ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಸವಿಜ್ಞಾನದ ಲೇಖನಗಳನ್ನು ಓದಿ, ಅಭಿಪ್ರಾಯ ದಾಖಲಿಸಿ. ನಿಮ್ಮ ಪ್ರೋತ್ಸಾಹಗಳೇ ಲೇಖಕರಿಗೆ ಶ್ರೀರಕ್ಷೆ Science is a beautiful gift to humanity; we should not distort it. A. P. J. Abdul Kalam

Wednesday, February 4, 2026

ಕೇಂದ್ರೀಕೃತ ಸೂಕ್ಷ್ಮ ಅವಲೋಕನ, ಗ್ರಹಿಕೆ ಮತ್ತು ವೈಜ್ಞಾನಿಕ ಮನೋಭಾವ

 

ಕೇಂದ್ರೀಕೃತ ಸೂಕ್ಷ್ಮ ಅವಲೋಕನ, ಗ್ರಹಿಕೆ ಮತ್ತು ವೈಜ್ಞಾನಿಕ ಮನೋಭಾವ

ಲೇಖನ : 
ಡಾ. ಚಂದ್ರಪ್ಪ ಎಚ್

ಸಹಾಯಕ ಪ್ರಾಧ್ಯಾಪಕರು,
ಭೌತವಿಜ್ಞಾನ ವಿಭಾಗ, ಸರ್ಕಾರಿ ವಿಜ್ಞಾನ ಕಾಲೇಜು,
ಚಿತ್ರದುರ್ಗ – 577 501


ಸುಪ್ರಸಿದ್ಧ ಪ್ರಾಚೀ ಗ್ರೀಕ್ ತತ್ವಜ್ಞಾನಿ ಪ್ಲೇಟೊ ಕ್ರಿ.ಪೂ. (೪೨೪-೩೪೮) ದಲ್ಲೇ ಹೀಗೆ ಹೇಳಿದ್ದಾರೆ: ‘ಸೂಕ್ಷ್ಮ ಗ್ರಹಿಕೆಯೇ ವಿಜ್ಞಾ ಎಂದು. ನಮ್ಮಲ್ಲಿ, ಹೆಚ್ಚಿನವರಲ್ಲಿ ವಿಜ್ಞಾನ, ಆಚರಣೆ, ನಂಬಿಕೆ, ಮತ್ತು ಮೂಢನಂಬಿಕೆಗಳು ತೀರಾ ವಿಭಿನ್ನ ಎನ್ನುವ ಕಟುಸತ್ಯ ತಿಳಿಯದಿರುವುದು ದುರಂತವೇ ಸರಿ. ಪರಿಣಾಮವಾಗಿ, ಭಾರತದಂತಹ ವೈವಿಧ್ಯಮಯ ಆಚಾರ-ವಿಚಾರಗಳ, ಹತ್ತು-ಹಲವು ನಂಬಿಕೆಗಳ ದೇಶದಲ್ಲಿ ವಿಜ್ಞಾನದ ಮಹತ್ವ ಉಳಿ ಈ ಮೇಲಿನ ಅಂಶಗಳ ಸುಳಿಯಲ್ಲಿ ಸಿಕ್ಕಿ ಶತಮಾನಗಳಿಂದ ನರಳುತ್ತಿದೆ!  ಒಂದು ಜೀವಿಯು ತನ್ನ ಪರಿಸರ ವ್ಯವಸ್ಥೆಗೆ ಒಗ್ಗಿಕೊಳ್ಳದ ಹೊರತು ಹೆಚ್ಚು ಬದುಕಲಾರದು. ಆರಂಭಿಕ ಹಂತದಲ್ಲಿ, ಸಾಕಷ್ಟು ಮುಗ್ದ ಅನುಭವಗಳ ಆಧಾರದ ಮೇಲೆ ತಕ್ಕಮಟ್ಟಿಗೆ ಜ್ಞಾನದ ಪ್ರಥಮ ಅರಿವಿಗೆ ಒಡ್ಡಿಕೊಳ್ಳುತ್ತದೆ. ಕಾಲಕ್ರಮೇಣ, ಜ್ಞಾನ ಪಸರಿಸಿದಂತೆ, ಸಾಮಾನ್ಯ ತಿಳುವಳಿಕೆ ಅಥವಾ ಜ್ಞಾನ’ ಆ ಜೀವಿಯಲ್ಲಿ ಮೊಳಕೆಯೊಡೆಯುತ್ತದೆ. ಈ ಮೂಲ ತತ್ವ ಅಥವಾ ಅರಿವೇ ಮನಸ್ಸಿನ ಪರಿಣಾಮಕಾರೀ ವಿಕಸನಕ್ಕೆ ಹಾಗೂ ಬೌದ್ಧಿತೆಗೆ ಮೊದಲ ಹೆಜ್ಜೆ ದ್ದಂತೆ. ಪರಿಸರದಲ್ಲಿ ತಕ್ಷಣಕ್ಕೆ ನಿಲುವಿಗೆ ತಾಕದ, ರಹಸ್ಯ-ಅಗೋಚರತೆ ತಂದೊಡ್ಡುವ ಪ್ರಕ್ರಿಯೆಗಳೆಲ್ಲಾ ಒಂದು ರೀತಿಯಲ್ಲಿ ಬಿಡಿಲಾಗದ ಕಗ್ಗಂಟುಗಳಿದ್ದಂತೆ. ಹಾಗೆ ನೋಡಿದರೆ, ವಿಶ್ವವೊಂದು ಕೌತುಕ, ತವಕ, ತಲ್ಲಣ, ಮತ್ತು ಕುತೂಹಲ, ಆಶ್ಚರ್ಯ ಎಲ್ಲವನ್ನೂ ಒಟ್ಟಿಗೆ ಹಿಡಿದಿಟ್ಟುಕೊಂಡಿರು ಅಗಾಧ ಶಕ್ತಿಯ ಆಗರ! ಬಗೆದಷ್ಟೂ ಕಡಿಮೆಯೇ. ‘ಬಿಗ್-ಬ್ಯಾಂಗ್ ಸಿದ್ಧಾಂತದ ಅನ್ವಯ, ಪ್ರಸ್ತುತ ವಿಶ್ವದ ಉಗಮ ಅತ್ಯಂತ ಸಾಂದ್ರ, ದಟ್ಟ-ಧೂಳಿನ ಅವಿಭಜಿತ ಕಣಗ ಮಹಾಸ್ಫೋಟದಿಂದಲೇ! ೧೯೬೪ ರಲ್ಲಿ ಪ್ರಖ್ಯಾತ ರೇಡಿಯೊ ಖಗೋಳ ವಿಜ್ಞಾನಿಗಳಾದ ರಾಬರ್ಟ್ ವಿಲ್ಸನ್ ಹಾಗೂ ಅರ್ನೊ ಪೆಂಜಿಯಾಸ್ ನ್ಯೂ ಜೆರ್ಸಿಯಲ್ಲಿ ‘ಹಾಲ್ಮೊಡೆಲ್ ಆಂಟೆನಾ’ದ ಸುಧಾರಣೆಯ ಕೆಲಸದಲ್ಲಿ ತೊಡಗಿದಾಗ ಕಂಡುಕೊಂಡ ಕುತೂಹಲಕಾರಿ ‘ಅತೀ-ಸೂಕ್ಷ್ಮಬ್ದ ತರಂಗಳ ಧ್ವನಿ’ ಜಗತ್ತಿನ ಮೊಟ್ಟ ಮೊದಲ ‘ಬಿಗ್-ಬ್ಯಾಂಗ್ ಸಿದ್ಧಾಂʼದ ಅವಿಸ್ಮರಣೀಯ ಕ್ಷಣದ ಪ್ರಪ್ರಥಮ ಪ್ರಾಯೋಗಿಕ ಸಾಕ್ಷಿ! ಹಾಗಾಗಿ, ಇಲ್ಲಿ ಯಾವುದನ್ನೂ ಕಡೆಗಣಿಸುವಂತಿಲ್ಲ. ೧೭ ನೇ ಶತಮಾನದ ಜಗತ್‌ಪ್ರಸಿದ್ಧ ಭೌತವಿಜ್ಞಾನಿ ಸರ್ ಐಸಾಕ್ ನ್ಯೂಟನ್ ಹೇಳಿಕೆಯಂತೆ:’ನಮ್ಮರಿವಿಗೆ ನಿಲುಕಿರುವುದು ಹನಿ ನೀರಿನಷ್ಟೇ ಅತ್ಯಲ್ಪ; ತಿಳಿಯದಿರುವುದು ಸಾಗರದಷ್ಟು ಅಗಾಧ’ವಂತೆ!  ಅತ್ಯಂತ ಚಿಕ್ಕ, ಗೌಣವೆನಿಸುವ ಘಟನೆಯಿಂದ, ಜಟಿಲ ವಿದ್ಯಮಾನಗಳವರೆಗೆ ಎಲ್ಲವೂ ಅಪಾರ ಜೀವನ-ಪಾಠ ತೆರೆದಿಡುವ ಸೂಕ್ಷ್ಮ ಸಂಗತಿಗಳೆ. ಪದೇ ಪದೇ ಈ ಸೂಕ್ಷ್ಮಗಳಿಗೆ ಎಡತಾಕಿದಂತೆ, ಕುತೂಹಲ ಕೆರಳಿ, ಆಸಕ್ತಿ ಹೆಚ್ಚಿ, ನಮ್ಮಲ್ಲಿ ಸುಪ್ತವಾಗಿರುವ ಸಂವೇದನಾ ಶಕ್ತಿ ಜಾಗೃತಗೊಳ್ಳುತ್ತದೆ. ಕ್ರಮೇಣ, ರಹಸ್ಯದ ಭೇದಕ್ಕೆ ಮನಸ್ಸು ಎಲ್ಲ ರೀತಿಯಲ್ಲೂ ತಂತಾನೇ ಸಿದ್ಧಗೊಳ್ಳುತ್ತದೆ ಮತ್ತು ಆ ಮೂಲಕ ಹಲವು ಬಗೆಯಲ್ಲಿ ತನ್ನ ಯೋಚನೆಯ ರೀತಿ, ಚಿಂತನಾಶೀಲತೆಯನ್ನು ಸಾಕಷ್ಟು ಒರೆಗೆ ಹಚ್ಚುತ್ತದೆ. ಅಭಿರುಚಿ ಹೆಚ್ಚಿದಂತೆ, ತಿಳಿದುಕೊಳ್ಳುವ ಹಂಬಲದ ವ್ಯಾಪ್ತಿ ವಿಸ್ತಾರಗೊಳ್ಳುತ್ತೆ; ಜೊತೆಗೆ ವಿಷಯದ ಗ್ರಹಿಕೆಯೂ ಗಟ್ಟಿಗೊಳ್ಳುತ್ತಾ ಆಗಲೇ ಪ್ರತಿಯೊಬ್ಬರಲ್ಲೂ ಅಡಗಿರುವ ಕ್ರಿಯಾಶೀಲ ವೈಜ್ಞಾನಿಕ ಚಿಂತನೆಯನ್ನು ತೆರೆದಿಡುತ್ತದೆ. ಈ ನಿಟ್ಟಿನಲ್ಲಿ, ಬೆರಗಿನಿಂದ ನೋಡುವ, ಕೌತುಕತೆ ಮತ್ತು ಬಯಕೆಯೆಂಬ ಬೆಂಬಿಡ ಪ್ರಯತ್ನಗಳು ಹೊಸತನ್ನು ಅರಸುವಲ್ಲಿ ಸದಾ ಸಫಲವಾಗುತ್ತವೆ.  ಪರಿಸರದಲ್ಲಿ ಘಟಿಸುವ ಯಾವುದೇ ವಿದ್ಯಮಾನವು ಇನ್ಯಾವುದೋ ಪ್ರಚೋದನೆಯ ಪರಿಣಾಮವೇ ಆಗಿರುತ್ತದೆಯೆಂದು ನ್ಯೂಟನ್ನನ ಚಲನೆಯ ಮೂರನೇಯ ನಿಯಮ ಸೊಗಸಾಗಿ ವಿವರಿಸುತ್ತದೆ. ನಮ್ಮಲ್ಲಿ, ಸುತ್ತಮುತ್ತಲಿನ ಆಗು-ಹೋಗುಗಳ ಬಗ್ಗೆ ಕರಾರುವಕ್ಕಾದ ಒಳನೋಟವಿರಬೇಕು ಮತ್ತು ಅವಲೋಕಿಸುವ ದೂರದೃಷ್ಟಿಯಿರಬೇಕು. ಇಲ್ಲಿ, ಎಲ್ಲವೂ ನೇಸರನಲ್ಲಿ ಸಂಭವಿಸುವ ಅನೇಕ ಘಟನಾವಳಿಗಳಲ್ಲಿ ಅಡಗಿರುವ ಶಿಸ್ತಿ, ರಚನಾತ್ಮಕ, ಕ್ರಮಬದ್ಧ ಮತ್ತು ನಿಯಮಾವಳಿಗಳ ಪ್ರಯೋಗಶೀಲತೆಯ ಅನ್ವೇಷಣೆಯೇ! ಉದಾಹರಣೆಗೆ, ಸಸ್ಯಗಳ ದ್ಯುತಿ ಸಂಶ್ಲೇಷಣೆ, ಗ್ರಹಗಳ ಚಲನೆ, ಸೂರ್ಯೋದಯ - ಸೂರ್ಯಾಸ್ತಗಳು, ಅಮವಾಸ್ಯೆ-ಹುಣ್ಣಿಮೆ, ಧೂಮಕೇತುಗಳ ಸುತ್ತುವಿಕೆ, ಗುರುತ್ವಾಕರ್ಷಣಾಶಕ್ತಿ ಇತ್ಯಾದಿ. ಜೊತೆಗೆ, ವಿಜ್ಞಾನ ಬೆಳೆದ ಇತಿಹಾಸದಿಂದ ತಿಳಿಯುವ ಸರಳ ಸಂಗತಿಯೆಂದರೆ; ಎಲ್ಲ ವಿದ್ಯಮಾನಗಳು ಪವಾಡದಿಂದಾಗಲೀ, ಆಕಸ್ಮಿಕ ಕೈಚಳಕದಿಂದಲೋ ಅಥವಾ ಇನ್ನಾವುದೇ ಮೂಢ ಆಚರಣೆ ಅಥವಾ ನಂಬಿಕೆಗಳಿಂದ ಖಂಡಿತ ಜರುಗುವುದಿಲ್ಲವೆನ್ನುವ ಸತ್ಯ!, ವೈಜ್ಞಾನಿಕ ವಿಚಾರಶಕ್ತಿ ಮೈಗೂಡಿಸಿಕೊಳ್ಳಲು ಪ್ರತಿಯೊಬ್ಬರಲ್ಲೂ ಕೌತುತೆ, ಸೂಕ್ಷ್ಮಾತಿ ಸೂಕ್ಷ್ಮ ಗಮನಿಸುವಿಕೆ, ಏಕಾಗ್ರತೆ, ಅವಲೋಕನ, ಗ್ರಹಿಕೆ, ತನ್ನಲ್ಲೇ ಪ್ರಶ್ನಿಸಿಕೊಳ್ಳುವ, ಪ್ರಶ್ನಿಸುವ ಹಾಗೂ ಆ ಮೂಲಕ ಉತ್ತರ ಕಂಡುಕೊಳ್ಳುವ ಅವಿರತ ಇಚ್ಛಾಶಕ್ತಿ, ಆತ್ಮವಿಶ್ವಾಸ, ಖುಷಿ ಹದವಾಗಿ ಬೆರೆತಿರಬೇಕು. ಎರಡನೆಯ ಬಹುಮುಖ್ಯ ಅಂಶವೆಂದರೆ, ಅವಶ್ಯಕತೆಯೆಂಬ ಪೂರಕ ವಾತಾವರಣ ಸೃಷ್ಟಿಯಾಗಬೇಕು. ಏಕೆಂದರೆ, ಅವಶ್ಯಕತೆಯೇ ಆವಿಷ್ಕಾರದ ತಾಯಿ’ಯೆಂದು ಪ್ಲೇಟೋ ಮಹಾ ತತ್ವಜ್ಞಾನಿ ಬಹು ಹಿಂದೆಯೇ ವಿವರಿಸಿದ್ದಾರೆ.  ಪ್ರಾಚೀನ ಕಾಲದ ಹೆಚ್ಚಿನೆಲ್ಲವೂ, ಈ ಮೇಲಿನ ಅಂಶಗಳ ತಳಹದಿಯಲ್ಲಿನ ಆವಿಷ್ಕಾರಗಳೇ ಆಗಿವೆ. ಬಾಲ್ಯಾವಸ್ಥೆಯಲ್ಲಿಯೇ ವಿಜ್ಞಾನದ ಮೂಲ ತತ್ವಗಳು, ವಿಜ್ಞಾನಿಗಳ ಜೀವನ ಮತ್ತು ಸಂಶೋಧನೆಗಳ ಕುರಿತು ವಿವಿಧ ಪ್ರಾಯೋಗಿಕ ಮಾದರಿಗಳು, ಪ್ರಯೋಗಗಳು, ಆಟಿಕೆಗಳುಹಾಗೂ ಕ್ರಿಯಾಶೀಲ ಚಟುವಟಿಕೆಗಳ ಮೂಲಕ ಅರ್ಥಗರ್ಭಿತವಾಗಿ ಪರಿಚಯಿಸಿದ್ದಾದಲ್ಲಿ, ಮಕ್ಕಳಲ್ಲಿ ಉತ್ತಮ ಪ್ರಯೋಗಶೀಲತೆ ಮತ್ತು ವೈಜ್ಞಾನಿಕ ಮನೋವಿಕಾಸವನ್ನು ಕಾಣಬಹುದು. ಇದಕ್ಕೆ ಪೂರಕವಾಗಿ, ತೀರ ಸಾಮಾನ್ಯವೆನಿಸುವ ದಿನ-ನಿತ್ಯದ ಕೆಲಸ-ಕಾರ್ಯಗಳಲ್ಲಿ ಹೆಚ್ಚೆಚ್ಚು ತೊಡಗಿಸಿಕೊಳ್ಳುವುದರಿಂದ, ಮಕ್ಕಳಲ್ಲಿ ಆತ್ಮವಿಶ್ವಾಸ, ಧೈರ್ಯವನ್ನ ಪೋಷಿಸುತ್ತಾ ಕ್ರಮೇಣ ಪರಿಸರದ ಸಾಮಾನ್ಯ ಪ್ರಾಥಮಿಕ ಅರಿವು ಕೊಡಬೇಕು. ಮಕ್ಕಳ ಗ್ರಹಿಕೆಯ ಸೂಕ್ಷ್ಮ ಜಾಡನ್ನರಿತು ಎಳೆ-ಎಳೆಯಾಗಿ ಸಂದರ್ಭಾನುಸಾರ ವೈಜ್ಞಾನಿಕ ನಿಲುವುಗಳನ್ನು ಹಾಗೂ ಯೋಚಿಸುವ ಶಕ್ತಿಯನ್ನು ಪೋಷಿಸಬೇಕು. ಈ ಮೊದಲು, ಸ್ವಾಭಾವಿಕವಾಗಿ ಜರುಗುವ ವಿದ್ಯಮಾನವೊಂದನ್ನು ಬರಿಗಣ್ಣಿನಿಂದಲೇ ವೀಕ್ಷಿಸಿ, ಪರೀಕ್ಷಿಸಿ, ಪ್ರಯೋಗ ಕೈಗೊಂಡು ಪರಿಗಣನೆಗೆ ನಿಲುಕದಷ್ಟು ಬೆಂಬಿಡದ ಪ್ರಯತ್ನಗಳ ಫಲವಾಗಿ ಅದರ ಒಳ-ಹೊರಗುಗಳ ಅರ್ಥೈಸುವಿಕೆಯಲ್ಲಿ ಪುರಾತನ ವಿಜ್ಞಾನಿಗಳು ತಲ್ಲೀನರಾಗುತ್ತಿದ್ದರು. ಆಧುನಿಕ ವೈಜ್ಞಾನಿಕ ಸಂಶೋಧನೆಗಳ ಫಲವಾಗಿ, ಯಂತ್ರಗಳ ಸಹಾಯದಿಂದ ಕ್ಲಿಷ್ಟಕರ ಘಟನೆಗಳನ್ನೂ ಹೆಚ್ಚಿನ ನಿಖರತೆಯೊಂದಿಗೆ ತಿಳಿದುಕೊಳ್ಳುವ ಅವಕಾಶ ಈ ಶತಮಾನದ ಹಾಗೂ ಭವಿಷ್ಯದ ಮನುಕುಲಕ್ಕೆ ಇರುವಂತಹುದನ್ನು ಅಲ್ಲಗಳೆಯುವಂತಿಲ್ಲ. ಅಲ್ಲದೆ, ವಿಜ್ಞಾನ ಕೇವಲ ಹೊಸತನ್ನು ಅರಸುವ, ಬದಲಿ ವ್ಯವಸ್ಥೆಯನ್ನು ಕಂಡುಕೊಳ್ಳುವ ಅಥವಾ ಅನ್ವೇಷಿಸುವುಕ್ಕಷ್ಟೇ ಸೀಮಿತಗೊಂಡಿಲ್ಲ, ಇದರೊಂದಿಗೆ ಉತ್ತಮ, ಶಿಸ್ತು-ಬದ್ಧ, ಆರೋಗ್ಯ ಪೂರ್ಣ ಬದುಕು ಕಟ್ಟಿಕೊಳ್ಳಲು ಮತ್ತು ನಿರ್ಮಿಸಲು ಅತ್ಯವಶ್ಯ. ಈಗಾಗಲೇ, ಜಗತ್ತು ಹಿಂದೆಂದೂ ಊಹಿಸಲಾರದಷ್ಟು ಮಟ್ಟಿಗೆ ಶತಮಾನಗಳುರುಳಿದಂತೆ ಅಸಂಖ್ಯಾತ ಬದಲಾವಣೆಗಳಿಗೆ ತೆರೆದುಕೊಂಡಿದೆ ಮತ್ತು ಆ ಮೂಲಕ ಜನ-ಜೀವನ, ಬದುಕು ಎಲ್ಲವೂ ಭಯಂಕರ ವಿಕಸನಕ್ಕೆ ಒಳಗಾಗಿದೆ! ಇಂದಿನ ಪರಿಸ್ಥಿತಿ, ಯುವಕರಲ್ಲಿ ಭರಾಟೆಯ, ಮೋಜು-ಮಸ್ತಿಯ, ಅನುಭವಿಸಲಿಕ್ಕೆಂದೇ ಎಲ್ಲವೂ ಎಂಬ ಪೂರ್ವಾಗ್ರಹಪೀಡಿ ಜೀವನ ಶೈಲಿ, ಅಸ್ಥವ್ಯಸ್ಥತೆ, ಅರೆ-ಬರೆ ವಿಚಾರ ಲಹರಿ ಹಾಗೂ ಇದಕ್ಕೆ ಪುಷ್ಠಿನೀಡುವ ದೃಶ್ಯಮಾಧ್ಯಮಗಳ ಅಂಕೆಮೀರಿ ವಾಣಿಜ್ಯಿಕ ವೈಭವೀಕರಣ, ವೈಜ್ಞಾನಿಕ ಮನೋಭಾವನೆಯ ಮೂಲ ಅಂಶಗಳಿಗೇ ಪರದೆಯೆಳೆಯುವ ಮೂಲಕ ಮಂಕುತನ ಬೆಸೆಯುವಂತಾಗಿದೆ. ಕಾರಣ, ಪ್ರತಿಯೊಬ್ಬರಲ್ಲೂ ವಿಜ್ಞಾನದ ಚಿಂತನೆಗಳು, ಯೋಚನಾ ಶಕ್ತಿ, ಹಾಗೂ ವೈಜ್ಞಾನಿಕತೆ ಅತ್ಯಂತ ತುರ್ತಾಗಿ ಒಮ್ಮತದಿಂದ ಒಡಮೂಡಬೇಕಾದ ಅನಿವಾರ್ಯತೆ ಹಿಂದೆಂದಿಗಿಂತಲೂ ಇಂದು ಹೆಚ್ಚು ತುರ್ತಿನದು. ಈ ನಿಟ್ಟಿನಲ್ಲಿ ಮನುಕುಲಕ್ಕೆ ಅರಿವು, ಜನ-ಜಾಗೃತಿ ಮೂಡಿಸಲು ಅಮೇರಿಕಾದ ಯುನೆಸ್ಕೋ ಸಂಸ್ಥೆ ೨೦೦೧ ರಲ್ಲಿ ಪ್ರತೀ ವರ್ಷ ನವೆಂಬರ್ ೧೦ ರಂದು ‘ಅಂತರಾಷ್ಟ್ರೀಯ ವಿಜ್ಞಾನ ದಿನ’ ಆಚರಿಸುವಂತೆ ಘೋಷಿಸಿದೆ. ಅದೇ ರೀತಿ, ಭಾರತದಲ್ಲಿಯೂ ಸಹ ನೋಬೆಲ್ ಪುರಸ್ಕೃತ ಭೌತವಿಜ್ಞಾನಿ ಸರ್ ಸಿ ವಿ ರಾಮನ್ ರವರ ‘ರಾಮನ್ ಪರಿಣಾಮ’ದ ಆವಿಷ್ಕಾರದ ಸ್ಮರಣಾರ್ಥ ಪ್ರತೀ ವರ್ಷ ಫೆಬ್ರವರಿ ೨೮ ರಂದು ‘ರಾಷ್ಟ್ರೀ ವಿಜ್ಞಾನ ದಿನ’ ಆಚರಿಸಲಾಗುತ್ತದೆ. ಎಲ್ಲೆಡೆ ಬರೀ ಆಚರಣೆಗಳಿಗಷ್ಟೆ ಮಿತಿಗೊಳ್ಳದೆ ವೈಜ್ಞಾನಿಕ ಚಿಂತನೆ ಎಲ್ಲರಲ್ಲೂ ಮೂಡುವಂತಾಗಲಿ ಎನ್ನುವುದೇ ಸದ್ಯದ ಕಾಳಜಿ. ಅರಿವಿನ ಪರಿಧಿಯ ಹವು ಹೆಚ್ಚಿದಂತೆ, ಅಂಕೆಮೀರದೆ ಹೆಚ್ಚು ಆಸಕ್ತಿಯಿಂದ ಪರಿಸರ ಸಮತೋಲನವನ್ನು ಸಂರಕ್ಷಿಸಿ, ನೈಸರ್ಗಿಕವಾಗಿ ಎಲ್ಲವನ್ನೂ ಅತ್ಯಂತ ಯಥಾಸ್ಥಿತಿಯಲ್ಲಿಯೇ ಕಾಪಾಡಿಕೊಳ್ಳುವಂತಾದರೆ ಅದುವೇ ಇಂದಿನ ಭೂರಕ್ಷಣೆಯ ಮಹತ್ವದ ಹೆಜ್ಜೆಯಾಗಲಿದೆ.
 ‘ಮುಚ್ಚಿಟ್ಟ ಜ್ಞಾನ ಕೊಳೆಯುತ್ತದೆ; ಬಿಚ್ಚಿಟ್ಟ ಜ್ಞಾನ ಹೊಳೆಯುತ್ತದೆ’ಯೆಂಬ ರೂಢಿಗತ ಮಾತಿನಂತೆ ನಮ್ಮ ಪ್ರಜ್ಞೆಯನ್ನು ಸದಾ ಚಕಿತಗೊಳಿಸುತ್ತಿರಬೇಕು. ಮೊದಲನೆಯದಾಗಿ
 
 


No comments:

Post a Comment