ಒಗಟುಗಳು - ಮಾರ್ಚ್ 2022
ನಾನು ಒಂದು ಸಾಧನ
ವಿವಿಧ ಮಂಡಲಗಳಲ್ಲಿ ಬಳಸಲ್ಪಡುತ್ತೇನೆ
ನಾನು ಒಂದು ಮಂಡಲದಲ್ಲಿ ವಿದ್ಯುತ್ ಪ್ರವಾಹದ ದಿಕ್ಕನ್ನು ಹಿಮ್ಮುಖಗೊಳಿಸುತ್ತೇನೆ.
ಹಾಗಿದ್ದಲ್ಲಿ ನಾನು ಯಾರು ?
ವಿದ್ಯುತ್ ಶಕ್ತಿ ನಿನ್ನ ಲೀಲೆ ಅಪಾರ,
ನಿನ್ನಿಂದ ನಮ್ಮ ಜೀವನ ಸುಲಲಿತ,
ಆಧುನಿಕ ಜೀವನದ ಒಂದು ಅವಿಭಾಜ್ಯ ಅಂಗ ನೀ
ಅತ್ಯಲ್ಪ ಪ್ರವಾಹದ ಉಪಸ್ಥಿತಿಯನ್ನು ಕಂಡುಹಿಡಿಯುವ ಸಾಧನದ ಹೆಸರನ್ನು ಹೇಳಬಲ್ಲಿರಾ ?
ಕತ್ತಲನ್ನು ಓಡಿಸುವ ಬೆಳಕು
ನಮ್ಮ ಜೀವನವನ್ನು ವರ್ಣರಂಜಿತವಾಗಿರುತ್ತದೆ.
ಬೆಳಕಿನ ವಿದ್ಯಮಾನಗಳು ಆಪಾರ
ಕೆರೆ ತಳಭಾಗದಲ್ಲಿ ಕಲ್ಲು ಮೇಲೆ ಬಂದಂತೆ
ಕಾಣುವ ನನ್ನ ವಿದ್ಯಮಾನದ ಹೆಸರೇನು ?
ಸುಮಂಗಲಿಯರ ದೈತಲೆಯಲ್ಲಿ ರಾರಾಜಿಸುವ ಕುಂಕುಮ ನಾನು
ಅಪಾಯದ ಸಂಕೇತವನ್ನು ಬಿಂಬಿಸುತ್ತೇನೆ
ನನ್ನನ್ನು ಆಂಬುಲೆನ್ಸ್ ಮೇಲೆ ಇಟ್ಟಿರುತ್ತಾರೆ.
ಸಂಚಾರಿ ನಿಯಂತ್ರಣ ದೀಪಗಳಲ್ಲಿ ನನ್ನದೇ ದರ್ಬಾರು
ನನ್ನ ಬಣ್ಣದ ಬಳಕೆಗೆ ಕಾರಣ ಹೇಳಬಲ್ಲಿರಾ ?
ಇಡೀ ಬ್ರಹ್ಮಾಂಡದಲ್ಲಿ ಸಕಲ ಜೀವರಾಶಿಯನ್ನು ಹೊಂದಿರುವ ನಾನು,
ಹಲವಾರು ವೈಶಿಷ್ಟ್ಯತೆಗಳನ್ನು ಒಳಗೊಂಡಿರುವ ಅಗರ
ನನ್ನ ಒಡಲಿನಲ್ಲಿ ಒಂದು ವಿಶಿಷ್ಟ ಅಸಂಪ್ರದಾಯಕ ಶಕ್ತಿಯನ್ನು ಹೊಂದಿರುವ
ಹಾಗಾದರೆ ನನ್ನ ಹೆಸರೇನು?
ಶ್ರೀಮತಿ ಬಿ.ಎನ್. ರೂಪ
ಸಹಶಿಕ್ಷಕರು,
ಸರ್ಕಾರಿ ಉರ್ದು ಮತ್ತು ಆಂಗ್ಲ ಪ್ರೌಢ ಶಾಲೆ ಗೋರಿಪಾಳ್ಯ,
ಬೆಂಗಳೂರು ದಕ್ಷಿಣ ವಲಯ 2
ಗಿಡವಿದು ನೋಡಲು ಆಕರ್ಷಕ
ಅವರ ನಿಜವಾಗಲೂ ನಯವಂಚಕ
ಹತ್ತಿರ ಬರುವ ಹುಳಗಳ ನುಂಗುವುದು
ಹಾಗಾದರೆ ಯಾವ ಗಿಡ ಇದು ?
ನನ್ನ ಬಣ್ಣ ಕೆಂಪು.
ನಾನು ಮುಟ್ಟಿದ್ದೆಲ್ಲಾ ಕಪ್ಪು
ಗುಂಡಗಿರುವೆ ಚೆಂಡಲ್ಲ
ಮೇಲೆ ಹಾರುವ ಪಕ್ಷಿಯಲ್ಲ
ಅನಿಲವೇ ನನ್ನ ಆಹಾರ
ಹಾಗಾದರೇ ನಾನ್ಯಾರು?
ಹಿಮ ಪ್ರದೇಶಗಳಲ್ಲಿ ವಾಸಿಸುವೆ
ದಪ್ಪ ಚರ್ಮದ ಕರಡಿ ನಾನು
ಚಳಿಗಾಲದಲ್ಲಿ ನಿದ್ರೆ ಮಾಡುವೆ
ಹಾಗದರೆ ಯಾರು ನಾನು ?
ನಾನು ಕಣ್ಣಿಗೆ ಕಾಣಲಾರೆ
ನಾನಿಲ್ಲದೇ ನೀನು ಬದುಕಲಾರೆ
ನಾನು ಅನಿಲಗಳ ಮಿಶ್ರಣ
ಹಾಗಾದರೆ ನಾನು ಯಾರಣ್ಣ ?
ಪ್ರಪಂಚದಲ್ಲಿಯೇ ಅತ್ಯಂತ ಚಿಕ್ಕ ಪಕ್ಷಿ ನಾನು
ಹಿಮ್ಮುಖವಾಗಿ ಹಾರಬಲ್ಲೆನು
ಹಾಗಾದರೆ ನಾನು ಯಾರು ?
ಕೆಂಪಂಗಿ ರಾಮಣ್ಣ
ನೆಲದೊಳಗೆ ಇರ್ತಾನೆ
ಕಣ್ಣಿಗೆ ತಂಪ ನೀಡುವನು
ತಿನ್ನಲು ಬಲು ಸಿಹಿ ಇವನು
ಹಾಗಾದರೆ ಯಾರಿವನು ?
ಕಿರೀಟವಿದೆ ರಾಜನಲ್ಲ
ಮುಳ್ಳಿದೆ ಗುಲಾಬಿಯಲ್ಲ
ಹುಳಿಯಿದೆ ನಿಂಬೆಯಲ್ಲ
ಇದರ ರುಚಿ ತಿಂದವನೇ ಬಲ್ಲ
ಶ್ರೀಮತಿ ಚಂದ್ರಿಕಾ ಆರ್ ಬಾಯರಿ
ಸಹಶಿಕ್ಷಕರು
ಆನೇಕಲ್ ತಾಲ್ಲೂಕು
ಬೆಂಗಳೂರು