ಜನವರಿ 2022ರ ಒಗಟುಗಳು
1. ಎಂಟು ನಿಮಿಷದಿ ಭಾನಿಂದ ತಿರೆಗಿಳಿದಿರುವೆ
ನಾನಿಲ್ಲದೆ ನಿಮಗೇನು ಕಂಡೀತು ? ನೀವೇನು ಉಣ್ಣುವಿರಿ ?
ಆದರೆ ಯಕಶ್ಚಿತ್ ನೀರ ಹನಿಗಳು ನನ್ನ ಸೀಳಿ
ಬಿಟ್ಟವಲ್ಲ!!!!
ಗುರುತು ಹತ್ತಿತೇ?
ತಿಳಿದವರು ಬಿಡಿಸಿರೀ ಒಗಟ
2. ಹಸಿರಿಲ್ಲದೆ ನಾನಿರಲಾರೆ
ಜೀವಮಂಡಲದಿ ನನ್ನ ನಡುವಿನ ಸಿಕ್ಕುಗಳ
ಸಂಕೀರ್ಣಜಾಲ
ಪ್ರತಿ ಸ್ತರದಲಿ ಮುಂದೆ ಚಲಿಸಿದಂತೆ
ಶಕ್ತಿಯ ಹ್ರಾಸ
ಆದರೆ ವಿಷವೇರುವುದು ಕ್ರಮೇಣ
ಈ ಅರಿವು ಇಲ್ಲದಿದ್ದರೆ ವಸುಂಧರೆಯೊಡಲೇ
ಬರಿದು
ಜಾಣ ಜಾಣೆಯರೇ ಗುರುತು ಹತ್ತಿತೇ ಈಗ?
3. ನನ್ನ ತಯಾರಿಕೆಗೆ ಗಾಜು ಬಿಟ್ಟು ಬೇರೆ
ಉಪಕರಣಗಳು ಸಲ್ಲ
ಪ್ರಬಲ ಉತ್ಕರ್ಷಕ ಗುಣವಿದೆ
ಹಲವು ಸ್ಫೋ ಟಕಗಳ ಹಿಂದಿರುವೆ ನಾ
ರಾಜ ದ್ರವದಲೂ ನನ್ನ ಪಾಲುಂಟು
ಸತುವಿನೊಂದಿಗೆ ವರ್ತಿಸಿ ನಗೆಗಡಲಲ್ಲಿ
ಮುಳುಗಿಸುವೆ ನಿಮ್ಮ
ತಿಳಿದವರು ಹೇಳಿ ಎಳೆಎಳೆಯಾಗಿ ನನ್ನ ಕಥೆಯ
4. ಏಳು ಮಜಲುಗಳಂತೆ ನನ್ನಲೂ 7 ಮೆಟ್ಟಿಲುಗಳು
18 ಕಂಬಗಳ ಆಸರೆ ನನಗೆ
ನನ್ನ ಅರಿತಿರೋ ದಿವ್ಯ ರಸಾಯನ ಭೋಜ್ಯ
118 ಧಾತುಗಳಿಂದ ಆಗಿರುವೆ ನಾ
ಪರಮಾಣು ರಚನೆ ಅಡಗಿದೆ ನನ್ನಲಿ
ಜಾಣ ಜಾಣೆಯರೇ ಈ ಒಗಟ ಬಿಡಿಸಿ
ಗುರುತಿಸುವಿರೇ ನನ್ನ?
5. ಘರ್ಷಣೆಯ ತಡೆದು ಚಲನೆಯ ಸರಾಗಗೊಳಿಸುವೆ
ಹರಿಯುವುದು ನನ್ನ ಸಹಜ ಧರ್ಮ
ಅನಿಲ ದ್ರವಗಳಲಿ ನಾ ಸರ್ವೇ ಸಾಮಾನ್ಯ
ತರಲೆ ಮಾಡದೇ ಸುಳಿವ ಹಿಡಿದು ಹೇಳಿ ಓ
ತರಳರೇ