ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Sunday, April 4, 2021

ಸವಿಜ್ಞಾನ ಇ-ಪತ್ರಿಕೆಯ ಏಪ್ರಿಲ್ - 2021ರ ಲೇಖನಗಳು

ಸವಿಜ್ಞಾನ ಇ-ಪತ್ರಿಕೆಯ ಏಪ್ರಿಲ್ - 2021ರ ಲೇಖನಗಳು

ಸಂಪಾದಕರ ಡೈರಿಯಿಂದ - ಡಾ. ಟಿ.ಎ. ಬಾಲಕೃಷ್ಣ ಅಡಿಗ

ನಿಸರ್ಗದ ಎಲ್ಲೆಡೆ ಇದೆ ಈ ಸುವರ್ಣ ಅನುಪಾತ - ಡಾ. ಟಿ.ಎ. ಬಾಲಕೃಷ್ಣ ಅಡಿಗ

E-ವೇಸ್ಟ್ ಮ್ಯಾನೇಜ್ಮೆಂಟ್ - ಗಜಾನನ ಭಟ್ 

ಗಣಿತವನ ವಿಹಾರವಿಜಯ್ ಕುಮಾರ್ ಹುತ್ತನಹಳ್ಳಿ

ರಸಾಯನ ವಿಜ್ಞಾನ ಬೋಧನೆಯ ಮೂಲಕ ಬೆಳೆಸಬಹುದಾದ ಮೌಲ್ಯಗಳು - ರಾಮಚಂದ್ರಭಟ್‌ ಬಿ.ಜಿ.

ವಿಶ್ವ ಭೂ ದಿನ ಕುರಿತ ವಿಶೇಷ ಲೇಖನ - ಡಾ. ಡಿ. ಆರ್. ಪ್ರಸನ್ನ ಕುಮಾರ್ 

ಸಿಗರೇಟು ಎದಿರೇಟುಶ್ರೀಧರ ಮಯ್ಯ ಎಂ.ಎನ್

ಮೆಗ್ನೀಷಿಯಂನ ಕಥೆ - ಎ. ಶ್ರೀನಿವಾಸ್

ಅಪೇಕ್ಷೆ (ಕವನ) -  ಜಯಶ್ರೀ ಶರ್ಮ

ಸಂಪಾದಕರ ಡೈರಿಯಿಂದ

ಸಂಪಾದಕರ ಡೈರಿಯಿಂದ

ಏಪ್ರಿಲ್ ತಿಂಗಳು ಬಂತೆಂದರೆ ನಾಡಿನಲ್ಲೆಲ್ಲಾ ಉಗಾದಿಯ ಸಂಭ್ರಮ. ವಸಂತ ಋತುವಿನ ಆಗಮನದೊಂದಿಗೆ ವನಗಳೆಲ್ಲ ಚಿಗುರಿ ಹಸಿರಾಗಿ ನಳ ನಳಿಸುತ್ತಿರುತ್ತವೆ. ಹೂ ಬಿಟ್ಟ ಗಿಡ, ಮರ ಬಳ್ಳಿಗಳಿಂದ ವರ್ಣರಂಜಿತವಾಗಿ ಕಾಣುವ ನಿಸರ್ಗದ ಸೌಂದರ್ಯವನ್ನು ಆಸ್ವಾದಿಸುತ್ತಾ ಸುಖ ದುಃಖಗಳನ್ನು ಸಮಾನವಾಗಿ ಸ್ವೀಕರಿಸುವ ಸಂಕೇತವಾಗಿ ಬೇವು, ಬೆಲ್ಲವನ್ನು

ತಿಂದು ನವ ಸಂವತ್ಸರವನ್ನು ಬರಮಾಡಿಕೊಳ್ಳೋಣ. ಸವಿಜ್ಞಾನದ ಎಲ್ಲ ಆತ್ಮೀಯ ಓದುಗರಿಗೆ ಸಂಪಾದಕ ಮಂಡಳಿಯ ಹಾರ್ದಿಕ ಶುಭಾಶಯಗಳು.

ಪರಿಸರದ ದೃಷ್ಟಿಯಿಂದಲೂ ಏಪ್ರಿಲ್ ಮಹತ್ವದ ತಿಂಗಳು. ಭೂಮಿಗೆ ಬಂದೊದಗಿರುವ ಆಪತ್ತನ್ನು ಗಮನದಲ್ಲಿಟ್ಟುಕೊಂಡು, ಭೂಮಿಯ ಪ್ರಸಕ್ತ ಪರಿಸ್ಥಿತಿಯ ಬಗ್ಗೆ ಚಿಂತನೆ ನಡೆಸುವ  ನಿಟ್ಟಿನಲ್ಲಿ, ಈ ತಿಂಗಳ ೨೨ರಂದು ‘ವಿಶ್ವ ಭೂ ದಿನ'ವನ್ನು ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ, ‘ಸವಿಜ್ಞಾನ”ದ ಈ ಸಂಚಿಕೆಯಲ್ಲಿ ನಮ್ಮನ್ನು ಆತ್ಮಾವಲೋಕನಕ್ಕೆ ಪ್ರೇರೇಪಿಸುವ

“ಭೂಮಿ ಎಂದರೆ ಏನರ್ಥ?” ಎಂಬ ವಿಶೇಷ ಲೇಖನವಿದೆ. ಓದಿ ನಿಮ್ಮ ಪ್ರತಿಕ್ರಿಯೆ ತಿಳಿಸಿ. ಜೊತೆಗೆ, ನಿಸರ್ಗದಲ್ಲಿ ಕಂಡು ಬರುವ ಅಚ್ಚರಿಯ ಸುವರ್ಣ ಅನುಪಾತದ ಬಗ್ಗೆ, ಇ-ತ್ಯಾಜ್ಯ ನಿರ್ವಹಣೆಯ ಬಗ್ಗೆ, ಹಾಗೂ ರಸಾಯನಶಾಸ್ಟ್ರ ಬೋಧನೆಯಲ್ಲಿರುವ ಮೌಲ್ಯಗಳ ಬಗ್ಗೆ ಲೇಖನಗಳಿವೆ. ಅಲ್ಲದೆ, ಮೆಗ್ನೀಷಿಯಂ ಬಗ್ಗೆ, ಸಿಗರೇಟಿನ ಬಗ್ಗೆ ಕುತೂಹಲಕಾರಿ

ಲೇಖನಗಳಿವೆ. ಇನ್ನೊಂದು ವಿಶೇಷವೆಂದರೆ, ಕಳೆದಸಂಚಿಕೆಯಲ್ಲಿ ನಾವು ಪರಿಚಯಿಸಿದ ವಿಶಿಷ್ಟ ವ್ಯಕ್ತಿ, ವಿ.ಎಸ್.ಎಸ್.ಶಾಸ್ತ್ರಿ ಅವರ ಕ್ರಿಯಾಶೀಲತೆಗೆ ಸಾಕ್ಷಿಯಾದ ‘ ಗಣಿತವನ ‘ ದ ಪರಿಚಯ ಲೇಖನವಿದೆ. ಎಂದಿನಂತೆ, ವಿಜ್ಞಾನಕ್ಕೆ ಸಂಬಂಧಿಸಿದ ಒಗಟುಗಳು ಮತ್ತು ವ್ಯಂಗ್ಯ ಚಿತ್ರಗಳು ನಿಮ್ಮನ್ನು ರಂಜಿಸಲಿವೆ.

‘ಸವಿಜ್ಞಾನ ’ ಕ್ಕೆ ನೀವು ಕಳೆದ ಮೂರು ತಿಂಗಳಿನಿಂದ ತೋರಿಸುತ್ತಿರುವ ಸಕಾರಾತ್ಮಕ ಪ್ರತಿಕ್ರಿಯೆ, ಅಭೂತಪೂರ್ವ. ಮುಂದಿನ ಸಂಚಿಕೆಗಳು ಇನ್ನಷ್ಟು ಕುತೂಹಲಕಾರಿ, ಹಾಗೂ ಸತ್ವಯುತ ಲೇಖನಗಳಿಂದ ಕೂಡಿರುತ್ತದೆ ಎಂಬ ಭರವಸೆ ನಮ್ಮದು. ನಿಮ್ಮ ಸಲಹೆ, ಸೂಚನೆಗಳಿಗೆ ಸದಾ ಸ್ವಾಗತ. 


ಡಾ. ಟಿ.ಎ.ಬಾಲಕೃಷ್ಣ ಅಡಿಗ

ಪ್ರಧಾನ ಸಂಪಾದಕರು 

ನಿಸರ್ಗದೆಲ್ಲೆಡೆ ಇದೆ ಈ ಸುವರ್ಣ ಅನುಪಾತ !

 ನಿಸರ್ಗದೆಲ್ಲೆಡೆ ಇದೆ ಈ ಸುವರ್ಣ ಅನುಪಾತ !

ಡಾ. ಟಿ.ಎ.ಬಾಲಕೃಷ್ಣ ಅಡಿಗ 

ನಿವೃತ್ತ ಪ್ರಾಂಶುಪಾಲರು ಮತ್ತು ವಿಜ್ಞಾನ ಸಂವಹನಕಾರರು








ನೀವು ಎಂದಾದರೂ ಹೂವಿನ ದಳಗಳ ಜೋಡಣೆಯನ್ನು ಆಸಕ್ತಿಯಿಂದ ಗಮನಿಸಿದ್ದೀರಾ? ಉದಾಹರಣೆಗೆ, ಸೂರ್ಯಕಾಂತಿ ಹೂವಿನ ಒಳಗೆ ಹುದುಗಿರುವ ಬೀಜಗಳ ಚಿತ್ತಾರದಲ್ಲಿ ವಿಶೇಷವನ್ನೇನಾದರೂ ಕಂಡಿದ್ದೀರಾ? ಜೇನುಗೂಡಿನಲ್ಲಿನ ರಚನೆಯ ವೈಶಿಷ್ಟ್ಯವನ್ನೇನಾದರೂ ಗಮನಿಸಿದ್ದೀರಾ? ಮೃದ್ವಂಗಿಗಳ ಚಿಪ್ಪಿನಲ್ಲಿ ಏನಾದರೂ ವಿಶೇಷತೆ ಇದೆ ಎಂದೆನಿಸಿದೆಯೇ? ಯಾವಾಗಲಾದರೂ ಒಮ್ಮೆ ಒಂದು ಬಹು ಮಹಡಿ ಕಟ್ಟಡದ ಕೊನೆಯ ಅಂತಸ್ತಿನ ತಾರಸಿಯಲ್ಲಿ ನಿಂತು ಅಲ್ಲಿಂದ ಕೆಳಗೆ ಕಾಣುವ ಎತ್ತರದ ಮರಗಳಲ್ಲಿ ಕೊಂಬೆಗಳ ಜೋಡಣೆಯ ಚಿತ್ತಾರವನ್ನು ಗಮನವಿಟ್ಟು ನೋಡಿದ್ದೀರಾ? ಇದೆಲ್ಲಾ ಇರಲಿ, ಎಂದಾದರೂ ನಿಮ್ಮ ಅಂಗೈಯನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿದ್ದೀರಾ?

Saturday, April 3, 2021

ಇ-ವೇಸ್ಟ್ ನಿರ್ವಹಣೆ - ನಮಗಿರಲಿ ಬದ್ಧತೆ

 ಇ-ವೇಸ್ಟ್ ನಿರ್ವಹಣೆ - ನಮಗಿರಲಿ ಬದ್ಧತೆ 

ಲೇಖಕರು: ಗಜಾನನ ಎನ್. ಭಟ್.( ಹವ್ಯಾಸಿ ಲೇಖಕರು, ವಿಜ್ಞಾನ ಶಿಕ್ಷಕರು)

                ಸರಕಾರಿ ಪ್ರೌಢಶಾಲೆ, ಉಮ್ಮಚಗಿ

                ಯಲ್ಲಾಪುರ ತಾ. ಶಿರಸಿ, ಉತ್ತರ ಕನ್ನಡ



ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವ ಆಧುನಿಕ ಮಾನವ ತನ್ನ ಜೀವನ ಕ್ರಮವನ್ನು ಅತ್ಯಂತ ಸರಳಗೊಳಿಸಿಕೊಂಡಿದ್ದಾನೆ. ಬಹುತೇಕ ಕೆಲಸಗಳಿಗೆ ತನ್ನ ಬೆರಳ  ತುದಿಯ ಆದೇಶಕ್ಕನುಗುಣವಾಗಿ ಕಾರ್ಯ ನಿರ್ವಹಿಸುವ ಯಂತ್ರಗಳನ್ನು ರೂಪಿಸಿಕೊಂಡಿದ್ದಾನೆ. ಇದರಿಂದ ತನ್ನ ಜೀವನವನ್ನು ಸರಳ ಹಾಗೂ ಸುಲಲಿತವಾಗಿ ಮಾರ್ಪಡಿಸಿಕೊಂಡಿದ್ದಾನೆ. ಪ್ರತಿ ವರ್ಷ ಹೊಸ ವಿನ್ಯಾಸ ಪಡೆಯುವ ಯಂತ್ರಗಳು ಮಾನವನ ಸೇವೆಗೆ ಸದಾ ಸಿದ್ಧವಾಗಿ ಮಾರುಕಟ್ಟೆ ತಲುಪುತ್ತಿವೆ. ಇವೆಲ್ಲಾ ಉತ್ತಮ ಬೆಳವಣಿಗೆಗಳಾದರೂ, ಇವುಗಳಿಂದ ಉಂಟಾಗುತ್ತಿರುವ ತ್ಯಾಜ್ಯಗಳನ್ನು ನಿರ್ವಹಣೆ ಮಾಡುವುದು ಒಂದು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ.

 

ವನವಿಹಾರ!

 ವನವಿಹಾರ!

ಬರಹ: ವಿಜಯಕುಮಾರ್‌ ಹುತ್ತನಹಳ್ಳಿ

ಸಹ ಶಿಕ್ಷಕರು

.ಪ್ರೌ.ಶಾಲೆಕಾವಲ್‌ ಭೈರಸಂದ್ರ.

ಬೆಂಗಳೂರು ಉತ್ತರ ವಲಯ  3

ವಿದ್ಯಾ: ಹೇ ವಿನಯ್‌, ಗಣಿತ ಲೆಕ್ಕಗಳನ್ನು ಮಾಡಿ ಮಾಡಿ ಬೇಜಾರಾಗ್ತಿದೆ, ಬಾರೋ ಹೀಗೇ ಪಾರ್ಕ್‌ ನಲ್ಲಿ ಒಂದು ಸುತ್ತು ಹಾಕ್ಕೊಂಡು ಬರೋಣ ಹಾಯಾಗಿ.

ವಿನಯ್‌: ಓ! ಹೌದಾ? ಹಾಗಾದರೆ ಗಣಿತ ಪಾರ್ಕ್‌ ಅಂದರೆ ಗಣಿತವನದಲ್ಲೇ ಸುತ್ತಾಡಿಕೊಂಡು ಬರೋಣ ಬಾ.

ವಿದ್ಯಾ: ಏನು? ಗಣಿತವನಾನ? ಹಾಗಂದರೆ ಏನೋ? ಎಲ್ಲಿರುತ್ತೋ ಅಂತಹ ವನ? ನಾನು ಗಣಿತ ಸಮಸ್ಯೆಗಳನ್ನು ಬಿಡಿಸಿ ಬೋರಾಯ್ತು ಪಾರ್ಕ್‌ ಗೆ ಹೋಗಿ ಸುತ್ತಾಡಿಕೊಂಡು ಬರೋಣ ಅಂದರೆ, ಅಲ್ಲೂ ಗಣಿತ ಅಂತಿಯಲ್ಲಾ?

ರಸಾಯನ ವಿಜ್ಞಾನ ಬೋಧನೆಯ ಮೂಲಕ ಬೆಳೆಸಬಹುದಾದ ಮೌಲ್ಯಗಳು

ರಸಾಯನ ವಿಜ್ಞಾನ ಬೋಧನೆಯ ಮೂಲಕ ಬೆಳೆಸಬಹುದಾದ ಮೌಲ್ಯಗಳು


ಲೇಖಕರು:
    ರಾಮಚಂದ್ರ ಭಟ್ ಬಿ.ಜಿ.
ವಿಜ್ಞಾನ ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ, ಬ್ಯಾಟರಾಯನಪುರ,
ಮೈಸೂರು  ರಸ್ತೆ, ಬೆಂಗಳೂರು

The Meeting of two personalities is like the contact of two chemical substances: if there is any reaction both are transformed.  

-  Carl Jung

 ಸ್ವೀಡನ್ನಿನ ಖ್ಯಾತ ಮನೋವಿಜ್ಞಾನ ವಿಶ್ಲೇಷಕ ಕಾರ್ಲ್ ಜಂಗ್ ಹೇಳುವ ಈ ಮಾತುಗಳು ಎಷ್ಟು ಸತ್ಯ ಅಲ್ವಾ?

 ನಾವು ವಿದ್ಯಾರ್ಥಿಗಳಿಗೆ ಕಲಿಸಿದ್ದಕ್ಕಿಂತ ಕಲಿತದ್ದೇ ಹೆಚ್ಚು !!!  ಅದಕ್ಕೇ ಅಲ್ಲವೇ  ವಿಲಿಯಂ ವರ್ಡ್ಸವರ್ಥ್ ಹೇಳಿದ್ದು    child is the father of man ಅಂತ.  ತರಗತಿಯಲ್ಲಿ ನಡೆಯುವ  ಬೋಧನಾ ಪ್ರಕ್ರಿಯೆ, ನಮಗೆ  ಹಲವಾರು ಒಳನೋಟಗಳನ್ನು ನೀಡುವುದಲ್ಲದೆ, ಹೊಸ ಚಿಂತನಾ ವಿಧಾನಗಳ ಸ್ಫುರಣೆಗೆ ಕಾರಣವಾಗುತ್ತದೆ. ಬೋಧನಾ ವಿಷಯದ ಒಳಹೊಕ್ಕು ನೋಡಿದಾಗ ವಿಷಯ ಸ್ಫುರಣದೊಂದಿಗೆ ಮನಸ್ಸಿನಲ್ಲಿ ಮೂಡುವ ಭಾವ ತರಂಗಗಳು ಮೌಲ್ಯಗಳಾಗಿ ಅರಳುವ ಪ್ರಕ್ರಿಯೆ ಮೊಟ್ಟೆಯೊಡೆದು ಕಂಬಳಿಹುಳು ಲಾರ್ವಾಗಳು ಪಾತರಗಿತ್ತಿಯಾಗಿ ಬದಲಾಗುವ ರೂಪಪರಿವರ್ತನಾ ಪ್ರಕ್ರಿಯೆಯಂತೆ ಅನಿಸದೇ?

ಭೂಮಿ ಅಂದರೆ ಏನರ್ಥ?

ಭೂಮಿ ಅಂದರೆ ಏನರ್ಥ?

ಲೇಖಕರು: ಡಾ. ಡಿ. ಆರ್. ಪ್ರಸನ್ನಕುಮಾರ್
ಪರಿಸರ ಶಿಕ್ಷಣದ ಹವ್ಯಾಸಿ ಲೇಖಕರು




ಸುಮಾರು ೫೦ ವರ್ಷಗಳ ಹಿಂದೆ ಆರಂಭವಾದ ಭೂ ದಿನದ ಆಚರಣೆ, ಅದರ ಹಿಂದಿನ ಕಥೆ, ಆನಂತರದ ಬೆಳವಣಿಗೆಗಳು ಅದರಿಂದುಂಟಾದ ಪರಿಣಾಮಗಳು ಎಲ್ಲವನ್ನು ಕ್ಷಣಕಾಲ ಪಕ್ಕಕ್ಕಿಡೋಣ. ನನ್ನ ಪ್ರಶ್ನೆ ‘ಭೂಮಿ ಎಂದರೆ ನಿಮ್ಮ ವ್ಯಾಖ್ಯಾನವೇನು?

ಭೂಮಿ ನಮಗೆ ಶಾಲೆಯಲ್ಲಿ ಪರಿಚಯವಾದದ್ದು ‘ಭೂಮಿ ಒಂದು ಗ್ರಹ’ ಎಂದೇ ಹೌದಲ್ಲವೇ? ಅಂದು ಭೂಮಿ ನಮ್ಮ ತಾಯಿ ಎಂದೋ, ಎಲ್ಲ ಜೀವಿಗಳೂ ನಮ್ಮ ಸಹ-ಉದರಿಗಳೆಂದೋ ಏಕೆ ಕಲಿಯಲಿಲ್ಲಾ? ಭಾವನೆ ಮತ್ತು ಕಲಿಕೆಯನ್ನು ಬೇರೆ ಬೇರೆಯಾಗಿ ನೋಡುವ ಅನಿವರ‍್ಯತೆ ಇತ್ತೇ? ಭೂಮಿ ಎಂದರೆ ನಮ್ಮಲ್ಲಿ ಸ್ಫುರಿಸುವ ಭಾವವೇನು? ಆ ಭಾವಕ್ಕೆ ಕಾರಣವೇನು? ನಮ್ಮ ಭಾವನೆ ನಮ್ಮ ಆಚರಣೆಗಳನ್ನು ಪ್ರಭಾವಿಸುತ್ತಿದೆಯಾ ಅಥವಾ ಭಾವನೆಯೇ ಬೇರೆ, ಬದುಕೇ ಬೇರೆ ಎಂಬಂತೆ ಬದುಕುತ್ತಿರುವೆವೋ ಎಂಬ ಸಣ್ಣ ಸಣ್ಣ ಸಂಶಯಗಳನ್ನು ತೊಡೆದುಹಾಕುವ ಮತ್ತು ನಮ್ಮ ದ್ವಂದ್ವಗಳನ್ನು ಮೀರುವ ಪ್ರಯತ್ನ ಈ ಲೇಖನ. ಯಾವುದೇ ಉಪದೇಶವಾಗಲೀ, ಆದೇಶಗಳಾಗಲೀ ನಮ್ಮನ್ನು ಬದಲಿಸದಾದಾಗ, ಅಂತರಂಗದ ಧ್ವನಿ ಬದಲಿಸಬಹುದು ಎಂಬ ವಿಶ್ವಾಸ. ಅಂತಹ ವಿಶ್ವಾಸಗಳೇ ಪರಿಸರ ಜಾಗೃತಿಯ ಜೀವಾಳ.

ಸಿಗರೇಟು ಎದುರೇಟು

ಸಿಗರೇಟು ಎದುರೇಟು

ಶ್ರೀಧರ ಮಯ್ಯ ಎಂ.ಎನ್, M.Sc., B.Ed, 

ಸಹ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಗುತ್ತೂರು, 

ಹರಿಹರ ತಾ|| ದಾವಣಗೆರೆ ಜಿ!


ಮಹೇಶ್ ನನ್ನ ಬಾಲ್ಯ ಸ್ನೇಹಿತ. ಇವನ ದುಶ್ಚಟವೆಂದರೆ ಸಿಗರೇಟು ಸೇವನೆ, ಕೆಮ್ಮು ಹೆಚ್ಚಾಗಿದೆ ಎಂದು ಡಾಕ್ಟರ್ ಬಳಿ ಹೋಗಿದ್ದಕ್ಕೆ ಡಾಕ್ಟರ್ ಹೇಳಿದ್ದು “ಅಸ್ತಮಾದ ಜೊತೆಗೆ ಕ್ಷಯ ಅಟ್ಯಾಕ್ ಆಗಿದೆ” ಅಂತ.

ಮೆಗ್ನೀಸಿಯಂ ಮಹಾತ್ಮೆ

 ಮೆಗ್ನೀಸಿಯಂ ಮಹಾತ್ಮೆ

ಎ. ಶ್ರೀನಿವಾಸ್ 

ಸರ್ಕಾರಿ ಪ್ರೌಢಶಾಲೆ, ಮುತ್ತೂರು,

ಶಿಡ್ಲಘಟ್ಟ (ತಾ)ಚಿಕ್ಕಬಳ್ಳಾಪುರ (ಜಿ).


“ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ” ಡಿ.ವಿ.ಜಿ ವಾಣಿಯಂತೆ, ಚಿನ್ನದಾತುರಕ್ಕೆ ಬಿದ್ದ ರಸ ವಿಜ್ಞಾನಿಗಳು ವಿಶ್ವದಾದ್ಯಂತ ರಸಮಣಿಯ (philosopher’s stone) ಶೋಧದಲ್ಲಿ ತೊಡಗಿದ್ದಾಗ, ಈ ಶೋಧವು ಹಲವು ಆಯಾಮಗಳಲ್ಲಿ ಮುಂದುವರೆದು ವಿಸ್ಮಯ ಆವಿಷ್ಕಾರಗಳಿಗೆ ನಾಂದಿಯಾಯಿತು.

ಅಪೇಕ್ಷೆ

ಅಪೇಕ್ಷೆ

ಹಾಡುತಿಹಳು ಧರಿತ್ರಿ

ನೊಂದು ಬೆಂದು ಬಸವಳಿದ

ಬಾಳಗೀತೆ

ಕೇಳದೇನು ಅವಳ ಬತ್ತಿದೆದೆಯ

ಭಾವಗೀತೆ...?

ಅವಳೊಡಲ ಜೀವನಾಳಗಳಾಗಿ

ಜೀವಜಂತುಗಳಿಗೆ

ಅಮೃತಸಿಂಚನಗೈವ

ಜಾಲನಿಧಿಗಳು

ಬಳಲಿ ಬಾಯರಿವೆಯಲ್ಲ...

ಒಣಗಿ ಸೊರಗಿ ಕಾದಿವೆ

ನೀರ ಹನಿಗಳ ಸ್ಪರ್ಶಕ್ಕೆ

ಎರೆಯಬಹುದಲ್ಲ ಆಗಸವೆ

ಎರಡು ಹನಿ ನೀರ...?

ಒಣಗಿದ ಅವನೀ ಹೃದಯವ

ತಣಿಸ ಬಾರ.

- ಜಯಶ್ರೀ ಶರ್ಮ