ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Friday, February 4, 2022

ಸವಿಜ್ಞಾನ ಫೆಬ್ರವರಿ 2022ರ ಲೇಖನಗಳು  

ಸಂಪಾದಕರ ಡೈರಿಯಿಂದ 

1. ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾದ ವಿಜ್ಞಾನಿ ಡಾ.ಎಸ್.ಅಯ್ಯಪ್ಪನ್

2. ವೈದ್ಯಲೋಕದ 2021 ರ ವಿಸ್ಮಯ ಸುದ್ದಿಗಳು - ಡಾ| ಹೆಚ್ . ಎಸ್ . ಮೋಹನ್ 

3. ಮಾರಕ ರೋಗ ಕ್ಯಾನ್ಸರ್- ಬಿಎನ್ ರೂಪ

3. ಯುರೇಕಾ- ವಿಜಯಕುಮಾರ್ ಹೆಚ್. ಜಿ

4. ಹಗುರ ಧಾತು ಲಿತಿಯಂ- ಶ್ರೀನಿವಾಸ್ ಎ

5. ಅಭಿಜಾತ ಚಿತ್ರ ಕಲಾವಿದೆ ಶ್ರೀಮತಿ ಜಯಶ್ರೀ ಶರ್ಮ- ರಾಘವೇಂದ್ರ ಮಯ್ಯ ಎಂ ಎನ್ ಹಾಗೂ ಲಕ್ಷ್ಮೀಪ್ರಸಾದ್ ನಾಯಕ್

6. ಕಡ್ಡಿ ಗೊಂಬೆಗಳು - ಸಿದ್ದು ಬಿರಾದಾರ್

ಪದಬಂಧ - ವಿಜಯಕುಮಾರ್ ಹೆಚ್. ಜಿ. 

ವ್ಯಂಗ್ಯಚಿತ್ರಗಳು: ವಿಜಯಕುಮಾರ್ ಹೆಚ್.ಜಿ ಹಾಗೂ ಜಯಶ್ರೀ ಶರ್ಮ

ಒಗಟುಗಳು - ರಾಮಚಂದ್ರ ಭಟ್ ಬಿ ಜಿ


ಸಂಪಾದಕರ ಡೈರಿಯಿಂದ

ಸಂಪಾದಕರ ಡೈರಿಯಿಂದ

‘ಸವಿಜ್ಞಾನ’ ಇ-ಪತ್ರಿಕೆಯ ಎರಡನೆಯ ವರ್ಷದ ಎರಡನೆಯ ಸಂಚಿಕೆ. ಸಂತೋಷದ ಒಂದು ಸುದ್ದಿಯೊಂದಿಗೆ ಸಂಪಾದಕೀಯ ಪ್ರಾರಂಭಿಸುತ್ತೇನೆ. ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ ನಮ್ಮ ‘ಸವಿಜ್ಞಾನ’ ಇ-ಪತ್ರಿಕೆಗೆ ಅಭಿನಂದನೆ ಸಲ್ಲಿಸಿ, ಶುಭ ಹಾರೈಸಿದ್ದ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಅಧ್ಯಕ್ಷರಾದ ಖ್ಯಾತ ಕೃಷಿ ವಿಜ್ಞಾನಿ ಡಾ. ಅಯ್ಯಪ್ಪನ್ ಅವರಿಗೆ ರಾಷ್ಟ್ರದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ‘ಪದ್ಮಶ್ರೀ’ ಪ್ರಶಸ್ತಿ ಘೋಷಣೆಯಾಗಿದೆ. ಈ ಸಂದರ್ಭದಲ್ಲಿ ಅವರಿಗೆ ‘ಸವಿಜ್ಞಾನ’ದ ಹಾರ್ದಿಕ ಅಭಿನಂದನೆಗಳು.

ಈ ಸಂಚಿಕೆಯಲ್ಲಿ ಡಾ.ಅಯ್ಯಪ್ಪನ್ ಅವರಿಗೆ ಅಭಿನಂದನಾ ಸಂದೇಶದ ಜೊತೆಗೆ, ಅವರ ಕಿರು ಪರಿಚಯ ನೀಡಲಾಗಿದೆ. ವಿಶ್ವ ಕ್ಯಾನ್ಸರ್ ದಿನದ ಹಿನ್ನೆಲೆಯಿಲ್ಲಿ ವಿಜ್ಞಾನ ಶಿಕ್ಷಕಿ ರೂಪಾ ಅವರು ಬರೆದ ಒಂದು ಸಾಂದರ್ಭಿಕ ಲೇಖನವಿದೆ. ವಿಜ್ಞಾನ ಬೋಧನೆಯಿಲ್ಲಿ ವೈವಿಧ್ಯತೆಯನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯೋಗಗಳ ಮಹತ್ವವನ್ನು ಸಾರುವ ಒಂದು ಲೇಖನದ ಜೊತೆಗೆ ಕಡ್ಡಿ ಗೊಂಬೆಗಳನ್ನು ತಯಾರಿಸುವ ವಿಧಾನವನ್ನು ವಿವರಿಸುವ ಲೇಖಗಳಿವೆ. ಅತ್ಯಂತ ಹಗುರ ಲೋಹವಾವ ಲಿಥಿಯಂ ಬಗ್ಗೆ ಮಾಹಿತಿ ನೀಡುವ ಲೇಖನವೊಂದಿದೆ. ೨೦೨೧ರಲ್ಲಿ ವಿಶ್ವದ ವಿವಿಧೆಡೆ ದಾಖಲಾದ ವೈದ್ಯಕೀಯ ವಿಸ್ಮಯಗಳನ್ನು ನಿಮ್ಮ ಮುಂದೆ ತೆರೆದಿಟ್ಟಿದ್ದಾರೆ, ಜನಪ್ರಿಯ ವೈದ್ಯ ಸಾಹಿತಿ, ಡಾ. ಹೆಚ್.ಎಸ. ಮೋಹನ್. ಅಲ್ಲದೆ, ನಿಮ್ಮ ಮೆಚ್ಚುಗೆಗೆ ಪಾತ್ರವಾಗಿರುವ ವಿಜ್ಞಾನದ ಒಗಟುಗಳು ಹಾಗೂ ವ್ಯಂಗ್ಯ ಚಿತ್ರಗಳ ಜೊತೆಗೆ, ಈ ಬಾರಿಯೂ ವಿಜ್ಞಾನ ಪದಬಂಧವನ್ನು ನೀಡಲಾಗಿದೆ. ಕೆಲ ಕಾಲ ವಿಜ್ಙಾನ ಶಿಕ್ಷಕರಾಗಿದ್ದು, ಈಗ ಚಿತ್ರಕಲೆಯತ್ತ ಹೊರಳಿರುವ, ‘ಸವಿಜ್ಞಾನ’ಕ್ಕೆಂದೇ ಪ್ರಾರಂಭದಿಂದಲೂ ವ್ಯಂಗ್ಯಚಿತ್ರಗಳನ್ನು ಬರೆಯುತ್ತಿರುವ ಶ್ರೀಮತಿ ಜಯಶ್ರೀ ಶರ್ಮ ಅವರ ಸಾಧನೆಯನ್ನು ಪರಿಚಯಿಸುವ ಲೇಖನವೂ ಇದೆ.

ವಿಜ್ಞಾನಕ್ಕೆ ಸಂಬಂಧಿಸಿದಂತೆ ಮಾಹಿತಿಪೂರ್ಣ ಹಾಗೂ ವೈವಿಧ್ಯಮಯ ಲೇಖನಗಳನ್ನು ನೀಡುವ ನಮ್ಮ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹವೇ ಸ್ಪೂರ್ತಿ. ಸಂಚಿಕೆಯ ಲೇಖನಗಳ ಬಗ್ಗೆ ನಿಮ್ಮ ವಿದ್ಯಾರ್ಥಿಗಳಿಗೂ, ಸಹೋದ್ಯೋಗಿಗಳಿಗೂ, ಬಂಧು, ಮಿತ್ರರಿಗೂ ತಿಳಿಸಿ. ಅವರೂ ಓದುವಂತೆ ಪ್ರೇರೇಪಿಸಿ. ನಮ್ಮ ಓದುಗ ಬಳಗವನ್ನು ಇನ್ನಷ್ಟು ವಿಸ್ತಾರಗೊಳಿಸಿ..

ಡಾ. ಟಿ. ಎ. ಬಾಲಕೃಷ್ಣ ಅಡಿಗ

ಪ್ರಧಾನ ಸಂಪಾದಕರು

ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾದ ವಿಜ್ಞಾನಿ ಡಾ.ಎಸ್.ಅಯ್ಯಪ್ಪನ್

ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾದ ವಿಜ್ಞಾನಿ ಡಾ.ಎಸ್.ಅಯ್ಯಪ್ಪನ್

ಭಾರತ ಸರ್ಕಾರ ದೇಶದ ನಾಗರಿಕರಿಗೆ ನೀಡುವ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದು “ಪದ್ಮಶ್ರೀ” ಪ್ರಶಸ್ತಿ.  ೨೦೨೨ನೇ ಸಾಲಿಗೆ ಕರ್ನಾಟಕದ ಐವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರಲ್ಲಿ ಒಬ್ಬರು ನಮ್ಮ ಹೆಮ್ಮೆಯ ವಿಜ್ಞಾನಿಗಳಾದ ಡಾ.ಎಸ್. ಅಯ್ಯಪ್ಪನ್.

                  

ಡಾ ಸುಬ್ಬಣ್ಣ ಅಯ್ಯಪ್ಪನ್ ಅವರು ೧೯೭೫ರಲ್ಲಿ ಬಿ.ಎಫ್.ಎ.ಎಸ್ಸಿ ಪದವಿ ವಿದ್ಯಾಭ್ಯಾಸ ಮುಗಿಸಿ, ಮಂಗಳೂರು ವಿಶ್ವವಿದ್ಯಾಲಯದಿಂದ ೧೯೭೭ರಲ್ಲಿ ಮೀನುಗಾರಿಕೆ, ಉತ್ಪಾದನೆ ಮತ್ತು ನಿರ್ವಹಣೆ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ನಂತರ, ಬೆಂಗಳೂರು ವಿಶ್ವವಿದ್ಯಾಲಯದಿಂದ ೧೯೮೮ರಲ್ಲಿ ಪಿ.ಹೆಚ್‌ಡಿ ಪದವಿ ಪಡೆದರು. ಈ ಮಧ್ಯೆ ೧೯೭೮ ರಲ್ಲಿ ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚುರಲ್ ರೀಸರ್ಚ್ ಸಂಸ್ಥೆಯಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿ ಸೇರಿದರು. ಮೀನುಗಾರಿಕೆ ವಿಷಯದಲ್ಲಿ ಅತ್ಯಂತ ಉನ್ನತ ಸಂಶೋಧನೆ ಕೈಗೊಂಡು ೨೦೦ಕ್ಕೂ ಹೆಚ್ಚು ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ಮೀನುಗಾರಿಕೆ ಇಲಾಖೆಯ ಡೆಪ್ಯೂಟಿ ಡೈರೆಕ್ಟರ್ ಜನರಲ್ ಆಗಿ, ಮುಂಬೈನ ಸೆಂಟ್ರಲ್ ಫಿಶರೀಸ್ ಇನ್ಸ್ಟಿಟ್ಯೂಟ್ ನ ಡೈರೆಕ್ಟರ್ ಆಗಿ, ಬ್ಯಾರಕ್‌ಪೂರ್‌ನ ಸೆಂಟ್ರಲ್ ಫಿಶರೀಸ್ ಇನ್ಸ್ಟಿಟ್ಯೂಟ್ ನ ಪ್ರಮುಖ ವಿಜ್ಞಾನಿಯಾಗಿ ಸೇವೆ ಸಲ್ಲಿಸಿದ್ದಾರೆ.  ರಾಷ್ಟ್ರೀಯ ಕೃಷಿ ವಿಜ್ಞಾನ ಪರಿಷತ್, ಪರಿಸರ ಸಂರಕ್ಷಕರ ಸೊಸೈಟಿ, ಬಯೋಡೈವರ್ಸಿಟಿ ಇಂಡಿಯಾ ಸೇರಿದಂತೆ ಅನೇಕ ಸಂಸ್ಥೆಗಳಲ್ಲಿ ಸಂಶೋಧಕರಾಗಿ ಸೇವೆ ಸಲ್ಲಿಸಿದ್ದಾರೆ. ನ್ಯಾಷನಲ್ ಅಕಾಡೆಮಿ ಆಫ್ ಅಗ್ರಿಕಲ್ಚುರಲ್ ಸೈನ್ಸಸ್ ನ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಭಾರತೀಯ ಕೃಷಿ ಸಂಶೋಧನಾ ಪರಿಷತ್‌ನ ಅಧ್ಯಕ್ಷರಾಗಿ, ಕೃಷಿ ಸಂಶೋಧನೆ ಮತ್ತು ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಯಾಗಿ ಹಾಗೂ ಮಣಿಪುರದ ಇಂಫಾಲ್‌ನಲ್ಲಿರುವ ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯದ ಕುಲಪತಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಡಾ ಅಯ್ಯಪ್ಪನ್ ಅವರ ಹೆಸರಿನಲ್ಲಿ ಎರಡು ಪೇಟೆಂಟ್ ಹಾಗೂ ಒಂದು ಮಾದರಿ ಇರುವುದು ಹೆಮ್ಮೆಯ ವಿಷಯ. ಜೀವವಿಜ್ಞಾನ ಸೊಸೈಟಿಯಿಂದ ೧೯೯೬-೯೭ ರಲ್ಲಿ ಚಿನ್ನದ ಪದಕ, ಮೀನುಕೃಷಿ ವಿಷಯದಲ್ಲಿ ಮಾಡಿದ ಸಂಶೋಧನೆಗಳಿಗಾಗಿ, ಗಣನೀಯ ಕೊಡುಗೆಗಳಿಗಾಗಿ ೧೯೯೭ರಲ್ಲಿ ಭಾರತೀಯ ಕೃಷಿ ಸಂಶೋಧನಾ ಪರಿಷತ್ (ಐ ಸಿ ಎ ಆರ್)ನ ವಿಶೇಷ ಗೌರವಕ್ಕೆ ಪಾತ್ರರಾಗಿದ್ದಾರೆ. ಧಾರವಾಡದ ಕೃಷಿ ವಿ.ವಿ.ಯೂ ಸೇರಿದಂತೆ ರಾಷ್ಟ್ರದ ಹಲವು ಪ್ರತಿಷ್ಟಿತ ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಪದವಿಗೆ ಪಾತ್ರರಾಗಿದ್ದಾರೆ, ಈ ಪ್ರತಿಭಾವಂತ ವಿಜ್ಞಾನಿ ಪ್ರಸ್ತುತ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಅಧ್ಯಕ್ಷರಾಗಿ ನೇಮಕಗೊಂಡು, ಹಲವಾರು ಗುಣಾತ್ಮಕ ಕಾರ್ಯಯೋಜನೆಗಳನ್ನು ಪ್ರಾರಂಭಿಸಿ, ಕರ್ನಾಟಕದ ವಿಜ್ಞಾನ ಕ್ಷೇತ್ರಕ್ಕೆ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. 

ನಮ್ಮ ‘ಸವಿಜ್ಞಾನ' ಇ-ಪತ್ರಿಕೆಯ ಆಸಕ್ತ ಓದುಗರಲ್ಲಿ ಒಬ್ಬರಾದ, ಸೌಜನ್ಯದ ಸಾಕಾರಮೂರ್ತಿ, ಸರಳ ವ್ಯಕ್ತಿತ್ವದ ಡಾ.ಅಯ್ಯಪ್ಪನ್ ಅವರು ‘ಪದ್ಮಶ್ರೀ’ ಪ್ರಶಸ್ತಿಗೆ ಭಾಜನರಾದ ಈ  ಸಂದರ್ಭದಲ್ಲಿ ನಾಡಿನ ಎಲ್ಲ ವಿಜ್ಞಾನ ಶಿಕ್ಷಕರ ಪರವಾಗಿ ‘ಸವಿಜ್ಞಾನ’ ತಂಡ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತದೆ.

ಸಂಪಾದಕ ಮಂಡಲಿ

ಸವಿಜ್ಞಾನ’


ವೈದ್ಯಲೋಕದ 2021 ರ ವಿಸ್ಮಯ ಸುದ್ದಿಗಳು

ವೈದ್ಯಲೋಕದ 2021ರ ವಿಸ್ಮಯ ಸುದ್ದಿಗಳು

ಡಾ. ಹೆಚ್.ಎಸ್. ಮೋಹನ್

ವಿಜಯಾ ಐ ಕ್ಲಿನಿಕ್, ಸಾಗರ


ರೋಗಿಗಳ ತಪಾಸಣೆ ಮಾಡುಸಂದರ್ಭದಲ್ಲಿ ವೈದ್ಯರು, ತಮ್ಮ ವೃತ್ತಿ ಜೀವನದಲ್ಲಿ ಕಂಡು ಬಂದ ಅಪರೂಪದ ಕೆಲವು ಕಾಯಿಲೆಗಳನ್ನು ಹಾಗೂ ವಿಸ್ಮಯಕಾರಿ ವಿಷಯಗಳನ್ನು ವೈದ್ಯಕೀಯ ಜರ್ನಲ್‌ಗಳಲ್ಲಿ ದಾಖಲಿಸುವ ಪರಿಪಾಠವಿದೆ.. ಕಳೆದ ವರ್ಷ, ೨೦೨೧ರಲ್ಲಿ ವಿಶ್ವದ ವಿವಿದೆಡೆ ದಾಖಲಾದ ಅಂಥ ಕೆಲವು ವಿಸ್ಮಯದ  ಸುದ್ದಿಗಳನ್ನು  ಹೆಕ್ಕಿ ತಂದಿದ್ದಾರೆ, ಜನಪ್ರಿಯ ವೈದ್ಯ ಲೇಖಕರಾದ ಡಾ. ಹೆಚ್. ಎಸ್. ಮೋಹನ್ ಅವರು.

ಮಾರಕ ರೋಗ - ಕ್ಯಾನ್ಸರ್

ಮಾರಕ ರೋಗ - ಕ್ಯಾನ್ಸರ್

ಬಿ.ಎನ್. ರೂಪ

ಸರ್ಕಾರಿ ಉರ್ದು ಮತ್ತು ಆಂಗ್ಲ ಪ್ರೌಢಶಾಲೆ, ಗೋರಿಪಾಳ್ಯ

ಬೆಂಗಳೂರು ದಕ್ಷಿಣ ವಲಯ ೨.

 

ಫೆಬ್ರವರಿ ೪ರಂದು ವಿಶ್ವದಾದ್ಯಂತ ‘ಕ್ಯಾನ್ಸರ್ ದಿನ” ಎಂದು ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಈ ರೋಗದ ಬಗ್ಗೆ ಅರಿವು ಮೂಡಿಸುವ ಲೇಖನವನ್ನು ವಿಜ್ಞಾನ ಶಿಕ್ಷಕಿ ಶ್ರೀಮತಿ ಬಿ.ಎನ್. ರೂಪ ಬರೆದಿದ್ದಾರೆ. ರೋಗಕ್ಕೆ ಕಾರಣವಾಗುವ ಅಂಶಗಳ ಜೊತೆಗೆ, ರೋಗವನ್ನು ತಡೆಯಬಹುದಾದ ವಿಧಾನಗಳ ಬಗ್ಗೆ ಮಾಹಿತಿ ಈ ಲೇಖನದಲ್ಲಿದೆ.

ಯುರೇಕಾ !

ಯುರೇಕಾ !

ವಿಜಯ ಕುಮಾರ್ ಹೆಚ್.ಜಿ.

ವಿಜ್ಞಾನ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ

ಕಾವಲ್ ಭೈರಸಂದ್ರ, ಬೆಂಗಳೂರು ಉತ್ತರ ವಲಯ-೦೩


ವಿಜ್ಞಾನದ ವಿದ್ಯಾರ್ಥಿಗಳಲ್ಲಿ ಕುತೂಹಲ ಮೂಡಿಸಿ, ಅವರಲ್ಲಿ ಪ್ರಯೋಗಶೀಲತೆಯ ಮನೋಭಾವವನ್ನು ಉದ್ದೀಪನಗೊಳಿಸುವುದು, ವಿಜ್ಞಾನ ಬೋಧಿಸುವ ಶಿಕ್ಷಕರ ಆದ್ಯ ಕರ್ತವ್ಯ. ಅಂಥ ತಮ್ಮ ಒಂದು ಅನುಭವವನ್ನು ‘ಸವಿಜ್ಞಾನ’ ತಂಡದ ಶಿಕ್ಷಕ ವಿಜಯಕುಮಾರ್ ಅವರು ಇಲ್ಲಿ ಹಂಚಿಕೊಂಡಿದ್ದಾರೆ.

ಅತ್ಯಂತ ಹಗುರಲೋಹ - ಲಿಥಿಯಂ

ಅತ್ಯಂತ ಹಗುರಲೋಹ - ಲಿಥಿಯಂ

ಶ್ರೀನಿವಾಸ್

ಸರ್ಕಾರಿ ಪ್ರೌಢ ಶಾಲೆ,

ಮುತ್ತೂರು

ಶಿಡ್ಲಘಟ್ಟ ತಾಲೂಕು 

ಚಿಕ್ಕಬಳ್ಳಾಪುರ ಜಿಲ್ಲೆ  

ಅತ್ಯಂತ ಹಗುರ ಲೋಹ ಎಂದು ಪರಿಗಣಿಸಲಾಗಿರುವ ಲಿಥಿಯಂ ಲೋಹದ ಅನ್ವೇಷಣೆ ಹಾಗೂ ಉಪಯುಕ್ತತೆಗಳ ಬಗ್ಗೆ ಬೆಳಕು ಚೆಲ್ಲುವ ಈ ಮಾಹಿತಿಪೂರ್ಣ ಲೇಖನವನ್ನು ’ಸವಿಜ್ಞಾನ ’ ತಂಡದ ವಿಜ್ಞಾನ ಶಿಕ್ಷಕರಾದ ಶ್ರೀ ಶ್ರೀನಿವಾಸ್ ಅವರು ಬರೆದಿದ್ದಾರೆ.

ಅಭಿಜಾತ ಚಿತ್ರ ಕಲಾವಿದೆ, ಶ್ರೀಮತಿ ಜಯಶ್ರೀ ಶರ್ಮ

ಓದಿದ್ದು ಸೂಕ್ಷ್ಮಜೀವಿಗಳ ಬಗ್ಗೆ, ಓಗೊಟ್ಟಿದ್ದು ಚಿತ್ರಕಲೆಯ ಸೂಕ್ಷ್ಮದನಿಗೆ !

- ಅಭಿಜಾತ ಚಿತ್ರ ಕಲಾವಿದೆ, ಶ್ರೀಮತಿ ಜಯಶ್ರೀ ಶರ್ಮ 


ಸವಿಜ್ಞಾನ’ ಪತ್ರಿಕೆಯ ಜನಪ್ರಿಯ ಅಂಕಣಗಳಲ್ಲಿ ಒಂದು, ವಿಜ್ಞಾನಕ್ಕೆ ಸಂಬಂಧಿಸಿದ ವ್ಯಂಗ್ಯ ಚಿತ್ರಗಳು. ಮೊದಲ ಸಂಚಿಕೆಯಿಂದಲೂ ತಪ್ಪದೆ ಈ ಅಂಕಣಕ್ಕೆ ವ್ಯಂಗ್ಯಚಿತ್ರಗಳನ್ನು ಬರೆಯುತ್ತಿರುವವರಲ್ಲಿ ಒಬ್ಬರಾದ ಶ್ರೀಮತಿ ಜಯಶ್ರೀ ಶರ್ಮ, ಮೂಲತಃ ಸೂಕ್ಷ್ಮಜೀವಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವೀಧರೆ. ಅದೇ ವಿಷಯದಲ್ಲಿ ಉಪನ್ಯಾಸಕಿಯಾಗಿ ವೃತ್ತಿ ಜೀವನ ಪ್ರಾರಂಭಿಸಿದ ಅವರು ಈಗ ಚಿತ್ರಕಲೆಯತ್ತ ಹೊರಳಿ, ಅದರಲ್ಲಿ ಅಪಾರ ಯಶಸ್ಸನ್ನು ಕಂಡಿದ್ದಾರೆ. ಅವರ ಸಾಧನೆಯ ಒಂದು ಕಿರು ಪರಿಚಯವನ್ನು ಶಿಕ್ಷಕರಾದ ರಾಘವೇಂದ್ರ ಮಯ್ಯ ಮತ್ತು ಲಕ್ಷ್ಮಿ ಪ್ರಸಾದ್ ನಾಯಕ್ ಇಲ್ಲಿ ಮಾಡಿಕೊಟ್ಟಿದ್ದಾರೆ.

ಕಡ್ಡಿ ಗೊಂಬೆಗಳು

ಕಡ್ಡಿ ಗೊಂಬೆಗಳು

ಸಿದ್ದು ಬಿರಾದಾರ, ವಿಜ್ಞಾನ ಶಿಕ್ಷಕ

ಸರಕಾರಿ ಪ್ರೌಢ ಶಾಲೆ ಚಿಬ್ಬಲಗೇರಿ

ತಾ: ಹಳಿಯಾಳ, ಶಿರಿಸಿ ಶೈಕ್ಷಣಿಕ ಜಿಲ್ಲೆ

ಉತ್ತರ ಕನ್ನಡ 

ವಿಜ್ಞಾನ ಬೋಧನೆಯಲ್ಲಿ ಬೊಂಬೆಗಳನ್ನು ಪರಿಣಾಮಕಾರಿಯಾಗಿ ಹೇಗೆ ಬಳಸಿಕೊಳ್ಳಬಹುದೆಂಬ ಬಗ್ಗೆ ತಮ್ಮ ಅನುಭವಗಳನ್ನು ಸರಣಿ ಲೇಖನಗಳಲ್ಲಿ ಹಂಚಿಕೊಳ್ಳುತ್ತಿರುವ ಸೃಜನಶೀಲ ಶಿಕ್ಷಕ ಸಿದ್ದು ಬಿರಾದಾರ್,  ಈ ಬಾರಿಯ ಲೇಖನದಲ್ಲಿ ಕಡ್ಡಿ ಗೊಂಬೆಗಳನ್ನು ತಯಾರಿಸುವ ವಿಧಾನವನ್ನು ಚಿತ್ರಗಳ ಸಹಿತ ವಿವರಿಸಿದ್ದಾರೆ.

ಸವಿಜ್ಞಾನ : ಪದಬಂಧ- 2

ಸವಿಜ್ಞಾನ-ಪದಬಂಧ- 2

ಈ ಪದಬಂಧ 10ನೇ ತರಗತಿಯ ಭೌತಶಾಸ್ತ್ರದ “ಶಕ್ತಿಯ ಆಕರಗಳು” ಘಟಕವನ್ನು ಆಧರಿಸಿದೆ.


ಸೂಚನೆಗಳು:

ಎಡದಿಂದ ಬಲಕ್ಕೆ

1. ಉಷ್ಣ ವಿದ್ಯುತ್‌ ಸ್ಥಾವರಗಳಲ್ಲಿ ಬಳಕೆಯಾಗುವ ಇಂಧನ   (4)

2. ಜನರ ನೆಲ, ವನ್ಯಜೀವಿಗಳ ಆವಾಸ ಸ್ಥಾನಗಳನ್ನು ಮುಳುಗಿಸುತ್ತದೆ ಇದರ ನಿರ್ಮಾಣ (8)

3. ಪೆಟ್ರೋಲ್‌, ಡೀಸಲ್‌ ನಂತಹ ಇಂಧನಗಳನ್ನು ಸಾಮಾನ್ಯವಾಗಿ ಹೀಗೆ ಕರೆಯುವರು (8)

4. ಸಗಣಿಯ ಬಗ್ಗಡ ಬಳಸಿ ಅಡುಗೆ ಮನೆಯ ಬಳಕೆಗೆ ಪಡೆಯುವ ಇಂಧನದ ರೂಪ (3)

5. ಭವಿಷ್ಯದ ಶಕ್ತಿ (4)

6. ಸಾಂಪ್ರದಾಯಿಕ ಶಕ್ತಿಯ ಆಕರಗಳಿಗೆ ಬದಲಾಗಿ ಒದಗುವ ಶಕ್ತಿ (5)

7. ಅಗತ್ಯಕ್ಕೆ ತಕ್ಕಷ್ಟು ಶಕ್ತಿ ದೊರಯದಿರುವಿಕೆ (6)

8. ಅಣು ವಿದ್ಯುತ್‌ ಸ್ಥಾವರಗಳಲ್ಲಿ ಅಪಾಯಕ್ಕೆ ಕಾರಣ (4)

ಮೇಲಿನಿಂದ ಕೆಳಕ್ಕೆ

1. ಜೀವಿಗಳ ತ್ಯಾಜ್ಯದಿಂದ ಒದಗುವ ಇಂಧನ (6)

2. ಸೂರ್ಯನ ಶಾಖ ಶಕ್ತಿ ಬಳಸಿ ನೀರು ಕಾಯಿಸುವ ಇದನ್ನು ಕೆಳಗಿನಿಂದ ಮೇಲಿಡಬೇಕು (5)

3. ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಪರಿವರ್ತಿಸಲು ಸುಲಭವಾದ ಶಕ್ತಿ (4)

4. “ನರ್ಮದಾ ಬಚಾವೋ” ಚಳುವಳಿ ಇದನ್ನು ಕಟ್ಟುವುದರ ವಿರುದ್ಧ (4)

5. ಗಾಳಿಯ ಜವ 15 ಕಿಮೀ/ ಗಂಟೆ ಬೀಸಿದರೆ ಈ ಶಕ್ತಿ ಸ್ಥಾವರ ಸ್ಥಾಪಿಸಬಹುದು (5)

6. ಹಲಗೆಯಂತಹ ಇದನ್ನು ಬಿಸಿಲಿಗೆ ಒಡ್ಡಿದರೆ ವಿದ್ಯುತ್‌ ಸಿಗುತ್ತದೆ (5)

7. ಕೆಲಸ ಮಾಡುವ ಸಾಮರ್ಥ್ಯವನ್ನು ಪಡೆಯುವ ಮೂಲಕ್ಕೆ ನಾಮಕರಣ(6)

    

ಕಳೆದ ಸಂಚಿಕೆಯ ಪದಬಂಧದ ಉತ್ತರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. 

                           

 ರಚನೆ: ವಿಜಯಕುಮಾರ್‌ ಹೆಚ್.‌ ಜಿ

ಸಹ ಶಿಕ್ಷಕರು (ಭೌತವಿಜ್ಞಾನ)

ಸರ್ಕಾರಿ ಪ್ರೌಢ ಶಾಲೆ, ಕಾವಲ್‌ ಭೈರಸಂದ್ರ

                                        ಬೆಂಗಳೂರು ಉತ್ತರ ವಲಯ-3 

ವ್ಯಂಗ್ಯಚಿತ್ರಗಳು - ಫೆಬ್ರವರಿ 2022

 



ಶ್ರೀಮತಿ ಜಯಶ್ರೀ ಬಿ ಶರ್ಮ





ವಿಜಯ್‌ಕುಮಾರ್ 

ಒಗಟುಗಳು - ಫೆಬ್ರವರಿ 2022

 ಒಗಟುಗಳು -  ಫೆಬ್ರವರಿ  2022

ವಿಶ್ವಗಣಿತ ಲೋಕದ ವಿಸ್ಮಯ

ಜಿ ಹೆಚ್ ಹಾರ್ಡಿಯ ಸಾಹಚರ್ಯ

ನಾಮಗಿರಿಯ ಜಗನ್ಮಾತೆಯ ಆವಿಷ್ಕಾರ

ರಾಷ್ಟ್ರೀಯ ಗಣಿತದಿನಕ್ಕೆ ಕಾರಣನೀತ

ಯಾರೀ ಮಹಾಮಹಿಮ ಅಮೃತಪುತ್ರ ?

 

ನಾನೊಂದು ನಾಲ್ಕು ಅಂಕಿಗಳ ಸಂಖ್ಯೆ

ಈ ಅಂಕಿಗಳ ಮೊತ್ತ 2 ಅಂಕಿಗಳ ಸಂಖ್ಯೆ

ಈ ಎರಡು ಅಂಕಿಗಳ ತಿರುಗುಮುರುಗಾಗಿಸಿ ಗುಣಿಸಿ

ಮತ್ತೆ ನನ್ನದೇ ದರ್ಶನ!!!

ಗಣಿತ ದಿನಕ್ಕೂ ನನಗೂ ಇದೆ ಐತಿಹಾಸಿಕ ಅನುಬಂಧ

ಜಾಣ ಜಾಣೆಯರೇ  ಅಂಕಿ-ಸಂಖ್ಯೆಗಳ ಸಿಕ್ಕು ಬಿಡಿಸಿ 

ಕಂಡುಹಿಡಿಯಿರಿ ಈಗ ನನ್ನ!!!

 

ಕಲಿವ ಮಗುವನ್ನು ಕಾಡುವೆ ನಾ

ಕಲಿಕಾ ದೋಷವಿದು ಎಚ್ಚರ

ಕೆಲವು ಅಕ್ಷರ, ಸಂಖ್ಯೆಗಳ ತಿರುಗುಮುರುಗಾಗಿಸುವೆ ನಾ

ನ್ಯೂರಾಲಜಿಗೆ ಸಂಬಂಧಿಸಿದ ಸಮಸ್ಯೆನಾ

ಅಂತಃಚಕ್ಷುವ ತೆರೆದು ಮಗುವನ್ನು ಈ ಸುಳಿಯಿಂದ ಹೊರಗೆಳೆಯಿರಿ

ಕಲಿಕೆಯ ಸುಗಮಕಾರರಾಗಿ

ಮಗುವಿನ ಬಾಳ ಬೆಳಗಿ ಗುರುದೇವಾ

                                           

ಗಾಳಿ ತುಂಬಿದೆ ನನ್ನೊಡಲ ತುಂಬಾ ಆದರೆ ನಾ ಖಾಲಿ ಕೋಣೆಯಲ್ಲ

ದೇಹದ ತುಂಬೆಲ್ಲಾ ರಂಧ್ರಗಳು ಆದರೂ ನೀರ ಹಿಡಿದಿಡಬಲ್ಲೆ!!!

ಒತ್ತಡ ಹಾಕಿ ಸಂಪೀಡಿಸಬಲ್ಲಿರಿ ನೀವು ಆದರೆ ನಾ ಅನಿಲವಲ್ಲ

ಜಾಣ ಜಾಣರೇ ನೀವೀ ಒಗಟ ಬಿಡಿಸಿ ಹೇಳುವಿರೇ?

 

ಮಾಹಿತಿ ತಂತ್ರಜ್ಞಾನ ಯುಗದ ಬೆನ್ನೆಲುಬಿನಂತಿರುವ ಧಾತು ನಾ

MOSFET ನ ಮೂಲದ್ರವ್ಯ ನಾ 

ಡಯಾಟಮ್ ಗಳ ಅಂದದ ಭಿತ್ತಿಗಳಲ್ಲೂ ಇರುವೆ

ಆಧುನಿಕ ಜಗತ್ತಿನಲ್ಲಿ ಬರ್ಜೀಲಿಯಸ್ ನ ಶೋಧ ನಾ

ಅತಿ ಕಠಿಣ ಕೃತಕ ವಸ್ತುವಿನಲೂ, ಉಸುಕಿನಲೂ ನಾನಿರುವೆ

ಚತುರಮತಿಗಳೇ ವಿವರಿಸಿ ಗುರುತಿಸಬಲ್ಲಿರೆ ನನ್ನ?                                  

 

ಗಾಜಿನ ದೇಹದೊಳು ಆರ್ಗಾನೇ  ಉಸಿರು

ಲೋಹದ ಸುರುಳಿ ದಹಿಸಿದರೂ ಕರಗದೆ ಬೆಳಕು ಚೆಲ್ಲುವುದು

ಉಷ್ಣ ಶಕ್ತಿಯ ನಷ್ಟ ಹೆಚ್ಚಿದ್ದರೂ ಕೃತಜ್ಞರಾಗಿರಬೇಕು ಎಡಿಸನ್ ಗೆ

ಸುಳಿವ ಹಿಡಿದು ವಿವರಿಸಿ ಹೇಳೀ ಒಗಟ

                                   

ಕೀಲ್ಗಾಲುಗಳ ದೇಹದಲಿ

ಬೆಳಕು ಚೆಲ್ಲುವ ಲ್ಯುಸಿಫೆರಿನ್ ರಾಸಾಯನಿಕ

ಕಗ್ಗತ್ತಲ ಕಾರ್ಗಾಲದ ರಾತ್ರಿಯಲ್ಲಿ ವಿಸ್ಮಯದ ಬೆಳಕು ಚೆಲ್ಲುವ

ಈ ಜೀವಿಯ ವಂಶ ವರ್ಗಗಳ ಗುಟ್ಟು ರಟ್ಟು ‌ ಮಾಡುವಿರೇ?. 

Ramachandra Bhat B G
Assistant Master
GHS, Byatarayanapura
Bengaluru