಸ್ಸಿನ ಈ ಹಿಮ ಮಾನವ ಈಜಿಪ್ಟಿನ ಮೊದಲ ಪಿರಮಿಡ್ ನಿರ್ಮಾಣಕ್ಕಿಂತಲೂ ಒಂದು ಸಾವಿರ ವರ್ಷಗಳಷ್ಟು ಹಿಂದಿನವನೆಂದು ತಿಳಿದು ಬಂದಿತು. ಕ್ರಿಪೂ  ೩೪೦೦ ಮತ್ತು  ೩೧೦೦ ರ  ನಡುವೆ ಜೀವಿಸಿದ್ದನೆಂದು ಅಂದಾಜು ಮಾಡಲಾದ ಈತ ಯಾರು ಇಲ್ಲಿಗೆ ಏಕೆ  ಬಂದ? ಹೇಗೆ ಬಂದ? ಇವನ ಸಾವಿಗೆ ಕಾರಣವೇನು?  ಐದು ಶತಮಾನಗಳು ಇವನ ದೇಹ ಮಂಜಿನಲ್ಲಿ ಇದ್ದುದ್ದಾದರೂ ಹೇಗೆ? ಹೀಗೆ ಹತ್ತು ಹಲವು

 

 ಆಟ್ಸಿಯ ಮಮ್ಮಿ  ಚಿತ್ರ ಕೃಪೆ : ಸೌತ್ ಥೈರೋಲ್ ಮ್ಯೂಸಿಯಂ, ಬೊಲ್ಜಾನ , ಇಟಲಿ.

 



ಆಟ್ಸಿಯ ಮಮ್ಮಿ ದೊರೆತ ಸ್ಥಳದಲ್ಲಿ ಪಿರಿಮಿಡ್ ಸ್ಮಾರಕ.  ಚಿತ್ರ ಕೃಪೆ : ಸೌತ್ ಥೈರೋಲ್ ಮ್ಯೂಸಿಯಂ, ಬೊಲ್ಜಾನ , ಇಟಲಿ.

ಪ್ರಶ್ನೆಗಳು  ಅದರ ಸಂಶೋಧನೆಯಲ್ಲಿ ತೊಡಗಿದವರನ್ನು ಕಾಡಿದವು. ಈ ಹಿಮ ಮಾನವ ದೊರೆತದ್ದು  ಆಟ್ಸಾಲ್ ಕಣಿವೆಯಲ್ಲಿ  ಆದ್ದರಿಂದ  ಅವನನ್ನು ಆಟ್ಸಿ ಎಂದು ಕರೆದರು. ಆಟ್ಸಿಯ ಪತ್ತೆಯನ್ನು ಒಂದು ಅದ್ಭುತ ಪ್ರಾಚ್ಯವಸ್ತುವಿನ ಅನಾವರಣ ಎಂದು ಬಣ್ಣಿಸಲಾಗುತ್ತದೆ.  ಅತ್ಯಂತ ಪ್ರಾಚೀನ ಮತ್ತು ಅವಿಚ್ಛಿನ್ನವಾದ ಮಾನವ ದೇಹದ ಪತ್ತೆಯಾಗಿದ್ದು ಇದರಿಂದ ಆ ಕಾಲದ ಜೀವನ ಕ್ರಮದ ಮೇಲೆ  ಬೆಳಕು ಚೆಲ್ಲಲು ತುಂಬಾ ಸಹಾಯಕವಾಗಿದೆ.

ಆಟ್ಸಿಯೊಂದಿಗೆ ದೊರೆತ ಅವನ ವಸ್ತುಗಳು  ಚಿತ್ರ ಕೃಪೆ : ಸೌತ್ ಥೈರೋಲ್ ಮ್ಯೂಸಿಯಂ, ಬೊಲ್ಜಾನ , ಇಟಲಿ.

ಆಟ್ಸಿಯು ಪತ್ತೆಯಾದ ಸ್ಥಳದಿಂದ ಅವನಿಗೆ ಸೇರಿದ ಅನೇಕ ವಸ್ತುಗಳು ದೊರೆತವು.  ಅವುಗಳಲ್ಲಿ ಮುಖ್ಯವಾದವು

ಕುರಿ ಮತ್ತು ಮೇಲೆ ಚರ್ಮದಿಂದ ತಯಾರಿಸಿದ ಕೋಟು, ಸೊಂಟದಿಂದ ಕೆಳಗೆ ಮತ್ತು ಕಾಲಗಳನ್ನು ಮುಚ್ಚಿದ್ದ ವಿವಿಧ ಪ್ರಾಣಿಗಳ ಚರ್ಮದಿಂದ ತಯಾರಿಸಿದ ಅವನ ಪೋಷಾಕು,  ಒಂದು ಕಾಲಿನಲ್ಲಿ ಉಳಿದಿದ್ದ ಬೂಟು.  ಬೂಟನ್ನು ಎರಡು ಪದರಗಳಲ್ಲಿ ಚರ್ಮದಿಂದ ತಯಾರಿಸಿದ್ದು ಆ ಪದರಗಳ ನಡುವೆ ಹೆಣೆದ ದಾರದಲ್ಲಿ ಮೆದು ಹುಲ್ಲನ್ನು ಹೊಸೆದು ತುಂಬಲಾಗಿದೆ. ಹಿಮಾಚ್ಛಾದಿತ ಪ್ರದೇಶಗಳಲ್ಲಿ ಥಂಡಿಯಿಂದ ರಕ್ಷಣೆ ಪಡೆಯಲು ಈ ಹುಲ್ಲು ಸಹಾಯಕ. 

ತಾಮ್ರದ ಕೊಡ್ಲಿ  ಚಿತ್ರ ಕೃಪೆ : ಸೌತ್ ಥೈರೋಲ್ ಮ್ಯೂಸಿಯಂ, ಬೊಲ್ಜಾನ , ಇಟಲಿ.

ಬೆತ್ತದಂತಹ ಕೋಲನ್ನು ಬಾಗಿಸಿ ಚರ್ಮ ಹೊದಿಸಿ ತಯಾರಿಸಿದ್ದ ಒಂದು ಬ್ಯಾಕ್ ಪ್ಯಾಕ್‌ ಜಿಂಕೆ  ಚರ್ಮದಿಂದ ಮಾಡಿದ ಬತ್ತಳಿಕೆ, ಹದಿನಾರು ಬಾಣಗಳು ಮತ್ತು ಅವುಗಳಲ್ಲಿ ಎರಡಕ್ಕೆ ಮಾತ್ರ ಫ್ಲಿಂಟ್ ಶಿಲೆಯ ಮೊನಚು ತುದಿಗಳಿರುವ ಬಾಣಗಳು,   ಫ್ಲಿಂಟ್ ಶಿಲೆಯಿಂದ ತಯಾರಿಸಿದ ಮರದ ಹಿಡಿಕೆ ಇರುವ ಚಾಕು, ಮ್ಯಾಪಲ್ ಮರದ ಹಸಿ ಎಲೆಯಲ್ಲಿ ಸುತ್ತಿಟ್ಟಿದ್ದ ಇದ್ದಿಲು. ಬರ್ಚ್ ಮರದ ಪಾತ್ರೆ, ಕಾಡು ಮೇಕೆ ಮಾಂಸದ ಒಂದು ತುಂಡು, ಬಿಲ್ಲಿನಂತೆ ಬಾಗಿರುವ ಒಂದು ಬಾರುಕೋಲು ಮತ್ತು ಬಹಳ ಮುಖ್ಯವಾಗಿ  ತಾಮ್ರದ ಮೊನೆಯ ಕೊಡಲಿ. ಈ ಮೊನೆಯನ್ನು ಶುದ್ಧವಾದ ತಾಮ್ರದಿಂದ ತಯಾರಿಸಿದ್ದು, ಎಲ್ ಆಕಾರದ ಮರದ ತುದಿಗೆ ಚರ್ಮದ ದಾರದಿಂದ ಕಟ್ಟಿ ಬಿಗಿಗೊಳಿಸಲಾಗಿತ್ತು. ಕೊರೆಯುವ ಒಂದು ಸಾಧನ, ಒಂದು ಉಜ್ಜುಗೊರಡು- ಈ ಎಲ್ಲವೂ ಶಿಲೆಯಿಂದ ತಯಾರಿಸಿದವು. ತಲೆಗೆ ಧರಿಸಿದ್ದ ಕರಡಿ ಜರ್ಮದ ಫರ್ ಕ್ಯಾಪ್.   ಮೂಳೆ ಸೂಜಿ, ಔಷಧವಾಗಿ ಬಳಸಲಾಗಿತ್ತು ಎಂದು ನಂಬಲಾಗಿರುವ  ಎರಡು ಬಗೆಯ ಹಾವಸೆಯ ಚೂರುಗಳು, ಬೆಂಕಿ ಹೊತ್ತಿಸಲು ಚಕಮಕಿ ಕಲ್ಲು ಮತ್ತು ಒಂದಷ್ಟು ಒಣಗಿದ ಮರದೆಲೆಯ ತರಗು.

ಅತ್ಯಂತ ಬರ್ಬರವಾಗಿ ಹತ್ಯೆಯಾಗುವ ಸಮಯದಲ್ಲಿ  ಆಟ್ಸಿ ಸುಮಾರು ೫ ಅಡಿ ೨ ಇಂಚು ಉದ್ದದ ಸುಮಾರು ೪೫-೪೬ ವರ್ಷ ವಯಸ್ಸಿನ ಗಂಡಸು, ಮರಣ ಸಮಯದಲ್ಲಿ ೫೦ ಕೆಜಿ ತೂಕ ಇದ್ದಿರಬಹುದು. ಈಗ ಅವನ ಮಮ್ಮಿಯ ತೂಕ ಹದಿಮೂರು ಮುಕ್ಕಾಲು ಕೆಜಿ. ಅವನ ಜೀವನವನ್ನು ಬಹುತೇಕ ಜಾನುವಾರು ಮೇಯಿಸುತ್ತಾ ಇಲ್ಲವೇ ಹೊಲದಲ್ಲಿ ದುಡಿಯುತ್ತಾ ಇದ್ದಿರಬೇಕು.

ಆಟ್ಸಿಯ ಶವವನ್ನು ಪರೀಕ್ಷಿಸಿದಾಗ ಎದ್ದು ಕಾಣುವಂತೆ ಇದ್ದ ಅಂಶವೆಂದರೆ ಅವನ ದೇಹದಚರ್ಮದ ಮೇಲೆ ಇದ್ದ ೬೧ ಹಚ್ಚೆಯ ಗುರುತುಗಳು.  ರೇಡಿಯೋಗ್ರಫಿಯ ಪರೀಕ್ಷೆಯಿಂದ  ಆಟ್ಸಿಯ ಕಾಲಿನ ಕೀಲುಗಳಲ್ಲಿ ಮೂಳೆ ಸವೆತ ಆಗಿದ್ದು ಅವನು ಅದರ ನೋವಿನಿಂದ ನರಳಿದ್ದನೆಂದು ಕಂಡು ಬಂದಿತು. ಈ ಕೀಲುಗಳ ಬಳಿ ಪದೇ ಪದೇ ಹಚ್ಚೆ ಹಾಕಿರುವುದು ಕಂಡುಬಂದಿದ್ದು  ನೋವು ನೀವಾರಿಸಲು ಹಚ್ಚೆ ಹಾಕುತ್ತಿದ್ದರಬೇಕೆಂದು ನಂಬಲಾಗಿದೆ.  ಆಟ್ಸಿಯ ದೇಹದ ಸಿಟಿ ಸ್ಕಾನ್ ಮಾಡಿದಾಗ ಅವನ ಹೊಟ್ಟೆಯನ್ನು ಒಳಗೊಂಡು ಜೀರ್ಣಾಂಗ ವ್ಯೂಹವು ಎದೆಯ ಪಂಜರದೊಳಕ್ಕೆ ದೂಡಲ್ಪಟ್ಟಿರುವುದು ಕಂಡು ಬಂದಿತು. ಅಲ್ಲದೇ ಅವನ ಎಡಗಡೆ ಬೆನ್ನಿನ ಒಳಗೆ ಒಂದು ಚೂಪಾದ ಫ್ಲಿಂಟ್ ಶಿಲೆಯ ಬಾಣದ ತುದಿಯು ಸಿಕ್ಕಿಕೊಂಡಿರುವುದು ಕಂಡುಬಂದಿತು. ಇದರಿಂದ ಆಟ್ಸಿಯ ಹಿಂದಿನಿಂದ ಯಾರೋ ಗುರಿಯಿಟ್ಟು ಹೊಡೆದ ಬಾಣವು ಅವನ ದೇಹವನ್ನು ಹೊಕ್ಕಿ ಮುಖ್ಯ ರಕ್ತನಾಳವೊಂದನ್ನು ತುಂಡಿರಿಸಿತ್ತು. ಇದರಿಂದಾಗಿ ರಕ್ತ ಸ್ರಾವವಾಗಿ ಅವನು ಸತ್ತಿರಬೇಕೆಂದು ನಂಬಲಾಯ್ತು.  ಜೊತೆ ತಲೆಯ ಹಿಂಭಾಗದಲ್ಲಿ ಒಂದು ಕಡೆ ಚರ್ಮವು ತಲೆಬುರುಡೆಯಿಂದ ಕಳಚಿಕೊಂಡಿರುವುದನ್ನು ಪತ್ತೆ ಹಚ್ಚಿದ ವೈದ್ಯರು ಆ ಭಾಗದಲ್ಲಿ ರಂದ್ರ ಕೊರೆದು ಮೆದುಳಿನ ಭಾಗವನ್ನು ತೆಗೆದು ಪರೀಕ್ಷಿಸಿದಾಗ ಮೆದುಳಿನಲ್ಲಿ ರಕ್ತಸ್ರಾವವಾಗಿದ್ದರ ಕುರುಹು ಸಿಕ್ಕಿತು. ಇದರಿಂದ ಬಲವಾದ ಪೆಟ್ಟು ಸಹ ಆಟ್ಸಿಯ ತಲೆಗೆ ಬಿದ್ದಿದ್ದಿತು ಎಂಬುದು ಧೃಡವಾಯಿತು,  ಆಟ್ಸಿಯ ಹೊಟ್ಟೆಯಲ್ಲಿದ್ದ ಅರೆ ಜೀರ್ಣವಾಗಿದ್ದ  ಆಹಾರವನ್ನು ಹೊರತೆಗೆದು ಪರೀಕ್ಷಿಸಿದಾಗ ಅವನು ಸಾಯುವ ಕೆಲವೇ ಗಂಟೆಗಳ ಮುಂಚೆ ಗೋಧಿಯಿಂದ ತಯಾರಿಸಿದ ರೊಟ್ಟಿ ಮತ್ತು ಕಾಡು ಮೇಕೆಯ ಮಾಂಸವನ್ನು ಸೇವಿಸಿದ್ದನೆಂಬುದು ತಿಳಿದು ಬಂತು. ಅಲ್ಲದೇ ಆಹಾರದೊಂದಿಗೆ ಕಂಡುಬಂದ ಪರಾಗರೇಣುಗಳ ಆಧಾರದ ಮೇಲೆ ಅವನು ಸತ್ತ  ಋತುಮಾನವನ್ನು ಸಹ ಅಂದಾಜು ಮಾಡಲಾಯಿತು. ಅಲ್ಲದೇ ಅವನು ಜಂತು ಹುಳುಗಳ ಬಾಧೆಗೂ ಒಳಗಾಗಿದ್ದನೆಂದೂ, ಜಠರಾಗ್ನಿಗೆ ಕಾರಣವಾಗುವ ನಂಜನ್ನು ಉಂಟು ಮಾಡುವ ಪೈಲೋರಿ ಬ್ಯಾಕ್ಟೀರೀಯಾಗಳು ಅವನನ್ನು ಬಾಧಿಸಿದ್ದವೆಂಬುದು ಪತ್ತೆಯಾಯಿತು. 

ರಾಸಾಯನಿಕ ವಿಶ್ಲೇಷಣೆಯಿಂದ ಅವನ ತಲೆ ಕೂದಲಿನಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ತಾಮ್ರ ಮತ್ತು ಆರ್ಸೇನಿಕ್ ಅಂಶ ಕಂಡು ಬಂದುದ್ದರಿಂದ ಅವನು ತಾಮ್ರದ ಉದ್ದರಣೆಯಲ್ಲಿ ತೊಡಗಿದ್ದನೆಂದು ಊಹಿಸಲಾಯಿತು. ಅವನ ಬಳಿ ದೊರೆತ ತಾಮ್ರದ ಕೊಡಲಿಯು ಅತ್ಯಂತ ಪರಿಶುದ್ಧ ತಾಮ್ರದಿಂದ ತಯಾರಿಸಲಾಗಿದ್ದಿತು ಎಂಬುದು ಮತ್ತೊಂದು ಕುತೂಹಲಕರ ವಿಚಾರ.

ಆಟ್ಸಿಯ ದಂತಗಳನ್ನು ಪರೀಕ್ಷಿಸಿದ ತಜ್ಞರು ಅವನು ದಂತ ಕ್ಷಯದಿಂದ ಬಳಲುತ್ತಿದ್ದ ಎಂಬುದನ್ನು ಖಚಿತ ಪಡಿದಸಿದರು. ಅವನ ಒಂದು ಹಲ್ಲನ್ನು ಕೊರೆದು ತೆಗೆದ ಚೂರನ್ನು ಜೆನೆಟಿಕ್ ವಿಶ್ಲೇಷಣೆಗೆ ಒಳಪಡಿಸಿದರು. ಮಹಾಪಧಮನಿಯಲ್ಲಿ ಕ್ಯಾಲ್ಸಿಯಂ ಗರಣಿಗಟ್ಟಿ ಅವನು ಹೃದ್ರೋಗದಿಂದ ಬಳಲುತ್ತಿದ್ದ, ಅವನ ರಕ್ತದ ಗುಂಪು ಒ ಎಂಬುದನ್ನು ಪತ್ತೆ ಮಾಡಿದರು.  ಆಟ್ಸಿಯ  ಹುಟ್ಟು ಬೆಳವಣಿಗೆ ಈ ಎಲ್ಲವೂ ಅವನ ದೇಹ ಸಿಕ್ಕಿದ ಪ್ರದೇಶದ ಆಸುಪಾಸಿನಲ್ಲೇ ಕಳೆದಿತ್ತೆಂದು ದೇಹದ ವಿವಿಧ ಪರೀಕ್ಷೆಗಳಿಂದ ಕಂಡು ಬಂತು.  ಹೀಗೆ ಆಟ್ಸಿಯು ದೊರೆತ ದಿನದಿಂದ ಆರಂಭಿಸಿ ಈ ವರೆಗೆ ಅವನ ದೇಹದ ಮೇಲೆ ವಿವಿಧ ತಜ್ಞ ವೈದ್ಯರು, ಅವನ ಬಳಿ ದೊರೆತ ವಸ್ತುಗಳ ಮೇಲೆ ಪುರಾತತ್ವ ಶಾಸ್ತ್ರಜ್ಞರು ಸಾವಿರಾರು ಬಗೆಯ ಪರೀಕ್ಷೆಗಳನ್ನು ನಡೆಸಿ ಐದು ಸಾವಿರ ವರ್ಷಗಳ ಹಿಂದೆ ತಾಮ್ರ ಮತ್ತು ಕಂಚಿನ ಯುಗದ ನಡುವಿನ ಸಂಕ್ರಮಣ ಕಾಲದಲ್ಲಿ ಜನರ ಜೀವನ ಹೇಗಿದ್ದಿತು ಎಂಬುದನ್ನು ಕುರಿತು ಹಲವಾರು ಪ್ರಬಂಧಗಳನ್ನು ಪ್ರಕಟಿಸಿದ್ದಾರೆ.   ಹೊಸ ಹೊಸ ವೈದ್ಯಕೀಯ ತಂತ್ರಜ್ಞಾನವು  ಆವಿಷ್ಕಾರವಾದಂತೆ ಅದನ್ನು  ಉಪಯೋಗಿಸಿ ಆಟ್ಸಿಯನ್ನು ಪರೀಕ್ಷಿಸುವ  ಪ್ರಕ್ರಿಯೆಗಳು , ಸಂಶೋಧನೆಗಳು ….ಹೀಗೆ  ಮುಂದುವರೆಯುತ್ತಲೇ ಇವೆ.

ಇಲ್ಲಿ ಕುತೂಹಲ ಕೆರಳಿಸಿದ ವಿಚಾರಗಳೆಂದರೆ ಆಟ್ಸಿಯು ಈ ಹಿಮಾಚ್ಛಾದಿತ ಪರ್ವತಕ್ಕೆ ಬಂದಿದ್ದಾದರೂ ಏಕೆ? ಅವನನ್ನು  ಕೊಲೆ ಮಾಡಿದವರು ಯಾರು? ಏಕೆ ಮಾಡಿದರು  ಎ೦ಬುದು. ಅವನ ಬೆನ್ನಿನಲ್ಲಿ ಎಡಗಡೆ ನೆಟ್ಟ ಬಾಣದ ಮೊನೆ  ಮಾತ್ರವಿದ್ದು  ಬಾಣ ಹೇಗೆ ನಾಪತ್ತೆಯಾಯಿತು?. ೫ ಸಾವಿರ ವರ್ಷಗಳವರೆಗೆ ಹಿಮದಲ್ಲಿ ಹೂತು ಹೋಗಿದ್ದ ಆಟ್ಸಿಯ ಮಮ್ಮಿಯು  ಮೇಲೆದ್ದು ಬಂದದ್ದಾದರೂ ಹೇಗೆ? ಇನ್ನೂ ಇಂತಹ ಮಮ್ಮಿಗಳು ಭವಿಷ್ಯದಲ್ಲಿ  ಕಾಣಿಸಿಕೊಳ್ಳಬಹುದೇ?  ಶತಮಾನಗಳವರೆಗೆ ಘನೀಭವಿಸಿದ್ದ ಮಂಜು ಕರಗುತ್ತಿರುವುದು ಭೂತಾಪಮಾನದ ಏರಿಕೆಯ ಪರಿಣಾಮವೇ? ಹೀಗೆ ಹಲವಾರು ಪ್ರಶ್ನೆಗಳು ನಮ್ಮನ್ನು ಕಾಡದೆ ಬಿಡುವುದಿಲ್ಲ. ಸದ್ಯಕ್ಕೆ ಆಟ್ಸಿಗಾಗಿಯೇ ಇಟಲಿಯ ಬೊಲ್ಜೋನಾದ ಒಂದು ವಸ್ತು ಪ್ರದರ್ಶನಾಲಯವನ್ನು ನಿರ್ಮಿಸಲಾಗಿದ್ದು , ಈ ಆಟ್ಸಿ  ವಸ್ತು ಸಂಗ್ರಾಲಯದಲ್ಲಿ ಅವನಿಗೆ ಸೇರಿದ ವಸ್ತುಗಳನ್ನು ಮತ್ತು ಆಧುನಿಕ ತಂತ್ರಜ್ಞಾನ ಬಳಸಿ ನಿರ್ಮಿಸಿರುವ ಆಟ್ಸಿಯ ಪ್ರತಿಮೆಯನ್ನು ಇಡಲಾಗಿದೆ. ಅಲ್ಲದೇ ಬಹಳ ಮುಖ್ಯವಾಗಿ   ಶೀತಲೀಕರಿಸಿದ ಕೋಣೆಯಲ್ಲಿ  ಸಾರ್ವಜನಿಕರಿಗೆ ಆಟ್ಸಿಯ ಮಮ್ಮಿಯನ್ನು ಪ್ರದರ್ಶನಕ್ಕೆ ಇರಿಸಲಾಗಿದೆ.

ಮಂಗಟ್ಟೆ : ಬದುಕಿಗೊಂದು ದಾರಿದೀಪ

 ಮಂಗಟ್ಟೆ : ಬದುಕಿಗೊಂದು ದಾರಿದೀಪ

ಸ್ನೇಹಿತರೆ, ಪರಿಸರದಲ್ಲಿರುವ ಕೆಲವೊಂದು ಜೀವಿಗಳು ನಮ್ಮ ಜೀವನಕ್ಕೆ ಹೇಗೆ ದಾರಿದೀಪವಾಗಿವೆ ಎನ್ನುವುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ಇಂದು ಸಾಮಾಜಿಕ ಜಾಲತಾಣಗಳು, ದೃಶ್ಯ ವಾಹಿನಿಗಳು ಮತ್ತು ಕೆಲ ವ್ಯಕ್ತಿಗಳು ಸಮಾಜದಲ್ಲಿ ಹೆಣ್ಣಿನ ಮೇಲೆ ನಡೆಸುತ್ತಿರುವ ದೌರ್ಜನ್ಯಗಳು, ವಿವಾಹ ವಿಚ್ಛೇದನಗಳು ಮುಂತಾದ ಅನೇಕ ಘಟನೆಗಳಿಗೆ ಕಾರಣವಾಗುತ್ತಿವೆ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ ಅಲ್ಲವೇ! ಆದರೆ ಇಂತಹ ಘಟನೆಗಳಿಂದ ಪ್ರಜ್ಞಾವಂತ ಸಮಾಜ ತಲೆ ತಗ್ಗಿಸುತ್ತಿದೆ ಎಂದರೆ ತಪ್ಪಾಗಲಾರದು. ಹೀಗಿರುವಾಗ ಸಮಾಜಕ್ಕೆ ಮಾದರಿಯಾಗಿ ಇರುವ ಒಂದು ಖಗರತ್ನವೊಂದರ ಬಗ್ಗೆ ನಾವೊಂದಿಷ್ಟು ತಿಳಿಯೋಣ ಬನ್ನಿ.

ಪಕ್ಷಿ ಸಂಕುಲದಲ್ಲೆ ಬಹಳ ಹೆಸರುವಾಸಿಯಾದ ಕೊಂಬು ಕೊಕ್ಕಿನ ಪಕ್ಷಿ ಅಥವ ಮಂಗಟ್ಟೆ ಇದಕ್ಕೊಂದು ಉದಾಹರಣೆ. ಇವುಗಳನ್ನು ನೋಡಬೇಕು, ಅಧ್ಯಯನ ಮಾಡಬೇಕು ಎಂದು ಸುಮಾರು ಇಪ್ಪತ್ತು ವರ್ಷಗಳಿಂದ ಇಚ್ಛಿಸಿದ್ದರೂ ಅಷ್ಟು ವರ್ಷಗಳಿಂದ ಸಿಕ್ಕಿದ್ದು ಮಾತ್ರ ೨ ಪ್ರಭೇದಗಳು. ಉಳಿದ ಇನ್ನೆರಡನ್ನು ನೋಡುವುದು ದುರ್ಲಬವೇ ಸರಿ. ಏಕೆಂದರೆ ನಾನಿರುವುದು ರಾಜ್ಯದ ದಕ್ಕಿಣದಲ್ಲಿ, ಅವು ಇರುವುದು ಉತ್ತರದಲ್ಲಿ. ಏನಾದರಾಗಲಿ ಎಂದು ಐದು ವರ್ಷಗಳ ಹಿಂದೆ ೩ ದಿನ ಕುಟುಂಬದ ಜೊತೆಯಲ್ಲಿ ದೂರದ ದಾಂಡೇಲಿಗೆ ಪ್ರವಾಸ ಹೊರಟೇ ಬಿಟ್ಟೆವು. ಆದರೆ ನಮಗೆ ಸಿಕ್ಕಿದ್ದು ಶೂನ್ಯವೇ ಸರಿ. ಸಿಗಲಿಲ್ಲವಲ್ಲಾ ಎಂದು ಪೆಚ್ಚುಮೋರೆ ಹಾಕಿಕೊಂಡು ಬಂದಿದ್ದಾಯಿತು. ಮತ್ತೆ ಈ ವರ್ಷ ಮತ್ತೆ ನಾಲ್ಕು ದಿನಗಳ ಪ್ರವಾಸವನ್ನು ಅಲ್ಲಿಗೆ ಹಾಕ್ಕೊಂಡದ್ದಾಯಿತು. ಈ ಬಾರಿ ಭ್ರಮನಿರಸನವಾಗಲಿಲ್ಲ. ಈ ಅದ್ಭುತ ಹಕ್ಕಿಗಳ ಬಗ್ಗೆ ತಿಳಿಯಲು ಎಷ್ಟು ಮನಸ್ಸುಗಳು ಹಾತೊರೆಯುತ್ತಿವೆ ಎಂದರೆ. ಅದಕ್ಕಾಗಿ ದೂರದ ನಾನಾ ರಾಜ್ಯಗಳಿಂದ ಬಂದವರು ನೂರಾರು!

ನಮ್ಮ ದೇಶದಲ್ಲಿ ಸುಮಾರು ೭ ಪ್ರಭೇದಗಳು ಕಂಡುಬಂದರೂ ಕರ್ನಾಟಕದಲ್ಲಿ ನಾಲ್ಕು ವಿಶಿಷ್ಟ ಬಗೆಯ ಮಂಗಟ್ಟೆಗಳು ಕಂಡುಬರುತ್ತವೆ. ಅವುಗಳೇ -

ಬೂದು ಮಂಗಟ್ಟೆ (Indian Grey Hornbill)


ಇದು ರಾಜ್ಯದ ಎಲ್ಲಾ ಭಾಗಗಳಲ್ಲಿ ಕಂಡುಬರುತ್ತದೆ. ಸಾಧಾರಣವಾಗಿ ಇದು ಕೋಳಿಯ ಗಾತ್ರದಷ್ಟಿದ್ದು ಕೊಕ್ಕಿನ ಮೇಲೆ ಸಣ್ಣ ಕೊಂಬು ಕಂಡುಬರುತ್ತದೆ. ನೀಳಕೊಕ್ಕಿನ ತುದಿಯಲ್ಲಿ ತಿಳಿ ಹಳದಿ ಬಣ್ಣವಿದ್ದು ಕೊಕ್ಕು ಮುಂದಕ್ಕೆ ಬಾಗಿದೆ. ದೇಹವನ್ನು ಮುಚ್ಚಿದ ಗರಿಗಳು ಬೂದುಬಣ್ಣವನ್ನು ಹೊಂದಿದ್ದು ಹೊಟ್ಟೆಯ ಭಾಗದಲ್ಲಿ ತಿಳಿ ಬೂದು ಬಣ್ಣವಿರುತ್ತದೆ. ಬಾಲ ಉದ್ದವಾಗಿದ್ದು ಕೊನೆಯಲ್ಲಿ ಕಪ್ಪು ಮಿಶ್ರಿತ ಹಾಗೂ ಬಿಳಿ ಮಿಶ್ರಿತ ಬೂದು ಬಣ್ಣದ ಪಟ್ಟೆ ಇರುತ್ತದೆ. ಸಿಳ್ಳೆ ಹೊಡೆದಂತಿರು ಕೂಗು, ಅದನ್ನು ಗುರುತಿಸಲು ಸಹಾಯ ಮಾಡುತ್ತದೆ. ಮರದ ಮೇಲಿನ ಕೊಂಬೆಗಳಲ್ಲಿ ಜಿಗಿದು ಜಿಗಿದು ಚಲಿಸುತ್ತದೆ.

ಮಲೆ ಮಂಗಟ್ಟೆ (Malabar Grey Hornbill)

ಇದು ಮಲೆನಾಡಿನ ಅಂದರೆ ಘಟ್ಟಪ್ರದೇಶದ ಭಾಗಗಳಲ್ಲಿ ಕಂಡುಬರುವ, ಹೆಚ್ಚು ಕಡಿಮೆ ಬೂದು ಮಂಗಟ್ಟೆಯನ್ನು ಹೋಲುತ್ತದೆ. ಕೊಕ್ಕಿನ ಮೇಲೆ ಕೊಂಬು ಕಂಡುಬರುವುದಿಲ್ಲ. ಕೊಕ್ಕು ದೊಡ್ಡದಾಗಿದ್ದು ತುದಿಯಲ್ಲಿ ಕಿತ್ತಳೆ, ಹಳದಿ ಬಣ್ಣವಿದೆ. ಬಾಲದ ಬುಡದಲ್ಲಿ ತಿಳಿ ಹಳದಿ ಬಣ್ಣವಿರುತ್ತದೆ. ದೇಹದಲ್ಲಿ ಬೂದು ಬಣ್ಣದ ಗರಿಗಳಿದ್ದು ಬಾಲದ ತುದಿಯಲ್ಲಿ ಬಿಳಿ ಪಟ್ಟೆ ಇರುತ್ತದೆ. ಕೂಗುವಾಗ ಕಿಯಾ…ಕಿಯಾ ಕ್ಯಾ.ಕ್ಯಾ ಕ್ಯಾ ಕ್ಯಾ ಎಂದು ಎಂಟತ್ತು ಬಾರಿ ನಕ್ಕಂತೆ ಕೂಗುತ್ತದೆ.



ಪ್ರಮುಖವಾಗಿ ದಾಂಡೇಲಿ ಮತ್ತು ಪಶ್ಚಿಮ ಘಟ್ಟದಲ್ಲಿ ಅಪರೂಪವಾಗಿ ಕಾಣಸಿಗುವ ಮತ್ತೊಂದು ಪ್ರಬೇಧ ಎಂದರೆ ಮಲೆ ದಾಸಮಂಗಟ್ಟೆ(Malabar Pied Hornbill)

ಗಾತ್ರದಲ್ಲಿ ಬೂದು ಮಂಗಟ್ಟೆಗಳಿಗಿಂತ ತುಸು ದೊಡ್ಡದಾಗಿದ್ದು ಕೊಕ್ಕು ಹಳದಿಯಾಗಿದ್ದು ಕೊಂಬಿನ ಮುಕ್ಕಾಲು ಭಾಗ ಕಪ್ಪಗಿದೆ. ಕುತ್ತಿಗೆ, ಬೆನ್ನು, ಎದೆ ಮತ್ತು ಬಾಲದ ಗರಿಗಳು ಕಪ್ಪು ಬಣ್ಣವನ್ನು ಹೊಂದಿದ್ದು, ಹೊಟ್ಟೆ ಮತ್ತು ಬಾಲದ ಗರಿಗಳ ಕೆಳಭಾಗ, ರೆಕ್ಕೆ ಅಂಚು ಬಿಳಿ ಬಣ್ಣದ್ದಾಗಿರುತ್ತದೆ. ಕಣ್ಣಿನ ಕೆಳಗೆ ಒಂದು ಬಿಳಿ ಪಟ್ಟೆ ಕಂಡುಬರುತ್ತದೆ. ಕೊಕ್ಕಿನ ಮೇಲೆ ಇರುವ ಕೊಂಬು ಕೊಕ್ಕಿನ ಮುಕ್ಕಾಲು ಭಾಗವನ್ನು ಆವರಿಸಿರುತ್ತದೆ.

ಅಪರೂಪದಲ್ಲಿ ಅಪರೂಪವಾಗಿ ಕಾಣಸಿಗುವ ಮತ್ತೊಂದು ಪ್ರಬೇಧ ಎಂದರೆ ದಾಸಮಂಗಟ್ಟೆ (Great Hornbill)


ಇದು ಅತ್ಯಂತ ದೊಡ್ಡ ಗಾತ್ರದ ಹಕ್ಕಿ. ಇದರ ಹಾರಾಟವನ್ನು ನೋಡುವುದೇ ಒಂದು ಅಮೋಘ ಮತ್ತು ಅದ್ಭುತ ರಸಾನುಭವ. ಗಾಳಿಯಲ್ಲಿ ತೇಲಿ ಕಣಿವೆಯಲ್ಲಿ ಹಾರುತ್ತಾ ದೂರದ ಮರಕ್ಕೆ ಹೋಗುವ ಸೊಬಗನ್ನು ನೋಡುವುದೇ  ಒಂದು ರಮ್ಯ ಅನುಭವ.  ರೆಕ್ಕೆ ಬಡಿದು ಹಾರುವಾಗ ಗಾಳಿಯ ಶಬ್ದ ಬರ್ರ್‌ ಬರ್ರ್‌ ಎಂಬ ಶಬ್ದ ಕೇಳುತ್ತದೆ ಎಂದರೆ ರೆಕ್ಕೆಯ ಅಗಲ ಎಷ್ಟಿರಬಹುದೆಂದು ಊಹಿಸಿಕೊಳ್ಳಬಹುದು. ಕುತ್ತಿಗೆ, ಮೇಲಿನ ಕೊಕ್ಕು ಮತ್ತು ಕೊಂಬು ಹಳದಿ ಬಣ್ಣ, ಕೆಳಗಿನ ಕೊಕ್ಕು, ಬೆನ್ನಿನ ಹಿಂಭಾಗ, ಬಾಲ ಬಿಳಿ ಬಣ್ಣದ ಗರಿಗಳನ್ನು ಹೊಂದಿದೆ. ರೆಕ್ಕೆಯ ಅಂಚು ಮತ್ತು ಮಧ್ಯದಲ್ಲಿ ಬಿಳಿ ಮತ್ತು ಹಳದಿ ಪಟ್ಟೆ ಕಂಡುಬರುತ್ತದೆ. ಇವುಗಳ ಪ್ರಣಯಕೇಳಿಯ ಹಾರಾಟ ಅದೆಷ್ಟು ಚಂದ, ಮನದನ್ನೆಯನ್ನು ಆರಿಸಿಕೊಳ್ಳುವಾಗ ತಾನು ತಂದ ಹಣ್ಣನ್ನು ಗಾಳಿಯಲ್ಲೆ ಹಾರುತ್ತಾ ಹೆಣ್ಣಿಗೆ ನೀಡಿ ತನ್ನ ಪ್ರೇಯಸಿಯ ಮನವೊಲಿಸಿಕೊಳ್ಳುತ್ತದೆ.  ಇದಕ್ಕಿರುವ ಆಕರ್ಷಕವಾದ ಕೊಕ್ಕೇ ಇದರ ಅವಸಾನಕ್ಕೆ ಕಾರಣವಾಗಿದೆ ಎನ್ನುವುದು ದುರಂತವೇ ಸರಿ. ಇದು ಮನುಷ್ಯನ ಅವಿವೇಕ ಮತ್ತು ದುರಾಸೆಗಳಿಗೆ ಹಿಡಿದ ಕೈಗನ್ನಡಿಯಾಗಿದೆ. 

ಕೊಂಬು ಕೊಕ್ಕಿನ ಎಲ್ಲಾ ಪ್ರಬೇಧಗಳು ಫ್ರೂಜಿವೋರ್.‌ ಅಂದರೆ ಹಣ್ಣು ಅದರ ಪ್ರಮುಖ ಆಹಾರ. ಮುಖ್ಯವಾಗಿ ಫೈಕಸ್‌ ಜಾತಿಯ ಆಲ, ಅರಳಿ, ಬಸರಿ, ಗೋಳಿ, ಹತ್ತಿ ಮತ್ತು ಕೆಲವು ಕಾಡು ಹಣ್ಣುಗಳು. ಹಣ್ಣುಗಳ ದುರ್ಲಭ್ಯತೆ ಈ ಹಕ್ಕಿಗಳ ಸಂತತಿಗೆ ಮಾರಕವಾಗುತ್ತಿದೆ. ಹಿಂದಿನ ಜನರು ಹೆಚ್ಚಾಗಿ ನಡೆದೇ ಹೋಗುತ್ತಿದ್ದುದರಿಂದ ರಸ್ತೆಯ ಇಕ್ಕೆಲಗಳಲ್ಲಿ ಇಂತಹ ನೆರಳಿನ, ಹಣ್ನಿನ ಜಾತಿಯ ಮರಗಳನ್ನು ಉದ್ದಕ್ಕೂ ನೆಟ್ಟು ಬೆಳಸುತ್ತಿದ್ದರು. ಈಗ ಎಲ್ಲರ ಮನೆಗಳಲ್ಲಿ ವಾಹನಗಳು ಇರುವುದರಿಂದ ರಸೆಗಳು ಅಗಲವಾಗುತ್ತಿದ್ದಂತೆ ಹಣ್ಣಿನ ಮರಗಳು ಮಾಯವಾಗುತ್ತಲೇ ಬಂದವು. ಕಾಡಿನ ಅತಿಕ್ರಮಣ ಹೆಚ್ಚಾಗಲು ಅಪರೂಪದ ಮರಗಳು ಕ್ಷೀಣಿಸುತ್ತಾ ಬಂದವು. ವನ್ಯಜೀವಿಗಳೊಂದಿಗಿನ ಸಂಘರ್ಷ ಹೆಚ್ಚುತ್ತಲೇ ಇದೆ. ರಾಜ್ಯದಲ್ಲಿಯೇ ಉತ್ತರ ಕನ್ನಡ ಜಿಲ್ಲೆ ಅತೀ ಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿರುವುದರಿಂದ ದಾಸಮಂಗಟ್ಟೆಗಳು ಅಲ್ಲಿ ಮಾತ್ರ, ವಿರಳವಾಗಿ ಕಾಣಸಿಗುತ್ತಿವೆ. ಅಲ್ಲಿಂದ ಕಣ್ಮರೆಯಾದರೆ ಅಲ್ಲಿಗೆ ಅದರ ಸಂತತಿ ನಾಶವಾದಂತೆಯೇ. ಅಷ್ಟು ವಿರಳಾತಿ ವಿರಳವಾಗಿವೆ. ಹಾಗಾಗಿ ಇವುಗಳನ್ನು ತೀವ್ರ ಅಪಾಯಕ್ಕೆ ಒಳಗಾದ ಪ್ರಬೇಧವಾಗಿ ಗುರುತಿಸಲ್ಪಟ್ಟಿವೆ.

ಇನ್ನೊಂದು ಮಹತ್ವದ ವಿಷಯ ಎಂದರೆ ಅಪ್ರತಿಮ ಏಕ ಸತಿ-ಪತೀ ವೃತತ್ವ. ಈ ಹಕ್ಕಿಗಳಲ್ಲಿ ಹೆಣ್ಣು ಗಂಡು ಜೋಡಿಯಲ್ಲಿ ಹೆಣ್ಣಾಗಲಿ, ಗಂಡಾಗಲಿ ಸತ್ತರೆ ಮತ್ತೊಂದು ಸಹಗಮನ ನಡೆಸಿ ಸಾಯುತ್ತದೆ.  ಬೇರೊಂದು ಹಕ್ಕಿಯ ಜೊತೆ ಸಂಸಾರ ನಡೆಸದು ! ಇದು ಮೊಟ್ಟೆ ಇಟ್ಟು ಮರಿ ಮಾಡುವುದು ಮರದ ಪೊಟರೆಗಳಲ್ಲಿ. ಸೂಕ್ತವಾದ ಎತ್ತರವಾದ ಮರಗಳ ಪೊಟರೆಯನ್ನು ಆಯ್ಕೆ ಮಾಡಿಕೊಂಡ ಮೇಲೆ ಹೆಣ್ಣು ೨-೪ ಮೊಟ್ಟೆ ಇಟ್ಟು ಕಾವುಕೊಡಲು ಕೂತರೆ, ಗಂಡು ಆ ಪೊಟರೆಯ ಸುತ್ತಲೂ ಮರದ ಚಕ್ಕೆ, ಎಂಜಲು ಮತ್ತು ಜೇಡಿ ಮಣ್ಣಿನಿಂದ ಕೊಕ್ಕು ಹಾಕುವಷ್ಟು ಜಾಗವನ್ನು ಬಿಟ್ಟು ಉಳಿದ ಜಾಗವನ್ನು ಮುಚ್ಚಿಬಿಡುತ್ತದೆ. ನಂತರ ಗಂಡಿನ ಕೆಲಸ ಎಂದರೆ ಹೆಣ್ಣಿಗೆ ಆಹಾರ ಸರಬರಾಜು ಮಾಡುವುದು. ಹೆಣ್ಣು ಕಾವುಕೊಡುವ ಉದ್ದೇಶದಿಂದ ಗರಿಗಳನ್ನು, ಪುಕ್ಕಗಳನ್ನು ಕಿತ್ತು ಹಾಕಿಬಿಡುತ್ತದೆ. ಮೊಟ್ಟೆಯೊಡೆದು ಮರಿಗಳಾಗಿ ಅವು ಬೆಳೆಯುವವರೆಗೂ ಗಂಡು ನಿರಂತರವಾಗಿ ಆಹಾರವನ್ನು ಪೂರೈಸುತ್ತಿರುತ್ತದೆ.



ಈ ಸಮಯ ಇವುಗಳ ಬದುಕಿನ ಮಹತ್ವದ ಪರ್ವ. ಕೊಕ್ಕಿನ ಆಸೆಗೆ, ಯಾರಾದರೂ ಗಂಡು ಹಕ್ಕಿಯನ್ನು ಬೇಟೆಯಾಡಿದರೆ ಗೂಡಿನಲ್ಲಿರುವ ಹೆಣ್ಣುಹಕ್ಕಿ ಮತ್ತು ಮರಿಗಳು ಅಲ್ಲೆ ಸಾಯುತ್ತವೆ. ಎಂತಹ ದುರ್ವಿಧಿ ಅಲ್ಲವೇ? ಗೂಡು ಮುಚ್ಚಿರುವ ಪೊಟರೆಯ ಹೊರಭಾಗವನ್ನು ಹೆಣ್ಣು ಹಕ್ಕಿ ಒಡೆಯಲಾಗುವುದಿಲ್ಲ ಮತ್ತು ಪುಕ್ಕಗಳನ್ನು ಉದುರಿಸಿಕೊಂಡಿರುವುದರಿಂದ ಹಾರಲೂ ಸಹ ಆಗದೆ ಅವುಗಳೆಲ್ಲವೂ ಲ್ಲೇ ನಾಶವಾಗುತ್ತವೆ. ಹೀಗೆ ಹೆಣ್ಣಿಗಾಗಿ ಗಂಡು, ಗಂಡಿಗಾಗಿ ಹೆಣ್ಣು ಬದುಕುವುದು ಬೇರೆ ಪಕ್ಷಿಗಳಲ್ಲಿ ಇಲ್ಲವೇ ಇಲ್ಲ ಎನ್ನಬಹುದು. ಪ್ರಜ್ಞಾವಂತರಾದ ನಾವು ಯೋಚಿಸಿ ಇವುಗಳ ಸಂತತಿಯನ್ನು ಉಳಿಸಿಕೊಳ್ಳಬೇಕಿದೆ. ಅದಕ್ಕಾಗಿ ಗಿಡಗಳನ್ನು ನೆಡೋಣ, ಬೆಳೆಸೋಣ, ನಿಸರ್ಗದ ಇಂತಹ ಅನೇಕ ಜೀವ ಸಂಕುಲಗಳನ್ನು ಕಾಪಾಡಿಕೊಳ್ಳೋಣ.

https://www.youtube.com/watch?v=rYQMVGn7T80

 

ಕೇದಗೆ ವನದಾಗ,,,,

 ಕೇದಗೆ ವನದಾಗ,,,,

ಹೆಣ್ಣು ಮಕ್ಕಳಿಗೆ ಹೂಗಳೆಂದರೆ ಬಲು ಪ್ರೀತಿ. ಅವುಗಳನ್ನು ಮುಡಿದು ಶೃಂಗಾರಗೊಂಡು ಹೊರನಡೆಯುವುದೆಂದರೆ ಅದೇನೋ ಒಂದು ಹೊಸ ಹುರುಪು. ಮಲ್ಲಿಗೆಯ ಹೂ ಮುಡಿದ ಹೆಣ್ಣುಮಕ್ಕಳು ಅದರ ಘಮವನ್ನು ಆಘ್ರಾಣಿಸಿ, ಆನಂದಿಸುವುದರಲ್ಲಿ ಖುಷಿ ಪಡುವುದು ಸಾಮಾನ್ಯ. ಅಷ್ಟೇ ಏಕೆ ಸೇವಂತಿಗೆ, ಕನಕಾಂಬರ, ಗುಲಾಬಿ ಇನ್ನೂ ಅನೇಕ ಹೂಗಳನ್ನು ಅವರು ತಮ್ಮ ಅಭಿರುಚಿಗನುಸಾರ ಮುಡಿದು ಸಿಂಗರಿಸಿಕೊಳ್ಳುತ್ತಾರೆ. ಬಟ್ಟೆ, ಸೀರೆ, ಬಹುಬಗೆಯ ದಿರಿಸುಗಳು ಎಷ್ಟು ಮುಖ್ಯವೋ, ಹೆಣ್ಣುಮಕ್ಕಳ ಶೃಂಗಾರದಲ್ಲಿ ಹೂಗಳೂ ಅಷ್ಟೇ ಪ್ರಧಾನ ಪಾತ್ರವಹಿಸುತ್ತವೆ. ಒಂದು ಸಮಯದಲ್ಲಿ ತುಂಬಾ ಬೇಡಿಕೆಯ ಹಳ್ಳಿ ಪರಿಸರದ ಜನಪ್ರಿಯ ಹೂವಾಗಿ ಮನೆಮಾತಾಗಿದ್ದ ‘ಕೇದಗೆ’ ಅದರ ಸುವಾಸನೆಯುಕ್ತ ಘಮದಿಂದ ಎಲ್ಲರನ್ನೂ ಆಕರ್ಷಿಸುತ್ತಿದ್ದದ್ದು ಸುಳ್ಳಲ್ಲ. ಇತ್ತೀಚಿನವರಿಗೆ ತೀರ ಅಪರಿಚಿತವಾದ ಇಂತಹ ಹೂವೊಂದರ ಸೊಬಗಿನ ಪರಿಚಯ ಇಲ್ಲಿದೆ.

 ‘ಕೇದಗೆ ವನ’ ತರಾಸುರವರ ಪುಸ್ತಕ ಓದುತ್ತಿದ್ದೆ, ಆ ಶಿರ್ಷಿಕೆ ನೋಡುತ್ತಿದ್ದಂತೆ ನನಗೆ ನೆನಪಾದದ್ದು ಬಾಲ್ಯದಲ್ಲಿ ಹೆಣ್ಣುಮಕ್ಕಳಿಗೆ ತಾಯಂದಿರು ಮುಡಿಸುತ್ತಿದ್ದ ಕೇದಗೆ ಹೂ. ಎಲೆಯಾಕಾರದ ಹೂ ಎಸಳುಗಳನ್ನು ವಿಭಿನ್ನ ಆಕಾರಗಳಲ್ಲಿ ಅಂದರೆ ತ್ರಿಕೋನಾಕಾರ, ವಜ್ರಾಕೃತಿ, ಶಂಕು, ನಕ್ಷತ್ರ ಹೀಗೆ ಅನೇಕ ರೀತಿಯಲ್ಲಿ ಮಡಿಚಿ, ಚಿಕ್ಕ ಚಿಕ್ಕ ರಟ್ಟುಗಳಿಗೆ ಪೋಣಿಸಿ ವೈವಿಧ್ಯಮಯ ಚಿತ್ತಾರಗಳನ್ನು ಮಾಡಿ ಉದ್ದನೆಯ ಜಡೆಗೆ ಮುಡಿಸಿದಾಗ ಕಾಣುವ ಅಂದ ನಿಜಕ್ಕೂ ವರ್ಣಿಸಲಸಾಧ್ಯ. ಅಂತಹ ಕೇದಗೆ ಇಂದು ಬಹಳಷ್ಟು ಜನರಿಗೆ ಮರೆತುಹೋಗುತ್ತಿದೆ.

ಕೇದಿಗೆ, ಕೇತಕಿ, ತಾಳೆ ಹೂ, ಕೇವುಡಾ ಎಂತೆಲ್ಲಾ ಕರೆಯಲ್ಪಡುವ ಈ ಅಪ್ಪಟ ಸಂಪ್ರದಾಯದ ಹೂ ಹಳ್ಳಿಗರಿಗೆ ಅತ್ಯಂತ ಚಿರಪರಿಚಿತ. ಪಂಡಾನೇಸೀ ಕುಟುಂಬದ ಆಂಗ್ಲ ಭಾಷೆಯ ಪೈನ್ ಸ್ಕ್ರ್ಯೂ ಎಂಬ ಹೆಸರಿನ ಈ ಒರಟು ಹೂ ಪಂಡಾನಸ್ ಓಡೋರಿಫರ್ (Pandanus odorifer ) ಎಂಬ ವೈಜ್ಞಾನಿಕ ನಾಮಧೇಯ ಹೊಂದಿದೆ. ಸಮುದ್ರ, ನದಿ ದಂಡೆಗಳಲ್ಲಿ, ನೀರಿನ ಆಸರೆಯಿರುವ ತಂಪು ಪ್ರದೇಶಗಳಲ್ಲಿ ಯಥೇಚ್ಛವಾಗಿ ಬೆಳೆಯವ ಗುಣ ಇದಕ್ಕಿದೆ. ಹಳ್ಳಿಗಾಡಿನ ಕೆರೆ, ಹಳ್ಳ, ಜೌಗುಪ್ರದೇಶ, ಸದಾ ಜಿನುಗುವ ನೀರಿನ ತೊರೆಗಳ ಬದುಗುಂಟ ಸಲೀಸಾಗಿ ಬೆಳೆಯುತ್ತದೆ, ಸದ್ಯ ಹೆಂಗೆಳೆಯರು ಮುಡಿಯುವ ಹಾಗೂ ಪೂಜೆಗೆಂದು ಬಳಕೆಯಾಗುವ ಈ ಹೂ ಇಂದು ಅಪರೂಪವಾಗುತ್ತಿದೆ.


ಆಲದ ಮರ ತನ್ನ ಬೀಳಲು ಬೇರುಗಳನ್ನು ಚಾಚುತ್ತಾ ಸಾಗಿದ ರೀತಿಯಲ್ಲಿಯೇ ಕೇದಗೆ ಕೂಡ ತನ್ನ ಕಾಂಡ ಭಾಗವನ್ನು ಭೂಮಿಗೆ ತಾಗಿಸಿ, ಬೇರುಗಳನ್ನು ಬಿಟ್ಟು, ಕಾಂಡ ಭಾಗಗಳನ್ನು ಕವಲುಗಳಾಗಿಸಿ ವ್ಯಾಪ್ತಿ ವಿಸ್ತರಿಸುತ್ತಾ ಹಬ್ಬುತ್ತಾ ಸಾಗುತ್ತದೆ. ಆದರೆ ಇದು ಆಲದಂತೆ ಮರವಲ್ಲವಾದರೂ ಒಂದು ಪೊದೆಯಾಗಿ ಗುರುತಿಸಲ್ಪಡುತ್ತದೆ. ಆಸ್ಟ್ರೇಲಿಯಾ, ದಕ್ಷಿಣ ಏಶಿಯಾದ ಅಂಡಮಾನ ದ್ವೀಪ ಪ್ರದೇಶ, ಫಿಲಿಫೈನ್ಸ್, ರ‍್ಮಾ, ಶ್ರೀಲಂಕಾ, ಮಲೇಷಿಯಾ, ಥೈಲ್ಯಾಂಡ್, ಇಂಡೊನೇಶಿಯಾ ಹಾಗೂ ಓಡಿಸ್ಸಾ, ನಮ್ಮ ದಕ್ಷಿಣ ಭಾರತದ ಆಂಧ್ರ ಪ್ರದೇಶ, ತಮಿಳುನಾಡು, ಕರ್ನಾಟಕದ ಭಾಗದಲ್ಲಿ ಇದು ನೆಲೆ ಕಂಡಿದೆ. 4 ರಿಂದ 10 ಮೀಟರ್ ಎತ್ತರಕ್ಕೆ ಬೆಳೆಯಬಲ್ಲ ಕೇದಗೆ ಸುಮಾರು 1 ರಿಂದ 1.5 ಮೀಟರ್ ಉದ್ದದ ಎಲೆಗಳನ್ನು ಹೊಂದಿದೆ. ಪಂಡಾನಸ್ ಜಾತಿಯ ಕೆಲವು ಪ್ರಭೇದಗಳು 100 ಮೀಟರ್ ಎತ್ತರಕ್ಕೂ ಬೆಳೆಯುವ ದೊಡ್ಡ ಮರಗಳಂತಿವೆ ಎಂದು ಹೇಳಲಾಗುತ್ತದೆ. ವಾಯುವಿಕ ಬೇರು (Arial root) ಗಳ ಆಸರೆ ಪಡೆದ ಈ ಗಿಡದ ಕವಲುಗಳು ಒತ್ತೋತ್ತಾಗಿ ಬೆಳೆದು ದಟ್ಟವಾದ ಅಭೇದ್ಯ (impenetrable) ಕಾಡಿನಂತೆ ರೂಪುಗೊಳ್ಳುತ್ತವೆ. ನೀಲಿ ಹಸಿರು ಮಿಶ್ರಿತ ಎಲೆಯ ಪತ್ರಕಗಳನ್ನು ಹೊಂದಿದ ಇದು ಅಂಚಿನಗುಂಟ ಅಲಗಿನಂತ ಚೂಪು ಮುಳ್ಳುಗಳಿಂದ ಕೂಡಿದೆ. ನೋಡಲು ಗರಗಸದ ಚೂಪು ಹಲ್ಲಿನಂತೆ ಕಾಣುವ ಈ ಎಲೆಗಳ ಅಂಚು ತಾಗಿದರೆ ರಕ್ತ ಸೋರುವಷ್ಟು ಮೊನಚಾಗಿವೆ. ಇವು ಏಕಲಿಂಗಿಗಳಾಗಿವೆ. ಗಂಡು ಮತ್ತು ಹೆಣ್ಣು ಹೂಗೊಂಚಲುಗಳು ಪ್ರತ್ಯೇಕವಾಗಿರುವುದನ್ನು ಕಾಣಬಹುದು. ಗಂಡು ಹೂಗಳು ಗಾತ್ರದಲ್ಲಿ ಚಿಕ್ಕವಾದರೂ ಅನೇಕ ಕೇಸರಗಳನ್ನು ಹೊಂದಿವೆ. ಒಳಾವರಣದಲ್ಲಿ ತಿಳಿ ಬಿಳಿ ಹಾಗೂ ಹಳದಿ ಮಿಶ್ರಿತ ಎಸಳುಗಳುಳ್ಳ ಮಾರ್ಪಾಟಿತ ಎಲೆ (modified bract) ಗಳು ಸುವಾಸನೆಯುಕ್ತವಾಗಿವೆ. ಹೂಗುಚ್ಛದ ಮಧ್ಯಭಾಗದಲ್ಲಿನ ಕೇಸರದ ದಂಡನ್ನು ಸುತ್ತುವರೆದಿರುವ ಈ ಎಸಳುಗಳು ಗಂಡು ಭಾಗವನ್ನು ಪ್ರತಿನಿಧಿಸುತ್ತವೆ, ವಾಸ್ತವದಲ್ಲಿ ಹೆಣ್ಣು ಮಕ್ಕಳು ಮುಡಿಯುವ ಹಾಗೂ ಪೂಜೆಗೆಂದು ಬಳಕೆಯಾಗುವ ಕೇದಗೆ ಹೂ ಈ ಎಸಳುಗಳೇ ಆಗಿವೆ ಎಂಬುದು ಗಮನಾರ್ಹ. ಸುಮಾರು ಒಂದು ಮೀಟರ್‌ವರೆಗೂ ಉದ್ದದ ಪತ್ರಕಗಳು ಅಗಾಧ ಪರಿಮಳ ಹಾಗೂ ವಿಶಿಷ್ಟ ಸುವಾಸನೆಯಿಂದ ಆಕರ್ಷಕವಾಗಿವೆ. ಇನ್ನು ಹೆಣ್ಣು ಹೂಗುಚ್ಛವನ್ನು ಗಿಡದ ತುದಿಭಾಗದಲ್ಲಿ ನೋಡಬಹುದು. ಹೆಣ್ಣು ಹೂ ಭಾಗದಲ್ಲಿ 4-10 ಕಾರ್ಪೇಲ್‌ಗಳಿದ್ದು ಸುಮಾರು 8-10 ಸೆಂ,ಮೀ ಉದ್ದವಾಗಿವೆ. ಈ ಹೆಣ್ಣು ಭಾಗ ಕ್ರಮೇಣ ಬಲಿತು (ಅನಾನಸ್‌ನಂತೆ) ಸಂಯುಕ್ತ ಫಲವಾಗಿ ಕಾಣುತ್ತದೆ. ಸಾಮಾನ್ಯವಾಗಿ ಜುಲೈ ಅಕ್ಟೋಬರ್ ನಡುವನ ಕಾಲದಲ್ಲಿ ಇವು ಹೂ ಬಿಡುತ್ತವೆ. ಸಂಪೂರ್ಣ ಬಲಿತ ಗಿಡ ವರ್ಷದಲ್ಲಿ 30-35 ಹೂಗೊಂಚಲು (spike) ಗಳನ್ನು ಚಾಚಿ ಸುತ್ತಲೂ ಸುವಾಸನೆಯ ಕಂಪು ಬೀರುತ್ತದೆ.

 ಪಂಡಾನಸ್ ಜಾತಿಯ 600 ರಷ್ಟು ಪ್ರಭೇದಗಳ ಇರುವಿಕೆಯನ್ನು ಗುರುತಿಸಲಾಗಿದೆ. ಅದರಂತೆ ಭಾರತದಲ್ಲಿ ಕೇದಗೆಯ ಸುಮಾರು 35ಕ್ಕೂ ಹೆಚ್ಚು ಪ್ಪ್ರಭೇದಗಳನ್ನು ಕಾಣಬಹುದಾಗಿದೆ. ಅವುಗಳ ತಳಿವೈವಿಧ್ಯತೆ, ಸಸಿ ಮಾದರಿ, ಲಿಂಗ ಆಧರಿಸಿ ಅವುಗಳ ಬೆಳವಣಿಗೆ ವಿಭಿನ್ನವಾಗಿರುತ್ತದೆ. ಬೀಜ ಮೂಲದಿಂದ ಬೆಳೆದ ಕೇದಗೆ ಹೂ ಅರಳಲು 15 ವರ್ಷ ತೆಗೆದುಕೊಂಡರೆ, ಕಾಂಡದ ಕವಲು ಕತ್ತರಿಸಿ ನಾಟಿ ಮಾಡಿದ ಗಿಡ ಕೇವಲ 2-6 ವರ್ಷಗಳಲ್ಲಿ ಹೂ ಬಿಡಲು ಪ್ರಾರಂಭಿಸುತ್ತದೆ. ಅವುಗಳ ಬೆಳವಣಿಗೆಯ ದರವೂ ಕೂಡ ಅತೀ ವೇಗವಾಗಿದ್ದು ವಾರ್ಷಿಕ 50-80 ಸೆಂ,ಮೀಟರ್ ಆಗಿದೆ. ಬೀಜಗಳು ಹೊರಭಾಗದಲ್ಲಿ ಕೆಂಪುಕಂದು ಬಣ್ಣದ್ದಾಗಿದ್ದರೆ, ಒಳಬಾಗದಲ್ಲಿ ಬಿಳಿಯಾಗಿರುತ್ತವೆ. ಸುಮಾರು 6-20 ಮಿ.ಮೀಟರ್ ಅಳತೆಯ ಬೀಜಗಳು ದೀರ್ಘಅಂಡಾಕಾರ (elipsoid) ವಾಗಿರುತ್ತವೆ. ಲೈಂಗಿಕವಾಗಿ ಪಕ್ವಗೊಂಡ ಗಿಡವೊಂದು 1 ರಿಂದ 1.5 ಕಿ ಗ್ರಾಂ ತೂಕವಿರುವ 8-12 ಕಿತ್ತಳೆ ಬಣ್ಣದ ಹಣ್ಣುಗಳನ್ನು ಉತ್ಪತ್ತಿ ಮಾಡುತ್ತದೆ. ಇನ್ನು ಎಲೆಗಳ ಕೊಯ್ಲು ನಾಲ್ಕು ವರ್ಷಗಳ ನಂತರ ಮಾಡಬಹುದಾಗಿದೆ. ಆರೋಗ್ಯಯುತ ಗಿಡವೊಂದು ವಾರ್ಷಿಕ 10-90 ಎಲೆಗಳನ್ನು ಬಿಡುತ್ತದೆ. ಪಂಡಾನಸ್‌ಗಳ ಜೀವಿತಾವಧಿ 50-80 ವರ್ಷವೆಂದು ಅಂದಾಜಿಸಲಾಗಿದೆ.

 ಪಂಡಾನಸ್‌ನ ವಿವಿಧ ಭಾಗಗಳು ವಿವಿಧ ರಾಸಾಯನಿಕ ಘಟಕಗಳನ್ನು ಹೊಂದಿದ್ದು, ಬೇರು ಸ್ಟಿರಾಯ್ಡ್, ಫಿನಾಲ್, ಬೆಂಜೋಫಾರನ್, ಲಿಗ್ನಾನ್ ಹೊಂದಿದೆ. ಅದರ ರೈಜೋಮ್ ಭಾಗ ಪ್ಲೇವೊನ್, ಎಲೆಗಳು ಅಲ್ಕಲಾಯ್ಡ್ ಹಾಗೂ ಹಣ್ಣುಗಳು ವಿಟಾಮಿನ್‌ಗಳನ್ನು ಹೊಂದಿದೆ.

 ಇನ್ನು ಇದರ ಪರಿಮಳಭರಿತ ಎಲೆಗಳನ್ನು ಕೀಳಿದ ತಕ್ಷಣ ಸೂಕ್ತ ರೀತಿಯಲ್ಲಿ ಸಂಗ್ರಹಿಸಿ ತೈಲ ತಯಾರಿಕೆಗೆ ಬಳಸಲಾಗುತ್ತದೆ. ಈ ತೈಲವು 2-ಫಿನೈಥೈಲ್-ಮಿಥೈಲ್ ಇಥರ್, ಟೆರಪಿನೆನ್-4, ಪಿ-ಸೈಮೆನ್ ಮತ್ತು ಅಲ್ಫಾ ಟರ‍್ಫಿನಿಯಾಲ್ ಹೊಂದಿದ್ದು ಅದರ ಸುಗಂಧಭರಿತ ಪರಿಮಳ, ಸುವಾಸನೆಗೆ ಕಾರಣವಾಗಿದೆ. ಇದರಿಂದ ಅತ್ತರುಗಳು, ಸುಗಂಧದ್ರವ್ಯಗಳು ಸಾಬೂನುಗಳು ಇತ್ಯಾದಿಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ನಮ್ಮ ದೇಶದ ಪ್ರಸಿದ್ಧ ಗಂಜಮ್ ಕೇವುಡಾ ಹೂವಿಂದ ತಯಾರಿಸಲಾಗುವ ಸುಗಂಧ ತೈಲ ಎಲ್ಲೆಡೆ ಹೆಸರುವಾಸಿಯಾಗಿದೆ. ಓಡಿಸ್ಸಾದ ಗಂಜಮ್ ಜಿಲ್ಲೆಯ ಚತ್ರಪೂರ್, ಬ್ರಹ್ಮಪೂರ್ ಗೋಪಾಲ್‌ಪೂರ್ ಹಾಗೂ ಜಗನ್ನಾಥಪೂರ್ ಮುಂತಾದ ಕಡೆಗೆ ಈ ಕೇದಗೆಯಿಂದ ಪ್ರಸಿದ್ಧ ಕೇವುಡಾ ಸುಗಂಧತೈಲ ತಯಾರಿಸಲಾಗುತ್ತದೆ. ಈ ಭಾಗದಿಂದಲೇ ಶೇ 90-95 ರಷ್ಟು ಕೇದಗೆ ಹೂ ಎಲ್ಲೆಡೆ ರಪ್ತಾಗುತ್ತದೆ. ಇನ್ನುಳಿದಂತೆ ಎಲೆಗಳು ಚಾಪೆ, ತಟ್ಟೆ, ಬಟ್ಟಲು, ಪೊರಕೆ, ಛಾವಣಿ ಹೀಗೆ ನಾನಾ ರೀತಿಯ ಉಪವಸ್ತುಗಳ ತಯಾರಿಕೆಗೆ ನೆರವಾಗುತ್ತವೆ. ಇನ್ನು ಜ್ವರ,ಎದೆ ನೋವು, ನರರೋಗ, ಸ್ತ್ರೀರೋಗಗಳಲ್ಲಿ ಔಷಧಿಯಾಗಿಯೂ ಇದರ ಬಳಕೆಯಾಗುತ್ತದೆ ಎಂಬುದು ಆರ್ಯುವೇದದಲ್ಲಿ ತಿಳಿಯುತ್ತದೆ.

 

ಬಹುಪಯೋಗಿ ಕೇದಗೆಯನ್ನು ಹೆಣ್ಣು ಮಕ್ಕಳು ತಮ್ಮ ವೈವಿದ್ಯಮಯ ಕೇಶ ಶೃಂಗಾರದ ಸಾಧನವಾಗಿ ಮಾತ್ರ ಬಳಸುತ್ತಿದ್ದರಷ್ಟೇ ಅಲ್ಲ, ಕೆಲ ಆಚರಣೆಗಳು, ದೇವರ ಪೂಜೆಗೂ ಬಳಸುತ್ತಿದ್ದರು ಎಂಬುದು ತಿಳಿದು ಬರುತ್ತದೆ. ಸಾಂಪ್ರಾದಾಯಿಕ ಕುಟುಂಬಗಳಲ್ಲಿ ನಾಗಪೂಜೆಗೆ ಈ ಹೂವು ಬೇಕೆ ಬೇಕು. ಹಾಗಾಗಿ ಪಂಚಮಿ ಸಂದರ್ಭದಲ್ಲಿ ಇದಕ್ಕೆ ಬೇಡಿಕೆ ಹೆಚ್ಚು. ಇನ್ನು ಕೆಲ ದೇವರಿಗೆ ಈ ಹೂ ಪೂಜೆ ನಿಷಿದ್ಧ ಎಂಬುದು ಪೌರಾಣಿಕ ಹಿನ್ನಲೆಯಲ್ಲಿ ತಿಳಿದು ಬರುತ್ತದೆ. ಈ ಹೂವಿನ ಬಗ್ಗೆ ಕೆಲ ಕಥೆಗಳು ಬಾಯಿಯಿಂದ ಬಾಯಿಗೆ ಅನೇಕ ರೀತಿಯಲ್ಲಿ ಹರಿದಾಡಿ ಬಂದಿವೆ. ಈ ಕೇದಗೆ ವನದಲ್ಲಿ ಹಾವುಗಳು ಹೆಚ್ಚಾಗಿರುತ್ತವೆ ಎಂದು ಕೆಲವರು ಹೇಳುತ್ತಾರೆ. ಈ ದಟ್ಟವಾದ ಪೊದೆ ಇಂತಹ ವಿಷಜಂತುಗಳ ವಾಸಕ್ಕೆ ಹೇಳಿ ಮಾಡಿಸಿದ ಜಾಗ ಎಂಬುದು ಮೇಲ್ನೋಟಕ್ಕೆ ವೇದ್ಯವಾಗುವ ಸಂಗತಿ. ಹಾಗೂ ಇಲ್ಲಿ ಕೆಲ ಪಕ್ಷಿಗಳು ಮೊಟ್ಟೆ ಇಟ್ಟು ಮರಿ ಮಾಡುವಲ್ಲಿ ಇದು ಸೂಕ್ತ ಆಸರೆ ಒದಗಿಸುವ ಜಾಗ, ಹಾಗಾಗಿಯೇ ಈ ಮೊಟ್ಟೆ ಮರಿ ಇತ್ಯಾದಿ ಹುಡುಕಿ ಬರುವ ಹಾವುಗಳು ಇಲ್ಲಿ ಇರಲೇಬೇಕು. ಇದು ವೈಜ್ಞಾನಿಕ ಸತ್ಯ ಕೂಡಾ. ಅದೇನೆ ಇರಲಿ ಈ ಕೇದಗೆ ಹೂ ತನ್ನ ಸುಗಂಧಭರಿತ ಪರಿಮಳದಿಂದ ಎಲ್ಲರನ್ನು ಆಕರ್ಷಿಸಿ ತನ್ನ ವಿಶಿಷ್ಟ ಗುರುತನ್ನು ನಮ್ಮಲ್ಲಿ ಬಿಟ್ಟಿರುವುದು ಮಾತ್ರ ಸುಳ್ಳಲ್ಲ.

 ಆಕರಗಳು :

1) ಸುದ್ಧಿ ಪತ್ರಿಕೆಗಳ ಬಿಡಿ ಲೇಖನಗಳು

೨) Unique pandanus - Flower, food and medicine –Singh Gurmeet, Parle Amrita

೩) ಜಾಲತಾಣಗಳು

 ಲೇಖಕರು : ರಮೇಶ, ವಿ,ಬಳ್ಳಾ

 ಅಧ್ಯಾಪಕರು

 ಬಾಲಕಿಯರ ಸರ್ಕಾರಿ ಪ ಪೂ ಕಾಲೇಜು

 (ಪ್ರೌಢ) ಗುಳೇದಗುಡ್ಡ ಜಿ: ಬಾಗಲಕೋಟ

                                  Mobile: 9739022186

   


 

ವಿಸ್ಮಯ ವಿಜ್ಞಾನ

ವಿಸ್ಮಯ ವಿಜ್ಞಾನ




 





ಒಗಟುಗಳು ಜನವರಿ ೨೦೨೩

 ಜನವರಿ ತಿಂಗಳ ಒಗಟುಗಳು 

೧.  ಬದುಕಿದ್ದಾಗ  ಮಣ್ಣಲ್ಲಿ ಹೂಳುವರು ನನ್ನ 

ನಂತರ  ಅಗೆದು ಹೊರ ತೆಗೆಯುವರು ನನ್ನ 

ಆಹಾರ ಸಂಗ್ರಹಿಸಬಲ್ಲೆ 

ಬುದ್ದಿವಂತರು ಸುಳಿವ ಬಿಡಿಸಿ ಹೇಳಿ  ನನ್ನ ಗುರುತನ್ನು.


೨. ಪಂಜಾಬಿನ ರಾಯ್ ಪುರ್ ನಲಿ  ಜನವರಿಯಲಿ ಜನನ

ಬಡತನದ ಬೇಗೆಯಲೂ ಶಿಕ್ಷಕ ರತನಲಾಲರೇ  ಸ್ಫೂರ್ತಿ 

ವಂಶವಾಹಿಯ ರಹಸ್ಯ ಹೊರಗಡವಿದ ಸಂಶೋಧಕ 

ಹುಟ್ಟು ಸಾವಿನಲಿ ಬಿಡದ ಒಂಭತ್ತರ ನಂಟು 

ಗುರುತು ಸಿಕ್ಕಿತೇ? ಹೇಳಬಲ್ಲಿರೇ ವಿಶ್ವಮಾನ್ಯ ಹೆಮ್ಮೆಯ ಭಾರತೀಯನ?

 ೩.  ಒತ್ತಡ ಉಂಟು ಮಾಡಬಲ್ಲೆ ನಾ 

ವೇಗದಿ ಚಲಿಸಬಲ್ಲೆ 

ಉಷ್ಣಶಕ್ತಿಯು ಹೆಚ್ಚಿದಂತೆ ನನ್ನ ಚಲನೆಯೂ ಹೆಚ್ಚು

ತಂಪಾದಂತೆ ಆಕರ್ಷಣೆಯೂ ಹೆಚ್ಚು

ಅತಿ ಹೆಚ್ಚು ಗೊಂದಲದ ಸ್ಥಿತಿಯಂತೆ ನನ್ನದು

ಸುಳಿವ ಹಿಡಿದು ಜಾಣ ಜಾಣೆಯರೇ ಹೇಳಿರಿ ನನ್ನ ಕಥೆಯನ್ನು


೪. ನಾನೊಬ್ಬ  ಕಲನಶಾಸ್ತ್ರಪ್ರಿಯ  ವಿಜ್ಞಾನಿಯ ಹೆಸರಿನವ 

ನಾನಿಲ್ಲದೇ ಯಾವ ಚಲನೆಯೂ ಇಲ್ಲ

ರಾಶಿಯೊಂದಿಗೆ  ನಾ ನೇರಾನುಪಾತಿ

ವಿಸ್ತೀರ್ಣದ ಜೊತೆ ಗುಣಿಸಿದಿರೋ ನಾನವನಲ್ಲ!!

ಗುರುತು ಬದಲಿಸಿ ಹೆಸರನೂ ಬದಲಿಸಿ ಪ್ಯಾಸ್ಕಲನಾಗಬಲ್ಲೆ !!!

ಈ ಸವಾಲನು ಬಿಡಿಸಿ ಹೇಳಬಲ್ಲಿರೇ ನನ್ನ ಗುರುತು ?

    

    ರಚನೆ : ರಾಮಚಂದ್ರ ಭಟ್‌ ಬಿ.ಜಿ. 
















ಪದಬಂಧ ಜನವರಿ -23

  ಸವಿಜ್ಞಾನ  ಪದಬಂಧ 1/2023

1

 

 

 

 

 

2

 

2

 

 

 

3

3

 

 

 

 

 

 

4

 

 

 

5

 

 

 

4

 

 

 

 

5

 

 

6

 

 

 

7

 

 

 

8

 

 

 

7

 

 

 

 

 

6

 

 

 

 

 

8

 

 

 

ಸುಳಿವುಗಳು:

ಎಡದಿಂದ ಬಲಕ್ಕೆ:

1. ದಿಕ್ಕಿಲ್ಲದ್ದಲ್ಲ, ದಿಕ್ಕಿರುವ ಪರಿಮಾಣ (3)

2. ಹರಿಯುವ ನದಿಗೆ ಇರುವ ಶಕ್ತಿ (3)

3. ರಂಜಿಸುವುದಲ್ಲ ಹೊತ್ತಿ ಉರಿಯುವುದು (3)

4. ಭೂಮಿ ಒಂದು ಬಾರಿ ಪರಿಭ್ರಮಿಸಲು ತೆಗೆದುಕೊಳ್ಳುವ ಕಾಲವನ್ನು ಹೀಗೆನ್ನುವರು (2)

5. ಸ್ವಯಂ ಪ್ರಕಾಶಿಸುತ್ತಾ ನಮಗೂ ಪ್ರಕಾಶ ಬೀರುವ ಕಾಯ (2)

6. ರಾಟೆ, ಇಳಿಜಾರು, ಇಕ್ಕಳ ಇವುಗಳು ಎಂಥಾ ಯಂತ್ರಗಳು ? (3)

7. ಶಬ್ದ ಉತ್ಪತ್ತಿಗೆ ಕಾರಣ (3)

8. ಈ ಅನಿಲವನ್ನು ಬಾಯಿಯಿಂದ ಒಳ ತೆಗೆದುಕೊಂಡು ಹಾಡಿದರೆ ಎಂಥಾ ಸಂಗೀತಗಾರನದೂ ಕೀರಲುಧ್ವನಿ (2)

ಮೇಲಿನಿಂದ ಕೆಳಕ್ಕೆ:

1.    ಉಸಿರಾಟ, ಪೋಷಣೆ, ಸಂತಾನೋತ್ಪತ್ತಿ ಮುಂತಾದ ಲಕ್ಷಣಗಳಿರುವುದು ಇದಕ್ಕೆ (3)

2.   ಸ್ವಯಂ ಪ್ರಕಾಶದ ಆಕಾಶಕಾಯ (3)

3.   ಯಮನಲ್ಲ ಚಲಿಸಿದ ದೂರದ ದರ (2)

4.   ಅಗತ್ಯ ಕೆಡುಕು (3)

5.   ದೃಷ್ಟಿದೋಷದ ನಿವಾರಣೆಗೆ ಬಳಸುವುದು(3)

6.   ಬಲ ಮತ್ತು ಸ್ಥಾನಪಲ್ಲಟದ ಗುಣಲಬ್ಧ (3)

7.   ಅಯ್ಯೋ ಪಾಪ ಎಷ್ಟೊಂದು ಜ್ವರ ಇದೆ ಅನ್ನಲು ಅಳೆಯಬೇಕಾದ್ದು(2)

8.   ಪರಮಾಣು ಸಂಖ್ಯೆ 56 ರ ಧಾತು ಜೀರ್ಣಾಂಗವ್ಯೂಹಗಳ ಎಕ್ಸ-ರೇ ತೆಗೆಯುವಲ್ಲಿ ಬಳಕೆಯಾಗುತ್ತದೆ (3)

                           ರಚನೆ: ವಿಜಯಕುಮಾರ್‌ ಹುತ್ತನಹಳ್ಳಿ. 

 ಪದಬಂಧ ಡಿಸೆಂಬರ್‌ 2022 ರ ಉತ್ತರ.

1ವಿ

ಕ

ರ್ಷ

ಣೆ

 

 

 

 

 

2ರಿ

ಕ್ಟ

ರ್

ಮಾ

ಪ

ನ2

ದ್ಯು

 

 

 

 

 

 

 

 

 

 

 

 

 

ಡು

ದ್ದ

 

 

 

 

 

 

 

 

 

 

 

 

 

ಕ

ರ್ಶ

 

 

 

 

 

 

 

 

 

 

 

 

 

 

ಕ

 

 

 

 

 

3ಚಂ

 

4ಕಂ

ಬ

ಳಿ

 

 

 

 

 

 

 

 

 

 

ಡ

 

ಪ

 

 

 

 

 

 

 

 

 

3ಭೂ

ಕಂ

ಪ

ಮಾ

ಪ

ನ

 

 

 

 

 

 

 

 

 

 

 

 

ರು

 

ರ

 

 

 

 

 

 

5ಆ

ಕ

ರ್ಷ

ಣೆ

 

 

ತ

 

ಹಿ

 

 

 

 

 

 

ವೇ

 

 

 

 

 

 

 

ತ

 

 

 

 

 

 

ಶ

 

 

 

 

 

 

 

 

 

 

 

 

 

7ಬಿ

ಭ

 

 

6ಸು

 

 

 

 

 

 

 

 

 

 

ರು

ರಿ

ಕಾ

ಶ

ನಾ

6ವಿ

 

 

 

 

 

 

 

 

 

ಗಾ

ತ

 

 

ಮಿ

 

 

 

 

 

 

 

 

 

7ಗಾ

ಳಿ

ಸವಿಜ್ಞಾನ