ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಸವಿಜ್ಞಾನದ ಲೇಖನಗಳನ್ನು ಓದಿ, ಅಭಿಪ್ರಾಯ ದಾಖಲಿಸಿ. ನಿಮ್ಮ ಪ್ರೋತ್ಸಾಹಗಳೇ ಲೇಖಕರಿಗೆ ಶ್ರೀರಕ್ಷೆ Science is a beautiful gift to humanity; we should not distort it. A. P. J. Abdul Kalam

Friday, August 4, 2023

ಚಂದ್ರಯಾನ – ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಭಾರತದ ದಿಟ್ಟ ಹೆಜ್ಜೆ

 ಚಂದ್ರಯಾನ – ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಭಾರತದ ದಿಟ್ಟ ಹೆಜ್ಜೆ


ಲೇಖಕರು

ಬಿ.ಎನ್.ರೂಪ,

ಸಹಶಿಕ್ಷಕರು,

ಕೆ ಪಿ ಎಸ್‌ ಜೀವನ್‌ ಭೀಮಾನಗರ,

ಬೆಂಗಳೂರು ದಕ್ಷಿಣ ವಲಯ-4.

ಕೆಲ ದಿನಗಳ ಹಿಂದಷ್ಟೇ ಉಡಾವಣೆಗೊಂಡ ʼಚಂದ್ರಯಾನ-೩ʼ ಗಗನ ನೌಕೆ ಇನ್ನು ಕೆಲವೇ ದಿನಗಳಲ್ಲಿ ಚಂದ್ರನ ಮೇಲೆ ಇಳಿಯಲಿದೆ. ಈ ಹಿನ್ನೆಲೆಯಲ್ಲಿ ಲೇಖನವೊಂದನ್ನು ಪ್ರಸ್ತುತ ಪಡಿಸಿದ್ದಾರೆ, ಶಿಕ್ಷಕಿ ಬಿ.ಎನ್.‌ ರೂಪಾ ಅವರು.

 

‘ಚಂದ್ರಯಾನ’ – ಈ ಪದ ಎಷ್ಟು ರೋಮಾಂಚನ, ಸಂಚಲನವನ್ನು ಸೃಷ್ಟಿ ಮಾಡಿದ್ದು ನೋಡಿದಿರಲ್ಲ ? ಚಂದ್ರನನ್ನು ನಮ್ಮ ಕವಿಗಳು ಸುಂದರ ಹೆಣ್ಣಿನ ಮುಖಾರವಿಂದಕ್ಕೆ ಹೋಲಿಸಲು,ತಾಯಂದಿರು ತಮ್ಮ ಮಕ್ಕಳಿಗೆ ಅಕ್ಕರೆಯಿಂದ ಹಾಗೂ ನಲ್ಮೆಯಿಂದ ಪೋಷಿಸಲು ತೋರಿಸುವರು, ಸಂಪ್ರದಾಯವಾದಿಗಳು ಹಬ್ಬ-ಹರಿದಿನಗಳನ್ನು ಆಚರಿಸಲು ಚಂದ್ರನನ್ನು ಅವಲಂಬಿಸಿದ್ದರೆ,  ಹುಣ್ಣಿಮೆ, ಅಮಾವಾಸ್ಯೆಗಳ ಆಚರಣೆ, ಗ್ರಹಣಗಳ ಆಚರಣೆ ಎಲ್ಲದಕ್ಕೂ ಚಂದ್ರನೇ ನಿಮಿತ್ತ.

ನಮ್ಮ ಏಕೈಕ ನೈಸರ್ಗಿಕ ಉಪಗ್ರಹ ಚಂದ್ರ.

ನಮ್ಮ ಭೂಮಿಯ ಕಕ್ಷೆಯನ್ನು ಬಿಟ್ಟು, ಗುರುತ್ವಾಕರ್ಷಣೆಯ ಬಲವನ್ನು ಮೀರಿ ಅನ್ಯಗೃಹಗಳಿಗೆ,  ಬಾಹ್ಯಾಕಾಶಕ್ಕೆ ಜಿಗಿಯಲುಸಾಧ್ಯವೇ ? ಚಂದ್ರನ ಕಕ್ಷೆಗೆ,ಅವನ ಅಂಗಳಕ್ಕೆ ಜಿಗಿತ ಸಾಧ್ಯವೇ ? ಎಂಬ ಪ್ರಶ್ನೆಗೆ ವಿಜ್ಞಾನಿಗಳ ಬಹುವರ್ಷದ ಸತತ ಪ್ರಯತ್ನ, ಸಂಶೋಧನೆ ಅಭಿವೃದ್ಧಿಯಿಂದ ಉತ್ತರ ಸಾಧ್ಯವಾಗಿರುವುದು ಈಗ ಇತಿಹಾಸದ ಪುಟಗಳಲ್ಲಿ ಸೇರಿಹೋಗಿದೆ.

ಚಂದ್ರಯಾನವನ್ನು ನಮ್ಮ ಭಾರತ ದೇಶ ಮೂರು ಬಾರಿ ಯಶಸ್ವಿಯಾಗಿ ಸಾಧಿಸಿದ ಹೆಗ್ಗಳಿಕೆಯನ್ನು ಹೊಂದಿದೆ. ಮೊದಲ ಚಂದ್ರಯಾನದ ನೌಕೆಯನ್ನು(ಚಂದ್ರಯಾನ-೧) ನಮ್ಮ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)  22ಅಕ್ಟೋಬರ್  2008 ರಂದು ಉಡಾವಣೆ ಮಾಡಿತು. ಇದು ಭಾರತದ ಮೊದಲ ಚಂದ್ರನ ಶೋಧಕ ಯಾನವಾಗಿದೆ.

ಆಂಧ್ರಪ್ರದೇಶದ ಶ್ರೀಹರಿ ಕೋಟಾದ ಸತೀಶ್‌ ಧಾವನ್‌ ಬಾಹ್ಯಾಕಾಶ ಕೇಂದ್ರದಿಂದ PSLV_XL ರಾಕೆಟ್ ಅನ್ನು ಬಳಸಿಕೊಂಡು ಈ ನೌಕೆಯನ್ನು ಉಡಾವಣೆ ಮಾಡಲಾಯಿತು.  ಇದು ಚಂದ್ರನ ಕಕ್ಷೆ ಮತ್ತು ಇಂಪಾಕ್ಟರ್ರನ್ನು ಒಳಗೊಂಡಿದೆ.  ಆಗಸ್ಟ್ 2009ರಂದು ಚಂದ್ರಯಾನ-1  ನೌಕೆ ತನ್ನ ಸಂವಹನವನ್ನು ಆರ್ಬಿಟರ್‌ ಸ್ಟಾರ್‌  ವೈಫಲ್ಯದಿಂದ ನಿಲ್ಲಿಸಿತು.

ಚಂದ್ರಯಾನ-1ರ ನಂತರ ಇಸ್ರೋ ಅಭಿವೃದ್ಧಿಪಡಿಸಿದ ಚಂದ್ರಯಾನ-2 ಚಂದ್ರನತ್ತ ಎರಡನೇ ಕಾರ್ಯಚರಣೆಯಾಗಿದೆ. ಇದು ಚಂದ್ರನ ಆರ್ಬಿಟರ್‌ ಲ್ಯಾಂಡರ್‌ ಮತ್ತು ಪ್ರಾಗನ್‌ರೋವರ್‌ ಅನ್ನು ಒಳಗೊಂಡಿತ್ತು. ಮುಖ್ಯವಾಗಿ. ಚಂದ್ರನ ಮೇಲ್ಮೈ ಸಂಯೋಜನೆಯನ್ನು ಅಧ್ಯಯನ ಮಾಡುವುದು, ನೀರಿನ ಆಕರ ಹಾಗೂ ಪ್ರಮಾಣದ ಬಗ್ಗೆ ಅನ್ವೇ಼ಣೆಯನ್ನು ಒಳಗೊಂಡಿತ್ತು. ಆದರೆ, ಕೆಲವು ತಾಂತ್ರಿಕದೋಷಗಳಿಂದ ತನ್ನ ಪಥದಿಂದ ಪತನಗೊಂಡಿತು.

ಚಂದ್ರಯಾನ- 2 ಚಂದ್ರನ ಕಕ್ಷೆಯನ್ನು ಪ್ರವೇಶಿಸಿದ ನಂತರ ಕೆಲ ತಂತ್ರಾಂಶಗಳ ದೋಷದಿಂದ ಲ್ಯಾಂಡರ್‌ ಅಪಘಾತಕ್ಕೆ ಈಡಾಯಿತು. ಹೀಗಾಗಿ, ಈ ಬಗ್ಗೆ  ಮತ್ತೊಂದು ಕಾರ್ಯಾಚರಣೆಯನ್ನು ಪ್ರಸ್ತಾಪಿಸಲಾಯಿತು.ಇದರ ಫಲವೇ ಚಂದ್ರಯಾನ-3.  ಈಗಾಗಲೇ ತಿಳಿದಿರುವಂತೆ, ಚಂದ್ರಯಾನ-3 ದಿನಾಂಕ 14- 7-2023 ರಂದು ಉಡಾವಣೆಯಾಗಿದೆ. ಇದು ಲ್ಯಾಂಡರ್‌ ಅನ್ನುಮತ್ತು ಪ್ರಾಗನ್‌ ರೋವರ್‌ ಅನ್ನು ಹೊಂದಿದೆ. ಆದರೆ, ಆರ್ಬಿಟರ್‌ ಅನ್ನು ಹೊಂದಿಲ್ಲ. ಈ ನೌಕೆ ಆಗಸ್ಟ್ 23ರಂದು ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಇಳಿಯುವ ನಿರೀಕ್ಷೆಯಿದೆ.

 


ಅನೇಕ ರಾಷ್ಟ್ರಗಳು ಚಂದ್ರನ ದಕ್ಷಿಣ ಭಾಗದಲ್ಲಿ ತಮ್ಮ ಬಾಹ್ಯಾಕಾಶ ನೌಕೆಯನ್ನು ಇಳಿಸಲು ಪ್ರಯತ್ನಿಸಿವೆ. ಆದರೆ, ಈ ಕಾರ್ಯಾಚರಣೆಯಲ್ಲಿ ಇನ್ನೂ ಯಾವ ದೇಶವೂ ಯಶಸ್ವಿಯಾಗಿಲ್ಲ. ಚಂದ್ರಯಾನ-3 ದಿಟ್ಟ, ಮಹತ್ವಾಕಾಂಕ್ಷೆಯ ಹೆಜ್ಜೆಯಾಗಿದೆ ಮತ್ತು ತಾಂತ್ರಿಕ ಅಭಿವೃದ್ಧಿಯನ್ನುಹೊಂದಿದೆ.

ಚಂದ್ರನ ಭೂವಿಜ್ಞಾನ, ವಾತಾವರಣ, ವಾಯುಗುಣ, ಮಂಜುಗಡ್ಡೆಯ ಉಪಸ್ಥಿತಿ, ನೀರಿನ ಪ್ರಮಾಣ, ಅಲ್ಲಿರುವ ಖನಿಜ ಲವಣಗಳ ಪರಿಸ್ಥಿತಿ, ಇವುಗಳ ಬಗ್ಗೆ ಅಧ್ಯಯನವೇ ಇದರ ಪ್ರಮುಖ ಉದ್ದೇಶವಾಗಿದೆ. ಒಟ್ಟಾರೆ, ಚಂದ್ರಯಾನ ನಮ್ಮ ಭಾರತದ ವೈಜ್ಞಾನಿಕ ಯಶೋಗಾಥೆಯಾಗಿದ್ದು ಚಂದ್ರನ ಶೋಧನೆಯ ಬಹುಮುಖ್ಯ ಪರಿಶೋಧಕ ಸೂಚಿಯಾಗಿದೆ. ಹೀಗೇ ಮುಂದುವರೆದಲ್ಲಿ ಭಾರತದ ವಿಜ್ಞಾನಿಗಳು ಚಂದ್ರನಲ್ಲಿ ಮನೆ ಮಾಡುವ ದಿನಗಳು ದೂರವಿಲ್ಲ ಅನ್ನಿಸುತ್ತದೆ.

ಸೋಲೇ ಗೆಲುವಿನ ಸೋಪಾನ ಎಂಬ ಹೇಳಿಕೆ ಎಷ್ಟು ಸಮಂಜಸವಾಗಿದೆ ಅಲ್ಲವೇ?

ನಮ್ಮ ಬಾಹ್ಯಾಕಾಶ‌ ವಿಜ್ಞಾನಿಗಳ ಎದೆಗುಂದದ ಸತತ ಪ್ರಯತ್ನಕ್ಕೆ ಈ ಚಂದ್ರಯಾನ-೩ ಮುನ್ನುಡಿಯಂತಿದೆ. ಸತತಪ್ರಯತ್ನ ಹಾಗೂ ಕಠಿಣ ಪರಿಶ್ರಮದಿಂದ ಯಾವುದೇ ರೀತಿಯ ಸಾಧನೆ ಸಾಧ್ಯ ಎಂಬುದಕ್ಕೆ ಈ ಚಂದ್ರಯಾನ-3 ನಿದರ್ಶನದಂತಿದೆ.

ಚಂದ್ರಯಾನ-3 ರ ಪ್ರಮುಖ ರೂವಾರಿಗಳಾದ “ರಾಕೆಟ್‌ ವುಮನ್ ಆಫ್ ಇಂಡಿಯಾ” ಎಂದು ನಾಮಾಂಕಿತರಾಗಿರುವ ಡಾಕ್ಟರ್‌ ರಿತು ಕರಿಧಾಲ್‌ ಅವರು ಈ  ಚಂದ್ರಯಾನ-3ರ ಕಾರ್ಯಾಚರಣೆಯನ್ನು ಮುನ್ನಡೆಸುತ್ತಿದ್ದಾರೆ. ಡಾ. ರಿತುಕರಿಧಾಲ್‌ ಶ್ರೀವಾಸ್ತವ  ಅವರು  ಇಸ್ರೋದಲ್ಲಿ ಕೆಲಸಮಾಡುತ್ತಿರುವ ವಿಜ್ಞಾನಿ.  ಅವರು ಭಾರತದ ಮಹತ್ವಾಕಾಂಕ್ಷೆಯ ಮಾರ್ಸ್ ಆರ್ಬಿಟಲ್‌ ಮಿಷನ್ನ, (ಮಂಗಳಯಾನ) ಉಪಕಾರ್ಯಾಚರಣೆ ನಿರ್ದೇಶಕರಾಗಿದ್ದರು . ಅವರು ಭಾರತದ ಅನೇಕ ಖ್ಯಾತ  "ರಾಕೆಟ್ ಮಹಿಳೆಯರಲ್ಲಿ”  ಒಬ್ಬರು ಎಂದು ಉಲ್ಲೇಖಿಸಲ್ಪಟ್ಟಿದ್ದಾರೆ.  

ನಮ್ಮ ಬಾಹ್ಯಾಕಾಶ ವಿಜ್ಞಾನಿಗಳು ನಮಗೆ ಸ್ಪೂರ್ತಿದಾಯಕರಾಗಿದ್ದಾರೆ. ಅವರ ಸತತ ಪರಿಶ್ರಮ, ಕಠಿಣ ಪ್ರಯತ್ನಕ್ಕೆ ಅವರಿಗೆಎಷ್ಟು ನಮನ ಸಲ್ಲಿಸಿದರೂ ಸಾಲದು. ನೀವೇನೆನ್ನುತ್ತೀರಿ ?

 ಹೆಚ್ಚಿನ ವಿವರಗಳಿಗಾಗಿ, ವಿಶ್ವವಾಣಿ ಕ್ಲಬ್ ಹೌಸ್ ನಲ್ಲಿ ಡಾಕ್ಟರ್ ಗುರುಪ್ರಸಾದ್ ಇಸ್ರೋ ನಿವೃತ್ತ ವಿಜ್ಞಾನಿಗಳು ನೀಡಿದ ಮಾಹಿತಿ

ಲಿಂಕ್‌    : https://www.clubhouse.com/room/MzaB80pw?utm_medium=ch_room_lr&utm_campaign=S_eco8gEd3XhM_HrurLonw-831208 


‘ವೈದ್ಯ ವಿಜ್ಞಾನಿಯ ಬಿಚ್ಚಿದ ಜೋಳಿಗೆ’

 ‘ವೈದ್ಯ ವಿಜ್ಞಾನಿಯ ಬಿಚ್ಚಿದ ಜೋಳಿಗೆ’        

ಲೇಖಕರು : ರಮೇಶ, ವಿ,ಬಳ್ಳಾ 
ಅಧ್ಯಾಪಕರು

ಬಾಲಕಿಯರ ಸರ್ಕಾರಿ ಪ ಪೂ ಕಾಲೇಜು (ಪ್ರೌಢ)

ಗುಳೇದಗುಡ್ಡ  ಜಿ: ಬಾಗಲಕೋಟ


ಖ್ಯಾತ ಪೆಥಾಲಜಿ ವೈದ್ಯರಾಗಿ ಹೆಸರು ಗಳಿಸಿದ್ದ ಡಾ. ಸ.ಜ ನಾಗಲೋಟಿಮಠ ಅವರು ವೈದ್ಯ ವಿಜ್ಞಾನ ಸಾಹಿತ್ಯ ಕ್ಷೇತ್ರಕ್ಕೆ ಮಾತ್ರವಲ್ಲ, ಕನ್ನಡ ಜನಪ್ರಿಯ ಸಾಹಿತ್ಯ ಕ್ಷೇತ್ರಕ್ಕೂ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ. ಅವರ ಸ್ಮರಣೆಯಲ್ಲಿ ಒಂದು ಲೇಖನ, ಶಿಕ್ಷಕ ರಮೇಶ್‌ ಬಳ್ಳಾ ಅವರಿಂದ.

ಇತ್ತೀಚಿಗೆ ಬಾಗಲಕೋಟೆಯಲ್ಲಿ ಒಂದು ನಾಟಕ ಪ್ರದರ್ಶನವಾಯಿತು. ಬಹಳ ದಿನಗಳಿಂದ ನಾನು ನಾಟಕದ ಕಡೆ ಸುಳಿದಿರಲಿಲ್ಲ. ಅದೇನೋ ನಾಟಕದ ಟೈಟಲ್ ಕೇಳಿದಾಕ್ಷಣ ನೋಡಲೇಬೇಕೆನಿಸಿತು. ಅದು ಒಬ್ಬ ಅಪರೂಪದ ವೈದ್ಯವಿಜ್ಞಾನಿ, ಗ್ರೇಟ್ ಪೆಥಾಲಾಜಿಸ್ಟ್, ವೈಧ್ಯವಿಜ್ಞಾನದ ಲೇಖಕ ಡಾ. ಸ ಜ ನಾಗಲೋಟಿಮಠ ಅವರ ಜೀವನಾಧಾರಿತ ವಿಶಿಷ್ಟ ನಾಟಕವಾಗಿತ್ತು. ಕಲಬುರಗಿಯ ರಂಗಾಯಣದ ಕಲಾವಿದರು ಅದ್ಭುತವಾಗಿ ವೈದ್ಯರೊಬ್ಬರ ಬದುಕನ್ನು ರಂಗದ ಮೇಲೆ ಪರಿಚಯಿಸಿ ಸಾಧಕನ ಜೀವನದ ಕಷ್ಟ ಸುಖಗಳನ್ನ ನೆನಪಿಗೆ ತಂದರು. ನಾನೆಂದೂ ಅಷ್ಟೊಂದು ಆಸಕ್ತಿ, ಕುತೂಹಲದಿಂದ ನಾಟಕ ನೋಡಿರಲಿಲ್ಲ. ಅದು ಆ ಮಟ್ಟಿಗೆ ಅಪರೂಪದ ರಂಗಪ್ರಯೋಗ. ಗಣೇಶ ಅಮೀನಗಡ ರಚಿತ ಈ ನಾಟಕಕೃತಿ ಮೂಲತಃ ʼಸ ಜ ನಾʼ ಅವರ ಆತ್ಮಕಥೆಯೇ ಆಗಿದೆ. ಆದರೂ ಅದಕ್ಕೆ ಜೀವಕಳೆ ಕಟ್ಟಿಕೊಟ್ಟಿದ್ದು ರಂಗಪ್ರಯೋಗ. ಇದರಿಂದ ಈ ವೈದ್ಯನ ಬದುಕಿನ ಜೀವನದ ಯಶೋಗಾಥೆ ವಿಭಿನ್ನ ಆಯಾಮಗಳನ್ನು ಪಡೆದುಕೊಂಡು ಹೇಗೆ ಔನ್ನತ್ಯ ಪಡೆಯಿತೆಂಬುದನ್ನು ಅವರ ಆತ್ಮಕಥೆ ಓದದವರೂ ಸಹ ಸುಲಭವಾಗಿ ಅರಿಯಲಿ ಎಂಬ ಕೃತಿಕಾರನ ಆಶಯ ಅಂದಿನ ಪ್ರಯತ್ನದಲ್ಲಿ ಯಶಸ್ವಿಯಾಯಿತು.

ಡಾ. ಸ ಜ ನಾ ಒಬ್ಬ ಅಪರೂಪದ ಅಂತರಾಷ್ಟ್ರೀಯ ವೈದ್ಯವಿಜ್ಞಾನಿ. ರೋಗನಿದಾನಶಾಸ್ತ್ರದ ಮೇಧಾವಿ. ಅವರ ಪೂರ್ಣ ಹೆಸರು ಸದಾಶಿವಯ್ಯ ಜಂಬಯ್ಯ ನಾಗಲೋಟಿಮಠ. ಹುಟ್ಟಿದ್ದು 1940ರ ಜುಲೈ 20ರಂದು ಗದಗದ ಸಾಮಾನ್ಯ ಕುಟುಂಬದಲ್ಲಿ. ತಂದೆ ಜಂಬಯ್ಯ ತಾಯಿ ಹಂಪವ್ವ. ಕಡುಬಡತನದಲ್ಲೇ ಸಾಕಷ್ಟು ನೋವುಂಡು ಮೇಲೆದ್ದ ಸಾರ್ಥಕ ಬದುಕು ಇವರದು. ಕೆಲ ಅನಿವಾರ್ಯತೆಗಳು ಇವರ ಕುಟುಂಬವನ್ನು ಬಾಗಲಕೋಟೆಯ ಬನಹಟ್ಟಿಗೆ ಬರುವಂತೆ ಮಾಡಿದವು. ಅಲ್ಲೇ ಅವರ ಪ್ರಾಥಮಿಕ ಶಿಕ್ಷಣ. 1955ರಲ್ಲಿ ಮುಲ್ಕಿ ಪರೀಕ್ಷೆ ಪಾಸು ಮಾಡಿ, 1959ರಲ್ಲಿ ಮೆಟ್ರಿಕ್ ಕೂಡ ಮುಗಿಸುತ್ತಾರೆ. ಮುಂದಿನ ಕಾಲೇಜು ಶಿಕ್ಷಣಕ್ಕೆ ತೊಂದರೆಯಾಗಿ ಚಿಂತೆ ಮಾಡುತ್ತಿರುವಾಗ ಆಪ್ತರೊಬ್ಬರ ಸಹಾಯದಿಂದ ಹುಬ್ಬಳ್ಳಿಯ ಪಿಸಿeಬಿನ್ ಸೈನ್ಸ್ ಕಾಲೇಜಿಗೆ ಪ್ರವೇಶ ಪಡೆಯುತ್ತಾರೆ. ಅಲ್ಲೂ ಉತ್ತಮ ಓದಿನಿಂದ ಪ್ರತಿಭಾವಂತ ವಿದ್ಯಾರ್ಥಿಯಾಗಿ ಹೊರಹೊಮ್ಮುತ್ತಾರೆ. ಇಂಜಿನಿಯರಿಂಗ್ ಸೀಟು ಸಿಗುತ್ತದೆ. ಆದರೂ ತಂದೆಯವರಿಗೆ ಕ್ಷಯರೋಗವಿದ್ದ ಕಾರಣ ಅವರ ಆಸೆ ಮಗ ವೈದ್ಯನಾಗಬೇಕು ಎಂಬುದಾಗಿರುತ್ತದೆ. ಮುಂದೆ ಸಂದರ್ಶನ ಎದುರಿಸಿ ಹುಬ್ಬಳ್ಳಿಯ ಕರ್ನಾಟಕ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಸೀಟು ಗಿಟ್ಟಿಸುತ್ತಾರೆ. ಈ ಮಧ್ಯೆ ತಂದೆಯ ವಿಪರೀತ ಸಿಗರೇಟ್ ಚಟ ಅವರ ರೋಗ ಉಲ್ಬಣಗೊಳ್ಳುವಂತೆ ಮಾಡುತ್ತದೆ, ವೈದ್ಯಕೀಯದ ಕಲಿಕೆ ಒಂದು ಹಂತದಲ್ಲಿರುವಾಗ ತಂದೆ 1961 ರಲ್ಲಿ ಮರಣಿಸುತ್ತಾರೆ. ಇದು ಸದಾಶಿವಯ್ಯರನ್ನು ಘಾಸಿಗೊಳಿಸುತ್ತದೆ. ಆದರೂ ಕಷ್ಟಪಟ್ಟು ಓದಿ 1965ರಲ್ಲಿ ಎಂಬಿಬಿಎಸ್ ತೆರ್ಗಡೆಯಾಗುತ್ತಾರೆ. ಅದೂ ಗೋಲ್ಡ್ ಮೆಡಲ್‍ನೊಂದಿಗೆ. ಹೀಗೆ ಮುಂದುವರೆದ ಶಿಕ್ಷಣ 1970ರಲ್ಲಿ ಎಂಡಿ ಪದವಿವರೆಗೂ ಸಾಗಿ ಉನ್ನತ ಹುದ್ದೆವರೆಗೂ ವೃತ್ತಿಯಲ್ಲಿ ಅವರನ್ನು ಕೊಂಡೊಯ್ಯುತ್ತದೆ.

ಸಜನಾ ಒಬ್ಬ ಪೆಥಾಲಜಿ ವೈದ್ಯರಾಗಿದ್ದಲ್ಲದೇ ವೈದ್ಯವಿಜ್ಞಾನದ ಲೇಖಕರಾಗಿಯೂ ಹೆಚ್ಚು ಜನಪ್ರಿಯರಾದವರು. ಅದರೊಟ್ಟಿಗೆ ವೃತ್ತಿ ಬದುಕಿನಲ್ಲಿ ತುಂಬಾ ಚಾಕಚಕ್ಯತೆಯೊಂದಿಗೆ ರೋಗ ಪರೀಕ್ಷೆ, ನಿರ್ದಿಷ್ಟತೆ, ಕರಾರುವಕ್ಕಾದ ಪರಿಹಾರದ ಮೂಲಕ ಜನಪ್ರಿಯತೆ ಹೆಚ್ಚಿಸಿಕೊಂಡವರು. ಅವರು ಕೇವಲ ವೈದ್ಯರಾಗಿರದೇ, ಲೇಖಕರಾಗಿ ಮಾಡಿದ ಸಾಧನೆ ಅನುಪಮ. ವೈದ್ಯವಿದ್ಯಾರ್ಥಿಗಳು, ಓದುಗ ಜನಸಾಮಾನ್ಯರಿಗೆ ಆರೋಗ್ಯದ ಅರಿವನ್ನು ತಮ್ಮ ಜನಪ್ರಿಯ ವೈದ್ಯಕೀಯ ವಿಜ್ಞಾನದ ಲೇಖನಗಳ ಮೂಲಕ ತಲುಪಿಸಿದವರು. ವೈಜ್ಞಾನಿಕತೆ, ವೈಚಾರಿಕತೆಯನ್ನು ಒರೆಗೆ ಹಚ್ಚಿ ಜನಗಳ ಮನೋಭಾವಕ್ಕೆ ಹೊಸತನ್ನು ಹರುವಿದವರು. ಇಂತಹ ಸಾಧಕ ವೈದ್ಯ ವಿಜ್ಞಾನಿ ನಮ್ಮ ನಾಡಿನವರು ಎಂಬುದೇ ಹೆಮ್ಮೆ. ಅವರ ಬದುಕಿನ ಕೆಲ ವೈದ್ಯಕೀಯ ಸಾಧನೆಯ ವಿಚಾರಗಳನ್ನು ಮೆಲಕು ಹಾಕೋಣ.

ಕುಷ್ಠರೋಗ ಕುರಿತ ತಪ್ಪು ಕಲ್ಪನೆ : ಸಜನಾ ಅವರು ಕೆಎಂಸಿ ಹುಬ್ಬಳ್ಳಿಯಲ್ಲಿ ಎಂ ಡಿ ಕಲಿಯುವ ಸಮಯ. ಆಗ ಅವರು ತಮ್ಮ ಪ್ರಬಂಧಕ್ಕೆ ಆಯ್ಕೆ ಮಾಡಿಕೊಂಡದ್ದು ಕುಷ್ಠರೋಗದ ವಿಷಯ. ಆದರೆ ಆ ಹುಬ್ಬಳ್ಳಿ ಆಸ್ಪತ್ರೆಯಲ್ಲಿ ಇವರ ಅಧ್ಯಯನಕ್ಕೆ ಪೂರಕವಾಗಿ ಕುಷ್ಠರೋಗಿಗಳ ಲಭ್ಯತೆ ಇರಲಿಲ್ಲ. ತಮ್ಮ ಸ್ನೇಹಿತರಾದ ಡಾ. ಕಂಬಳ್ಯಾಳರ ಸಹಾಯದಿಂದ ರೋಣ ತಾಲೂಕಿನ ಗಜೇಂದ್ರಗಡದ ಸರ್ಕಾರಿ ಆಸ್ಪತ್ರೆಯಲ್ಲಿ ಅಗತ್ಯ ರೋಗಿಗಳಿದ್ದ ಪ್ರಯುಕ್ತ ಆ ಸ್ಥಳವನ್ನೇ ತಮ್ಮ ಅಧ್ಯಯನಕ್ಕೆ  ಬಳಸಿಕೊಂಡರು. ಆದರೆ ಆ ಆಸ್ಪತ್ರೆ ಅಷ್ಟೊಂದು ಹೇಳಿಕೊಳ್ಳುವಂತ ಮೂಲಭೂತ ಸೌಲಭ್ಯಗಳನ್ನು ಹೊಂದಿರಲಿಲ್ಲ. ಕಟ್ಟಡವೇ ಇರಲಿಲ್ಲ, ಆದರೂ ಅಲ್ಲೇ ಮರದ ಕೆಳಗೆ ಒಂದು ಕುರ್ಚಿ ಟೇಬಲ್ ಹಾಕಿಕೊಂಡೇ ಕುಷ್ಠರೋಗಿಗಳ ಉಪಚಾರ ಮುಂದುವರೆಸಿದರು. ಅವರ ರೋಗ ಲಕ್ಷಣಗಳನ್ನು, ರಕ್ತ, ಚರ್ಮ, ಯಕೃತ್, ನರನಾಡಿಗಳ ಅಧ್ಯಯನ ಮಾಡಿದರು. ಕುಷ್ಠರೋಗದ ಬಗ್ಗೆ ಅಮೂಲಾಗ್ರವಾಗಿ ಅಭ್ಯಸಿಸಿ ಕಂಡುಕೊಂಡ ನಿರ್ಣಯ ಖ್ಯಾತನಾಮ ವೈದ್ಯರಿಂದ ಪ್ರಶಂಸಿಸಲ್ಪಟ್ಟಿತು. ಹಾಗೇ ಇವರ ಸಂಶೋಧನೆಯನ್ನು ಮೆಚ್ಚಿ ಬೆನ್ನು ತಟ್ಟಿದವರಲ್ಲಿ ಆ ಕಾಲದ ನಮ್ಮ ದೇಶದ ಪ್ರಸಿದ್ಧ ಪೆಥಾಲಾಜಿಸ್ಟ್ ಡಾ. ಭೆಂಡೆ ಅವರೂ ಕೂಡ ಒಬ್ಬರು. ಇವರ ಸಂಶೋಧನೆಯ ಫಲವಾಗಿ ಕುಷ್ಠರೋಗವು ನರಗಳ ಮೂಲಕ ಹರಡುತ್ತದೆ ಎಂಬ ತಪ್ಪು ಕಲ್ಪನೆ ದೂರವಾಯಿತು. ಆ ಬಗ್ಗೆ ಅಧ್ಯಯನದಲ್ಲಿ ಗೊತ್ತಾದ ಸಂಗತಿಗಳನ್ನು ಎಲ್ಲರಿಗೂ ತಿಳಿಸಿದರು. ಈ ರೋಗ ದೇಹದ ಒಂದು ಭಾಗಕ್ಕೆ ಮಾತ್ರ ಸೀಮಿತವಾಗಿಲ್ಲ. ಎಲ್ಲಾ ಕಡೆಗಳಿಗೂ ಹರಡುವ ಇದು ದೇಹವನ್ನೇ ವ್ಯಾಪಿಸಿ ರೋಗಿಯನ್ನು ಹತಾಶಗೊಳಿಸುತ್ತದೆ. ಹಾಗೊಂದು ವೇಳೆ ನರಗಳ ಮೂಲದಿಂದ ಕುಷ್ಠ ಹರಡುವುದಾಗಿದ್ದರೆ ಗಂಟುಗಳು ಚರ್ಮದಿಂದ ಯಕೃತ್‍ಗೆ ತಲುಪಲು ಸಾಧ್ಯವೇ ಇಲ್ಲ ಅನ್ನುವುದು ಇವರ ವಾದವಾಗಿತ್ತು. ಅವರ ವಾದವನ್ನು ರೋಗಾಣುಗಳನ್ನು ಕುರಿತು ನಡೆಸಿದ ಸೂಕ್ಷ್ಮದರ್ಶಕದ ಪರಿಕ್ಷೆಗಳು ಸಾಬೀತು ಮಾಡಿದವು. ಅಧ್ಯಯನ ತೀವ್ರಗೊಳಿಸಿ ರೋಗಿಗಳನ್ನು ಪರೀಕ್ಷೆಗೊಳಪಡಿಸಿದಾಗ ಒಬ್ಬ ರೋಗಿಯ ರಕ್ತದೊಳಗೆ ಕುಷ್ಠರೋಗಾಣು ಪತ್ತೆಯಾಗಿ ಅವರ ವಾದವನ್ನು ಪುಷ್ಠೀಕರಿಸಿತು. ಹಾಗೆಯೇ, ಅವರು ಮಂಡಿಸಿದಂತೆ ಕುಷ್ಠವು ರಕ್ತದ ಅಂಗಾಂಶಗಳ ಮೂಲಕ ದೇಹದ ಎಲ್ಲಾ ಭಾಗಗಳಿಗೂ ವ್ಯಾಪಿಸುವುದೆಂಬುದನ್ನು ಎಲ್ಲರೂ ಅರಿಯುವಂತಾಯಿತು.

ಶವ ಪರೀಕ್ಷೆ : ಅಪಘಾತ, ಅಲ್ಲಿನ ರಕ್ತಸಿಕ್ತ ದೇಹಗಳನ್ನು ನೋಡಿದಾಕ್ಷಣ ಎಂತಹವರಿಗೂ ಭಯ, ಗಾಭರಿ ಒಟ್ಟಿಗೆ ಆಗುವುದು ಸಹಜ. ಆದರೆ ವೈದ್ಯರಾದವರಿಗೆ ಇದು ಅನಿವಾರ್ಯ. ಕೆಲ ಸಂದರ್ಭಗಳಲ್ಲಿ ಶವ ಪರೀಕ್ಷೆ ಮಾಡಬೇಕಾಗುತ್ತದೆ. ಇದು ನಿಜಕ್ಕೂ ಸವಾಲಿನ ಕೆಲಸವೆಂದು ಸಜನಾ ಯಾವಾಗಲೂ ಹೇಳುತ್ತಿದ್ದರು. ವೈದ್ಯರಾಗುವವರು ರಕ್ತ, ದೇಹದ ವಾಸನೆ, ಸೋರುವ ದೇಹಭಾಗಗಳನ್ನು ನೋಡಿ ಹೆದರಬಾರದು ಎಂದು ತಮ್ಮ ವಿದ್ಯಾರ್ಥಿಗಳಿಗೆ ಹೇಳಿ ಶವಚ್ಛೇದನಕ್ಕೆ ಹುರುದುಂಬಿಸುತ್ತಿದ್ದರು. ಒಬ್ಬ ಉತ್ತಮ ಪೆಥಾಲಾಜಿಸ್ಟ್ ಆಗಬೇಕಾದರೆ ಶವ ಪರೀಕ್ಷೆ ಕಾರ್ಯವನ್ನು ಅದು ಅವಲಂಬಿಸಿರುತ್ತದೆ. ಶವ ಪರೀಕ್ಷೆ ಮಾಡಿದ್ದಾದರೆ ಪುಸ್ತಕದ ಓದು ಅವಶ್ಯಕತೆಯೇ ಇಲ್ಲ ಎಂದು ಅವರು ಹೇಳುತ್ತಿದ್ದರು. ಶವ ಪರೀಕ್ಷೆಯಿಂದ ಕಲಿಯುವಂಥದ್ದು ಬಹಳಷ್ಟು ಇದೆ ಎಂದು ತಮ್ಮ ವಿದ್ಯಾರ್ಥಿಗಳಿಗೆ ತಿಳಿಸುತ್ತಿದ್ದರು. ಹೆಚ್ಚೆÉಚ್ಚು ಶವ ಪರೀಕ್ಷೆ ಮಾಡಿದಂತೆ ಜ್ಞಾನ ಹೆಚ್ಚುತ್ತದೆ. ಪೆಥಾಲಾಜಿ ವಿಷಯ ಓದಿದರೆ ಶೇ 20ರಷ್ಟು ಜ್ಞಾನ ಬರುತ್ತದೆ. ಅದೇ ಆಪರೇಷನ್ ಮಾಡಿ ಅಂಗಾಂಶ ಪರೀಕ್ಷೆ ಮಾಡಿದರೆ ಶೇ 30ರಷ್ಟು ಜ್ಞಾನ ವೃದ್ಧಿಯಾಗುತ್ತದೆ. ಇನ್ನು ಪೆಥಾಲಾಜಿ ಮ್ಯೂಜಿಯಂನಲ್ಲಿ ಅಧ್ಯಯನ ಮಾಡಿದ್ದಾದರೆ ಶೇ 60ರಷ್ಟು, ಒಂದು ವೇಳೆ ಶವ ಪರೀಕ್ಷೆ ಮಾಡಿ ಕಲಿತಿದ್ದಾದರೆ ಶೇ 90ರಷ್ಟು ಜ್ಞಾನ ಬರುತ್ತದೆ ಎಂದು ಆಗಾಗ ಹೇಳುತ್ತಿದ್ದರು. ಅಷ್ಟೇ ಅಲ್ಲದೆ ತಾವು ನೋಡಿದಂತೆ ಶವ ಪರೀಕ್ಷೆಯ ಭಾಗಗಳನ್ನು ಚಿತ್ರ ಬರೆದು ತಿಳಿಸುತ್ತಿದ್ದರು. ಶವದ ನೈಜ ಭಾಗಗಳನ್ನು ಇದ್ದಂತೆ ಹೇಳದೆ ತಾವು ಅರ್ಥೈಸಿಕೊಂಡಂತೆ ಚಿತ್ರಿಸುತ್ತಿದ್ದರು. ಅದು ಕಲಿಕೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸುತ್ತಿತ್ತು. ‘ಚಿತ್ರ ನೋಡುವ ಕಾಲ ಹೋಯಿತು, ಏನಿದ್ದರೂ ಚಿತ್ರ ಓದೋ ಕಾಲ ಬಂದೈತಿ’ ಎಂದು ವಿದ್ಯಾರ್ಥಿಗಳಿಗೆ ಚಿತ್ರ ಓದುವ ಸೂಕ್ಷ್ಮತೆಯನ್ನು ಅದರ ಮಹತ್ವವನ್ನು ಒತ್ತಿ ಹೇಳುತ್ತಿದ್ದರು. ಅದಕ್ಕಾಗಿಯೇ ಅವರು ತಮ್ಮ ಬಳಿ ಯಾವಾಗಲೂ ಒಂದು ಮಸೂರವನ್ನು ಇಟ್ಟುಕೊಂಡಿರುತ್ತಿದ್ದರು.

ಶವವೆಂದರೆ ಮೂಗುಮುರಿಯುವರಿಗೆ, ಅದರ ವಾಸನೆ, ವಾಕರಿಕೆಗೆ ಹೆದರುವವರಿಗೆ ತಿಳಿ ಹೇಳುತ್ತಿದ್ದರು. ಶವ ಪರೀಕ್ಷೆ ಮಾಡುವುದರಿಂದ ರೋಗಿಗೆ ಏನಾಗಿತ್ತು ? ಯವ ಕಾರಣಕ್ಕೆ ಸತ್ತ ? ಡಾಕ್ಟರ್ ಏನು ಟ್ರೀಟ್‍ಮೆಂಟ್ ಮಾಡಿದ್ದರು, ಆದರೂ ಯಾಕೆ ಬದುಕಲಿಲ್ಲ ? ಡಾಕ್ಟರ್ ತಪ್ಪಿದ್ದೆಲ್ಲಿ ? ಎಂಬ ಖಚಿತವಾದ ಮಾಹಿತಿಗಳು ಲಭಿಸುತ್ತವೆ. ಡಾಕ್ಟರ್ ಮಾಡಿದ ತಪ್ಪುಗಳು ಮುಂದೆ ಸರಿಯಾದ ದಾರಿ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ವೈದ್ಯ ವಿಜ್ಞಾನ ಬೆಳೆಯುವ ವಿಧಾನವೇ ಹೀಗೆ ಎಂದು ಅವರು ಅರಿತಿದ್ದರು. ಶವ ಪರೀಕ್ಷೆ ಪೆಥಲಾಜಿ ವಿಭಾಗದಲ್ಲಿ ಒಂದು ಬಹುಮುಖ್ಯವಾದ ಕಾರ್ಯ ಎಂಬುದನ್ನ ತಮ್ಮ ವಿದ್ಯಾರ್ಥಿಗಳಿಗೆ ತಿಳಿಸುತ್ತಾ ಸಿಪಿಸಿ (ಛಿಟiಟಿiಛಿಚಿಟ ಠಿಚಿಣhoಟogಥಿ ಛಿoಟಿಜಿeಡಿeಟಿಛಿe) ಎನ್ನುವ ಕಲಿಸುವ ವಿಧಾನವನ್ನು ವೈದ್ಯ ವಿದ್ಯಾರ್ಥಿಗಳಿಗೆ ಪರಿಚಯಿಸುವ ಮೂಲಕ ಸಿಪಿಸಿ ನಾಗಲೋಟಿಮಠ ಎಂತಲೇ ಹೆಸರಾದರು.

ಪೆಥಾಲಾಜಿ ಮ್ಯೂಜಿಯಂ : ಕರ್ನಾಟಕದ ಉತ್ತರ ಭಾಗದಲ್ಲಿ ಬೆಳಗಾವಿಯ ಕೆಎಲ್‍ಇ ವೈದ್ಯಕೀಯ ಸಂಸ್ಥೆ ಅತ್ಯಂತ ಪ್ರಸಿದ್ಧವಾದದ್ದು. ಅಂತಹ ವೈದ್ಯಕೀಯ ಸಂಸ್ಥೆಯ ಡೀನ್ ಆಗಿದ್ದ ಡಾ. ಜೀರಗೆಯವರ ಒತ್ತಾಸೆಯಂತೆ ಸಜನಾರನ್ನು ಸಂಸ್ಥೆಯ ಅಭಿವೃದ್ಧಿಗೊಸ್ಕರ ಕರೆತರಲಾಯಿತು. ಅವರ ಎಂಡಿ ಪದವಿ ಇನ್ನೂ ಪೂರ್ಣಗೊಂಡಿರದಿದ್ದರೂ ಸಹ ಅವರ ಕರ್ತೃತ್ವಶಕ್ತಿಯನ್ನ ಗಮನಿಸಿ ಸಂಸ್ಥೆಯ ಏಳಿಗೆಗೆ ಸಹಕರಿಸಲು ಕೋರಲಾಯಿತು. ಕಷ್ಟಪಟ್ಟು ಶ್ರಮವಹಿಸಿ ಸಂಸ್ಥೆಗೆ ದುಡಿಯುವ ಅವರನ್ನು ಅರಿತು ಪೆಥಲಾಜಿ ವಿಭಾಗದ ಅಸಿಸ್ಟಂಟ್ ಪ್ರೋಫೆಸರ್ ಆಗಿ ನೇಮಿಸಲಾಯಿತು. ಅಲ್ಲಿಂದ ಅವರು ಮಾಡಿದ ಕಾರ್ಯಗಳಲ್ಲಿ ಬಹುಮುಖ್ಯವಾದದ್ದು ಪೆಥಲಾಜಿ ಮ್ಯೂಜಿಯಂನ ಸ್ಥಾಪನೆ. 1979ರಲ್ಲಿ ರೂಪಿತವಾದ ಅದು ಅದ್ಭುತವಾದ ವಿನ್ಯಾಸ ಹಾಗೂ ಸಜನಾರ ದೂರದೃಷ್ಠಿಯ ಫಲವಾಗಿ ಬಹುಬೇಗನೆ ಜನಪ್ರಿಯತೆ ಗಳಿಸಿ ಎಲ್ಲರೂ ನಿಬ್ಬೆರಗಾಗಿ ನೋಡುವಂತೆ ಮಾಡಿತು. ವೈದ್ಯಕೀಯ ವಿಭಾಗದಲ್ಲೇ ಪೆಥಲಾಜಿ ಮ್ಯೂಜಿಯಂ ಕಣ್ಣಿಗೆ ಕಟ್ಟುವಂತೆ ಇತ್ತು. ಅಲ್ಲಿ 2330 ಉತ್ತಮವಾದ ಸ್ಪೆಸಿಮಿನ್‍ಗಳನ್ನು ಅರ್ಧವೃತ್ತಾಕಾರದಲ್ಲಿ ಅಳವಡಿಸಿ 12 ಕೊಠಡಿ(cubicles)ಗಳಲ್ಲಿ ಆ ಸ್ಪೆಸಿಮಿನ್‍ಗಳನ್ನು, ಚಾರ್ಟ್‍ಗಳನ್ನು  ತುಂಬಿಸಲಾಗಿತ್ತು. ಇದನ್ನು ಲಂಡನ್‍ನಲ್ಲಿನ ‘‘The Burrows Welcome Museum’ ನ ರೀತಿಯಲ್ಲಿ ವ್ಯವಸ್ಥೆಗೊಳಿಸಲಾಗಿತ್ತು. ಹಾಗಾಗಿ ಏಷ್ಯಾದ ಒಂದು ಉತ್ತಮ ಪೆಥಲಾಜಿ ಮ್ಯೂಜಿಯಂ ಎಂದು ಬಹುತೇಕರಿಂದ ಪ್ರಶಂಸಿಸಲ್ಪಟ್ಟಿತು. ನಾಡಿನ ಖ್ಯಾತನಾಮರಾದ ದೇಜಗೌ, ಸಿದ್ಧಯ್ಯ ಪುರಾಣಿಕ ಮುಂತಾದವರು ಬಂದು ನೋಡಿ ಮೆಚ್ಚುಗೆ ಸೂಚಿಸಿದ್ದರು.

ಕ್ಯಾಸನೂರು ಮಂಗನ ರೋಗ : ಅಲ್ಲಿವರೆಗೂ ಈ ರೋಗದ ಬಗ್ಗೆ ಹೆಸರು ಕೇಳಿದ್ದ ಕೆಲವರು ಅದರ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿರಲಿಲ್ಲ. ಯಾವಾಗ ಅದನ್ನ ಕುರಿತು ಪತ್ರಿಕೆಯೊಳಗೆ ಸುದ್ಧಿಯಾಯಿತೊ ಆವಾಗಲೇ ಕಾರ್ಯಪ್ರವೃತ್ತರಾದ ಸಜನಾ ಅವರು ತಮ್ಮ ವೈದ್ಯರ ಸಭೆ ಜರುಗಿಸುತ್ತಾರೆ. ಡಾ. ಬಿ ಎಮ್ ಹೇಮಶೆಟ್ಟರ ಹಾಗೂ ಡಾ. ಎಣ್ಮಿ ಅವರನ್ನು ಗದಗದ ಕ್ಯಾಸನೂರಿನ ಕಾಡಿಗೆ ಕಳುಹಿಸಿ ಅಧ್ಯಯನ ಮಾಡಲು ತಿಳಿಸುತ್ತಾರೆ. ಅವರು ಅಲ್ಲಿಂದ ಬರುವಾಗ ಸತ್ತ ಮಂಗವೊಂದನ್ನು ತಂದು ಪರೀಕ್ಷೆಗೆ ಒಳಪಡಿಸುತ್ತಾರೆ. ಮಂಗನ ದೇಹ ಕೋಯ್ದು ಪರೀಕ್ಷೆ ಮಾಡಿದಾಗ ಅಲ್ಲಲ್ಲಿ ರಕ್ತದ ಕಲೆಗಳು ಕಂಡವು. ದೇಹದ ಭಾಗಗಳಾದ ಜಠರ, ಕರುಳು, ಮೂತ್ರಪಿಂಡ, ಮೆದುಳು ಭಾಗಗಳು ರಕ್ತದ ಕಲೆಗಳಿಂದ ಕೂಡಿದ್ದು ಕಂಡುಬಂದಿತು. ಈ ಎಲ್ಲ ಆವಾಂತರಗಳಿಗೆ ಕಾರಣವಾದದ್ದು ಮಂಗಗಳ ಮೈಮೇಲಿನ ರಕ್ತ ಹೀರುವ ಉಣ್ಣೆಗಳು ಎಂಬುದು ತಿಳಿದು ಬಂತು.

ಆಹಾರದ ಅರಿವು : ನಮ್ಮ ದೇಹದ ಬಹುತೇಕ ಕಾಯಿಲೆಗಳಿಗೆ ನಾವು ತಿನ್ನುವ ಅತಿಯಾದ ಆಹಾರವೇ ಕಾರಣ ಎಂಬುದನ್ನು ಸದೋಹಾರಣೆಗಳ ಮೂಲಕ ಸಜನಾರವರು ತಿಳಿಹೇಳುತ್ತಿದ್ದರು. ದೇಹದ ಬೊಜ್ಜು, ಸಕ್ಕರೆ ಕಾಯಿಲೆ, ಬಿಪಿ ಒಂದಕ್ಕೊಂದು ತಳುಕು ಹಾಕಿಕೊಂಡು ರೋಗಗಳಿಂದ ದೇಹ ಬಾದಿಸುತ್ತವೆ. ಅದಕ್ಕಾಗಿ ಶರಣರ ವಚನದ ಮೂಲಕ ಆಹಾರ ಕಿರಿದಾಗಿಸಿಕೊಳ್ಳಿ ಎಂದು ಮನವರಿಕೆ ಮಾಡುತ್ತಿದ್ದರು. ಅತಿ ಆಹಾರದಿಂದ ನಿದ್ದೆ ಹೆಚ್ಚಾಗಿ, ತಾಮಸ ಗುಣ ಬೆಳೆಯುತ್ತದೆ, ಅದರಿಂದ ವಿಕಾರ ಹೆಚ್ಚಾಗಿ ಬೊಜ್ಜು ಅಧಿಕಗೊಂಡು ಸಂದಿವಾತ, ರಕ್ತದ ಒತ್ತಡ, ಹೃದಯದ ಸಮಸ್ಯೆ ಕಾಡುತ್ತವೆ. ಇವುಗಳಿಂದ ಮುಕ್ತಿ ಹೊಂದಿ ಆರೋಗ್ಯ ಜೀವನ ಸಾಗಿಸಲು ಆಹಾರದ ಅರಿವು ಅಗತ್ಯ ಎಂಬುದನ್ನು ಹಲವು ವಚನಗಳನ್ನು ವಿಶ್ಲೇóಷಿಸಿ ತಿಳಿಸುತ್ತಿದ್ದರು.

ವಚನ ವಿಜ್ಞಾನ : ಡಕ್ಕೆಯ ಬೊಮ್ಮಣ್ಣ, ಚೆನ್ನಬಸವಣ್ಣ, ಅಕ್ಕಮಹಾದೇವಿ ಮುಂತಾದ ಶರಣರ ವಚನಗಳಲ್ಲಿನ ಆರೋಗ್ಯ ವಿಜ್ಞಾನ ತತ್ವಸಾರವನ್ನು ಬಿಡಿಸಿ ಹೇಳುತ್ತಿದ್ದರು. ವಿದ್ಯಾರ್ಥಿಗಳಿಗೆ ಶರಣರ ವಚನಗಳಲ್ಲಿ ಹಾಸುಹೊಕ್ಕಾದ ವೈಚಾರಿಕ, ವೈಜ್ಞಾನಿಕ ಸಂಗತಿಗಳನ್ನು ತಿಳಿಸುತ್ತಾ ಪಾಶ್ಚಿಮಾತ್ಯ ವೈದ್ಯವಿಜ್ಞಾನ ಬೆಳೆಯುವುದಕ್ಕೂ ಮುಂಚೆಯೇ ಶರಣರ ನಾಡಿನಲ್ಲಿ, ಅವರು ಅಳವಡಿಸಿಕೊಂಡ ಬದುಕಿನಲ್ಲಿ ವಿಜ್ಞಾನ ಬೆಳೆದಿರುವುದನ್ನು, ಅವರು ಕಂಡುಕೊಂಡ ಸತ್ಯವನ್ನು ಮನವರಿಕೆ ಮಾಡಿಕೊಡುತ್ತಿದ್ದರು. ಅದಕ್ಕಾಗಿಯೇ ಅವರು ಅಖಿಲ ಕರ್ನಾಟಕ ವೈದ್ಯವಿಜ್ಞಾನ ಸಮ್ಮೇಳನ ಏರ್ಪಡಿಸಿ ಅದರಲ್ಲಿ ವಚನ ವಿಜ್ಞಾನಕ್ಕೆ ಪೂರಕವಾದ ವಿಚಾರಗೋಷ್ಠಿ, ಉಪನ್ಯಾಸಕ್ಕೆ ಆದ್ಯತೆ ನೀಡಿದರು. ಅಲ್ಲದೇ, ಶರಣರ ಬದುಕಿನ ನಡೆನುಡಿಗಳನ್ನು ವಿವರಿಸುತ್ತಾ ಅಂಗೈಯಲ್ಲಿ ಲಿಂಗ ಹಿಡಿಯುವುದರಿಂದ ಹಿಡಿದು, ಧೂಪ ಹಾಕುವುದರಲ್ಲಿ, ಗುಗ್ಗಳದಲ್ಲಿ, ಕರ್ಪೂರ ಹಚ್ಚುವುದರಲ್ಲಿ, ಬಿಲ್ಪತ್ರೆಯ ದಳಗಳಲ್ಲಿ, ಪ್ರತಿಯೊಂದರಲ್ಲಿಯೂ ವೈಜ್ಞಾನಿಕ ಅಂಶ ಇರುವುದನ್ನು ಎತ್ತಿ, ಒತ್ತಿ ಹೇಳುತ್ತಿದ್ದರು.

ಸೇವೆಗಳು : ಈ ಅಪರೂಪದ ವೈದ್ಯವಿಜ್ಞಾನಿಯ ಸಾಧನೆ ವರ್ಣನಾತೀತ. ಅವರು ಬದುಕಿನುದ್ದಕ್ಕೂ ಸಮಾಜ ಜನಸೇವೆಗಾಗಿಯೇ ಮುಡುಪಾಗಿದ್ದರು. ಅವರು ವೃತ್ತಿ ಬದುಕಿನಲ್ಲಿ ಸಲ್ಲಿಸಿದ ಸೇವೆ ಅನನ್ಯವಾದುದು. 1970ರಲ್ಲಿ ಹುಬ್ಬಳ್ಳಿಯನ್ನು ಬಿಟ್ಟು ಬೆಳಗಾವಿಯ ಜವಹರಲಾಲ್ ನೆಹರು ಮೆಡಿಕಲ್ ಕಾಲೇಜ್‍ಗೆ ಸೇರಿ 1974ರಲ್ಲಿ ಪೆಥಾಲಜಿ ಮುಖ್ಯಸ್ಥರಾಗುತ್ತಾರೆ. ಅಲ್ಲಿ ಅವರು ನಿರಂತರವಾಗಿ ತಮ್ಮನ್ನು ಅರ್ಪಿಸಿಕೊಂಡು ಸೇವೆಗೈದು 1979ರಲ್ಲಿ ಸ್ಥಾಪಿಸಿದ ಪೆಥಾಲಜಿ ಮ್ಯೂಜಿಯಂ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತದೆ. 1980ರಲ್ಲಿ ಆಯೋಜಿಸಿದ ಪೆಥಾಲಜಿ ಸಮ್ಮೇಳನ ಎಲ್ಲರ ಗಮನ ಸೆಳೆಯುತ್ತದೆ. 1982ರಲ್ಲಿ ಇಂಡಿಯನ್ ಇನ್‍ಸ್ಟ್ಯೂಟ್ ಆಫ್ ಪೆಥಾಲಜಿಯ ಉಪಕೇಂದ್ರವನ್ನು ಬೆಳಗಾವಿಯಲ್ಲಿ ಸ್ಥಾಪಿಸಿ, 1985ರಲ್ಲಿ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ ಸದಸ್ಯರಾಗಿ ಕೆಲಸ ನಿರ್ವಹಿಸುತ್ತಾರೆ. ಮುಂದೆ 1990ರಲ್ಲಿ ರಾಷ್ಟ್ರೀಯ ಸೈಟಾಲಜಿ ಸಮ್ಮೇಳನ ಏರ್ಪಡಿಸುತ್ತಾರೆ. 1991ರಲ್ಲಿ ಬೆಳಗಾವಿಯಿಂದ ವಿಜಾಪೂರದ ಮೆಡಿಕಲ್ ಕಾಲೇಜ್‍ಗೆ ಪ್ರಿನ್ಸಿಪಾಲ್ ಆಗಿ ನೇಮಕಗೊಂಡು, 1992ರಲ್ಲಿ ಅವರು ದೇಹದ ಹರಳು ಮ್ಯೂಜಿಯಂ ಸ್ಥಾಪಿಸುತ್ತಾರೆ. 1994ರಲ್ಲಿ ಮೈಸೂರಿನ ಜೆ ಎಸ್ ಎಸ್ ಕಾಲೇಜ್‍ಗೂ ಸಹ ತಮ್ಮ ಸೇವೆ ಒದಗಿಸುತ್ತಾರೆ. ಹೀಗೆ ಸಾಗಿ 1999ರಲ್ಲಿ ಬಾಗಲಕೋಟೆ ಬವಿವಿ ಸಂಘದ ಮೆಡಿಕಲ್ ಕಾಲೇಜ್‍ಗೆ ನಿರ್ಧೇಶಕರಾಗಿ, 2002ರಲ್ಲಿ ಎಸ್ ನಿಜಲಿಂಗಪ್ಪ ಮೆಡಿಕಲ್ ಕಾಲೇಜು ಪ್ರಾರಂಭಿಸುತ್ತಾರೆ. ಅಷ್ಟೇ ಅಲ್ಲದೇ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‍ನ ಅಧ್ಯಕ್ಷರಾಗಿ ವಿಜ್ಞಾನ ಭವನ ಕಟ್ಟಡಕ್ಕೆ ಚಾಲನೆ ನೀಡುತ್ತಾರೆ. ವೈದ್ಯಕೀಯ ಸೇವೆಯ ಜೊತೆ ಜೊತೆಗೆ ಸಾಹಿತ್ಯಕವಾಗಿ ಓದುಗರನ್ನು ತಲುಪಲು 1982ರಲ್ಲಿ ಇಂಡಿಯನ್ ಜರ್ನಲ್ ಆಫ್ ಪೆಥಾಲಜಿ ಆಂಡ್ ಮೈಕ್ರೋ ಬಯಾಲಜಿ ಸಂಪಾದಕಾಗುತ್ತಾರೆ. 1997ರಲ್ಲಿ ‘ಜೀವನಾಡಿ’ಆರೋಗ್ಯ ಮಾಸಿಕ ಪತ್ರಿಕೆ ಪ್ರಾರಂಭಿಸಿ, ಹಲವಾರು ವೈಜ್ಞಾನಿಕ ಲೇಖನಗಳನ್ನು ಬರೆಯುತ್ತಾರೆ. ಅಲ್ಲದೇ ಶ್ರೀಸಾಮಾನ್ಯ ಮತ್ತು ವೈದ್ಯ, ಸತ್ತ ಮೇಲೆ ಸಮಾಜಸೇವೆ, ಸ್ವಾಸ್ಥ್ಯ ಸಂಗಾತಿ ಮುಂತಾದ ವೈದ್ಯಸಾಹಿತ್ಯದ 40ಕ್ಕೂ ಹೆಚ್ಚು ಕೃತಿಗಳ ಮೂಲಕ ಜನಪ್ರಿಯ ವೈದ್ಯಕೀಯ ಲೇಖಕರಾಗಿ ನಾಡಿನ ಮನೆ ಮಾತಾಗಿದ್ದಾರೆ. ಸ ಜ ನಾಗಲೋಟಿಮಠ ಜೀವನದುದ್ದಕ್ಕೂ ನಿರಂತರ ಓದು, ಅಧ್ಯಯನ, ವಿದೇಶ ಪ್ರವಾಸಗಳ ಮೂಲಕ ಜ್ಞಾನದ ಉತ್ತುಂಗಕ್ಕೇರಿ ಜನಸೇವೆಯ ಸಾರ್ಥಕ ಬದುಕನ್ನು ತಮ್ಮದಾಗಿಸಿಕೊಳ್ಳುತ್ತಾರೆ.

ಪ್ರಶಸ್ತಿಗಳು : ಸಜನಾರಿಗೆ ಸಂದ ಪ್ರಶಸ್ತಿಗಳು ಹಲವು. 1986ರಲ್ಲಿ ಮ್ಯೂಜಿಯಂ ಅಭಿವೃದ್ಧಿಗಾಗಿ ಪ್ರತಿಷ್ಠಿತ ಡಾ. ಬಿ ಸಿ ರಾಯ್ ಪ್ರಶಸ್ತಿ, ಬ್ರೂಸೆಲ್ಲಾ ಸಂಶೋಧನೆಗಾಗಿ ರಾಷ್ಟ್ರೀಯ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಶಸ್ತಿ, 1994ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹೀಗೆ ಅವರ ಅನುಪಮ ಸೇವೆಗೆ ರಾಜ್ಯ ರಾಷ್ಟ್ರವಷ್ಟೇ ಅಲ್ಲದೇ ಅಂತರಾಷ್ಟ್ರೀಯ ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ.

ಸಜನಾ ಅವರು ತಮ್ಮ ವೃತ್ತಿಜೀವನದ ಕೊನೆವರೆಗೂ ವೈದ್ಯಕೀಯ ಸೇವೆಯನ್ನು, ವೈದ್ಯವಿಜ್ಞಾನದ ಪ್ರಚಾರವನ್ನು ಒಟ್ಟೊಟ್ಟಿಗೆ ಮಾಡುತ್ತಾ ಜೀವನದ ಹಲವು ಸಂದರ್ಭಗಳಲ್ಲಿ ಅಡೆತಡೆಗಳನ್ನು, ನೋವುಗಳನ್ನು ಎದುರಿಸಿ, ಕೃತಿಕಾರರು ವರ್ಣಿಸಿದಂತೆ ‘ಎಲ್ಲಿಹುದು ನಾ ಸೇರುವ ಊರು / ಬಲ್ಲಿದರರಿಯದ ಯಾರು ಕಾಣದ/ ಎಲ್ಲಿಯೂ ಇರದೂರು/ ಎಲ್ಲಿಹುದು ನಾ ಸೇರುವ ಊರು/ ಎಂಬಂತೆ 2006 ಅಕ್ಟೋಬರ್ 24ರಂದು ನಮ್ಮನ್ನಗಲುತ್ತಾರೆ. ಸಜನಾ ಅಲ್ಲಿಗೆ ತಮ್ಮ ಜೀವನ ನಾಟಕ ಮುಗಿಸುತ್ತಾರೆ.

                               ************

ಆಕರಗಳು : ಬಿಚ್ಚಿದ ಜೋಳಿಗೆ ನಾಟಕ – ಡಾ/ ಗಣೇಶ ಅಮೀನಗಡ

          ಜಾಲತಾಣ 






ಸೈಂಟೂನ್‌ - 2023 August

  ಸೈಂಟೂನ್‌ -  2023  

ಶ್ರೀಮತಿ ಜಯಶ್ರೀ ಬಿ ಶರ್ಮ 







ಒಗಟುಗಳು - ಆಗಸ್ಟ್‌ ೨೦೨೩

 

 ಒಗಟುಗಳು - ಆಗಸ್ಟ್‌ ೨೦೨೩

                                                                                -  ರಾಮಚಂದ್ರ ಭಟ್‌ .ಬಿ.ಜಿ.

೧. ಇವರು ಯಾರು ಬಲ್ಲಿರೇನು? 


ಮ್ಯಾನ್‌ ಹಟನ್‌ ಯೋಜನೆಯ ನಿರ್ದೇಶಕ ಈ ಭೌತಶಾಸ್ತ್ರಜ್ಞ

ಫ್ಯಾಟ್‌ ಬಾಯ್‌ ,ಲಿಟಲ್‌ ಬಾಯ್‌ ಗಳ ಜನಕ

ಅಮೇರಿಕ ಸಂಜಾತ ಯಹೂದ್ಯನೀತ ‌

ಭಗವದ್ಗೀತೆಯೂ ಈತನಿಗೆ ಸ್ಫೂರ್ತಿಯಂತೆ

ಅಣುಬಾಂಬಿನ ಪಿತಾಮಹನೆಂಬ ಖ್ಯಾತಿ ಇದೆಯಂತೆ 

 ಕ್ರಿಸ್ಟೋಫರ್‌ ನೋಲನ್‌ ರ ಸಿನಿಮದಲ್ಲೂ  ಜಗವ ಸೆಳೆದಿದ್ದಾನೆ 

ಸುಳಿವರಿತು ಹೆಸರಿಸಬಲ್ಲಿರೇ ಈ ವಿಜ್ಞಾನಿಯ?

ಓಪನ್ಹೈಮರ್


೨. ಬಿಡ್ಸ್ರೀ ಈ ಒಗಟು

ಇದನು ತಿನ್ನಬಹುದು ನೀವು ಆದರೂ ಎಲ್ಲವನೂ ತಿನ್ನಲಾಗದು!!!

ಅದು ತಿನಿಸ ರುಚಿಯಾಗಿಸಲು ಬರ್ಪುದು ಅಭ್ಯಾಗತನಂತೆ 

 ಉಸಿರಾಡಿ ನೀಡುವುದು ಬದಲಿ ಇಂಧನ 

  ಭವಿಷ್ಯದಿ ಕಬ್ಬು ಬೆಳೆಗಾರರ ಖಜಾನೆಯಾದೀತು

ಜಾಣ ಜಾಣೆಯರೆ ಸುಳಿವರಿತು ಈ ಪೂರ್ಣ ಒಗಟ ಬಿಡಿಸಿ ಹೇಳಿ 

ಶಿಲೀಂಧ್ರಗಳು


೩. ಜಾಣ ಗಿಳಿ ಪ್ರಶ್ನೇಗುತ್ರ ಕೊಡ್ತೀರಾ?

ಹೊಲದಾಗ ಒಂದು ಗಿಡದಾಗ ಒಂದಷ್ಟು ಗಿಳಿಗಳು ಕುಂತಿದ್ವು.

 ದಾರಿ ಹೋಕ ಉಸಾಬರಿ ಮಂಗ್ಯಾ ಕೇಳ್ತು  ನೀವೆಷ್ಟು ಮಂದಿ ಅಂತ 

ಜಾಣ  ಗಿಳಿ ಲೆಕ್ಕ ಕೊಡ್ತು - ನಾವು , ನಮ್ಮಷ್ಟು, ನಮ್ಮರ್ಧ, ನಮಗೀರ್ದ, 

ನೀನೊಬ್ಬ ಕೂಡಿದ್ರೆ 100 ಆಗ್ತಿವಿ. ನೀನೇ ಲೆಕ್ಕ ಹಾಕ್ಕೋ

ಹಂಗಾದ್ರೆ ಗಿಡದಾಗಿನ ಗಿಳಿ ಎಷ್ಟು?‌ ನೀವೇಳಿ ಈಗ


(ನಮಗೀರ್ದ = ಕಾಲುಭಾಗ)

36


೪. ನಂದೂ ಒಂದೈತೆ ದೊಡ್ಸವಾಲು 

ಒಬ್ಬ ರೈತಂಗೆ ೪ ಜನ ಮಕ್ಳು

ಅವನತ್ರ ಒಂದು ಚೌಕಾಕಾರದ ಜಮೀನಿತ್ತು 

ಒಂದು ಮೂಲೆಯ ಕಾಲು ಭಾಗ ಜಮೀನು ತಾನಿಟ್ಕೊಂಡ

ಉಳಿದ ಜಮೀನನ್ನು ೪ ಜನರಿಗೂ ಒಂದೇ ಆಕಾರದಲ್ಲಿರುವಂತೆ 

ಹಂಚಿದ . ಹೇಗೆ ಹಂಚಿದ ಅಂತ ತಲೆ ಉಪಯೋಗ್ಸಿ 

ಬರ್ದು ತೋರ್ಸಿ ನೋಡೋಣ?











Thursday, August 3, 2023

ಆಗಸ್ಟ್‌ - 2023 ಪ್ರಮುಖ ದಿನಾಚರಣೆಗಳು

ಆಗಸ್ಟ್‌ - 2023 ಪ್ರಮುಖ ದಿನಾಚರಣೆಗಳು

1 ಆಗಸ್ಟ್ - ರಾಷ್ಟ್ರೀಯ ಪರ್ವತಾರೋಹಣ ದಿನ : ಪ್ರತಿ ವರ್ಷ ಆಗಸ್ಟ್ 1 ರಂದು ರಾಷ್ಟ್ರೀಯ ಪರ್ವತಾರೋಹಣ ದಿನವನ್ನು ಆಚರಿಸಲಾಗುತ್ತದೆ.

 1-7 ಆಗಸ್ಟ್ - ವಿಶ್ವ ಸ್ತನ್ಯಪಾನ ಸಪ್ತಾಹ : ಇದು ಜಾಗತಿಕ ಅಭಿಯಾನವಾಗಿದ್ದು, ಇದನ್ನು ಪ್ರತಿ ವರ್ಷ ಆಗಸ್ಟ್ ಮೊದಲ ವಾರದಲ್ಲಿ ಪ್ರಪಂಚದಾದ್ಯಂತ ಹಲವಾರು ದೇಶಗಳಲ್ಲಿ ಆಚರಿಸಲಾಗುತ್ತದೆ. ವಿಶ್ವ ಸ್ತನ್ಯಪಾನ ಸಪ್ತಾಹವನ್ನು ಮೊದಲ ಬಾರಿಗೆ 1992 ರಲ್ಲಿ ಆಚರಿಸಲಾಯಿತು.

 ಆಗಸ್ಟ್ 1 (ಆಗಸ್ಟ್ ಮೊದಲ ಭಾನುವಾರ) - ಸ್ನೇಹ ದಿನ :                                                                                              ಸ್ನೇಹಿತರ ದಿನವನ್ನು ಆಗಸ್ಟ್ ಮೊದಲ ಭಾನುವಾರದಂದು ಆಚರಿಸಲಾಗುತ್ತದೆ ಮತ್ತು 2021 ರಲ್ಲಿ ಇದು ಆಗಸ್ಟ್ 1 ರಂದು ಬರುತ್ತದೆ. 1935 ರಲ್ಲಿ, ಸ್ನೇಹಿತರ ಗೌರವಾರ್ಥವಾಗಿ ಒಂದು ದಿನವನ್ನು ಅರ್ಪಿಸುವ ಸಂಪ್ರದಾಯವು US ನಲ್ಲಿ ಪ್ರಾರಂಭವಾಯಿತು. ಕ್ರಮೇಣ ಫ್ರೆಂಡ್ ಶಿಪ್ ಡೇ ಜನಪ್ರಿಯತೆಯನ್ನು ಗಳಿಸಿತು ಮತ್ತು ಭಾರತ ಸೇರಿದಂತೆ ವಿವಿಧ ದೇಶಗಳು ಈ ದಿನವನ್ನು ಆಚರಿಸುತ್ತವೆ.

 ಆಗಸ್ಟ್ 6 - ಹಿರೋಷಿಮಾ ದಿನ : ಪ್ರತಿ ವರ್ಷ ಆಗಸ್ಟ್ 6 ರಂದು ಹಿರೋಷಿಮಾ ದಿನವನ್ನು ಆಚರಿಸಲಾಗುತ್ತದೆ. ಜಪಾನಿನ ಹಿರೋಷಿಮಾ ನಗರದ ಮೇಲೆ ಅಣುಬಾಂಬ್ ಬಿದ್ದ ದಿನವಿದು.

 ಆಗಸ್ಟ್ 7 - ರಾಷ್ಟ್ರೀಯ ಕೈಮಗ್ಗ ದಿನ : ದೇಶದ ಕೈಮಗ್ಗ ನೇಕಾರರನ್ನು ಗೌರವಿಸಲು ಪ್ರತಿ ವರ್ಷ ಆಗಸ್ಟ್ 7 ರಂದು ಆಚರಿಸಲಾಗುತ್ತದೆ. ಈ ವರ್ಷ 6 ನೇ ರಾಷ್ಟ್ರೀಯ ಕೈಮಗ್ಗ ದಿನವನ್ನು ಆಚರಿಸಲಾಗುತ್ತದೆ.

 ಆಗಸ್ಟ್ 8 - ಭಾರತ ಬಿಟ್ಟು ತೊಲಗಿ ಚಳುವಳಿ ದಿನ : 1942 ರ ಆಗಸ್ಟ್ 8 ರಂದು ಬಾಂಬೆಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧಿವೇಶನವು ಮೋಹನ್ ದಾಸ್ ಕರಮಚಂದ್ ಗಾಂಧಿಯವರ ನೇತೃತ್ವದಲ್ಲಿ  'ಕ್ವಿಟ್ ಇಂಡಿಯಾ ಚಳುವಳಿ'ಯನ್ನು ಪ್ರಾರಂಭಿಸಿತು. ಇದನ್ನು ಆಗಸ್ಟ್ ಚಳುವಳಿ ಅಥವಾ ಆಗಸ್ಟ್ ಕ್ರಾಂತಿ ಎಂದೂ ಕರೆಯುತ್ತಾರೆ.  

9 ಆಗಸ್ಟ್ - ನಾಗಸಾಕಿ ದಿನ :  ಆಗಸ್ಟ್ 9, 1945 ರಂದು ನಾಗಸಾಕಿಯಲ್ಲಿ ಅಮೇರಿಕವು ಜಪಾನ್ ಮೇಲೆ ಎರಡನೇ ಬಾಂಬ್ ಅನ್ನು ಹಾಕಿತು . ಈ ಬಾಂಬ್ ಅನ್ನು 'ಫ್ಯಾಟ್ ಮ್ಯಾನ್' ಎಂದೂ ಕರೆಯುತ್ತಾರೆ.

10 ಆಗಸ್ಟ್ - ವಿಶ್ವ ಸಿಂಹ ದಿನ : ಇದನ್ನು  ಪ್ರತಿವರ್ಷವೂ ಆಗಸ್ಟ್ 10 ರಂದು ಆಚರಿಸಲಾಗುತ್ತದೆ. ಸಿಂಹಗಳು ಮತ್ತು ಅವುಗಳ ಸಂರಕ್ಷಣೆಯ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಮತ್ತು ಶಿಕ್ಷಣ ನೀಡುವುದು ಇದರ ಉದ್ದೇಶವಾಗಿದೆ.

 10 ಆಗಸ್ಟ್ - ವಿಶ್ವ ಜೈವಿಕ ಇಂಧನ ದಿನ :  ಪಳೆಯುಳಿಕೆ ಇಂಧನಗಳಿಗೆ ಪರ್ಯಾಯವಾಗಿ ಕಾರ್ಯನಿರ್ವಹಿಸಬಹುದಾದ ಇಂಧನಗಳ ಅಸಾಂಪ್ರದಾಯಿಕ ಮೂಲಗಳ ಬಗ್ಗೆ ಜಾಗೃತಿ ಮೂಡಿಸಲು ಆಗಸ್ಟ್ 10 ರಂದು ಆಚರಿಸಲಾಗುತ್ತದೆ.

ಆಗಸ್ಟ್ 12 - ಅಂತಾರಾಷ್ಟ್ರೀಯ ಯುವ ದಿನ : ಸಮಾಜದಲ್ಲಿ ಯುವಕರ ಅಭಿವೃದ್ಧಿ ಮತ್ತು ರಕ್ಷಣೆಯ ಮೇಲೆ ಕೇಂದ್ರೀಕರಿಸಲು ಜಗತ್ತಿನಾದ್ಯಂತ ಆಗಸ್ಟ್ 12 ರಂದು ಅಂತಾರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಗುತ್ತದೆ.

 12 ಆಗಸ್ಟ್: ವಿಶ್ವ ಆನೆ ದಿನ : ದೈತ್ಯ ಪ್ರಾಣಿ ಆನೆಯನ್ನು ಸಂರಕ್ಷಿಸಲು ಮತ್ತು ರಕ್ಷಿಸಲು ಜನರಿಗೆ ಅರಿವು ಮೂಡಿಸಲು ಇದನ್ನು ವಾರ್ಷಿಕವಾಗಿ ಆಗಸ್ಟ್ 12 ರಂದು ಆಚರಿಸಲಾಗುತ್ತದೆ. ಆನೆಗಳಿಗೆ ಸಹಾಯ ಮಾಡಲು ಜಗತ್ತನ್ನು ಒಟ್ಟುಗೂಡಿಸುವ ಮಾರ್ಗ ಇದು.

 ಆಗಸ್ಟ್ 13 - ವಿಶ್ವ ಅಂಗದಾನ ದಿನ : ಅಂಗದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಆಗಸ್ಟ್ 13 ರಂದು ವಿಶ್ವ ಅಂಗದಾನ ದಿನವನ್ನು ಆಚರಿಸಲಾಗುತ್ತದೆ.

 ಆಗಸ್ಟ್ 15 - ಭಾರತದಲ್ಲಿ ಸ್ವಾತಂತ್ರ್ಯ ದಿನ : ಪ್ರತಿ ವರ್ಷ ಆಗಸ್ಟ್ 15 ರಂದು ಭಾರತವು ಸ್ವಾತಂತ್ರ್ಯ ದಿನವನ್ನು ಆಚರಿಸುತ್ತದೆ. ಈ ದಿನದಂದು ಭಾರತವು ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯವನ್ನು ಪಡೆದುಕೊಂಡಿತು. ಇದು 200 ವರ್ಷಗಳಿಗಿಂತಲೂ ಹೆಚ್ಚು ಕಾಲದ ಬ್ರಿಟಿಷ್ ವಸಾಹತುಶಾಹಿಯಿಂದ ಮುಕ್ತವಾದ ಹೊಸ ಯುಗದ ಆರಂಭದ ಹೊಸ ಆರಂಭದ ಬಗ್ಗೆ ನಮಗೆ ನೆನಪಿಸುತ್ತದೆ.

ಆಗಸ್ಟ್ 20 - ಭಾರತೀಯ ಅಕ್ಷಯ್ ಉರ್ಜಾ ದಿನ : ಭಾರತದಲ್ಲಿ ನವೀಕರಿಸಬಹುದಾದ ಶಕ್ತಿಯ ಅಭಿವೃದ್ಧಿಯ ಬಗ್ಗೆ ಜಾಗೃತಿ ಮೂಡಿಸಲು ವಾರ್ಷಿಕವಾಗಿ ಆಗಸ್ಟ್ 20 ರಂದು ಭಾರತೀಯ ಅಕ್ಷಯ ಉರ್ಜಾ ದಿನವನ್ನು ಆಚರಿಸಲಾಗುತ್ತದೆ. ಇದು 2004 ರಿಂದ ಆಚರಿಸಲಾಗುವ ಅಭಿಯಾನವಾಗಿದೆ. 

26 ಆಗಸ್ಟ್ - ಮಹಿಳಾ ಸಮಾನತೆ ದಿನ : ಈ ದಿನವು ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಿದ US ಸಂವಿಧಾನದ 19 ನೇ ತಿದ್ದುಪಡಿಯ ಅಂಗೀಕಾರವನ್ನು ಸ್ಮರಿಸುತ್ತದೆ. 1971 ರಲ್ಲಿ, US ಕಾಂಗ್ರೆಸ್ ಅಧಿಕೃತವಾಗಿ ಆಗಸ್ಟ್ 26 ಅನ್ನು ಮಹಿಳಾ ಸಮಾನತೆಯ ದಿನವೆಂದು ಗುರುತಿಸಿತು.

ಆಗಸ್ಟ್ 26: ಅಂತರಾಷ್ಟ್ರೀಯ ಶ್ವಾನ ದಿನ : ಪ್ರತಿ ವರ್ಷ ರಕ್ಷಿಸಬೇಕಾದ ನಾಯಿಗಳ ಸಂಖ್ಯೆಯನ್ನು ಗುರುತಿಸಲು ಇದನ್ನು ಆಗಸ್ಟ್ 26 ರಂದು ಆಚರಿಸಲಾಗುತ್ತದೆ.

ಆಗಸ್ಟ್ 29 - ರಾಷ್ಟ್ರೀಯ ಕ್ರೀಡಾ ದಿನ :  ಫೀಲ್ಡ್ ಹಾಕಿ ಆಟಗಾರ ಧ್ಯಾನ್ ಚಂದ್ ಅವರ ಜನ್ಮದಿನವನ್ನು ಗೌರವಿಸಲು ಪ್ರತಿ ವರ್ಷ ಆಗಸ್ಟ್ 29 ರಂದು ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲಾಗುತ್ತದೆ. ರಾಷ್ಟ್ರೀಯ ಕ್ರೀಡಾ ದಿನವನ್ನು ರಾಷ್ಟ್ರೀಯ ಖೇಲ್ ದಿವಸ್ ಎಂದೂ ಕರೆಯಲಾಗುತ್ತದೆ.

30 ಆಗಸ್ಟ್ - ಸಣ್ಣ ಕೈಗಾರಿಕೆ ದಿನ : ಸಣ್ಣ ಕೈಗಾರಿಕೆಗಳನ್ನು ಬೆಂಬಲಿಸಲು ಮತ್ತು ಉತ್ತೇಜಿಸಲು ಪ್ರತಿ ವರ್ಷ ಆಗಸ್ಟ್ 30 ರಂದು ಸಣ್ಣ ಕೈಗಾರಿಕೆ ದಿನವನ್ನು ಆಚರಿಸಲಾಗುತ್ತದೆ. ಸಣ್ಣ-ಪ್ರಮಾಣದ ಕೈಗಾರಿಕೆಗಳು ಖಾಸಗಿ ಒಡೆತನದ ಸಣ್ಣ ನಿಗಮಗಳು ಅಥವಾ ಸೀಮಿತ ಸಂಪನ್ಮೂಲಗಳು ಮತ್ತು ಮಾನವಶಕ್ತಿಯನ್ನು ಹೊಂದಿರುವ ತಯಾರಕರು ಎಂದು ನಿಮಗೆ ತಿಳಿದಿದೆಯೇ?

30 ಆಗಸ್ಟ್ - ರಕ್ಷಾಬಂಧನ  : ರಕ್ಷಾ ಬಂಧನವನ್ನು ಶ್ರಾವಣದಲ್ಲಿ ಪೂರ್ಣಿಮಾ ತಿಥಿಯಂದು (ಹುಣ್ಣಿಮೆಯ ದಿನ) ಆಚರಿಸಲಾಗುತ್ತದೆ. ಆದ್ದರಿಂದ, ಇದನ್ನು ಈ ವರ್ಷ ಆಗಸ್ಟ್ 30, 2023 ರಂದು ಬುಧವಾರ ಆಚರಿಸಲಾಗುತ್ತದೆ.

 

Tuesday, July 4, 2023

2023- ಜುಲೈ ತಿಂಗಳ ಲೇಖನಗಳು

 2023 ಜುಲೈ ತಿಂಗಳ ಲೇಖನಗಳು 

ಒಗಟುಗಳು : ರಾಮಚಂದ್ರ ಭಟ್.ಬಿ.ಜಿ.

ಭಾರತೀಯ ಪೌರತ್ವ ಪಡೆದ ಬ್ರಿಟಿಷ್ ವಿಜ್ಞಾನಿ ಜೆ ಬಿ ಎಸ್ ಹಾಲ್ಡೇನ್

ಭಾರತೀಯ ಪೌರತ್ವ ಪಡೆದ ಬ್ರಿಟಿಷ್ ವಿಜ್ಞಾನಿ ಜೆ ಬಿ ಎಸ್ ಹಾಲ್ಡೇನ್  

                                ಲೇಖಕರು : ಡಾ..ಟಿ.ಎ.ಬಾಲಕೃಷ್ಣ ಅಡಿಗ

ಮಾನವ ಶರೀರಕ್ರಿಯಾಶಾಸ್ತ್ರ, ತಳಿವಿಜ್ಞಾನ, ಜೀವಮಾಪನಶಾಸ್ತ್ರ ಮುಂತಾದ ಹಲವು ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸಿ, ತನ್ನ ಜೀವನದ ಕೊನೆಯ ಭಾಗದಲ್ಲಿ ಭಾರತಕ್ಕೆ ಬಂದು, ಇಲ್ಲಿಯ ಪೌರತ್ವ ಪಡೆದು, ಇಲ್ಲಿಯೇ ಕೊನೆಯುಸಿರೆಳೆದ ಖ್ಯಾತಿವೆತ್ತ ವಿಜ್ಞಾನಿ ಜೆ.ಬಿ.ಎಸ್. ಹಾಲ್ಡೇನ್ ಅವರ ಬಗ್ಗೆ ಈ ಲೇಖನ ಬರೆದವರು ಡಾ.ಟಿ.ಎ. ಬಾಲಕೃಷ್ಣ ಅಡಿಗ ಅವರು.

ವಿಜ್ಞಾನದ ಪ್ರತಿಯೊಂದು ಶಾಖೆಯಲ್ಲಿಯೂ ಭಾರತೀಯ ವಿಜ್ಞಾನಿಗಳ ಸಾಧನೆಯನ್ನು ನಾವಿಂದು ನೋಡುತ್ತಿದ್ದೇವೆ. ತಮ್ಮ ಅಮೂಲ್ಯ ಕೊಡುಗೆಗಳ ಮೂಲಕ ಅನೇಕ ಭಾರತೀಯ ವಿಜ್ಞಾನಿಗಳು ಭಾರತದ ಸ್ಥಾನವನ್ನು ವಿಜ್ಞಾನದ ಭೂಪಠದಲ್ಲಿ ಉತ್ತುಂಗಕ್ಕೆ ಏರಿಸಿದ್ದಾರೆ. ನಮ್ಮ ದೇಶದ ಸಾಕಷ್ಟು ಮಂದಿ ವಿಜ್ಞಾನಿಗಳು ಬೇರೆ, ಬೇರೆ ದೇಶಗಳಿಗೆ ಹೋಗಿ, ಅಲ್ಲಿಯ ಪೌರತ್ವ ಪಡೆದು, ತಮ್ಮ ಸಂಶೋಧನೆಗಳನ್ನು ಮುಂದುವರೆಸುತ್ತಾ ಹೆಸರು ಗಳಿಸಿರುವ ಚಿತ್ರಣ ಒಂದು ಕಡೆ ಇದ್ದರೆ, ಕೆಲ ವಿದೇಶೀಯ ವಿಜ್ಞಾನಿಗಳು ನಮ್ಮ ದೇಶದ ಸಂಸ್ಕೃತಿಗೆ ಮಾರು ಹೋಗಿ, ಇಲ್ಲಿಯೇ ಬಂದು ನೆಲಸಿ, ಭಾರತೀಯ ಪೌರತ್ವ ಪಡೆದು ತಮ್ಮ ಸಂಶೋಧನೆಗಳನ್ನು ನಡೆಸಿದ ದೃಷ್ಟಾಂತಗಳೂ ನಮ್ಮ ಮುಂದೆ ಇವೆ. ಅಂಥ ಉದಾಹರಣೆಗಳಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವ ಹೆಸರೆಂದರೆ, ಹೆಸರಾಂತ ಜೀವವಿಜ್ಞಾನಿ, ಜೆ.ಬಿ.ಎಸ್. ಹಾಲ್ಡೇನ್ ಅವರದ್ದು.

1892ರಲ್ಲಿ ಜನಿಸಿದ ಜಾನ್ ಬರ್ಡೋಸ್ ಸ್ಯಾಂಡರ್ಸನ್ ಹಾಲ್ಡೇನ್ (John Burdos Sanderson Haldane ) ತನ್ನ ಪ್ರಾರಂಭದ ವಿದ್ಯಾಭ್ಯಾಸವನ್ನು ಆಕ್ಸಫರ್ಡ್ನಲ್ಲಿ ಮುಗಿಸಿದ. ಸ್ನಾತಕೋತ್ತರ ಪದವಿ ಪಡೆದ ನಂತರ ಕೇಂಬ್ರಿಡ್ಜ್ನಲ್ಲಿ ಜೀವರಸಾಯನಶಾಸ್ತ್ರದ ಅಧ್ಯಾಪಕನಾಗಿ ತನ್ನ ವೃತ್ತಿ ಪ್ರಾರಂಭಿಸಿದ. ನಂತರ, ಲಂಡನ್ನಿನ ರಾಯಲ್ ಇನ್ಸ್ಟಿಟ್ಯೂಟ್‌ನಲ್ಲಿ ಶರೀರಕ್ರಿಯಾಶಾಸ್ತ್ರದ ಪ್ರಾಧ್ಯಾಪಕನಾಗಿ ಕೆಲವು ವರ್ಷ ಸೇವೆ ಸಲ್ಲಿಸಿದ. ಈ ಅವಧಿಯಲ್ಲಿ ಮಾನವ ಶರೀರಶಾಸ್ತ್ರದ ಬಗ್ಗೆ ಸಂಶೋಧನ ಕಾರ್ಯದಲ್ಲಿ ತೊಡಗಿಸಿಕೊಂಡ. ಅವನ ತಂದೆ ಜಾನ್ ಸ್ಕಾಟ್ ಹಾಲ್ಡೇನ್() ಕೂಡ ಒಬ್ಬ ಪ್ರಖ್ಯಾತ ವಿಜ್ಞಾನಿಯಾಗಿದ್ದ. ಮಾನವ ಶರೀರಶಾಸ್ತ್ರದಲ್ಲಿನ ತನ್ನ ಸಂಶೋಧನೆಗಳಿಂದ ಆತ ಅಪಾರ ಹೆಸರು ಗಳಿಸಿದ್ದ. ತನ್ನ ತಂದೆಯ ಜೊತೆಯಲ್ಲಿಯೇ ¸ಂಶೋಧನೆಯನ್ನು ಮುಂದುವರೆಸಿದ ಹಾಲ್ಡೇನ್, ಮಾನವನ ಉಸಿರಾಟ ಕ್ರಿಯೆಯ ಬಗ್ಗೆ ವಿಶೇಷ ಅಧ್ಯಯನವನ್ನು ನಡೆಸಿದ. ಅವನ ಈ ಸಂಶೋಧನೆಗಳು ಉಸಿರಾಟ ಕ್ರಿಯೆಯ ಮೇಲೆ ಗಾಳಿಯ ಒತ್ತಡದ ಪರಿಣಾಮಗಳನ್ನು ನಿರೂಪಿಸಿದ್ದವು.

 



ಇದಲ್ಲದೆ, ಆಕ್ಸಿಜನ್‌ನ ಹೆಚ್ಚು ಒತ್ತಡ ಇರುವ ಪರಿಸರಗಳಲ್ಲಿ ಮಾನವನ ರಕ್ತದ ಒತ್ತಡದಲ್ಲಿ ಉಂಟಾಗುವ ಬದಲಾವಣೆಗಳ ಬಗ್ಗೆ ಅಧ್ಯಯನ ನಡೆಸಿದ ಹಾಲ್ಡೇನ್, ಅಂಥಾ ಸಂದರ್ಭಗಳಲ್ಲಿ ನೀಡಬಹುದಾದ ಸೂಕ್ತ ಚಿಕಿತ್ಸೆಗಳ ಬಗ್ಗೆಯೂ ತಿಳಿಸಿಕೊಟ್ಟ. ಅದೇ ರೀತಿ, ಧನುರ್ವಾಯು ಚಿಕಿತ್ಸೆಯಲ್ಲಿ ಬಳಸಬಹುದಾದ ಕೆಲವು ಸರಳ ವಿಧಾನಗಳನ್ನೂ ಸೂಚಿಸಿದ. ಕೃತಕ ಹೃದಯ-ಶ್ವಾಸಕೋಶ ಯಂತ್ರದ (Heart-lung machine) ಕಾರ್ಯತಂತ್ರಗಳನ್ನು ಸೂತ್ರದ ರೂಪದಲ್ಲಿ ತೋರಿಸಿಕೊಟ್ಟಿದ್ದು, ಹಾಲ್ಡೇನ್‌ನ ಮತ್ತೊಂದು ಪ್ರಮುಖ ಕೊಡುಗೆ.

ಹಾಲ್ಡೇನ್‌ನಲ್ಲಿ ಅಪಾರ ಆಸಕ್ತಿ ಮೂಡಿಸಿದ ಇನ್ನೊಂದು ಅಧ್ಯಯನ ಕ್ಷೇತ್ರ ಎಂದರೆ ತಳಿವಿಜ್ಞಾನ. ಆನುವಂಶೀಯತೆಗೆ ಸಂಬಂಧಿಸಿದಂತೆ ಮನುಷ್ಯರ ನಡುವೆ ಇರುವ ಭಿನ್ನತೆಗಳನ್ನು ಸೂಕ್ಷ್ಮವಾಗಿ ಗಮನಿಸಿದ ಹಾಲ್ಡೇನ್, ಈ ವ್ಯತ್ಯಾಸಗಳ ಆಧಾರದ ಮೇಲೆ ರಚಿತವಾದ ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆ ಮಾತ್ರ ಸಮರ್ಪಕವಾಗಿರಬಲ್ಲುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದ !

ಪೋಷಕ ಜೀವಿಗಳಲ್ಲಿರುವ ವಂಶವಾಹಿ ಸಮೂಹಗಳ ಅಭಿವ್ಯಕ್ತಿಯಿಂದ ಹುಟ್ಟುವ ಸಂತತಿ ಎಂತಹುದು ? ಅದು, ಮಾತಾಪಿತೃಗಳ ಯಾವ ಗುಣಗಳನ್ನ ಪಡೆಯಬಹುದು? ಯಾವುದನ್ನು ಪಡೆಯಲಾರದು? ಎಂದು ಮುಂತಾದ ಲಿಂಗ ನಿರ್ಧಾರಕ ಸೂತ್ರಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರ ದೊರಕಿಸಿಕೊಳ್ಳುವಲ್ಲಿ ಹಾಲ್ಡೇನ್ ಯಶಸ್ವಿಯಾಗಿದ್ದ. ಇದಲ್ಲದೆ, 1920ರಲ್ಲಿ ಆರ್.ಎ.ಫಿಶರ್ ಮತ್ತು ಸೀವಾಲ್ ರೈಟ್ (R.A.Fisher and Sewall Wright) ಎಂಬ ಇಬ್ಬರು ವಿಜ್ಞಾನಿಗಳ ಜೊತೆ ಸೇರಿ ತಳಿವಿಜ್ಞಾನದಲ್ಲಿ ಗಣಿತ ಸೂತ್ರಗಳನ್ನು ಬಳಸಲು ಅನುಕೂಲವಾಗುವಂಥ ಸಿದ್ಧಾಂತಗಳನ್ನು ಹಾಲ್ಡೇನ್ ರೂಪಿಸಿದ. ಒಂದು ಜೀವಿಸಮುದಾಯದಲ್ಲಿ ವಂಶವಾಹಿಗಳ ಕಲಸುವಿಕೆಯಿಂದಾಗಿ ಎಷ್ಟು ಬಗೆಯ ಭಿನ್ನತೆಗಳು ಉಂಟಾಗಬಹುದು? ಅವುಗಳಲ್ಲಿ ಅಳಿಯುವ ಹಾಗೂ ಉಳಿಯುವ ಪ್ರಮಾಣಗಳೇನು? ಎಂಬುದನ್ನು ತಿಳಿದುಕೊಳ್ಳಲು ಈ ಸಿದ್ಧಾಂತಗಳು ಉಪಯುಕ್ತ ಎನ್ನಿಸಿವೆ. ಇವುಗಳನ್ನು ಆಧಾರವಾಗಿಟ್ಟುಕೊಂಡು, ಆಧುನಿಕ ತಳಿವಿಜ್ಞಾನದ ಹಿನ್ನೆಲೆಯಲ್ಲಿ ಚಾರ್ಲ್ಸ್ ಡಾರ್ವಿನ್ನನ ‘ನೈಸರ್ಗಿಕ ಆಯ್ಕೆ’ಯ ಸಿದ್ದಾಂತವನ್ನು ವಿವರವಾಗಿ ವಿಶ್ಲೇಷಿಸಿದ ಹಾಲ್ಡೇನ್, ಇದಕ್ಕೆ ಸಂಬಂಧಿಸಿದ ಎಂಬ ಅಮೂಲ್ಯ ಕೃತಿಯೊಂದನ್ನು ಪ್ರಕಟಿಸಿದ.

ಹಾಲ್ಡೇನ್‌ನ ಮತ್ತೊಂದು ಪ್ರಮುಖ ಕೊಡುಗೆ ಎಂದರೆ ಜೀವಿಗಳ ಉಗಮಕ್ಕೆ ಸಂಬAಧಿಸಿದAತೆ ಆತ ಪ್ರ‍್ರತಿಪಾದಿಸಿರುವ ‘ ಜೀವದ ರಾಸಾಯನಿಕ ಉಗಮ ಸಿದ್ಧಾಂತ’. ಈ ಭೂಮಿಯ ಮೇಲೆ ಜೀವ ಹೇಗೆ ಹುಟ್ಟಿತು? ಮೊದಲಿನಿಂದಲೇ ಅದು ಸಸ್ಯ ಹಾಗೂ ಪ್ರಾಣಿಗಳ ರೂಪದಲ್ಲಿಯೇ ಇದ್ದಿತೇ? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ರೂಪವಾಗಿ ಬಂದ ಈ ಸಿದ್ಧಾಂತದಲ್ಲಿ ಭೂಮಿಯ ಮೇಲೆ ಜೀವದ ಹುಟ್ಟಿಗೆ ಕಾರಣವಾಗಿರಬಹುದಾದ ಪ್ರಾಚೀನ ಸ್ಥಿತಿಯನ್ನು ಹಾಲ್ಡೇನ್ ಕಲ್ಪಿಸಿಕೊಟ್ಟಿದ್ದಾರೆ.

1928ರಲ್ಲಿ ಹಾಲ್ಡೇನ್ ಪ್ರತಿಪಾದಿಸಿದ ‘ಜೀವದ ರಾಸಾಯನಿಕ ಉಗಮ’ ಸಿದ್ಧಾಂತವು, ಅದಕ್ಕೆ ಕೆಲ ವರ್ಷಗಳ ಹಿಂದೆ, 1922ರಲ್ಲಿ ರಷ್ಯಾದ ಎ.ಐ.ಒಪಾರಿನ್ (A.I.Oparin) ಎಂಬ ವಿಜ್ಞಾನಿ ಪ್ರತಿಪಾದಿಸಿದ ಸಿದ್ಧಾಂತಕ್ಕೆ ಬಹಳಷ್ಟು ಪೂರಕವಾಗಿದೆ. ಈ ಸಿದ್ಧಾಂತದ ಪ್ರಕಾರ, ಭೂಮಿಯ ಮೇಲೆ ಜೀವದ ಉಗಮವಾಗಿದ್ದು ಸುಮಾರು 400 ಕೋಟಿೆ ವರ್ಷಗಳ ಹಿಂದೆ. ಆಗಿನ ಭೂಮಿಯು ಒಂದು ತೀವ್ರ ತಾಪಮಾನವಿದ್ದ ಬೆಂಕಿಯ ಚೆಂಡಿನAತಿತ್ತು. ಭೂಮಿಯ ತಾಪಮಾನ ಕ್ರಮೇಣ ಕಡಿಮೆಯಾದಂತೆ, ಅದರಲ್ಲಿದ್ದ ಮೂಲವಸ್ತುಗಳು ಒಂದನ್ನೊಂದು ಸೇರಿಕೊಳ್ಳತೊಡಗಿದವು. ಜೀವಿಗಳಿಗೆಲ್ಲ ಮೂಲವಾದ ವಸ್ತುವಿಶೇಷಗಳಾದ ಹೈಡ್ರೋಜನ್, ಆಕ್ಸಿಜನ್, ಕಾರ್ಬನ್, ಹಾಗೂ ನೈಟ್ರೋಜನ್, ಇವುಗಳ ವಿಶಿಷ್ಟ ಸಂಯೋಜನೆಯೇ ಮೊಟ್ಟಮೊದಲ ಆದಿ ಜೀವಕೋಶದ ಉಗಮಕ್ಕೆ ಕಾರಣ ಎಂಬುದು ಈ ಸಿದ್ಧಾಂತದ ವಿವರಣೆ.

ಈ ಸಿದ್ಧಾಂತದ ಪ್ರಕಾರ, ಜೀವಿಗಳ ಉಗಮವಾದಾಗ ಭೂಮಿಯ ವಾತಾವರಣದಲ್ಲಿ ಮೀಥೇನ್, ಅಮೋನಿಯ, ಕಾರ್ಬನ್ ಡೈಆಕ್ಸೈಡ್, ನೀರಾವಿ ಮುಂತಾದ ಅನಿಲಗಳು ಮಾತ್ರ ಇದ್ದವು. ಆಕ್ಸಿಜನ್ ಮುಕ್ತ ರೀತಿಯಲ್ಲಿ ಇರಲಿಲ್ಲ. ಮುಂದೆ ಭೂಮಿಯ ವಾತಾವರಣದಲ್ಲಿ ಕ್ರಮೇಣ ಉಂಟಾದ ಬದಲಾವಣೆಗಳ ಫಲವಾಗಿ ಅನೇಕ ರೀತಿಯ ರಾಸಾಯನಿಕ ಸಂಯೋಜನೆಗಳು ನಡೆದು, ಅಂತಿಮವಾಗಿ ಮೊದಲ ಜೀವಕೋಶ ಭೂಮಿಯ ಮೇಲೆ ಕಾಣಿಸಿಕೊಂಡಿತು ಎಂಬುದು ಈ ಸಿದ್ಧಾಂತದ ಸಾರಾಂಶ. ಮುಂದೆ, ಹೆರಾಲ್ಡ್ ಯೂರಿ ಮತ್ತು ಸ್ಟ್ಯಾನ್ಲಿ ಮಿಲ್ಲರ್ (Harold Yuri and Stanley Miller), ಸಿಡ್ನಿ ಫಾಕ್ಸ್ (Sydney Fox), ಷೆರಾರ್ಡ್(Sherard) ಮುಂತಾದ ವಿಜ್ಞಾನಿಗಳು ತಾವು ನಡೆಸಿದ ಪ್ರಯೋಗಗಳ ಫಲಿತಾಂಶಗಳ ಆಧಾರದ ಮೇಲೆ ಹಾಲ್ಡೇನ್ ಪ್ರತಿಪಾದಿಸಿದ ಈ ಸಿದ್ಧಾಂತವನ್ನು ಒಪ್ಪಿಕೊಂಡಿದ್ದಾರೆ.

ಹೀಗೆ, ಜೀವವಿಜ್ಞಾನದ ಹಲವು ಪ್ರಮುಖ ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸಿ, ಪ್ರಖ್ಯಾತಿ ಪಡೆದ ಹಾಲ್ಡೇನ್ ಅನೇಕ ಉತ್ತಮ ಕೃತಿಗಳನ್ನು ರಚಿಸಿ, ಅವುಗಳ ಮೂಲಕವೂ ವಿಜ್ಞಾನ ಕ್ಷೇತ್ರಕ್ಕೆ ಚಿರಪರಿಚಿತನಾಗಿದ್ದಾನೆ. ಕಿಣ್ವಗಳ ಕಾರ್ಯವೈವಿಧ್ಯವನ್ನು ತಿಳಿಸುವ ‘Enzymes‘ ಎಂಬ ಕೃತಿ ಅವನಿಗೆ ಅಪಾರ ಜನಮನ್ನಣೆಯನ್ನು ತಂದಿತ್ತಿದೆ. ಜೂಲಿಯನ್ ಹಕ್‌ಸ್ಲೀ() ಎಂಬ ವಿಜ್ಞಾನಿಯ ಜೊತೆಗೂಡಿ ರಚಿಸಿದ ‘Animal Biology‘ ಎಂಬ ಕೃತಿ ಪ್ರಾಣಿ ಪ್ರಪಂಚದ ವೈವಿಧ್ಯತೆ ಮತ್ತು ಅಚ್ಚರಿಗಳನ್ನು ನಮ್ಮ ಮುಂದೆ ತೆರೆದಿಡುತ್ತದೆ. ಹಾಲ್ಡೇನ್ ರಚಿಸಿದ ಇತರ ಜನಪ್ರಿಯ ಕೃತಿಗಳೆಂದರೆ,‘ ‘Possible Words‘(1927), ‘Science and Ethics‘(1928),‘The Causes of Evolution’ (1938), ‘Science In War and Peace ‘ (1940) ಹಾಗೂ ‘New Paths in Genetics‘ (1941).  

ಮಹಾನ್ ಮಾನವತಾವಾದಿಯಾಗಿದ್ದ ಹಾಲ್ಡೇನ್ 1930g ದಶಕದಲ್ಲಿ ಕಮ್ಯೂನಿಸಮ್‌ನ ತತ್ವಗಳಿಗೆ ಮಾರುಹೋಗಿ, ತನ್ನನ್ನು ಒಬ್ಬ ಮಾರ್ಕ್ಸ್ವಾದಿಯಾಗಿ ಗುರುತಿಸಿಕೊಳ್ಳಲು ಪ್ರಾರಂಭಿಸಿದ. ಕಮ್ಮುನಿಷ್ಟರ ಮುಖವಾಣಿಯಾಗಿದ್ದ ‘Daily Mirror‘ ಪತ್ರಿಕೆಯ ಸಂಪಾದಕನಾಗಿಯೂ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ. ಅಲ್ಲಿ ಅವನಿಗೆ ಕ್ರಮೇಣ ಭರಮನಿರಸನ ಉಂಟಾಗತೊಡಗಿತು. ತನ್ನ ಸಮಕಾಲೀನನಾಗಿದ್ದ ರಷ್ಯಾದ ಖ್ಯಾತ ವಿಜ್ಞಾನಿ ಲೈಸೆಂಕೋ (Lysenko)ಗೆ ದೊರಕುತ್ತಿದ್ದ ಮನ್ನಣೆ ಅವನ ಈ ಭ್ರಮನಿರಸನಕ್ಕೆ ಪ್ರಮುಖ ಕಾರಣವಾಗಿತ್ತು. ಇದರೊಂದಿಗೆ, ಕಮ್ಯೂನಿಸಮ್ ಜೊತೆಗಿನ ಅವನ ಸಂಬಂಧ ಕಡಿದುಬಿತ್ತು.

ತನ್ನ ವೃತ್ತಿ ಜೀವನಕ್ಕೆ ಸಂಬAಧಿಸಿದAತೆ ಬ್ರಿಟಿಷ್ ಸರ್ಕಾರದ ಕೆಲವು ಧೋರಣೆಗಳು ಸರಿಹೊಂದುತ್ತಿಲ್ಲ ಎಂದು ಅನಿಸಿದ ಕಾರಣ, 1957ರಲ್ಲಿ ಹಾಲ್ಡೇನ್ ಲಂಡನ್ ಬಿಟ್ಟು ಭಾರತಕ್ಕೆ ವಲಸೆ ಬಂದು ಕೊಲ್ಕತ್ತಾದಲ್ಲಿ ನೆಲೆಸಿದ. ಅಲ್ಲಿ, ಜೀವಮಾಪನ (biometry) ಕ್ಷೇತ್ರದಲ್ಲಿ ತನ್ನ ಸಂಶೋಧನೆಯನ್ನು ಮುಂದುವರೆಸಿದ. ಕೆಲ ವರ್ಷಗಳ ನಂತರ,  ಒರಿಸ್ಸಾದ ಭುವನೇಶ್ವರ ವಿಶ್ವವಿದ್ಯಾಲಯದಲ್ಲಿ ತಳಿವಿಜ್ಞಾನ ಹಾಗೂ ಜೀವಮಾಪನ ವಿಜ್ಞಾನದ ಮುಖ್ಯಸ್ಥನಾಗಿ  ಸೇರಿ, ತನ್ನ ಉಳಿದ ಜೀವಿತಾವಧಿಯನ್ನು ಅಲ್ಲಿಯೇ ಕಳೆದ.

ಭಾರತಕ್ಕೆ ಬಂದು ನೆಲಸಿದ ಮೇಲೆ ಹಾಲ್ಡೇನ್ ಭಾರತೀಯ ಜೀವನ ಶೈಲಿಗೆ ಮಾರು ಹೋದ. ತಾನೂ ಭಾರತೀಯ ಜೀವನಶೈಲಿಯನ್ನೇ ಅಳವಡಿಸಿಕೊಂಡ. ಭಾರತೀಯ ಉಡುಗೆಗಳನ್ನೇ ಧರಿಸುತ್ತಿದ್ದ. 1961ರಲ್ಲಿ ಭಾರತೀಯ ಪೌರತ್ವವನ್ನೂ ಪಡೆದುಕೊಂಡ.     


ತನ್ನ ವಿಶ್ಲೇಷಣಾತ್ಮಕ ಆಲೋಚನಾ ಶಕ್ತಿ, ಅಪಾರ ತಿಳುವಳಿಕೆ, ಧೀಮಂತ ಬರವಣಿಗೆ ಹಾಗೂ ಪ್ರಭಾವಪೂರ್ಣ ವ್ಯಕ್ತಿತ್ವದಿಂದ ವಿಜ್ಞಾನ ಪ್ರಪಂಚದಲ್ಲಿ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದ್ದ ಹಾಲ್ಡೇನ್ ಅನಿರೀಕ್ಷಿತವಾಗಿ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ, 1964ರಲ್ಲಿ ಭಾರತದಲ್ಲೇ ಕೊನೆಯುಸಿರೆಳೆದ.