ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಸವಿಜ್ಞಾನದ ಲೇಖನಗಳನ್ನು ಓದಿ, ಅಭಿಪ್ರಾಯ ದಾಖಲಿಸಿ. ನಿಮ್ಮ ಪ್ರೋತ್ಸಾಹಗಳೇ ಲೇಖಕರಿಗೆ ಶ್ರೀರಕ್ಷೆ Science is a beautiful gift to humanity; we should not distort it. A. P. J. Abdul Kalam

Sunday, December 4, 2022

ಪದಬಂಧ - 12

ಪದಬಂಧ - 12  

 ಪದಬಂಧ ಡಿಸೆಂಬರ್‌ 2022

1

 

 

 

 

 

 

 

 

2

 

 

 

 

2

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

3

 

4

 

 

 

 

 

 

 

 

 

 

 

 

 

 

 

 

 

 

 

 

 

 

 

 

3

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

5

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

7

 

 

 

6

 

 

 

 

 

 

 

 

 

 

 

 

 

 

 

6

 

 

 

 

 

 

 

 

 

 

 

 

 

 

 

 

 

 

 

 

 

 

 

7

 

 

 

 ಎಡದಿಂದ ಬಲಕ್ಕೆ:  

1. ಸಜಾತಿ ವಿದ್ಯುದಾವೇಶಗಳ ನಡುವೆ ಆಗುವಂತಹದ್ದು (4)

2. ಭೂಕಂಪನದ ತೀವ್ರತೆಯ ಅಳತೆಯ ಜೊತೆಯಾಯಿತು ವಿಜ್ಞಾನಿ ಹೆಸರು (6)

೩. ಸಿಸ್ಮೋಗ್ರಾಫ್‌ ನ ಕನ್ನಡ ರೂಪ (6)

೪. ಪ್ರಾಣಿ ಜನ್ಯ ಪದಾರ್ಥದಿಂದಾದ್ದು ಚಳಿಗೆ ಹೊದಿಯಲೂ ಆಯಿತು ಉಜ್ಜಿದರೆ ಆವೇಶಭರಿತವೂ ಆಯಿತು (3)

೫. ವಿಜಾತೀಯ ವಿದ್ಯುದಾವೇಶಗಳ ನಡುವೆ ಆಗುವಂತಹದ್ದು (4)

೬. ಬೆಕ್ಕು ಬಲದಿಂದ ಎಡಕ್ಕೆ ಹಾದುಹೋಗುವುದು ಹಾಳಲ್ಲ , ಭೂಕಂಪ, ಚಂಡಮಾರುತಗಳು ವಿಪರೀತ ಹಾಳು ಮಾಡುವಂತಹವು ಆದಾವು (5)

೭. ತಣ್ಣನೆ ಬೀಸುವುದು (2)

ಮೇಲಿನಿಂದ ಕೆಳಕ್ಕೆ:

೧. ಆವೇಶಗಳನ್ನು ಪತ್ತೆ ಹಚ್ಚಿ ತೋರಿಸುವುದು (5)

೨. ಚಳಿಗೆ ಆಗುವುದಲ್ಲ ಭೂಮಿ ಕಂಪಿಸುವುದು (3)

೩. ಪ್ರಚಂಡವಾಗಿ ಬೀಸಿ ಹಾಳುಗೆಡಹುವ ಗಾಳಿ (5)

೪. ಭೂಕಂಪನ ಹೆಚ್ಚಾಗಿ ಆಗುವ ಪ್ರದೇಶಗಳಲ್ಲಿ ಮನೆಗಳು ನಡುಗದೆ ಇರಬೇಕಾದ ರೀತಿ (6)

೫. ಮಿಂಚು ಉಂಟುಮಾಡುವ ʼಆʼ ಮೋಡಗಳು ಇರುವ ರೀತಿ (6)

೬. ಸಮುದ್ರದ ಆಳದಲ್ಲಿ ಭೂಕಂಪವಾದರೆ ಸಮುದ್ರದಲ್ಲಿ ಏಳುವುದು (3)

೭. ಬಿರುಸಾಗಿ ಬೀಸುವ ಗಾಳಿ ಮರಗಳ ಮುರಿದೀತು(4)

 

ರಚನೆ:

ವಿಜಯಕುಮಾರ್‌ ಹುತ್ತನಹಳ್ಳಿ

ಸಹಶಿಕ್ಷಕರು

ಸ.ಪ್ರೌ.ಶಾಲೆ, ಕಾವಲ್ ಭೈರಸಂದ್ರ

ಬೆಂಗಳೂರು ಉತ್ತರ ವಲಯ-03

 

 

 




ವಿಜ್ಞಾನ ಒಗಟುಗಳು : ಡಿಸೆಂಬರ್ 2022

 ಇವರು ಯಾರು ಬಲ್ಲಿರೇನು?

ಹಸಿರ ಹೊನ್ನಾಗಿಸಿ ಸಾಕ್ಷಾತ್ಕಾರದ ಹಾದಿಯಲ್ಲಿ ಮುನ್ನಡೆದು

ವಿಜ್ಞಾನ, ಸಾಹಿತ್ಯಗಳಿಗಾಗಿ ಜೀವತೇಯ್ದು ಶ್ರೀಮಂತ ಗೊಳಿಸಿದ

ಪಂಚ ಕಲಶ ಗೋಪುರಕೇರಿದ ಪ್ರಾಧ್ಯಾಪಕ ವಿಜ್ಞಾನಿ

ಸುಳಿವ ಹಿಡಿದು ಗುರುತಿಸ ಬಲ್ಲಿರೆ ಈ ಮಹಾಮಹಿಮನ ?

 

ನಕ್ಷತ್ರದ ಆಕಾರದಲ್ಲಿರುವೆ ಬಾನ ತಾರೆಯಲ್ಲ

ನೀರೊಳಗಿದ್ದರೂ ನಾ ಮೀನಲ್ಲ

ಮೈಮೇಲೆ ಮುಳ್ಳುಗಳಿದ್ದರೂ ಗಿಡಗಂಟಿಯಲ್ಲ

ಪಂಚ ಭುಜಗಳಿದ್ದರೂ ಕೊಳವೆ ಕಾಲ್ಗಳೇ ಆಸರೆ

ಕೈ ಕತ್ತರಿಸಿ ಬಿಸುಟರು ನಿಶ್ಚಿಂತೆ

ಸುಳಿವಿನ್ನೂ ಸಾಲದೆ?

ಓ ಜಾಣ ಜಾಣಿಯರೇ 

ಹೇಳಿಬಿಡಿ ನನ್ನ ಗುರುತು ವಂಶದ ಪರಿಚಯ

 

ದೇವನ ಅದ್ಭುತ ಚಾತುರ್ಯದ ಸೃಷ್ಟಿಯೆಂಬ ಹೆಸರಿಟ್ಟರು ನನಗೆ

ವಿಜ್ಞಾನಿಗಳ ಪಾಲಿಗೆ B6 ನಾನು

ದಿನಗಟ್ಟಲೆ ನಿದ್ರಾಹಾರ ವಿರಾಮಗಳ ಗೊಡವೆ  ಇಲ್ಲದೆ

ಸಹಸ್ರ ಯೋಜನ ಹಾರಬಲ್ಲೆ!!!

ಈ ಹಾರುವಾಟದಲ್ಲಿ ನನ್ನದೇ ವಿಶ್ವದಾಖಲೆ!!!

ತಣ್ಣಗಿನ ಅಲಾಸ್ಕಾ ನನ್ನ ಮೆಚ್ಚಿನ ತಾಣ

ಗುರುತು ಹಿಡಿದಲ್ಲಿ ನಿಮ್ಮ ಸಾಧನೆಗೆ ಸ್ಫೂರ್ತಿ ಸಿಕ್ಕೀತು!!!


ನಾನು ಬ್ಯಾಕ್ಟೀರಿಯಾವಲ್ಲ ವೈರಸ್ಸೂ ಅಲ್ಲ ಆದರೆ

ನಿಮ್ಮ ಪ್ಲೀಹ ಯಕೃತ್ ಗಳಿಗೆ  ಸೋಂಕು ತಗಲಿಸಿ ನಾಶಪಡಿಸಬಲ್ಲೆ.

ದ್ವಿವಿದಳನಕ್ಕೆ ಒಳಪಡಬಲ್ಲೆ ಆದರೆ ಅಮೀಬವಲ್ಲ

ನೀಳ ಅಕ್ಷದಿ ದ್ವಿವಿಭಜನೆಯಿಂದ, ಸಂತಾನ ವೃದ್ಧಿಗೊಳಿಸುವೆ ನಾ

ತಿಳಿದವರು ಹೇಳಬಲ್ಲಿರೇ ನಾನ್ಯಾರು ಎಂದು? 


ಸಮಸ್ತ ಜೀವಿಗಳಿಗೂ ನಾನು ಬೇಕು

ನಾನಿಲ್ಲದೇ ನೀವಿರಲಾರಿರಿ. 

ನಿಮ್ಮ ಧನ ಕನಕಗಳಿಗೆ ನಾನೇ ಆಗರ 

ಜೀವಿ-ನಿರ್ಜೀವಿಗಳು ಸೇರಿವೆ ನನ್ನಲಿ

ನಾನಿಲ್ಲದೇ ನೀವೇನನ್ನೂ ಬೆಳೆಯಲಾರಿರಿ

ಆದರೂ ಮಾನವನಿಗೆ ನನ್ನ ಮೇಲೇಕೋ ಅವಕೃಪೆ

ಡಿಸೆಂಬರ್‌ ೫ ರಂದು ಜನಜಾಗೃತಿ ಮಾಡುವರು

ಸುಳಿವ ಹಿಡಿದು ಹೇಳಿರಿ ನನ್ನ ಗುರುತ  


 


ವ್ಯಂಗ್ಯ ಚಿತ್ರಗಳು - ಡಿಸೆಂಬರ್ 2022

 ವ್ಯಂಗ್ಯ ಚಿತ್ರಗಳು - ಡಿಸೆಂಬರ್ 2022



ರಚನೆ : ಶ್ರೀಮತಿ ಜಯಶ್ರೀ ಬಿ ಶರ್ಮ

Friday, December 2, 2022

ಪ್ರಮುಖ ದಿನಾಚರಣೆಗಳು ಡಿಸೆಂಬರ್ 2022

 ಪ್ರಮುಖ ದಿನಾಚರಣೆಗಳು ಡಿಸೆಂಬರ್ 2022

ಡಿಸೆಂಬರ್ 1 - ವಿಶ್ವ ಏಡ್ಸ್ ದಿನ

ವಿಶ್ವ ಆರೋಗ್ಯ ಸಂಸ್ಥೆಯು ಪ್ರತಿ ವರ್ಷ ಡಿಸೆಂಬರ್ 1 ರಂದು, ಏಡ್ಸ್ ಎಂದು ಕರೆಯಲ್ಪಡುವ ಎಚ್ಐವಿ ಸೋಂಕು-ಸಂಬಂಧಿತ ಕಾಯಿಲೆಯ ಜಾಗೃತಿಯನ್ನು ಹೆಚ್ಚಿಸಲು ವಿಶ್ವ ಏಡ್ಸ್ ದಿನವನ್ನು ಆಚರಿಸಲಾಗುತ್ತದೆ.  

ಡಿಸೆಂಬರ್ 2 - ವಿಶ್ವ ಕಂಪ್ಯೂಟರ್ ಸಾಕ್ಷರತಾ ದಿನ

ಪ್ರತಿ ವರ್ಷ ಡಿಸೆಂಬರ್ 2 ರಂದು ವಿಶ್ವ ಕಂಪ್ಯೂಟರ್ ಸಾಕ್ಷರತೆಯ ಆಚರಣೆ ಇರುತ್ತದೆ. ಈ ದಿನದ ಉದ್ದೇಶವು  ಡಿಜಿಟಲ್ ಸಾಕ್ಷರತೆಯನ್ನು ಉತ್ತೇಜಿಸುವುದು. ಇದು ತಾಂತ್ರಿಕ ಸಾಕ್ಷರತೆಯನ್ನು ಅಭಿವೃದ್ಧಿಪಡಿಸಲು ಯುವ ವೃತ್ತಿಪರರು, ಮಕ್ಕಳು ಮತ್ತು ಮಹಿಳೆಯರನ್ನು ಪ್ರೋತ್ಸಾಹಿಸುತ್ತದೆ.

2021 ರಲ್ಲಿ ವಿಶ್ವ ಕಂಪ್ಯೂಟರ್ ಸಾಕ್ಷರತಾ ದಿನವನ್ನು ಡಿಜಿಟಲ್ ವಿಭಜನೆಯನ್ನು ಕಡಿಮೆ ಮಾಡಿ ಮಾನವ-ಕೇಂದ್ರಿತ ಪುನಶ್ಚೇತನಕ್ಕಾಗಿ ಮಾನವ-ಕೇಂದ್ರಿತ ಸಾಕ್ಷರತೆ ಎಂಬ ಥೀಮ್ ನೊಂದಿಗೆ ಆಚರಿಸಲಾಯಿತು.

ಡಿಸೆಂಬರ್ 3 - ಅಂಗವಿಕಲರ ಅಂತರಾಷ್ಟ್ರೀಯ ದಿನ

ಡಿಸೆಂಬರ್ ಮೂರನೇ ದಿನವನ್ನು ವಿಶ್ವದಾದ್ಯಂತ ಅಂಗವಿಕಲರ ಅಂತರಾಷ್ಟ್ರೀಯ ದಿನವೆಂದು ಗುರುತಿಸಲಾಗಿದೆ. ಅನನುಕೂಲಕರ ಜನರನ್ನು ಬಲಪಡಿಸಲು ಮತ್ತು ಜೀವನದಲ್ಲಿ ಅವರ ಗುರಿಗಳನ್ನು ಅನುಸರಿಸಲು ಅವರನ್ನು ಪ್ರೇರೇಪಿಸಲು ಈ ದಿನವನ್ನು ಆಚರಿಸಲಾಗುತ್ತದೆ. ವಿಶ್ವಾದ್ಯಂತ, ವಿಕಲಾಂಗರನ್ನು ಬೆಂಬಲಿಸಲು ಸಾಕಷ್ಟು ಅಭಿಯಾನಗಳನ್ನು ಪ್ರಾರಂಭಿಸಲಾಗಿದೆ. "COVID-19 ನಂತರದ ಭವಿಷ್ಯದಲ್ಲಿ ಅಂತರ್ಗತ, ಪ್ರವೇಶಿಸಬಹುದಾದ ಮತ್ತು ಸಮರ್ಥನೀಯ ಭವಿಷ್ಯದ ಕಡೆಗೆ ವಿಕಲಾಂಗ ವ್ಯಕ್ತಿಗಳ ನಾಯಕತ್ವ ಮತ್ತು ಒಳಗೊಳ್ಳುವಿಕೆ" ಎಂಬ ಥೀಮ್‌ ನೊಂದಿಗೆ, ಈ ದಿನವನ್ನು 2021 ರಲ್ಲಿ ಆಚರಿಸಲಾಯಿತು..

ಡಿಸೆಂಬರ್ 3 - ವಿಶ್ವ ಸಂರಕ್ಷಣಾ ದಿನ

ವಿಶ್ವ ಪ್ರಕೃತಿ ಸಂರಕ್ಷಣಾ ದಿನವನ್ನು ವಾರ್ಷಿಕವಾಗಿ ಜುಲೈ 28 ರಂದು ಜಾಗತಿಕವಾಗಿ ಆಚರಿಸಲಾಗುತ್ತದೆ. ಈ ದಿನವನ್ನು ಆಚರಿಸಲಾಗುತ್ತದೆ ಮತ್ತು ಜಗತ್ತನ್ನು ಆರೋಗ್ಯವಾಗಿಡಲು ಪರಿಸರ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. 

ಡಿಸೆಂಬರ್ 4 - ನೌಕಾಪಡೆಯ ದಿನ

ಭಾರತವು ಡಿಸೆಂಬರ್ 4 ರಂದು ನೌಕಾಪಡೆಯ ದಿನವನ್ನು ಆಚರಿಸುತ್ತದೆ. ರಾಷ್ಟ್ರಕ್ಕೆ ಭಾರತೀಯ ನೌಕಾಪಡೆಯ ಸಾಧನೆಗಳು ಮತ್ತು ಕೊಡುಗೆಯನ್ನು ಗುರುತಿಸುವುದು ಸಂಭ್ರಮಾಚರಣೆಗೆ ಕಾರಣವಾಗಿದೆ. 4 ಡಿಸೆಂಬರ್ 1971 ರಂದು, ಭಾರತೀಯ ನೌಕಾಪಡೆಯು ಆಪರೇಷನ್ ಟ್ರೈಡೆಂಟ್‌ನ ಭಾಗವಾಗಿ PNS ಖೈಬರ್ ಸೇರಿದಂತೆ ನಾಲ್ಕು ಪಾಕಿಸ್ತಾನಿ ಹಡಗುಗಳನ್ನು ಮುಳುಗಿಸಿತು, ನೂರಾರು ಪಾಕಿಸ್ತಾನಿ ನೌಕಾಪಡೆಯ ಸೈನಿಕರನ್ನು ಕೊಂದಿತು. ಭಾರತೀಯ ನೌಕಾಪಡೆ - ಯುದ್ಧ ಸಿದ್ಧ, ವಿಶ್ವಾಸಾರ್ಹ ಮತ್ತು ಸಮ್ಮಿಶ್ರ ನೌಕಾಪಡೆಯ ದಿನದ 2021 ರ ಕೇಂದ್ರಬಿಂದುವಾಗಿತ್ತು.

ಡಿಸೆಂಬರ್ 5 :  ವಿಶ್ವ ಮಣ್ಣಿನ ದಿನ 2022

ಮಣ್ಣಿನಲ್ಲಿ ಪೋಷಕಾಂಶದ ನಷ್ಟವು ಮಣ್ಣಿನ ಫಲವತ್ತತೆಯ ಜೊತೆಗೆ ಕೃಷಿ ಇಳುವರಿಯನ್ನು ನಾಶಪಡಿಸುತ್ತದೆ. ಜಾಗತಿಕ ಮಟ್ಟದಲ್ಲಿ ಆಹಾರ ಭದ್ರತೆ ಮತ್ತು ಸುಸ್ಥಿರತೆಗೆ ಇದು ದೊಡ್ಡ ಸಮಸ್ಯೆಯನ್ನು ಉಂಟುಮಾಡಿದೆ. ವಿಶ್ವ ಮಣ್ಣಿನ ದಿನ 2022 (WorldSoilDay) ಅಂಗವಾಗಿ "ಮಣ್ಣು: ಆಹಾರ ಎಲ್ಲಿ ಪ್ರಾರಂಭವಾಗುತ್ತದೆ" ಅಭಿಯಾನದೊಂದಿಗೆ  ಮಣ್ಣಿನ ನಿರ್ವಹಣೆಯಲ್ಲಿ ಏರುತ್ತಿರುವ ಸವಾಲುಗಳನ್ನು ಎದುರಿಸುವ ಹಾಗೂ ಆರೋಗ್ಯಕರ ಪರಿಸರ ವ್ಯವಸ್ಥೆಗಳನ್ನು ರೂಪಿಸುವುದು ಮತ್ತು ಜೀವಿಗಳ ಯೋಗಕ್ಷೇಮವನ್ನು ಕಾಪಾಡಿಕೊಳ್ಳುವ ಪ್ರಾಮುಖ್ಯತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಗುರಿಯನ್ನು ಹೊಂದಿದೆ. ಮಣ್ಣಿನ ನೈಸರ್ಗಿಕ ಸಂರಚನೆಯನ್ನು ಸುಧಾರಿಸಲು, ಮಣ್ಣಿನ ಬಗ್ಗೆ ಜನರಲ್ಲಿ ಅರಿವು ಹೆಚ್ಚಿಸುವ ಗುರಿಯನ್ನು ಹೊಂದಿದೆ.

ಡಿಸೆಂಬರ್ 11 - ಅಂತರಾಷ್ಟ್ರೀಯ ಪರ್ವತ ದಿನ

ಅಂತರರಾಷ್ಟ್ರೀಯ ಪರ್ವತ ದಿನವನ್ನು ಡಿಸೆಂಬರ್ 11 ರಂದು ಆಚರಿಸಲಾಗುತ್ತದೆ. ಇದು ಮಾನವ ಜೀವನಕ್ಕಾಗಿ ಪರ್ವತಗಳ ಮೌಲ್ಯದ ಅರಿವು ಮೂಡಿಸಲು, ಪರ್ವತ ಅಭಿವೃದ್ಧಿಯ ಅನುಕೂಲಗಳು ಮತ್ತು ಸವಾಲುಗಳನ್ನು ಎತ್ತಿ ತೋರಿಸಲು ಮತ್ತು ಪ್ರಪಂಚದಾದ್ಯಂತ ಪರ್ವತ ಸಮುದಾಯಗಳು ಮತ್ತು ಆವಾಸಸ್ಥಾನಗಳಿಗೆ ಲಾಭದಾಯಕ ಪಾಲುದಾರಿಕೆಗಳನ್ನು ರೂಪಿಸಲು ವಿನ್ಯಾಸಗೊಳಿಸಲಾಗಿದೆ. 

ಡಿಸೆಂಬರ್ 14 - ಅಂತರಾಷ್ಟ್ರೀಯ ಇಂಧನ ದಿನ

ಪ್ರಪಂಚದ ಎಲ್ಲೆಡೆ ಡಿಸೆಂಬರ್ 14 ರಂದು ಅಂತರಾಷ್ಟ್ರೀಯ ಇಂಧನ ದಿನ. ದೈನಂದಿನ ಜೀವನದಲ್ಲಿ ಶಕ್ತಿಯ ಬಳಕೆಯ ಮೌಲ್ಯ, ಅದರ ಕೊರತೆ ಮತ್ತು ಜಾಗತಿಕ ಪರಿಸರ ವ್ಯವಸ್ಥೆಗಳ ಕಾರ್ಯಸಾಧ್ಯತೆಯ ಮೇಲೆ ಅದರ ಪರಿಣಾಮದ ಬಗ್ಗೆ ಗಮನ ಸೆಳೆಯುವ ಉದ್ದೇಶ ಉಳ್ಳದ್ದಾಗಿದೆ. 

ಡಿಸೆಂಬರ್ 18 - ಅಂತರಾಷ್ಟ್ರೀಯ ವಲಸಿಗರ ದಿನ

ವಿಶ್ವವು ಡಿಸೆಂಬರ್ 18 ರಂದು ಅಂತರರಾಷ್ಟ್ರೀಯ ವಲಸಿಗರ ದಿನವನ್ನು ಆಚರಿಸುತ್ತದೆ. ಮಾನವ ಹಕ್ಕುಗಳನ್ನು ರಕ್ಷಿಸಲು ಇದನ್ನು ಸ್ಥಾಪಿಸಲಾಗಿದೆ. 2021 ರಲ್ಲಿ, "ಮಾನವ ಚಲನಶೀಲತೆಯ ಸಾಮರ್ಥ್ಯವನ್ನು ಬಳಸಿಕೊಳ್ಳುವುದು" ಈ ದಿನದ ಥೀಮ್ ಆಗಿತ್ತು.

ಡಿಸೆಂಬರ್ 23 - ಕಿಸಾನ್ ದಿವಸ್ (ರೈತರ ದಿನ)

ಮಾಜಿ ಪ್ರಧಾನಿ ಮತ್ತು ರೈತ ನಾಯಕ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನದ ನೆನಪಿಗಾಗಿ, ಕಿಸಾನ್ ದಿವಸ್ ಅಥವಾ ರಾಷ್ಟ್ರೀಯ ರೈತರ ದಿನವನ್ನು ಆಚರಿಸಲಾಗುತ್ತದೆ. ರಾಷ್ಟ್ರದ ಆರ್ಥಿಕತೆಯ ಬುನಾದಿಯಾಗಿರುವ ರೈತರಿಗೆ ನಮ್ಮ ಮೆಚ್ಚುಗೆಯನ್ನು ತೋರಿಸುವುದು ಇದರ ಉದ್ದೇಶವಾಗಿದೆ.

ಡಿಸೆಂಬರ್ 29 - ಅಂತರಾಷ್ಟ್ರೀಯ ಜೈವಿಕ ವೈವಿಧ್ಯ ದಿನ

"ನಾವು ಪ್ರಕೃತಿಯ ಪರಿಹಾರದ ಭಾಗವಾಗಿದ್ದೇವೆ" ಎಂಬ ತತ್ವದ ಆಚರಣೆಗಾಗಿ ಪ್ರತಿ ವರ್ಷ ಡಿಸೆಂಬರ್ 29 ದಿನವನ್ನು ಅಂತರಾಷ್ಟ್ರೀಯ ಜೀವವೈವಿಧ್ಯ ದಿನವೆಂದು ಆಚರಿಸಲಾಗುತ್ತದೆ. UN ಜನರಲ್ ಅಸೆಂಬ್ಲಿ  ಜೈವಿಕ ವೈವಿಧ್ಯತೆಯ ಅಂತರರಾಷ್ಟ್ರೀಯ ದಿನ (IDB) ವನ್ನು ಘೋಷಿಸಿತು,  

Friday, November 4, 2022

ಸಂಪಾದಕರ ಡೈರಿಯಿಂದ .....

 

ಸಂಪಾದಕರ ಡೈರಿಯಿಂದ .....

    ನಾಡಿನೆಲ್ಲೆಡೆ ದೀಪಾವಳಿ ಹಬ್ಬದ ಸಡಗರ ಮುಗಿಯುತ್ತಲೇ ಕನ್ನಡ ನಾಡು ನುಡಿಯ ಜಾಗೃತಿ ಮೂಡಿಸುವ ಕನ್ನಡದ ಹಬ್ಬದ ಸಡಗರವೋ ಸಡಗರ. ಕೋಟಿಕಂಠ ಗಾಯನದೊಡನೆ ರಾಜ್ಯೋತ್ಸವಕ್ಕೆ ಅಣಿಯಾಗಿದ್ದೇವೆ.  


“ಕನ್ನಡ ಎನೆ ಕುಣಿದಾಡುವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು ||

ಕಾಮನ ಬಿಲ್ಲನು ಕಾಣುವ ಕವಿಯೊಳು ತೆಕ್ಕನೆ ಮನ ಮೈ ಮರೆಯುವುದು….” 

                                ರಸಋಷಿಯ ಅಮರಗೀತವು ಹೊಸ ಹುರುಪನ್ನು ತುಂಬುತ್ತಿರುವ ಈ ಸುಸಂದರ್ಭದಲ್ಲಿ ‘ಸವಿಜ್ಞಾನ’ ತಂಡದ ಎಲ್ಲ ಸದಸ್ಯರಿಗೆ, ಸಹೃದಯಿ ಲೇಖಕರಿಗೆ ‘ ಹಾಗೂ ಅಭಿಮಾನಿ ಓದುಗರಿಗೆ ನಮ್ಮ ಶುಭ ಹಾರೈಕೆಗಳು.  ನಮ್ಮನಾಡಹಬ್ಬದ ಸಂಭ್ರಮದ ವಾತಾವರಣದ ಮಧ್ಯೆ ನಿಮ್ಮ ಮಿದುಳಿಗೆ, ಮನಸ್ಸಿಗೆ ಕೊಂಚ ಮುದ ನೀಡಲು ‘ಸವಿಜ್ಞಾನ’ದ ನವಂಬರ್‌ ತಿಂಗಳ ಸಂಚಿಕೆ ನಿಮ್ಮ ಮುಂದಿದೆ.                                                                                                         

ಈ ಸಂಚಿಕೆಯ ಪ್ರಮುಖ ಆಕರ್ಷಣೆಯಾಗಿ,  ಭಾರತದ ಮೊದಲ ಪ್ರನಾಳ ಶಿಶುವಿನ ಸೃಷ್ಟಿಕರ್ತ ಡಾ. ಸುಭಾಶ್ ಮುಖ್ಯೋಪಾಧ್ಯಾಯ ನೊಬೆಲ್ ಪ್ರಶಸ್ತಿಯಿಂದ ವಂಚಿತರಾದ ದುರಂತ ಕಥೆಯ ಮುಂದುವರೆದ ಭಾಗದಲ್ಲಿ ಅವರಿಗಾದ ಅನ್ಯಾಯಕ್ಕೆ ಪ್ರಾಯಶ್ಚಿತ್ತ ಮಾಡಿದ ಮಾಹಿತಿಯನ್ನು ಹೃದಯಂಗಮವಾಗಿ ಚಿತ್ರಿಸಿದ್ದಾರೆ, ಡಾ.ಎಂ.ಜೆ.ಸುಂದರರಾಮ್ ಅವರು. " ಹೆತ್ತworryಗೆ ಹೆಗ್ಗಣ ಮುದ್ದು" ಶೀರ್ಷಿಕೆಯಲ್ಲಿ ಜೀವ ಪ್ರಪಂಚದ ಅಚ್ಚರಿಗಳನ್ನು ಅನಾವರಣಗೊಳಿಸಿದ್ದಾರೆ ಸವಿಜ್ಞಾನದ ಪ್ರಧಾನ ಸಂಪಾದಕರಾದ  ಡಾ. ಟಿ.ಎ. ಬಾಲಕೃಷ್ಣ ಅಡಿಗ ಅವರು, ಪರಮಾಣುಗಳ ಬಗ್ಗೆ ಪ್ರಾಚೀನ ಭಾರತದ ಚಿಂತನೆಯಾದ ವೈಶೇಷಿಕ ದರ್ಶನದ ಕುರಿತಂತೆ  ಮಾಹಿತಿಪೂರ್ಣ ಲೇಖನವನ್ನು  ಬರೆದಿದ್ದಾರೆ. ಶ್ರೀನಿವಾಸ್ ಎ. ಅವರು.  ಜೇಡ: ಅದರ ಸೋಜಿಗ ನೋಡ ! ಎನ್ನುವ ಲೇಖನದ ಮೂಲಕ ಜೇಡಗಳ ಜಗತ್ತನ್ನು ತೆರೆದಿಟ್ಟಿದ್ದಾರೆ, ಲೇಖಕ ಕೃಷ್ಣ ಚೈತನ್ಯರವರು. ಕೈತೊಳೆಯುವುದು ಅನೇಕ ರೋಗಗಳನ್ನು ದೂರವಿಡುತ್ತದೆ. ಶಾಲೆಗಳಲ್ಲಿ ನಡೆಸುತ್ತಿರುವ ಈ ಆಚರಣೆಗೆ ಸಂಬಂಧಿಸಿದಂತೆ.  ಕೈ ತೊಳೆ, ಅದೇ ಆರೋಗ್ಯ ಕಳೆ  ಎಂಬ ಅನುಷ್ಠಾನಯೋಗ್ಯ ವಿಚಾರದ ಬಗ್ಗೆ ಲೇಖನವನ್ನು ಬರೆದಿದ್ದಾರೆ, ಮೇಶ, ವಿ,ಬಳ್ಳಾ ಅವರು,   ಈ ತಿಂಗಳ ‘ಸಾಧಕ ಶಿಕ್ಷಕ’ರಾಗಿʼ ಈ ಬಾರಿಯ ಜಿಲ್ಲಾ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಪಾತ್ರರಾದವರಲ್ಲಿ ಒಬ್ಬರಾದ ಶ್ರೀಮತಿ ನಾಗವೇಣಿ ನಾಯಕ್‌ ಅವರನ್ನು.ಅವರ ಸಾಧನೆಯ ಹಾದಿಯನ್ನು  ಪರಿಚಯಿಸಿದ್ದಾರೆ, ಶ್ರೀಮತಿ ರೂಪ ಬಿ.ಎನ್‌ ಅವರು.

    ಇವೆಲ್ಲದರ ಜೊತೆಗೆ, ಎಂದಿನಂತೆ ಶಾಲೆಗಳಲ್ಲಿ ಮಕ್ಕಳಲ್ಲಿ ಜಾಗೃತಿ ಮೂಡಿಸಲು ಸಹಾಯಕವಾಗುವಂತೆ ನವಂಬರ್‌ ತಿಂಗಳಿನ ಪ್ರಮುಖ ದಿನಾಚರಣೆಗಳ ಬಗ್ಗೆ ಮಾಹಿತಿ ನೀಡಿದೆ. ವಿಜ್ಞಾನಕ್ಕೆ ಸಂಬಂಧಿಸಿದ ನಮ್ಮ ಸ್ಥಿರ ಅಂಕಣಗಳಾದ, ಪದಬಂಧ, ಒಗಟುಗಳು ಹಾಗೂ ವ್ಯಂಗ್ಯ ಚಿತ್ರಗಳು ನಿಮ್ಮನ್ನು ರಂಜಿಸಲಿವೆ. ಸಂಚಿಕೆಯ ಎಲ್ಲ ಲೇಖನಗಳನ್ನು ಹಾಗೂ ಅಂಕಣಗಳನ್ನು ಓದಿ, ದಯವಿಟ್ಟು ನಿಮ್ಮ ಪ್ರತಿಕ್ರಿಯೆಯನ್ನು ಬ್ಲಾಗ್‌ನಲ್ಲಿ ದಾಖಲಿಸಿ. ನಾಡು, ನುಡಿ, ವಿಜ್ಞಾನಗಳಿಗೆ ನಿಮ್ಮ ಲೇಖನಗಳ ಕಾಣಿಕೆಯ ಪುಷ್ಪಾಂಜಲಿ ಸಲ್ಲಿಲಿ ಎಂದು ಆಶಿಸುತ್ತೇನೆ.

 

ಪ್ರಧಾನ ಸಂಪಾದಕರ ಪರವಾಗಿ

ರಾಮಚಂದ್ರಭಟ್‌ ಬಿ.ಜಿ.

 

"ಹೆತ್ತworryಗೆ ಹೆಗ್ಗಣ ಮುದ್ದು"

"ಹೆತ್ತworryಗೆ ಹೆಗ್ಗಣ ಮುದ್ದು"

ಡಾ. ಟಿ.ಎ. ಬಾಲಕೃಷ್ಣ ಅಡಿಗ 





ಹೆತ್ತವರ worry ಮಾನವರಿಗಷ್ಟೇ ಅಲ್ಲ ಸರ್ವ ಜೀವಜಾತರಿಗೂ ಇದ್ದದ್ದೇ. ಪ್ರಾಣಿಗಳ ಬದುಕಿನ ಸಾರ್ಥಕತೆ ಇರುವುದೇ ಸಂತಾನ ವೃದ್ಧಿಯಲ್ಲಿ. ಅವುಗಳ ಶಕ್ತಿಯ ಬಳಕೆ ಸಂತಾನದ ರಕ್ಷಣೆಗೇ ಮೀಸಲು. ಪ್ರಾಣಿಗಳ ವರಿಯನ್ನು  ಸೋದಾಹರಣವಾಗಿ ವಿವರಿಸಿದ್ದಾರೆ. ಪ್ರಧಾನ ಸಂಪಾದಕರಾದ ಡಾ.ಟಿ.ಎ ಬಾಲಕೃಷ್ಣ ಅಡಿಗರು

ಭಾರತದ ನೊಬೆಲ್ ವಂಚಿತ, ಮೊದಲ ಪ್ರನಾಳಶಿಶುವಿನ ಸೃಷ್ಟಿಕರ್ತ ಡಾ|| ಸುಭಾಶ್‌ರವರ ದುರಂತ ಕತೆ (ಭಾಗ ೨)

ಭಾರತದ ನೊಬೆಲ್ ವಂಚಿತ, ಮೊದಲ ಪ್ರನಾಳಶಿಶುವಿನ ಸೃಷ್ಟಿಕರ್ತ ಡಾ|| ಸುಭಾಶ್‌ರವರ ದುರಂತ ಕತೆ (ಭಾಗ ೨)

ಡಾ|| ಎಂ.ಜೆ. ಸುಂದರ್ ರಾಮ್ 

ನಿವೃತ್ತ ಪ್ರಾಣಿಶಾಸ್ತ್ರ ಪ್ರಾಧ್ಯಾಪಕರು, ವಿಜ್ಞಾನ ಸಂವಹನಕಾರರು


ಹಿಂದಿನ ಸಂಚಿಕೆಯಲ್ಲಿ ಸುಭಾಷರು ತಮಗಾದ ತೇಜೋವಧೆಯಿಂದಾಗಿ  ಅಸಹಾಯಕರಾಗಿ ಪ್ರಾಣವನ್ನೇ ಕಳೆದುಕೊಂಡ ಘಟನಾವಳಿಗಳನ್ನು ಓದಿದ್ದೀರಿ. ತದನಂತರ ಹಲವು ಘಟನೆಗಳು ಇತಿಹಾಸದಲ್ಲಿ ದಾಖಲಾದವು.  ಅವರಿಗಾದ ಅನ್ಯಾಯವನ್ನು ಸರಿಪಡಿಸಲು ಪ್ರಯತ್ನಿಸಿದ ಘಟನಾವಳಿಗಳನ್ನು ಡಾ|| ಎಂ.ಜೆ. ಸುಂದರ್ ರಾಮ್ ಅವರು ಈ ಲೇಖನದ ಮೂಲಕ ವಿವರಿಸಿದ್ದಾರೆ. 

ಜೇಡ: ಅದರ ಸೋಜಿಗ ನೋಡ !


ಜೇಡ: ಅದರ ಸೋಜಿಗ ನೋಡ !

ಲೇಖಕರು : ಡಿ. ಕೃಷ್ಣಚೈತನ್ಯ

ವಿಜ್ಞಾನ ಮಾರ್ಗದರ್ಶಕರು ಹಾಗು ವನ್ಯಜೀವಿ ತಜ್ಞರು.

ಗೋಣಿಕೊಪ್ಪಲು ಪ್ರೌಢಶಾಲೆ. ಗೋಣಿಕೊಪ್ಪಲು.

ಕೊಡಗು ಜಿಲ್ಲೆ.

ಜೇಡ ಎಲ್ಲರ ಗಮನವನ್ನು ಬಾಲ್ಯದಿಂದಲೇ ಸೆಳೆದಿರುತ್ತದೆ. ಜೇಡಗಳ ವೈವಿದ್ಯತೆ ಅವುಗಳ ಬಲೆಗಳಷ್ಟೇ ಸೋಜಿಗವನ್ನು ಉಂಟುಮಾಡುವಂತದ್ದು . ಜೀವಜಗತ್ತಿನ ಆಹಾರ ಜಾಲದಲ್ಲಿ ಜೇಡಗಳು ಪ್ರಮುಖ ಪಾತ್ರವಹಿಸುತ್ತವೆ. ರೈತನಿಗೂ ಜೈವಿಕನಿಯಂತ್ರಣದ ಮೂಲಕ ಸಹಾಯಕವಾಗಿವೆ ಎನ್ನುವುದನ್ನು ವಿವರಿಸಿದ್ದಾರೆ  ಡಿ. ಕೃಷ್ಣಚೈತನ್ಯ ಅವರು 

ಕೈ ತೊಳೆ, ಅದೇ ಆರೋಗ್ಯ ಕಳೆ

 ಕೈ ತೊಳೆ, ಅದೇ ಆರೋಗ್ಯ ಕಳೆ

ಲೇಖಕರು : ರಮೇಶ, ವಿ,ಬಳ್ಳಾ 

ಅಧ್ಯಾಪಕರು

ಬಾಲಕಿಯರ ಸರ್ಕಾರಿ ಪ ಪೂ ಕಾಲೇಜು            

 (ಪ್ರೌಢ) ಗುಳೇದಗುಡ್ಡ  ಜಿ: ಬಾಗಲಕೋಟ   

ಕೋವಿಡ್ ನಮಗೆ ಮರೆಯದಂತಹ ಬದುಕಿನ ಪಾಠವನ್ನು ಕಲಿಸಿಕೊಟ್ಟಿದೆ. ದೈನಂದಿನ ಬದುಕಿನಲ್ಲಿ ಶುಚಿತ್ವದ ಮಹತ್ವ ಈಗ ಎಲ್ಲರಿಗೂ ಅರಿವಾಗಿದೆ. ಕೈ ತೊಳೆಯುವುದರ ಮೂಲಕ ಸಾಕಷ್ಟು ರೋಗಗಳನ್ನು ದೂರವಿಡಬಹುದು ಎನ್ನುವುದು ಎಲ್ಲರಿಗೂ ತಿಳಿದ ವಿಚಾರವಾಗಿದೆ. ಶಾಲೆಗಳಲ್ಲಿ ಆಚರಿಸುವ ಕೈ ತೊಳೆಯುವ ದಿನಾಚರಣೆಯ ಮಹತ್ವವನ್ನು ಐತಿಹಾಸಿಕ ಘಟನೆಗಳೊಂದಿಗೆ  ತಮ್ಮ ಮುಂದೆ ಇಟ್ಟಿದ್ದಾರೆ ಲೇಖಕರಾದ ಲೇಖಕರಾದ ರಮೇಶ್ ವಿ.ಬಳ್ಳಾ  ಅವರು.

ಪರಮಾಣುಗಳ ಬಗ್ಗೆ ಪ್ರಾಚೀನ ಭಾರತದ ಚಿಂತನೆ

ಪರಮಾಣುಗಳ ಬಗ್ಗೆ ಪ್ರಾಚೀನ ಭಾರತದ ಚಿಂತನೆ

ಲೇಖಕರು : ಎ.ಶ್ರೀನಿವಾಸ್


ಪರಮಾಣುಗಳ ಬಗ್ಗೆ ಪ್ರಾಚೀನ ಭಾರತದ ಗ್ರಂಥಗಳಲ್ಲಿ ಸಾಕಷ್ಟು ಉಲ್ಲೇಖಗಳಿವೆ.  ಅದರಲ್ಲಿ ಪ್ರಮುಖವಾದುದು ಮಹರ್ಷಿ ಕಣಾದರು ರಚಿಸಿದ ʼವೈಶೇಷಿಕ ದರ್ಶನʼ ಎಂಬ ಮಹಾಗ್ರಂಥ. ಆ ಗ್ರಂಥದ ಪರಿಚಯದ ಜೊತೆಗೆ ಅದರಲ್ಲಿರುವ ವಿಷಯ ವೈವಿಧ್ಯವನ್ನು ಈ ಲೇಖನದಲ್ಲಿ ವಿವರಿಸಿದ್ದಾರೆ, ಶಿಕ್ಷಕ ಶ್ರೀನಿವಾಸ್‌ ಅವರು.

ಬಹುಮುಖ ಪ್ರತಿಭೆಯ ಸಾಧಕಿ ಶ್ರೀಮತಿ ನಾಗವೇಣಿ ನಾಯಕ್

ಬಹುಮುಖ ಪ್ರತಿಭೆಯ ಸಾಧಕಿ ಶ್ರೀಮತಿ ನಾಗವೇಣಿ ನಾಯಕ್

ಲೇಖಕರು: ಬಿ. ಎನ್ .ರೂಪ, ಸಹಶಿಕ್ಷಕರು
ತೆರೆ ಮರೆಯ ಸಾಧಕ ಶಿಕ್ಷಕರಾಗಿ ಶ್ರೀಮತಿ ನಾಗವೇಣಿ ನಾಯಕ್ ಅವರನ್ನು ಬಿ. ಎನ್‌.   ರೂಪ ಅವರು  ಪರಿಚಯಿಸಿದ್ದಾರೆ.  ಸಾಧಕ ಶಿಕ್ಷಕರ ಪರಿಚಯದ ಉದ್ದೇಶ  ವಿಜ್ಞಾನದಲ್ಲಿ  ಗುಣಾತ್ಮಕ ಶಿಕ್ಷಣಕ್ಕಾಗಿ ಶಿಕ್ಷಕರಲ್ಲಿ ಸಾಧನೆಯ ಹಸಿವನ್ನು ಹೆಚ್ಚಿಸಿ ಸ್ಪೂರ್ತಿ ತುಂಬುವುದು.